Why UAE: ತಮ್ಮ ದೇಶ ತೊರೆದ ಪ್ರಧಾನಿಗಳೆಲ್ಲಾ ದುಬೈಗೆ ಹೋಗೋದೇಕೆ.. ಅಂತಹದ್ದು ಏನಿದೆ ಅಲ್ಲಿ?

Leaders Chose United Arab Emirates for Refuge: ಕಷ್ಟಗಳು ಎದುರಾದಾಗ, ಶತ್ರುಗಳ ಕೈಗೆ ಸಿಕ್ಕಿ ಬೀಳುವ ಸಂದರ್ಭದಲ್ಲಿ ಹಲವು ದೇಶಗಳ ಪ್ರಧಾನಿಗಳು, ಅಧ್ಯಕ್ಷರು ದುಬೈಗೆ ಪಲಾಯನಗೈದಿದ್ದಾರೆ. ಅವಿತಿಕೊಳ್ಳಲು, ಇಲ್ಲವೇ ಹೊಸ ಜೀವನ ಕಟ್ಟಿಕೊಳ್ಳಲು, ಸ್ವಲ್ಪ ಸಮಯದವರೆಗೆ ತಲೆ ಮರೆಸಿಕೊಳ್ಳಲು ದುಬೈ ರಾಷ್ಟ್ರವನ್ನೇ ಆಯ್ಕೆ ಮಾಡಿಕೊಳ್ಳುವುದು ಏಕೆ ಗೊತ್ತಾ?

ಪರಾರಿಯಾಗಿರುವ ಅಫ್ಘನ್​ ಅಧ್ಯಕ್ಷ ಅಶ್ರಫ್ ಘನಿ

ಪರಾರಿಯಾಗಿರುವ ಅಫ್ಘನ್​ ಅಧ್ಯಕ್ಷ ಅಶ್ರಫ್ ಘನಿ

 • Share this:
  Ashraf Ghani : ಇತ್ತೀಚೆಗಷ್ಟೇ ತಾಲಿಬಾನ್​​​ ಉಗ್ರರು ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆಯುತ್ತಿದ್ದಂತೆ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್​ ಘನಿ ದೇಶದಿಂದ ಪಲಾಯನ ಮಾಡಿದ್ದರು. ಹೆಲಿಕಾಪ್ಟರ್​ ತುಂಬಾ ಹಣ ತುಂಬಿಕೊಂಡು ಘನಿ ಹಾರಿದ್ದು ದುಬೈಗೆ. ಘನಿ ಮಾತ್ರವಲ್ಲ ಈ ಹಿಂದೆ ಕಷ್ಟಗಳು ಎದುರಾದಾಗ, ಶತ್ರುಗಳ ಕೈಗೆ ಸಿಕ್ಕಿ ಬೀಳುವ ಸಂದರ್ಭದಲ್ಲಿ ಹಲವು ದೇಶಗಳ ಪ್ರಧಾನಿಗಳು, ಅಧ್ಯಕ್ಷರು ದುಬೈಗೆ ಪಲಾಯನಗೈದಿದ್ದಾರೆ. ಸ್ಪೇನ್​​ನ ರಾಜಕುಮಾರ್​, ಥಾಯ್ಲೆಂಡ್​ನ ಇಬ್ಬರು ಪ್ರಧಾನಿಗಳು, ಪಾಕಿಸ್ತಾನದ ಮಾಜಿ ಪ್ರಧಾನಿಗಳಾದ ಮುಷರಫ್​​​, ಬೆನಜೀರ್ ಭುಟ್ಟೋ ಎಲ್ಲರೂ ತಮ್ಮ ದೇಶ ಬಿಟ್ಟು ದುಬೈ ಬಾಗಿಲು ಬಡಿದವರೇ. ವಿಶ್ವಾದ್ಯಂತ ಎಷ್ಟೋ ಸುರಕ್ಷಿತ ರಾಷ್ಟ್ರಗಳಿದ್ದರೂ ಇವರೆಲ್ಲಾ ಅವಿತಿಕೊಳ್ಳಲು, ಇಲ್ಲವೇ ಹೊಸ ಜೀವನ ಕಟ್ಟಿಕೊಳ್ಳಲು, ಸ್ವಲ್ಪ ಸಮಯದವರೆಗೆ ತಲೆ ಮರೆಸಿಕೊಳ್ಳಲು ದುಬೈ ರಾಷ್ಟ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಂತಹದ್ದು ಏನಿದೆ ಯುನೆಟೆಡ್​​ ಅರಬ್​​ ಎಮಿರೇಟ್ಸ್​ನಲ್ಲಿ ಅಂತ ನೋಡೋದಾದರೆ..

  ಗಲ್ಫ್ ಅರಬ್ ರಾಜ್ಯವು ಯುನೈಟೆಡ್ ಸ್ಟೇಟ್ಸ್ ನೊಂದಿಗೆ ನಿಕಟ ಭದ್ರತಾ ಪಾಲುದಾರಿಕೆಯನ್ನು ಹೊಂದಿದೆ. ರಾಜಕೀಯವಾಗಿ ಪರಾರಿಯಾದವರನ್ನು ಮತ್ತು ದೇಶಭ್ರಷ್ಟ ನಾಯಕರು ಬಂದು ನೆಲೆಸಲು ದುಬೈ ಆಡಳಿತ ಸಹಾಯ ಮಾಡುತ್ತದೆ. ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್​ ಘನಿ ಕಾಬೂಲ್​ ತೊರೆಯಲು ದುಬೈನ ಸಚಿವರುಗಳು ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ.

  ಅಬುಧಾಬಿಯಲ್ಲಿ ಸ್ಕೈಲೈನ್‌ಗಳು ಅತ್ಯದ್ಭುತ ಎತ್ತರದ ಗೋಪುರಗಳು ಮತ್ತು ಪಂಚತಾರಾ ಹೋಟೆಲ್‌ಗಳು ಇವೆ. ಮಾನವ ನಿರ್ಮಿತ ಕಡಲತೀರಗಳು, ಅಲ್ಲಿನ ಏಕಾಂತ, ಕಡಲತಡಿಯ ಅರಮನೆಗಳು ರಾಜಕೀಯ ಗಡೀಪಾರಾದಾವರಿಗೆ ಖಾಸಗಿತನವನ್ನು ಒದಗಿಸುತ್ತದೆ. ಹಣವೊಂದಿದ್ದರೆ ದುಬೈನಲ್ಲಿ ಐಷಾರಾಮಿಯಾಗಿ, ಸುರಕ್ಷಿತವಾಗಿ, ಖಾಸಗಿಯಾಗಿ ಬದುಕಲು ಅತ್ಯುತ್ತಮ ಸೌಲಭ್ಯಗಳು ಹಾಗೂ ಆಯ್ಕೆಗಳಿವೆ. ಇದಕ್ಕಾಗಿಯೇ ದೊಡ್ಡ ನಾಯಕರು ದುಬೈನಲ್ಲಿ ಪ್ರೈವೆಟ್​​ ಆಗಿ ಇರಲು ಬರುತ್ತಾರೆ.

  ಮುಖ್ಯವಾಗಿ ತೈಲ ಮತ್ತು ಅನಿಲದ ವಿಶಾಲವಾದ ಭೂಗತ ನಿಕ್ಷೇಪಗಳಿವೆ. ಪ್ರಬಲ ವ್ಯಕ್ತಿಗಳಿಗೆ ಭದ್ರತೆಯ ಖಾತರಿಯನ್ನು ಒದಗಿಸುತ್ತವೆ. ವಿಮಾನ ನಿಲ್ದಾಣದಲ್ಲಿ ಐರಿಸ್-ಸ್ಕ್ಯಾನಿಂಗ್ ತಂತ್ರಜ್ಞಾನ, ಭದ್ರತಾ ಕ್ಯಾಮೆರಾಗಳು ಮತ್ತು ವ್ಯಾಪಕವಾದ ಕಣ್ಗಾವಲು ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ನಾಯಕರು ತಮ್ಮ ಭದ್ರತೆ ಮೇಲೆ ಹಿಡಿತ ಹೊಂದಬಹುದಾಗಿದೆ. ಇದರಿಂದಲೇ ತಾಲಿಬಾನ್ ಕಾಬೂಲ್‌ಗೆ ನುಗ್ಗುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಅಬುಧಾಬಿಗೆ ಹಾರಿದ್ದು.

  ಇದನ್ನೂ ಓದಿ: Explained: ತಾಲಿಬಾನಿಗಳಿಗೆ ಹೆದರಿ ದೇಶ ತೊರೆಯುತ್ತಿರುವ ಅಫ್ಘನ್ನರನ್ನು ಯಾವೆಲ್ಲಾ ದೇಶಗಳು ಬರಮಾಡಿಕೊಳ್ಳುತ್ತಿವೆ?

  ಯುಎಇ ಪ್ರಮುಖ ಯುಎಸ್ ಮಿಲಿಟರಿ ಕಾರ್ಯಾಚರಣೆಗಳಿಗೆ ವೇದಿಕೆಯಾಗಿದೆ. ಅಬುಧಾಬಿ ಬಳಿಯಿರುವ ಅಲ್-ಧಾಫ್ರಾ ವಾಯುನೆಲೆಯಿಂದ ಅಮೆರಿಕನ್ನರು ಸಂಪರ್ಕ ಹೊಂದಿದ್ದಾರೆ. ಯುಎಇ ತನ್ನ ಮಿತ್ರ ರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಅನ್ನು ತಾನು ವಿಶ್ವಾಸಾರ್ಹ ಪಾಲುದಾರ ಎಂದು ತೋರಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ರಾಜಕೀಯ ಲಾಭಗಳಿಗಾಗಿ ದೊಡ್ಡ ದೊಡ್ಡ ನಾಯಕರಿಗೆ ಆತಿಥ್ಯ ವಹಿಸುತ್ತದೆ.

  ಕಳೆದ ಕೆಲ ವರ್ಷಗಳಲ್ಲಿ ದುಬೈನಲ್ಲಿ ಆಶ್ರಯ ಪಡೆದ ನಾಯಕರ ಪಟ್ಟಿಗೆ ಘನಿ ಹೊಸದಾಗಿ ಸೇರಿಕೊಂಡಿದ್ದಾರೆ. ಕೆಲವರು ಅಬುಧಾಬಿಯಲ್ಲಿ, ಇತರರು ಯುಎಇಯ ವಾಣಿಜ್ಯ ಮತ್ತು ಪ್ರವಾಸೋದ್ಯಮ ಕೇಂದ್ರವಾದ ದುಬೈನಲ್ಲಿ ನೆಲೆಸಿದ್ದಾರೆ. ಸೋದರರು ಆದ ಥಾಯ್‌ನ ಮಾಜಿ ಪ್ರಧಾನಿಗಳಾದ ತಕ್ಸಿನ್ ಶಿನವತ್ರಾ ಮತ್ತು ಯಿಂಗ್ಲಕ್ ಶಿನವತ್ರಾ ಕೂಡ ದುಬೈನಲ್ಲಿದ್ದಾರೆ. ಒಬ್ಬರು ಭ್ರಷ್ಟಾಚಾರದ ಆರೋಪದ ನಡುವೆ ಸೇನಾ ದಂಗೆಯಲ್ಲಿ ಪದಚ್ಯುತಿಗೊಂಡರೆ, ಮತ್ತೊಬ್ಬರು ಕ್ರಿಮಿನಲ್ ಅಪರಾಧದಿಂದ ಪರಾರಿಯಾಗಿದ್ದಾರೆ.

  2007 ರಲ್ಲಿ ಹತ್ಯೆಗೀಡಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಪಾಕ್​​ಗೆ ಹಿಂದಿರುಗುವ ಮುನ್ನ ಹಲವು ವರ್ಷಗಳ ಕಾಲ ದುಬೈನಲ್ಲಿ ನೆಲೆಸಿದ್ದರು. ಪಾಕಿಸ್ತಾನದ ಮತ್ತೊಬ್ಬ ಮಾಜಿ ಪ್ರಧಾನ ಮಂತ್ರಿ ಪರ್ವೇಜ್ ಮುಷರಫ್ ಕೂಡ ದುಬೈನಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದಾರೆ.

  ಆರ್ಥಿಕ ತನಿಖೆಯನ್ನು ಎದುರಿಸುತ್ತಿರುವ ಸ್ಪ್ಯಾನಿಷ್ ಮಾಜಿ ರಾಜ ಜುವಾನ್ ಕಾರ್ಲೋಸ್, ಪಕ್ಷದಿಂದ ಬಹಿಷ್ಕರಿಸಲ್ಪಟ್ಟ ಜೈಲು ಶಿಕ್ಷೆಗೆ ಗುರಿಯಾದ ಪ್ಯಾಲೆಸ್ಟೀನಿಯನ್ ಮೊಹಮ್ಮದ್ ದಹ್ಲಾನ್ ಮತ್ತು ಯೆಮೆನ್​​ನ ಅಹ್ಮದ್ ಅಲಿ ಅಬ್ದುಲ್ಲಾ ಸಲೇಹ್ ಕೂಡ ಸದ್ಯ ದುಬೈ ನಿವಾಸಿಗಳು.
  Published by:Kavya V
  First published: