Explained: ಅಷ್ಟೊಂದು ಹಿಂಸೆಯಾಗ್ತಿದ್ರೂ ವಿಕಲಚೇತನ ಮಹಿಳೆಯರು ಎಲ್ಲಾ ನೋವು ಸಹಿಸಿಕೊಳ್ತಿರೋದೇಕೆ?

The Wire ಪ್ರಕಾರ ಭಾರತದಲ್ಲಿ ಕೌಟುಂಬಿಕ ಹಿಂಸಾಚಾರವು ಗಮನಾರ್ಹ ವರದಿಯಾಗಿದೆ. ಕೆಲವೊಂದು ಘಟನೆಗಳು ಈ ಹಿನ್ನಲೆಯಲ್ಲಿ ಪುಷ್ಟಿ ನೀಡಿದ್ದು ಅಂಗವಿಕಲ ಮಹಿಳೆಯರಿಗೆ ದಾಂಪತ್ಯ ಜೀವನ ಕಷ್ಟಕರವಾಗಿದ್ದರೂ ಸಂಗಾತಿಗಳಿಂದ ದೂರವಾಗಲು ಇಲ್ಲವೇ ವಿರೋಧಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಉಲ್ಲೇಖಿಸಿವೆ. ಇದಕ್ಕೆ ಪುಷ್ಟಿ ನೀಡುವ ಕೆಲವೊಂದು ಘಟನೆಗಳ ವಿವರಗಳು ಇಲ್ಲಿವೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಅಂಗವಿಕಲ ಮಹಿಳೆಯರು LGBTQIA+ ವ್ಯಕ್ತಿಗಳ ವಿರುದ್ಧ ಜರುಗುವ ಕೌಟುಂಬಿಕ ಹಿಂಸಾಚಾರವು ಭಾವನಾತ್ಮಕ ಕ್ರೌರ್ಯವನ್ನು (Emotional cruelty) ಒಳಗೊಂಡಿರುತ್ತದೆ ಅಂದರೆ ತಿರಸ್ಕಾರ, ಕಾಳಜಿಯ ತಡೆಹಿಡಿತ, ಆರ್ಥಿಕ ಬೆಂಬಲ (Financial support) ನೀಡದಿರುವುದು, ನಿಯಂತ್ರಣ ಹೇರುವುದು ಇತ್ಯಾದಿ. The Wire ಪ್ರಕಾರ ಭಾರತದಲ್ಲಿ ಕೌಟುಂಬಿಕ ಹಿಂಸಾಚಾರವು ಗಮನಾರ್ಹ ವರದಿಯಾಗಿದೆ. ಕೆಲವೊಂದು ಘಟನೆಗಳು ಈ ಹಿನ್ನಲೆಯಲ್ಲಿ ಪುಷ್ಟಿ ನೀಡಿದ್ದು ಅಂಗವಿಕಲ ಮಹಿಳೆಯರಿಗೆ (disabled woman) ದಾಂಪತ್ಯ ಜೀವನ ಕಷ್ಟಕರವಾಗಿದ್ದರೂ ಸಂಗಾತಿಗಳಿಂದ ದೂರವಾಗಲು ಇಲ್ಲವೇ ವಿರೋಧಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಉಲ್ಲೇಖಿಸಿವೆ. ಇದಕ್ಕೆ ಪುಷ್ಟಿ ನೀಡುವ ಕೆಲವೊಂದು ಘಟನೆಗಳ ವಿವರಗಳು ಇಲ್ಲಿವೆ ನೋಡಿ.


ವಿಕಲಚೇತನರಲ್ಲೂ ಹೆಚ್ಚುತ್ತಿರುವ ನಿಂದನೀಯ ವೈವಾಹಿಕ ಜೀವನ:
32 ರ ಹರೆಯದ ದೃಷ್ಟಿ ಕಡಿಮೆ ಹೊಂದಿರುವ ಕಿವುಡಿಯಾಗಿರುವ ರೀಮಾ ವಿವಾಹವಾಗಿ ಐದು ವರ್ಷಗಳಾಗಿದ್ದರೂ ಆಕೆಯ ಪತಿ ಅಪರಿಚಿತನಂತೆ ಆಕೆಯೊಂದಿಗೆ ನಡೆದುಕೊಳ್ಳುತ್ತಾನೆ. ಆಕೆಯೊಂದಿಗೆ ಮಾತನಾಡುವುದಿಲ್ಲ ಅಂತೆಯೇ ಕುಡಿದು ಬಂದು ಆಕೆಗೆ ದೈಹಿಕ ಹಿಂಸೆಯನ್ನು ನೀಡುತ್ತಾನೆ ಇನ್ನು ಮನೆಗೆಲಸ ಸರಿಯಾಗಿ ಮಾಡದೇ ಇದ್ದರೆ ಆಕೆಯ ಪತಿಯ ಸಹೋದರ ಮತ್ತು ಅತ್ತೆಮಾವಂದಿರು ಕೂಡ ಹಿಂಸಿಸುತ್ತಾರೆ.


ಅನಾಥಳಾಗಿದ್ದ ರೀಮಾ ಮುಂಬೈನ ಚರ್ಚ್ ಒಂದರ ಸಹಾಯದಿಂದ ಓದಿ ಕಂಪ್ಯೂಟರ್ ಮತ್ತು ವೃತ್ತಿಪರ ತರಬೇತಿಯೊಂದಿಗೆ, 2015 ರಲ್ಲಿ ಹೋಟೆಲ್‌ನಲ್ಲಿ ಹೌಸ್‌ಕೀಪಿಂಗ್ ಸಿಬ್ಬಂದಿಯಾಗಿ ಕೆಲಸವನ್ನು ಹುಡುಕುವಲ್ಲಿ ಯಶಸ್ವಿಯಾಗುತ್ತಾರೆ. ಚರ್ಚ್‌ನಲ್ಲಿದ್ದ ಕ್ರೈಸ್ತ ಸನ್ಯಾಸಿನಿಯರು ಆಕೆಗೆ 27 ವರ್ಷವಾದಾಗ ವರನನ್ನು ಹುಡುಕುತ್ತಾರೆ. ಅವರು ಹುಡುಕಿದ ವರ ಹೆಚ್ಚು ವಯಸ್ಸಿನವನಾಗಿದ್ದು ಕಿವುಡ ಮತ್ತು ಪ್ರತ್ಯೇಕ ಮನೋಭಾವನೆಯನ್ನು ಹೊಂದಿದ್ದ ಇದರಿಂದ ರೀಮಾಗೆ ಈ ವಿವಾಹ ಅಷ್ಟೊಂದು ಇಷ್ಟವಿರಲಿಲ್ಲ ಆದರೆ ಆತನ ಹೆತ್ತವರು ಮತ್ತು ಕ್ರೈಸ್ತ ಸನ್ಯಾಸಿನಿಯರು ರೀಮಾಳನ್ನು ವಿವಾಹವಾಗುವಂತೆ ಒತ್ತಾಯಿಸಿದರು. ಆತ ಕೂಡ ಉತ್ತಮ ಉದ್ಯೋಗದಲ್ಲಿದ್ದು ಒಳ್ಳೆಯ ವ್ಯಕ್ತಿ ಎಂಬುದಾಗಿ ರೀಮಾಗೆ ಸಮಜಾಯಿಕೆ ನೀಡಿದರು. ಒಟ್ಟಿನಲ್ಲಿ ಅವರ ಒತ್ತಾಯದಿಂದ ರೀಮಾ ವಿವಾಹಕ್ಕೆ ಸಮ್ಮತಿಸಿದರು.


ಆದರೆ ಕೌಟುಂಬಿಕ ಹಿಂಸೆಯ ಕಾರಣದಿಂದ ರೀಮಾ ಮೂರು ತಿಂಗಳ ಹಿಂದೆ ಅಕ್ರಮ ವಿವಾಹವನ್ನು ತೊರೆದು ತಾತ್ಕಾಲಿಕ ನೆಲೆಯನ್ನು ಕಂಡುಕೊಂಡರು. ಇನ್ನು ವಿವಾಹವನ್ನು ಕಾನೂನು ಮೂಲಕ ಅಂತ್ಯಗೊಳಿಸಲು ಬಯಸುತ್ತಾರೆಯೇ ಎಂಬುದಾಗಿ ಅವರಲ್ಲಿ ಕೇಳಿದಾಗ ಆಕೆ ಇನ್ನೂ ಗೊಂದಲದಲ್ಲಿದ್ದರು. ನನ್ನ ಅಂಗವಿಕಲತೆಯ ಕೊರತೆಯಿಂದ ಇತರ ಪುರುಷರು ನನ್ನನ್ನು ವಿವಾಹವಾಗಲು ಮುಂದುವರಿಯಲಿಲ್ಲ ಆದರೆ ಆತ ಈ ಎಲ್ಲಾ ಕೊರತೆಗಳನ್ನು ಬದಿಗೊತ್ತಿ ವಿವಾಹವಾದರು. ನಾನು ಶಾಶ್ವತವಾಗಿ ಅವರನ್ನು ತೊರೆಯಬೇಕೇ ಎಂಬುದು ನನಗಿನ್ನೂ ಖಚಿತವಿಲ್ಲಎಂಬುದು ರೀಮಾ ಅಭಿಪ್ರಾಯವಾಗಿದೆ.


24 ರ ಹರೆಯದ ಸಮಿಧಾರವರ ಕಥೆ ಹೀಗಿದೆ
24 ರ ಹರೆಯದ ಸಮಿಧಾರದ್ದೂ ಇಂತಹುದ್ದೇ ಇನ್ನೊಂದು ಕಥೆಯಾಗಿದೆ. ಎಹ್ಲರ್ಸ್-ಡಾನ್ಲೋಸ್ ಸಿಂಡ್ರೋಮ್‌ನಂತಹ ಬಹು ಅಂಗವೈಕಲ್ಯಗಳಿಗೆ ತುತ್ತಾಗಿದ್ದರು. ಪ್ರಸ್ತುತ ಆಕೆ ರಿವೈವಲ್ ಡಿಸಾಬಿಲಿಟಿ ಪ್ರಾಜೆಕ್ಟ್‌ನ ನಿಯತಕಾಲಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದು ಈಕೆ ಕೂಡ ಕೌಟುಂಬಿಕ ಹಿಂಸೆಯಿಂದ ಶೋಷಣೆಗೆ ಒಳಗಾದವರು.


ಇದನ್ನೂ ಓದಿ: Explainer: ಇಡೀ ಕುಟುಂಬದ ಹತ್ಯೆ ಬಳಿಕ ಗ್ಯಾಂಗ್​ರೇಪ್, ದೀರ್ಘಕಾಲದ ಹೋರಾಡಿದ್ರೂ ದೋಷಿಗಳ ಬಿಡುಗಡೆ: ಯಾರು ಈ ಬಿಲ್ಕಿಸ್​ ಬಾನೊ?

ಆಕೆಯಂತೆಯೇ ಅಂಗವೈಕಲ್ಯಕ್ಕೆ ಒಳಗಾದವರು ಸಂಗಾತಿಯಾಗಿದ್ದಾರೆ ಎಂಬ ಅಂಶವೇ ವಿವಾಹ ವಿಚ್ಛೆದನದಿಂದ ಆಕೆಯನ್ನು ದೂರವಿರಿಸಿದೆ ಎಂದು ಸಮಿಧಾ ತಿಳಿಸುತ್ತಾರೆ. ತಮ್ಮ ಅಂಗವಿಕಲತೆಯಿಂದಲೇ ಇಂತಹ ದೈಹಿಕ ಮಾನಸಿಕ ಹಿಂಸೆಗೆ ತುತ್ತಾಗಿರುವ ಅಂಶವನ್ನು ಸ್ವೀಕರಿಸಿರುವುದಾಗಿ ಸಮಿಧಾ ಹೇಳುತ್ತಾರೆ. ಆಕೆ ತಮ್ಮ ಹಾಗೂ ತಮ್ಮ ದೇಹದ ಬಗ್ಗೆ ದ್ವೇಷಿಸುವುದನ್ನು ಅಂತರ್ಗತ ಮಾಡಿಕೊಂಡಿರುವುದನ್ನು ತಿಳಿಸಿದ್ದಾರೆ. ನನ್ನ ಅಂಗವಿಕಲತೆಯ ಕಾರಣದಿಂದಲೇ ನನ್ನನ್ನು ಇತರರು ದ್ವೇಷಿಸುತ್ತಾರೆ ಮತ್ತು ಗೌರವಿಸುವುದಿಲ್ಲ ಎಂಬುದು ಸಮಿಧಾ ಅಭಿಪ್ರಾಯವಾಗಿದೆ.


ಅಸಮರ್ಪಕ ವರದಿ ದಾಖಲೆ
ದಕ್ಷಿಣ ಏಷ್ಯಾದಲ್ಲಿ ಮಹಿಳೆಯ ದೌರ್ಜನ್ಯವನ್ನು ದಾಖಲಿಸಲಾಗಿದ್ದರೂ ಅಂಗವಿಕಲ ಮಹಿಳೆಯರನ್ನು ಕುರಿತಂತೆ ಈ ವರದಿ ಯಾವುದೇ ಮಾಹಿತಿ ದಾಖಲಿಸಿಲ್ಲ ಎಂದು ಕ್ರಿಯೇಟಿಂಗ್ ರಿಸೋರ್ಸಸ್ ಫಾರ್ ಎಂಪವರ್‌ಮೆಂಟ್ ಇನ್ ಆ್ಯಕ್ಷನ್ CREA, ಸ್ತ್ರೀವಾದಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ) 2012 ರ ಸಂಶೋಧನೆ ಹೇಳುತ್ತದೆ. ಭಾರತದಲ್ಲಿ 54% ರಷ್ಟು ವಿವಾಹಿತ ಅಂಗವಿಕಲ ಮಹಿಳೆಯರು ತಮ್ಮ ಕುಟುಂಬ, ಜನ್ಮಸ್ಥಳ ಕುಟುಂಬ, ಸ್ನೇಹಿತರು ಮತ್ತು ನೆರೆಹೊರೆಯವರಿಂದ ಹಿಂಸೆಯನ್ನು ಅನುಭವಿಸುತ್ತಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದ್ದು ಏಪ್ರಿಲ್ 2022 ರಲ್ಲಿ BMJ ನಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು, ಅಂಗವಿಕಲರಲ್ಲಿ ಹೆಚ್ಚಿನವರು ದೈಹಿಕ, ಲೈಂಗಿಕ ಅಥವಾ ಭಾವನಾತ್ಮಕ ಪಾಲುದಾರ ಹಿಂಸಾಚಾರಕ್ಕೆ ಹೆಚ್ಚು ಗುರಿಯಾಗುತ್ತಾರೆ ಎಂಬುದನ್ನು ಕಂಡುಹಿಡಿದಿದೆ.


ಹಿಂಸೆಗೊಳಗಾದವರು ನಿಂದನೀಯ ಸಂಬಂಧದಿಂದ ಹೊರಬರದಂತೆ ಅವರನ್ನು ತಡೆಯುವ ಹಲವಾರು ಕಾರಣಗಳಿವೆ ಎಂಬುದನ್ನು ತಿಳಿಸಿದೆ. ಕುಟುಂಬದಿಂದ ಯಾವುದೇ ಬೆಂಬಲ ಇಲ್ಲದಿರುವುದು ಹಾಗೂ ಮುಂದಿನ ಭವಿಷ್ಯ ಹೇಗೆಂಬ ಭಯದಿಂದ ವಿಚ್ಛೇದನಕ್ಕೆ ಅನುಮತಿಸುತ್ತಿಲ್ಲ ಎಂಬ ಅಂಶ ತಿಳಿದುಬಂದಿದೆ. ಅದೇ ರೀತಿ ಸ್ವತಂತ್ರ ಚಲನಶೀಲತೆಯನ್ನು ಸಕ್ರಿಯಗೊಳಿಸಲು ಮತ್ತು ಹಿಂಸಾಚಾರವನ್ನು ವರದಿ ಮಾಡಲು ಬಳಸಬಹುದಾದ ಮೂಲಸೌಕರ್ಯಗಳ ಕೊರತೆಯು ವಿಕಲಾಂಗ ವ್ಯಕ್ತಿಗಳಿಗೆ ಮತ್ತಷ್ಟು ಅನಾನುಕೂಲಗಳನ್ನು ಉಂಟುಮಾಡುತ್ತದೆ.


ಅಂಗವೈಕಲ್ಯ ಸಹಿಸುವ ಆಯುಧವಾಗಿ ಹೇಗೆ ಮಾರ್ಪಡುತ್ತದೆ:
ಅಂಗವೈಕಲ್ಯವುಳ್ಳ ಯುವ ಜನರಿಗೆ, ಸಾಮಾಜಿಕ ಸಂವಹನ ಮತ್ತು ಒಬ್ಬರ ಸ್ವಂತ ಗುರುತು ಮತ್ತು ವ್ಯಕ್ತಿತ್ವವನ್ನು ನಿರ್ಮಿಸುವ ಅವಕಾಶಗಳು ಅತ್ಯಲ್ಪವಾಗಿರುತ್ತವೆ, ಇದು ಅವರ ಅನರ್ಹತೆಯ ಭಾವನೆಗಳನ್ನು ಹೆಚ್ಚಿಸುತ್ತದೆ. ವಿಕಲಾಂಗ ಜನರು ಸಾಮಾನ್ಯವಾಗಿ ಬಹಳಷ್ಟು ಕಳಂಕ ಮತ್ತು ತೀರ್ಪನ್ನು ಎದುರಿಸುತ್ತಾರೆ. ಅವರನ್ನು ಅಸಹ್ಯದಿಂದ ನೋಡಲಾಗುತ್ತದೆ ಅಥವಾ ಕರುಣೆ ಮತ್ತು ಮುಜುಗರದಿಂದ ನೋಡಲಾಗುತ್ತದೆ ಎಂಬುದಾಗಿ ವರದಿಯು ಉಲ್ಲೇಖಿಸುತ್ತದೆ. ಹೀಗೆ ತಮ್ಮ ಅಂಗವೈಕಲ್ಯವನ್ನು ವಿಕಲಚೇತನರು ಆಯುಧವಾಗಿ ಮಾರ್ಪಡಿಸಿಕೊಂಡು ತಾವು ಇಂತಹ ನಿಂದನೆಗಳಿಗೆ ಅರ್ಹರು ಎಂದು ಭಾವಿಸಿ ಅದನ್ನು ಸಹಿಸಿಕೊಳ್ಳುತ್ತಾರೆ.


ಇದನ್ನೂ ಓದಿ: Explained: ಇನ್ಮುಂದೆ ಮೊಬೈಲ್ ಕಳ್ಕೊಂಡ್ರೆ ಚಿಂತೆ ಬೇಡ! ಹೀಗೆ ಮಾಡಿದ್ರೆ ಸಿಗುತ್ತೆ ನಿಮ್ಮ ಫೋನ್

ಇಂಹುದ್ದೇ ನಿಂದನೀಯ ದಾಂಪತ್ಯದಿಂದ ಹೊರಬರಲು ಪಾಯಲ್ ಕಪೂರ್ ಎಂಟು ವರ್ಷಗಳನ್ನು ತೆಗೆದುಕೊಂಡರು ಎಂಬುದನ್ನು ಹೇಳುತ್ತಾರೆ. ಅಂಗವಿಕಲ ವಕೀಲರಾಗಿ ಕಾರ್ಯನಿರ್ವಹಿಸುವ ಪಾಯಲ್ ಕುರುಡು ಹಾಗೂ ಭಾಗಶಃ ಕಿವುಡರಾಗಿದ್ದಾರೆ. ತಮ್ಮ ಸಂಬಂಧವನ್ನು ಆದಷ್ಟು ಚೆನ್ನಾಗಿ ನಿರ್ವಹಿಸಬೇಕೆಂಬ ಇಚ್ಛೆಯನ್ನು ಇವರು ಹೊಂದಿದ್ದರು ಅದಕ್ಕಾಗಿಯೇ ಹೊಂದಿಕೊಂಡು ಹೋಗುತ್ತಿದ್ದರು ಅಂಗವೈಕಲ್ಯವಿದ್ದರೂ ಎಲ್ಲದಂತೆ ನಾನು ವಿವಾಹಿತಳಾಗಿ ಬದುಕಬಲ್ಲೆ ಎಂಬ ದೃಢನಿರ್ಧಾರ ಹೊಂದಿದ್ದರು ಆದರೆ ದ ಸ್ಟೋರಿ ಆಫ್ ಎ ಮ್ಯಾರೇಜ್‌ನಲ್ಲಿ ಪಾಯಲ್ ತಮ್ಮ ವೈವಾಹಿಕ ಜೀವನದ ಕಹಿ ಅಂಶಗಳನ್ನು ಬರೆದುಕೊಂಡಿದ್ದಾರೆ.


ದಾಂಪತ್ಯ ಜೀವನ ತೊರೆದರೆ ನನ್ನನ್ನು ಯಾರು ಬೆಂಬಲಿಸುತ್ತಾರೆ?
ಒಮ್ಮೊಮ್ಮೆ ಅಂಗವೈಕಲ್ಯವುಳ್ಳ ವ್ಯಕ್ತಿಗಳಿಗೆ ಇನ್ನೊಬ್ಬರ ಆಶ್ರಯದ ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ ದಾಂಪತ್ಯ ಜೀವನದಲ್ಲಿ ಸಹಿಸಿಕೊಂಡು ಹೋಗುವುದೇ ಉತ್ತಮ ಎಂಬ ಭಾವನೆ ಉಂಟಾಗುತ್ತದೆ ಎಂಬುದು ಸಮಿಧಾ ಅವರ ಅನಿಸಿಕೆಯಾಗಿದೆ. ಒಮ್ಮೊಮ್ಮೆ ಅವರ ಅಂಗವೈಕಲ್ಯವೇ ಕೌಟುಂಬಿಕ ಹಿಂಸೆಗೆ ಕಾರಣವಾಗುತ್ತದೆ. ಮಾನಸಿಕವಾಗಿ ಕಂಗೆಡಿಸುತ್ತದೆ ಎಂಬುದು ಸಮಿಧಾ ಅವರಂತಹ ಹೆಚ್ಚಿನ ವಿಕಲಚೇತನ ಮಹಿಳೆಯರ ಅಭಿಪ್ರಾಯವಾಗಿದೆ. ವಿಕಲಚೇತನರು ಆರೋಗ್ಯ ಸಮಸ್ಯೆಗಳಿಗೆ ಒಳಗಾದಾಗ ಅವರನ್ನು ನಿರ್ಲಕ್ಷಿಸುವುದು ಇಲ್ಲದಿದ್ದರೆ ಕೋವಿಡ್-19 ನಂತಹ ಮಾರಕ ರೋಗಗಳ ಸಮಯದಲ್ಲಿ ವಿಕಲಚೇತನರಿಗೆ ಚುಚ್ಚುಮದ್ದು ನೀಡದೇ ಇರುವುದು. ನೀವು ಹೇಗಿದ್ದರೂ ಅಂಗಹೀನತೆಯಿಂದ ಮನೆಯಲ್ಲೇ ಇರುತ್ತೀರಿ ನಿಮಗೆಲ್ಲಾ ಏಕೆ ಚುಚ್ಚುಮದ್ದೆಂಬ ವ್ಯಂಗ್ಯೋಕ್ತಿಗಳನ್ನು ಹೆಚ್ಚಿನ ವಿಕಲಚೇತನರು ಅನುಭವಿಸಿದ್ದಾರೆ. ಒಟ್ಟಿನಲ್ಲಿ ಸೌಲಭ್ಯಗಳಿಂದ ಅವರನ್ನು ವಂಚಿತರಾಗಿಸುವುದೂ ಕೂಡ ಒಂದು ರೀತಿಯ ಹಿಂಸೆ ಎಂಬುದು ಖೇತರ್‌ಪಾಲ್ ಅನಿಸಿಕೆಯಾಗಿದೆ.


ಸ್ವಯಂ-ಅನುಮಾನ ಹಾಗೂ ಗೊಂದಲ:
ನಿಂದನೀಯ ಸಂಬಂಧಗಳಲ್ಲಿ ಹೆಚ್ಚುಕಂಡುಬರುವುದು ಸ್ವಯಂ-ಅನುಮಾನ ಹಾಗೂ ಗೊಂದಲವನ್ನು ಏರ್ಪಡಿಸುವುದಾಗಿದೆ. ಅವರ ಆಂತರಿಕ ಸಾಮರ್ಥ್ಯವನ್ನೇ ಪ್ರಶ್ನಿಸುವುದು ಹಾಗೂ ಸ್ವಯಂ ಬಗ್ಗೆ ಅಸಹ್ಯವುಂಟಾಗುವಂತೆ ಮಾತನಾಡುವುದು ಮಾನಸಿಕ ಹಿಂಸೆಯ ಒಂದು ರೂಪವಾಗಿದೆ.


ಭಾವನಾತ್ಮಕ ಹಿಂಸೆ:
ಅಸಹಾಯಕ, ಅವಲಂಬಿತ ಮಹಿಳೆಯರನ್ನು ನಿಯಂತ್ರಿಸುವುದು ಸುಲಭ ಇದೂ ಕೂಡ ಹಿಂಸೆಯಲ್ಲಿ ಕಂಡುಬರುವ ಒಂದು ಅಂಶವಾಗಿದೆ. ಅವರು ಹಾಕಿಕೊಳ್ಳುವ ಉಡುಪು, ಅವರ ವರ್ತನೆ, ಯಾರೊಂದಿಗೆ ಮಾತನಾಡುತ್ತಾರೆ ಮೊದಲಾದ ಅಂಶಗಳ ಮೇಲೂ ಇದು ಪ್ರತೀಕೂಲ ಪರಿಣಾಮ ಬೀರುತ್ತದೆ.


ಸ್ವಾವಲಂಬನೆ-ಪರಿಕರಗಳ ಕೊರತೆ:
ಅಂಗವಿಕಲ ವ್ಯಕ್ತಿಗೆ, ಹೊಂದಾಣಿಕೆ, ಪರಸ್ಪರ ಒಲವು ಮತ್ತು ಗೌರವವು ಮದುವೆಯೇ ಮುಖ್ಯವಲ್ಲ ಎಂಬ ನಂಬಿಕೆಯನ್ನು ಇದು ಬಲಪಡಿಸುತ್ತದೆ. ಉದಾಹರಣೆಗೆ, ರೀಮಾ, ಅವರ ಉದಾಹರಣೆಯಲ್ಲೇ ಕ್ರೈಸ್ತ ಸನ್ಯಾಸಿನಿಯರು ಅಂಗವಿಕಲರಲ್ಲದ ಮಹಿಳೆಯರಿಗೆ ವಿವಾಹವಾಗಲು ಕಡಿಮೆ ಒತ್ತಡವನ್ನು ಹಾಕಿದರು ಮತ್ತು ಅವರಿಗೆ ಇಷ್ಟವಿಲ್ಲದಿದ್ದರೆ ವಿವಾಹ ಒಪ್ಪಂದಗಳನ್ನು ನಿರಾಕರಿಸಲು ಹೆಚ್ಚಿನ ಆಯ್ಕೆಯನ್ನು ನೀಡಿದರು. ಆದರೆ ವಿಕಲಚೇತನ ರೀಮಾರಿಗೆ ಇಂತಹ ಆಯ್ಕೆಯನ್ನು ನೀಡಲಿಲ್ಲ. ಬದಲಿಗೆ ವಿವಾಹವಾಗಲು ಒತ್ತಡ ಹೇರಿದರು


ಕಿವುಡ ಶಿಕ್ಷಣತಜ್ಞೆಯಾದ ಕನಿಕಾ ಅಗರ್ವಾಲ್ ಹೇಳುವಂತೆ, ಸಂಕೇತ ಭಾಷೆಯನ್ನು ಬಳಸುವ ಅನೇಕ ಕಿವುಡ ವ್ಯಕ್ತಿಗಳಿಗೆ, ಸೈನ್ ಇನ್ ಮಾಹಿತಿಯಂತಹ ಮೂಲಭೂತ ಸಂಪನ್ಮೂಲಗಳ ಕೊರತೆಯಿಂದಲೇ ಸಮಸ್ಯೆ ಪ್ರಾರಂಭವಾಗುತ್ತದೆ. ಇನ್ನು ಕುಟುಂಬಗಳ ಬೆಂಬಲ ಇಲ್ಲದಿರುವುದೂ ಕೂಡ ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಎಂಬುದು ಕನಿಕಾ ಅಭಿಪ್ರಾಯವಾಗಿದೆ.


ಬಡತನ ಹೆಚ್ಚುವರಿ ಸವಾಲಾಗಿದೆ:
ಉದಾಹರಣೆಗೆ ಕಡಿಮೆ ದೃಷ್ಟಿದೋಷವಿದ್ದ ಸುಮನ್ 4 ನೇ ತರಗತಿಯವರೆಗೆ ಮಾತ್ರ ಓದುತ್ತಾಳೆ. ತನ್ನ ಹತ್ತನೇ ವಯಸ್ಸಿನಲ್ಲಿ ಮನೆಗೆಲಸಕ್ಕೆ ಹೋಗುತ್ತಾಳೆ. ಆಕೆಯ ತಂದೆಯ ಮರಣದ ನಂತರ ಆಕೆ ಶಿಕ್ಷಣದಿಂದ ವಂಚಿತಳಾಗುತ್ತಾಳೆ. ಹೀಗೆ 18 ರ ಹರೆಯದಲ್ಲಿ ಕಿವುಡ ವ್ಯಕ್ತಿಯೊಂದಿಗೆ ಓಡಿ ಹೋಗಿ ವಿವಾಹವಾಗುತ್ತಾಳೆ ತದನಂತರ ಲೈಂಗಿಕ ಕಿರುಕುಳ ಆರಂಭಗೊಳ್ಳುತ್ತದೆ.


ಇದನ್ನೂ ಓದಿ:  Enjoy Enjaami: ಒಂದು ಸೂಪರ್​ಹಿಟ್ ಹಾಡನ್ನು ಮೂರು ಜನ ತಾವೇ ಮಾಡಿದ್ದು ಅಂತಿದ್ದಾರೆ, ಸತ್ಯ ಏನಿದೆ?

ಮಾನಸಿಕ ಅಸಾಮರ್ಥ್ಯಗಳು ಮತ್ತು ನಿಂದನೆ:
ಅಂಗವಿಕಲರು ಸಾಂಪ್ರದಾಯಿಕವಾಗಿ ಆಕರ್ಷಕವಾಗಿಲ್ಲ ಅಥವಾ ಸಾಮಾನ್ಯವಾಗಿ ಲೈಂಗಿಕ ಕಾಮನೆಗಳನ್ನು ತೀರಿಸುವಲ್ಲಿ ಅಸಾಮರ್ಥ್ಯರಾಗಿರುತ್ತಾರೆ ಎಂಬ ಭಾವನೆಯನ್ನು ಹೊಂದಿರುತ್ತಾರೆ. ಹಾಗೂ ಶೋಷಿಸುವವರು ಇದೇ ರೀತಿಯ ಭಾವನೆಯನ್ನು ಅವರಲ್ಲಿ ಉಂಟುಮಾಡಿರುತ್ತಾರೆ. ಹೀಗೆ ದೈಹಿಕ ಮತ್ತು ಮಾನಸಿಕ ಹಿಂಸೆಗಳಿಂದ ವಿಕಲಚೇತನ ಮಹಿಳೆಯರು ಆಘಾತಕ್ಕೊಳಗಾಗುತ್ತಾರೆ ಮತ್ತು ತಮ್ಮನ್ನು ತಾವೇ ಹಳಿದುಕೊಳ್ಳುತ್ತಾರೆ.


ವರದಿ ಮಾಡುವಿಕೆ, ಚಿಕಿತ್ಸೆ ಮತ್ತು ಬೆಂಬಲ:
ಕಾನೂನು ಜಾರಿ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಗಳಲ್ಲಿ ಅಂಗವೈಕಲ್ಯ ಶಿಷ್ಟಾಚಾರದ ಕೊರತೆ, ಅಂಗವಿಕಲ ಜನರಲ್ಲಿ ಅಪನಂಬಿಕೆ ಮತ್ತು ಮೂಲಸೌಕರ್ಯಗಳು ಮತ್ತು ಸಂವಹನವನ್ನು ಸಕ್ರಿಯಗೊಳಿಸುವ ವಿಷಯದಲ್ಲಿ ಪೊಲೀಸ್ ಠಾಣೆಗಳಿಗೆ ಹೋಗದೇ ಇರುವುದು ಇತ್ಯಾದಿ. ಕಾನೂನು ವ್ಯವಸ್ಥೆಗಳು ಇನ್ನಷ್ಟು ಸುಧಾರಣೆಗೊಳ್ಳಬೇಕಾಗಿದ್ದು ಅಂಗವಿಕಲ ಮಹಿಳೆಯರು ಇಲ್ಲವೇ ವ್ಯಕ್ತಿಗಳು ದೂರು ನೀಡಲು ಇಲ್ಲವೇ ಪರಿಹಾರ ಪಡೆಯಲು ಸುಲಭವಾಗುವ ಸರಳ ವಿಧಾನಗಳತ್ತ ಗಮನಹರಿಸಬೇಕಾಗಿದೆ.

Published by:Ashwini Prabhu
First published: