Explained: ಹುಸಿಯಾದ ಪುಟಿನ್ ನಿರೀಕ್ಷೆ; ಉಕ್ರೇನ್-ರಷ್ಯಾ ಸಮರದಲ್ಲಿ ರೋಚಕ ತಿರುವು!

ಪಾಶ್ಚಿಮಾತ್ಯ ಶಸ್ತ್ರಾಸ್ತಗಳ ಸಂಗ್ರಹವನ್ನು ಹೊಂದಿರುವ ಉತ್ಸಾಹಭರಿತ ಉಕ್ರೇನಿಯನ್ ಪ್ರತಿರೋಧವು ರಷ್ಯಾದ ಸೇನೆಯನ್ನು ಹಿಮ್ಮೆಟ್ಟಿಸುವಷ್ಟು ಪ್ರಯತ್ನಿಸುತ್ತದೆ ಎಂಬುದಾಗಿ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ ತಿಳಿದುಕೊಂಡಿರಲಿಲ್ಲ. ಇದೀಗ ಯುದ್ಧವು 7ನೇ ತಿಂಗಳಿಗೆ ಸಮೀಪಿಸುತ್ತಿದ್ದಂತೆ ಉಕ್ರೇನ್ ಪ್ರಬಲ ಪಡೆಯಾಗಿ ಹೊರಹೊಮ್ಮುತ್ತಿದ್ದಂತೆ ರಷ್ಯಾ ಕೊಂಚ ಕೊಂಚವಾಗಿ ಹಿಮ್ಮೆಟ್ಟುತ್ತಿರುವಂತೆ ಕಾಣುತ್ತಿದೆ.

ರಷ್ಯಾ ಅಧ್ಯಕ್ಷ ಪುಟಿನ್ (ಸಂಗ್ರಹ ಚಿತ್ರ)

ರಷ್ಯಾ ಅಧ್ಯಕ್ಷ ಪುಟಿನ್ (ಸಂಗ್ರಹ ಚಿತ್ರ)

  • Share this:
ನಿಖರವಾಗಿ 200 ದಿನಗಳ ಹಿಂದೆ, ತಾಲಿಬಾನ್ (Taliban)  ಶೈಲಿಯ ಮಿಂಚಿನ ಆಕ್ರಮಣದ ಮೂಲಕ ಉಕ್ರೇನ್‌ನ (Ukraine) ಅತ್ಯಮೂಲ್ಯ ರಾಜಧಾನಿ ಕೈವ್ ಅನ್ನು ಸ್ವಾಧೀನಪಡಿಸಿಕೊಳ್ಳುವ ನಿರೀಕ್ಷೆಯನ್ನಿರಿಸಿಕೊಂಡು ಶತ್ರು ರಾಷ್ಟ್ರ ರಷ್ಯಾವು (Russia) ಉಕ್ರೇನ್‌ನ ಮೇಲೆ ಸಂಪೂರ್ಣ ಆಕ್ರಮಣ ಪ್ರಾರಂಭಿಸಿತು. ಆದರೆ ಪಾಶ್ಚಿಮಾತ್ಯ ಶಸ್ತ್ರಾಸ್ತಗಳ ಸಂಗ್ರಹವನ್ನು ಹೊಂದಿರುವ ಉತ್ಸಾಹಭರಿತ ಉಕ್ರೇನಿಯನ್ ಪ್ರತಿರೋಧವು ರಷ್ಯಾದ ಸೇನೆಯನ್ನು ಹಿಮ್ಮೆಟ್ಟಿಸುವಷ್ಟು ಪ್ರಯತ್ನಿಸುತ್ತದೆ ಎಂಬುದಾಗಿ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್‌ ಪುಟಿನ್‌ (Vladimir Putin) ತಿಳಿದುಕೊಂಡಿರಲಿಲ್ಲ. ಇದೀಗ ಯುದ್ಧವು 7 ನೇ ತಿಂಗಳಿಗೆ ಸಮೀಪಿಸುತ್ತಿದ್ದಂತೆ ಉಕ್ರೇನ್ ಪ್ರಬಲ ಪಡೆಯಾಗಿ ಹೊರಹೊಮ್ಮುತ್ತಿದ್ದಂತೆ ರಷ್ಯಾ ಕೊಂಚ ಕೊಂಚವಾಗಿ ಹಿಮ್ಮೆಟ್ಟುತ್ತಿರುವಂತೆ ಕಾಣುತ್ತಿದೆ.

ಮರುಸ್ವಾಧೀನಪಡಿಸಿಕೊಂಡಿರುವ ಉಕ್ರೇನ್
ಈಶಾನ್ಯ ಉಕ್ರೇನ್‌ನಲ್ಲಿನ ಮುಖ್ಯ ಭದ್ರಕೋಟೆಯಾದ ಖಾರ್ಕಿವ್‌ನಲ್ಲಿನ ಇಜಿಯಮ್ ನಗರವನ್ನು ರಷ್ಯಾ ಕೈಬಿಟ್ಟ ನಂತರ ಉಕ್ರೇನ್ ಪಡೆಗಳು ಕ್ಷಿಪ್ರಗತಿಯಲ್ಲಿ ಮುನ್ನಡೆಯನ್ನು ಕಂಡಿದ್ದು ಯುದ್ಧದ ಪ್ರಮುಖ ಮುಂಚೂಣಿಯ ಹಠಾತ್ ಕುಸಿತವಾಗಿ ಕಂಡುಬಂದಿತು.

ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಮ್ಮ ವಿಡಿಯೋ ಭಾಷಣದಲ್ಲಿ ಉಕ್ರೇನ್‌ನ ಸಶಸ್ತ್ರ ಪಡೆಗಳು ಈ ತಿಂಗಳ ಆರಂಭದಲ್ಲಿ 2,000 ಚದರ ಕಿಲೋಮೀಟರ್ ಪ್ರದೇಶವನ್ನು ಪುನಃ ಸ್ವಾಧೀನಪಡಿಸಿಕೊಂಡಿವೆ ಎಂದು ತಿಳಿಸಿದ್ದಾರೆ.

ಸೋಲಿನತ್ತ ಮುಖಮಾಡುತ್ತಿರುವ ರಷ್ಯಾ
ವಿಶ್ವದಲ್ಲಿಯೇ ಅತ್ಯಂತ ಸುಧಾರಿತ ಹಾಗೂ ವೇಗದ ಸೇನೆ ಎಂಬ ಬಿರುದನ್ನು ರಷ್ಯಾ ತನ್ನದಾಗಿಸಿಕೊಳ್ಳುತ್ತಿದೆ ಎಂಬುದಾಗಿ ಝೆಲೆನ್ಸ್ಕಿಯ ಮುಖ್ಯ ಸಿಬ್ಬಂದಿ ಚೀಕಿ ಟ್ವಿಟರ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಆದರೆ ಉಕ್ರೇನ್‌ನ 2.5 ಪಟ್ಟು ಗಾತ್ರದ ಸೇನಾ ಪಡೆಯನ್ನು ಹೊಂದಿರುವ ರಷ್ಯಾ ಸೋಲಿನತ್ತ ಏಕೆ ಮುಖ ಮಾಡುತ್ತಿದೆ?

ಇದಕ್ಕೆ ಪ್ರಮುಖ ಕಾರಣವೆಂದರೆ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳು, ಅದಾಗ್ಯೂ ಎರಡು ಪಡೆಗಳಲ್ಲಿ ಹೆಚ್ಚು ಪ್ರಬಲವಾದುದು ರಷ್ಯಾದ ಸೇನೆ ಎಂದು ಹೇಳಲು ಯಾವುದೇ ಮಿಲಿಟರಿ ತಜ್ಞರ ನೆರವು ಬೇಕಾಗಿಲ್ಲ. ಅದಾಗ್ಯೂ ರಷ್ಯಾ ಉಕ್ರೇನ್‌ನ ನಿರಂತರ ದಾಳಿಯಿಂದ ಹಿಮ್ಮೆಟ್ಟುವಂತಾಗಿದೆ.

ಇದನ್ನೂ ಓದಿ: Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?

ಉಕ್ರೇನಿಗೆ ಆಧುನಿಕ ಶಸ್ತ್ರಾಸ್ತ್ರಗಳ ನಿರಂತರ ಪೂರೈಕೆಯಾಗುತ್ತಿದ್ದು ಜೊತೆಗೆ ತಮ್ಮ ಜನ್ಮಭೂಮಿಯನ್ನು ರಕ್ಷಿಸಬೇಕೆಂಬ ದೇಶ ಪ್ರೇಮ ದೃಢವಾಗಿರುವಾಗ ಉಕ್ರೇನ್‌ಗೆ ರಷ್ಯಾದ ಪ್ರತಿದಾಳಿಯನ್ನು ತಡೆಯಲು ಹಾಗೂ ಉಕ್ರೇನ್ ಅನ್ನು ಕಬಳಿಸಬೇಕೆಂಬ ರಷ್ಯಾದ ಪ್ರಯತ್ನವನ್ನು ತಡೆಯಲು ಅಗತ್ಯ ಶಸ್ತ್ರಗಳು ನೆರವು ನೀಡುತ್ತಿವೆ.

ಮಿತ್ರರಾಷ್ಟ್ರಗಳ ಸಹಾಯ
ಯುದ್ಧದ ಆರಂಭದಲ್ಲಿಯೇ ರಷ್ಯಾದ ಯುದ್ಧಸಲಕರಣೆಗಳಿಗೆ ಹೊಂದಿಕೆಯಾಗುವ ಆಯುಧಗಳನ್ನು ಹಾಗೂ ಯುದ್ಧಸಲಕರಣೆಗಳನ್ನು ಉಕ್ರೇನ್ ಬಳಸಿತು ಆದರೆ ಕೆಲವೇ ತಿಂಗಳುಗಳಲ್ಲಿ ಈ ಆಯುಧಗಳ ಶಕ್ತಿ ಕುಂದಿತು. ಅದರಲ್ಲೂ ಫಿರಂಗಿ ಹಾಗೂ ಕ್ಷಿಪಣಿ ವ್ಯವಸ್ಥೆಗಳು ಉಕ್ರೇನ್ ಪಡೆಗೆ ಕೊಂಚ ಸವಾಲಿನದ್ದಾಗಿತ್ತು.

ಉಕ್ರೇನ್ NATO- ಪ್ರಮಾಣಿತ ಶಸ್ತ್ರಾಸ್ತ್ರಗಳೊಂದಿಗೆ ಪಾಶ್ಚಿಮಾತ್ಯ ಮಿತ್ರರಾಷ್ಟ್ರಗಳ ಮೇಲೆ ಅವಲಂಬಿತವಾಯಿತು. ಆಧುನಿಕ ಪಾಶ್ಚಿಮಾತ್ಯ ಶಸ್ತ್ರಾಸ್ತ್ರಗಳನ್ನು ವಿಧ್ವಂಸಕ ಪರಿಣಾಮಕ್ಕೆ ಬಳಸುತ್ತಿರುವ ಉಕ್ರೇನ್, ಯುಎಸ್ ಪೂರೈಕೆ ಮಾಡಿರುವ HIMARS ರಾಕೆಟ್ ಮೂಲಕ ನೂರಾರು ರಷ್ಯಾದ ಪಡೆಗಳನ್ನು ಹೊಡೆದುರುಳಿಸುತ್ತಿದೆ.

ಇದಲ್ಲದೆ ಯುಎಸ್‌ನಂತಹ ಮಿತ್ರರಾಷ್ಟ್ರಗಳು ಉಕ್ರೇನ್‌ಗೆ ಹೋವಿಟ್ಜರ್‌ಗಳು, ಸ್ವಿಚ್‌ಬ್ಲೇಡ್ ಡ್ರೋನ್‌ಗಳು, ರಾಕೆಟ್ ಲಾಂಚರ್‌ಗಳು, ಆ್ಯಂಟಿ-ಏರ್‌ಕ್ರಾಫ್ಟ್, ಯುದ್ಧತಂತ್ರ ವಾಹನಗಳು ಮತ್ತು ಇನ್ನಷ್ಟು ಯುದ್ಧ ಸಾಮಾಗ್ರಿಗಳನ್ನು ಪೂರೈಸಿವೆ. ಒಟ್ಟಾರೆಯಾಗಿ, ವಾಷಿಂಗ್ಟನ್ $15.2 ಶತಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್‌ಗೆ ಪೂರೈಕೆ ಮಾಡುವುದಾಗಿ ವಾಗ್ದಾನ ಮಾಡಿದ್ದು, ಇವುಗಳಲ್ಲಿ ಜಾವೆಲಿನ್ ವಿರೋಧಿ ಟ್ಯಾಂಕ್ ಕ್ಷಿಪಣಿಗಳು, ಫಿರಂಗಿದಳಗಳು ಮತ್ತು ಮದ್ದುಗುಂಡುಗಳು ನ್ಯಾಟೋ ಶಸ್ತ್ರಾಸ್ತ್ರಗಳಿಗೆ ಹೊಂದಿಕೊಳ್ಳುವ ಯುದ್ಧ ಶಸ್ತ್ರಾಸ್ತ್ರಗಳಾಗಿವೆ.

ಇತರ ಪಾಶ್ಚಿಮಾತ್ಯ ಸರ್ಕಾರಗಳು ಯುದ್ಧ ಸಲಕರಣೆಗಳು ಉತ್ಪಾದನೆಯನ್ನು ಹೆಚ್ಚಿಸಲು, ರಷ್ಯಾ ವಿರುದ್ಧ ಉಕ್ರೇನ್‌ಗೆ ಯುದ್ಧ ಸಲಕರಣೆಗಳನ್ನು ಪೂರೈಸುವ ಮೂಲಕ ಕಡಿಮೆಯಾದ ದಾಸ್ತಾನುಗಳನ್ನು ಹೆಚ್ಚಾಗಿಸಲು ತಮ್ಮ ಶಸ್ತ್ರಾಸ್ತ್ರ ತಯಾರಕರನ್ನು ಸಜ್ಜುಗೊಳಿಸುತ್ತಿವೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮತ್ತು ನ್ಯಾಟೋ ಮುಖ್ಯಸ್ಥರು ಯುದ್ಧವು ತಿಂಗಳುಗಳವರೆಗೆ ಮುಂದುವರಿಯಬಹುದು ಎಂದು ಎಚ್ಚರಿಸಿದರು, ಕಠಿಣ ಚಳಿಗಾಲದ ಸಮಯದಲ್ಲೂ ಉಕ್ರೇನ್ ಅನ್ನು ಬೆಂಬಲಿಸುವಂತೆ ಪಶ್ಚಿಮಕ್ಕೆ ಒತ್ತಾಯಿಸಿದರು.

ಹಿಮಾರಸ್ ಲಾಂಚ್ ರಾಕೆಟ್ ಸಿಸ್ಟಮ್
ಯುನೈಟೆಡ್ ಸ್ಟೇಟ್ಸ್ ಆರ್ಮಿಗಾಗಿ 1990 ರ ದಶಕದ ಉತ್ತರಾರ್ಧದಲ್ಲಿ ಅಭಿವೃದ್ಧಿಪಡಿಸಿದ ಲಘು ಮಲ್ಟಿಪಲ್ ರಾಕೆಟ್ ಲಾಂಚರ್ ಮತ್ತು ಪ್ರಮಾಣಿತ ಯುನೈಟೆಡ್ ಸ್ಟೇಟ್ಸ್ ಆರ್ಮಿ M1140 ಟ್ರಕ್ ಫ್ರೇಮ್‌ನಲ್ಲಿ ಅಳವಡಿಸಲಾಗಿದೆ. HIMARS ಆರು GMLRS ರಾಕೆಟ್‌ಗಳು ಅಥವಾ ಒಂದು ATACMS ಕ್ಷಿಪಣಿಯೊಂದಿಗೆ ಒಂದು ಪಾಡ್ (ಶೆಲ್) ಅನ್ನು ಒಯ್ಯುತ್ತದೆ.

ಇದು ಯುನೈಟೆಡ್ ಸ್ಟೇಟ್ಸ್ ಆರ್ಮಿಯ ಫ್ಯಾಮಿಲಿ ಆಫ್ ಮೀಡಿಯಮ್ ಟ್ಯಾಕ್ಟಿಕಲ್ ವೆಹಿಕಲ್ಸ್ (FMTV) ಐದು-ಟನ್ ಟ್ರಕ್ ಅನ್ನು ಆಧರಿಸಿದೆ ಮತ್ತು ಮಲ್ಟಿಪಲ್ ಲಾಂಚ್ ರಾಕೆಟ್ ಸಿಸ್ಟಮ್ ಫ್ಯಾಮಿಲಿ ಆಫ್ ಮ್ಯೂನಿಷನ್ಸ್ (MFOM) ನಲ್ಲಿ ನಿರ್ದಿಷ್ಟಪಡಿಸಿದ ಎಲ್ಲಾ ರಾಕೆಟ್‌ಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

HIMARS ಯುದ್ಧಸಾಮಗ್ರಿ ಪಾಡ್‌ಗಳು M270 MLRS ನೊಂದಿಗೆ ಪರಸ್ಪರ ಬದಲಾಯಿಸಲ್ಪಡುತ್ತವೆ; ಆದಾಗ್ಯೂ, ಇದು M270 ಮತ್ತು ಅದರ ರೂಪಾಂತರಗಳಿಗೆ ಪ್ರಮಾಣಿತ ಎರಡಕ್ಕೆ ವಿರುದ್ಧವಾಗಿ ಒಂದೇ ಪಾಡ್‌ಗೆ ಸೀಮಿತವಾಗಿದೆ.

ರಷ್ಯಾದ ಮೇಲಿರುವ ನಿರ್ಬಂಧಗಳು
ಫೆಬ್ರವರಿ 21 ರ ಆಕ್ರಮಣದ ನಂತರ, ಪಾಶ್ಚಿಮಾತ್ಯ ದೇಶಗಳು ಹೇರಿದ ಆರ್ಥಿಕ ನಿರ್ಬಂಧಗಳ ಸುರಿಮಳೆಯು ರಷ್ಯಾವನ್ನು ಕಂಗಾಲಾಗಿಸಿದೆ. ಕ್ಯಾಸ್ಟೆಲಿಯಮ್.ಎಐ ಪ್ರಕಾರ, ಫೆಬ್ರವರಿ 22 ರಿಂದ ರಷ್ಯಾವು 9,200 ಕ್ಕೂ ಹೆಚ್ಚು ನಿರ್ಬಂಧಗಳಿಗೆ ಒಳಪಟ್ಟಿದ್ದು, ಇಂದು ವಿಶ್ವದ ಅತ್ಯಂತ ಹೆಚ್ಚು ನಿರ್ಬಂಧಕ್ಕೆ ಒಳಗಾದ ದೇಶವಾಗಿದೆ. ನಿರ್ಬಂಧಗಳು ಇದೀಗ ಮಾಸ್ಕೋಗೆ ಮುಳುವಾಗಿವೆ. 2022 ರಲ್ಲಿ ಆರ್ಥಿಕತೆಯು 10% ದಷ್ಟು ಕುಗ್ಗುತ್ತಿದ್ದು ಆರ್ಥಿಕ ಹಿಂಜರಿದತ್ತ ಸಾಗುತ್ತಿದೆ.

ಇದನ್ನೂ ಓದಿ:  Chile: ಹೊಸ ಪ್ರಗತಿಪರ ಸಂವಿಧಾನವನ್ನೇ ಘಂಟಾಘೋಷವಾಗಿ ತಿರಸ್ಕರಿಸಿದ ಚಿಲಿಯ ಜನತೆ! ಕಾರಣ?

ಉರಿವ ಕಿಚ್ಚಿಗೆ ತುಪ್ಪ ಸುರಿದಂತೆ 1,200 ಕ್ಕೂ ಹೆಚ್ಚು ವಿದೇಶಿ ಕಂಪೆನಿಗಳು ರಷ್ಯಾದಲ್ಲಿ ತಮ್ಮ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ್ದು ಇನ್ನು ಕೆಲವು ಅಂತ್ಯಗೊಳಿಸಿವೆ. ಆ್ಯಪಲ್, ಮೆಕ್ಡಾನೊಲ್ಡ್ಸ್, ಐಕ್ಯಾ, ವಿಸಾ ಹಾಗೂ ಮಾಸ್ಟರ್‌ಕಾರ್ಡ್‌ನಂತಹ ಪ್ರತಿಷ್ಠಿತ ಕಂಪೆನಿಗಳು ರಷ್ಯಾದಿಂದ ನಿರ್ಗಮಿಸಿವೆ. ತೈಲ ಮತ್ತು ಅನಿಲ ರಫ್ತಿನ ಮೂಲಕ ತನ್ನ ಯುದ್ಧದ ಪ್ರಯತ್ನಗಳಿಗೆ ಹಣವನ್ನು ಒದಗಿಸಲು ರಷ್ಯಾ ಇನ್ನೂ ನಿರ್ವಹಿಸುತ್ತಿರುವಾಗ, ಕಠಿಣವಾದ ಚಳಿಗಾಲದಲ್ಲಿ ಅದನ್ನು ಸಾಗಿಸಲು ಅಗತ್ಯವಾದ ನಿರ್ಣಾಯಕ ಶಸ್ತ್ರಾಸ್ತ್ರಗಳು ಅಥವಾ ಘಟಕಗಳು ಖಾಲಿಯಾಗುತ್ತಿವೆ. ಹತಾಶೆಯ ಉತ್ತುಂಗದಲ್ಲಿರುವ ರಷ್ಯಾ ಉತ್ತರ ಕೊರಿಯಾದಿಂದ ಲಕ್ಷಾಂತರ ರಾಕೆಟ್‌ಗಳು ಮತ್ತು ಫಿರಂಗಿ ಶೆಲ್‌ಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ.

ಒಟ್ಟಿನಲ್ಲಿ ಅಂತರಾಷ್ಟ್ರೀಯ ನಿರ್ಬಂಧಗಳಿಂದಾಗಿ ಮಾಸ್ಕೋ ಇದೀಗ ಸಣ್ಣ ಬಡ ನೆರೆಹೊರೆಯ ರಾಷ್ಟ್ರಗಳಿಂದ ಸಹಾಯಕ್ಕಾಗಿ ಅಂಗಲಾಚುತ್ತಿದೆ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಯುಎಸ್ ಸರ್ಕಾರಿ ಅಧಿಕಾರಿಗಳು ಉಲ್ಲೇಖಿಸಿದಂತೆ ಇತ್ತೀಚಿನ ವರದಿಗಳ ಪ್ರಕಾರ, ರಷ್ಯಾವು ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಇರಾನ್ ಮತ್ತು ಉತ್ತರ ಕೊರಿಯಾದಂತಹ ದೇಶಗಳತ್ತ ಮುಖಮಾಡಿದೆ, ಮನೆಗಳಲ್ಲಿ ಹಳೆಯ ಉಪಕರಣಗಳ ದಾಸ್ತಾನುಗಳನ್ನು ಸಂಗ್ರಹಿಸಲು ಒತ್ತಾಯಿಸುತ್ತಿದೆ. ಯುದ್ಧಸಾಮಗ್ರಿಗಳನ್ನು ಖರೀದಿಸುವ ನಿರ್ಧಾರವು "ರಫ್ತು ನಿಯಂತ್ರಣಗಳು ಮತ್ತು ನಿರ್ಬಂಧಗಳಿಂದಾಗಿ ರಷ್ಯಾವು ಶಸ್ತ್ರಾಸ್ತ್ರಗಳ ತೀವ್ರ ಪೂರೈಕೆ ಕೊರತೆಯಿಂದ ಬಳಲುತ್ತಿದೆ" ಎಂದು ಯುಎಸ್ ರಾಜ್ಯ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.

ಗಮನಾರ್ಹವಾಗಿ, ನಿರ್ಬಂಧಗಳು ಆಮದುಗಳಿಗೆ ಅಡ್ಡಿಯಾಗುವುದರಿಂದ ತಾಂತ್ರಿಕವಾಗಿ ಸುಧಾರಿತ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುವ ರಷ್ಯಾದ ಸಾಮರ್ಥ್ಯವು ಮತ್ತಷ್ಟು ನಾಶವಾಗುವ ಸಾಧ್ಯತೆಯಿದೆ. ಉಕ್ರೇನ್‌ನ ಯುದ್ಧಭೂಮಿಯಲ್ಲಿ ಸೆರೆಹಿಡಿಯಲಾದ ಅಥವಾ ನಾಶವಾದ ರಷ್ಯಾದ ಉಪಕರಣಗಳ ಅಧ್ಯಯನವು ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಸಂವಹನ ಸಾಧನಗಳನ್ನು ಒಳಗೊಂಡಂತೆ 27 ರಷ್ಯಾದ ನಿರ್ಣಾಯಕ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ 450 ವಿದೇಶಿ ನಿರ್ಮಿತ ಘಟಕಗಳನ್ನು ಕಂಡುಹಿಡಿದಿದೆ.

ತಲೆಕೆಳಗಾದ ಪುಟಿನ್ ನಿರೀಕ್ಷೆ
ಯುದ್ಧಕ್ಕೆ ಪಾಶ್ಚಿಮಾತ್ಯ ದೇಶಗಳಿಂದ ಉಕ್ರೇನ್‌ಗೆ ಅಭೂತಪೂರ್ವ ಬೆಂಬಲ ಸಿಗುತ್ತದೆ ಎಂದು ಪುಟಿನ್ ನಿರೀಕ್ಷಿಸಿರಲಿಲ್ಲ. ಆರಂಭಿಕ ಅತಿಯಾದ ಆತ್ಮವಿಶ್ವಾಸವು ದೀರ್ಘಾವಧಿಯಲ್ಲಿ ಪುಟಿನ್ ಅವರನ್ನು ಸೋಲಿನತ್ತ ತಳ್ಳಿತು. ರಷ್ಯಾ ತನ್ನ ಎದುರಾಳಿಯನ್ನು ಎಂದಿಗೂ ಗಂಭೀರವಾಗಿ ಪರಿಗಣಿಸಲಿಲ್ಲ, ಉಕ್ರೇನ್ ಅನ್ನು ಕಾರ್ಯಸಾಧ್ಯವಾದ ಘಟಕವೆಂದು ಪರಿಗಣಿಸಲಿಲ್ಲ. ಹಾಗಾಗಿ ಸೋಲಿನ ಸಾಧ್ಯತೆಯನ್ನು ಅದು ಯೋಚಿಸಲಿಲ್ಲ.

"ರಷ್ಯನ್ನರು ಗೆಲ್ಲುವ ಇಚ್ಛೆಯಿಲ್ಲದೆ ಹೋದರು, ಆದರೆ ಅವರು ಸೋಲುವ ಅಪಾಯಕ್ಕೆ ಆದ್ಯತೆ ನೀಡಲಿಲ್ಲ. ಯಾವುದೇ ಹಿನ್ನಡೆಯು ರಾಷ್ಟ್ರೀಯ ಹೆಮ್ಮೆಗೆ ದುರಂತದ ಕಾರಣವಾಗುತ್ತದೆ. ರಷ್ಯಾ ಉಕ್ರೇನ್‌ನ ಪ್ರಸ್ತುತ ಆವೇಗವನ್ನು ತಡೆಯಲು ನಿರ್ವಹಿಸುತ್ತಿದ್ದರೂ ಸಹ ಇದು ಮೌಲ್ಯಯುತವಾಗಿದೆ. ಈ ಅಂಶಗಳು ಐತಿಹಾಸಿಕ ಸೋಲಿನ ಅಂಶಗಳಾಗಿರಬಹುದು" ಎಂದು ಲಿಯೊನಿಡ್ ಬರ್ಶಿಡ್ಸ್ಕಿ ಬ್ಲೂಮ್‌ಬರ್ಗ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:  Economic Crisis: ಇತ್ತ ಉಕ್ರೇನ್ ಯುದ್ಧ ಮುಂದುವರಿಕೆ, ಅತ್ತ ಯೂರೋಪ್ ಆರ್ಥಿಕತೆ ಕುಸಿತ! ಮುಂದೇನು ಗತಿ?

ಇದೀಗ, ಸಾವಿರಾರು ರಷ್ಯಾದ ಮಿಲಿಟರಿ ಸಿಬ್ಬಂದಿಗಳನ್ನು ಹತ್ಯೆಗೈಯ್ಯಲಾಗಿದೆ ಮತ್ತು ಕಳೆದ ಕೆಲವು ವಾರಗಳಲ್ಲಿ ಆಕ್ರಮಣಕಾರಿ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಗೆಲುವಿಲ್ಲದೆ, ಪಡೆಗಳು ಬಳಲಿಕೆಯ ಹಂತವನ್ನು ತಲುಪಬಹುದು. ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿಕ್ ಸ್ಟಡೀಸ್‌ನ ಹಿರಿಯ ಸಹವರ್ತಿ ಬೆನ್ ಬ್ಯಾರಿ, ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿನ ಲೇಖನವೊಂದರಲ್ಲಿ ಮಾಸ್ಕೋ "ಪರಾಕಾಷ್ಠೆಯ ಹಂತ" ವನ್ನು ತಲುಪಬಹುದು ಎಂದು ಹೇಳಿದ್ದು ಈ ಹಂತದಲ್ಲಿ ಆಕ್ರಮಣಕಾರಿ ಪೂರೈಕೆಯಿಂದ ಹೊರಗುಳಿಯುತ್ತದೆ ಅಥವಾ ಹಲವಾರು ಸಾವುನೋವುಗಳನ್ನು ಉಂಟುಮಾಡುತ್ತದೆ ಎಂಬುದನ್ನು ಉಲ್ಲೇಖಿಸಿದ್ದಾರೆ.
Published by:Ashwini Prabhu
First published: