Kashmir Terrorism: ಜೂನ್ ತಿಂಗಳು ಕಾಶ್ಮೀರದ ಬಶೀರ್ ನಿದ್ರೆಗೆ ಹೋಗಲು ತಯಾರಿ ನಡೆಸುತ್ತಿದ್ದಾಗ ಪಕ್ಕದ ಬಾಗಿಲಿನಲ್ಲಿ ಬಂದೂಕು ಹೊಡೆತಗಳ ಶಬ್ದ ಕೇಳಿಸಿತು. ಗಾಬರಿಗೊಂಡ ಆತ ಪರೀಕ್ಷಿಸಲು ಹಾಸಿಗೆಯಿಂದ ಹೊರಬಂದ. ಹೃದಯ ಕಲಕುವ ದೃಶ್ಯ ಅವರಿಗೆ ಕಾದಿತ್ತು. ಅವರ ಸಹೋದರ ತನ್ನ ಮನೆಯ ಪ್ರವೇಶದ್ವಾರದಲ್ಲಿ ಶವವಾಗಿ ಮಲಗಿದ್ದರು. ಮೃತ ಸಹೋದರನ ಹೆಂಡತಿ, ಮಗಳು ಸಹ ರಕ್ತಸಿಕ್ತವಾಗಿ ಮತ್ತು ನೋವಿನಲ್ಲಿ ಹೆಣಗಾಡುತ್ತಿದ್ದರು. ಅವರೂ ಕೂಡ ನಂತರ ಸತ್ತರು. ಆ ಬುಲೆಟ್‌ಗಳು ಒಂದು ನಿಮಿಷದಲ್ಲಿ ಹೂವುಗಳಿಂದ ತುಂಬಿದ ಉದ್ಯಾನವನ್ನು ನಾಶಪಡಿಸಿದವು ಎಂದು ಬಶೀರ್ ಹೇಳಿದರು. ಇನ್ನು, ಅವರ ತಪ್ಪೇನು ಅಂದರೆ ಏನೂ ಇಲ್ಲ. ಪೊಲೀಸ್ ಅಧಿಕಾರಿಯಾಗಿದ್ದಕ್ಕೆ ಉಗ್ರರು ಬಶೀರ್ ಸಹೋದರ ಫಯಾಜ್ ಅಹ್ಮದ್ ಭಟ್ ಹತ್ಯೆಯಾಗಿದ್ದು, ಕುಟುಂಬವೂ ಬಲಿಯಾಗಿದೆ. ಈ ಕುಟುಂಬವನ್ನು ಉಗ್ರರು ಹೊಡೆದುರುಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದು, ಅಧಿಕಾರಿಗಳು ಕಾಶ್ಮೀರ ಕಣಿವೆಯಲ್ಲಿ ಟಾರ್ಗೆಟ್ ಆಗುತ್ತಾರೆ.
ಇದು ಸ್ಥಳೀಯ ಭದ್ರತಾ ಪಡೆಗಳ ವಿರುದ್ಧ ದೀರ್ಘಕಾಲದಿಂದ ಉಗ್ರಗಾಮಿತ್ವವನ್ನು ಕಂಡಿದೆ. ಪೊಲೀಸರು, ಪೊಲೀಸ್ ಮಾಹಿತಿದಾರರು ಅಥವಾ ಸಹಯೋಗಿಗಳು ಟಾರ್ಗೆಟ್ ಆಗುತ್ತಾರೆ ಮತ್ತು ಅವರ ಕುಟುಂಬಗಳು, "ಯಾವಾಗಲೂ ದುರ್ಬಲ ಮತ್ತು ಮೊದಲ ಗುರಿ ಎಂದು ದೆಹಲಿ ಮೂಲದ ರಕ್ಷಣಾ ಚಿಂತಕರ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಅಜೈ ಸಾಹ್ನಿ ಹೇಳಿದರು.
ಆಗಸ್ಟ್ 5 2019 ರಂದು, ಭಾರತ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ಸ್ವಾಯತ್ತತೆಯನ್ನು ತೆಗೆದುಹಾಕಿತು. ಆ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿಯ ಬಿಜೆಪಿ ನೇತೃತ್ವದ ಸರ್ಕಾರವು ಈ ಪ್ರದೇಶಕ್ಕೆ ಸ್ಥಿರತೆಯನ್ನು ಪುನಃಸ್ಥಾಪಿಸಲು ಮತ್ತು ಆರ್ಥಿಕ ಸಮೃದ್ಧಿಯನ್ನು ತರಲು ಈ ಕ್ರಮ ಅಗತ್ಯ ಎಂದು ಹೇಳಿತ್ತು. ಆದರೆ ಎರಡು ವರ್ಷಗಳ ನಂತರವೂ ಕಣಿವೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಅಧಿಕಾರಿಗಳು ಹೆಚ್ಚು ಸ್ಥಳೀಯ ಯುವಕರನ್ನು ಉಗ್ರಗಾಮಿಗಳತ್ತ ಸೆಳೆಯಲಾಗುತ್ತಿದೆ ಎಂದು ಹೇಳಿದರು. 1989ರಿಂದ ಕಾಶ್ಮೀರದಲ್ಲಿ ಭಾರತೀಯ ಆಡಳಿತದ ವಿರುದ್ಧ ದಂಗೆ ನಡೆಯುತ್ತಿದೆ.
ಆದರೆ ಪ್ರತಿರೋಧವು ಈಗ ಹೆಚ್ಚು ಸ್ವದೇಶಿಯಾಗಿ ಬೆಳೆಯುತ್ತಿದೆ ಅಂದರೆ ಸ್ಥಳೀಯರೇ ಉಗ್ರರಾಗುತ್ತಿದ್ದಾರೆ ಎಂದು ತಜ್ಞರು ಹೇಳಿದ್ದು, ಇದು ಭೌಗೋಳಿಕ ರಾಜಕೀಯ ಪ್ರದೇಶಕ್ಕೆ ಆತಂಕಕಾರಿ ಪ್ರವೃತ್ತಿಯಾಗಿದೆ. ದಶಕಗಳಿಂದಲೂ ಕಾಶ್ಮೀರವು ಸಂಘರ್ಷ ಮತ್ತು ಅಶಾಂತಿಯಿಂದ ಕೂಡಿದೆ.
ಕಾಶ್ಮೀರದ ಸಂಪೂರ್ಣ ಪ್ರದೇಶವನ್ನು ತನ್ನದೇ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತವೆ. ಆದರೆ, ಸದ್ಯ ಈ ಪ್ರದೇಶದ ಕೆಲವು ಭಾಗಗಳನ್ನು ಭಾರತ ಹಾಗೂ ಪಾಕ್ ನಿಯಂತ್ರಿಸುತ್ತಿವೆ. ಪರಮಾಣು-ಸಶಸ್ತ್ರ ನೆರೆಹೊರೆಯ ದೇಶಗಳು ಎರಡು ಬಾರಿ ಯುದ್ಧ ಮಾಡಿವೆ. ಹಲವು ವರ್ಷಗಳಿಂದಲೂ ಕಾಶ್ಮೀರದ ಅಸ್ಥಿರತೆಯನ್ನು ಹೆಚ್ಚಿಸಲು ಸಾವಿರಾರು ಉಗ್ರರನ್ನು ಪಾಕಿಸ್ತಾನ ಗಡಿಯುದ್ದಕ್ಕೂ ತಳ್ಳುತ್ತಿದೆ. ಆದರೆ, ಭಾರತದ ಈ ದೂರನ್ನು ಪಾಕ್ ಸರ್ಕಾರ ನಿರಾಕರಿಸುತ್ತಲೇ ಇದೆ. ಉಭಯ ದೇಶಗಳ ನಡುವಿನ ಸಂಬಂಧಗಳು ಯಾವಾಗಲೂ ಉದ್ವಿಗ್ನವಾಗಿದ್ದವು. ಆದರೆ 2019ರಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಭಾರತ - ಪಾಕ್ ಸಂಬಂಧ ಮತ್ತಷ್ಟು ಹದಗೆಟ್ಟಿದೆ.
ಕಾಶ್ಮೀರದ ಸ್ಥಾನಮಾನವು ಉಗ್ರವಾದವನ್ನು ಪ್ರಚೋದಿಸುತ್ತಿದೆ ಎಂದು ಪ್ರಧಾನಿ ಮೊದಿ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಬಿಜೆಪಿಯ ಕೇಂದ್ರ ಸಚಿವರು ಸಹ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು "ಐತಿಹಾಸಿಕ ಪ್ರಮಾದ" ಎಂದು ಕರೆದರೆ, ಇನ್ನು ಕೆಲವರು ಕಾಶ್ಮೀರವು "ಹಿಂದೆಂದಿಗಿಂತಲೂ" ಈಗ ಶಾಂತಿಯುತವಾಗಿದೆ ಎಂದು ಹೇಳಿದರು. ಆದರೆ ಭದ್ರತಾ ಪಡೆಗಳು ಪ್ರತಿದಾಳಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದ್ದರೂ ಈ ಪ್ರದೇಶದಲ್ಲಿ ಉಗ್ರರ ದಾಳಿ ಮುಂದುವರೆದಿದೆ.
2019ರಿಂದ, ಸರ್ಕಾರವು ಸ್ಥಳೀಯರ ಆಸ್ತಿ ಹಕ್ಕುಗಳನ್ನು ಬದಲಿಸಿದ್ದು, ಇದು ಜನರಲ್ಲಿ ವ್ಯಾಪಕ ಅನುಮಾನವನ್ನು ಹುಟ್ಟುಹಾಕಿದೆ. ಹೊಸ ಕಾನೂನುಗಳು ಭಾರತದ ಏಕೈಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶದ ಜನಸಂಖ್ಯೆಯನ್ನು ಬದಲಾಯಿಸುತ್ತದೆ ಎಂದು ಸ್ಥಳೀಯರು ಭಯಪಡುತ್ತಾರೆ. ಕಾಶ್ಮೀರವು ಭಾರತೀಯ ಆಡಳಿತದ ವಿರುದ್ಧ ಬಂಡಾಯದ ಇತಿಹಾಸವನ್ನು ಹೊಂದಿದೆ, ಮತ್ತು ಇತ್ತೀಚಿನ ರಾಜಕೀಯ ಬದಲಾವಣೆಗಳು ಈ ಕೋಪವನ್ನು ಉಲ್ಬಣಿಸಿವೆ ಎಂದು ತಜ್ಞರು ಹೇಳುತ್ತಾರೆ.
ಇನ್ನು, ಬಿಬಿಸಿಗೆ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಪ್ರಸ್ತುತ 200 ಸಕ್ರಿಯ ಉಗ್ರಗಾಮಿಗಳ ಪೈಕಿ 80 ಮಂದಿ ಪಾಕಿಸ್ತಾನದವರು ಮತ್ತು 120 ಕ್ಕೂ ಹೆಚ್ಚು ಸ್ಥಳೀಯರು ಎಂದು ಹೇಳಿದ್ದಾರೆ. ಈ ವರ್ಷ ಜನವರಿ ಮತ್ತು ಜುಲೈ ನಡುವೆ, 76 ಕಾಶ್ಮೀರಿಗಳು ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡಿದ್ದಾರೆ ಮತ್ತು ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ವರ್ಷ ಕಾಶ್ಮೀರದಲ್ಲಿ ಯಾವುದೇ ಹೊಸ ವಿದೇಶಿ ಉಗ್ರರನ್ನು ಸಕ್ರಿಯ ಉಗ್ರರ ಪಟ್ಟಿಗೆ ಸೇರಿಸಲಾಗಿಲ್ಲ. ಆದರೆ ಪ್ರತಿದಿನ ಸ್ಥಳೀಯರ ಹೆಸರುಗಳನ್ನು ಸೇರಿಸಲಾಗುತ್ತಿದೆ ಎಂದೂ ಹೇಳಿದರು.
ಶಸ್ತ್ರಾಸ್ತ್ರಗಳನ್ನು ಹಿಡಿಯುವ ಎಲ್ಲಾ ಉಗ್ರಗಾಮಿಗಳು ಕುಖ್ಯಾತ ಉಗ್ರಗಾಮಿ ಗುಂಪುಗಳಿಗೆ ಸೇರಿದವರಲ್ಲ. ಕೆಲವರು ಕಳಪೆ ಶಸ್ತ್ರಸಜ್ಜಿತರಾಗಿರುತ್ತಾರೆ ಮತ್ತು ತರಬೇತಿ ಪಡೆಯದವರು, ಆಗಾಗ್ಗೆ ಭಾರತೀಯ ಪಡೆಗಳೊಂದಿಗೆ ಗುಂಡಿನ ಕಾಳಗದಲ್ಲಿ ಸಾಯುತ್ತಾರೆ. ಈ ವರ್ಷದ ಜನವರಿಯಿಂದ, ಕಾಶ್ಮೀರದಲ್ಲಿ ನಡೆದ ಗುಂಡಿನ ಕಾಳಗದಲ್ಲಿ 90 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಬಹುತೇಕ ಎಲ್ಲರೂ ಸ್ಥಳೀಯರು, ಈ ಪೈಕಿ ಕೆಲವರು 14 ವರ್ಷ ವಯಸ್ಸಿನವರಾಗಿದ್ದಾರೆ.
ಸರ್ಕಾರದ ನೀತಿಗಳು ಅಸಮಾಧಾನಕ್ಕೆ ಕಾರಣವಾಗಿದ್ದರೂ, ಸ್ಥಳೀಯ ಉಗ್ರರ ಭಾಗವಹಿಸುವಿಕೆ ಹೆಚ್ಚುತ್ತಿದೆ. ಏಕೆಂದರೆ ಪಾಕಿಸ್ತಾನ ಕಾಶ್ಮೀರದಲ್ಲಿನ ಉಗ್ರಗಾಮಿತ್ವವು ಸ್ಥಳೀಯವಾಗಿದೆ ಎಂದು ಬಿಂಬಿಸಲು ಈಗ ಪ್ರಯತ್ನಿಸುತ್ತಿದೆ ಎಂದು ಸಾಹ್ನಿ ಹೇಳಿದರು. ಆದರೆ ಉಗ್ರಗಾಮಿಗಳ ಒಟ್ಟಾರೆ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದು ಅವರು ಹೇಳಿದರು.
ಕದನ ವಿರಾಮವನ್ನು ಫೆಬ್ರವರಿಯಲ್ಲಿ ಘೋಷಿಸಿದಾಗಿನಿಂದ ಉಲ್ಲಂಘಿಸಲಾಗಿಲ್ಲ, ಈ ಕಾರಣದಿಂದಾಗಿ "ಗಡಿಯಾಚೆಗಿನ ಒಳನುಸುಳುವಿಕೆ ಕೂಡ ತೀವ್ರವಾಗಿ ಕಡಿಮೆಯಾಗಿದೆ" ಎಂದು ಭಾರತೀಯ ಸೇನೆಯ ವಕ್ತಾರರು ಹೇಳಿದರು. ಆದರೆ ಬಶೀರ್‌ನಂತಹ ಜನರಿಗೆ ಶಾಂತಿ ಅಸ್ಪಷ್ಟವಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ನಮ್ಮ ಜೀವನದೊಂದಿಗೆ ಆಟವಾಡುತ್ತಿವೆ. ಶಾಶ್ವತ ನಿರ್ಣಯ ಇರಬೇಕು. ಇದರಿಂದ ಕಾಶ್ಮೀರಿಗಳು ಸಾಯಬಾರದು ಎಂದು ಬಶೀರ್ ಎರಡೂ ದೇಶಗಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ಬಿಬಿಸಿ ವರದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ