• Home
 • »
 • News
 • »
 • explained
 • »
 • Puri Jagannath Temple: ಇತರೇ ಧರ್ಮದವರಿಗೆ ದರ್ಶನ ನೀಡುವುದಿಲ್ಲ ಪುರಿ ಜಗನ್ನಾಥ! ವಿದೇಶಿಗರಿಗೂ ದೇಗುಲದೊಳಗೆ ಏಕಿಲ್ಲ ಪ್ರವೇಶ?

Puri Jagannath Temple: ಇತರೇ ಧರ್ಮದವರಿಗೆ ದರ್ಶನ ನೀಡುವುದಿಲ್ಲ ಪುರಿ ಜಗನ್ನಾಥ! ವಿದೇಶಿಗರಿಗೂ ದೇಗುಲದೊಳಗೆ ಏಕಿಲ್ಲ ಪ್ರವೇಶ?

ಪುರಿ ಜಗನ್ನಾಥ (ಚಿತ್ರಕೃಪೆ: Internet)

ಪುರಿ ಜಗನ್ನಾಥ (ಚಿತ್ರಕೃಪೆ: Internet)

ಜಗನ್ನಾಥನ ದೇವಾಲಯದೊಳಗೆ ಹಿಂದೂಯೇತರರ ಪ್ರವೇಶ ಅನುಮತಿ ನಿರಾಕರಣೆ ಅಂತಿಂಥದ್ದಲ್ಲ. 1984ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಪುರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಪುರಿ ಜಗನ್ನಾಥನ ದರ್ಶನ ಬಯಸಿದ್ದರು. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಕಾರಣ ಅವರು ಹಿಂದೂಯೇತರರೊಬ್ಬರನ್ನು ಮದುವೆಯಾಗಿದ್ದರು!

ಮುಂದೆ ಓದಿ ...
 • Trending Desk
 • Last Updated :
 • Odisha (Orissa), India
 • Share this:

  ಭಾರತ ಹಲವು ಬಗೆಯ ಸಂಪ್ರದಾಯ (Traditions) ಹಾಗೂ ಪ್ರಾಚೀನ ಆಚರಣೆಗಳಿರುವ ಒಂದು ವೈವಿಧ್ಯಮಯ ದೇಶವಾಗಿದೆ. ಇಲ್ಲಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಹಲವಾರು ಆಚರಣೆಗಳಿವೆ. ಬಹುಶಃ ಇಂದಿನ ಡಿಜಿಟಲ್ (Digital) ಹಾಗೂ ಆಧುನಿಕ ಯುಗಕ್ಕೆ ಕೆಲ ಸಂಪ್ರದಾಯಗಳು ಅಮೌಲ್ಯವಾಗಿರುವಂತೆ ತೋರಿದರೂ ಅವು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದ್ದು ಈಗಲೂ ಸಾಕಷ್ಟು ಜನ ಅದನ್ನು ನಂಬುತ್ತಾರೆ. ಕೆಲ ಪದ್ಧತಿಗಳು, ಪ್ರತಿಗಳು ಎಷ್ಟು ವಿಚಿತ್ರವಾಗಿವೆ ಎಂದೆನಿಸಿದರೂ ಅವು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪ್ರತಿಗಳಾಗಿವೆ. ಉದಾಹರಣೆಗೆ ಕೇರಳ (Kerala), ಕರ್ನಾಟಕ (Karnataka), ತಮಿಳುನಾಡು (Tamil Nadu) ರಾಜ್ಯಗಳ ಕೆಲವು ಪ್ರಮುಖ ದೇವಾಲಯಗಳಲ್ಲಿ (Temple) ಪುರುಷರು ಅಂಗಿಯನ್ನು ಧರಿಸಿ ದೇವರ ದರ್ಶನ ಪಡೆಯುವಂತಿಲ್ಲ. ಇನ್ನು ಕೆಲವು ದೇವಾಲಯಗಳಲ್ಲಿ ಹಿಂದೂಗಳಲ್ಲದವರು ಪ್ರವೇಶಿಸುವ ಅನುಮತಿ ನೀಡಲಾಗುವುದಿಲ್ಲ. ಇಂತಹ ದೇವಾಲಯಗಳ ಪೈಕಿ ಒಡಿಶಾದ (Odisha) ಪುರಿಯಲ್ಲಿರುವ ಜಗನ್ನಾಥನ ದೇವಾಲಯವೂ (Puri Jagannath Temple) ಒಂದಾಗಿದೆ. ಈ ದೇವಾಲಯದೊಳಗೆ ಹಿಂದೂವಲ್ಲದವರು ಅಥವಾ ವಿದೇಶಿಯರು ಪ್ರವೇಶಿಸಲು ಅನುಮತಿಯಿಲ್ಲ.


  ಪುರಿ ದೇಗುಲದಲ್ಲಿಲ್ಲ ಹಿಂದೂಯೇತರರಿಗೆ ಪ್ರವೇಶ


  ಒಡಿಶಾದ ಪುರಿ ಜಗನ್ನಾಥ ದೇವಾಲಯವು ಹಿಂದೂಗಳ ನಾಲ್ಕು ಪವಿತ್ರ ಪೀಠಗಳಲ್ಲಿ ಒಂದಾಗಿದ್ದು ಇದರೊಳಗೆ ಹಿಂದೂ ಅಲ್ಲದವರು ಅಥವಾ ವಿದೇಶಿಗರು ಪ್ರವೇಶಿಸಲು ಅನುಮತಿಯಿಲ್ಲ. ಪ್ರವೇಶಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಹಲವು ಬಾರಿ ಸಾಕಷ್ಟು ಬಿಸಿಬಿಸಿಯಾದ ಚರ್ಚೆಗಳು ನಡೆದಿವೆ ಹಾಗೂ ಗಮನಸೆಳೆದಿವೆ.- ಇದೀಗ ಒಡಿಶಾದ ರಾಜ್ಯಪಾಲರಾದ ಗಣೇಶಿ ಲಾಲ್ ಅವರು ಜಗನ್ನಾಥ ದೇವಾಲಯದೊಳಗೆ ಪ್ರವೇಶಿಸಲು ಹಿಂದುಯೇತರರು ಹಾಗೂ ವಿದೇಶಿಗರಿಗೆ ಅನುಮತಿ ನೀಡಬೇಕೆಂಬ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದು ಮತ್ತೆ ಹಳೆಯ ಬೆಂಕಿಗೆ ತುಪ್ಪ ಸುರಿದ ಹಾಗಾಗಿದೆ.


  ಒಡಿಶಾ ರಾಜ್ಯಪಾಲರು ಹೇಳಿದ್ದೇನು?


  ಭುವನೇಶ್ವರ ಉತ್ಕಲ್ ವಿವಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ರಾಜ್ಯಪಾಲರು ತಮ್ಮ ಈ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು, "ವಿದೇಶಿಯರು ಗಜಪತಿ, ಸೇವಕರು ಹಾಗೂ ಶಂಕರಾಚಾರ್ಯರನ್ನು ಭೇಟಿ ಮಾಡುತ್ತಾರೆ ಎಂದಾದಲ್ಲಿ ಅವರು ಚಕನಯನ (ಭಗವಾನ್ ಜಗನ್ನಾಥನ ಇನ್ನೊಂದು ಹೆಸರು) ಅವರನ್ನು ಸಹ ಭೇಟಿ ಮಾಡಲು ಅನುಮತಿಸಬೇಕು. ಇದು ಯಾರಿಗಾದರೂ ಇಷ್ಟವಾಗಲಿ ಅಥವಾ ಆಗದೆ ಇರಲಿ ನನ್ನ ವೈಯಕ್ತಿಕ ಅಭಿಪ್ರಾಯ ಮಾತ್ರವೇ ಆಗಿದೆ" ಎಂದು ಹೇಳಿದರು.


  ಸೇವಕರು ಹಾಗೂ ಜಗನ್ನಾಥ ಸಂಪ್ರದಾಯ ಸಂಶೋಧಕರಿಂದ ವಿರೋಧ


  ಹನ್ನೆರಡನೇ ಶತಮಾನದಿಂದ ಜಗನ್ನಾಥ ದೇಗುಲದ ಸೇವಾ ಕಾರ್ಯ ಮಾಡಿಕೊಂಡು ಬರಲಾಗುತ್ತಿರುವ ಇಂದಿನ ಪೀಳಿಗೆಯ ಸೇವಾ ಕಾರ್ಯಕರ್ತರು ಹಾಗೂ ಜಗನ್ನಾಥ ಸಂಸ್ಕೃತಿಯ ಸಂಶೋಧಕರು ರಾಜ್ಯಪಾಲರ ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿದ್ದು ಅನಾದಿ ಕಾಲದಿಂದಲೂ ದೇವಾಲಯದಲ್ಲಿ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಮುರಿಯಲು ಸಾಧ್ಯವಿಲ್ಲ ಎಂದಿದ್ದಾರೆ.


  ಪುರಿ ಜಗನ್ನಾಥ ದೇವಾಲಯ


  ಹಿಂದುಗಳ ಚಾರ್ ಧಾಮ್ ಗಳ ಪೈಕಿ ಪುರಿ ಜಗನ್ನಾಥ ದೇಗುಲವೂ ಒಂದಾಗಿದ್ದು ಅಸಂಖ್ಯಾತ ಹಿಂದು ಭಕ್ತರು ಜಗನ್ನಾಥನನ್ನು ಪೂಜಿಸುತ್ತ ಬಂದಿದ್ದಾರೆ. ಇಲ್ಲಿ ವಿಷ್ಣುವಿನ ಅವತಾರವಾದ ಜಗನ್ನಾಥನನ್ನು ಅವನ ಸಹೋದರ ಬಲಭದ್ರ ಹಾಗೂ ಸಹೋದರಿ ಸುಭದ್ರೆಯೊಂದಿಗೆ ಪೂಜಿಸಲಾಗುತ್ತದೆ.


  ಇದನ್ನೂ ಓದಿ: Brain Mapping Test: ಬೆಂಗಳೂರಿಗೆ ಬಂತು ಬ್ರೇನ್ ಮ್ಯಾಪಿಂಗ್ ಟೆಸ್ಟ್! ಅಪರಾಧಿಗಳಿಗೆ ಸಿಂಹಸ್ವಪ್ನವೇ ಈ ಹೊಸ ತಂತ್ರಜ್ಞಾನ?


  ಇಲ್ಲಿನ ದೇವಾಲಯದ ಗರ್ಭಗುಡಿಯಲ್ಲಿರುವ ಭಗವಾನ್ ಜಗನ್ನಾಥನ ಸಹೋದರ ಸಹೋದರಿಯರ ಮೂರ್ತಿಗಳನ್ನು ದರ್ಶಿಸಿ ಅವರಿಗೆ ಪ್ರಾರ್ಥನೆ ಸಲ್ಲಿಸಲು ಕೇವಲ ಹಿಂದುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇಲ್ಲಿರುವ ಪ್ರವೇಶ ದ್ವಾರದಲ್ಲಿ ದೊಡ್ಡದಾಗಿ ಹಾಗೂ ಸ್ಪಷ್ಟವಾಗಿ "ಹಿಂದುಗಳಿಗೆ ಮಾತ್ರ ಪ್ರವೇಶ" ಎಂದು ಬರೆಯಲಾಗಿರುವುದನ್ನು ಕಾಣಬಹುದು.


  ಹಿಂದುಯೇತರರಿಗೆ ಪ್ರವೇಶ ಏಕಿಲ್ಲ?


  ಈ ಪ್ರತಿಯು ಶತಮಾನಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ನಿರ್ಬಂಧ ಯಾಕಾಗಿ ಎಂಬುದರ ಬಗ್ಗೆ ಯಾವ ದಾಖಲೆಗಳಿಲ್ಲದಿದ್ದರೂ ಕೆಲವು ಇತಿಹಾಸ ತಜ್ಞರ ಪ್ರಕಾರ ದೇವರನ್ನು ಆಕ್ರಮಣಗಳಿಂದ ಕಾಪಾಡುವ ಕ್ರಮ ಇದಾಗಿರಬಹುದೆಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಏಕೆಂದರೆ ಹಿಂದೆ ಭಾರತ ಆಕ್ರಮಿಸಿದ್ದ ಮುಸ್ಲಿಮ್ ದೊರೆಗಳು ಇಲ್ಲಿನ ಅನೇಕ ದೇವಾಲಯಗಳನ್ನು ನಾಶಪಡಿಸಿದ್ದರು. ಹಾಗಾಗಿ ಅವರಿಂದ ದೇವರ ಪ್ರತಿಮೆಗಳನ್ನು ರಕ್ಷಿಸುವ ಕುರಿತಂತೆ ದೇವಾಲಯದ ಭಕ್ತರು ಈ ಕ್ರಮಗಳನ್ನು ರೂಢಿಸಿಕೊಂಡಿರಬಹುದು ಎನ್ನಲಾಗುತ್ತದೆ. ಇನ್ನು ಕೆಲವರ ಪ್ರಕಾರ ಈ ದೇವಾಲಯ ನಿರ್ಮಾಣವಾದಾಗಿನಿಂದಲೂ ಈ ಪ್ರತಿಯನ್ನು ಪಾಲಿಸಿಕೊಂಡು ಬರಲಾಗುತ್ತಿದೆ ಎಂದಾಗಿದೆ.


  ಪತಿತಬಾಪನ ದರ್ಶನ


  ಪತಿತಬಾಪನ ಎಂಬುದು ಜಗನ್ನಾಥನ ಇನ್ನೊಂದು ಹೆಸರಾಗಿದ್ದು ಈ ಹೆಸರು ಸೂಕ್ಷ್ಮವಾಗಿ "ತುಳಿತಕ್ಕೊಳಗಾದವರ ದೈವ" ಎಂದಾಗುತ್ತದೆ. ಅಂದರೆ ಧರ್ಮದ ಹಲವು ಕಾರಣಗಳಿಂದಾಗಿ ಭಗವಂತನ ದರ್ಸುಶನ ಪಡೆಯಲಾಗದವರಿಗೆ ಜಗನ್ನಾಥ ವಿಶೇಷವಾಗಿ ಪತಿತಬಾಪನ ರೂಪದಲ್ಲಿ ಅವರಿಗೆ ದರ್ಶನ ನೀಡುತ್ತಾನೆ ಎನ್ನಲಾಗುತ್ತದೆ. ಜಗನ್ನಾಥ ದೇಗುಲ ಲಯನ್ಸ್ ದ್ವಾರದ ಬಳಿ ಈ ರೂಪದ ದರ್ಶನವನ್ನು ಪಡೆಯಬಹುದೆಂದಾಗಿದೆ.


  ವಿಶ್ವವಿಖ್ಯಾತ ರಥೋತ್ಸವ


  ಇನ್ನು ಜೂನ್-ಜುಲೈ ಸಂದರ್ಭದಲ್ಲಿ ಪುರಿ ಜಗನ್ನಾಥನ ದೊಡ್ಡದಾದ ಒಂಭತ್ತು ದಿನಗಳ ಉತ್ಸವ ಪ್ರತಿ ವರ್ಷ ಜರುಗುತ್ತದೆ. ಆ ಸಂದರ್ಭದಲ್ಲಿ ಜಗನ್ನಾಥನು ತನ್ನ ಸಹೋದರ ಸಹೋದರಿ ಜೊತೆಗೂಡಿ ಮಾಡಲಾಗುವ ರಥ ಮೆರವಣಿಗೆಯು ಬಡಾ ದಂಡಾ ಅಂದರೆ ಗ್ರ್ಯಾಂಡ್ ರಸ್ತೆಯಲ್ಲಿ ಜರುಗುತ್ತದೆ. ಈ ಸಂದರ್ಭದಲ್ಲಿ ಹಿಂದುಯೇತರರೂ ಸಹ ಜಗನ್ನಾಥ ಹಾಗೂ ಅವನ ಸಹೋದರ ಸಹೋದರಿಯರ ದರ್ಶನವನ್ನು ಕಣ್ತುಂಬಿಕೊಳ್ಳಬಹುದು ಎಂದಾಗಿದೆ. ಈ ಸಂದರ್ಭದಲ್ಲಿ ಮೂಲ ಮೂರ್ತಿಗಳನ್ನು ಅವರು ಜನ್ಮಸ್ಥಳವಾದ ಗುಂಡಿಚಾ ದೇವಾಲಯಕ್ಕೆ ಕರೆದೊಯ್ಯುತ್ತಾರೆ. ಜಗತ್ತಿನ ಮೂಲೆಮೂಲೆಗಳಿಂದ ಸಾವಿರಾರು ಭಕ್ತರು ಈ ಸಂದರ್ಭದಲ್ಲಿ ಜಗನ್ನಾಥನ ದರ್ಶನಕ್ಕೆಂದು ಪುರಿ ನಗರದಲ್ಲಿ ಜಮಾಯಿಸಿರುತ್ತಾರೆ.


  ಹಿಂದಿನ ವಿವಾದಗಳು


  ಜಗನ್ನಾಥನ ದೇವಾಲಯದೊಳಗೆ ಹಿಂದುಯೇತರರ ಪ್ರವೇಶ ಅನುಮತಿ ನಿರಾಕರಣೆ ಅಂತಿಂಥದ್ದಲ್ಲ. ಇದನ್ನು ಕಠಿಣವಾಗಿ ಹಿಂದಿನಿಂದಲೂ ಪಾಲಿಸಿಕೊಂಡು ಬರಲಾಗುತ್ತಿದೆ. 1984ರಲ್ಲಿ ಅಂದಿನ ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಅವರು ಪುರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಪುರಿ ಜಗನ್ನಾಥನ ದರ್ಶನ ಬಯಸಿದ್ದರು. ಆದರೆ, ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಕಾರಣ ಅವರು ಹಿಂದೂಯೇತರರೊಬ್ಬರನ್ನು ಮದುವೆಯಾಗಿದ್ದರು. ಹಾಗಾಗಿ ಅವರು ಮಂದಿರದ ಬಳಿಯಲ್ಲೇ ಇದ್ದ ರಘುನಂದನ ಗ್ರಂಥಾಲಯಕ್ಕೆ ತೆರಳಿ ಅಲ್ಲಿಂದ ಪ್ರಾರ್ಥನೆ ಸಲ್ಲಿಸಿದ್ದರು. ಇದು ಸಾಕಷ್ಟು ವಿವಾದವನ್ನೂ ಉಂಟು ಮಾಡಿತ್ತು.


  ಥೈಲ್ಯಾಂಡ್ ರಾಜಕುಮಾರಿಗೂ ನೀಡಿರಲಿಲ್ಲ ಪ್ರವೇಶ


  ಇನ್ನು ನವೆಂಬರ್ 2005 ರಲ್ಲಿ ಥೈಲ್ಯಾಂಡಿನ ರಾಜಕುಮಾರಿ ಮಹಾ ಚಕ್ರಿ ಸ್ರಿನಿಧಾರ್ನ್ ಪ್ರಥಮ ಬಾರಿಗೆ ಒಡಿಶಾ ಪ್ರಾಂತ್ಯಕ್ಕೆ ಭೇಟಿ ನೀಡಿದ್ದರು. ವಿದೇಶಿಗರು ದೇವಾಲಯದೊಳಗೆ ಪ್ರವೇಶಿಸಲು ಅನುಮತಿ ಇಲ್ಲದ ಕಾರಣ ಅವರು ದೇವಾಲಯವನ್ನು ಹತ್ತಿರದಿಂದಷ್ಟೇ ನೋಡಿದ್ದರು. ಇನ್ನೊಂದು ಆಸಕ್ತಿಕರ ಪ್ರಸಂಗವೊಂದರಲ್ಲಿ ಸ್ವಿಸ್ ಪ್ರಜೆಯಾದ ಎಲಿಜಬೆತ್ ಜಿಗ್ಲರ್ ಅವರು ಜಗನ್ನಾಥ ದೇಗುಲಕ್ಕೆ 1.78 ಕೋಟಿ ರೂಪಾಯಿಯ ದೇಣಿಗೆಯನ್ನು ನೀಡಿದ್ದರು. ಇಷ್ಟೊಂದು ದೇಣಿಗೆ ನೀಡಿದ ನಂತರವೂ ಅವರು ಕ್ರೈಸ್ತ ಧರ್ಮದವರಾಗಿದ್ದರಿಂದ ಅವರಿಗೆ ದೇವಾಲಯದೊಳಗೆ ಪ್ರವೇಶದ ಅನುಮತಿಯನ್ನು ನಿರಾಕರಿಸಲಾಯಿತು.
  ಈ ಹಿಂದೆಯೂ ದೊಡ್ಡ ವಿವಾದ


  2011 ರಲ್ಲಿ ಒಡಿಶಾದಲ್ಲಿ ನವೀನ್ ಪಟ್ನಾಯಕ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರ ಮುಖ್ಯ ಸಲಹೆಗಾರರಾಗಿದ್ದ ಪ್ಯಾರಿ ಮೋಹನ್ ಮೋಹಾಪಾತ್ರ ಅವರು ರಾಜ್ಯದ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಂಬಂಧ ಜಗನ್ನಾಥ ದೇವಾಲಯದೊಳಗೆ ಹಿಂದುಯೇತರರ ಪ್ರವೇಶ ಅನುಮತಿ ನಿಡುವ ಬಗ್ಗೆ ಪ್ರಸ್ತಾಪವನ್ನು ಮಾಡಿದ್ದರು. ಇದು ದೊಡ್ಡ ಪ್ರಮಾಣದ ವಿವಾದವನ್ನೇ ಉಂಟು ಮಾಡಿತ್ತು. ತದನಂತರ ಮೋಹಾಪಾತ್ರ ಅವರು ತಮ್ಮ ಪ್ರಸ್ತಾವನೆಯನ್ನು ಹಿಂತೆಗೆದುಕೊಳ್ಳಬೇಕಾಯಿತು.


  ಇದನ್ನೂ ಓದಿ: One Nation, One Uniform: ಏನಿದು 'ಒಂದು ದೇಶ, ಒಂದೇ ಸಮವಸ್ತ್ರ'? ಬದಲಾಗುತ್ತಾ ಕರ್ನಾಟಕ ಪೊಲೀಸರ ಖಾಕಿ ಯೂನಿಫಾರ್ಮ್?


  ಒಟ್ಟಿನಲ್ಲಿ ಜಗನ್ನಾಥ ದೇವಾಲಯದ ಪ್ರವೇಶಕ್ಕೆ ಸಂಬಂಧಿಸಿದಂತೆ ಒಡಿಶಾದ ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಬಹು ಸಮಯದಿಂದ ಶಾಂತಗೊಂಡಿದ್ದಂತಹ ವಿವಾದಕ್ಕೆ ನೀರುಣಿಸಿದಂತಾಗಿದೆ. ಮತ್ತೆ ಈ ಬಗ್ಗೆ ಬಿಸಿ ಬಿಸಿ ಚರ್ಚೆಗಳು ಸಾಮಾಜಿಕ ಮಧ್ಯಮಗಳಲ್ಲಾಗಲಿ ಅಥವಾ ಟಿವಿ ಡಿಬೇಟುಗಳಲ್ಲಾಗಲಿ ಪ್ರಾರಂಭವಾದರೆ ಅಚ್ಚರಿ ಪಡಬೇಕಾಗಿಲ್ಲ.


  ಆದರೆ, ಯಾವುದೇ ಆಗಲಿ ದೊಡ್ಡ ಪ್ರಮಾಣದಲ್ಲಿ ವಿವಾದ ಉಂಟಾಗಿ ಮತ್ತೆ ಗಲಭೆ, ಹಿಂಸಾತ್ಮಕ ಕೃತ್ಯಗಳಂತಹ ವಿಧ್ವಂಸಕಕಾರಿ ಘಟನೆಗಳು ನಡೆಯದೆ ಈ ಚರ್ಚೆ ದೊಡ್ಡದಾಗದೆ ಜನರ ಬದುಕಿನಲ್ಲಿ ಶಾಂತಿ ನೆಲೆಸಿರಲಿ ಎಂದಷ್ಟೇ ಆಶಿಸಬಹುದಾಗಿದೆ.

  Published by:Annappa Achari
  First published: