Explained: ದೆಹಲಿಯಲ್ಲಿ ಮತ್ತೊಮ್ಮೆ ರೈತರು ಪ್ರತಿಭಟನೆ ನಡೆಸುತ್ತಿರುವುದೇಕೆ? ಈ ಬಾರಿ ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳೇನು?

ಜಂತರ್ ಮಂತರ್‌ನಲ್ಲಿ ರೈತ ಸಮುದಾಯವು ಕಿಸಾನ್ ಮಹಾಪಂಚಾಯತ್ ಅನ್ನು (Kisan Mahapanchayat) ಆಯೋಜಿಸಿದ್ದು ಈ ಸಲುವಾಗಿ ದಿಲ್ಲಿಗರು ಹೆಚ್ಚಿನ ವಾಹನ ದಟ್ಟಣೆ ಸಮಸ್ಯೆಯನ್ನು ಅನುಭವಿಸಬೇಕಾಗಿದೆ. ಸಿಂಘು ಗಡಿಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿರುವುದರಿಂದ ವಾಹನಗಳು (Vehicle) ನಿಧಾನವಾಗಿ ಮುಂದುವರಿಯುತ್ತಿವೆ, ಮಹಾಪಂಚಾಯತ್ ಅಂಗವಾಗಿ ಪೊಲೀಸರು (Police) ಕಟ್ಟುನಿಟ್ಟಿನ ನಿರ್ಬಂಧವನ್ನುಂಟು ಮಾಡಿದ್ದು ಪ್ರಯಾಣಿಕರು ಗಾಜಿಪುರ ಗಡಿಯಲ್ಲಿ (Ghazipur border) ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ.

ದೆಹಲಿಯಲ್ಲಿ ರೈತರ ಪ್ರತಿಭಟನೆ

ದೆಹಲಿಯಲ್ಲಿ ರೈತರ ಪ್ರತಿಭಟನೆ

 • Share this:
ಜಂತರ್ ಮಂತರ್‌ನಲ್ಲಿ ರೈತ ಸಮುದಾಯವು ಕಿಸಾನ್ ಮಹಾಪಂಚಾಯತ್ ಅನ್ನು (Kisan Mahapanchayat) ಆಯೋಜಿಸಿದ್ದು ಈ ಸಲುವಾಗಿ ದಿಲ್ಲಿಗರು ಹೆಚ್ಚಿನ ವಾಹನ ದಟ್ಟಣೆ ಸಮಸ್ಯೆಯನ್ನು ಅನುಭವಿಸಬೇಕಾಗಿದೆ. ಸಿಂಘು ಗಡಿಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿರುವುದರಿಂದ ವಾಹನಗಳು (Vehicle) ನಿಧಾನವಾಗಿ ಮುಂದುವರಿಯುತ್ತಿವೆ, ಮಹಾಪಂಚಾಯತ್ ಅಂಗವಾಗಿ ಪೊಲೀಸರು (Police) ಕಟ್ಟುನಿಟ್ಟಿನ ನಿರ್ಬಂಧವನ್ನುಂಟು ಮಾಡಿದ್ದು ಪ್ರಯಾಣಿಕರು ಗಾಜಿಪುರ ಗಡಿಯಲ್ಲಿ (Ghazipur border) ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಮಹಾಪಂಚಾಯತ್‌ನಿಂದ ಟಾಲ್‌ಸ್ಟಾಯ್ ಮಾರ್ಗ, ಸಂಸದ್ ಮಾರ್ಗ, ಜನಪಥ್ ರಸ್ತೆ, ಅಶೋಕ ರಸ್ತೆ, ಔಟರ್ ಸರ್ಕಲ್ ಕನ್ನಾಟ್ ಪ್ಲೇಸ್, ಬಾಬಾ ಖರಕ್ ಸಿಂಗ್ ಮಾರ್ಗ ಮತ್ತು ಪಂಡಿತ್ ಪಂತ್ ಮಾರ್ಗವನ್ನು ಸವಾರರು ಬಳಸಿಕೊಳ್ಳದಂತೆ ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.

ಈ ಮಹಾಪಂಚಾಯತ್ ಯಾವುದರ ಕುರಿತಾಗಿದೆ? ದೆಹಲಿಯಲ್ಲಿ ರೈತರು ಈ ಸಭೆಯನ್ನು ಏಕೆ ಕರೆದಿದ್ದಾರೆ ಹಾಗೂ ಮತ್ತು 2020-2021ರಲ್ಲಿ ನಡೆದ ರೈತ ಪ್ರತಿಭಟನೆಯಂತಹ ಪರಿಸ್ಥಿತಿ ದೇಶ ಮತ್ತೊಮ್ಮೆ ಕಾಣಲಿದೆಯೇ?

ಮಹಾಪಂಚಾಯತ್ ಏಕೆ ಆಯೋಜಿಸಲಾಗಿದೆ?
ಸಂಯುಕ್ತ ಕಿಸಾನ್ ಮೋರ್ಚಾ (SKM) ಹಾಗೂ ಇತರ ರೈತ ಸಂಘಟನೆಗಳು ಮಹಾಪಂಚಾಯತ್ ಅನ್ನು ಆಯೋಜಿಸಿದ್ದು ವಿವಿಧ ರಾಜ್ಯಗಳಿಂದ ನೂರಾರು ರೈತರು ದೆಹಲಿಗೆ ಆಗಮಿಸಿದ್ದಾರೆ. ರೈತರು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ 2022 ರ ರದ್ದತಿಯ ಬೇಡಿಕೆಯನ್ನು ಸರಕಾರದ ಮುಂದೆ ಪುನಃ ಇರಿಸುವ ಒಂದು ದಿನದ ಕಾರ್ಯಕ್ರಮ ಇದಾಗಿದೆ ಎಂದು ಎಸ್‌ಕೆಎಂ ಸದಸ್ಯ ಮತ್ತು ಮಹಾಪಂಚಾಯತ್‌ನ ಸಂಘಟಕ ಅಭಿಮನ್ಯು ಸಿಂಗ್ ಕೊಹರ್ ತಿಳಿಸಿದ್ದಾರೆ.

ರೈತರಿಗೆ ಕೇಂದ್ರವು ಬರಿಯ ಆಶ್ವಾಸನೆಗಳನ್ನು ಮಾತ್ರವೇ ನೀಡಿದ್ದು ಕಾರ್ಯರೂಪಕ್ಕೆ ತರುವ ಯಾವುದೇ ಕ್ರಮಗಳನ್ನು ಮಾಡುತ್ತಿಲ್ಲ, ಹೀಗಾಗಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂಬುದಾಗಿ ಅಭಿಮನ್ಯು ತಿಳಿಸಿದ್ದು ಮಹಾಪಂಚಾಯತ್‌ನಲ್ಲಿ ನಾವು ಇನ್ನೊಮ್ಮೆ ಚರ್ಚಿಸಲು ಹಾಗೂ ಬೇಡಿಕೆಗಳನ್ನು ಪುನರುಚ್ಛರಿಸಲು ಸೇರಿದ್ದೇವೆ ಎಂಬುದಾಗಿ ತಿಳಿಸಿದ್ದಾರೆ. ಮಹಾಪಂಚಾಯತ್ ಅನ್ನು ಆಯೋಜಿಸಿರುವುದಕ್ಕೆ ಇನ್ನೊಂದು ಕಾರಣವೆಂದರೆ ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯ ಬಗ್ಗೆ ಚರ್ಚಿಸುವುದಾಗಿದೆ.

ಇದನ್ನೂ ಓದಿ: Europe Drought: ಯುರೋಪ್​ನಲ್ಲಿ ಭೀಕರ ಬರಕ್ಕೆ, ಬಿಸಿಲಿನ ಹೊಡೆತಕ್ಕೆ ಜನ ತತ್ತರ!

ಕಳೆದ ವಾರ, 2021ರ ಹಿಂಸಾಚಾರ ಪ್ರಕರಣದಲ್ಲಿ "ನ್ಯಾಯ ಕೋರಿ" ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ SKM ಪ್ರದರ್ಶನವನ್ನು ಸಹ ಆಯೋಜಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಖಿಂಪುರ ಖೇರಿಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಎಂಬಾತ ಪ್ರತಿಭಟನಾ ಮೆರವಣಿಯಲ್ಲಿದ್ದ ನಾಲ್ವರು ರೈತರು ಸೇರಿದಂತೆ ಎಂಟು ಜನರ ಮೇಲೆ ತನ್ನ ಎಸ್‌ಯುವಿ ಚಲಾಯಿಸಿ ಹತ್ಯೆಗೆ ಕಾರಣನಾಗಿದ್ದ.

ಬಿಗಿಗೊಂಡ ಭದ್ರತೆ:
ಹಿಂಸಾಚಾರದ ಭೀತಿಯಿಂದ ಅಧಿಕಾರಿಗಳಿಗೆ ಹೆಚ್ಚುವರಿ ಎಚ್ಚರಿಕೆಯಿಂದಿರುವಂತೆ ತಿಳಿಸಲಾಗಿದೆ. ವಿಸ್ತಾರ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸಲಾಗಿದೆ. ಜಂತರ್ ಮಂತರ್ ಮತ್ತು ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ, ಅಧಿಕಾರಿಗಳು ಗಡಿ ಪ್ರದೇಶಗಳ ಸುತ್ತಲೂ ಹಲವಾರು ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ವ್ಯವಸ್ಥೆಗಳನ್ನು ಮಾಡಿರುವುದಾಗಿ ಮತ್ತು ಯಾವುದೇ ಪ್ರಾಣ ಮತ್ತು ಆಸ್ತಿಗೆ ಹಾನಿಯಾಗುವುದಿಲ್ಲವೆಂದು ವಿಶೇಷ ಪೊಲೀಸ್ ಕಮಿಷನರ್ (ಕಾನೂನು ಮತ್ತು ಸುವ್ಯವಸ್ಥೆ) ದೇವೇಂದ್ರ ಪಾಠಕ್ ಆಶ್ವಾಸನೆ ನೀಡಿದ್ದಾರೆ. ಮೆಟ್ರೋದಲ್ಲಿಯೂ ಹೆಚ್ಚುವರಿ ಸುರಕ್ಷತೆಯನ್ನು ಏರ್ಪಡಿಸಲಾಗಿದ್ದು ಪೊಲೀಸರನ್ನು ನಿಯೋಜಿಸಲಾಗಿದೆ.

ರೈತ ನಾಯಕನ ಬಂಧನ:
ಭಾನುವಾರ, ರೈತ ನಾಯಕ ರಾಕೇಶ್ ಟಿಕಾಯತ್ ಅವರು ರಾಜಧಾನಿಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಗಾಜಿಪುರ ಗಡಿಯಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಕೇಂದ್ರದ ಸೂಚನೆಯ ಅನ್ವಯ ದೆಹಲಿ ಪೊಲೀಸರು ಕೆಲಸ ಮಾಡುತ್ತಿದ್ದು ನಿರುದ್ಯೋಗಿ ಯುವಕರನ್ನು ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:  Hussaini Brahmins: ಹುಸೇನಿ ಬ್ರಾಹ್ಮಣರು ಯಾರು? ಇವರು ಹಿಂದೂಗಳಾ, ಮುಸ್ಲಿಮರಾ? ಇಲ್ಲಿದೆ ಆಸಕ್ತಿಕರ ಮಾಹಿತಿ

ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ವಕ್ತಾರ ಮತ್ತು ಎಸ್‌ಕೆಎಂನ ಪ್ರಮುಖ ಮುಖ ಟಿಕಾಯತ್ ಅವರನ್ನು ಮಧ್ಯಾಹ್ನದ ಸುಮಾರಿಗೆ ಗಡಿಯಲ್ಲಿ ನಿಲ್ಲಿಸಲಾಯಿತು ಎಂದು ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ನಂತರ ಆತನನ್ನು ಬಂಧಿಸಿ ಮಧು ವಿಹಾರ್ ಠಾಣೆಗೆ ಕರೆದೊಯ್ದ ಪೊಲೀಸರು ವಾಪಸ್ ಹೊರಡುವಂತೆ ಮನವಿ ಮಾಡಿದರು ಎಂದು ವಿಶೇಷ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ದೇಪೇಂದ್ರ ಪಾಠಕ್ ತಿಳಿಸಿದ್ದಾರೆ.

‘ಕೊನೆಯ ಉಸಿರು ಇರುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ಬಂಧನಕ್ಕೊಳಗಾಗಿದ್ದ ರೈತ ನಾಯಕ ಟ್ವೀಟ್ ಮಾಡಿದ್ದಾರೆ.

ಇತರ ಎಸ್‌ಕೆಎಮ್ ನಾಯಕರನ್ನು ಜಂತರ್ ಮಂತರ್‌ಗೆ ಆಗಮಿಸಲು ಅವಕಾಶ ನೀಡದೇ ಬೇರೆ ಬೇರೆ ಕಡೆಗಳಲ್ಲಿ ನಿಲ್ಲಿಸಲಾಗಿದೆ ಎಂಬುದಾಗಿ ಆರೋಪಿಸಲಾಗಿದ್ದು ಪೊಲೀಸರು ಆರೋಪಗಳನ್ನು ತಿರಸ್ಕರಿಸಿದ್ದಾರೆ.

2020 ರ ಘಟನೆಯ ಸುತ್ತ
ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ತಮಿಳುನಾಡು ರೈತರು ಜಂತರ್ ಮಂತರ್‌ನಲ್ಲಿ ಜಮಾಯಿಸಿದ್ದು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಅವರು 2020 ರಲ್ಲಿ ಮಾಡಿದಂತೆ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಸ್‌ಕೆಎಂ ನಾಯಕ ಬಲದೇವ್ ಸಿಂಗ್ ಸಿರ್ಸಾ ಹೇಳಿದ್ದಾರೆ. ಪ್ರತಿಭಟನೆಯ ಮೂಲಕವೇ ನಮ್ಮ ಬೇಡಿಕೆಗಳನ್ನು ಈಡೇರಿಸಲಾಗುತ್ತದೆ. ಸರಕಾರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂಬುದಾಗಿ ಬಲದೇವ್ ತಿಳಿಸಿದ್ದಾರೆ.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ಸಾವಿರಾರು ರೈತರು ನವೆಂಬರ್ 2020 ರಿಂದ ದೆಹಲಿಯ ಸುತ್ತಲಿನ ಗಡಿಗಳಲ್ಲಿ ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿದ್ದರು.

ಬಾಯಿ ಮಾತಾಗಿರುವ ಆಶ್ವಾಸನೆಗಳು
ನವೆಂಬರ್ 2021 ರಲ್ಲಿ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ, ಎಂಎಸ್‌ಪಿಯನ್ನು ಜಾರಿಗೆ ತರಲು ಸಮಿತಿಯನ್ನು ರಚಿಸಲಾಗುವುದು ಮತ್ತು ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ತಿಳಿಸಲಾಗಿತ್ತು ಆದರೆ ಇದರಲ್ಲಿ ಯಾವುದನ್ನೂ ಇದುವರೆಗೆ ಕಾರ್ಯರೂಪಕ್ಕೆ ತಂದಿಲ್ಲ ಎಂಬುದು ಬಲದೇವ್ ಸಿಂಗ್ ಆರೋಪವಾಗಿದೆ.

ಇದನ್ನೂ ಓದಿ: Raja Singh: ಪ್ರವಾದಿ ಕುರಿತು ಅವಹೇಳನ ಮಾಡಿ ಅರೆಸ್ಟ್ ಆದ ರಾಜಾ ಸಿಂಗ್ ಯಾರು? ವಿವಾದಿತ ನಾಯಕನ ಹಿನ್ನೆಲೆ ಏನು?

SKM ಕಿಸಾನ್ ಮಹಾಪಂಚಾಯತ್‌ನ ಒಂಬತ್ತು ಬೇಡಿಕೆಗಳನ್ನು ಸಹ ಪಟ್ಟಿ ಮಾಡಿದೆ ಅವು ಯಾವುವು ಎಂಬುದರ ವಿವರ ಇಲ್ಲಿದೆ:

 • ಲಖೀಂಪುರ ಖೇರಿ ಹತ್ಯಾಕಾಂಡ
  ಲಖೀಂಪುರ ಖೇರಿ "ಹತ್ಯಾಕಾಂಡ"ದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ರೈತರ ಕುಟುಂಬಗಳಿಗೆ ನ್ಯಾಯ ಮತ್ತು ಕಳೆದ ಒಂಬತ್ತು ತಿಂಗಳಿನಿಂದ ಜೈಲಿನಲ್ಲಿರುವ ರೈತರ ಬಿಡುಗಡೆ. "ಹತ್ಯಾಕಾಂಡದ ಪ್ರಮುಖ ಅಪರಾಧಿ" ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಬಂಧನ.

 • ಬೆಂಬಲ ಬೆಲೆ ಖಾತ್ರಿಪಡಿಸುವಿಕೆ
  ಸ್ವಾಮಿನಾಥನ್ ಆಯೋಗದ ವರದಿಯ ಪ್ರಕಾರ MSP ಅನ್ನು ಖಾತರಿಪಡಿಸಬೇಕು ಮತ್ತು MSP ಯನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕೆಂದು ಭರವಸೆ ನೀಡಬೇಕು.

 • ದೇಶದ ರೈತರನ್ನು ಋಣಮುಕ್ತಗೊಳಿಸುವುದು
  ದೇಶದ ಎಲ್ಲ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು.

 • ವಿದ್ಯುತ್ ತಿದ್ದುಪಡಿ ಮಸೂದೆ ರದ್ದುಗೊಳಿಸುವಿಕೆ
  ವಿದ್ಯುತ್ ತಿದ್ದುಪಡಿ ಮಸೂದೆ 2022 ರದ್ದಾಗಬೇಕು.

 • ಕಬ್ಬಿನ ಬೆಂಬಲ ಬೆಲೆ ಹೆಚ್ಚಳ
  ಕಬ್ಬಿನ ಬೆಂಬಲ ಬೆಲೆಯನ್ನು ಹೆಚ್ಚಿಸಬೇಕು ಮತ್ತು ಕಬ್ಬಿನ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು.

 • ಮುಕ್ತ ಒಪ್ಪಂದ ವ್ಯಾಪಾರ ರದ್ದು
  ಭಾರತವು WTO (ವಿಶ್ವ ವ್ಯಾಪಾರ ಸಂಸ್ಥೆ) ದಿಂದ ಹೊರಬರಬೇಕು ಮತ್ತು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು.

 • ಚಳವಳಿ ಸಂದರ್ಭದ ಪ್ರಕರಣಗಳ ಹಿಂಪಡೆಯುವಿಕೆ:
  ರೈತರ ಚಳವಳಿ ಸಂದರ್ಭದಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಹಿಂಪಡೆಯಬೇಕು.

 • ರೈತರ ಬಾಕಿ ಪರಿಹಾರ ಧನದ ಬಿಡುಗಡೆ
  ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರ ಬಾಕಿ ಪರಿಹಾರ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಹಾಗೂ ಅಗ್ನಿಪಥ ಯೋಜನೆ ಹಿಂಪಡೆಯಬೇಕು.

Published by:Ashwini Prabhu
First published: