• Home
  • »
  • News
  • »
  • explained
  • »
  • Explained: ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲವೇ? ಏನು ಈ ಹೊಸ ವಿವಾದ?

Explained: ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲವೇ? ಏನು ಈ ಹೊಸ ವಿವಾದ?

ರಾಜ ರಾಜ ಚೋಳ ಪ್ರತಿಮೆ

ರಾಜ ರಾಜ ಚೋಳ ಪ್ರತಿಮೆ

ಚೋಳ ರಾಜವಂಶ ಕಾಲದ ಕಥೆ ಹೊಂದಿರುವ ಪೊನ್ನಿಯಿನ್ ಸೆಲ್ವನ್ I ಚಿತ್ರ ಬಿಡುಗಡೆ ಬಳಿಕ ಈ ವಿವಾದ ಎದ್ದಿದೆ. ರಾಜ ರಾಜ ಚೋಳನ ವಿಚಾರದಲ್ಲಿ ಭುಗಿಲೆದ್ದಿರುವ ಈ ವಿವಾದ ಇನ್ನೆತ್ತ ಕೊಂಡೊಯ್ಯುತ್ತದೋ ಕಾದು ನೋಡಬೇಕಿದೆ.

  • Share this:

ಸದ್ಯ ದಕ್ಷಿಣ ಭಾರತದಾದ್ಯಂತ ಅಧಿಕಾರ ಹೊಂದಿದ್ದ ಮತ್ತು ಸರ್ವೋಚ್ಚ ಆಳ್ವಿಕೆ ನಡೆಸಿದ ಅಪ್ರತಿಮ ರಾಜ, ರಾಜ ರಾಜ ಚೋಳನ ಧಾರ್ಮಿಕ ಗುರುತಿನ ಸುತ್ತ ವಿವಾದ ಸುತ್ತಿಕೊಂಡಿದೆ. ಮಣಿರತ್ನಂ ಅವರ (Mani Ratnam) ಬಹುತಾರಾಗಣದ ಪೊನ್ನಿಯಿನ್ ಸೆಲ್ವನ್ I ಚಲನಚಿತ್ರ (Ponniyin Selvan 1) ಬಿಡುಗಡೆಯ ಬಳಿಕ ಹುಟ್ಟಿಕೊಂಡ ವಿವಾದ ಈಗ ದೊಡ್ಡದಾಗಿದೆ. ಅಷ್ಟಕ್ಕೂ ಈ ರಾಜ ರಾಜ ಚೋಳ (Raja Raja Chola) ಯಾರು? ಅವನೆಂಥ ವೀರ? ಯಾಕೆ ಈ ವಿವಾದ ಹುಟ್ಟಿಕೊಂಡಿತು ಅನ್ನೋದನ್ನು ನೋಡೋಣ. ಚೋಳ ವಂಶಸ್ಥರ ರಾಜ ರಾಜ ಚೋಳ ದಕ್ಷಿಣ ಭಾರತದ ಅಪ್ರತಿಮ ರಾಜ. 985 CE -1014 CE ಅವಧಿಯಲ್ಲಿ ಈ ರಾಜ ರಾಜ್ಯವನ್ನು ವಿಸ್ತರಿಸಲು ಯುದ್ಧಗಳನ್ನು ಮಾಡುತ್ತಾ ಹೋಗುತ್ತಾನೆ. ಪಾಂಡ್ಯ ಮತ್ತು ಚೇರ ದೇಶಗಳನ್ನು ಆತ ಗೆಲ್ಲುತ್ತಾನೆ.


ಯಾರು ಈ ರಾಜ ರಾಜ ಚೋಳ?
ಹಾಗೆಯೇ ಸಾಗಿದ ರಾಜ ರಾಜ ಚೋಳನ ವಿಜಯ ಯಾತ್ರೆ ಶ್ರೀಲಂಕಾದ ಉತ್ತರ ಭಾಗಗಳು, ಲಕ್ಷದ್ವೀಪ, ತಿಲದುನ್ಮಡುಲು ಹವಳ ಮತ್ತು ಮಾಲ್ಡೀವ್ಸ್‌ನ ಕೆಲವು ಪ್ರದೇಶಗಳಲ್ಲೂ ಸಾಗುತ್ತದೆ. ಇಷ್ಟಲ್ಲದೇ ಅವರು ಕಂದಲೂರ್ ಸಲೈ (ಕೇರಳ) ನಲ್ಲಿಯೂ ವಿಜಯಶಾಲಿಯಾಗುತ್ತಾರೆ. ರಾಜ ರಾಜ ತನ್ನ ದಾರಿಗೆ ಅಡ್ಡಿಯಾಗಿದ್ದ ಎಲ್ಲರನ್ನೂ ನಾಶಪಡಿಸುತ್ತಾನೆ. ಅವರು ಗಂಗಪಾಡಿ, ನೊಳಂಬಪಾಡಿ ಮತ್ತು ತಡಿಗೈಪಾಡಿ (ಕರ್ನಾಟಕ) ಪ್ರದೇಶಗಳನ್ನು ಸಹ ವಶಪಡಿಸಿಕೊಳ್ತಾನೆ ಅನ್ನೋದು ಇತಿಹಾಸ ಪುಟಗಳಲ್ಲಿದೆ.


ಭೂಮಿ ಸರ್ವೆ ಜಾರಿಗೆ ತಂದಿದ್ದ ರಾಜ ರಾಜ ಚೋಳ
ಅಷ್ಟೇ ಅಲ್ಲದೇ, ಮಹಾನ್ ಚಕ್ರವರ್ತಿಯು ಭೂಮಿ ಸಮೀಕ್ಷೆಯ ಯೋಜನೆಯನ್ನೂ ಜಾರಿಗೆ ತಂದಿದ್ದ. ತನ್ನ ರಾಜ್ಯವನ್ನು ವಲನಾಡುಸ್ ಎಂದು ಕರೆಯಲ್ಪಡುವ ಘಟಕಗಳಾಗಿ ಮರುಸಂಘಟಿಸುತ್ತಾನೆ. ಅಷ್ಟೇ ಅಲ್ಲದೇ ಅವರು ಫೂಲ್‌ಫ್ರೂಫ್ ಆಡಿಟ್ ವ್ಯವಸ್ಥೆಯನ್ನು ಜಾರಿಗೆ ತರುತ್ತಾನೆ. ಹೀಗಾಗಿ ಸ್ಥಳೀಯ ಸ್ವ-ಸರ್ಕಾರವು ಪುನರುಜ್ಜೀವನಗೊಳ್ಳುತ್ತದೆ. ಗ್ರಾಮ ಸಭೆಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಿಗೆ ಸ್ವಾಯತ್ತತೆಯನ್ನು ನೀಡಲಾಗಿತ್ತು.


ಇವರ ಆಡಳಿತದಲ್ಲೇ ಸ್ಥಾಪಿತವಾಗಿತ್ತು ಬೃಹದೀಶ್ವರ ದೇವಾಲಯ!
ತಂಜಾವೂರಿನಲ್ಲಿರುವ ಬೃಹತ್ ಬೃಹದೀಶ್ವರ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇದು ದ್ರಾವಿಡ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿದೆ. ಇದೂ ಕೂಡ ಚೋಳರ ಆಡಳಿತದಲ್ಲಿಯೇ ನಿರ್ಮಿತವಾಗಿದ್ದಾಗಿದೆ. ಈ ಅಪ್ರತಿಮ ದೇವಾಲಯ ಧಾರ್ಮಿಕ ಚಟುವಟಿಕೆಗಳ ಕೇಂದ್ರವಾಗಿರುತ್ತದೆ.


ಅಷ್ಟಕ್ಕೂ ಏನಿದು ವಿವಾದ?
ಚೋಳ ರಾಜವಂಶ ಕಾಲದ ಕಥೆ ಹೊಂದಿರುವ ಪೊನ್ನಿಯಿನ್ ಸೆಲ್ವನ್ I ಚಿತ್ರ ಬಿಡುಗಡೆ ಬಳಿಕ ಈ ವಿವಾದ ಎದ್ದಿದೆ. ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿ ಆಧರಿಸಿದ ಮಣಿರತ್ನಂ ಅವರ ಈ ಚಿತ್ರ ಚೋಳರ ರಾಜರ ಕಾಲದ್ದಾಗಿದೆ. ಈ ಮಧ್ಯೆ ನಿರ್ದೇಶಕ ವೆಟ್ರಿಮಾರನ್ ಅವರು ರಾಜ ರಾಜ ಚೋಳನನ್ನು ಹಿಂದೂ ರಾಜ ಎಂದು ಬಿಂಬಿಸಲು ಮತ್ತು ಅವರಿಗೆ ಹಿಂದೂ ಧಾರ್ಮಿಕ ಗುರುತನ್ನು ನೀಡುವ ಪ್ರಯತ್ನಗಳು ನಡೆಯುತ್ತಿವೆ ಎನ್ನುವ ಮೂಲಕ ವಿವಾದದ ಕಿಡಿ ಹಚ್ಚಿದರು. ನಮ್ಮ ಗುರುತನ್ನು ನಮ್ಮಿಂದ ನಿರಂತರವಾಗಿ ಕಸಿದುಕೊಳ್ಳಲಾಗುತ್ತಿದೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದರು.


ಇದನ್ನೂ ಓದಿ: Bengaluru News: ಬೆಂಗಳೂರಿನ ಜನರೇ ಗಮನಿಸಿ, ಲಾಲ್​ಬಾಗ್​ನಲ್ಲಿ ನಡೆಯಲಿದೆ ಹಬ್ಬ!


ಇನ್ನು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಚರ್ಚೆಗೆ ಧುಮುಕಿದ್ದಾರೆ. ತಮಿಳುನಾಡಿನ ಪ್ರಮುಖ ವ್ಯಕ್ತಿಗಳ ಹಿಂದೂ ಸಾಂಸ್ಕೃತಿಕ ಗುರುತನ್ನು ಮರೆಮಾಚುವ ಪ್ರಯತ್ನಗಳು ನಡೆಯುತ್ತಿವೆ. ಇಂಥ ಪ್ರಯತ್ನಗಳ ವಿರುದ್ಧ ಧ್ವನಿ ಎತ್ತುವ ಅಗತ್ಯವಿದೆ ಅಂತ ಅವರು ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಅವರು, ತಂಜಾವೂರಿನ ಬೃಹದೇಶ್ವರ ದೇವಸ್ಥಾನದ ಪರಿಸರದಲ್ಲಿ ತಾನು ಬೆಳೆದೆ ಎಂದು ಹೇಳಿಕೊಳ್ಳುತ್ತಾರೆ!


ವಿವಾದಕ್ಕೆ ಪುಷ್ಠಿ ನೀಡಿದ ಕಮಲ್‌ ಹಾಸನ್‌ ಹೇಳಿಕೆ
ಇನ್ನು ವೆಟ್ರಿಮಾರನ್ ಹೇಳಿಕೆಗೆ ಜನಪ್ರಿಯ ನಟ ಕಮಲ್ ಹಾಸನ್ ಬೆಂಬಲ ನೀಡಿದ್ದು ವಿವಾದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ರಾಜ ರಾಜ ಚೋಳರ ಆಳ್ವಿಕೆಯಲ್ಲಿ ಹಿಂದೂ ಧರ್ಮ ಇರಲಿಲ್ಲ. ವೈನವಂ, ಶಿವಂ ಮತ್ತು ಸಮಾನಂ ಇತ್ತು. ಹಿಂದೂ ಎನ್ನುವ ಪದವನ್ನು ಬ್ರಿಟಿಷರು ಸೃಷ್ಟಿಸಿದರು ಎಂಬ ಹೇಳಿಕೆ ಮತ್ತಷ್ಟು ಕಿಡಿ ಹೊತ್ತಿಸಿದೆ. ಈ ಮಧ್ಯೆ, ಬಿಜೆಪಿಯ ಎಚ್ ರಾಜಾ ಕೂಡ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ. ನಾನು ವೆಟ್ರಿಮಾರನ್ ಅವರಂತೆ ಇತಿಹಾಸವನ್ನು ಚೆನ್ನಾಗಿ ತಿಳಿದಿಲ್ಲ, ಆದರೆ ರಾಜ ರಾಜ ಚೋಳನು ನಿರ್ಮಿಸಿದ ಎರಡು ಚರ್ಚ್ ಮತ್ತು ಮಸೀದಿಗಳನ್ನು ಅವನು ಎತ್ತಿ ತೋರಿಸಲಿ. ಅವರು ತಮ್ಮನ್ನು ಶಿವಪಾದ ಶೇಖರನ್ ಎಂದು ಕರೆದರು. ಹಾಗಿದ್ದರೆ ಆತ ಹಿಂದೂ ಅಲ್ಲವೇ ಎಂದು ಕೇಳಿದ್ದಾರೆ.


ಇದನ್ನೂ ಓದಿ: Kalaburagi: ಈ ಊರಲ್ಲಿ ಮದುವೆಗೆ ಮಂಚ ಮಾತ್ರ ಗಿಫ್ಟ್ ಸಿಗಲ್ಲ!


ಒಟ್ಟಾರೆ, ರಾಜ ರಾಜ ಚೋಳನ ವಿಚಾರದಲ್ಲಿ ಭುಗಿಲೆದ್ದಿರುವ ಈ ವಿವಾದ ಇನ್ನೆತ್ತ ಕೊಂಡೊಯ್ಯುತ್ತದೋ ಕಾದು ನೋಡಬೇಕಿದೆ.

Published by:ಗುರುಗಣೇಶ ಡಬ್ಗುಳಿ
First published: