• Home
  • »
  • News
  • »
  • explained
  • »
  • Veerendra Heggade: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯಾರು? ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡಿದ್ದು ಯಾಕೆ?

Veerendra Heggade: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯಾರು? ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡಿದ್ದು ಯಾಕೆ?

ಡಾ. ವೀರೇಂದ್ರ ಹೆಗ್ಗಡೆ (ಚಿತ್ರಕೃಪೆ: Internet)

ಡಾ. ವೀರೇಂದ್ರ ಹೆಗ್ಗಡೆ (ಚಿತ್ರಕೃಪೆ: Internet)

ಡಾ. ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕತೆ, ಶಿಕ್ಷಣ, ಆರೋಗ್ಯ, ಸಮಾಜಸೇವೆ, ಸ್ವ ಉದ್ಯೋಗ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ, ದೇಶದೆಲ್ಲೆಡೆ ಚಿರಪರಿಚಿತರಾದವರು. ಇದೀಗ ಅವರನ್ನು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ಕುತೂಹಲಕರ ಮಾಹಿತಿ ಇಲ್ಲಿದೆ ಓದಿ...

ಮುಂದೆ ಓದಿ ...
  • Share this:

ಕರ್ನಾಟಕ ರಾಜ್ಯದ ಸುಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ (Dharmasthala) ಮುಂಚೂಣಿಯಲ್ಲಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Beltangadi) ತಾಲೂಕಿನಲ್ಲಿರುವ ಧರ್ಮಸ್ಥಳ ಹಿಂದೂ (Hindu), ಜೈನ (Jaina) ಧರ್ಮ ಹಾಗೂ ಶೈವ (Shaiva) ಪರಂಪರೆಯ ತ್ರಿವೇಣಿ ಸಂಗಮದ ಕ್ಷೇತ್ರ. ಇಲ್ಲಿನ ಮಂಜುನಾಥ ಸ್ವಾಮಿ (Manjunatha Swamy) ತನ್ನ ಪವಾಡಗಳಿಂದಲೇ ಪ್ರಖ್ಯಾತ. ಈ ಕ್ಷೇತ್ರದ ಧರ್ಮಾಧಿಕಾರಿ ಅಥವಾ ಖಾವಂದರ್ ಆಗಿ ಆಡಳಿತ ನಡೆಸುತ್ತಿರುವವರೇ ಶ್ರೀ ಡಾ. ವೀರೇಂದ್ರ ಹೆಗ್ಗಡೆ (Dr. Veerendra Heggade). ಧಾರ್ಮಿಕತೆ, ಶಿಕ್ಷಣ, ಆರೋಗ್ಯ, ಸಮಾಜಸೇವೆ, ಸ್ವ ಉದ್ಯೋಗ, ಮಹಿಳಾ ಸಬಲೀಕರಣ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ವೀರೇಂದ್ರ ಹೆಗ್ಗಡೆ ಅವರು ದೇಶದೆಲ್ಲೆಡೆ ಚಿರಪರಿಚಿತರು. ಇದೀಗ ಅವರ ಸಾಧನೆಯನ್ನು ಗುರುತಿಸಿ ಅವರನ್ನು ರಾಜ್ಯಸಭಾ ಸದಸ್ಯ (Rajya Sabha Member) ಸ್ಥಾನಕ್ಕೆ ಕೇಂದ್ರ ಸರ್ಕಾರವೇ ನೇರವಾಗಿ ನೇಮಕ ಮಾಡಿದೆ. ಹಾಗಿದ್ರೆ ವೀರೇಂದ್ರ ಹೆಗ್ಗಡೆಯವರ ಜೀವನ ಹೇಗಿತ್ತು? ಅವರ ಸಾಧನೆಗಳೇನು? ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಅವರನ್ನು ಆಯ್ಕೆ ಮಾಡಿದ ಕಾರಣವೇನು? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…


ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ


73 ವರ್ಷದ ಡಾ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲದ ಧರ್ಮದರ್ಶಿಗಳಾಗಿದ್ದಾರೆ. ತಂದೆ ಮಂಜಯ್ಯ ಹೆಗ್ಗಡೆ ಅವರ ಬಳಿಕ ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಧರ್ಮಾಧಿಕಾರಿ ಪಟ್ಟ ಏರಿ, ಅತೀ ಹೆಚ್ಚು ಸಮಯ ಧರ್ಮದರ್ಶಿಗಳಾಗಿದ್ದಾರೆ.


ಜನರ ಮನಸ್ಸಿನಲ್ಲಿ ದೇವರಾದವರು


ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ಹೆಗ್ಗಡೆ ದಂಪತಿಯ ಹಿರಿಯ ಪುತ್ರ ವೀರೇಂದ್ರ ಅವರು ನವೆಂಬರ್ 23, 1948 ರಂದು ಜನಿಸಿದರು. ಅವರು ತುಳು ಪರಂಪರೆಯ ಪೆರ್ಗಡೆ ರಾಜವಂಶದಿಂದ ಬಂದವರು. ಧರ್ಮಾಧಿಕಾರಿ ಪದ್ಮಭೂಷಣ ಡಾ. ವೀರೇಂದ್ರ ಹೆಗ್ಗಡೆ ಎಂದರೆ ನಾಡಿನ ಜನತೆಗೆ ಅಪಾರ ಗೌರವ. ಲಕ್ಷಾಂತರ ಭಕ್ತರ ಮನೆಗಳಲ್ಲಿ ಶ್ರೀ ಮಂಜುನಾಥ ಸ್ವಾಮಿ ಫೋಟೋ ಜೊತೆಗೆ, ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆ ಅವರ ಫೋಟೋ ಕೂಡಾ ಇರುತ್ತದೆ. ಭಕ್ತರು ಶ್ರದ್ಧೆಯಿಂದ ವಿರೇಂದ್ರ ಹೆಗ್ಗಡೆ ಅವರ ಫೋಟೋಗು ಪೂಜೆ ಮಾಡುತ್ತಾರೆ. ಅಷ್ಟರಮಟ್ಟಿಗೆ ಅವರ ಕಾರ್ಯದಿಂದ ಭಕ್ತರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ.


ಇದನ್ನೂ ಓದಿ: Explained: ಶಿಶಿಲದಲ್ಲಿ ಕಡಿಮೆಯಾಗ್ತಿದೆ ದೇವರ ಮೀನಿನ ಸಂಖ್ಯೆ! ಹತ್ತಿರದಲ್ಲಿದ್ದೇ ಹೊಂಚು ಹಾಕುವ ಕಳ್ಳ ಯಾರು ಗೊತ್ತಾ?


ಅತಿ ಚಿಕ್ಕ ವಯಸ್ಸಲ್ಲೇ ಧರ್ಮಸ್ಥಳದ ಚುಕ್ಕಾಣಿ


ಕಾನೂನು ಓದಬೇಕೆಂದಿದ್ದ ಅವರಿಗೆ ಅದು ಸಾಧ್ಯವಾಗಲಿಲ್ಲ. ಏಕೆಂದರೆ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯದಿಂದ  ನಿಧನ ಹೊಂದಿದರು. ನಂತರ ವಿರೇಂದ್ರ ಹೆಗ್ಗಡೆಯವರು ಅಕ್ಟೋಬರ್ 24 ರಂದು ತಮ್ಮ 20ನೇ ವಯಸ್ಸಿನಲ್ಲಿಯೇ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು.


ಹಲವಾರು ಕ್ಷೇತ್ರಗಳಿಗೆ ಹೆಗ್ಗಡೆಯವರ ಕೊಡುಗೆ


ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ಅಭಿವೃದ್ಧಿ ಜೊತೆಗೆ ನಾಡಿನ ಅಭಿವೃದ್ಧಿಗೂ ಶ್ರಮಿಸಿದವರು. ಧರ್ಮಸ್ಥಳವನ್ನು ಕೇವಲ ಧರ್ಮ ಕ್ಷೇತ್ರವಷ್ಟೇ ಅಲ್ಲದೆ, ಅದನ್ನು ವಿದ್ಯಾಕ್ಷೇತ್ರ, ಉದ್ಯೋಗ, ಸಹಕಾರ ಸಂಘ, ಆರೋಗ್ಯ, ಕಲೆ, ಸಾಹಿತ್ಯ, ಸೇವಾಕ್ಷೇತ್ರ, ಗ್ರಾಮೀಣ ಅಭಿವೃದ್ಧಿ, ವೃತ್ತಿ ಶಿಕ್ಷಣ, ಧರ್ಮಸಮ್ಮೇಳನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲು ತಮ್ಮದೆಯಾದ ಕೊಡುಗೆಯನ್ನು ನೀಡುತ್ತಿರುವ ಕ್ಷೇತ್ರವಾಗಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ವೀರೇಂದ್ರ ಹೆಗ್ಗಡೆ ಅವರು.


ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ


ಡಾ ವೀರೇಂದ್ರ ಹೆಗ್ಗಡೆಯವರು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ 600 ಹಳ್ಳಿಗಳು ಮತ್ತು ಆರು ಪಟ್ಟಣಗಳನ್ನು ಒಳಗೊಂಡ ಗ್ರಾಮೀಣಾಭಿವೃದ್ಧಿ ಯೋಜನೆಯನ್ನು ಪರಿಚಯಿಸಿದರು. ಈಗ ಐದು ದಶಕಗಳಿಂದ, ಅವರು ಗ್ರಾಮೀಣ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗದ ಉತ್ತೇಜನಕ್ಕಾಗಿ ವಿವಿಧ ಪರಿವರ್ತನಾ ಯೋಜನೆಗಳನ್ನು ಹೆಗ್ಗಡೆಯವರು ಮುನ್ನಡೆಸಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವದ್ಧಿ ಯೋಜನೆ ಇದು ಕರ್ನಾಟಕ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕಾಗಿ ಒಂದು ಉಪಕ್ರಮವಾಗಿದೆ. ಈ ಯೋಜನೆಯು ಈಗ 49 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ.


ಉಚಿತ ಸಾಮೂಹಿಕ ವಿವಾಹ


ಅವರು 1972 ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ಉಚಿತ ಸಾಮೂಹಿಕ ವಿವಾಹವನ್ನು ಸಹ ನಡೆಸುತ್ತಾರೆ. ಏಪ್ರಿಲ್ 2004 ರಿಂದ, ಈ ಯೋಜನೆಯಡಿಯಲ್ಲಿ ಸುಮಾರು 10,000 ಜೋಡಿಗಳು ಮದುವೆಯಾಗಿದ್ದಾರೆ.


ಇದನ್ನೂ ಓದಿ: Explained: ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳ ಬಗ್ಗೆ ಇಲ್ಲಿದೆ ಮಾಹಿತಿ


ಧರ್ಮಸ್ಥಳ ದೇಗುಲದಲ್ಲಿ ನಿತ್ಯ ಅನ್ನದಾನ


ಧರ್ಮಸ್ಥಳದಲ್ಲಿ ಅನ್ನಪೂರ್ಣ ಕಿಚನ್ ಎಂಬ ಬೃಹತ್ ಕಿಚನ್ ಇದೆ. ಇದು ಭಾರತದಲ್ಲಿನ ಅತ್ಯಂತ ದೊಡ್ಡ ಮತ್ತು ಹಳೆಯ ಕುಟುಂಬ ನಡೆಸುವ ಅಡಿಗೆಮನೆಗಳಲ್ಲಿ ಒಂದಾಗಿದೆ, ಪ್ರತಿದಿನ ಸುಮಾರು 50,000 ಜನರಿಗೆ ಆಹಾರವನ್ನು ನೀಡುತ್ತದೆ.


ಹೆಗ್ಗಡೆಯವರ ಸೇವೆಗೆ ಹಲವು ಪುರಸ್ಕಾರ


ವೀರೇಂದ್ರ ಹೆಗ್ಗಡೆಯವರ ಸಾಧನೆ, ಸಮಾಜ ಸೇವೆ ಗುರುತಿಸಿ, ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರನ್ನೇ ಹುಡುಕಿಕೊಂಡು ಬಂದಿವೆ. ಅವರಿಗೆ 2009 ರಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಕೇಂದ್ರವು ಅವರಿಗೆ 2015 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿತು. ಇದೀಗ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಕೇಂದ್ರ ಸರ್ಕಾರದಿಂದಲೇ ನಾಮನಿರ್ದೇಶನಗೊಂಡಿದ್ದಾರೆ.

Published by:Annappa Achari
First published: