Explainer: ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿರುವ ಶೇಖ್ ಹೈಬತುಲ್ಲಾ ಅಖುಂದ್ಜಾಡಾ ಯಾರು..? 

Who is Sheikh Haibatullah Akhunzada: ಈ ವಾರ ಕಂದಹಾರ್‌ನಲ್ಲಿ ಇತರ ಅಫ್ಘಾನ್ ನಾಯಕರನ್ನು ಅವರು ಭೇಟಿಯಾಗುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ (New York Times) ವರದಿ ಮಾಡಿದೆ. ಇನ್ನು, ಅವರು ಯಾವುದೇ ಆಡಳಿತ ಮಂಡಳಿಯ ಉನ್ನತ ನಾಯಕರಾಗಿರುತ್ತಾರೆ ಎಂದು ಗುಂಪಿನ ಸಾಂಸ್ಕೃತಿಕ ಆಯೋಗದ ಸದಸ್ಯ ಬಿಲಾಲ್ ಕರಿಮಿ (Bilal Karimi) ಸಂದರ್ಶನವೊಂದರಲ್ಲಿ ಹೇಳಿದರು ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಶೇಖ್ ಹೈಬತುಲ್ಲಾ ಅಖುಂದ್ಜಾಡಾ ಫೈಲ್​ ಫೋಟೊ

ಶೇಖ್ ಹೈಬತುಲ್ಲಾ ಅಖುಂದ್ಜಾಡಾ ಫೈಲ್​ ಫೋಟೊ

  • Share this:
Taliban Top Leaders: ಅಫ್ಘಾನಿಸ್ತಾನದ (Afghanistan) ನಿಯಂತ್ರಣವನ್ನು ಶೀಘ್ರವಾಗಿ ವಶಪಡಿಸಿಕೊಂಡ ವಾರಗಳ ನಂತರ, ತಾಲಿಬಾನ್ (Taliban) ಶೀಘ್ರದಲ್ಲೇ ತನ್ನ ಹೊಸ ಸರ್ಕಾರ ರಚನೆ ಮಾಡಲು ಸಜ್ಜಾಗಿದೆ. ಈ ಸರ್ಕಾರವನ್ನು ಉಗ್ರಗಾಮಿ ಗುಂಪಿನ ಉನ್ನತ ಆಧ್ಯಾತ್ಮಿಕ ನಾಯಕ ಶೇಖ್ ಹೈಬತುಲ್ಲಾ ಅಖುಂದ್ಜಾಡಾ (Sheikh Haibatullah Akhunzada) ನೇತೃತ್ವ ವಹಿಸುವ ಸಾಧ್ಯತೆಯಿದೆ. ಹೊಸ ಸರ್ಕಾರವನ್ನು ಯಾವಾಗ ಘೋಷಿಸಲಾಗುವುದು ಎಂಬುದಕ್ಕೆ ಸ್ಪಷ್ಟ ಸೂಚನೆ ಇಲ್ಲ.ಇನ್ನು, ಮಾನವ ಹಕ್ಕುಗಳ ಬಿಕ್ಕಟ್ಟಿನ ಹೊರತಾಗಿ, ಸಾವಿರಾರು ಅಫ್ಘಾನಿಯನ್ನರು ತಾಲಿಬಾನ್ ಆಳ್ವಿಕೆಯಿಂದ ಪಲಾಯನ ಮಾಡುತ್ತಿದ್ದು, ಅಮೆರಿಕ ಸೇರಿದಂತೆ ಎಲ್ಲಾ ಪ್ರಮುಖ ಸಾಲದಾತರಿಂದ ದೇಶಕ್ಕೆ ಹಣನ್ನು ಕಡಿತಗೊಳಿಸಲಾಗಿರುವುದರಿಂದ ಹೊಸ ಸರ್ಕಾರವು ನಗದಿಗಾಗಿ ತೀವ್ರ ತೊಂದರೆ ಪಡಬೇಕಾಗಿದೆ.

ಕಳೆದ ಕೆಲವು ವಾರಗಳ ಸಂದರ್ಶನಗಳಲ್ಲಿ, ತಾಲಿಬಾನ್ ಅಧಿಕಾರಿಗಳು ಶೇಖ್ ಹೈಬತುಲ್ಲಾ ಹೊಸ ಇಸ್ಲಾಮಿಕ್ ಸರ್ಕಾರದ (Islamic State's Supreme Power) ಸರ್ವೋಚ್ಚ ಅಧಿಕಾರ ಎಂದು ಸೂಚಿಸಿದ್ದಾರೆ. ಈ ವಾರ ಕಂದಹಾರ್‌ನಲ್ಲಿ ಇತರ ಅಫ್ಘಾನ್ ನಾಯಕರನ್ನು ಅವರು ಭೇಟಿಯಾಗುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ (New York Times) ವರದಿ ಮಾಡಿದೆ. ಇನ್ನು, ಅವರು ಯಾವುದೇ ಆಡಳಿತ ಮಂಡಳಿಯ ಉನ್ನತ ನಾಯಕರಾಗಿರುತ್ತಾರೆ ಎಂದು ಗುಂಪಿನ ಸಾಂಸ್ಕೃತಿಕ ಆಯೋಗದ ಸದಸ್ಯ ಬಿಲಾಲ್ ಕರಿಮಿ (Bilal Karimi) ಸಂದರ್ಶನವೊಂದರಲ್ಲಿ ಹೇಳಿದರು ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಹಾಗಾದರೆ, ಶೇಖ್ ಹೈಬತುಲ್ಲಾ ಅಖುಂದ್ಜಾಡಾ ಯಾರು..?:

ಈ ಹಿಂದಿನ ನಾಯಕ ಅಖ್ತರ್ ಮನ್ಸೂರ್ (Akhter Mansour) 2016ರಲ್ಲಿ ಅಫ್ಘಾನ್-ಪಾಕಿಸ್ತಾನ ಗಡಿಯಲ್ಲಿ ನಡೆದ ಯುಎಸ್ ಡ್ರೋನ್ ದಾಳಿಯಲ್ಲಿ ಹತರಾದ ನಂತರ ತಾಲಿಬಾನ್‌ನ ಸರ್ವೋಚ್ಚ ನಾಯಕರಾಗಿ ಶೇಖ್ ಹೈಬತುಲ್ಲಾ ಅಧಿಕಾರ ವಹಿಸಿಕೊಂಡರು. ಕಂದಹಾರ್‌ನ ಹೊರಗಿನ ಪಂಜವೇ ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ಅವರು ಮದರಸಾ ಅಥವಾ ಧಾರ್ಮಿಕ ಶಾಲೆಗಳಲ್ಲಿ ಓದುತ್ತಾ ಬೆಳೆದರು. ಸೋವಿಯತ್ ಆಕ್ರಮಣದ ನಂತರ ಅವರ ಕುಟುಂಬವು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯಕ್ಕೆ ಸ್ಥಳಾಂತರಗೊಂಡಿತು.

ಇದನ್ನೂ ಓದಿ: ಅಫ್ಘಾನ್​ನಲ್ಲಿ ನಾಳೆ ಸರ್ಕಾರ ರಚನೆ ಮಾಡಲಿರುವ ತಾಲಿಬಾನ್​ಗಳು

1980ರ ದಶಕದಲ್ಲಿ, ಶೇಖ್ ಹೈಬತುಲ್ಲಾ ಯುವ ಧಾರ್ಮಿಕ ವಿದ್ಯಾರ್ಥಿಗಳನ್ನು ಸೇರಿಕೊಂಡು 'ಇಸ್ಲಾಮಿಸ್ಟ್ ಪ್ರತಿರೋಧ'ದ ಭಾಗವಾಗಿ ಸೋವಿಯತ್ ವಿರುದ್ಧ (War Against Soviet Union) ಹೋರಾಡಿದರು. ಪಾಕಿಸ್ತಾನದ ಮದರಸಾದಲ್ಲಿ ತಮ್ಮ ಅಧ್ಯಯನ ಮುಂದುವರಿಸಿದರು ಮತ್ತು ತಾಲಿಬಾನ್ ಸಂಸ್ಥಾಪಕ ಮುಲ್ಲಾ ಮೊಹಮ್ಮದ್ ಒಮರ್ (Mahammed Omar) ಧಾರ್ಮಿಕ 'ಸಲಹೆಗಾರ'ರಾಗಿ ಬೆಳೆದರು ಮತ್ತು ಕ್ರಮೇಣ ಶೇಖ್ ಉಲ್-ಹದೀಸ್ (Shaikh Ul-Hadis) ಅಥವಾ ಮಹೋನ್ನತ ಧಾರ್ಮಿಕ ವಿದ್ವಾಂಸ ಮತ್ತು ಮೌಲ್ವಿ ಸ್ಥಾನಮಾನಕ್ಕೇರಿದರು - ಇವೆರಡೂ ಮುಸಲ್ಮಾನ ಧರ್ಮದಲ್ಲಿ ಅತ್ಯಂತ ಹಿರಿಯ ಧಾರ್ಮಿಕ ಸ್ಥಾನಮಾನವಾಗಿದೆ.

ಇದನ್ನೂ ಓದಿ: ಅಫ್ಘನ್ ಬಂಡುಕೋರರಿಗೆ ಆಶ್ರಯ ಕೊಡಬೇಡಿ: ಭಾರತಕ್ಕೆ ‘ಕಾಬೂಲ್ ಹಂತಕ’ ಎಚ್ಚರಿಕೆ

ಸೋವಿಯತ್ ತನ್ನ ಸೈನ್ಯವನ್ನು ಹಿಂತೆಗೆದುಕೊಂಡ ನಂತರ 1990ರಲ್ಲಿ ಮೊದಲ ಬಾರಿಗೆ ತಾಲಿಬಾನ್ ಜೊತೆಗಿನ ಅವರ ಒಡನಾಟವು ಸ್ಥಾಪನೆಯಾಯಿತು. ಅವರ ವಿದ್ವತ್ ಹಿನ್ನೆಲೆಯಿಂದಾಗಿ, ಮಿಲಿಟರಿ ಕಮಾಂಡರ್‌ಗಿಂತ ಧಾರ್ಮಿಕ ನಾಯಕರಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಆದರೆ ಅಫ್ಘಾನಿಸ್ತಾನದ ಫರಾಹ್ ಪ್ರಾಂತ್ಯವನ್ನು ತಾಲಿಬಾನ್ ವಶಪಡಿಸಿಕೊಂಡಾಗ, ಆ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮೇಲ್ವಿಚಾರಣೆ ಮಾಡಲು ಅವರನ್ನು ನೇಮಿಸಲಾಯಿತು. ನಂತರ ಅವರನ್ನು ಕಂದಹಾರ್‌ನಲ್ಲಿರುವ ತಾಲಿಬಾನ್‌ನ ಮಿಲಿಟರಿ ನ್ಯಾಯಾಲಯಕ್ಕೆ ನೇಮಿಸಲಾಯಿತು ಮತ್ತು ಅಂತಿಮವಾಗಿ ನಂಗರ್‌ಹಾರ್ ಪ್ರಾಂತ್ಯಕ್ಕೆ ವರ್ಗಾಯಿಸಲಾಯಿತು ಮತ್ತು ಅಲ್ಲಿ ಅವರು ಮಿಲಿಟರಿ ನ್ಯಾಯಾಲಯದ ಮುಖ್ಯಸ್ಥರಾಗಿದ್ದರು.

ತಾಲಿಬಾನ್ ನ್ಯಾಯಾಲಯಗಳಲ್ಲಿ ಖಾಯಂ ಸದಸ್ಯರಾಗಿರುವ ಶೇಖ್ ಹೈಬತುಲ್ಲಾ, ತಪ್ಪಿತಸ್ಥ ಕೊಲೆಗಾರರು ಮತ್ತು ವ್ಯಭಿಚಾರಿಗಳಿಗೆ ಸಾರ್ವಜನಿಕ ಮರಣದಂಡನೆಯಂತಹ ತೀವ್ರ ಇಸ್ಲಾಮಿಕ್ ಶಿಕ್ಷೆಗಳನ್ನು ನೀಡುವ ಉಗ್ರಗಾಮಿ ಸಂಘಟನೆಗಳ ಫತ್ವಾಗಳ ಭಾಗವಾಗಿದ್ದಾರೆ.

2001ರಲ್ಲಿ ಯುಎಸ್ ನೇತೃತ್ವದ ಒಕ್ಕೂಟವು ತಾಲಿಬಾನ್ ಅನ್ನು ಉರುಳಿಸಿ ಅಫ್ಘಾನಿಸ್ತಾನವನ್ನು ಆಕ್ರಮಿಸಿದ ನಂತರ ಶೇಖ್ ಹೈಬತುಲ್ಲಾರನ್ನು ಉರುಳಿಸಿದ ನಂತರ, ಅವರನ್ನು ಉಗ್ರಗಾಮಿ ಗುಂಪಿನ ಧಾರ್ಮಿಕ ವಿದ್ವಾಂಸರ ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು. ಆದರೆ ಇಲ್ಲಿಯವರೆಗೆ ಅವರು ತುಲನಾತ್ಮಕವಾಗಿ ಲೋ ಪ್ರೊಫೈಲ್ ಅನ್ನು ಉಳಿಸಿಕೊಂಡಿದ್ದಾರೆ. ವಿವಿಧ ಇಸ್ಲಾಮಿಕ್ ರಜಾದಿನಗಳಲ್ಲಿ ಹೇಳಿಕೆಗಳನ್ನು ಬಿಡುಗಡೆ ಮಾಡಲು ಮಾತ್ರ ಸಾರ್ವಜನಿಕರೊಂದಿಗೆ ಸಂವಹನ ಮಾಡುತ್ತಾರೆ.

ತಾಲಿಬಾನ್ ಅಡಿಯಲ್ಲಿ ಹೊಸ ಅಫ್ಘಾನಿಸ್ತಾನ ಸರ್ಕಾರದ ಬಗ್ಗೆ ನಮಗೇನು ಗೊತ್ತು..?
ಕತಾರ್‌ನಲ್ಲಿರುವ ತಾಲಿಬಾನ್‌ ರಾಜಕೀಯ ಕಚೇರಿಯ ಉಪ ಮುಖ್ಯಸ್ಥ ಶೇರ್ ಅಬ್ಬಾಸ್ ಸ್ರಾನಿಕ್‌ಜೈ ಮುಂದಿನ ಎರಡು ದಿನಗಳಲ್ಲಿ ಹೊಸ ಸರ್ಕಾರ ಘೋಷಿಸಬಹುದು ಎಂದು ಹೇಳಿದ್ದಾರೆ. ಹೊಸ ಸರ್ಕಾರ ಘೋಷಿಸಿದ ನಂತರ, ಪ್ರಪಂಚದಾದ್ಯಂತದ ದೇಶಗಳು ತಾಲಿಬಾನ್ ಆಳ್ವಿಕೆ ಗುರುತಿಸಲು ಸಿದ್ಧವಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕು.

ಇರಾನ್​ ಹಾದಿಯಲ್ಲಿ ತಾಲಿಬಾನ್​?:

ಶೇಖ್ ಹೈಬತುಲ್ಲಾ ಸರ್ವೋಚ್ಚ ನಾಯಕರಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದ್ದು, ಇರಾನ್‌ನ ಸರ್ವೋಚ್ಚ ನಾಯಕನಂತೆಯೇ ಒಂದು ದೇವಪ್ರಭುತ್ವಾತ್ಮಕ ಪಾತ್ರವಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. "ಹೊಸ ಸರ್ಕಾರದ ಬಗ್ಗೆ ಸಮಾಲೋಚನೆಗಳು ಬಹುತೇಕ ಅಂತಿಮಗೊಂಡಿವೆ, ಮತ್ತು ಕ್ಯಾಬಿನೆಟ್ ಬಗ್ಗೆ ಅಗತ್ಯ ಚರ್ಚೆಗಳನ್ನು ಸಹ ನಡೆಸಲಾಗಿದೆ" ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್‌ ವರದಿ ಮಾಡಿದೆ.
"ಹೊಸ ಸರ್ಕಾರದ ಬಗ್ಗೆ ಸಮಾಲೋಚನೆಗಳು ಬಹುತೇಕ ಅಂತಿಮಗೊಂಡಿವೆ, ಮತ್ತು ಕ್ಯಾಬಿನೆಟ್ ಬಗ್ಗೆ ಅಗತ್ಯ ಚರ್ಚೆಗಳನ್ನು ಸಹ ನಡೆಸಲಾಗಿದೆ. "ನಾವು ಘೋಷಿಸುವ ಇಸ್ಲಾಮಿಕ್ ಸರ್ಕಾರವು ಜನರಿಗೆ ಒಂದು ಮಾದರಿಯಾಗಿದೆ. ಸರ್ಕಾರದಲ್ಲಿ ಅಖುಂದ್ಜಾಡಾ ಇರುವ ಬಗ್ಗೆ ಯಾವುದೇ ಸಂದೇಹವಿಲ್ಲ. ಅವರು ಸರ್ಕಾರದ ನಾಯಕರಾಗುತ್ತಾರೆ ಮತ್ತು ಈ ಬಗ್ಗೆ ಯಾವುದೇ ಪ್ರಶ್ನೆಯಿರಬಾರದು" ಎಂದು ಅಫ್ಘಾನಿಸ್ತಾನದ ಟೋಲೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್‌ನ ಸಾಂಸ್ಕೃತಿಕ ಆಯೋಗದ ಸದಸ್ಯರು ಹೇಳಿದರು.

ಎಲ್ಲರಿಗೂ ಒಪ್ಪುವಂತಹ ಮಾಡರೇಟ್‌ ಫ್ರಂಟ್‌ ಪ್ರಸ್ತುತಪಡಿಸುವ ಪ್ರಯತ್ನದಲ್ಲಿ, ನಾವು ನಿರಂಕುಶ ಪ್ರಭುತ್ವವನ್ನು ಸ್ಥಾಪಿಸುವುದಿಲ್ಲ. ಹೊಸ ಸರ್ಕಾರವು ವಿವಿಧ ಜನಾಂಗೀಯ ಸಮುದಾಯಗಳ ಪ್ರತಿನಿಧಿಯಾಗಿರುತ್ತದೆ ಮತ್ತು ಮಹಿಳಾ ನಾಯಕರನ್ನು ಸಹ ಒಳಗೊಂಡಿರುತ್ತದೆ ಎಂದು ತಾಲಿಬಾನ್ ಈ ಮೊದಲು ಹೇಳಿದೆ.

ತಾಲಿಬಾನ್ ಸಹ-ಸಂಸ್ಥಾಪಕ, ಮುಲ್ಲಾ ಅಬ್ದುಲ್ ಘನಿ ಬರದಾರ್, ಸರ್ಕಾರದ ಮುಖ್ಯಸ್ಥರಾಗಿ ದಿನನಿತ್ಯದ ವ್ಯವಹಾರಗಳ ಉಸ್ತುವಾರಿ ವಹಿಸುವ ನಿರೀಕ್ಷೆಯಿದ್ದರೆ, ಹೊಸ ಆಡಳಿತದಲ್ಲಿ ಇತರ ಉನ್ನತ ತಾಲಿಬಾನ್ ನಾಯಕರನ್ನು ಪ್ರಮುಖ ಸ್ಥಾನಗಳಲ್ಲಿ ನೋಡುವ ಸಾಧ್ಯತೆಯಿದೆ. ಅವರಲ್ಲಿ ತಾಲಿಬಾನ್ ಉಪ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ ಮತ್ತು ಮುಲ್ಲಾ ಒಮರ್ ಪುತ್ರ ಮೌಲ್ವಿ ಮೊಹಮ್ಮದ್ ಯಾಕೌಬ್ ಕೂಡ ಇರಲಿದ್ದಾರೆ ಎನ್ನಲಾಗಿದೆ.
Published by:Sharath Sharma Kalagaru
First published: