• Home
  • »
  • News
  • »
  • explained
  • »
  • Siddeshwar Swamiji: 'ಸರಳ ಸಂತ' ಸಿದ್ದೇಶ್ವರ ಸ್ವಾಮೀಜಿ ಹೇಗಿದ್ದರು? 'ಜ್ಞಾನಯೋಗಿ'ಯ ಜೀವನಗಾಥೆ ಇಲ್ಲಿದೆ ಓದಿ

Siddeshwar Swamiji: 'ಸರಳ ಸಂತ' ಸಿದ್ದೇಶ್ವರ ಸ್ವಾಮೀಜಿ ಹೇಗಿದ್ದರು? 'ಜ್ಞಾನಯೋಗಿ'ಯ ಜೀವನಗಾಥೆ ಇಲ್ಲಿದೆ ಓದಿ

ಸಿದ್ದೇಶ್ವರ ಸ್ವಾಮೀಜಿಗಳು

ಸಿದ್ದೇಶ್ವರ ಸ್ವಾಮೀಜಿಗಳು

ಸಮಾಜವನ್ನು ತಿದ್ದುವ ಸ್ವಾಮೀಜಿಗಳು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಂತಿದ್ದವರು ಸಿದ್ದೇಶ್ವರ ಸ್ವಾಮೀಜಿ. ಅನ್ನದಾತ, ಜ್ಞಾನದಾತರಾದ ಸಿದ್ದೇಶ್ವರ ಸ್ವಾಮೀಜಿಗಳು 'ಕಾಯಕ ಯೋಗಿ' ಅಂತನೂ ಗೌರವದಿಂದ ಕರೆಯಲ್ಪಟ್ಟವರು. ತಮ್ಮ ಪ್ರಚವನಗಳ ಮೂಲಕವೇ ಅದೆಷ್ಟೋ ಜನರಿಗೆ ದಾರಿ ದೀಪವಾದ ಸಿದ್ದೇಶ್ವರ ಶ್ರೀಗಳ ಜೀವನವೇ ಸ್ಫೂರ್ತಿಗಾಥೆ...

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ವಿಜಯಪುರ: ಸ್ವಾಮೀಜಿಗಳು (Swamiji) ಅಂದರೆ ಖಾವಿಧಾರಿಗಳು. ಆದರೆ ಇವರು ಶುದ್ಧ ಬಿಳಿ ಬಣ್ಣದ ಬಟ್ಟೆಯಲ್ಲಿ ಶುದ್ಧರಾಗೇ ಇದ್ದವರು. ಇಂದಿನ ಅದೆಷ್ಟೋ ಸ್ವಾಮೀಜಿಗಳು ಮಠದ (Mutt) ಹೆಸರಲ್ಲಿ ಅದೆಷ್ಟೋ ಆಸ್ತಿ (Property) ಮಾಡಿದ್ದಾರೆ. ಸರ್ಕಾರದಿಂದ  ಅದೆಷ್ಟೋ ಅನುದಾನ (grant from the government) ಪಡೆದಿದ್ದಾರೆ. ತಮಗೆ ಪ್ರಶಸ್ತಿ (Award) ಬೇಕು ಅಂತ ಸರ್ಕಾರದ ಎದುರು ಪಟ್ಟು ಹಿಡಿದವರೂ ಇದ್ದಿರಬಹುದು. ಕೆಲ ತಿಂಗಳ ಹಿಂದಂತೂ ಪ್ರತಿಷ್ಠಿತ ಮಠ ಅಂತ ಎನಿಸಿಕೊಂಡ ಮಠದಲ್ಲಿ ಕಳ್ಳ ಸ್ವಾಮೀಜಿಯೊಬ್ಬ ಸಿಕ್ಕಿಬಿದ್ದಿದ್ದ. ಮಠದ ಹಾಸ್ಟೆಲ್‌ನ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆ ಕಾಮುಕ ಸ್ವಾಮಿ, ಸದ್ಯ ಜೈಲಲ್ಲಿ ಕಂಬಿ ಎಣಿ್ಸುತ್ತಿದ್ದಾನೆ. ಇಂತ ಕಳ್ಳ ಸ್ವಾಮೀಜಿಗಳಿಂದ ಸ್ವಾಮೀಜಿಗಳಿಗೆ ಇರುವ ಬೆಲೆ, ಗೌರವ ಕಡಿಮೆಯಾಗುತ್ತಿದೆ ಎನ್ನುತ್ತಿರುವ ಜನರು ಇವರನ್ನು ನೋಡಿದ್ರೆ ಕೈಮುಗಿಯುತ್ತಾರೆ. ಸಮಾಜವನ್ನು ತಿದ್ದುವ ಸ್ವಾಮೀಜಿಗಳು ಹೇಗಿರಬೇಕು ಎನ್ನುವುದಕ್ಕೆ ಉದಾಹರಣೆಯಂತಿದ್ದವರು ಸಿದ್ದೇಶ್ವರ ಸ್ವಾಮೀಜಿ (Siddeshwara Swamiji). ಅನ್ನದಾತ, ಜ್ಞಾನದಾತರಾದ ಸಿದ್ದೇಶ್ವರ ಸ್ವಾಮೀಜಿಗಳು ಕಾಯಕ ಯೋಗಿ ಅಂತಾಲೂ ಗೌರವದಿಂದ ಕರೆಯಲ್ಪಟ್ಟವರು. ತಮ್ಮ ಪ್ರಚವನಗಳ ಮೂಲಕವೇ ಅದೆಷ್ಟೋ ಜನರಿಗೆ ದಾರಿ ದೀಪವಾದ ಸಿದ್ದೇಶ್ವರ ಶ್ರೀಗಳ ಜೀವನವೇ ಸ್ಫೂರ್ತಿಗಾಥೆ.  


ಸಾಮಾನ್ಯ ರೈತ ಕುಟುಂಬದಲ್ಲಿ ಜನನ


ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ 1941  ಅಕ್ಟೋಬರ್ 24ರಂದು ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಸಿದ್ದಗೊಂಡಪ್ಪ. ಇವರ ಬಾಲ್ಯದ ದಿನಗಳು ಕಷ್ಟದಲ್ಲಿಯೇ ಕಳೆಯಿತು.
ಮಲ್ಲಿಕಾರ್ಜುನ ಸ್ವಾಮಿಗಳ ಬಳಿ ವಿದ್ಯಾಭ್ಯಾಸ


ತಮ್ಮ ಗ್ರಾಮದ ಶಾಲೆಯಲ್ಲಿಯೇ ನಾಲ್ಕನೇ ತರಗತಿವರೆಗೆ ಓದಿದ ನಂತರ ಸಿದ್ದಗೊಂಡಪ್ಪ ಜ್ಞಾನ ಯೋಗಾಶ್ರಮದ ಆಗಿನ ಮಠಾಧಿಪತಿ ಮಲ್ಲಿಕಾರ್ಜುನ ಸ್ವಾಮಿಗಳ ಬಳಿಗೆ ಬಂದರು. ಮಲ್ಲಿಕಾರ್ಜುನ ಸ್ವಾಮಿಗಳು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗುತ್ತಿದ್ದರು.  ಸ್ವಾಮಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ತಿಂಗಳುಗಟ್ಟಲೆ ಪ್ರವಚನ ನೀಡುತ್ತಿದ್ದರು.ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯೆಗಾಗಿ ಕಷ್ಟಪಡುತ್ತಿದ್ದುದನ್ನು ಗಮನಿಸಿ ಅವರಿಗಾಗಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿ ಅವರಿಗೆ ಊಟ, ವಸತಿಗಳಿಗೆ ವ್ಯವಸ್ಥೆ ಮಾಡಿದರು. ಇದರಿಂದಾಗಿ ಸಾವಿರಾರು ಮಕ್ಕಳು ವಿದ್ಯಾವಂತರಾದರು. ಹಾಗೆ ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಬಾಲಕ ಸಿದ್ದಗೊಂಡಪ್ಪ ಕೂಡ ಒಬ್ಬನಾಗಿದ್ದ.


ಇದನ್ನೂ ಓದಿ: Kalaburagi: ಮಾದಕ ವ್ಯಸನ ಬಿಡಿಸೋಕೆ ಪಾದಯಾತ್ರೆ ಹೊರಟ ಸ್ವಾಮೀಜಿ!


ತತ್ವಶಾಸ್ತ್ರದಲ್ಲಿ ಎಂಎ ಪದವಿ


ಮುಂದೆ ಆಶ್ರಮದಲ್ಲೇ ಚೆನ್ನಾಗಿ ಓದಿದ ಸಿದ್ದಗೊಂಡ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿ, ಕೊಲ್ಲಾಪುರದ ವಿಶ್ವವಿದ್ಯಾಲಯಲ್ಲಿ ತತ್ವಶಾಸ್ತ್ರದ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದರು.


ಸಿದ್ದೇಶ್ವರ ಸ್ವಾಮೀಜಿ


ಗುರುಗಳ ಪಂರಂಪರೆ ಮುಂದುವರಿಕೆ


ಮುಂದೆ ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬಂದಿದ್ದರು.


ಬದುಕು ಬದಲಿಸುವ ಪ್ರವಚನಗಳು


ಪ್ರಚವನಗಳ ಮೂಲಕ ಪ್ರಸಿದ್ಧಿ


ಸಿದ್ದೇಶ್ವರ ಶ್ರೀಗಳು ಉಪನಿಷತ್ತುಗಳು, ಭಗವದ್ಗೀತೆ, ಯೋಗಸೂತ್ರ, ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ಸಾವಿರಾರು ಪ್ರವಚನ ಮಾಡಿದ್ದಾರೆ. ತಾವು ಗುರುಗಳಿಂದ ಕಲಿತ ಜ್ಞಾನವನ್ನು ಬಳಸಿಕೊಂಡು ಬೋಧಪ್ರದ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದು ಅವರ ವೈಶಿಷ್ಟ್ಯವಾಗಿದೆ.


ಇದನ್ನೂ ಓದಿ: Hanuman Temple: ಎಳನೀರು ಪ್ರಿಯ ಈ ಹನುಮ! ಸೀಯಾಳ ಅಭಿಷೇಕ ಮಾಡಿಸಿದ್ರೆ ಇಷ್ಟಾರ್ಥ ಪ್ರಾಪ್ತಿ


ಸಿದ್ದೇಶ್ವರ ಶ್ರೀಗಳು ಇನ್ನು ನೆನಪು ಮಾತ್ರ


ಪ್ರಪಂಚದಾದ್ಯಂತ ಪ್ರವಚನ


ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕವೇ ಅದೆಷ್ಟೋ ಜನರ ಬದುಕು ಬದಲಿಸಿದ್ದಾರೆ. ಅವರ ಉಪನ್ಯಾಸ ಸರಣಿಯ "ಬದುಕುವದು ಹೇಗೆ," ನಾವು ಹೇಗೆ ಬದುಕಬೇಕು / ದಾರಿ ಮಾಡಿಕೊಳ್ಳಬೇಕು "ಲಕ್ಷಾಂತರ ಭಾರತೀಯರನ್ನು ಬದಲಾಯಿಸಿದೆ.. ಸಿದ್ದೇಶ್ವರ ಸ್ವಾಮೀಜಿ ಅಲಮ ಪ್ರಭುನ ವಚನಗಳ ಮೇಲೆ ಅಧಿಕೃತ ಭಾಷಣಕಾರರಾಗಿದ್ದಾರೆ. ಸಿದ್ದೇಶ್ವರ ಸ್ವಾಮಿಜಿಯವರು ಸರಳವಾದ ಸ್ಪೂರ್ತಿದಾಯಕ ಜೀವನ ಶೈಲಿಯನ್ನು ಹೊಂದಿದ್ದಾರೆ. ಅಪಾರ ಭಕ್ತರು, ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಶ್ರೀಗಳು ಸರಳವಾಗಿಯೇ ಬದುಕಿದವರು. ಅವರ ಸರಳತೆಯೇ ಎಲ್ಲರಿಗೂ ಮಾದರಿ.

Published by:Annappa Achari
First published: