• Home
  • »
  • News
  • »
  • explained
  • »
  • Santro Ravi: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?

Santro Ravi: ಮಂಡ್ಯದಿಂದ ಓಡಿ ಬಂದ ಕಳ್ಳ ಗೋವಿಂದ! ಮಂಜುನಾಥ ಆಗಿದ್ದವ 'ಸ್ಯಾಂಟ್ರೋ ರವಿ' ಹೇಗಾದ?

ಹಣದ ಜೊತೆಗೆ ಸ್ಯಾಂಟ್ರೋ ರವಿ (ಕೆಪಿಸಿಸಿ ಟ್ವೀಟ್ ಮಾಡಿದ ಚಿತ್ರ)

ಹಣದ ಜೊತೆಗೆ ಸ್ಯಾಂಟ್ರೋ ರವಿ (ಕೆಪಿಸಿಸಿ ಟ್ವೀಟ್ ಮಾಡಿದ ಚಿತ್ರ)

ಸ್ಯಾಂಟ್ರೋ ರವಿ ವಿಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಮುಗಿಬಿದ್ದಿದ್ದು, ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಸ್ಯಾಂಟ್ರೋ ಬಿಸಿ ತುಪ್ಪವಾಗೋದ್ರಲ್ಲಿ ಡೌಟೇ ಇಲ್ಲ! ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದರಿಂದ ʼಸ್ಯಾಂಟ್ರೋ ರವಿʼ ಎಂಬ ಹೆಸರು ಬಂತು. ಹಾಗಾದ್ರೆ ಈತನ ಹಿನ್ನೆಲೆ ಏನು?

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಸದ್ಯ ಕರ್ನಾಟಕ ರಾಜ್ಯ ರಾಜಕೀಯದಲ್ಲಿ (Karnataka State Politics) ಸ್ಯಾಂಟ್ರೋ ರವಿಯದ್ದೇ (Santro Ravi) ಸುದ್ದಿ! ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ ಸ್ಯಾಂಟ್ರೋ, ಆಡಳಿತಾರೂಢ ಬಿಜೆಪಿಗೆ (BJP) ಮುಜುಗರ ತರುತ್ತಿದ್ದಾನೆ. ಈಗ ಕೆಲ ತಿಂಗಳ ಹಿಂದಷ್ಟೇ ರೌಡಿ ಶೀಟರ್‌ಗಳು (Rowdy Sheeters) ಬಿಜೆಪಿ ಸೇರುತ್ತಿದ್ದಾರೆ ಎಂಬ ವಿಚಾರ ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು. ಬೆತ್ತನಗೆರೆ ಶಂಕರ (Bettanagere Shankar), ಸೈಲೆಂಟ್ ಸುನೀಲ (Silent Sunil), ಫೈಟರ್ ರವಿ (Fighter Ravi) ಸೇರಿದಂತೆ ಕೆಲವು ಪಾತಕಿಗಳು ಬಿಜೆಪಿ ಸೇರುವ ವಿಚಾರಕ್ಕೆ ಕಾಂಗ್ರೆಸ್ (Congress), ಜೆಡಿಎಸ್ (JDS) ಸೇರಿದಂತೆ ವಿಪಕ್ಷಗಳು ಬಿಜೆಪಿ ಮೇಲೆ ಮುಗಿ ಬಿದ್ದಿದ್ದವು. ಇದೀಗ ಸ್ಯಾಂಟ್ರೋ ರವಿ ವಿಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಮುಗಿ ಬಿದ್ದಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Assembly Election) ಬಿಜೆಪಿ ಪಾಲಿಗೆ ಸ್ಯಾಂಟ್ರೋ ಬಿಸಿ ತುಪ್ಪವಾಗೋದ್ರಲ್ಲಿ ಡೌಟೇ ಇಲ್ಲ! ಹಾಗಾದ್ರೆ ಯಾರೀತ ಸ್ಯಾಂಟ್ರೋ ರವಿ? ಇವನ ಹಿನ್ನೆಲೆ ಏನು? ವಿಪಕ್ಷಗಳು ಆರೋಪಿಸುತ್ತಿರುವಂತೆ ಬಿಜೆಪಿಗೂ, ಈತನಿಗೂ ಏನು ಸಂಬಂಧ? ಇಲ್ಲಿದೆ ನೋಡಿ ಸ್ಯಾಂಟ್ರೋ ರವಿಯ ಕರಾಳ ಕಹಾನಿ…


ಯಾರು ಈ ಸ್ಯಾಂಟ್ರೋ ರವಿ?


ಸ್ಯಾಂಟ್ರೋ ರವಿ ಅಸಲಿ ಹೆಸರು ರವಿಯೇ ಅಲ್ಲ. ಆತನ ನಿಜವಾದ ಹೆಸರು ಮಂಜುನಾಥ್ ಕೆಎಸ್. ಸದ್ಯ 53 ವರ್ಷದ ಈ ವ್ಯಕ್ತಿ ಕರ್ನಾಟಕದ ಮಂಡ್ಯ ಮೂಲದವನು. ಅವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ತಂದೆ ಅಬಕಾರಿ ಇಲಾಖೆಯಲ್ಲಿ ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಯಾಗಿದ್ದರು. ಅಬಕಾರಿ ಇಲಾಖೆ ಇನ್ಸ್‌ಪೆಕ್ಟರ್ ಆಗಿದ್ದ ತಂದೆ ಶಿಸ್ತಿನಲ್ಲಿ ಬೆಳೆಸಿದ್ದರೆ, ಮಂಜುನಾಥ್ ಆಗಲೇ ದಾರಿ ತಪ್ಪಿದ್ದ ಅಂತಾರೆ ಹತ್ತಿರದಿಂದ ಬಲ್ಲವರು.ಚಿಕ್ಕಂದಿನಲ್ಲೇ ಅಡ್ಡದಾರಿ, ರೌಡಿಗಳ ಸಂಪರ್ಕ


ತಂದೆಯ ಮರಣದ ನಂತರ ಮಂಜುನಾಥ್ ಅಡ್ಡದಾರಿ ಹಿಡಿದಿದ್ದನಂತೆ. ಮನೆಯಲ್ಲಿದ್ದ ತಾಯಿ ಹಾಗೂ ಸಹೋದರರಿಗೆ ವಿಪರೀತ ತೊಂದರೆ ನೀಡುತ್ತಿದ್ದನಂತೆ. ಯೌವ್ವನದ ದಿನಗಳಲ್ಲೇ ಸ್ಥಳೀಯ ಪುಡಿರೌಡಿಗಳ ಜೊತೆ ಸ್ನೇಹವನ್ನೂ ಸಂಪಾದಿಸಿದ್ದ ಮಂಜುನಾಥ್, ಆಗಲೇ ಹೆಸರು ಕೆಡಿಸಿಕೊಂಡಿದ್ದನಂತೆ.


ಇದನ್ನೂ ಓದಿ: Silent Sunil and Fighter Ravi: ಸೈಲೆಂಟ್‌ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?


ಅಪ್ರಾಪ್ತ ಬಾಲಕಿಯೊಂದಿಗೆ ಓಡಿ ಹೋಗಿ ಮದುವೆ


ಮಂಜುನಾಥ್ 1987ರಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಧರ್ಮಸ್ಥಳಕ್ಕೆ ಓಡಿ ಹೋಗಿ ಮದುವೆಯಾಗಿದ್ದನಂತೆ. ಈ ವೇಳೆ ಪೊಲೀಸರೊಂದಿಗೆ ಮೊದಲ ಮುಖಾಮುಖಿಯಾಗಿದ್ದ. ಆಗಿನ ಪೊಲೀಸ್ ಕಮಿಷನರ್ ಕಸ್ತೂರಿ ರಂಗನ್ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮದುವೆಯಾಗಿದ್ದಕ್ಕಾಗಿ ಮಂಜುನಾಥನನ್ನು ಬಂಧಿಸಿದ್ದರು.


ಜೈಲಿನಿಂದಲೇ ಪರಾರಿಯಾಗಿದ್ದ ಖದೀಮ


ಈ ವೇಳೆ ಜೈಲಿನಲ್ಲಿದ್ದಾಗ ಅನಾರೋಗ್ಯದ ನೆಪ ಹೇಳಿದ್ದ. ನಂತರ ಪೊಲೀಸರು ಮೈಸೂರಿನ ಕೆಆರ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ  ಈತ ಅಲ್ಲಿಂದ ಪರಾರಿಯಾಗಿದ್ದ. ಹೀಗಾಗಿ ಬಂಧನದಿಂದ ತಪ್ಪಿಸಿಕೊಂಡಿದ್ದಕ್ಕಾಗಿ ಆತನ ವಿರುದ್ಧ ಹೊಸ ಪ್ರಕರಣವನ್ನು ದಾಖಲಿಸಲಾಗಿತ್ತು.


ಸಮಾಜಸೇವೆಯ ಪೋಸ್


ಆದಾದ ಬಳಿಕ ಮಂಜುನಾಥ್ ತನ್ನ ವರಸೆಯನ್ನೇ ಬದಲಿಸಿಕೊಂಡು, ಸಮಾಜ ಸೇವೆ ಪೋಸ್ ಕೊಡೋದಕ್ಕೆ ಶುರು ಮಾಡಿದ. ಬುಡಕಟ್ಟು ಸಮುದಾಯದ ಜನರೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದರು, ಮಹಿಳೆಯರಿಗೆ ಉದ್ಯೋಗದ ಭರವಸೆ ನೀಡಿ, ಮೋಸ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.


2000ನೇ ಇಸವಿಯಿಂದಲೇ ಪಿಂಪ್ ದಂಧೆ


ರವಿ ಅಲಿಯಾಸ್ ಮಂಜುನಾಥ್ 2000ನೇ ಇಸ್ವಿಯಿಂದಲೇ ಪಿಂಪ್ ದಂಧೆ ಮಾಡುತ್ತಿದ್ದ. ಈ ವೇಳೆ ಮಂಡ್ಯ ಪೊಲೀಸರು ಕೊಟ್ಟ ಏಟಿಗೆ ಮಂಡ್ಯ ಬಿಟ್ಟು ಮೈಸೂರು ಸೇರಿಕೊಂಡ. ಮಹಿಳೆಯರ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ದಂಧೆಗೆ ತಳ್ಳುವ ಸ್ಯಾಂಟ್ರೋ ರವಿಯ ನೀಚ ಚಟುವಟಿಕೆಗಳನ್ನು ಸಕ್ರಿಯವಾಗಿ ಮುಂದುವರಿಸುತ್ತಿರುವ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಎಂಬ ಎನ್‌ಜಿಒ ಪ್ರಕಾರ, 2010 ರಿಂದ 2014ರ ನಡುವೆ ಮೈಸೂರು ಪ್ರದೇಶದಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ ಅಂತ ಇಂಗ್ಲೀಷ್ ವೆಬ್‌ಸೈಟ್ ಒಂದು ವರದಿ ಮಾಡಿದೆ.


ಮಂಜುನಾಥ್ ಸ್ಯಾಂಟ್ರೋ ರವಿಯಾಗಿದ್ದು ಹೇಗೆ?


ಮೈಸೂರಿನಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಮಂಜುನಾಥ್, ಬಳಿಕ ಸರಸ್ವತಿಪುರಂ ಸುತ್ತಮುತ್ತ ಪಿಂಪ್ ಕೆಲಸ ಮಾಡುತ್ತಿದ್ದ. ಸ್ಯಾಂಟ್ರೋ ಕಾರಿನಲ್ಲೇ ಹುಡುಗಿಯರನ್ನು ಕರೆತಂದು ಡೀಲ್ ಕುದುರಿಸುತ್ತಿದ್ದ. ಸ್ಯಾಂಟ್ರೋ ಕಾರಲ್ಲೇ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದರಿಂದ ʼಸ್ಯಾಂಟ್ರೋ ರವಿʼ ಎಂಬ ಹೆಸರು ಬಂತು. ಬಳಿಕ ಪಿಂಪ್ ರವಿ, ಸ್ಯಾಂಟ್ರೋ ರವಿ ಎಂದೇ ಫೇಮಸ್ ಆಗಿದ್ದ. ಆ ಸ್ಯಾಂಟ್ರೋ ಕಾರಿನಿಂದಲೇ ರವಿ ಅದೃಷ್ಟ ಖುಲಾಯಿಸಿ ರಾಜಕಾರಣಿಗಳ ಸ್ನೇಹ ಬೆಳೆಸಿಕೊಂಡ ಎನ್ನಲಾಗುತ್ತಿದೆ.


ರೇಡ್ ನಡೆದರೂ ತಪ್ಪಿಸಿಕೊಳ್ಳುತ್ತಿದ್ದ ಚಾಲಾಕಿ!


ರವಿ ಸಾಮಾನ್ಯವಾಗಿ ಸ್ಯಾಂಟ್ರೋ ಕಾರಲ್ಲೇ ದಂಧೆ ಮಾಡುತ್ತಿದ್ದ. ಆತ ಅದೆಷ್ಟು ಪಂಟರ್ ಆಗಿದ್ದ ಅಂದರೆ ಪೊಲೀಸರು ದಾಳಿ ನಡೆಸಿದಾಗಲೆಲ್ಲ ಆತ ತಪ್ಪಿಸಿಕೊಳ್ಳುತ್ತಿದ್ದ. ಕೆಲಸ ಕೊಡಿಸುವ ಭರವಸೆ ನೀಡಿ ಬುಡಕಟ್ಟು ಮಹಿಳೆಯರನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಹೀಗಾಗಿಯೇ ಆತ ಮಾನವ ಕಳ್ಳಸಾಗಾಣಿಕೆಯಲ್ಲಿ ಸ್ಯಾಂಟ್ರೋ ರವಿ ಎಂದೇ ಜನಜನಿತ ಎಂದು ಒಡನಾಡಿ ಸೇವಾ ಸಂಸ್ಥೆಯ ಸಂಸ್ಥಾಪಕ ಎಂ.ಎಲ್. ಪರಶುರಾಮ್ ಹೇಳಿದ್ದಾಗಿ ವರದಿಯಾಗಿದೆ.


ಜೈಲಿನಿಂದ ಬಂದ ಮೇಲೂ ಮತ್ತೆ ಮಾಂಸದ ದಂಧೆ!


ರವಿ ತನ್ನ ಅನೈತಿಕ ಚಟುವಟಿಕೆಗಳನ್ನು ಮುಂದುವರೆಸಿದ್ದರಿಂದ ಆತನ ಮೇಲೆ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇದರಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇಡಲಾಗಿತ್ತು. ಆದರೆ ಮತ್ತೆ ಜಾಮೀನಿನ ಮೇಲೆ ಹೊರಬಂದು ತನ್ನ ಅನೈತಿಕ ಕಳ್ಳಸಾಗಣೆ ದಂಧೆಯನ್ನು ಮುಂದುವರೆಸಿದ ಎಂದು ಪರಶುರಾಮ್ ಹೇಳಿದ್ದಾರೆ.


8 ವಕೀಲರನ್ನಿಟ್ಟುಕೊಂಡಿದ್ದ ರವಿ


ಈತನ ವಿರುದ್ಧ ಈತನ ಪತ್ನಿ ಸೇರಿದಂತೆ ಹಲವು ಮಹಿಳೆಯರು ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ. ಆದರೆ ಈತ ಅದರಿಂದಲೂ ಪಾರಾಗಿದ್ದ. ನ್ಯಾಯಾಲಯಗಳಲ್ಲಿ ತನ್ನ ಪ್ರಕರಣಗಳನ್ನು ನೋಡಿಕೊಳ್ಳುವ ಸಲುವಾಗಿ ಸುಮಾರು ಎಂಟು ವಕೀಲರನ್ನು ನೇಮಿಸಿಕೊಂಡಿದ್ದ ಎನ್ನಲಾಗುತ್ತಿದೆ. ಇದಾದ ಬಳಿಕ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಹಲವು ಪ್ರಭಾವಿ ರಾಜಕಾರಣಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.


ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕೈವಾಡ


ಇದಾದ ಬಳಿಕ ರವಿ ತನ್ನ ಪ್ರಭಾವ ಬಳಸಿ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲೂ ಮೂಗು ತೂರಿಸುತ್ತಿದ್ದ. ಮತ್ತೊಂದೆಡೆ ರಾಜಕಾರಣಿಗಳು, ಅವರ ಸ್ನೇಹಿತರು, ಮಕ್ಕಳ ಜೊತೆಗೆ ಸಂಪರ್ಕ ಸಾಧಿಸಿ, ತನ್ನ ಪ್ರಭಾವ ಹೆಚ್ಚಿಸಿಕೊಂಡ.


ಬಿಜೆಪಿಗೆ ಮುಜುಗರ ತಂದ ಸ್ಯಾಂಟ್ರೋ ರವಿ


ಇದೀಗ ವಿಧಾನಸೌಧದ ಬಳಿ ಸಿಕ್ಕಿದ 10.5 ಲಕ್ಷ ಹಣದಿಂದ ಸ್ಯಾಂಟ್ರೋ ರವಿ ಮತ್ತೆ ಚರ್ಚೆಗೆ ಬಂದಿದ್ದಾನೆ. ಬಿಜೆಪಿಯ ಹಲವು ಪ್ರಭಾವಿಗಳ ಜೊತೆ ಆತನ ಸಂಪರ್ಕ ಇದೆ ಅಂತ ಕಾಂಗ್ರೆಸ್, ಜೆಡಿಎಸ್ ನಾಯಕರು ಫೋಟೋ, ವಿಡಿಯೋ, ಆಡಿಯೋ ರಿಲೀಸ್ ಮಾಡುತ್ತಿದ್ದಾರೆ. ಈತ ಸರ್ಕಾರದ ಅಧೀನದಲ್ಲಿರುವ ಕುಮಾರಕೃಪಾದಲ್ಲೇ ಇದ್ದ ಎನ್ನಲಾಗುತ್ತಿದೆ.


ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!


ಸ್ಯಾಂಟ್ರೋ ರವಿಗಾಗಿ ಶೋಧ


ಸ್ಯಾಂಟ್ರೋ ರವಿ ಬಂಧನಕ್ಕೆ ನಗರ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ. ರವಿ ವಿರುದ್ಧ ವರದಕ್ಷಿಣೆ ಕಿರುಕುಳ, ವಂಚನೆ, ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ದಾಖಲಾಗಿ 5 ದಿನಗಳು ಕಳೆದರೂ ಸ್ಯಾಂಟ್ರೋ ರವಿ ತಲೆಮರೆಸಿಕೊಂಡಿದ್ದಾನೆ.

Published by:Annappa Achari
First published: