Explained: ಯಾರು ಈ ಎನ್​ಸಿಬಿ ಅಧಿಕಾರಿ ವಾಂಖೆಡೆ? ಟಫ್ ಕಾಪ್ ಟ್ರ್ಯಾಕ್ ರೆಕಾರ್ಡ್ ಅದ್ಭುತ!

Who is Sameer Wankhede: 2010ರಲ್ಲಿ ವಾಂಖೆಡೆಯನ್ನು ಮಹಾರಾಷ್ಟ್ರ ಸೇವಾ ತೆರಿಗೆ ಇಲಾಖೆಗೆ ವರ್ಗಾಯಿಸಿದಾಗ, ತೆರಿಗೆ ತಪ್ಪಿಸಿಕೊಂಡಿದ್ದ 200 ಸೆಲೆಬ್ರಿಟಿಗಳು ಸೇರಿದಂತೆ 2,500 ಜನರನ್ನು ಪತ್ತೆಹಚ್ಚಿ ಎರಡು ವರ್ಷಗಳಲ್ಲಿ 87 ಕೋಟಿ ಆದಾಯವನ್ನು ರಾಜ್ಯದ ಬೊಕ್ಕಸಕ್ಕೆ ಸೇರುವಂತೆ ಮಾಡಿದ್ದರು. ಇದು ಮುಂಬೈನಲ್ಲಿ ದಾಖಲೆ ಎನಿಸಿಕೊಂಡಿತು.

ಸಮೀರ್ ವಾಂಖೆಡೆ

ಸಮೀರ್ ವಾಂಖೆಡೆ

  • Share this:
Drug Case: ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಪ್ರಕರಣದಿಂದ ಡ್ರಗ್ಸ್ ಆ್ಯಂಗಲ್ (Drugs Angle) ಎಂದು ಕರೆಯಲ್ಪಡುವ ತನಿಖೆ ಪ್ರಾರಂಭಿಸಿದಾಗಿನಿಂದ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (NCB ) ಗಮನ ಸೆಳೆಯುತ್ತಿದೆ. ಈ ಕಾರ್ಯಾಚರಣೆಯು ಎನ್‍ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನೇತೃತ್ವದಲ್ಲಿ ನಡೆಯಿತು. ಮುಂಬೈ ನಗರವನ್ನು (Mumbai) ಮುಕ್ತಗೊಳಿಸಲು ನಿರ್ಭೀತಿಯಿಂದ ಮಾದಕ ದ್ರವ್ಯ ಜಾಲಗಳು ಹಾಗೂ ಅದರ ಹಿಂದಿನ ಕಾರಣಕರ್ತರನ್ನು ಬಗ್ಗು ಬಡಿಯಲು ಅಡಿ ಇಟ್ಟಿದ್ದಾರೆ. 40 ವರ್ಷದ ಸಮೀರ್ ವಾಂಖೆಡೆ (Sameer Wankhede) ಮೂಲತಃ ಮುಂಬೈನವರು. ಅವರ ತಂದೆ ಪೊಲೀಸ್ ಅಧಿಕಾರಿ. ಇವರು ಮರಾಠಿ ನಟಿ ಕ್ರಾಂತಿ ರೆಡ್ಕರ್‌ರನ್ನು 2017ರಲ್ಲಿ ವಿವಾಹವಾದರು.

2004ರ ಬ್ಯಾಚ್ ಇಂಡಿಯನ್ ರೆವಿನ್ಯೂ ಸರ್ವೀಸ್ (IRS) ಅಧಿಕಾರಿಯಾದ ವಾಂಖೆಡೆ ಎನ್‍ಸಿಬಿಯಲ್ಲಿ ಸೇವೆ ಸಲ್ಲಿಸುವ ಮುನ್ನ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಮತ್ತು ರಾಷ್ಟ್ರೀಯ ತನಿಖಾ ಏಜೆನ್ಸಿಯ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಜಂಟಿ ಆಯುಕ್ತರಾಗಿಯೂ ಕೆಲಸ ಮಾಡಿದರು. ತಮ್ಮ ವೃತ್ತಿಜೀವನದ ಅವಧಿಯಲ್ಲಿ, ತೆರಿಗೆ ಕಟ್ಟದೇ ಸರ್ಕಾರಕ್ಕೆ ವಂಚಿಸುತ್ತಿದ್ದ ಸೆಲೆಬ್ರಿಟಿಗಳನ್ನು ಪತ್ತೆಹಚ್ಚಿ ತೆರಿಗೆ ಪಾವತಿಸುವಂತೆಯೂ ಮಾಡಿದ್ದಾರೆ. ವಾಂಖೆಡೆ ಅವರೊಂದಿಗೆ ಕೆಲಸ ಮಾಡಿದವರು ಇವರೊಬ್ಬರು ನಿರ್ಭೀತ, ಶಿಸ್ತುಬದ್ಧ ವ್ಯಕ್ತಿ ಎಂದು ವಿವರಿಸುತ್ತಾರೆ.

2010ರಲ್ಲಿ ವಾಂಖೆಡೆಯನ್ನು ಮಹಾರಾಷ್ಟ್ರ ಸೇವಾ ತೆರಿಗೆ ಇಲಾಖೆಗೆ ವರ್ಗಾಯಿಸಿದಾಗ, ತೆರಿಗೆ ತಪ್ಪಿಸಿಕೊಂಡಿದ್ದ 200 ಸೆಲೆಬ್ರಿಟಿಗಳು ಸೇರಿದಂತೆ 2,500 ಜನರನ್ನು ಪತ್ತೆಹಚ್ಚಿ ಎರಡು ವರ್ಷಗಳಲ್ಲಿ 87 ಕೋಟಿ ಆದಾಯವನ್ನು ರಾಜ್ಯದ ಬೊಕ್ಕಸಕ್ಕೆ ಸೇರುವಂತೆ ಮಾಡಿದ್ದರು. ಇದು ಮುಂಬೈನಲ್ಲಿ ದಾಖಲೆ ಎನಿಸಿಕೊಂಡಿತು.

ಇದನ್ನೂ ಓದಿ: Drugs Mafia| ಡ್ರಗ್ಸ್​ ಮಾಫಿಯಾ ವಿರುದ್ಧ ಮುಂದುವರೆದ ದಾಳಿ; ಮತ್ತೆ ಮೂವರ ಬಂಧನ, 30 ಲಕ್ಷ ರೂ. ಮೌಲ್ಯದ ಮಾದಕವಸ್ತು ವಶ!

ವಿಶ್ವಕಪ್ ಟ್ರೋಫಿಯನ್ನೂ ಬಿಟ್ಟಿರಲಿಲ್ಲ

2011ರಲ್ಲಿ, ಕಸ್ಟಮ್ಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ಸಮೀರ್ ವಾಂಖೆಡೆ ಕಸ್ಟಮ್ ಡ್ಯೂಟಿ ಪಾವತಿಸಿದ ನಂತರವೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ರಿಕೆಟ್ ವಿಶ್ವಕಪ್ ಟ್ರೋಫಿಯನ್ನು ಬಿಡುಗಡೆಗೊಳಿಸಲಾಯಿತು.

2013ರಲ್ಲಿ ಮುಂಬೈ ವಿಮಾನ ನಿಲ್ದಾಣದಲ್ಲಿ ಗಾಯಕ ಮಿಕಾ ಸಿಂಗ್ (Mika Singh) ಅವರನ್ನು ವಿದೇಶಿ ಕರೆನ್ಸಿಯೊಂದಿಗೆ ಸೆರೆಹಿಡಿದಿದ್ದರು. ಅನುರಾಗ್ ಕಶ್ಯಪ್, ವಿವೇಕ್ ಒಬೆರಾಯ್ ಮತ್ತು ರಾಮ್ ಗೋಪಾಲ್ ವರ್ಮಾ ಸೇರಿದಂತೆ ಅನೇಕ ಬಾಲಿವುಡ್ ತಾರೆಯರ ಒಡೆತನದ ಆಸ್ತಿಗಳ ಮೇಲೆ ಅಧಿಕಾರಿ ದಾಳಿ ನಡೆಸಿದ್ದಾರೆ.

2 ವರ್ಷ 17,000 ಕೋಟಿ ಬೆಲೆಯ ಡ್ರಗ್ಸ್

ಮುಂಬೈನಿಂದ ಮಾದಕದ್ರವ್ಯದ ಭೀತಿಯನ್ನು ಕಿತ್ತುಹಾಕುವ ವಿಸ್ತೃತ ತನಿಖೆಯ ಭಾಗವಾಗಿ, ವಾಂಖೆಡೆ ಮತ್ತು ಅವರ ತಂಡವು ಕಳೆದ ಎರಡು ವರ್ಷಗಳಲ್ಲಿ 17,000 ಕೋಟಿ ರೂಪಾಯಿ ಮೌಲ್ಯದ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದೆ.

ಇತ್ತೀಚೆಗೆ, ವಾಂಖೆಡೆ ತಂಡವು ನಟ ಅರ್ಜುನ್ ರಾಂಪಾಲ್ ಗೆಳತಿಯ ಸಹೋದರನನ್ನು ಗೋವಾದಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿತ್ತು. ಕಳೆದ ವರ್ಷ, ನವೆಂಬರ್ 22, 2020 ರಂದು, 60 ಆಪಾದಿತ ಡ್ರಗ್ ಪೆಡ್ಲರ್‌ಗಳ ಗುಂಪು ವಾಂಖೆಡೆ ಸೇರಿದಂತೆ ಕೆಲವು ಅಧಿಕಾರಿಗಳ ಮೇಲೆ ದಾಳಿ ಮಾಡಿತ್ತು. ಐದು ಎನ್‍ಸಿಬಿ ಅಧಿಕಾರಿಗಳು ಗಾಯಗೊಂಡರು. ದಾಳಿಯಲ್ಲಿ ಇಬ್ಬರು ಸಹೋದ್ಯೋಗಿಗಳು ಗಂಭೀರವಾಗಿ ಗಾಯಗೊಂಡಿದ್ದರೂ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದರು.
Published by:Soumya KN
First published: