• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?

Explained: ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಯಾರು? ಅವರು ಮಾಡಿರುವ ವಿವಾದವೇನು?

ನೂಪುರ್ ಶರ್ಮಾ

ನೂಪುರ್ ಶರ್ಮಾ

ಪ್ರವಾದಿ ವಿರುದ್ಧ ಬಿಜೆಪಿಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಹಾಗೂ ನವೀನ್ ಕುಮಾರ್ ಜಿಂದಾಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಹಾಗಾದರೆ ಈ ನೂಪುರ್ ಶರ್ಮಾ ಯಾರು? ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದೇಕೆ? ಅದರಿಂದ ಏನೆಲ್ಲಾ ಆಗಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ…

ಮುಂದೆ ಓದಿ ...
  • Share this:

ಪ್ರವಾದಿ ಮಹಮ್ಮದ್ ಪೈಗಂಬರ್ (Prophet Mohammed Paigambar) ಅಂದ್ರೆ ಮುಸ್ಲಿಮರ (Muslim) ಪಾಲಿಗೆ ಪರಮ ಪೂಜ್ಯರು. ಇಸ್ಲಾಂ (Islam) ಧರ್ಮದ ಪ್ರಕಾರ ಇವರು ಅಲ್ಲಾಹ್‌ನ (Allah) ಕೊನೆಯ ಪ್ರವಾದಿ. ಜೀವನದುದ್ದಕ್ಕೂ ಪವಾಡಗಳನ್ನು (Miracle) ಸೃಷ್ಟಿಸಿದ ಪೈಗಂಬರರು ತಮ್ಮ 40ನೇ ವರ್ಷದಲ್ಲಿ ಪ್ರವಾದಿತ್ವ ಪಡೆದರು. ನಂತರ 23 ವರ್ಷಗಳಲ್ಲಿ ಇಸ್ಲಾಮ್ ಧರ್ಮವನ್ನು ಸಂಸ್ಥಾಪಿಸುತ್ತಾರೆ. 10 ವರ್ಷ ಮಕ್ಕಾದಲ್ಲಿ ಹಾಗೂ 13 ವರ್ಷ ಮದೀನಾದಲ್ಲಿ ಅನೇಕ ಸಂಕಷ್ಟಗಳನ್ನು ಸಹಿಸಿ ಅಲ್ಲಾಹ್‌ನ ಸಂಪ್ರೀತಿಗಾಗಿ ಅಂದಿನ ಕೆಡುಕುಗಳ ವಿರುದ್ಡ ಹೋರಾಡಿ ಇಸ್ಲಾಮನ್ನು ಸಂಸ್ಥಾಪಿಸುತ್ತಾರೆ. ಇಂತಹ ಪ್ರವಾದಿ ವಿರುದ್ಧ ಬಿಜೆಪಿಯ (BJP) ವಕ್ತಾರೆಯಾಗಿದ್ದ (Spoke Person) ನೂಪುರ್ ಶರ್ಮಾ (Nupur Sharma) ಹಾಗೂ ನವೀನ್ ಕುಮಾರ್ ಜಿಂದಾಲ್ (Navin Kumar Jindal) ವಿವಾದಾತ್ಮಕ ಹೇಳಿಕೆ (Controversial Statement) ನೀಡಿದ್ದರು ಎನ್ನಲಾಗಿದೆ. ಹಾಗಾದರೆ ಈ ನೂಪುರ್ ಶರ್ಮಾ ಯಾರು? ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದೇಕೆ? ಅದರಿಂದ ಏನೆಲ್ಲಾ ಆಗಿದೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ…


ನೂಪುರ್ ಶರ್ಮಾ ಯಾರು?


ನೂಪುರ್ ಶರ್ಮಾ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಮಾಜಿ ರಾಷ್ಟ್ರೀಯ ವಕ್ತಾರರು. ಸುದ್ದಿ ವಾಹಿನಿಯೊಂದರ ಚರ್ಚೆಯ ಸಂದರ್ಭದಲ್ಲಿ ಪ್ರವಾದಿ ಮೊಹಮ್ಮದ್ ಕುರಿತು ಮಾಡಿದ ಟೀಕೆಗಳಿಗಾಗಿ ಅವರನ್ನು ಇತ್ತೀಚಿಗಷ್ಟೇ ಪಕ್ಷದಿಂದ ಅಮಾನತುಗೊಳಿಸಲಾಯಿತು. ಅವರು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ನಲ್ಲಿ ತೊಡಗಿಸಿಕೊಂಡರು. 2008ರಲ್ಲಿ ಅವರು ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು. ನೂಪುರ್ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.


ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿದ್ದ ನೂಪುರ್


ಬಿಜೆಪಿಯ ದೆಹಲಿ ಘಟಕದ ವಕ್ತಾರರಾಗುವ ಮೊದಲು, ನೂಪುರ್ ಶರ್ಮಾ ಹಲವು ವರ್ಷಗಳ ಕಾಲ ಪಕ್ಷದ ಯುವ ಘಟಕದೊಂದಿಗೆ ಕೆಲಸ ಮಾಡಿದರು. 2015 ರಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಲು ಅವರಿಗೆ ಟಿಕೆಟ್ ನೀಡಿದಾಗ ದೇಶಾದ್ಯಂತ ಸುದ್ದಿಯಾದರು. ಆದರೆ ಚುನಾವಣೆಯಲ್ಲಿ ನೂಪುರ್ ಶರ್ಮಾ ಅವರು 31,000 ಮತಗಳ ಅಂತರದಿಂದ ಸೋತರೂ. ಆದರೆ ಇಲ್ಲಿಂದಲೇ ಅವರ ರಾಜಕೀಯ ಜೀವನ ಶುರುವಾಯ್ತು.


ಇದನ್ನೂ ಓದಿ: Nupur Sharma: ಪ್ರವಾದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಕೇಸ್‌ನಲ್ಲಿ ನೂಪುರ್‌ಗೆ ಸಮನ್ಸ್ , ಅತ್ತ ಬಿಜೆಪಿ ಮಾಜಿ ವಕ್ತಾರೆಯಿಂದಲೂ ದೂರು


2020ರಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರೆ ಹುದ್ದೆ


2020ರಲ್ಲಿ, ಕಾನೂನು ಸಮಸ್ಯೆಗಳು ಮತ್ತು ದ್ವಿಭಾಷಾ ಕೌಶಲ್ಯಗಳ ಕುರಿತು ಅವರ ಪರಿಣತಿಯನ್ನು ನೀಡಲಾಗಿದ್ದು, ಅವರನ್ನು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಬಿಜೆಪಿಯ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಿಸಲಾಯಿತು.


ಪ್ರವಾದಿ ಬಗ್ಗೆ ನೂಪುರ್ ಶರ್ಮಾ ಹೇಳಿದ್ದೇನು?


ಕೆಲ ದಿನಗಳ ಹಿಂದಷ್ಟೇ ಪ್ರವಾದಿ ಮಹಮ್ಮದ್ ಬಗ್ಗೆ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅವರ ಹೇಳಿಕೆಯಿಂದ ಭಾರೀ ವಿವಾದವೇ ಉಂಟಾಯಿತು.


ವಿದೇಶಗಳಲ್ಲೂ ಭಾರೀ ವಿರೋಧ


ನೂಪುರ್ ಶರ್ಮಾ ಹೇಳಿಕೆ ವಿರುದ್ಧ ಮುಸ್ಲಿಂ ರಾಷ್ಟ್ರಗಳು ತಿರುಗಿ ಬಿದ್ದಿವೆ. ಸೌದಿ ಅರೇಬಿಯಾ, ಬಹರೈನ್‌, ಅರಬ್‌ ಸಂಯುಕ್ತ ಸಂಸ್ಥಾನ (ಯುಎಇ), ಇಂಡೊನೇಷ್ಯಾ, ಜೋರ್ಡನ್‌ ಮತ್ತು ಅಫ್ಗಾನಿಸ್ತಾನ ಸೇರಿದಂತೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.


ಭಾರತದ ವಸ್ತುಗಳಿಗೆ ಬಹಿಷ್ಕಾರ


ಈ ಬಗ್ಗೆ ಭಾರತ ಕ್ಷಮೆ ಯಾಚಿಸಬೇಕು ಅಂತ ಮುಸ್ಲಿಂ ರಾಷ್ಟ್ರಗಳು ಪಟ್ಟು ಹಿಡಿದಿವೆ. ಇಸ್ಲಾಂ ಧರ್ಮದ ಸಂಕೇತದ ವಿರುದ್ಧದ ಪೂರ್ವಗ್ರಹವನ್ನು ಶಾಶ್ವತವಾಗಿ ತಿರಸ್ಕರಿಸಲಾಗುವುದು. ಯಾವುದೇ ಧರ್ಮದ ವ್ಯಕ್ತಿ ಮತ್ತು ಸಂಕೇತಗಳ ವಿರುದ್ಧ ಪೂರ್ವಗ್ರಹ ಮೂಡಿಸುವ ಯಾವುದೇ ಕೃತ್ಯವನ್ನು ಶಾಶ್ವತವಾಗಿ ತಿರಸ್ಕರಿಸಲಾಗುವುದು’ ಎಂದು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು ಹೇಳಿದೆ.


ಕ್ಷಮೆ ಕೇಳಿದ ನೂಪುರ್ ಶರ್ಮಾ


ಇಷ್ಟೆಲ್ಲಾ ವಿವಾದವಾಗುತ್ತಿದ್ದಂತೆ ನೂಪುರ್ ಶರ್ಮಾ ಕ್ಷಮೆ ಕೇಳಿದ್ದಾರೆ. ನಾನು ನನ್ನ ಹೇಳಿಕೆ ಬಗ್ಗೆ ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ. ಆದರೆ ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿದ್ದು, ಸೂಕ್ತ ಭದ್ರತೆ ಒದಗಿಸಿ ಅಂತ ಮನವಿ ಮಾಡಿದ್ದಾರೆ.


ನೂಪುರ್ ವಿರುದ್ಧ ದೂರು


ನೂಪುರ್ ಶರ್ಮಾ ಅವರ ವಿರುದ್ಧ ಮಹಾರಾಷ್ಟ್ರದ ಮುಂಬ್ರಾ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ಪೊಲೀಸರು ಶರ್ಮಾ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದಾರೆ. ಈ ತಿಂಗಳ 22 ರಂದು ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.


ಇದನ್ನೂ ಓದಿ:  Explained: ಶಿಶಿಲದಲ್ಲಿ ಕಡಿಮೆಯಾಗ್ತಿದೆ ದೇವರ ಮೀನಿನ ಸಂಖ್ಯೆ! ಹತ್ತಿರದಲ್ಲಿದ್ದೇ ಹೊಂಚು ಹಾಕುವ ಕಳ್ಳ ಯಾರು ಗೊತ್ತಾ?


ಜೀವ ಬೆದರಿಕೆ ವಿರುದ್ಧ ದೂರು ದಾಖಲಿಸಿದ ನೂಪುರ್ ಶರ್ಮಾ


ಅತ್ತ ನೂಪುರ್ ಶರ್ಮಾ ಕೂಡ ಜೀವ ಬೆದರಿಕೆ ದೂರು ದಾಖಲಿಸಿದ್ದಾರೆ.  ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ನೂಪುರ್ ಶರ್ಮಾ, ನನಗೆ ನಿರಂತರವಾಗಿ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಹೀಗಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಸೂಕ್ತ ಭದ್ರತೆ ಕಲ್ಪಿಸುವಂತೆ ದೆಹಲಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. ನೂಪುರ್ ಶರ್ಮಾ ನೀಡಿರುವ ದೂರನ್ನು ಸ್ವೀಕರಿಸಿರುವ ದೆಹಲಿ ಪೊಲೀಸರು, ಈ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

First published: