ಸದ್ಯ ಎಲ್ಲೆಲ್ಲೂ ‘ಕೆಜಿಎಫ್’ನದ್ದೇ ಹವಾ… ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ (Cinema) ವಿಶ್ವ ಮಟ್ಟದಲ್ಲಿ ಹೆಸರು ಮಾಡಿ, ದಾಖಲೆ (Records) ಮೇಲೆ ದಾಖಲೆ ಮಾಡುತ್ತಾ, ಮುಂದೆ ಸಾಗುತ್ತಿದೆ. ಇತ್ತ ರಾಜ್ಯದಲ್ಲಿ ಮತ್ತೊಂದು ಕೆಜಿಎಫ್ ಸುದ್ದಿ ಮಾಡುತ್ತಿದೆ. ಅರೇ ಇದೇನು, ಆ ಕೆಜಿಎಫ್, ಈ ಕೆಜಿಎಫ್ ಅಂತ ಕನ್ಪ್ಯೂಸ್ ಆಗ್ಬೇಡಿ. ನಾವು ಹೇಳುತ್ತಿರುವುದು ಕೆಜಿಎಫ್ ಬಾಬು (KGF Babu) ಅವರ ಬಗ್ಗೆ. ಬಹುಶಃ ಹೆಸರು ನೀವು ಕೇಳಿಯೇ ಇರುತ್ತೀರಿ. ಕಳೆದ ಬಾರಿ ವಿಧಾನ ಪರಿಷತ್ ಎಲೆಕ್ಷನ್ನಲ್ಲಿ (Legislative Council Election) ಕಾಂಗ್ರೆಸ್ನಿಂದ (Congress) ಸ್ಪರ್ಧೆ ಮಾಡಿ, ಸೋತಿದ್ದ ಅಭ್ಯರ್ಥಿ ಇವರೇ. ತನ್ನ ಆಸ್ತಿ 1,741 ಕೋಟಿ (1741 Crore asset) ಅಂತ ಘೋಷಿಸಿಕೊಂಡು ದೇಶಾದ್ಯಂತ ಸುದ್ದಿ ಮಾಡಿದವರು ಇದೇ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು. ಬೆಂಗಳೂರಿನ (Bengaluru) ಖ್ಯಾತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಕೆಜಿಎಫ್ ಮೇಲೆ ಐಟಿ ಇಲಾಖೆ (IT Department) ಕಣ್ಣು ಬಿದ್ದಿದೆ. ಕೆಜಿಎಫ್ ಕುಬೇರನ ಕೋಟೆ ಹೊಕ್ಕಿರುವ ಆದಾಯ ತೆರಿಗೆ ಅಧಿಕಾರಿಗಳು ಚಿನ್ನ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಅಸಲಿಗೆ ಈ ಕೆಜಿಎಫ್ ಬಾಬು ಯಾರು? ಅವರ ಮೇಲಿನ ಆರೋಪಗಳೇನು? ಅವರಿಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದೇಕೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…
ಕೆಜಿಎಫ್ ಬಾಬುಗೆ ಬೆಳ್ಳಂಬೆಳಗ್ಗೆಯೇ ಐಟಿ ಶಾಕ್
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಉದ್ಯಮಿ ಕೆಜಿಎಫ್ ಬಾಬುಗೆ ಶಾಕ್ ಕೊಟ್ಟಿದ್ದಾರೆ. ಬೆಳ್ಳಂಬೆಳಗ್ಗೆಯೇ 6 ಕಾರುಗಳಲ್ಲಿ 3 ತಂಡವಾಗಿ ಬಂದಿರುವ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ಉದ್ಯಮಿ ಕೆಜಿಎಫ್ ಬಾಬು ನಿವಾಸ ಹಾಗೂ ಕಚೇರಿಗಳಲ್ಲಿ ದಾಳಿ ನಡೆಸಿದ್ದಾರೆ. ಪೊಲೀಸ್ ಹಾಗೂ ಸಿಆರ್ಪಿಎಫ್ ಭದ್ರತಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಬಾಬು ಅವರ ಆದಾಯ, ವ್ಯವಹಾರಕ್ಕೆ ಸಂಬಂಧಿಸಿದಂತೆ ಕಡತಗಳ ಪರಿಶೀಲನೆ ನಡೆಸ್ತಿದ್ದಾರೆ.
ಕೆಜಿಎಫ್ ಬಾಬು ಮೇಲಿರುವ ಆರೋಪಗಳೇನು?
ಕೆಜಿಎಫ್ ಬಾಬು ಅವರು ತಮ್ಮ ಆದಾಯ 1741 ಕೋಟಿ ರೂಪಾಯಿ ಅಂತ ಕಳೆದ ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದ ವೇಳೆ ಘೋಷಿಸಿಕೊಂಡಿದ್ದರು. ಆದರೆ ಆದಾಯ ತೆರಿಗೆಯಲ್ಲಿ ವ್ಯತ್ಯಯ ಆಗಿರುವ ಶಂಕೆ ವ್ಯಕ್ತವಾಗಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇಂದು ಐಟಿ ದಾಳಿ ನಡೆದಿದೆ.
ಇದನ್ನೂ ಓದಿ: IT Raid: ಕೆಜಿಎಫ್ ಬಾಬುಗೆ ಐಟಿ ಸಂಕಷ್ಟ! 1,741 ಕೋಟಿ ಕುಬೇರನ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ?
ಯಾರು ಈ ಕೆಜಿಎಫ್ ಬಾಬು?
ಯೂಸುಫ್ ಶರೀಫ್ ಬಾಬು ಅಲಿಯಾಸ್ ಕೆಜಿಎಫ್ ಬಾಬು ಮೂಲತಃ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್ ಫೀಲ್ಡ್ಸ್ ಅಂದರೆ ಕೆಜಿಎಫ್ನಲ್ಲಿ ಹುಟ್ಟಿ ಬೆಳೆದವರು. ಬಡತನದ ಕುಟುಂಬದರಲ್ಲಿ ಹುಟ್ಟಿದ ಬಾಬು ತುಂಬಾ ಕಷ್ಟದಿಂದಲೇ ಬೆಳೆದವರು.
ಬಡ ತಂದೆಗೆ 14 ಮಕ್ಕಳು, ಕೆಜಿಎಫ್ ಬಾಬುನೇ ಹಿರಿಯವರು
ಕೆಜಿಎಫ್ ಬಾಬು ಅವರ ತಂದೆ ಆರ್ಥಿಕವಾಗಿ ತುಂಬಾ ಸಂಕಷ್ಟದಲ್ಲಿದ್ದರು. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲಿ 14 ಮಕ್ಕಳಿದ್ದರು. ಈ ಪೈಕಿ ಕೆಜಿಎಫ್ ಬಾಬು ಅವರೇ ಹಿರಿಯರು. ತಂದೆ ಪುಟ್ಟದೊಂದು ಬೇಕರಿ ಹಾಕಿಕೊಂಡು ಹೆಂಡತಿ ಹಾಗೂ 14 ಮಕ್ಕಳನ್ನು ತುಂಬಾ ಕಷ್ಟದಲ್ಲಿಯೇ ಸಾಕುತ್ತಿದ್ದರು.
ಸ್ಕ್ರ್ಯಾಪ್ ಮೆಟೀರಿಯಿಲ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ ಬಾಬು
ಅನಿವಾರ್ಯವಾಗಿ ದುಡಿತಕ್ಕೆ ಇಳಿದ ಕೆಜಿಎಫ್ ಬಾಬು ಭಾರತ್ ಗೋಲ್ಡ್ ಮೈನ್ಸ್ನ ಸ್ಕ್ರ್ಯಾಪ್ ಮೆಟೀರಿಯಲ್ ವಿಭಾಗದಲ್ಲಿ ಕೆಲಸಕ್ಕೆ ಸೇರಿದ್ದರು. ಕೆಲವು ಸಲ ಆಟೋವನ್ನೂ ಓಡಿಸಿದ್ದರು ಎನ್ನಲಾಗಿದೆ. ತಂದೆ ಬೇಕರಿ ನಷ್ಟಕ್ಕೆ ಸಿಲುಕಿದಾಗ ಬಾಬು ಅವರು ಸ್ಕ್ರ್ಯಾಪ್ ವ್ಯವಹಾರವನ್ನು ಕೈಗೆತ್ತಿಕೊಂಡರು. ಹಿರಿಯ ಮಗನಾಗಿದ್ದರಿಂದ ಅನಿವಾರ್ಯವಾಗಿ ದುಡಿಯಲೇ ಬೇಕಾಯ್ತು. ಹೀಗಾಗಿ ಓದಿಗೆ ಗುಡ್ ಹೇಳಿ, ದುಡಿಯುತ್ತಲೇ ತಮ್ಮ, ತಂಗಿಯರನ್ನು ಸಾಕಿದರು.
ಸ್ಕ್ರ್ಯಾಪ್ ಬ್ಯುಸಿನೆಸ್ನಿಂದ ರಿಯಲ್ ಎಸ್ಟೇಟ್ವರೆಗೆ
ಸ್ಕ್ರಾಪ್ ಬ್ಯುಸಿನೆಸ್ ಅನ್ನು ಕಷ್ಟಪಟ್ಟು ಮಾಡುತ್ತಿದ್ದ ಬಾಬು ನಿಧಾನಕ್ಕೆ ಅದರಲ್ಲಿ ಯಶಸ್ಸು ಕಂಡರು. ತಮ್ಮ ವ್ಯವಹಾರ ಚತುರತೆಯಿಂದ ನಿಧಾನಕ್ಕೆ ಲಾಭ ಗಳಿಸುತ್ತಾ ಯಶಸ್ಸಿನ ಒಂದೊಂದೇ ಮೆಟ್ಟಿಲು ಏರಿದರು. ಕೊನೆಗೊಮ್ಮೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ಗೂ ಧುಮುಕಿದರು. ಅದೃಷ್ಟ ಅಲ್ಲೂ ಅವರ ಕೈ ಹಿಡಿಯಿತು. ಅದರಿಂದಲೇ ಕೋಟಿ ಕೋಟಿ ಗಳಿಸಿದರು. ಉಮ್ರಾ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ್ದ ಬಾಬು, ಅದರಲ್ಲೂ ಯಶಸ್ವಿಯಾಗಿದ್ದರು.
ಸಂಬಂಧಿಕರಿಂದ ಸಾಲ ಪಡೆದು ಉದ್ಯಮ ಆರಂಭ
ಸಂಬಂಧಿಕರಿಂದ ಸಾಲ ಪಡೆದು ಕೋಲಾರದಲ್ಲಿ ಸಣ್ಣ ಗುಜರಿ ಅಂಗಡಿ ಆರಂಭಿಸಿದರು. 2001 ರಲ್ಲಿ, ಅವರ ಅದೃಷ್ಟ ತಿರುಗಿತು. ಕೋಲಾರ ಗೋಲ್ಡ್ ಫೀಲ್ಡ್ಸ್ ಕಚ್ಚಾ ಚಿನ್ನವನ್ನು ಶುದ್ಧೀಕರಿಸಲು ಬಳಸಿದ 21 ಮಿಲ್ ಟ್ಯಾಂಕ್ಗಳನ್ನು ಹರಾಜು ಮಾಡಲು ನಿರ್ಧರಿಸಿತ್ತು. ಯೂಸುಫ್ ಬಾಬು ತನ್ನೆಲ್ಲ ಸಂಪನ್ಮೂಲಗಳನ್ನು ಒಟ್ಟುಗೂಡಿಸಿ 7 ಲಕ್ಷಕ್ಕೆ ಹರಾಜಿನಲ್ಲಿ ಗೆದ್ದರು.
ಮೂರು ಪಟ್ಟು ಲಾಭ ಗಳಿಸಿದ ಕೆಜಿಎಫ್ ಬಾಬು
2002 ರಲ್ಲಿ, ಯೂಸುಫ್ ಹಳೆಯ ಜಾವಾ ಮೋಟಾರ್ಸೈಕಲ್ ಕಾರ್ಖಾನೆಯ ಹರಾಜನ್ನು 1 ಕೋಟಿ ರೂ.ಗೆ ಗೆದ್ದರು ಮತ್ತು ಅದರಿಂದ ಮೂರು ಪಟ್ಟು ಲಾಭ ಗಳಿಸಿದರು. ಅದರ ನಂತರ, ಅವರು ಹಿಂತಿರುಗಿ ನೋಡಲಿಲ್ಲ. ಅವರು ಸರ್ಕಾರಿ ಮತ್ತು ನ್ಯಾಯಾಲಯದ ಹರಾಜಿನ ಮೂಲಕ ಆಸ್ತಿ ಮತ್ತು ಕಾರ್ಖಾನೆಗಳನ್ನು ಖರೀದಿಸಲು ಹೋದರು.
ಉದ್ಯಮದಿಂದ ರಾಜಕೀಯ ಅಖಾಡಕ್ಕೆ
ಕೋಲಾರ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ನಾಮನಿರ್ದೇಶನಗೊಳ್ಳುವ ಗುರಿಯನ್ನು ಕೆಜಿಎಫ್ ಬಾಬು ಹೊಂದಿದ್ದರು. ಆದರೆ, ಕಾಂಗ್ರೆಸ್ನ ಸ್ಥಳೀಯ ಘಟಕದ ಅಧ್ಯಕ್ಷರಿಗೆ ಕೋಲಾರ ಚುನಾವಣೆ ಟಿಕೆಟ್ ನೀಡಲಾಯ್ತು. ಹೀಗಾಗಿ ಬೆಂಗಳೂರು ನಗರ ಸ್ಥಾನಕ್ಕೆ ಯೂಸುಫ್ ಬಾಬು ಆಯ್ಕೆಯಾದರು. ಹೀಗಾಗಿ ನೇರವಾಗಿ ವಿಧಾನ ಪರಿಷತ್ ಎಲೆಕ್ಷನ್ಗೆ ಕೆಜಿಎಫ್ ಬಾಬು ಸ್ಪರ್ಧೆ ಮಾಡುವಂತಾಯ್ತು.
1741 ಕೋಟಿ ರೂಪಾಯಿ ಆಸ್ತಿ ಘೋಷಣೆ
ಚುನಾವಣೆಗೆ ಸ್ಪರ್ಧಿಸಲು ಕಾನೂನಿನ ಪ್ರಕಾರ ಅವರು ತಮ್ಮ ಆಸ್ತಿ ಮಾಹಿತಿಯನ್ನು ಸಲ್ಲಿಸಿದರು. ಅದರ ಪ್ರಕಾರ ಅವರ ಒಡೆತನದ ಆಸ್ತಿಯ ಒಟ್ಟು ಮೌಲ್ಯ 1741 ಕೋಟಿ ರೂಪಾಯಿ. ಏರಿದೆ ಎಂದು ತಿಳಿದುಬಂದಿದೆ. 23 ಬ್ಯಾಂಕ್ ಅಕೌಂಟ್ ಗಳಿದ್ದು, ಒಟ್ಟು 58 ಕೋಟಿ ರೂ. ಸಾಲ ಇದೆ. 2 ಕೋಟಿ 99 ಲಕ್ಷ ರೂ. ಬೆಲೆ ಬಾಳುವ ಮೂರು ಕಾರುಗಳಿವೆ. 1 ಕೋಟಿ 11 ಲಕ್ಷ ರೂ. ಬೆಲೆ ಬಾಳುವ ವಾಚ್ ಇದೆ. ತಮ್ಮ ಬಳಿ ಅಂದಾಜು 4.5 ಕೆ.ಜಿ. ಚಿನ್ನ ಇದೆ. ಒಂದೊಂದು ಲಕ್ಷ ರೂ. ಮೌಲ್ಯದ ನಾಲ್ಕು ಮೊಬೈಲ್ ಗಳಿವೆ. 48 ಕೋಟಿ ರೂ. ಮೌಲ್ಯದ ಮೂರು ಕೃಷಿ ಭೂಮಿಗಳು, 1593 ಕೋಟಿ ರೂ. ಬೆಲೆ ಬಾಳುವ ಒಟ್ಟು 26 ಸೈಟ್ ಗಳು ಹಾಗೂ ಮೂರು ಕೋಟಿ ಬೆಲೆ ಬಾಳುವ ಮನೆ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ನೂರಾರು ಎಕರೆ ಭೂಮಿಯ ಒಡೆಯ
1,643.59 ಕೋಟಿ ರು. ಸ್ಥಿರಾಸ್ತಿ: ಇನ್ನು ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ (agriculture Land) ಹಾಗೂ ಕೃಷಿಯೇತರ ಜಮೀನು ಹೊಂದಿರುವ ಯೂಸುಫ್ ಷರೀಫ್ ತಮ್ಮ ಹೆಸರಿನಲ್ಲೇ 47.31 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು ಹಾಗೂ ಪತ್ನಿಯ ಹೆಸರಿನಲ್ಲಿ 1.30 ಕೋಟಿ ರು. ಕೃಷಿಯೇತರ ಜಮೀನು ತೋರಿಸಿದ್ದಾರೆ. ಉಳಿದಂತೆ 1,593.27 ಕೋಟಿ ರು. ಮೌಲ್ಯದ ಕೃಷಿಯೇತರ ಜಮೀನು ಹೊಂದಿರುವುದಾಗಿ ಹೇಳಿದ್ದಾರೆ. ಬೆಂಗಳೂರಿನಲ್ಲಿ 3.01 ಕೋಟಿ ರು. ಮೌಲ್ಯದ ವಸತಿ ಕಟ್ಟಡ ಹೊಂದಿದ್ದು, ಒಟ್ಟು 67.24 ಕೋಟಿ ರು. ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಬಾಬು ಮೇಲೆ ಇವೆ 3 ಕ್ರಿಮಿನಲ್ ಕೇಸ್
ಯೂಸುಫ್ ಷರೀಫ್ ಅವರು ತಾಜ್ ಅಬ್ದುಲ್ ರಜಾಕ್, ಶಾಜಿಯಾ ತರನ್ನಮ್ ಎಂಬ ಇಬ್ಬರು ಪತ್ನಿಯರನ್ನು ಹೊಂದಿದ್ದು, ಐದು ಮಕ್ಕಳನ್ನು ಹೊಂದಿದ್ದಾರೆ. ಇನ್ನು ತಾವು ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಮ್ಮ ವಿರುದ್ಧ ಒಟ್ಟು ಮೂರು ಕ್ರಿಮಿನಲ್ ಕೇಸ್ ಗಳು ಬಾಕಿ ಇವೆ ಅಂತ ಕೆಜಿಎಫ್ ಬಾಬು ಹೇಳಿದ್ದರು.
ಇದನ್ನೂ ಓದಿ: Explained: ಹಸಿರು ಸ್ಥಿರ ಠೇವಣಿಗಳು ಎಂದರೇನು? ಇದರ ವೈಶಿಷ್ಟ್ಯಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ
ಅಮಿತಾಭ್ ಬಚ್ಚನ್ ಕಾರು ಖರೀಸಿದಿದ್ದ ಬಾಬು
ಬಾಲಿವುಡ್ನ ಖ್ಯಾತ ಹಿರಿಯ ನಟ ಅಮಿತಾಭ್ ಬಚ್ಚನ್ ಬಳಸ್ತಿದ್ದ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದ ಬಾಬು, ಕೆಲ ವರ್ಷಗಳ ಹಿಂದೆ ಮುಂಬೈನಲ್ಲಿ MH02-BB2 ಸಂಖ್ಯೆಯ ರೋಲ್ಸ್ ರಾಯ್ಸ್ ಖರೀದಿಸಿದ್ದರು. ಬಿಗ್ ಬಿ ಅಮಿತಾಭ್ ಬಳಸ್ತಿದ್ದ ಕಾರನ್ನ ಮಧ್ಯವರ್ತಿ ಮೂಲಕ ಬಾಬು ಖರೀದಿಸಿದ್ದರು. ಆದರೆ ಸೂಕ್ತ ದಾಖಲಾತಿ ಇಲ್ಲದ ಕಾರಣ ಕಳೆದ ವರ್ಷ ಆಗಸ್ಟ್ ನಲ್ಲಿ ಯುಬಿ ಸಿಟಿ ಬಳಿ ರೋಲ್ಸ್ ರಾಯ್ಸ್ ಕಾರನ್ನ ಆರ್ಟಿಒ ಅಧಿಕಾರಿಗಳು ಸೀಜ್ ಮಾಡಿದ್ದರು. ನಂತರ ನೆಲಮಂಗಲ ಆರ್ ಟಿಒ ಅಧಿಕಾರಿಗಳಿಗೆ ದಂಡ ಪಾವತಿಸಿ ಕಾರು ಬಿಡಿಸಿಕೊಳ್ಳಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ