ಲಾಸ್ ಏಂಜಲೀಸ್‌ನ ಮಾಜಿ ಮೇಯರ್ ಎರಿಕ್ ಗಾರ್ಸೆಟ್ಟಿ ಭಾರತಕ್ಕೆ (Eric Garcetti, former Los Angeles Mayor) ಹೊಸ ಯುಎಸ್ ರಾಯಭಾರಿಯಾಗಿ (US ambassador to India) ನೇಮಕಗೊಂಡಿದ್ದಾರೆ. ಯುಎಸ್ ಸೆನೆಟ್ ಗಾರ್ಸೆಟ್ಟಿಯ ನಾಮನಿರ್ದೇಶನವನ್ನು 52-42 ಮತಗಳಿಂದ ಅನುಮೋದಿಸಲಾಯಿತು. ಗಾರ್ಸೆಟ್ಟಿ, ಬೈಡೆನ್ ನಿಷ್ಟಾವಂತರು ಎಂದೆನಿಸಿದ್ದು, ಸುಮಾರು ಐದು ವರ್ಷಗಳ ಹಿಂದೆ ಡೆಮಾಕ್ರಟಿಕ್ ಪಕ್ಷದ ಒಬ್ಬ ಸದಸ್ಯರಾಗಿ ಹೊರಹೊಮ್ಮಿದರು.
ಹಗರಣಗಳಿಂದ ಸದ್ದು ಮಾಡಿದ್ದ ಗಾರ್ಸೆಟ್ಟಿ
ಮೇಯರ್ ಆಗಿ ತಮ್ಮ ಸುದೀರ್ಘ ಅಧಿಕಾರಾವಧಿಯ ಕೊನೆಯ ವರ್ಷಗಳಲ್ಲಿ ಗಾರ್ಸೆಟ್ಟಿ ಅನೇಕ ಹಗರಣಗಳಲ್ಲಿ ಸದ್ದು ಮಾಡಿದ್ದರು ಹಾಗೂ ಅವರನ್ನು ದೋಷಿಯಾಗಿ ಪರಿಗಣಿಸಲಾಯ್ತು. ಇದರಿಂದ ಬೈಡೆನ್ ಕ್ಯಾಬಿನೆಟ್‌ನಲ್ಲಿ ಅವರು ಸ್ಥಾನ ಕಳೆದುಕೊಳ್ಳಬೇಕಾಯಿತು ಹಾಗೂ ರಾಯಭಾರಿಯಾಗಿ ಅವರನ್ನು ನೇಮಕಗೊಳಿಸುವ ಈ ಹಿಂದಿನ ಯೋಜನೆಗಳಿಗೂ ಅಡ್ಡಿ ಎದುರಾಯ್ತು.
ಯುಎಸ್ ಸೆನೆಟ್ ಕ್ಲೋಚರ್ ಮೋಷನ್ ಅನ್ನು ಅಳವಡಿಸಿಕೊಂಡ ಸಂದರ್ಭದಲ್ಲಿ ಗಾರ್ಸೆಟ್ಟಿಯ ನೇಮಕಾತಿಯನ್ನು ನಿರ್ಧರಿಸಲಾಯಿತು. ಒಂದು ವಿಷಯ ಬಹುಮತದ ಬೆಂಬಲ ಹೊಂದಿರುವಾಗ ಅಲ್ಪಸಂಖ್ಯಾತ ಸದಸ್ಯರಿಂದ ಈ ವಿಷಯದ ಕುರಿತು ಹೆಚ್ಚಿನ ಚರ್ಚೆಯನ್ನು ಮಿತಿಗೊಳಿಸಿದಾಗ ಕ್ಲೋಚರ್ ಮೋಷನ್ ಅನ್ನು ಅಳವಡಿಸಿಕೊಳ್ಳಲಾಗುತ್ತದೆ.
ಎರಿಕ್ ಗಾರ್ಸೆಟ್ಟಿ ಯಾರು?
52 ವರ್ಷದ ಎರಿಕ್ ಗಾರ್ಸೆಟ್ಟಿ, ಸ್ಯಾನ್ ಫೆರ್ನಾಂಡೋ ವ್ಯಾಲಿಯಲ್ಲಿ ಬೆಳೆದರು ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಪದವಿ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಅವರು ಆಕ್ಸ್‌ಫರ್ಡ್ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ರೋಡ್ಸ್ ವಿದ್ವಾಂಸರಾಗಿ ಅಧ್ಯಯನ ಮಾಡಿದರು ಮತ್ತು ಆಕ್ಸಿಡೆಂಟಲ್ ಕಾಲೇಜು ಮತ್ತು ಯುಎಸ್‌ಸಿಯಲ್ಲಿ ಶಿಕ್ಷಕರಾಗಿ ವೃತ್ತಿ ನಡೆಸಿದ್ದಾರೆ.
ಅವರು 12 ವರ್ಷಗಳ ಕಾಲ US ನೇವಿ ಮೀಸಲು ಅಧಿಕಾರಿಯಾಗಿದ್ದರು ಹಾಗೂ ಹವ್ಯಾಸವಾಗಿ ಪಿಯಾನೋ ನುಡಿಸುತ್ತಾರೆ ಹಾಗೂ ಛಾಯಾಗ್ರಹಣದಲ್ಲಿಯೂ ಗಾರ್ಸೆಟ್ಟಿಗೆ ಆಸಕ್ತಿ ಇದೆ. ಇವರ ಪತ್ನಿ ಆಮಿ ಎಲೈನ್ ವೇಕ್ಲ್ಯಾಂಡ್ ಹಾಗೂ ದಂಪತಿಗೆ ಓರ್ವ ಮಗಳಿದ್ದಾರೆ.
ಇದನ್ನೂ ಓದಿ:Investment Tips: ಈ ವರ್ಷದ ಟಾಪ್ 10 ಮ್ಯೂಚುವಲ್ ಫಂಡ್ಗಳು; ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ
ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆ
ಅವರು 2013 ರಲ್ಲಿ ಲಾಸ್ ಏಂಜಲೀಸ್‌ನ ಮೇಯರ್ ಆಗಿ ಚುನಾಯಿತರಾಗಿ 2022 ರವರೆಗೆ ಈ ಹುದ್ದೆಯನ್ನು ನಿರ್ವಹಿಸಿದ್ದಾರೆ. ಈ ಮೂಲಕ ಅತಿ ಸುದೀರ್ಘ 100 ವರ್ಷಗಳ ಅವಧಿಯಲ್ಲಿ, ಹೆಚ್ಚು ಕಾಲ ಸೇವೆ ಸಲ್ಲಿಸಿದ ನಗರದ ಅತ್ಯಂತ ಕಿರಿಯ ಮೇಯರ್ ಆದರು ಹಾಗೂ ಈ ಹುದ್ದೆಗೆ ಏರಿದ ಮೊದಲ ಯಹೂದಿ ವ್ಯಕ್ತಿ ಎನಿಸಿದ್ದಾರೆ. ಅದಕ್ಕೂ ಮೊದಲು, ಅವರು 2006 ರಿಂದ 2012 ರವರೆಗೆ ಲಾಸ್ ಏಂಜಲೀಸ್ ಸಿಟಿ ಕೌನ್ಸಿಲ್‌ನ ಅಧ್ಯಕ್ಷರಾಗಿ ಮತ್ತು ಅದಕ್ಕೂ ಮೊದಲು 13 ನೇ ಜಿಲ್ಲೆಯ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದರು.
ಲಾಸ್ ಏಂಜಲೀಸ್‌ನಲ್ಲಿ ಅವರ ಮೇಯರ್ ಅಧಿಕಾರಾವಧಿಯು ಮಿಶ್ರವಾಗಿತ್ತು ಆದರೆ 2028 ರ ಒಲಿಂಪಿಕ್ಸ್ ಸ್ಥಳವಾಗಿ ನಗರವನ್ನು ಭದ್ರಪಡಿಸುವುದು ಸೇರಿದಂತೆ ಕೆಲವು ನಿರ್ದಿಷ್ಟ ಉತ್ತಮ ಮಾನ್ಯತೆಯನ್ನು ಪಡೆದುಕೊಂಡರು.
ಹೊಗಳಿಗೆ ತೆಗಳಿಕೆ ಎರಡೂ ಗಾರ್ಸೆಟ್ಟಿಗೆ ಲಭಿಸಿದೆ
$15 ಕನಿಷ್ಠ ವೇತನವನ್ನು ಅಳವಡಿಸಿಕೊಂಡಿದ್ದಕ್ಕಾಗಿ, ಲಾಸ್ ಏಂಜಲೀಸ್‌ನ ಸಾರಿಗೆ ವ್ಯವಸ್ಥೆಯ ಸುಧಾರಣೆ ಹಾಗೂ ನಗರವನ್ನು ಹೆಚ್ಚು ಭೂಕಂಪ ನಿರೋಧಕವಾಗಿಸಿದ್ದಕ್ಕೆ ಹಾಗೂ ಕೋವಿಡ್ ಸಮಯದಲ್ಲಿ ಗಾರ್ಸೆಟ್ಟಿಯವರ ಸಮಯ ಪ್ರಜ್ಞೆ ಹಾಗೂ ಸಹಕಾರಕ್ಕಾಗಿ ಜನತೆ ಅವರನ್ನು ಪ್ರಶಂಸಿಸಿದರು ಹಾಗೂ ನಿಜಕ್ಕೂ ಈತ ಧೈರ್ಯವಂತ ಎಂದು ಹೆಚ್ಚಿನವರು ಮೆಚ್ಚಿಕೊಂಡರು.
ಜಾರ್ಜ್ ಫ್ಲಾಯ್ಡ್ ಅವರ ಹತ್ಯೆಯ ನಂತರದ ಪ್ರತಿಭಟನೆಯ ಸಮಯದಲ್ಲಿ ಎಡ ಹಾಗೂ ಬಲ ಪಂಥೀಯ ಎರಡೂ ಕಡೆಯ ಸದಸ್ಯರು ಗಾರ್ಸೆಟ್ಟಿ ಅವರನ್ನು ಟೀಕಿಸಿದರು ಅಂತೆಯೇ ಸಿಟಿ ಕೌನ್ಸಿಲ್‌ನಲ್ಲಿನ ಭ್ರಷ್ಟಾಚಾರ ಆರೋಪಗಳು ಅವರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಿದವು. ಆದರೆ ಇದಕ್ಕೂ ದೊಡ್ಡ ಪೆಟ್ಟು ನೀಡಿದ್ದು ಸಹಾಯಕರ ವಿರುದ್ಧ ಲೈಂಗಿಕ ದುರ್ವರ್ತನೆ ಆರೋಪವು ಅವರನ್ನು ಹಿಮ್ಮೆಟ್ಟಿಸಿತು ಹಾಗೂ ಗಾರ್ಸೆಟ್ಟಿ ಸೂಕ್ತ ಕ್ರಮ ಕೈಗೊಳ್ಳಲಿಲ್ಲವೆಂದು ಅವರ ಮೇಲೆ ಆರೋಪದ ಸುರಿಮಳೆಯಾಯಿತು.
Congratulated @ericgarcetti on his swearing in as the Ambassador of 🇺🇸 to 🇮🇳
As he prepares to depart for India, we discussed some immediate priorities in deepening the bilateral partnership, in line with our Leaders’ vision.
Look forward to working with Eric. pic.twitter.com/Hgz39v4Bvr
— Taranjit Singh Sandhu (@SandhuTaranjitS) March 24, 2023
ರಿಕ್ ಜೇಕಬ್ಸ್ ಹಗರಣವೇನು?
2020 ರಲ್ಲಿ, ಗಾರ್ಸೆಟ್ಟಿಯ ಪ್ರಮುಖ ಸಹಾಯಕ ರಿಕ್ ಜೇಕಬ್ಸ್ ವಿರುದ್ಧ ಪೊಲೀಸ್ ಅಧಿಕಾರಿ ಮತ್ತು ಗಾರ್ಸೆಟ್ಟಿಯ ಅಂಗರಕ್ಷಕ ಮ್ಯಾಥ್ಯೂ ಗಾರ್ಜಾ ಅವರು ಮೊಕದ್ದಮೆ ಹೂಡಿದರು. ಜೇಕಬ್ಸ್ ಗಾರ್ಜಾ ಅವರನ್ನು ಅನುಚಿತವಾಗಿ ಸ್ಪರ್ಶಿಸಿದರು ಹಾಗೂ ಲೈಂಗಿಕ ಟೀಕೆಗಳನ್ನು ಮಾಡಿದರು ಎಂದು ಗಾರ್ಜಾ ಆರೋಪಿಸಿದರು. ಇದರ ತರುವಾಯ ಜೇಕಬ್ಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಈ ಪ್ರಕರಣದ ಕುರಿತು ತಮಗೇನೂ ತಿಳಿದಿಲ್ಲ ಎಂದು ಗಾರ್ಸೆಟ್ಟಿ ಪದೇ ಪದೇ ತಿಳಿಸಿದರೂ ಗಾರ್ಸೆಟ್ಟಿ ಸೂಕ್ತ ಕ್ರಮ ಕೈಗೊಳ್ಳಲಿಲ್ಲ ಎಂಬುದಾಗಿ ಅವರನ್ನು ದೂಷಿಸಲಾಯಿತು. ಇನ್ನು ಗಾರ್ಸೆಟ್ಟಿ ವಿರೋಧಿ ಪಡೆಗಳು ಆರೋಪಗಳ ಬಗ್ಗೆ ತಿಳಿದಿದ್ದರು ಹಾಗೂ ಇದನ್ನು ಒಂದು ಆಯುಧವಾಗಿ ಬಳಸಿಕೊಂಡು ಗಾರ್ಸೆಟ್ಟಿಯ ತೇಜೋವಧೆ ಮಾಡಲು ಪ್ರಯತ್ನಿಸಿದರು. ತಮ್ಮ ಅಧಿಕಾರದ ಪರಿಧಿಯೊಳಗೆ ಏನು ನಡೆಯುತ್ತಿದೆ ಎಂಬುದು ಗಾರ್ಸೆಟ್ಟಿಯವರಿಗೆ ತಿಳಿದಿಲ್ಲವೆಂದು ಟೀಕಾ ಪ್ರಹಾರಗಳನ್ನು ನಡೆಸಿದರು.
ಇದರ ಪರಿಣಾಮವೇನಾಯಿತು?
ಗಾರ್ಸೆಟ್ಟಿ ಬೈಡೆನ್ ಅವರ ಚುನಾವಣಾ ಪ್ರಚಾರದ ಸಹ-ಅಧ್ಯಕ್ಷರಾಗಿದ್ದರು ಮತ್ತು ಅಧ್ಯಕ್ಷರ ಪ್ರಮುಖ ರಾಜಕೀಯ ಮಿತ್ರರಾಗಿದ್ದಾರೆ. ಬೈಡೆನ್ ಕ್ಯಾಬಿನೆಟ್‌ನ ಭಾಗವಾಗಿ ಗಾರ್ಸೆಟ್ಟಿ ಕಾರ್ಯನಿರ್ವಹಿಸುತ್ತಾರೆ ಎಂದು ಭಾವಿಸಲಾಗಿತ್ತು ಆದರೆ ಜೇಕಬ್ಸ್ ವದಂತಿಯು ಈ ಆಸೆಗೆ ತಣ್ಣೀರೆರಚುವಂತೆ ಮಾಡಿತು ಹಾಗೂ ವಿವಾದದ ಗೂಡಾಗಿ ಅವರ ವರ್ಚಸ್ಸಿಗೆ ಧಕ್ಕೆಯನ್ನುಂಟು ಮಾಡಿತು.
ಭಾರತಕ್ಕೆ ರಾಯಭಾರಿಯಾಗಿ ಅವರ ನಾಮನಿರ್ದೇಶನವನ್ನು ಕಳೆದ ವರ್ಷ ಜನವರಿಯಲ್ಲಿ ಸೆನೆಟ್ ವಿದೇಶಾಂಗ ಸಂಬಂಧಗಳ ಸಮಿತಿಯು ಅನುಮೋದಿಸಿದರೆ, ಮಾರ್ಚ್‌ನಲ್ಲಿ, ರಿಪಬ್ಲಿಕನ್ ಪಕ್ಷದ ಯುಎಸ್ ಸೆನೆಟರ್ ಚಕ್ ಗ್ರಾಸ್ಲೆ ಜೇಕಬ್ಸ್ ಆರೋಪಗಳನ್ನು ಉಲ್ಲೇಖಿಸಿ ಅದನ್ನು ತಡೆಹಿಡಿದರು. ಜಾಕೋಬ್ಸ್ ನಗರದ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಜನಾಂಗೀಯ ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ ಎಂಬುದು ಗಾರ್ಸೆಟ್ಟಿಗೆ ತಿಳಿದಿದೆ ಹಾಗೂ ಇದರ ಬಗ್ಗೆ ಅವರು ತಿಳಿದುಕೊಂಡಿರಬೇಕಾಗಿದ್ದುದು ಅನಿವಾರ್ಯವಾಗಿತ್ತು ಎಂದು ಗ್ಲಾಸ್ಲೆ ತಿಳಿಸಿದ್ದಾರೆ.
ಸೆನೆಟರ್‌ನಿಂದ ನಾಮನಿರ್ದೇಶಿತ ವ್ಯಕ್ತಿಯ ಮೇಲೆ ನಿಯಂತ್ರಣ ವಿಧಿಸಿದಾಗ, ಸರ್ವಾನುಮತದ ಒಪ್ಪಿಗೆಯಿಂದ ನಾಮಿನಿಯನ್ನು ತ್ವರಿತವಾಗಿ ಅನುಮೋದಿಸಲು ಸಾಧ್ಯವಿಲ್ಲ ಎಂದರ್ಥ, ಇದು ದೃಢೀಕರಣ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ಇತರ ರಿಪಬ್ಲಿಕನ್ನರು ಕೂಡ ನಾಮನಿರ್ದೇಶನವನ್ನು ವಿರೋಧಿಸಿದರು.
ಇದನ್ನೂ ಓದಿ: Explained: ಹಾರ್ಟ್ ಅಟ್ಯಾಕ್ ಆದಾಗ ಪ್ರಾಣ ಉಳಿಸುತ್ತೆ CPR- ಈ ವಿದ್ಯೆಯನ್ನು ಮಕ್ಕಳಿಗೂ ಕಲಿಸಬೇಕು ಅಂತಿದ್ದಾರೆ ತಜ್ಞರು
ಡಿಸೆಂಬರ್ 2021 ರಲ್ಲಿ ನಡೆದ ಸೆನೆಟ್ ಸಮಿತಿಯ ವಿಚಾರಣೆಯಲ್ಲಿ, ಗಾರ್ಸೆಟ್ಟಿ ತಮ್ಮ ತಂಡದಲ್ಲಿ ನಡೆದ ಘಟನೆಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಹಾಗೂ ಇದನ್ನು ನನ್ನ ಗಮನಕ್ಕೆ ತರಲಾಗಿಲ್ಲ ಎಂದು ತಿಳಿಸಿದ್ದಾರೆ ಅದೂ ಅಲ್ಲದೆ ಅಂತಹ ಆಪಾದಿತ ನಡವಳಿಕೆ ನನ್ನ ಗಮನಕ್ಕೆ ಬಂದಿಲ್ಲ ಎಂಬುದಾಗಿಯೂ ವಿಚಾರಣೆಯಲ್ಲಿಯೂ ತಿಳಿಸಿದ್ದರು.
ಶ್ವೇತಭವನವು ಗ್ರಾಸ್ಲೆಯ ವರದಿಯನ್ನು ಪಕ್ಷಪಾತದ ಉದ್ದೇಶಿಕ ಕೃತ್ಯ ಎಂದು ಉಲ್ಲೇಖಿಸಿದೆ ಆದರೆ ಕೆಲವು ಡೆಮೋಕ್ರಾಟ್‌ಗಳು ಗಾರ್ಸೆಟ್ಟಿಯ ಬಗ್ಗೆ ಮೀಸಲಾತಿಯನ್ನು ಹೊಂದಿದ್ದರು. ಅವರು ತಮ್ಮ ಆರಂಭಿಕ ನಾಮನಿರ್ದೇಶನದಲ್ಲಿ ಸಮಿತಿಯನ್ನು ತೆರವುಗೊಳಿಸಿದಾಗ, ಅವರನ್ನು ಪೂರ್ಣ ಮತಕ್ಕಾಗಿ ಎಂದಿಗೂ ಸೆನೆಟ್‌ವರೆಗೆ ಕರೆದೊಯ್ಯಲಾಗಲಿಲ್ಲ.
ಕಳೆದ ಮೇನಲ್ಲಿ ಆಕ್ಸಿಯೋಸ್‌ನ ವರದಿಯ ಪ್ರಕಾರ, ಕನೆಕ್ಟಿಕಟ್‌ನ ಹಿರಿಯ ಸೆನೆಟರ್ ಡೆಮೋಕ್ರಾಟ್ ರಿಚರ್ಡ್ ಬ್ಲೂಮೆಂತಾಲ್; ಮಾರ್ಕ್ ಕೆಲ್ಲಿ, ಅರಿಜೋನಾದ ಜೂನಿಯರ್ ಸೆನೆಟರ್; ನ್ಯೂಯಾರ್ಕ್‌ನ ಜೂನಿಯರ್ ಸೆನೆಟರ್ ಕರ್ಸ್ಟನ್ ಗಿಲ್ಲಿಬ್ರಾಂಡ್ ಮತ್ತು ಅರಿಜೋನಾದ ಹಿರಿಯ ಸೆನೆಟರ್ ಸ್ವತಂತ್ರ ಕ್ರಿಸ್ಟನ್ ಅವರು ಖಚಿತವಾದ ದೃಢವಾದ ಮತಗಳನ್ನು ಹೊಂದಿರಲಿಲ್ಲ. ಇದೀಗ ಗಿಲ್ಲಿಬ್ರಾಂಡ್ ನಾಮನಿರ್ದೇಶನವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.
ಮಾರ್ಚ್ 13 ರಂದು, ಗಾರ್ಸೆಟ್ಟಿಯ ಮಾಜಿ ಸಂವಹನ ನಿರ್ದೇಶಕರಾದ ನವೋಮಿ ಸೆಲಿಗ್‌ಮನ್ ಅವರು ಜೇಕಬ್ಸ್ ಪ್ರಕರಣದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, ಗಾರ್ಸೆಟ್ಟಿಯವರು ರಾಯಭಾರಿಯಾಗಲು ಅಥವಾ ನಿಜವಾಗಿಯೂ ಈ ದೇಶ ಅಥವಾ ಜಗತ್ತಿನಲ್ಲಿ ಎಲ್ಲಿಯಾದರೂ ಸಾರ್ವಜನಿಕ ಕಚೇರಿಯನ್ನು ಹೊಂದಲು ಅನರ್ಹರು ಎಂದು ಸುದ್ದಿಪತ್ರಿಕೆಗಳಿಗೆ ತಿಳಿಸಿದ್ದರು.
ಭಾರತಕ್ಕೆ ರಾಯಭಾರಿಯ ತುರ್ತು ಅಗತ್ಯವಿದೆ ಏಕೆ?
ಭಾರತದ ಬಗ್ಗೆ ಹೆಚ್ಚಿನ ಪರಿಣಿತಿಯನ್ನು ಹೊಂದಿರುವ ಗಾರ್ಸೆಟ್ಟಿ ರಾಯಭಾರಿಯಿಲ್ಲದೆ ದೇಶವು ಕಳೆದಿದ್ದ ಎರಡು ವರ್ಷಗಳ ಅಂತರವನ್ನು ತುಂಬಲಿದ್ದಾರೆ. ಭಾರತ ತಕ್ಷಣವೇ ರಾಯಭಾರಿಯನ್ನು ಹೊಂದಿರುವುದು ದೇಶದ ಭದ್ರತೆಗೆ ಕಡ್ಡಾಯವಾಗಿದೆ ಇನ್ನು ಮುಂದೆ ಕಾಯುವುದು ಸರಿಯಲ್ಲ ಎಂದು ಸೆನೆಟ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಹೆಚ್ಚುತ್ತಿರುವ ಉಪಸ್ಥಿತಿ ಮತ್ತು ಉಕ್ರೇನ್‌ನೊಂದಿಗಿನ ರಷ್ಯಾದ ಯುದ್ಧ ಸೇರಿದಂತೆ ಹೆಚ್ಚುತ್ತಿರುವ ಜಾಗತಿಕ ಉದ್ವಿಗ್ನತೆಯ ಸಮಯದಲ್ಲಿ ರಾಯಭಾರಿ ಹುದ್ದೆ ಖಾಲಿಯಾಗಿರುವುದು ಆಡಳಿತಕ್ಕೆ ಮಹತ್ವದ ರಾಜತಾಂತ್ರಿಕ ಅಂತರವನ್ನುಂಟು ಮಾಡಿತ್ತು.
ವಿಶ್ವದ ಅತ್ಯಂತ ಜನನಿಬಿಡ ಪ್ರಜಾಪ್ರಭುತ್ವವಾದ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರೆಸುತ್ತಿದೆ, ಆದರೆ ಪಾಶ್ಚಿಮಾತ್ಯ ಸರ್ಕಾರಗಳು ಮಾಸ್ಕೋದ ಬಜೆಟ್, ಅದರ ಮಿಲಿಟರಿ ಮತ್ತು ಉಕ್ರೇನ್‌ನ ಆಕ್ರಮಣವನ್ನು ಬೆಂಬಲಿಸುವ ಪಳೆಯುಳಿಕೆ ಇಂಧನ ಗಳಿಕೆಯನ್ನು ಮಿತಿಗೊಳಿಸಲು ನೋಡುತ್ತಿವೆ. ಭಾರತದ ಬಹುಪಾಲು ಮಿಲಿಟರಿ ಯಂತ್ರಾಂಶವನ್ನು ಸಹ ರಷ್ಯಾ ಒದಗಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ