• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಪಿಎಸ್ಐ Exam Scamನ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಯಾರು? ಇಲ್ಲಿದೆ ಓದಿ 'ದಿವ್ಯ' ಇತಿಹಾಸ!

Explained: ಪಿಎಸ್ಐ Exam Scamನ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಯಾರು? ಇಲ್ಲಿದೆ ಓದಿ 'ದಿವ್ಯ' ಇತಿಹಾಸ!

ಆಡಿಯೋ ವೈರಲ್ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಶಾಸಕರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಆಡಿಯೋ ವೈರಲ್ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದರು. ಶಾಸಕರನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಪಿಎಸ್ಐ ಪರೀಕ್ಷಾ ಅಕ್ರಮ ಹಗರಣದಲ್ಲಿ ಇಷ್ಟು ದಿನ ಸಿಐಡಿ ಪೊಲೀಸ್ (CID Police) ಹಾಗೂ ಸರ್ಕಾರಕ್ಕೆ (Government) ಚಳ್ಳೆಹಣ್ಣು ತಿನ್ನಿಸಿದ್ದ ಬಿಜೆಪಿ ನಾಯಕಿ (BJP Leader) ದಿವ್ಯಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹಾಗಿದ್ರೆ ಈ ದಿವ್ಯಾ ಹಾಗರಗಿ ಯಾರು? ಪೊಲೀಸ್ ಪರೀಕ್ಷೆಯಲ್ಲಿ ಆಕೆ ಅಕ್ರಮ ಎಸಗಿದ್ದು ಹೇಗೆ? ರಾಜಕೀಯದಲ್ಲಿ ಆಕೆಯ ಪ್ರಭಾವ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…

ಮುಂದೆ ಓದಿ ...
  • Share this:

ದೇಶದಲ್ಲೇ ಸಂಚಲನ ಮೂಡಿಸಿರುವ ಕರ್ನಾಟಕದ (Karnataka) ಪಿಎಸ್ಐ ಪರೀಕ್ಷಾ ಅಕ್ರಮ (PSI Exam Scam) ಪ್ರಕರಣಕ್ಕೆ (Case) ದೊಡ್ಡ ಟ್ವಿಸ್ಟ್ (Twist) ಸಿಕ್ಕಿದೆ. ಪ್ರಕರಣದ ಪ್ರಮುಖ ಆರೋಪಿ (Main Accused) ದಿವ್ಯಾ ಹಾಗರಗಿ (Divya Hagaragi) ಅರೆಸ್ಟ್ (Arrest) ಆಗಿದ್ದಾಳೆ. ಬರೋಬ್ಬರಿ 18 ದಿನಗಳ ಬಳಿಕ ದಿವ್ಯಾಗೆ ಪೊಲೀಸರು ಪುಣೆಯಲ್ಲಿ (Pune) ಹೆಡೆಮುರಿ ಕಟ್ಟಿದ್ದಾರೆ. ಇಷ್ಟು ದಿನ ಸಿಐಡಿ ಪೊಲೀಸ್ (CID Police) ಹಾಗೂ ಸರ್ಕಾರಕ್ಕೆ (Government) ಚಳ್ಳೆಹಣ್ಣು ತಿನ್ನಿಸಿದ್ದ ಬಿಜೆಪಿ ನಾಯಕಿ (BJP Leader) ವಿರುದ್ಧ ಅರೆಸ್ಟ್ ವಾರೆಂಟ್ (Arrest Warrant) ಜಾರಿ ಮಾಡಲಾಗಿತ್ತು. ಅಂತಿಮವಾಗಿ ದಿವ್ಯಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಹಾಗಿದ್ರೆ ಈ ದಿವ್ಯಾ ಹಾಗರಗಿ ಯಾರು? ಪೊಲೀಸ್ ಪರೀಕ್ಷೆಯಲ್ಲಿ ಆಕೆ ಅಕ್ರಮ ಎಸಗಿದ್ದು ಹೇಗೆ? ರಾಜಕೀಯದಲ್ಲಿ ಆಕೆಯ ಪ್ರಭಾವ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…


 ಪಿಎಸ್‌ಐ ಪರೀಕ್ಷೆ ನಡೆದಿದ್ದು ಯಾವಾಗ?


ಅಕ್ಟೋಬರ್ 3, 2021ರಲ್ಲಿ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಗಾಗಿ ರಾಜ್ಯಾದ್ಯಂತ ಹಲವು ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸುಮಾರು 54,041 ವಿದ್ಯಾರ್ಥಿಗಳು ಹಾಜರಾಗಿದ್ದರು.  ಈ ಪರೀಕ್ಷೆಯಲ್ಲಿ ಕೋಟಿ ಕೋಟಿ ಪಡೆದು, ಕೆಲವೊಂದು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಸಹಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ಪರೀಕ್ಷಾ ಹಗರಣ ಬಯಲಾಗಿದ್ದು ಹೇಗೆ?


ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಪ್ರಾರಂಭದಿಂದಲೂ ಕೇಳಿ ಬಂದಿತ್ತು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ಆರಂಭವಾಯಿತು. ಕಲಬುರಗಿಯ ಪರೀಕ್ಷಾ ಕೇಂದ್ರದ ನಾಲ್ವರು ಅಭ್ಯರ್ಥಿಗಳು ಮತ್ತು ಮೂವರು ಇನ್ವಿಜಿಲೇಟರ್‌ಗಳನ್ನು ಮೊದಲು ಪೊಲೀಸರು ವಶಕ್ಕೆ ಪಡೆದರು. ಬಂಧಿತ ಅಭ್ಯರ್ಥಿಗಳಲ್ಲಿ ಕಲಬುರಗಿಯ ಸೇಡಂ ಪಟ್ಟಣದ ವೀರೇಶ್ ಎಂಬ ವಿದ್ಯಾರ್ಥಿಯನ್ನು ಏಪ್ರಿಲ್ 11 ರಂದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ಬಹುಕೋಟಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.


ಇದನ್ನೂ ಓದಿ: Explained: ಏನಿದು PSI Exam Scam? ಇದರ ಆಳ, ಅಗಲ ಏನು? ಈವರೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ


 ಒಂದೇ ಜಿಲ್ಲೆಯಿಂದ 92 ಮಂದಿ ಆಯ್ಕೆ


ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಕಲಬುರಗಿ ಜಿಲ್ಲೆಗೆ ಸಿಂಹಪಾಲು ಸಿಕ್ಕಿತ್ತು. 545 ಹುದ್ದೆಗಳ ಪೈಕಿ ಕಲಬುರಗಿ ಜಿಲ್ಲೆಯಿಂದಲೇ ಸುಮಾರು‌ 92 ಅಭ್ಯರ್ಥಿಗಳು ಪಿಎಸ್ಐ ಆಗಿ ಆಯ್ಕೆ ಆಗಿದ್ದರು. ಕಲಬುರಗಿ ಜಿಲ್ಲೆಯ ಒಟ್ಟು 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಪೈಕಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷೆ ಬರೆದ 11 ಅಭ್ಯರ್ಥಿಗಳು ಪಾಸ್ ಆಗಿದ್ದರು. ಇವರೆಲ್ಲರೂ ಅಕ್ರಮವಾಗಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ ಎಂಬ ಆರೋಪ ಎದುರಾಗಿದೆ.


ಹಾಗಿದ್ರೆ ಯಾರು ಈ ದಿವ್ಯಾ ಹಾಗರಗಿ?


ದಿವ್ಯಾ ಹಾಗರಗಿ ಪಿಎಸ್ಐ ಪರೀಕ್ಷಾ ಅಕ್ರಮ ಹಗರಣದ ಮುಖ್ಯ ಆರೋಪಿ. ಅಕ್ರಮದ‌‌‌ ಕೇಂದ್ರ ಬಿಂದುವಾಗಿರುವ ಕಲಬುರಗಿಯ  ಗೋಕುಲ ನಗರದಲ್ಲಿರುವ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಡತಿ. ಕಲಬುರಗಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು.


ಬಿಜೆಪಿ ನಾಯಕಿ ಈ ದಿವ್ಯಾ ಹಾಗರಗಿ


ದಿವ್ಯಾ ಹಾಗರಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರಭಾವಿ ಬಿಜೆಪಿ ನಾಯಕಿ. ದಿಶಾ ಕಮಿಟಿಯಲ್ಲಿ ಸದಸ್ಯರಾಗಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ನರ್ಸಿಂಗ್‌ ಬೋರ್ಡ್‌ ಸದಸ್ಯೆಯೂ ಆಗಿದ್ದಾರೆ. ಈ ಹಿಂದೆ ಕಲಬುರಗಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆಯೂ ಆಗಿದ್ದರು. ಮುಂದಿನ ವಿಧಾನಸಭೆ ಚುನಾವಣೆಗೂ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿದ್ದರು ಎಂಬ ಮಾಹಿತಿಯೂ ಇದೆ. ಸದ್ಯ ಬಿಜೆಪಿಯಲ್ಲಿ ಯಾವುದೇ ಪದಾಧಿಕಾರಿ ಹುದ್ದೆಯನ್ನು ಅವರು ಹೊಂದಿಲ್ಲ. ಬದಲಾಗಿ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.


ಎಲ್ಲಾ ರಾಜಕೀಯ ಪಕ್ಷಗಳೊಂದಿಗೂ ಒಡನಾಟ


ದಿವ್ಯಾ ಹಾಗರಗಿ ಬರೀ ಬಿಜೆಪಿಯೊಂದೇ ಅಲ್ಲ, ಇತರೇ ಪಕ್ಷಗಳು, ಪ್ರಭಾವಿ ರಾಜಕೀಯ ನಾಯಕರೊಂದಿಗೂ ಸ್ನೇಹ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇತ್ತೀಚಿಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆ ದಿವ್ಯಾ ಹಾಗರಗಿ ವೇದಿಕೆಯಲ್ಲಿರುವ ಫೋಟೋಗಳನ್ನು ಬಿಜೆಪಿ ಬಿಡುಗಡೆ ಮಾಡಿತ್ತು.


ಪಿಎಸ್‌ಐ ಪರೀಕ್ಷೆಯಲ್ಲಿ ಭಾರೀ ಅಕ್ರಮ


ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ವ್ಯವಸ್ಥಿತವಾಗಿ ಅಕ್ರಮಗಳು ನಡೆದಿವೆ. ಪರೀಕ್ಷಾ ಮೇಲ್ವಿಚಾರಕರೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಲಕ್ಷ ಲಕ್ಷ ಹಣ ನೀಡಿದವರಿಗೆ ಪರೀಕ್ಷೆ ಆರಂಭ ಆಗುವುದಕ್ಕಿಂತ ಐದಿನೈದರಿಂದ ಇಪ್ಪತ್ತು ನಿಮಿಷದ ಮುಂಚಿತವಾಗಿಯೇ ಉತ್ತರಗಳು ಲಭ್ಯವಾಗುತ್ತಿದ್ದವು.


ಪರೀಕ್ಷೆಯಲ್ಲೂ ರಾಜಕೀಯ ಪ್ರಭಾವ ಬಳಕೆ


ಇಷ್ಟೇ ಅಲ್ಲದೆ ಪರೀಕ್ಷಾರ್ಥಿಗಳಿಗೆ ಪರೀಕ್ಷೆಯ ವೇಳೆ ನೀಡುತ್ತಿದ್ದ ಒಎಂಆರ್‌ ಪ್ರತಿಗಳನ್ನು ಸಿಬ್ಬಂದಿ ಸಂಗ್ರಹಿಸುತ್ತಿದ್ದರು. ಬಳಿಕ ಪರೀಕ್ಷಾ ಮೇಲ್ವಿಚಾರಕರೇ ಉತ್ತರಗಳನ್ನು ಒಎಂಆರ್‌ ಶೀಟ್‌ಗೆ ಎಂಟ್ರಿ ಮಾಡುತ್ತಿದ್ದರು. ಈ ಎಲ್ಲ ಅಕ್ರಮಗಳಿಗೆ ಕೇಂದ್ರ ಸ್ಥಾನವಾಗಿದ್ದದ್ದು ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಇಂಗ್ಲಿಷ್‌ ಶಾಲೆ. ದಿವ್ಯಾ ಹಾಗರಗಿ ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಪಿಎಸ್‌ಐ ನೇಮಕಾತಿ ಪರೀಕ್ಷಾ ಕೇಂದ್ರವನ್ನು ತನ್ನ ಶಾಲೆಗೆ ಮಂಜೂರು ಮಾಡಿಸಿಕೊಂಡಿದ್ದರು.


ದಿವ್ಯಾ ಒಡೆತನದ ಶಾಲೆಯಲ್ಲಿ ಪರೀಕ್ಷೆ ಬರೆದವರು ಪಾಸ್!


ಇವರ ಒಡೆತನದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆದ ಹತ್ತು ಜನ ಅಭ್ಯರ್ಥಿಗಳು ಪಿಎಸ್‌ಐ ಆಗಿ ನೇಮಕರಾಗಿದ್ದಾರೆ. ಈ ಹತ್ತು ಜನರೂ ಅಕ್ರಮವಾಗಿ ಪರೀಕ್ಷೆ ಬರೆದಿರುವ ಆರೋಪ ಇದೆ. ಈ ಪರೀಕ್ಷೆ ವೇಳೆ ದಿವ್ಯಾ ಸೂಚನೆಯಂತೆ ಸಿಬ್ಬಂದಿಗಳು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.


18 ದಿನದಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ದಿವ್ಯಾ


ದಿವ್ಯಾ ಹಾಗರಗಿ ಕಳೆದ 18 ದಿನಗಳಿಂದ ತಲೆ ಮರೆಸಿಕೊಂಡಿದ್ದಳು. ಸಿಐಡಿ ಪೊಲೀಸರ ಕೈಗೂ ಸಿಗದೇ ನಾಪತ್ತೆಯಾಗಿದ್ದಳು. ಬೆಂಗಳೂರು, ಕಲಬುರಗಿ, ವಿಜಯಪುರ ಸೇರಿದಂತೆ ರಾಜ್ಯದ ಹಲವೆಡೆ ಸಿಐಡಿ ತಂಡ ದಿವ್ಯಾಗಾಗಿ ಜಾಲಾಡಿದ್ದರು. ಆದರೂ ದಿವ್ಯಾ ಪತ್ತೆಯಾಗಿರಲೇ ಇಲ್ಲ.


ಪುಣೆ ಉದ್ಯಮಿ ಮನೆಯಲ್ಲಿದ್ದ ದಿವ್ಯಾ ಹಾಗರಗಿ


ದಿವ್ಯಾ ಹಾಗರಗಿ ಪುಣೆಯ ಉದ್ಯಮಿಯೊಬ್ಬರ ಮನೆಯಲ್ಲಿ ಅಡಗಿದ್ದಳು ಎನ್ನಲಾಗಿದೆ. ಕಳೆದ 18 ದಿನಗಳಿಂದ ಮಹಾರಾಷ್ಟ್ರ ರಾಜ್ಯದ ಪುಣೆಯ ಉದ್ಯಮಿ ಸುರೇಶ್ ಕಾಟೇಗಾಂವ್ ಬಳಿ ಆಶ್ರಯ ಪಡೆದಿದ್ದಳು ಎನ್ನಲಾಗಿದೆ. ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಮಹಾರಾಷ್ಟ್ರ ಕ್ಕೆ ತೆರಳಿದ ದಿವ್ಯಾ, ಸುರೇಶ್ ಕಾಟೇಗಾಂವ್ ಬಳಿ ಆಶ್ರಯ ಪಡೆದುಕೊಂಡಿದ್ದಳು.


ಯಾರು ಈ ಸುರೇಶ್ ಕಾಟೇಗಾಂವ್?


ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿದ್ದ ಸುರೇಶ್ ಕಾಟೇಗಾಂವ್ ಓರ್ವ ಉದ್ಯಮಿ ಎನ್ನಲಾಗಿದೆ. ಮರುಳು ದಂಧೆ ಮಾಡುತ್ತಿದ್ದ,ಆತನನ್ನು ಆಶ್ರಯ ನೀಡಿದ ಕಾರಣಕ್ಕೆ ಸಿಐಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ದಿವ್ಯಾ ಹಾಗರಗಿ, ಅಚ೯ನಾ, ಸುನಂದಾ, ಶಾಂತಿಬಾಯಿ, ಸುರೇಶ್ ಕಾಟೇಗಾಂವ್ ಸೇರಿದಂತೆ ಒಟ್ಟು ಆರು ಜನರ ಬಂಧನವಾಗಿದೆ.


ಇದನ್ನೂ ಓದಿ: Explained: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್! ಶುರುವಾಗಿದ್ದು ಹೇಗೆ, ಬಂದು ನಿಂತಿದ್ದೆಲ್ಲಿಗೆ?


ದಿವ್ಯಾ ಹಿಂದಿರುವ ಪ್ರಭಾವಿಗಳು ಯಾರು?

top videos


    ಮೂಲಗಳ ಪ್ರಕಾರ ದಿವ್ಯಾ ರಾಜಕೀಯವಾಗಿ ಭಾರೀ ಪ್ರಭಾವಿ ಎನ್ನಲಾಗುತ್ತಿದೆ. ಹೀಗಾಗಿ ಆಕೆಗೆ ಯಾರ್ಯಾರ ಜೊತೆ ಪರಿಚಯ ಇದೆ, ಯಾವ ಪ್ರಭಾವಿಗಳ ಜೊತೆ ಸ್ನೇಹವಿದೆ ಎನ್ನುವುದು ತಿಳಿದು ಬಂದಿಲ್ಲ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಕ್ರಮ ಎಸಗಿ, ಯಾರಿಗೂ ಸಿಗದಂತೆ ತಪ್ಪಿಸಿಕೊಂಡಿದ್ದರ ಹಿಂದೆ ಪ್ರಭಾವಿಗಳ ಕೈವಾಡ ಇದೆಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಸಿಐಡಿ ತನಿಖೆಯಲ್ಲಿ ಇವೆಲ್ಲವೂ ಬಯಲಾಗುವ ನಿರೀಕ್ಷೆ ಇದೆ.

    First published: