Explainer: ಇಡೀ ಕುಟುಂಬದ ಹತ್ಯೆ ಬಳಿಕ ಗ್ಯಾಂಗ್​ರೇಪ್, ದೀರ್ಘಕಾಲದ ಹೋರಾಡಿದ್ರೂ ದೋಷಿಗಳ ಬಿಡುಗಡೆ: ಯಾರು ಈ ಬಿಲ್ಕಿಸ್​ ಬಾನೊ?

ತನ್ನ ಮೇಲಾದ ಕುಕೃತ್ಯವನ್ನು ಬಯಲು ಮಾಡಿದ್ದ ಸಂತ್ರಸ್ತೆ ಬಿಲ್ಕಿಸ್​ ಬಾನೊ, ಸಾಮೂಹಿಕ ಅತ್ಯಾಚಾರದ ನಂತರ ತಾನು ಸುಮಾರು ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗಿದ್ದೆ . ಎದ್ದೇಳಲು ಸಾಧ್ಯವಾಗದಷ್ಟು ದೇಹ ನೋಯುತ್ತಿತ್ತು. ಪ್ರಜ್ಞೆ ಬಂದ ನಂತರ ಹೇಗೋ ನಿಭಾಯಿಸಿದ. ಬೆತ್ತಲೆಯಾಗಿದ್ದುದರಿಂದ ಮಹಿಳೆಯೊಬ್ಬಳಿಂದ ಬಟ್ಟೆ ಕೇಳಿ ಪಡೆದು ಧರಿಸಿದೆ ಎಂದು ಹೇಳಿದ್ದರು.

ಬಿಲ್ಕಿಸ್ ಬಾನೊ ರೇಪ್​ ಕೇಸ್

ಬಿಲ್ಕಿಸ್ ಬಾನೊ ರೇಪ್​ ಕೇಸ್

 • Share this:
  ಅಹಮದಾಬಾದ್(ಆ.16): ಮಾರ್ಚ್ 3, 2002, ಬಿಲ್ಕಿಸ್ ಬಾನೊ (Bilkis Bano) ಅವರ ಜೀವನ ನಾಶವಾದ ದಿನ. ಗರ್ಭದಲ್ಲಿರುವ ಐದು ತಿಂಗಳ ಮಗುವನ್ನು ಸ್ವಾಗತಿಸಲು ಬಿಲ್ಕಿಸ್ ಮತ್ತು ಅವರ ಕುಟುಂಬ ಸಿದ್ಧತೆ ನಡೆಸಿತ್ತು. ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡುವುದರಲ್ಲಿತ್ತು. ಆದರೆ ಅದಕ್ಕೂ ಮೊದಲು ನಡೆದ ಗೋದ್ರಾ ಹಿಂಸಾಚಾರ (Godhra Violence) ಎಲ್ಲವನ್ನೂ ನಾಶ ಮಾಡಿತ್ತು. ಗಲಭೆಕೋರರ ಗುಂಪು ಬಿಲ್ಕಿಸ್ ಅವರ ಮನೆಗೆ ನುಗ್ಗಿತ್ತು, ನೋಡ ನೋಡುತ್ತಿದ್ದಂತೆಯೇ ಅವರ ಕಣ್ಣೆದುರೇ ಇಡೀ ಕುಟುಂಬವನ್ನು ಹತ್ಯೆಗೈದಿದ್ದರು. ಆದರೆ ಇಷ್ಟಕ್ಕೇ ಸುಮ್ಮನಾಗದ ಗಲಭೆಕೋರರು ಬಿಲ್ಕಿಸ್​ ಮೇಲೆರಗಿದ್ದರು. ಬಳಿಕ ಗಲಭೆಕೋರೆಲ್ಲರೂ ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು (Gang Rape). ನೋವಿನಿಂದ ಮೂರ್ಛೆ ಹೋದ ಬಿಲ್ಕಿಸ್, ಪ್ರಜ್ಞೆ ಬಂದು ತನ್ನನ್ನು ತಾನು ಸಂತೈಸಿಕೊಂಡು ಸುದೀರ್ಘ ಕಾನೂನು ಹೋರಾಟ ನಡೆಸಿದರು. ಅವರ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು ಆದರೆ ಈಗ ಅವರನ್ನು ಗುಜರಾತ್ ಸರ್ಕಾರ ಜೈಲಿನಿಂದ ಬಿಡುಗಡೆ ಮಾಡಿದೆ.

  15 ವರ್ಷಕ್ಕೂ ಹೆಚ್ಚು ಕಾಲ ಜೈಲು ವಾಸ ಅನುಭವಿಸಿರುವ ತಮ್ಮನ್ನು ಅವಧಿಗೂ ಮುನ್ನ ಬಿಡುಗಡೆ ಮಾಡುವಂತೆ ಕೋರಿ ಅಪರಾಧಿಗಳು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮಾಡುವ ವಿಷಯವನ್ನು ಪರಿಶೀಲಿಸುವಂತೆ ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸರ್ಕಾರ ಸಮಿತಿ ರಚಿಸಿದ್ದು, ಈ ಸಮಿತಿಯ ತನಿಖಾ ವರದಿಯ ನಂತರ, ಆಗಸ್ಟ್ 15 ರಂದು ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.

  ಇದನ್ನೂ ಓದಿ: Bilkis Bano Case: ಬಿಲ್ಕಿಸ್ ಬಾನೊ ರೇಪ್​ ಕೇಸ್: ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ 11 ದೋಷಿಗಳನ್ನು ಬಿಡುಗಡೆಗೊಳಿಸಿದ ಸರ್ಕಾರ!

  ಬಿಡುಗಡೆ ಮಾಡಿದ್ದೇಕೆ?

  ಸಮಿತಿಯ ಅಧ್ಯಕ್ಷತೆ ವಹಿಸಿದ್ದ ಪಂಚಮಹಲ್ ಜಿಲ್ಲಾಧಿಕಾರಿ ಸುಜಲ್ ಮಾಯಾತ್ರಾ ಮಾತನಾಡಿ, 'ಕೆಲವು ತಿಂಗಳ ಹಿಂದೆ ಸಮಿತಿಯು ಸರ್ವಾನುಮತದಿಂದ ಪ್ರಕರಣದ ಎಲ್ಲಾ 11 ಅಪರಾಧಿಗಳ ವಿನಾಯಿತಿ ನೀಡಲು ತೀರ್ಮಾನಿಸಿತು. ಶಿಫಾರಸನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಸ್ವಾತಂತ್ರ್ಯ ದಿನದಂದು ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.

  ಸಾಮೂಹಿಕ ಅತ್ಯಾಚಾರದ ನಂತರ ಸಾಯಲು ಬಿಟ್ಟರು

  ಬಿಲ್ಕಿಸ್ ಬಾನೋ ಪ್ರಕರಣವು 3 ಮಾರ್ಚ್ 2002 ರಂದು ನಡೆದಿದೆ. ಗೋಧ್ರಾ ನಂತರದ ಗಲಭೆಗಳ ಸಂದರ್ಭದಲ್ಲಿ, ದಾಹೋಡ್ ಜಿಲ್ಲೆಯ ಲಿಮ್ಖೇಡಾ ತಾಲೂಕಿನ ರಂಧಿಕ್‌ಪುರ ಗ್ರಾಮದ ಬಿಲ್ಕಿಸ್ ಬಾನೋ ಅವರ ಮನೆಗೆ ಗುಂಪೊಂದು ನುಗ್ಗಿತು. ಕುಟುಂಬದವರ ಮೇಲೆ ಹಲ್ಲೆ ನಡೆದಿತ್ತು. ಆ ಸಮಯದಲ್ಲಿ ಐದು ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರಕ್ಕೊಳಗಾದರು. ಈ ವೇಳೆ ಅವರ ಕುಟುಂಬದ ಏಳು ಸದಸ್ಯರನ್ನು ಹತ್ಯೆ ಮಾಡಲಾಗಿತ್ತು. ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣವು ಗುಜರಾತ್ ಗಲಭೆಯ ಅತ್ಯಂತ ಕೆಟ್ಟ ಪ್ರಕರಣವಾಗಿದೆ. ಆ ಸಮಯದಲ್ಲಿ ಬಿಲ್ಕಿಸ್ 21 ವರ್ಷ ವಯಸ್ಸಿನವರಾಗಿದ್ದರು ಮತ್ತು ಗರ್ಭಿಣಿಯಾಗಿದ್ದರು. ಗೋಧ್ರಾ ಗುಜರಾತ್ ಗಲಭೆಯ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಸಾಯಲು ಬಿಡಲಾಹಗಿತ್ತು. ಇತರ ಆರು ಸದಸ್ಯರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪ್ರಕರಣದ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು.

  ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ, ಬೇಡಿ ಪಡೆದಿದ್ದರು

  ಸಾಮೂಹಿಕ ಅತ್ಯಾಚಾರದ ನಂತರ ತಾನು ಸುಮಾರು ಮೂರು ಗಂಟೆಗಳ ಕಾಲ ಪ್ರಜ್ಞಾಹೀನಳಾಗಿದ್ದಳು ಎಂದು ಬಿಲ್ಕಿಸ್ ಹೇಳಿದ್ದರು. ಎದ್ದೇಳಲು ಸಾಧ್ಯವಾಗದಷ್ಟು ನೋವು ಮೈಯಲ್ಲಿ ಇತ್ತು. ಪ್ರಜ್ಞೆ ಬಂದ ನಂತರ ಹೇಗೋ ನಿಭಾಯಿಸಿದೆ. ಇನ್ನು ಸ್ವಲ್ಪ ದಿನ ಇಲ್ಲಿಯೇ ಇದ್ದರೆ ತನ್ನನ್ನು ಸಾಯಿಸಿಬಿಡುತ್ತೇನೋ ಎಂಬ ಭಯವೂ ಮನದಲ್ಲಿ ಮೂಡಿತ್ತು. ಬರಿಗಾಲಿನಲ್ಲಿ ನಡೆದುಕೊಂಡು ಹೋಗಿ ಮತ್ತು ಹತ್ತಿರದ ಬುಡಕಟ್ಟು ಮಹಿಳೆಯಿಂದ ಬಟ್ಟೆಗಳನ್ನು ಎರವಲು ಪಡೆದೆ. ಬಳಿಕ ಹೋಮ್ ಗಾರ್ಡ್ ನನ್ನನ್ನು, ಅವರು ಲಿಮ್ಖೇಡಾ ಪೊಲೀಸ್ ಠಾಣೆಗೆ ಕರೆದೊಯ್ದರು, ಅಲ್ಲಿ ಪೊಲೀಸ್ ದೂರು ನೀಡಿದ್ದೆ ಎಂದು ಹೇಳಿದ್ದರು.

  Supreme Court On Free Fall of Freebies CJI NV Ramana said Please submit something before my retirement
  ಸುಪ್ರೀಂಕೋರ್ಟ್


  ನ್ಯಾಯಕ್ಕಾಗಿ ದೀರ್ಘ ಹೋರಾಟ

  ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಪೊಲೀಸರು ಪ್ರಕರಣವನ್ನು ವಜಾಗೊಳಿಸಿದ್ದರು. ಇದಾದ ನಂತರ ಬಿಲ್ಕಿಸ್ ಮಾನವ ಹಕ್ಕುಗಳ ಆಯೋಗವನ್ನು ತಲುಪಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಮುಕ್ತಾಯದ ವರದಿಯನ್ನು ವಜಾಗೊಳಿಸಿತ್ತು ಮತ್ತು ಈ ವಿಷಯವನ್ನು ಹೊಸದಾಗಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶಿಸಿತ್ತು. ಸಿಬಿಐ ಆರೋಪಪಟ್ಟಿಯಲ್ಲಿ 18 ಮಂದಿಯನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇದರಲ್ಲಿ 5 ಪೊಲೀಸರು ಸೇರಿದಂತೆ ಇಬ್ಬರು ವೈದ್ಯರೂ ಸೇರಿದ್ದಾರೆ, ಅವರು ಆರೋಪಿಗಳಿಗೆ ಸಹಾಯ ಮಾಡಲು ಸಾಕ್ಷ್ಯವನ್ನು ತಿರುಚಿದ್ದಾರೆ ಎಂದು ಆರೋಪಿಸಲಾಗಿತ್ತು.

  ಬಿಲ್ಕಿಸ್ ಬಾನೊ 2 ವರ್ಷಗಳಲ್ಲಿ ಮನೆ ಬದಲಾಯಿಸಬೇಕಾಯಿತು

  ಬಿಲ್ಕಿಸ್ ಹೇಗಾದರೂ ತನ್ನನ್ನು ರಕ್ಷಿಸಿಕೊಂಡರು ಮತ್ತು ನ್ಯಾಯಕ್ಕಾಗಿ ಸುದೀರ್ಘ ಹೋರಾಟ ನಡೆಸಿದರು. ಮತ್ತೊಂದೆಡೆ, ಬಿಲ್ಕಿಸ್ ಕುಟುಂಬ ಸದಸ್ಯರಿಗೆ ಬೆದರಿಕೆಗಳು ಬರುತ್ತಲೇ ಇದ್ದವು. ಪ್ರಕರಣ ನಡೆದ ಎರಡು ವರ್ಷಗಳಲ್ಲಿ 20 ಬಾರಿ ಮನೆ ಬದಲಾಯಿಸಿದ್ದರು. ಹೀಗಾಗಿ ಬಿಲ್ಕಿಸ್ ತನ್ನ ಪ್ರಕರಣವನ್ನು ಗುಜರಾತ್‌ನ ಹೊರಗೆ ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದರು. 2008ರಲ್ಲಿ ಮುಂಬೈನ ಸೆಷನ್ಸ್ ನ್ಯಾಯಾಲಯ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಪೈಕಿ ಮೂವರು ಬಿಲ್ಕಿಸ್ ಮೇಲೆ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದರು. ಬಾಂಬೆ ಹೈಕೋರ್ಟ್ ಮೇ 2017 ರಂದು ಎಲ್ಲಾ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು ಮತ್ತು 7 ಅಪರಾಧಿಗಳ ಖುಲಾಸೆ ಆದೇಶವನ್ನು ತಿರಸ್ಕರಿಸಿತು. ಇದರಲ್ಲಿ ಸಾಕ್ಷ್ಯವನ್ನು ತಿರುಚಿದ ಪೊಲೀಸರು ಮತ್ತು ವೈದ್ಯರೂ ಸೇರಿದ್ದಾರು.

  ಇದನ್ನೂ ಓದಿ:  2002 ಗೋಧ್ರಾ ದಂಗೆ ಪ್ರಕರಣ: ಮೋದಿ ನೇತೃತ್ವದ ಗುಜರಾತ್​ ಸರ್ಕಾರಕ್ಕೆ ಕ್ಲೀನ್​ಚಿಟ್​

  ಮತ್ತೆ ಸುಪ್ರೀಂ ಕೋರ್ಟ್ ಗಟ್ಟಿ ನಿಲುವು

  ಬಿಲ್ಕಿಸ್‌ಗೆ 55 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಎಲ್ಲಾ ಅಪರಾಧಿಗಳಿಗೆ ನ್ಯಾಯಾಲಯ ಆದೇಶಿಸಿt್ತು. ಇದಾದ ನಂತರ, ಹೈಕೋರ್ಟ್‌ನ ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಪೊಲೀಸರನ್ನು ಗುಜರಾತ್ ಸರ್ಕಾರವು ಮರುಸೇರ್ಪಡೆಗೊಳಿಸಿತು. ಇದಾದ ಬಳಿಕ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಪೊಲೀಸ್ ಸಿಬ್ಬಂದಿಗೆ ಪಿಂಚಣಿ ಸೌಲಭ್ಯವನ್ನು ತಡೆಹಿಡಿದು, ಐಪಿಎಸ್ ಅಧಿಕಾರಿಯನ್ನು ಕೆಳಗಿಳಿಸಲು ಆದೇಶ ನೀಡಿತ್ತು.

  ಅಂತಹ ಅಪರಾಧಿಗಳಿಗೆ ಶಿಕ್ಷೆ

  ಅಹಮದಾಬಾದ್‌ನಲ್ಲಿ ವಿಚಾರಣೆ ಆರಂಭವಾಗಿತ್ತು. ಆದಾಗ್ಯೂ, ಸಾಕ್ಷಿಗಳಿಗೆ ಹಾನಿಯಾಗಬಹುದು ಮತ್ತು ಸಿಬಿಐ ಸಂಗ್ರಹಿಸಿದ ಸಾಕ್ಷ್ಯವನ್ನು ತಿರುಚಬಹುದು ಎಂದು ಬಿಲ್ಕಿಸ್ ಬಾನೊ ಆತಂಕ ವ್ಯಕ್ತಪಡಿಸಿದರು. ಹೀಗಾಗಿ ಆಗಸ್ಟ್ 2004 ರಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಿತು. ಜನವರಿ 21, 2008 ರಂದು, ಬಿಲ್ಕಿಸ್ ಬಾನೊ ಅವರ ಕುಟುಂಬದ ಏಳು ಸದಸ್ಯರ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗಾಗಿ ವಿಶೇಷ ಸಿಬಿಐ ನ್ಯಾಯಾಲಯವು 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಬಾಂಬೆ ಹೈಕೋರ್ಟ್ ತನ್ನ 2018 ರ ಆದೇಶದಲ್ಲಿ ಆರೋಪಿಗಳ ಶಿಕ್ಷೆಯನ್ನು ಎತ್ತಿಹಿಡಿಯುವಾಗ ಪ್ರಕರಣದಲ್ಲಿ ಏಳು ಜನರನ್ನು ಖುಲಾಸೆಗೊಳಿಸುವುದನ್ನು ರದ್ದುಗೊಳಿಸಿತ್ತು.
  Published by:Precilla Olivia Dias
  First published: