ರಾಜ್ಯ ರಾಜಕೀಯ ರಂಗೇರುತ್ತಿದೆ. ಮುಂಬರುವ ವಿಧಾನಸಭಾ ಎಲೆಕ್ಷನ್ನಲ್ಲಿ (assembly elections) ಗೆದ್ದು ಅಧಿಕಾರ ಹಿಡಿಯಲು ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ (JDS) ಸೇರಿದಂತೆ ಎಲ್ಲಾ ಪಕ್ಷಗಳು ಶತಾಯಗತಾಯ ಪ್ರಯತ್ನ ಮಾಡುತ್ತಿವೆ. ಈಗಾಗಲೇ ಗೆಲ್ಲುವ ಕುದುರೆಗಳಿಗೆ ಹುಡುಕಾಟ ಶುರುವಾಗಿದೆ. ಹಿಂದೆಲ್ಲ ವಿವಿಧ ಕ್ಷೇತ್ರದ ಸಾಧಕರು, ಸಮಾಜಸೇವಕರಿಗೆ ರಾಜಕೀಯ ಪಕ್ಷಗಳು ಮಣೆ ಹಾಕುತ್ತಿದ್ದವು. ಅವರ ಜನಪ್ರಿಯತೆಯನ್ನು ಎನ್ಕ್ಯಾಶ್ ಮಾಡಿಕೊಂಡು, ಅಭಿಮಾನಿಗಳು, ಬೆಂಬಲಿಗರನ್ನು ಪಕ್ಷಕ್ಕೆ ಸೆಳೆದು, ಅದನ್ನು ವೋಟ್ (Vote) ಆಗಿ ಕನ್ವರ್ಟ್ ಮಾಡಿಕೊಳ್ಳುವುದು ಇದರ ಉದ್ದೇಶ. ಆದರೆ ಇದೀಗ ಟ್ರೆಂಡ್ ಚೇಂಜ್ ಆಗಿದೆ. ಈಗ ರೌಡಿ ಶೀಟರ್ಗಳು (Rowdy Sheeter), ಅಪರಾಧ ಹಿನ್ನೆಲೆ ಇದ್ದವರಿಗೂ ಕೂಡ ಪಕ್ಷಗಳು ಮಣೆ ಹಾಕುತ್ತಿವೆ. ಈಗಾಗಲೇ ರೌಡಿಶೀಟರ್ ಫೈಟರ್ ರವಿ (Fighter Ravi) ಬಿಜೆಪಿ ಸೇರಿದ್ದಾನೆ, ಮತ್ತೊಂದೆಡೆ ಕುಖ್ಯಾತ ರೌಡಿಶೀಟರ್ ಸೆೈಲೆಂಟ್ ಸುನೀಲ (Silent Sunil) ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾನೆ. ಈ ನಡುವೆಯೇ ಮತ್ತೋರ್ವ ಕುಖ್ಯಾತ ರೌಡಿ ಬೆತ್ತನಗೆರೆ ಶಂಕರ (Bettanagere Shankara) ಕೂಡ ಬಿಜೆಪಿ ಸೇರಲು ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ. ಹಾಗಾದರೆ ಬೆತ್ತನಗೆರೆ ಶಂಕರ ಯಾರು? ಈತನ ಹಿನ್ನೆಲೆ ಏನು? ಈತನ ರಕ್ತಚರಿತ್ರೆಯ ಪರಿಚಯ ಇಲ್ಲಿದೆ
ನೆಲಮಂಗಲ ರಕ್ತಚರಿತ್ರೆಯಲ್ಲಿ ಬೆತ್ತನಗೆರೆಯದ್ದೇ ಮೊದಲ ಪುಟ!
ಹೌದು, ಇದು ಅಕ್ಷರಶಃ ಸತ್ಯ. ಶಂಕರನ ರಕ್ತಚರಿತ್ರೆ ಭಯಾನಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು ಕಂಡ ಕುಖ್ಯಾತ ದರೋಡೆಕೋರರಲ್ಲಿ ಬೆತ್ತನಗೆರೆ ಬ್ರದರ್ಸ್ ಪ್ರಮುಖರು. ಬೆತ್ತನಗೆರೆ ಸೀನ ಹಾಗೂ ಆತನ ಸಹೋದರ ಸಂಬಂಧಿಗಳಾದ ಬೆತ್ತನಗೆರೆ ಶಂಕರ, ಬೆತ್ತನಗೆರೆ ಮಂಜ ಮತ್ತಿತರರು ಭೂಗತಲೋಕದಲ್ಲಿ ಹವಾ ಮಾಡಿದವರು. ಅಂದಹಾಗೆ ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ರಕ್ತಚರಿತ್ರೆಯ ಮೊದಲ ಪುಟ ಬರೆದದ್ದೇ ಬೆತ್ತನಗೆರೆ ಬ್ರದರ್ಸ್.
ಕುಖ್ಯಾತ ಬೆತ್ತನಗೆರೆ ಬ್ರದರ್ಸ್
ಬೆತ್ತನಗೆರೆ ಶಂಕರ ಮತ್ತು ಇತರ ಬೆತ್ತನಗೆರೆ ಬ್ರದರ್ಸ್ ಬೆಳವಣಿಗೆಯು ಕಳೆದ ದಶಕದಲ್ಲಿ ನೆಲಮಂಗಲ, ದೇವನಹಳ್ಳಿ ಮತ್ತು ಇತರ ಉತ್ತರ ಬೆಂಗಳೂರು ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದೊಂದಿಗೆ ಜಾಸ್ತಿ ಆಯ್ತು. ನೆಲಮಂಗಲದ ಬೆತ್ತನಗೆರೆ ಎಂಬ ಕುಗ್ರಾಮವು ಬೆತ್ತನಗೆರೆಯೊಂದಿಗೆ 80 ಕ್ಕೂ ಹೆಚ್ಚು ರೌಡಿ ಶೀಟರ್ಗಳನ್ನು ಹುಟ್ಟುಹಾಕಿದೆ. ಈ ಪೈಕಿ ಬೆತ್ತನಗೆರೆ ಸೀನ ಅಲಿಯಾಸ್ ಶ್ರೀನಿವಾಸ, ಶಂಕರಗೌಡ ಅಲಿಯಾಸ್ ಬೆತ್ತನಗೆರೆ ಶಂಕರ ಪ್ರಮುಖರು.
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ರಕ್ತ ಹರಿಸಿದ ಬ್ರದರ್ಸ್
ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸೋದರ ಸಂಬಂಧಿಗಳ ಪೈಪೋಟಿ ರಾಜಕಾರಣಿ 'ಬಿಇಎಂಎಲ್' ಕೃಷ್ಣಪ್ಪ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ಕೊಲೆಗೆ ಕಾರಣವಾಯಿತು. 2013ರಲ್ಲಿ ಪೊಲೀಸ್ ಎನ್ಕೌಂಟರ್ನಲ್ಲಿ ಸೀನಾ ಸಾವನ್ನಪ್ಪಿದ್ದ.
ಇದನ್ನೂ ಓದಿ: Silent Sunil and Fighter Ravi: ಸೈಲೆಂಟ್ ಆಗಿಯೇ ಸದ್ದು ಮಾಡುತ್ತಿರುವ ಸುನೀಲ ಯಾರು? ಫೈಟರ್ ರವಿ ಇತಿಹಾಸ ನಿಮಗೆ ಗೊತ್ತಾ?
ಬೆತ್ತನಗೆರೆ ಬ್ರದರ್ಸ್ ನಡುವೆ ಪೈಪೋಟಿ
ಬೆತ್ತನಗೆರೆ ಶಂಕರ ಮತ್ತು ಅವನ ಸೋದರ ಸಂಬಂಧಿ ಬೆತ್ತನಗೆರೆ ಸೀನ (ಶ್ರೀನಿವಾಸ) ನಡುವಿನ ಪೈಪೋಟಿಯು ಭೂಗತ ಲೋಕದ ಕಥೆಯಾಗಿದೆ. ಬಾಳೇಕೈ ಮಂಡಿ ಬಸವಯ್ಯನ ಕೊಲೆಯ ಮೂಲಕ ಸೋದರ ಸಂಬಂಧಿಗಳು ಸಾರ್ವಜನಿಕವಾಗಿ ಅಪಖ್ಯಾತಿಗೆ ಗುರಿಯಾದರು. ಬಸವಯ್ಯ ಅವರು 2004ರಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಯಲ್ಲಿ ಹನುಮಂತಯ್ಯ ಅವರನ್ನು ಸೋಲಿಸಿದ್ದರು. ಅಭ್ಯರ್ಥಿ ಹನುಮಂತಯ್ಯ ಅವರ ಮಗ ಸೀನ ಮತ್ತು ಅವರ ಸೋದರ ಸಂಬಂಧಿ ಶಂಕರ ಅವರನ್ನು ಸೋಲಿಸಿದರು. ಇದೇ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಯ್ತು.
ಶಂಕರ್ನ ಮೇಲೆ ಸೀನಾ ಕಿಡಿಕಿಡಿ
ರಾಜಕಾರಣಿ ಬಿಇಎಂಎಲ್ ಕೃಷ್ಣಪ್ಪ ಅವರು ಶಂಕರ ಅವರಿಗೆ ಜಾಮೀನು ಪಡೆಯಲು ಸಹಾಯ ಮಾಡಿದ್ದರು ಎಂದು ಹೇಳಲಾಗುತ್ತದೆ. ಆದರೆ ಸೀನಗೆ ಯಾವುದೇ ಸಹಾಯ ಮಾಡಿರಲಿಲ್ಲ. ಸೀನಾ ಅವರ ಸಂಬಂಧಿ ಯಡಿಯಾಲ್ ದೇವೇಂದ್ರ ಅವರು ಕೃಷ್ಣಪ್ಪ ಅವರ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದರು ಮತ್ತು ಅವರ ಸೋದರ ಸಂಬಂಧಿ ಶಂಕರ ಶತ್ರುವನ್ನು ಸೇರುತ್ತಿದ್ದಾರೆ ಎಂದು ಸೀನ ಕಿಡಿಕಿಡಿಯಾಗಿದ್ದ.
ಜೈಲಿನಲ್ಲೇ ಕೊಲ್ಲಲು ಯತ್ನ
ಇಬ್ಬರು ಸೋದರ ಸಂಬಂಧಿಗಳು ಪರಸ್ಪರರ ಮೇಲೆ ಅನೇಕ ಹಲ್ಲೆ ಪ್ರಯತ್ನಗಳನ್ನು ಮಾಡಿದರು. ಈ ವೇಳೆ ಸೀನನನ್ನು ಮೂರು ಬಾರಿ ಕೊಲ್ಲಲು ಪ್ಲಾನ್ ಮಾಡಲಾಗಿತ್ತು. ಮೈಸೂರು ಜೈಲಿನೊಳಗೆ ಒಮ್ಮೆ ಕೊಲೆ ಯತ್ನ ನಡೆಸಿತ್ತು. ಅಲ್ಲಿ ಕೈದಿಯೊಬ್ಬನಿಗೆ ದೇಶಿ ನಿರ್ಮಿತ ಪಿಸ್ತೂಲ್ ಅನ್ನು ಪೂರೈಸಲಾಯಿತು. ಸೀನಾಗೆ ಆರು ಬಾರಿ ಗುಂಡು ಹಾರಿಸಲಾಯಿತು, ಆದರೆ ಒಂದೇ ಒಂದು ಗುಂಡು ಅವನ ಭುಜಕ್ಕೆ ತಗುಲಿತು. ಆದರೆ ಪವಾಡ ಸದೃಶ ರೀತಿಯಲ್ಲಿ ಸೀನ ಪಾರಾಗಿದ್ದ.
ಸಂಬಂಧಿಗಳಿಂದಲೇ ಸಾಕ್ಷ್ಯ
ಸ್ಥಳೀಯ ರಾಜಕಾರಣಿ ಗಂಗೊಂಡನಹಳ್ಳಿ ರಾಮಮೂರ್ತಿ ಬೆತ್ತನಗೆರೆ ದರೋಡೆಕೋರರ ಮೇಲೆ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಆದರೆ ಅವನೂ ಕೊಲೆಯಾದ. ಮತ್ತೊಂದೆಡೆ ಸೋದರ ಸಂಬಂಧಿ ಯಡಿಯಾಳ್ ದೇವೇಂದ್ರ ಸೀನಗೆ ಬೆಂಬಲ ನೀಡುತ್ತಿದ್ದ ಎಂಬ ಕಾರಣಕ್ಕೆ ಶಂಕರನ ಗ್ಯಾಂಗ್ ಹತ್ಯೆ ಮಾಡಿತ್ತು. ಇದಕ್ಕೆ ಪ್ರತೀಕಾರವಾಗಿ ಸೀನಾ ಗ್ಯಾಂಗ್ ಶಂಕರನಿಗೆ ಆಪ್ತನಾಗಿದ್ದ ರೀಲರ್ ಲೋಹಿತ್ ಗೌಡನನ್ನು ಕೊಲೆ ಮಾಡಿತ್ತು ಎನ್ನಲಾಗಿದೆ. ಸೀನ ಮತ್ತು ಶಂಕರನ ವಿರುದ್ಧ ಸಾಕ್ಷಿ ಹೇಳಲು ಯಾವುದೇ ಪ್ರತ್ಯಕ್ಷದರ್ಶಿಗಳು ಸಿದ್ಧರಿಲ್ಲದ ಕಾರಣ ಅವರನ್ನು ಬಂಧಿಸಲು ಪೊಲೀಸರಿಗೆ ಸ್ವಲ್ಪ ಸಮಯ ಹಿಡಿಯಿತು. ಕೊನೆಗೆ ರೈತ ಕೃಷ್ಣಮೂರ್ತಿ ಹಾಗೂ ವಕೀಲ ದೇವರಾಜ್ ಮುಂದೆ ಬಂದು ಸಾಕ್ಷಿ ಹೇಳಿದ ಮೇಲೆ ಸೋದರ ಸಂಬಂಧಿಗಳನ್ನು ಬಂಧಿಸಲಾಗಿತ್ತು.
ಬೆತ್ತನಗೆರೆ ಶಂಕರ್ನ ರಕ್ತ ಚರಿತ್ರೆಯ ಪುಟಗಳು!
ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಳ್ಳುತ್ತಿರುವ ಶಂಕರ್
ಇಷ್ಟೆಲ್ಲಾ ಹಿನ್ನೆಲೆಯಿರುವ ಶಂಕರ್ ಇದೀಗ ಬಿಜೆಪಿ ನಾಯಕರ ಜೊತೆ ಕಾಣಿಸಿಕೊಳ್ಳುತ್ತಿದ್ದಾನೆ. ಈಶ್ವರಪ್ಪ ಸೇರಿದಂತೆ ಘಟಾನುಘಟಿಗಳ ಜೊತೆ ಕಾಣಿಸಿಕೊಂಡಿದ್ದಾನೆ. ಈತನ ಹೊಸ ಹೆಜ್ಜೆ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ