• Home
  • »
  • News
  • »
  • explained
  • »
  • Savitri Jindal: ಏಷ್ಯಾದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಜೀವನಗಾಥೆ ಇಲ್ಲಿದೆ

Savitri Jindal: ಏಷ್ಯಾದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಜೀವನಗಾಥೆ ಇಲ್ಲಿದೆ

ಸಾವಿತ್ರಿ ಜಿಂದಾಲ್‌

ಸಾವಿತ್ರಿ ಜಿಂದಾಲ್‌

ಏಷ್ಯಾದ ಶ್ರೀಮಂತ ಮಹಿಳೆಯ ಪಟ್ಟದಲ್ಲಿದ್ದ ಚೀನಾದ ಯಾಂಗ್ ಹುಯಿಯಾನ್ ಇನ್ನು ಮುಂದೆ ಆ ಸ್ಥಾನದಲ್ಲಿ ಇರುವುದಿಲ್ಲ, ಏಕೆಂದರೆ ಭಾರತದ ಸಾವಿತ್ರಿ ಜಿಂದಾಲ್ ಏಷ್ಯಾದ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯೆನರ್ಸ್ ಇಂಡೆಕ್ಷ್‌ನಲ್ಲಿ ಯಾಂಗ್ ಅವರನ್ನು ಹಿಂದಿಕ್ಕಿದ ಭಾರತದ ಸಾವಿತ್ರಿ ಜಿಂದಾಲ್, ಏಷ್ಯಾದ ಶ್ರೀಮಂತ ಮಹಿಳೆ ಎಂದೆನಿಸಿಕೊಂಡಿದ್ದಾರೆ. ಅವರ ಜೀವನಗಾಥೆ ಇಲ್ಲಿದೆ...

ಮುಂದೆ ಓದಿ ...
  • Share this:

ಏಷ್ಯಾದ ಶ್ರೀಮಂತ ಮಹಿಳೆ (Asia's richest woman) ಎಂಬ ಹೆಗ್ಗಳಿಕೆ ಪಾತ್ರರಾದ ಭಾರತದ ಸಾವಿತ್ರಿ ಜಿಂದಾಲ್ ಕಾಲೇಜು ಶಿಕ್ಷಣ ಪಡೆದವರಲ್ಲ ಎಂಬುದು ವಿಶೇಷವಾದ ಸಂಗತಿಯಾಗಿದೆ. ಇವರು ತಮ್ಮ ಪತಿಯ ನಿಧನದ ನಂತರ ಬೃಹತ್ ಕಂಪನಿಯ (Company) ಉಸ್ತುವಾರಿ ವಹಿಸಿಕೊಂಡರು. ಏಷ್ಯಾದ ಶ್ರೀಮಂತ ಮಹಿಳೆಯ ಪಟ್ಟದಲ್ಲಿದ್ದ ಚೀನಾದ ಯಾಂಗ್ ಹುಯಿಯಾನ್ ಇನ್ನು ಮುಂದೆ ಆ ಸ್ಥಾನದಲ್ಲಿ ಇರುವುದಿಲ್ಲ, ಏಕೆಂದರೆ ಭಾರತದ ಸಾವಿತ್ರಿ ಜಿಂದಾಲ್ (Savitri Jindal) ಏಷ್ಯಾದ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬ್ಲೂಮ್ ಬರ್ಗ್ ಬಿಲಿಯೆನರ್ಸ್ ಇಂಡೆಕ್ಷ್ ನಲ್ಲಿ ಯಾಂಗ್ ಅವರನ್ನು ಹಿಂದಿಕ್ಕಿದ ಭಾರತದ ಸಾವಿತ್ರಿ ಜಿಂದಾಲ್ ಏಷ್ಯಾದ ಶ್ರೀಮಂತ ಮಹಿಳೆ ಎಂದೆನಿಸಿಕೊಂಡಿದ್ದಾರೆ.


ಲೋಹಗಳು ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ಅನೇಕ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿರುವ ಜಿಂದಾಲ್ ಗ್ರೂಪ್‌ಗೆ ಸಂಬಂಧಿಸಿರುವ ಸಾವಿತ್ರಿ ಜಿಂದಾಲ್ 11.3 ಬಿಲಿಯನ್ ಸಂಪತ್ತನ್ನು ಹೊಂದಿದ್ದಾರೆ. ಈ ಜಿಂದಾಲ್ ಕಂಪನಿಯು ಭಾರತದಲ್ಲಿ ಉಕ್ಕನ್ನು ಉತ್ಪಾದಿಸುವ 3ನೇ ಅತಿದೊಡ್ಡ ಸಂಸ್ಥೆಯಾಗಿದೆ.


ಏಷ್ಯಾ ಖಂಡದ ಅತಿ ಶ್ರೀಮಂತ ಮಹಿಳೆ
72 ವರ್ಷದ ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದು, ಇದೀಗ ಏಷ್ಯಾ ಖಂಡದ ಅತಿ ಶ್ರೀಮಂತ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. 1950 ರಲ್ಲಿ ಅಸ್ಸಾಂನ ತಿನ್ಸುಕಿಯಾದಲ್ಲಿ ಜನಿಸಿದ ಅವರು 1970 ರ ದಶಕದಲ್ಲಿ ಜಿಂದಾಲ್ ಗ್ರೂಪ್ ಅನ್ನು ಸ್ಥಾಪಿಸಿದ ಓಂ ಪ್ರಕಾಶ್ ಜಿಂದಾಲ್ ಅವರನ್ನು ವಿವಾಹವಾದರು. ಅವರ ಪತಿ ಹರಿಯಾಣ ಸರ್ಕಾರದಲ್ಲಿ ಸಚಿವರಾಗಿದ್ದರು ಮತ್ತು ಹಿಸಾರ್ ಕ್ಷೇತ್ರದಿಂದ ಹರಿಯಾಣ ವಿಧಾನಸಭಾ ಸದಸ್ಯರಾಗಿದ್ದರು. 2005 ರಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಓಪಿ ಜಿಂದಾಲ್ ಅವರ ಮರಣವು ಸಾವಿತ್ರಿ ಅವರ ಜೀವನಕ್ಕೆ ಒಂದು ಟರ್ನಿಂಗ್‌ ಪಾಯಿಂಟ್‌ ಆಯಿತು.


ಏಕೆಂದರೆ ಅವರು ಜಿಂದಾಲ್‌ನ ಸಮಸ್ತ ಅಧಿಕಾರವನ್ನು ವಹಿಸಿಕೊಳ್ಳಲೇ ಬೇಕಾದ ಅನಿರ್ವಾಯತೆ ಎದುರಾಗಿತ್ತು. ಅವಳ ನಾಯಕತ್ವದಲ್ಲಿ, ಸಂಘಟಿತ ಆದಾಯವು ನಾಲ್ಕು ಪಟ್ಟು ಹೆಚ್ಚಾಯಿತು. ಇವರು ಒಂಬತ್ತು ಮಕ್ಕಳ ತಾಯಿ. ಸಾವಿತ್ರಿ ಜಿಂದಾಲ್ ಅವರಿಗೆ ನಾಲ್ಕು ಗಂಡು ಮಕ್ಕಳಿದ್ದಾರೆ - ಪೃಥ್ವಿರಾಜ್, ಸಜ್ಜನ್, ರತನ್ ಮತ್ತು ನವೀನ್. ಅವರ ಪತಿಯ ಮರಣದ ನಂತರ, ಕಂಪನಿಗಳನ್ನು ನಾಲ್ಕು ಗಂಡು ಮಕ್ಕಳ ನಡುವೆ ಹಂಚಲಾಯಿತು. ಪೃಥ್ವಿರಾಜ್ ಜಿಂದಾಲ್ JSAW ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ, JSW ಗ್ರೂಪ್‌ಗೆ ಸಜ್ಜನ್, ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್‌ಗೆ ನವೀನ್ ಮತ್ತು ಜಿಂದಾಲ್ ಸ್ಟೇನ್‌ಲೆಸ್‌ಗೆ ರತನ್ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.


ಬಿಲಿಯನೇರ್ ಪಟ್ಟಿಯಲ್ಲಿ ಜಿಂದಾಲ್ ಗ್ರೂಪ್​ನ ಸಾವಿತ್ರಿ ಜಿಂದಾಲ್ ಗೆ 91 ನೇ ಸ್ಥಾನ
ಜಗತ್ತಿನ ಬಿಲಿಯನೇರ್ ಪಟ್ಟಿಯಲ್ಲಿ ಜಿಂದಾಲ್ ಗ್ರೂಪ್​ನ ಸಾವಿತ್ರಿ ಜಿಂದಾಲ್ 91ನೇ ಸ್ಥಾನದಲ್ಲಿದ್ದಾರೆ. ಇನ್ನೊಂದು ವಿಶೇಷವೆಂದರೆ ಸಾವಿತ್ರಿ ಜಿಂದಾಲ್ ಕಾಲೇಜು ಶಿಕ್ಷಣ ಪಡೆದವರಲ್ಲ. ಆದರೂ ಇವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ 13 ಮಹಿಳಾ ಬಿಲಿಯೇನರ್ ಗಳಲ್ಲಿ ಒಬ್ಬರು ಎಂಬ ಸಾಧನೆ ಮಾಡಿದ್ದಾರೆ.


ಇದನ್ನೂ ಓದಿ: Margaret Alva: ನೆಹರೂ ಕುಟುಂಬದ ಆಪ್ತೆ ಮಾರ್ಗರೇಟ್ ಆಳ್ವಾ! ವಿಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ಪರಿಚಯ ಇಲ್ಲಿದೆ


ಕೋರೋನಾ ಸಾಂಕ್ರಾಮಿಕತೆಯ ಕಾರಣದಿಂದಾಗಿ 2020 ರ ಅವಧಿಯಲ್ಲಿ 3.2 ಶತಕೋಟಿ ರೂಪಾಯಿಗೆ ಜಿಂದಾಲ್ ಕಂಪನಿಯ ನಿವ್ವಳ ಲಾಭ ಕುಸಿದಿತ್ತು ಆದರೆ 2022 ಏಪ್ರಿಲ್ ತಿಂಗಳಲ್ಲಿ 15. 6 ಶತಕೋಟಿಗೆ ತಲುಪಿದೆ.


ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಸಂಘಟಿತ ಜಿಂದಾಲ್ ಗ್ರೂಪ್‌ $11.3 ಬಿಲಿಯನ್ ಸಂಪತ್ತನ್ನು ಹೊಂದಿದೆ, ಇದು ಲೋಹಗಳು ಮತ್ತು ವಿದ್ಯುತ್ ಉತ್ಪಾದನೆ ಸೇರಿದಂತೆ ಕೈಗಾರಿಕೆಗಳಲ್ಲಿ ತೊಡಗಿಸಿಕೊಂಡಿದೆ. 2021 ರಲ್ಲಿ ಫೋರ್ಬ್ಸ್‌ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರ ಶ್ರೇಯಾಂಕ 10 ನೇ ಸ್ಥಾನದಲ್ಲಿ 72 ವರ್ಷ ವಯಸ್ಸಿನ ಭಾರತದ ಏಕೈಕ ಮಹಿಳೆಯಾಗಿ ಸಾವಿತ್ರಿ ಜಿಂದಾಲ್‌ ಗುರುತಿಸಿಕೊಂಡಿದ್ದಾರೆ.


ರಾಜಕೀಯದಲ್ಲೂ ಗುರುತಿಸಿಕೊಂಡಿದ್ರಂತೆ ಸಾವಿತ್ರಿ ಜಿಂದಾಲ್ 
ಸಾವಿತ್ರಿ ಜಿಂದಾಲ್ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರ ಪತಿಯ ಮರಣದ ನಂತರ, ಅವರು 2005 ರಲ್ಲಿ ಹಿಸಾರ್ ಕ್ಷೇತ್ರದಿಂದ ಹರಿಯಾಣ ವಿಧಾನ ಸಭೆಗೆ ಚುನಾಯಿತರಾದರು. 2009 ರಲ್ಲಿ ಅವರು ಮರು ಆಯ್ಕೆಯಾದರು ಮತ್ತು ಹರಿಯಾಣ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ನೇಮಕಗೊಂಡರು. ಅವರು ಕಂದಾಯ ಮತ್ತು ವಿಪತ್ತು ನಿರ್ವಹಣೆ, ಬಲವರ್ಧನೆ, ಪುನರ್ವಸತಿ ಮತ್ತು ವಸತಿ ರಾಜ್ಯ ಸಚಿವರಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಮತ್ತು ವಸತಿ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, 2014ರ ಚುನಾವಣೆಯಲ್ಲಿ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡರು.


ಇದನ್ನೂ ಓದಿ:  Baby Shamlee: ಅಷ್ಟು ಮುದ್ದಾಗಿದ್ದ ಬೇಬಿ ಶಾಮಿಲಿ ಮೂಲೆಗುಂಪಾಗಿದ್ದೇಕೆ? ಭಾವ ಸೂಪರ್ ಸ್ಟಾರ್ ಅನ್ನೋದೇ ಮುಳುವಾಯ್ತಾ?


ಅಂತಿಮವಾಗಿ ಎಲ್ಲರೂ ನಿವೃತ್ತಿ ಪಡೆಯುವ ವಯಸ್ಸಿನಲ್ಲಿ ಸಾವಿತ್ರಿ ಜಿಂದಾಲ್ ಪತಿಯ ನಿಧನದಿಂದಾಗಿ ಬೃಹತ್ ಕಂಪನಿಯ ಉಸ್ತುವಾರಿ ವಹಿಸಿಕೊಂಡು ಅದನ್ನು ಸಮರ್ಥವಾಗಿ ನಿರ್ವಹಿಸಿ ಇಂದು ಏಷ್ಯಾದ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಯನ್ನು ಪಡೆದಿರುವುದು ಪ್ರತಿ ಮಹಿಳೆಗೂ ಸ್ಪೂರ್ತಿಯಾಗಿದ್ದಾರೆ.

Published by:Ashwini Prabhu
First published: