Lakhimpur Kheri Case Explained: ವಿವಾದದ ಕೇಂದ್ರಬಿಂದು ಕೇಂದ್ರ ಸಚಿವ ಅಜಯ್​ ಮಿಶ್ರಾ ಯಾರು?

Who is Lakhimpur Kheri MP Ajay Mishra: 1960ರ ಸೆಪ್ಟೆಂಬರ್​ 25ರಂದು ಲಖಿಂಪುರ್​ ಖೇರಿಯಲ್ಲಿ ಅಜಯ್​ ಮಿಶ್ರಾ ಜನಿಸಿದರು. ಕಾನ್ಪುರದ ಕ್ರೈಸ್ಟ್​ ಚರ್ಚ್​ ಕಾಲೇಜಿನದಲ್ಲಿ ವ್ಯಾಸಂಗ ಮಾಡಿದರು. ನಂತರ ಬಿಎಸ್​ಸಿ ಮತ್ತು ಎಲ್​ಎಲ್​ಬಿಯನ್ನು ಸಹ ಅಜಯ್​ ಮಿಶ್ರಾ ಮಾಡಿದ್ದಾರೆ.

Ajay Mishra

Ajay Mishra

 • Share this:
  ಸದ್ಯ ಇಡೀ ದೇಶಾದ್ಯಂತ ಸದ್ದು ಮಾಡುತ್ತಿರುವ ಪ್ರಕರಣ ಲಖಿಂಪುರ್​ ಖೇರಿಯಲ್ಲಿ ನಡೆದ ಘಟನೆ (Lakhimpur Kheri Case). ಈ ಘಟನೆಯ ಪ್ರಮುಖ ಆರೋಪಿ ಕೇಂದ್ರ ಸಚಿವ (ರಾಜ್ಯ ಖಾತೆ) ಅಜಯ್​ ಮಿಶ್ರಾ ಮಗ ಶೀಘ್ರ ಪೊಲೀಸರಿಗೆ ಸರಂಡರ್​ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಹಿಂದೆ ನಾನು ಘಟನೆ ಸಂದರ್ಭದಲ್ಲಿ ಲಖಿಂಪುರ್​ನಲ್ಲಿ ಇರಲೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಅದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿಸಿದ್ದು, ಅಜಯ್​ ಮಿಶ್ರಾ ಮಗ (Union Minister for State Ajay Mishra). ಈ ಹಿನ್ನೆಲೆಯಲ್ಲಿ ಬಂಧನವಾಗುವ ಸಾಧ್ಯತೆಯಿದೆ.

  ಯಾರು ಅಜಯ್​ ಮಿಶ್ರಾ:
  ಕೇಂದ್ರ ರಾಜ್ಯ ಖಾತೆ ಗೃಹ ಸಚಿವರಾಗಿರುವ ಅಜಯ್​ ಮಿಶ್ರಾ ಕೇಂದ್ರ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಉತ್ತರ ಪ್ರದೇಶದ ಬಿಜೆಪಿಯ ಏಕೈಕ ಬ್ರಾಹ್ಮಣ ಮುಖಂಡ. ಲಖಿಂಪುರ್​ ಖೇರಿ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಅಜಯ್​ ಮಿಶ್ರಾ ಆಯ್ಕೆಯಾಗಿದ್ದಾರೆ. ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಬ್ರಾಹ್ಮಣ ಮತಗಳಿಗೆ ಎಲ್ಲಾ ಪಕ್ಷಗಳೂ ಪ್ರಯತ್ನಿಸುತ್ತಿರುವ ಸಂದರ್ಭದಲ್ಲೇ, ಅಜಯ್​ ಮಿಶ್ರಾ ಅವರಿಗೂ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಯಿತು. ಈ ಮೂಲಕ ಬ್ರಾಹ್ಮಣ ಮತಗಳನ್ನು ಸೆಳೆಯಲು ಬಿಜೆಪಿ ದಾಳ ಹೂಡಿತ್ತು. 1960ರ ಸೆಪ್ಟೆಂಬರ್​ 25ರಂದು ಲಖಿಂಪುರ್​ ಖೇರಿಯಲ್ಲಿ ಅಜಯ್​ ಮಿಶ್ರಾ ಜನಿಸಿದರು. ಕಾನ್ಪುರದ ಕ್ರೈಸ್ಟ್​ ಚರ್ಚ್​ ಕಾಲೇಜಿನದಲ್ಲಿ ವ್ಯಾಸಂಗ ಮಾಡಿದರು. ನಂತರ ಬಿಎಸ್​ಸಿ ಮತ್ತು ಎಲ್​ಎಲ್​ಬಿಯನ್ನು ಸಹ ಅಜಯ್​ ಮಿಶ್ರಾ ಮಾಡಿದ್ದಾರೆ.

  2014ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದ ಅಜಯ್​ ಮಿಶ್ರಾ ಬರೊಬ್ಬರಿ ಒಂದು ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು. ನಂತರ ಎರಡನೇ ಬಾರಿ 2019ರಲ್ಲಿ 2 ಲಕ್ಷ ಮತಗಳಿಂದ ಗೆದ್ದಿದ್ದರು.

  2014ಕ್ಕೂ ಮುನ್ನ ಲಖೀಂಪುರ್​ ಲೋಕಸಭಾ ಕ್ಷೇತ್ರದಲ್ಲೇ ಬರುವ ನಿಘಾಸನ್​ ವಿಧಾನಸಭಾ ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದರು. ನಂತರ 2014ರಲ್ಲಿ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದರು. ಕಳೆದ ಭಾನುವಾರ ಲಖೀಂಪುರ್​ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಮೂರು ಕಾರುಗಳನ್ನು ನುಗ್ಗಿಸಿದ ಪರಿಣಾಮ 4 ರೈತರು ಸೇರಿ 8 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಒಂದು ಕಾರು ಅಜಯ್​ ಮಿಶ್ರಾ ಅವರ ಕೆಸರಿನಲ್ಲೇ ಇದೆ ಮತ್ತು ಇನ್ನೊಂದು ಕಾರನ್ನು ಅಜಯ್​ ಮಿಶ್ರಾ ಮಗ ಆಶಿಶ್​ ಓಡಿಸುತ್ತಿದ್ದ ಎಂಬ ಆರೋಪವಿದೆ. ಭಾನುವಾರ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಿತಾದರೂ, ಪ್ರತಿಪಕ್ಷಗಳ ಪ್ರತಿಭಟನೆಯಿಂದ ಸೋಮವಾರ ಆಶಿಶ್​ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  ಇದನ್ನೂ ಓದಿ: ಲಕ್ನೋ ವಿಮಾನ ನಿಲ್ದಾಣದಿಂದ ಲಖಿಂಪುರ್ ಜಿಲ್ಲೆಗೆ ಹೊರಟ ರಾಹುಲ್ ಗಾಂಧಿ ನೇತೃತ್ವದ ನಿಯೋಗ, ಮೃತ ಕುಟುಂಬಕ್ಕೆ ತಲಾ 50 ಲಕ್ಷ ಪರಿಹಾರ

  ಮಗನ ಪರವಾಗಿ ಬ್ಯಾಟಿಂಗ್​:
  ಘಟನೆಯ ಬಳಿಕ ಮಗನ ಪರವಾಗಿ ಮಾತನಾಡಿದ ಅಜಯ್​ ಮಿಶ್ರಾ, ಘಟನೆ ಹೇಗೆ ನಡೆದಿದೆ ಎಂಬುದು ನಮಗೆ ತಿಳಿದಿಲ್ಲ. ಘಟನೆ ವೇಳೆ ತೆಗೆದಿರುವ ವಿಡಿಯೋ ನೋಡಿದರೆ, ನಮ್ಮ ಕಾರು ಚಾಲಕನನ್ನು ಕಾರಿನಿಂದ ಎಳೆದು ಸಾಯಿಸಿರುವುದು ಪತ್ತೆಯಾಗಿದೆ. ಒಂದು ವೇಳೆ ನನ್ನ ಮಗ ಕಾರು ಓಡಿಸುತ್ತಿದ್ದರೆ ಸಾವಿರಾರು ಜನ ತುಂಬಿದ್ದ ಆ ಪ್ರದೇಶದಿಂದ ಆಚೆ ಬರುವುದು ಅಸಾಧ್ಯವಾಗಿತ್ತು. ಚಾಲಕನ ಜಾಗದಲ್ಲಿ ನನ್ನ ಮಗನ ಸಾವಾಗಬೇಕಿತ್ತು. ಅದರಲ್ಲೇ ತಿಳಿಯುತ್ತದೆ ಆತ ಅಲ್ಲಿ ಇರಲಿಲ್ಲ ಎಂದು ಸಬೂಬು ಹೇಳಿದ್ದಾರೆ. ಇದಾದ ನಂತರ ಕೇಂದ್ರ ಗೃಹ ಸಚಿವ ಅಮಿತ್​ ಶಾರನ್ನು (Union Home Minister Amit Shah) ಸಹ ಅಜಯ್​ ಮಿಶ್ರಾ ಭೇಟಿ ಮಾಡಿ ಘಟನೆಯ ಬಗ್ಗೆ ಮಾತನಾಡಿದ್ದಾರೆ.

  ಇದನ್ನೂ ಓದಿ: Explained: ಯಾರು ಈ ಎನ್​ಸಿಬಿ ಅಧಿಕಾರಿ ವಾಂಖೆಡೆ? ಟಫ್ ಕಾಪ್ ಟ್ರ್ಯಾಕ್ ರೆಕಾರ್ಡ್ ಅದ್ಭುತ!

  ಘಟನೆ ಸಂಬಂಧ ಪ್ರತಿಭಟನೆ ಮಾಡುತ್ತಿದ್ದ ಪ್ರಿಯಾಂಕ ಗಾಂಧಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Priyanka Gandhi Arrest). ಪ್ರಿಯಾಂಕ ಗಾಂಧಿ ಬಂಧನಕ್ಕೆ ಕಾಂಗ್ರೆಸ್​ ಕಟುವಾಗಿ ಟೀಕಿಸಿದೆ ಜತೆಗೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ. ಬುಧವಾರ ಸಂಜೆ ರಾಹುಲ್​ ಗಾಂಧಿ (Rahul Gandhi Lakhimpur Kheri visit), ಕೆಸಿ ವೇಣುಗೋಪಾಲ್​ ಲಖೀಂಪುರ್​ಗೆ ಭೇಟಿ ನೀಡಲು ಮುಂದಾಗಿದ್ದು, ಇನ್ನು ಕೆಲವೇ ಕ್ಷಣಗಳಲ್ಲಿ ತಲುಪಲಿದ್ದಾರೆ. ರಾಹುಲ್​ ಗಾಂಧಿ ಭೇಟಿಗೆ ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಅನುಮತಿ ನಿರಾಕರಿಸಿತ್ತು. ನಂತರ ಅನುಮತಿ ನೀಡಿದ ಬೆನ್ನಲ್ಲೇ ಕಾನ್ಪುರ ವಿಮಾನ ನಿಲ್ದಾಣಕ್ಕೆ ರಾಹುಲ್​ ಬಂದಿಳಿದರು. ಆದರೆ ಅಲ್ಲಿಯೂ ಸುಮಾರು ಒಂದು ಗಂಟೆಗಳ ಕಾಲ ಏರ್​ಪೋರ್ಟ್​ನಿಂದ ಆಚೆ ಹೋಗದಂತೆ ತಡೆ ಹಿಡಿಯಲಾಗಿತ್ತು. ಇದೀಗ ಅಲ್ಲಿಂದ ಆಚೆ ಹೋಗಲು ಅನುಮತಿ ನೀಡಲಾಗಿದೆ.
  Published by:Sharath Sharma Kalagaru
  First published: