• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಗತ್ತು ಸೋಲುತ್ತಿದೆಯಾ? ಲಸಿಕೆಯಲ್ಲೂ ದೊಡ್ಡ ಲಾಬಿ ನಡೆಯುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

Explained: ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಗತ್ತು ಸೋಲುತ್ತಿದೆಯಾ? ಲಸಿಕೆಯಲ್ಲೂ ದೊಡ್ಡ ಲಾಬಿ ನಡೆಯುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಲಸಿಕೆ ವಿತರಣೆ

ಲಸಿಕೆ ವಿತರಣೆ

ಶ್ರೀಮಂತ ಮತ್ತು ಮಧ್ಯಮ ಆದಾಯದ ದೇಶಗಳು ವಿಶ್ವಾದ್ಯಂತ ಹೆಚ್ಚಿನ ಪ್ರಮಾಣದ ವ್ಯಾಕ್ಸಿನೇಷನ್‌ಗಳನ್ನು ಹೊಂದಿವೆ ಎಂಬುದು ತಿಳಿದು ಬಂದಿದೆ. ಇನ್ನು ಕೆಲವು ದೇಶಗಳು ತಮ್ಮ ಜನಸಂಖ್ಯೆಯ ಹೆಚ್ಚಿನ ಪ್ರಮಾಣಕ್ಕಿಂತಲೂ ಲಸಿಕೆಗಳನ್ನು ಮುಂಗಡವಾಗಿ ಖರೀದಿಸಿವೆ ಎಂದು ಡ್ಯೂಕ್ ವಿಶ್ವವಿದ್ಯಾಲಯ ಈ ಬಗ್ಗೆ ಮಾಹಿತಿ ಕಲೆಹಾಕಿದೆ.

ಮುಂದೆ ಓದಿ ...
  • Share this:

Covid 19: ಸಂಪೂರ್ಣ ವಿಶ್ವವೇ ಜೊತೆಯಾಗಿ ನಿಂತು ಈ ಸಾಂಕ್ರಾಮಿಕವನ್ನು ಬಡಿದಟ್ಟಬೇಕು. ವಿಶ್ವ ಆರೋಗ್ಯ ಸಂಸ್ಥೆ ಹೆಚ್ಚಿನ ಲಸಿಕಾ ಸಹಕಾರವನ್ನು ಏಕೆ ಕೋರುತ್ತಿದೆ ಎಂಬುದನ್ನು ವಿಷದವಾಗಿ ತಿಳಿದುಕೊಳ್ಳೋಣ. ನಾವು ಕೊರೋನಾ ಕೊನೆಯಾಗಬೇಕೆಂದು ಪಣ ತೊಟ್ಟಲ್ಲಿ ಮಾತ್ರವೇ ಈ ಸಾಂಕ್ರಾಮಿಕ ನಮ್ಮನ್ನು ಬಿಟ್ಟುಹೋಗುತ್ತದೆ. ಲಸಿಕಾ ಅಭಿಯಾನವನ್ನು ಹೆಚ್ಚಿನ ದೇಶಗಳು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬುದು ಇತ್ತೀಚಿನ ಕೆಲವೊಂದು ಡೇಟಾ ವಿಶ್ಲೇಷಣೆಗಳ ಮೂಲಕ ತಿಳಿದು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಟೋಕಿಯೋದ ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಹೇಳಿದರು. ಪ್ರತಿ ದೇಶವು ತನ್ನ ಜನಸಂಖ್ಯೆಯ 70% ದಷ್ಟು ಲಸಿಕಾ ಅಭಿಯಾನವನ್ನು ಮುಂದಿನ ವರ್ಷದ ಮಧ್ಯಭಾಗದಲ್ಲಿ ಸಂಪೂರ್ಣಗೊಳಿಸಬೇಕೆಂದು ಅಧಾನೊಮ್ ತಿಳಿಸಿದರು. ನಾಲ್ಕರಲ್ಲಿ ಮೂರನೇ ಭಾಗದಷ್ಟು ಲಸಿಕೆಯನ್ನು ಕೇವಲ 10 ದೇಶಗಳು ಇದುವರೆಗೆ ಪೂರ್ಣಗೊಳಿಸಿವೆ ಎಂದು ಟೆಡ್ರೋಸ್ ತಿಳಿಸಿದ್ದಾರೆ.


ಲಸಿಕಾ ಅಭಿಯಾನದ ಪ್ರಗತಿ ಹೇಗಿದೆ?


ವಿಶ್ವದಲ್ಲಿ ಅರ್ಹ ಜನರು ಕೋವಿಡ್ ಲಸಿಕೆಯ ಒಂದನೇ ಶಾಟ್ ಅನ್ನು ಪಡೆಯಲು ಮಾತ್ರವೇ ಯಶಸ್ವಿಯಾಗಿದ್ದಾರೆ. ಲಸಿಕೆಯನ್ನು ಪೂರ್ಣವಾಗಿ ನೀಡಲಾಗಿದೆ ಎಂಬ ಲೆಕ್ಕಾಚಾರವನ್ನು ದೇಶಗಳು ತೋರಿಸುತ್ತಿದ್ದರೂ ಜಾಗತಿಕವಾಗಿ 3.79 ಬಿಲಿಯನ್ ಡೋಸ್‌ಗಳನ್ನು ನೀಡಲಾಗಿದ್ದರೆ “ಕಡಿಮೆ ಆದಾಯದ ದೇಶಗಳಲ್ಲಿ ಕೇವಲ 1.1 ರಷ್ಟು ಜನರು ಕನಿಷ್ಠ ಒಂದು ಡೋಸ್ ಪಡೆದಿದ್ದಾರೆ ಎಂದು ಟೆಡ್ರೊಸ್ ಕಳವಳ ವ್ಯಕ್ತಪಡಿಸಿದರು.


ಶ್ರೀಮಂತ ದೇಶಗಳು ವ್ಯಾಕ್ಸಿನೇಶನ್ ಪ್ರಕ್ರಿಯೆಯಲ್ಲಿ ಮುನ್ನಡೆಯನ್ನು ಸಾಧಿಸಿವೆ. ಈ ವ್ಯತ್ಯಾಸವು ಹೀಗೆಯೇ ಮುಂದುವರಿಯುತ್ತಿದ್ದರೆ ಸಾಂಕ್ರಾಮಿಕವು ಮುಂದಕ್ಕೆ ಪ್ರಯಾಣಿಸುತ್ತಲೇ ಇರುತ್ತದೆ ಹಾಗೂ ಅದರಿಂದ ಉಂಟಾಗುವ ಸಾಮಾಜಿಕ ಆರ್ಥಿಕ ನಷ್ಟಗಳನ್ನು ನಾವು ಅನುಭವಿಸಲೇಬೇಕಾಗುತ್ತದೆ ಎಂದವರು ನುಡಿದರು.


ಇದನ್ನೂ ಓದಿ: Covid-19: Wuhan​ ಲ್ಯಾಬ್​ನಿಂದಲೇ Corona Virus ಹೊರಬಂದಿದ್ದಾ? ತನಿಖೆ ಮಾಡೋದಕ್ಕೆ ಬಿಡೋದೇ ಇಲ್ವಂತೆ ಚೀನಾ!

ರೂಪಾಂತರಗಳು ಏರಿಕೆಯಾಗುತ್ತಾ ಹೋದಂತೆ ಒಂದು ರೂಪಾಂತರವು ಲಸಿಕೆಯ ಪರಿಣಾಮವನ್ನು ತಗ್ಗಿಸುವ ಸಾಧ್ಯತೆ ಇರುತ್ತದೆ. ಇದರಿಂದ ನಾವು ಮೇಲಕ್ಕೆ ಏಳಲಾರದಷ್ಟು ಆಳಕ್ಕೆ ಹೋಗುವ ಸಾಧ್ಯತೆ ಇದೆ ಎಂಬುದು ಟೆಡ್ರೋಸ್ ಕಳವಳವಾಗಿದೆ.


ಮುಂದುವರಿದ ದೇಶಗಳು ಲಸಿಕಾ ಪ್ರಕ್ರಿಯೆಯ ವೇಗವನ್ನು ಹೇಗೆ ಹೆಚ್ಚಿಸಿವೆ?


ಪ್ರಪಂಚದಾದ್ಯಂತ ಸೋಂಕುಗಳು ಹರಡುತ್ತಿದ್ದಂತೆ, ವಿಜ್ಞಾನಿಗಳು ಮತ್ತು ಸಂಶೋಧಕರು ಅಭೂತಪೂರ್ವ ವೇಗದಲ್ಲಿ ಲಸಿಕೆಗಳನ್ನು ವಿನ್ಯಾಸಗೊಳಿಸಲು ಮತ್ತು ಹೊರತರಲು ಕೆಲಸ ಮಾಡಬೇಕಾಯಿತು. ಯುಎಸ್ ಮೂಲದ ಡ್ಯೂಕ್ ವಿಶ್ವವಿದ್ಯಾಲಯವು ರಚಿಸಿದ ಟ್ರ್ಯಾಕರ್ ಪ್ರಕಾರ, ದೇಶಗಳು ಒಟ್ಟು 17.9 ಬಿಲಿಯನ್ ಡೋಸ್ ಕೋವಿಡ್ -19 ಲಸಿಕೆಗಳನ್ನು ಖರೀದಿಸಿವೆ ಅಥವಾ ಕಾಯ್ದಿರಿಸಿವೆ.


ಶ್ರೀಮಂತ ಮತ್ತು ಮಧ್ಯಮ ಆದಾಯದ ದೇಶಗಳು ವಿಶ್ವಾದ್ಯಂತ ಹೆಚ್ಚಿನ ಪ್ರಮಾಣದ ವ್ಯಾಕ್ಸಿನೇಷನ್‌ಗಳನ್ನು ಹೊಂದಿವೆ ಎಂಬುದು ತಿಳಿದು ಬಂದಿದೆ. ಇನ್ನು ಕೆಲವು ದೇಶಗಳು ತಮ್ಮ ಜನಸಂಖ್ಯೆಯ ಹೆಚ್ಚಿನ ಪ್ರಮಾಣಕ್ಕಿಂತಲೂ ಲಸಿಕೆಗಳನ್ನು ಮುಂಗಡವಾಗಿ ಖರೀದಿಸಿವೆ ಎಂದು ಡ್ಯೂಕ್ ವಿಶ್ವವಿದ್ಯಾಲಯ ಈ ಬಗ್ಗೆ ಮಾಹಿತಿ ಕಲೆಹಾಕಿದೆ.


ಇದನ್ನೂ ಓದಿ: Explained: ಕೋವಿಡ್ ಚಿಕಿತ್ಸೆಯಲ್ಲಿ Azithromycin ಬಳಕೆ ನಿಷೇಧ, ಈ ಔಷಧದಿಂದ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆಯಾ?

ಇದರಿಂದಾಗಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದ ಬಡ ದೇಶಗಳು ಲಸಿಕೆಗಳನ್ನು ಪಡೆಯಲು ಹೆಣಗಾಡುತ್ತಿವೆ. ಆಫ್ರಿಕನ್ ಒಕ್ಕೂಟದ ಮೂಲಕ 2021 ರ ಜನವರಿಯಲ್ಲಿ ಬಡದೇಶಗಳು ಲಸಿಕೆಯ ಮೊದಲ ಖರೀದಿಯನ್ನು ಪಡೆದುಕೊಂಡವು. ಆದರೆ ತಮ್ಮ ದೇಶದ ಎಲ್ಲಾ ಜನರಿಗೆ ಲಸಿಕೆಯನ್ನು ಪೂರ್ಣವಾಗಿ ಖರೀದಿಸಲು ಇನ್ನೂ ಸಾಧ್ಯವಾಗಿಲ್ಲ. ಎಂದು ಡ್ಯೂಕ್ ವಿಶ್ವವಿದ್ಯಾಲಯ ಆಪಾದಿಸಿದೆ.


ಕೋವಿಡ್ ಸಾಂಕ್ರಾಮಿಕ ಮುಗಿಯಿತು ಎಂದುಕೊಂಡವರಿಗೆ ಇದು ಎಚ್ಚರಿಕೆಯಾಗಿದೆ ಎಂದು ಘೆಬ್ರಯೆಸಸ್ ಹೇಳಿದರು. ಒಂದು ಭಾಗದಲ್ಲಿ ಅದು ಕಡಿಮೆಯಾಗಿದ್ದರೂ ಇನ್ನೊಂದು ಭಾಗದಲ್ಲಿ ಅದು ಹಾನಿಯನ್ನುಂಟು ಮಾಡುತ್ತಿರುತ್ತದೆ ಎಂಬುದು ಅವರ ಎಚ್ಚರಿಕೆಯ ಮಾತಾಗಿದೆ. ಸಪ್ಟೆಂಬರ್ ಅಂತ್ಯದಲ್ಲಿ ಜನಸಂಖ್ಯೆಯ 10% ದಷ್ಟಾದರೂ ಲಸಿಕೆ ನೀಡುವಿಕೆಯನ್ನು ಪೂರ್ಣಗೊಳಿಸಬೇಕು ಎಂದವರು ದೇಶಗಳಿಗೆ ಸಲಹೆ ನೀಡಿದ್ದಾರೆ. ನಮ್ಮ ಸಾಮಾನ್ಯ ಗುರಿ ಮುಂದಿನ ವರ್ಷದ ಮಧ್ಯಭಾಗದಲ್ಲಿ ಪ್ರತಿ ದೇಶವು 70% ದಷ್ಟು ಜನಸಂಖ್ಯೆಗೆ ಲಸಿಕೆಯನ್ನು ನೀಡುವುದಾಗಿದೆ.
ಇನ್ನು ಬಡದೇಶಗಳಿಗೆ ಕೋವಾಕ್ಸ್ ಲಸಿಕೆಯನ್ನು ವಿತರಣೆ ಮಾಡುವ ಭರವಸೆಯನ್ನು ನೀಡಿದೆ. ವಿಶ್ವದ ಜನಸಂಖ್ಯೆಯ ಹೆಚ್ಚಿನ ಭಾಗವು ಕೋವಾಕ್ಸ್ ಅನ್ನು ಆಶ್ರಯಿಸಿಕೊಂಡಿವೆ. ಏಕೆಂದರೆ ಇದು ಬಡದೇಶಗಳಿಗೆ ಉಚಿತವಾಗಿ ರವಾನೆಯಾಗುತ್ತಿವೆ. ಈ ವರ್ಷದ ಅಂತ್ಯದ ವೇಳೆಗೆ ಬಡ ರಾಷ್ಟ್ರಗಳಿಗೆ 2 ಬಿಲಿಯನ್ ಡೋಸ್‌ಗಳನ್ನು ಒದಗಿಸುವ ಗುರಿಯನ್ನು ಕೋವಾಕ್ಸ್ ಹೊಂದಿದೆ.

top videos
    First published: