• Home
 • »
 • News
 • »
 • explained
 • »
 • Explained: PMO ಕಚೇರಿಯಲ್ಲಿ ನರೇಂದ್ರ ಮೋದಿ ಯೋಜನೆಗಳಿಗೆ ರೂವಾರಿಗಳಾಗಿರುವ ಅಧಿಕಾರಿಗಳು ಯಾರ‍್ಯಾರು? ಇಲ್ಲಿದೆ ಕಿರು ಪರಿಚಯ

Explained: PMO ಕಚೇರಿಯಲ್ಲಿ ನರೇಂದ್ರ ಮೋದಿ ಯೋಜನೆಗಳಿಗೆ ರೂವಾರಿಗಳಾಗಿರುವ ಅಧಿಕಾರಿಗಳು ಯಾರ‍್ಯಾರು? ಇಲ್ಲಿದೆ ಕಿರು ಪರಿಚಯ

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಪ್ರಧಾನ ಮಂತ್ರಿಗಳ ಕಚೇರಿಯೇ ಕೇಂದ್ರೀಕೃತ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಸುಳ್ಳಲ್ಲ. ಕಚೇರಿ ಹಳೆಯದಾಗಿದ್ದರೂ ಅಲ್ಲಿರುವ ಶಕ್ತಿ ವೈವಿಧ್ಯಮಯವಾಗಿದೆ. ಪ್ರಧಾನ ಮಂತ್ರಿಯವರ ಕಚೇರಿ (PMO) ನಲ್ಲಿರುವ ಅಧಿಕಾರಿ ವರ್ಗದವರೂ ಕೂಡ ಮೋದಿಯವರಿಗೆ ಬೆಂಬಲವಾಗಿ ನಿಂತಿದ್ದಾರೆ.

ಮುಂದೆ ಓದಿ ...
 • News18 Kannada
 • Last Updated :
 • New Delhi, India
 • Share this:

2024ರ ಲೋಕಸಭೆಯ ಚುನಾವಣೆಗೆ (Election) ಇನ್ನೇನು ಎರಡು ವರ್ಷಗಳಿಗಿಂತಲೂ ಕಡಿಮೆ ಸಮಯ ಮಾತ್ರವೇ ಉಳಿದಿದೆ. ಈ ಸಮಯದಲ್ಲಿ ಮೋದಿ ಸರಕಾರವು (Modi Government) ಆಡಳಿತ ಸಾಧಕ ಬಾಧಕಗಳತ್ತ ವಿಸ್ತಾರವಾದ ವಿಶ್ಲೇಷಣೆಯನ್ನು ಮಾಡುತ್ತಿದ್ದು ಇನ್ನಷ್ಟು ಲೋಕೋಪಯೋಗಿ ಯೋಜನೆಗಳನ್ನು ಕಾರ್ಯಗತಗೊಳಿಸುವ ಒತ್ತಡದಲ್ಲಿದೆ. ಈ ಪ್ರಯತ್ನಕ್ಕೆ ಪ್ರಮುಖ ರುವಾರಿಗಳೆಂದರೆ ನರೇಂದ್ರ ಮೋದಿಯವರ ಕಚೇರಿಯಲ್ಲಿರುವ (Narendra Modi Office) ಮೋದಿ ತಂಡದ ಪ್ರಮುಖ ಸಿಬ್ಬಂದಿಗಳು. ಈ ತಂಡದಲ್ಲಿರುವ ಪ್ರತಿಯೊಬ್ಬ ಸದಸ್ಯರು ಕೂಡ ಅತ್ಯಂತ ಶಕ್ತಿಶಾಲಿ ನಾಗರಿಕ ಸೇವಾದಾರರಾಗಿದ್ದಾರೆ. ಇವರು ಹಿಂದಿನವರಿಗಿಂತ ಕಡಿಮೆ ಅರ್ಹತೆ, ಪರಿಣಿತಿಯನ್ನು ಹೊಂದಿದ್ದರೂ ಹೆಚ್ಚು ಶ್ರಮವಹಿಸಿ ಪ್ರತಿಯೊಂದು ಯೋಜನೆಗಳನ್ನು ರೂಪಿಸುವಲ್ಲಿ ಪ್ರಮುಖರೆಂದೆನಿಸಿದ್ದಾರೆ.


ಪ್ರಧಾನ ಮಂತ್ರಿಗಳ ಕಚೇರಿಯೇ ಕೇಂದ್ರೀಕೃತ ಶಕ್ತಿ ಕೇಂದ್ರ
ಮೋದಿಯವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಪ್ರಧಾನ ಮಂತ್ರಿಗಳ ಕಚೇರಿಯೇ ಕೇಂದ್ರೀಕೃತ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದು ಸುಳ್ಳಲ್ಲ. ಕಚೇರಿ ಹಳೆಯದಾಗಿದ್ದರೂ ಅಲ್ಲಿರುವ ಶಕ್ತಿ ವೈವಿಧ್ಯಮಯವಾಗಿದೆ. ಪ್ರಧಾನ ಮಂತ್ರಿಯವರ ಕಚೇರಿ (PMO) ನಲ್ಲಿರುವ ಅಧಿಕಾರಿ ವರ್ಗದವರೂ ಕೂಡ ಮೋದಿಯವರಿಗೆ ಬೆಂಬಲವಾಗಿ ನಿಂತಿದ್ದಾರೆ.


ಪ್ರಧಾನಿ ಕಚೇರಿಯಲ್ಲಿರುವ ಅನೇಕ ಪ್ರಬಲ ಮತ್ತು ಉನ್ನತ ಮಟ್ಟದ ನಾಗರಿಕ ಸೇವಕರನ್ನು (ಐಎಎಸ್, ಐಎಫ್‌ಎಸ್) ಮೋದಿಯವರು ಗುಜರಾತ್ ಹಾಗೂ ಕೇಂದ್ರದಿಂದ ಆಯ್ಕೆಮಾಡಿದ್ದಾರೆ. ಈ ಅಧಿಕಾರಿಗಳು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ನಿರ್ಣಾಯಕ ಸಚಿವಾಲಯಗಳ ಕಾರ್ಯದರ್ಶಿಗಳಾಗಿ ಬಡ್ತಿ ಪಡೆದು ಸ್ಥಳಾಂತರಗೊಂಡಿದ್ದಾರೆ. ಇತರ ಅಧಿಕಾರಿಗಳನ್ನು ದೇವಾಲಯಗಳ ಯೋಜನೆಗಳ ಮೇಲ್ವಿಚಾರಣೆಗೆ ನಿಯೋಜಿಸಲಾಗಿದೆ.


2019 ರ ಡಿಸೆಂಬರ್‌ನಲ್ಲಿ ಮೋದಿಯವರ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತಿ ಹೊಂದಿದ ನೃಪೇಂದ್ರ ಮಿಶ್ರಾ PMO ಕಚೇರಿಯಿಂದ ನಿರ್ಗಮನಗೊಂಡಿದ್ದರೂ ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ನಿಕಟವಾಗಿ ನೋಡಿಕೊಳ್ಳುವ ಹೊಣೆ ಹೊತ್ತಿದ್ದಾರೆ.


ಪ್ರಧಾನಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಪಶ್ಚಿಮ ಬಂಗಾಳ-ಕೇಡರ್ ಐಎಎಸ್ ಅಧಿಕಾರಿ ಭಾಸ್ಕರ್ ಖುಲ್ಬೆ, ಜುಲೈ 2019 ರಲ್ಲಿ ಅವಧಿ ಮುಗಿದ ನಂತರವೂ ಇನ್ನೆರಡು ವರ್ಷಗಳ ಅವಧಿಗೆ ಫೆಬ್ರವರಿ 2020 ರಲ್ಲಿ ಪ್ರಧಾನಿ ಸಲಹೆಗಾರರಾಗಿ ಕಚೇರಿಗೆ ನೇಮಕಗೊಂಡರು. ತದನಂತರ ಅವರನ್ನು ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳ ಪುನರ್ನಿರ್ಮಾಣದ ಮೇಲ್ವಿಚಾರಣೆಗಾಗಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ (OSD) ನೇಮಿಸಲಾಯಿತು.


ಕಚೇರಿಯಿಂದ ನಿರ್ಗಮಿಸುವ ಪ್ರಮುಖರಲ್ಲಿ ಟಿ.ವಿ.ಸೋಮನಾಥನ್, ತರುಣ್ ಬಜಾಜ್ ಮತ್ತು ಎ.ಕೆ. ಶರ್ಮಾ ಮೊದಲಾದವರಿದ್ದು, ಸೋಮನಾಥನ್ ಮತ್ತು ತರುಣ್ ಬಜಾಜ್ ಇದೀಗ ಹಣಕಾಸು ಮತ್ತು ಕಂದಾಯ ಇಲಾಖೆಗಳ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಶರ್ಮಾ ರಾಜಕೀಯಕ್ಕೆ ಸೇರ್ಪಡಗೊಂಡಿದ್ದಾರೆ ಮತ್ತು ಪ್ರಸ್ತುತ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದಾರೆ.


ತಂಡದಲ್ಲಿರುವ ನಾಲ್ವರು ಹಿರಿಯ ಸದಸ್ಯರು
PMO ನ ನಾಲ್ವರು ಹಿರಿಯ ಸದಸ್ಯರುಗಳೆಂದರೆ ಮೃದುಭಾಷಿಯಾಗಿರುವ ಪಿ.ಕೆ ಮಿಶ್ರಾ ಇವರು ನೃಪೇಂದ್ರ ಮಿಶ್ರಾ ನಂತರ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಮೋದಿಯವರ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿಗಳಾದ ಅಮಿತ್ ಖರೆ ಮತ್ತು ತರುಣ್ ಕಪೂರ್ ಸೇವೆ ಸಲ್ಲಿಸುತ್ತಿದ್ದಾರೆ. ಖುಲ್ಬೆ ಅವರ ನಿರ್ಗಮನದ ನಂತರ ಪ್ರಧಾನಿ ಕಾರ್ಯದರ್ಶಿ ಹುದ್ದೆ ಭರ್ತಿಯಾಗದೆ ಹಾಗೆಯೇ ಉಳಿದಿದೆ.


ಇದನ್ನೂ ಓದಿ: Congress Presidential Election 2022: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ನಡೆಯುವುದು ಹೇಗೆ? ಖರ್ಗೆ ಕೈಗೆ ಸಿಗುತ್ತಾ ಚುಕ್ಕಾಣಿ?


ಅಗ್ರ ನಾಲ್ವರಲ್ಲಿ ಪ್ರತಿಯೊಬ್ಬರೂ ಪ್ರಮುಖ ಕ್ಷೇತ್ರಗಳಲ್ಲಿ ತಮ್ಮ ಪರಿಣತಿಯನ್ನು ಹೊಂದಿದ್ದು, ಪಿಎಮ್‌ಗೆ ಬಲಗೈ ಭಂಟರಾಗಿ ಪ್ರತಿಯೊಂದು ನಿರ್ಧಾರಗಳಲ್ಲಿ ತಮ್ಮ ಸಲಹೆಗಳನ್ನು ನೀಡುತ್ತಾರೆ. ಚುರುಕಿನ ಕಾರ್ಯಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಗುಜರಾತ್-ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಮಿಶ್ರಾ ತಮಗೆ ವಹಿಸಿರುವ ಇತರ ಜವಾಬ್ದಾರಿಗಳ ಜೊತೆಗೆ ಕ್ಯಾಬಿನೆಟ್ ಸಭೆಗಳು ಮತ್ತು ನೇಮಕಾತಿಗಳಿಗೆ ಸಂಬಂಧಿಸಿದ ವಿಷಯಗಳ ಕಾರ್ಯಸೂಚಿ ಅಂತೆಯೇ ಎಲ್ಲಾ ಪ್ರಮುಖ ನೀತಿ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ.


ಇಂಟೆಲಿಜೆನ್ಸ್ ಬ್ಯೂರೋದ ಮಾಜಿ ನಿರ್ದೇಶಕ, ದೋವಲ್ ಅವರು 2014 ರಿಂದ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರತಿಯೊಂದು ಅಂಶಗಳ ಹೊಣೆ ಹೊತ್ತಿದ್ದಾರೆ ಅಂದರೆ 2014 ರಿಂದ ವಿದೇಶಾಂಗ ವ್ಯವಹಾರಗಳಿಂದ ರಕ್ಷಣಾ ಮತ್ತು ಗುಪ್ತಚರ ಸಂಸ್ಥೆಗಳವರೆಗೆ ಪ್ರತಿಯೊಂದು ಅಂಕಿಅಂಶಗಳ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಮಿಶ್ರಾ ಮತ್ತು ದೋವಲ್ ಇಬ್ಬರೂ ಕ್ಯಾಬಿನೆಟ್ ಶ್ರೇಣಿಯನ್ನು ಹೊಂದಿದ್ದಾರೆ.


ಈ ನಾಲ್ವರಲ್ಲದೆ ಹಿರೇನ್ ಜೋಶಿ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಅಧಿಕಾರಿಯಾಗಿದ್ದು, ಅವರು ಪ್ರಧಾನಿಯವರ ಸಾಮಾಜಿಕ ಮಾಧ್ಯಮವನ್ನು ನಿರ್ವಹಿಸುತ್ತಾರೆ. ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಶ್ರೇಣಿಯು ನಾಲ್ವರು ಹೆಚ್ಚುವರಿ ಕಾರ್ಯದರ್ಶಿಗಳು, ಮೂವರು ಜಂಟಿ ಕಾರ್ಯದರ್ಶಿಗಳು, ಇಬ್ಬರು ಖಾಸಗಿ ಕಾರ್ಯದರ್ಶಿಗಳು, 10 ನಿರ್ದೇಶಕರು ಮತ್ತು ನಾಲ್ಕು OSD ಗಳನ್ನು ಸಹ ಒಳಗೊಂಡಿದೆ.


 • ಹೆಚ್ಚುವರಿ ಕಾರ್ಯದರ್ಶಿಗಳು
  ಪುಣ್ಯ ಸಲಿಲ ಶ್ರೀವಾಸ್ತವ
  (ಅರುಣಾಚಲ ಪ್ರದೇಶ-ಗೋವಾ-ಮಿಜೋರಾಂ ಮತ್ತು ಕೇಂದ್ರಾಡಳಿತ ಪ್ರದೇಶ) ಕೇಡರ್‌ನ 1993-ಬ್ಯಾಚ್‌ನ IAS ಅಧಿಕಾರಿ, ಹೆಚ್ಚುವರಿ ಕಾರ್ಯದರ್ಶಿ ಶ್ರೀವಾಸ್ತವ ಅವರು ಅಕ್ಟೋಬರ್ 2021 ರಿಂದ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಪ್ರತಿದಿನ ಮಾಧ್ಯಮಗಳಿಗೆ ಮಾಹಿತಿ ನೀಡಲು ಕೇಂದ್ರವು ರಚಿಸಿದ ಹಿರಿಯ ಅಧಿಕಾರಿಗಳ ತಂಡದ ಭಾಗವಾಗಿ ಶ್ರೀವಾಸ್ತವ ಕಾರ್ಯನಿರ್ವಹಿಸಿದ್ದಾರೆ.


ಅರವಿಂದ್ ಶ್ರೀವಾಸ್ತವ
1994-ಬ್ಯಾಚ್ ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ, ಶ್ರೀವಾಸ್ತವ ಅವರು ಪ್ರಧಾನಿ ಕಚೇರಿಯ ಹಣಕಾಸು ಮತ್ತು ಆರ್ಥಿಕ ಚಟುವಟಿಕೆಗಳ ನಿಗಾವಹಿಸುತ್ತಾರೆ.


ತಂತ್ರಜ್ಞಾನ ಮತ್ತು ಆಡಳಿತ ಉಸ್ತುವಾರಿ: ಹರಿ ರಂಜನ್ ರಾವ್
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಮಾಜಿ ಕಾರ್ಯದರ್ಶಿ, ರಾವ್ ಅವರು ಎಂಪಿ ಕೇಡರ್‌ನ 1994-ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದರು. ಪಿಎಂಒ ಗೆ ಸೇರುವ ಮೊದಲು, ರಾವ್ ಅವರನ್ನು ದೂರಸಂಪರ್ಕ ಇಲಾಖೆಯಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.


ಇದನ್ನೂ ಓದಿ:  Explained: ಪ್ರಧಾನಿ ಮೋದಿಯವರು ವಸಾಹತುಶಾಹಿ ಆಡಳಿತದಿಂದ ಭಾರತವನ್ನು ಹೇಗೆ ಮುಕ್ತಗೊಳಿಸುತ್ತಿದ್ದಾರೆ?


ಗ್ರಾಮೀಣ ವ್ಯವಹಾರಗಳು: ಅತಿಶಚಂದ್ರ
1994-ಬ್ಯಾಚ್‌ನ ಬಿಹಾರ-ಕೇಡರ್ ಐಎಎಸ್ ಅಧಿಕಾರಿಯಾಗಿರುವ ಚಂದ್ರ ಅವರು ಗ್ರಾಮೀಣ ವ್ಯವಹಾರಗಳ ಹೊಣೆ ಹೊತ್ತಿದ್ದಾರೆ. ಈ ವಿಭಾಗದಲ್ಲಿ ಗ್ರಾಮೀಣಾಭಿವೃದ್ಧಿ, ಕೃಷಿ, ಪಂಚಾಯತ್ ರಾಜ್ ಮತ್ತು ಜಲಶಕ್ತಿ ಸಚಿವಾಲಯಗಳು ಸೇರಿವೆ.


ಪಿಎಂಒಗೆ ಸೇರುವ ಮೊದಲು, ಅತಿಶಚಂದ್ರ ಅವರು ಭಾರತೀಯ ಆಹಾರ ನಿಗಮದ CMD ಯಾಗಿ ಕಾರ್ಯನಿರ್ವಹಿಸುತ್ತಿದ್ದರು.


 • ಜಂಟಿ ಕಾರ್ಯದರ್ಶಿಗಳು
  ಮಾನವ ಸಂಪನ್ಮೂಲ: ಸಿ ಶ್ರೀಧರ್
  ಬಿಹಾರ ಕೇಡರ್‌ನ 2001-ಬ್ಯಾಚ್‌ನ ಐಎಎಸ್ ಅಧಿಕಾರಿ, ಶ್ರೀಧರ್ 2020 ರಲ್ಲಿ PMO ಗೆ ಸೇರ್ಪಡೆಗೊಂಡರು ಮತ್ತು ನಿರ್ಣಾಯಕ ಮಾನವ ಸಂಪನ್ಮೂಲಗಳ ಜವಾಬ್ದಾರಿ ಇವರ ಮೇಲಿದೆ.


ಮೂಲಸೌಕರ್ಯ ಮತ್ತು ಸಂಪನ್ಮೂಲಗಳು: ರೋಹಿತ್ ಯಾದವ್
2002 ರ ಛತ್ತೀಸ್‌ಗಢ-ಕೇಡರ್ ಐಎಎಸ್ ಅಧಿಕಾರಿ, ಯಾದವ್ ಅವರು ಫೆಬ್ರವರಿ 2020 ರಲ್ಲಿ ಕೇಂದ್ರ ಉಕ್ಕು ಸಚಿವಾಲಯದಿಂದ ಪ್ರಧಾನಿ ಕಚೇರಿಗೆ ಸೇರಿದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ರೈಲ್ವೆ, ಶಿಪ್ಪಿಂಗ್, ನಾಗರಿಕ ವಿಮಾನಯಾನ, ವಸತಿ ಮತ್ತು ನಗರ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಮತ್ತು ವಿದ್ಯುತ್, ಕಲ್ಲಿದ್ದಲು ಮತ್ತು ಗಣಿಗಳ ಸಚಿವಾಲಯಗಳು ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತವೆ.


ಪ್ರಸ್ತುತ ನಿಯೋಜನೆಯಲ್ಲಿರುವ 4 ಐಎಫ್‌ಎಸ್ ಅಧಿಕಾರಿಗಳು
ಪ್ರಧಾನ ಮಂತ್ರಿ ಕಚೇರಿಯಲ್ಲಿ ಪ್ರಸ್ತುತ ನಿಯೋಜನೆಯಲ್ಲಿರುವ ನಾಲ್ಕು ಭಾರತೀಯ ವಿದೇಶಾಂಗ ಸೇವಾ (IFS) ಅಧಿಕಾರಿಗಳೆಂದರೆ ಜಂಟಿ ಕಾರ್ಯದರ್ಶಿಯಾಗಿರುವ ರುದ್ರ ಗೌರವ್ ಶ್ರೇಷ್ಠ್; ವಿವೇಕ್ ಕುಮಾರ್, ಪ್ರಧಾನಿ ಮೋದಿಯವರ ಖಾಸಗಿ ಕಾರ್ಯದರ್ಶಿಯಾಗಿದ್ದಾರೆ ಮತ್ತು ಇಬ್ಬರು ನಿರ್ದೇಶಕ-ಶ್ರೇಣಿಯ ಅಧಿಕಾರಿಗಳಾಗಿ, ಯಾದವ್ ಮನಹರಸಿನ್ಹ್ ಲಕ್ಷ್ಮಣಭಾಯ್ ಮತ್ತು ಶ್ವೇತಾ ಸಿಂಗ್ ಕಾರ್ಯನಿರ್ವಹಿಸುತ್ತಿದ್ದಾರೆ.


ಗುಜರಾತ್ ತಂಡ
ಗುಜರಾತ್‌ನ ಅಧಿಕಾರಿಗಳು ಸೇವೆಯ ವಿಷಯದಲ್ಲಿ ಪ್ರಧಾನ ಮಂತ್ರಿ ಕಚೇರಿಯ ಪ್ರಮುಖ ಶಕ್ತಿಯಾಗಿದ್ದಾರೆ. ಮೋದಿವರು ಗುಜರಾತ್‌ನ ಮುಖ್ಯಮಂತ್ರಿಯಾದಾಗಿನಿಂದಲೂ ಅವರೊಂದಿಗೆ ಒಡನಾಟ ಹೊಂದಿರುವವರಾಗಿದ್ದಾರೆ. ಇದರಲ್ಲಿ ಪ್ರಮುಖರು ಪ್ರಧಾನಿಗೆ ಪ್ರಧಾನ ಕಾರ್ಯದರ್ಶಿಯಾಗಿರುವ ಪಿ.ಕೆ ಮಿಶ್ರಾ. ಮಿಶ್ರಾ ಈ ಹಿಂದೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ ಅವರ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಖಾಸಗಿ ಕಾರ್ಯದರ್ಶಿಗಳಾಗಿ ಹಾರ್ದಿಕ್ ಸತೀಶ್ಚಂದ್ರ ಶಾ, ಗುಜರಾತ್-ಕೇಡರ್ IAS ಅಧಿಕಾರಿಯಾಗಿದ್ದರು ಹಾಗೂ ಅವರ ಮೂವರು OSD ಅಧಿಕಾರಿಗಳಾಗಿ ಸಂಜಯ್ ಆರ್. ಭಾವಸರ್, ಹಿರೇನ್ ಜೋಶಿ ಮತ್ತು ಪ್ರತೀಕ್ ದೋಷಿ ಕಾರ್ಯನಿರ್ವಹಿಸುತ್ತಿದ್ದಾರೆ.


 • ಸೋಶಿಯಲ್ ಮೀಡಿಯಾ ಮೇಲ್ವಿಚಾರಕ
  ಹಿರೇನ್ ಜೋಶಿ
  ಹಿರೇನ್ ಜೋಶಿ ಅವರು ಗುಜರಾತ್ ಮುಖ್ಯಮಂತ್ರಿ ಕಚೇರಿಯಲ್ಲಿ ಮೋದಿಯವರ OSD (ವಿಶೇಷ ಕರ್ತವ್ಯ ಅಧಿಕಾರಿ) ಆಗಿದ್ದರು ಮತ್ತು ವೇದಿಕೆಗಳಲ್ಲಿ ನಾಯಕರ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಅನ್ನು ನಿರ್ವಹಿಸುವುದು ಅವರ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ.


OSD (ವಿಶೇಷ ಕರ್ತವ್ಯ ಅಧಿಕಾರಿ) ಅಧಿಕಾರಿ ಪ್ರತೀಕ್ ದೋಷಿ
ಪ್ರತೀಕ್ ದೋಷಿಯನ್ನು ಮೋದಿಯ ಕಿವಿ ಹಾಗೂ ಕಣ್ಣು ಎಂದು ಉಲ್ಲೇಖಿಸಲಾಗಿದೆ. ಪ್ರಧಾನಿಯವರು ಅಂತಿಮವಾಗಿ ತೀರ್ಮಾನಿಸುವ ಮುನ್ನ ಎಲ್ಲಾ ಆಯ್ಕೆಗಳು ಮತ್ತು ನೇಮಕಾತಿಗಳ ಬಗ್ಗೆ ವಿವರಗಳನ್ನು ನೀಡುತ್ತಾರೆ.


ಇದನ್ನೂ ಓದಿ:  Congress President: ತರೂರ್ ಹಾಗೂ ಖರ್ಗೆ ಇವರಲ್ಲಿ ಕಾಂಗ್ರೆಸ್​ ಅಧ್ಯಕ್ಷರಾಗೋರು ಯಾರು? ಇಂದು ಎಲೆಕ್ಷನ್!


ಕ್ಯಾಲೆಂಡರ್ ಕೀಪರ್: ಸಂಜಯ್ ಆರ್ ಭಾವಸರ್
ನಾಮನಿರ್ದೇಶಿತ ಗುಜರಾತ್-ಕೇಡರ್ ಐಎಎಸ್ ಅಧಿಕಾರಿ, ಭಾವಸರ್ ಜೂನ್ 2014 ರಲ್ಲಿ ಮೋದಿ ಪ್ರಧಾನಿಯಾದ ಕೂಡಲೇ ಪ್ರಧಾನಿ ಕಚೇರಿಗೆ ನೇಮಕಗೊಂಡರು. ಮೋದಿಯವರ ವಿಶ್ವಾಸಾರ್ಹ ಸಹಾಯಕರಾಗಿದ್ದು ಪ್ರಧಾನಿಯವರ ಅಪಾಯಿಂಟ್‌ಮೆಂಟ್ ಹಾಗೂ ಪ್ರವಾಸದ ವೇಳಾಪಟ್ಟಿಯನ್ನು ನಿರ್ವಹಿಸುವ ಹೊಣೆ ಇವರದಾಗಿದೆ.

Published by:Ashwini Prabhu
First published: