• Home
  • »
  • News
  • »
  • explained
  • »
  • Explained: ಏನಿದು G7? ಈ ಶೃಂಗಸಭೆಯಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

Explained: ಏನಿದು G7? ಈ ಶೃಂಗಸಭೆಯಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಜಿ7 ಸಭೆ

ಜಿ7 ಸಭೆ

ಜಿ-7 ಶೃಂಗಸಭೆ ಬಗ್ಗೆ ಎಲ್ಲರೂ ಕೇಳಿಯೇ ಇರುತ್ತೀರಿ. ಹಾಗಾದರೆ ಏನಿದು ಜಿ7 (G&7) ಸಭೆ? ಯಾರೆಲ್ಲಾ ಭಾಗವಹಿದ್ದಾರೆ? ಏನೆಲ್ಲಾ ಚರ್ಚೆಗಳು ನಡೆಯುತ್ತಿವೆ ಎಂಬುವುದನ್ನು ಸಂಕ್ಷಿಪ್ತವಾಗಿ ನೋಡೋಣ.

  • Share this:

ಭಾರತದ ಪ್ರಧಾನಿ ನರೇಂದ್ರ ಮೋದಿ (Indian Prime Minister Narendra Modi), ಅಮೆರಿಕದ ಅಧ್ಯಕ್ಷ ಜೊಬಿಡೆನ್ ಸೇರಿದಂತೆ ಅನೇಕ ವಿಶ್ವನಾಯಕರು ಜರ್ಮನಿ ಚಾನ್ಸೆಲರ್ ಸ್ಕೋಲ್ಜ್ ಆಹ್ವಾನದ ಮೇರೆಗೆ ದಕ್ಷಿಣ ಜರ್ಮನಿಯ ಸ್ಕ್ಲೋಸ್ ಎಲ್ಮೌವಿನ ಆಲ್ಪೈನ್ ಕ್ಯಾಸಲ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ (G7 summit) ಭಾಗಿಯಾಗಿದ್ದರು. ಜರ್ಮನಿಯ (Germany) ಬರ್ಲಿನ್‍ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ವಿಶ್ವದಾದ್ಯಂತ ಗಣ್ಯರು ಭಾಗಿಯಾಗಿದ್ದರು. ಹಾಗಾದರೆ ಏನಿದು ಜಿ7 (G&7) ಸಭೆ? ಯಾರೆಲ್ಲಾ ಭಾಗವಹಿದ್ದಾರೆ? ಏನೆಲ್ಲಾ ಚರ್ಚೆಗಳು ನಡೆಯುತ್ತಿವೆ ಎಂಬುವುದನ್ನು ಸಂಕ್ಷಿಪ್ತವಾಗಿ ನೋಡೋಣ. ಸಮಾವೇಶದಲ್ಲಿ ಪ್ರಮುಖವಾಗಿ ಇಂಧನ, ಭಯೋತ್ಪಾದನೆ ನಿಗ್ರಹ, ಲಿಂಗ ಸಮಾನತೆ, ಆಹಾರ ಭದ್ರತೆ, ಹವಾಮಾನ, ಪರಿಸರ ರಕ್ಷಣೆ, ಆರೋಗ್ಯ, ಪ್ರಜಾಪ್ರಭುತ್ವ ಸೇರಿದಂತೆ ಹಲವು ಮಹತ್ವದ ವಿಷಯಗಳು ಚರ್ಚೆಯಾಗಲಿವೆ. 


ಯಾವೆಲ್ಲಾ ದೇಶಗಳು ಭಾಗಿಯಾಗುತ್ತವೆ?
ಜಿ-7 ಶೃಂಗದಲ್ಲಿ ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯೂರೋಪಿಯನ್ ಒಕ್ಕೂಟಗಳು ಸದಸ್ಯ ರಾಷ್ಟ್ರಗಳಾಗಿದ್ದು, ಶೃಂಗದ ಆತಿಥ್ಯ ವಹಿಸುವ ಜರ್ಮನಿ ಈ ಬಾರಿ ಅರ್ಜೈಂಟಿನಾ, ಇಂಡೋನೇಷ್ಯ, ಸೆಹಗಲ್, ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಕೂಡ ಆಹ್ವಾನಿಸುತ್ತವೆ.


ಜಿ7 ಎಂದರೇನು?
G7 ಪ್ರಮುಖ ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಅನೌಪಚಾರಿಕ ವೇದಿಕೆಯಾಗಿದ್ದು, ಇದರಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಭಾಗಿಯಾಗುತ್ತವೆ. ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳು ಯಾವಾಗಲೂ G7 ನ ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ವಾರ್ಷಿಕ ಸಭೆಯಲ್ಲಿ ಹಾಜರಿರುತ್ತಾರೆ.


ಜರ್ಮನಿಯು 2022ರ G7ನ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇಲ್ಲಿ ಹಲವಾರು ಪ್ರಮುಖ ವಿಷಯಗಳನ್ನು ಗಣ್ಯರು ಚರ್ಚಿಸುತ್ತಾರೆ. ಜಿ–7 ಶೃಂಗಸಭೆಯಲ್ಲಿ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಹಾಗೆಯೇ ಸಂತ್ರಸ್ತ ದೇಶಗಳಿಗೆ ಹಣಕಾಸು ನೆರವನ್ನೂ ಸಹ ನೀಡಲಾಗಿದೆ. ವಿಶ್ವದಲ್ಲಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚೆ ನಡೆಸಲಾಗುತ್ತದೆ ಮತ್ತು ಪರಿಹಾರಗಳನ್ನು ಕಂಡುಕೊಳ್ಳಲಾಗುತ್ತದೆ.


ಇದನ್ನೂ ಓದಿ: GSAT-24 ಸಂವಹನ ಉಪಗ್ರಹ ಉಡಾವಣೆ ಮಾಡಿದ ಭಾರತ- ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ


ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರು ಅರ್ಜೆಂಟೀನಾ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಭಾರತವನ್ನು ಪಾಲುದಾರ ರಾಷ್ಟ್ರಗಳಾಗಿ 2022ರ ಶೃಂಗಸಭೆಗೆ ಆಹ್ವಾನಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ಸಹ ಭಾಗವಹಿಸಲಿದ್ದಾರೆ ಎಂಬ ಬಗ್ಗೆ G7 ಪ್ರೆಸಿಡೆನ್ಸಿ ಪ್ರಕಟಿಸಿದೆ.


ವಿಶ್ವಸಂಸ್ಥೆ (UNO), ವಿಶ್ವ ಆರೋಗ್ಯ ಸಂಸ್ಥೆ (WHO), ವಿಶ್ವ ವ್ಯಾಪಾರ ಸಂಸ್ಥೆ (WTO), ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ ಬ್ಯಾಂಕ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳು ಸಹ ಶೃಂಗಸಭೆಯಲ್ಲಿ ಭಾಗವಹಿಸುತ್ತಿವೆ.


G6, G8, G7


G7 ಜರ್ಮನಿ ವೆಬ್‌ಸೈಟ್‌ನಲ್ಲಿನ ಗ್ರೂಪ್ ನ ಸಂಕ್ಷಿಪ್ತ ಇತಿಹಾಸವು ಮೊದಲ "ವಿಶ್ವ ಆರ್ಥಿಕ ಶೃಂಗಸಭೆ" ಎಂದು ಹೇಳುತ್ತದೆ. ಅದು ನಂತರ G7 ಆಗಿ ಮಾರ್ಪಟ್ಟಿತು. ಜಿ-6, ಜಿ-7 ಮತ್ತು ಜಿ-8 ಇವೆಲ್ಲವೂಕಾಮನ್‌ವೆಲ್ತ್‌_ರಾಷ್ಟ್ರಗಳಯಶಸ್ಸಿನಿಂದ ಉತ್ತೇಜನ ಪಡೆದು ಆರಂಭಗೊಂಡ ಸಮುದಾಯಗಳು.


ಜಿ7 ಹೇಗೆ ಜನ್ಮ ತಾಳಿತು?
ಜಿ7 ಗ್ರೂಪ್ ಅನ್ನು 1975ರಲ್ಲಿ ಮಾಜಿ ಫ್ರೆಂಚ್ ಅಧ್ಯಕ್ಷ ವ್ಯಾಲೆರಿ ಗಿಸ್ಕಾರ್ಡ್ ಡಿ ಎಸ್ಟೇಂಗ್ ಮತ್ತು ನಂತರ ಫೆಡರಲ್ ಚಾನ್ಸೆಲರ್ ಹೆಲ್ಮಟ್ ಸ್ಮಿತ್ ಪ್ರಾರಂಭಿಸಿದರು. ಜರ್ಮನಿ, ಫ್ರಾನ್ಸ್, ಗ್ರೇಟ್ ಬ್ರಿಟನ್, ಇಟಲಿ, ಜಪಾನ್ ಮತ್ತು US ನ ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರ ಆರು ಜನರ ಗುಂಪು ಫ್ರಾನ್ಸ್ ನ ರಾಂಬೌಲೆಟ್ ಕ್ಯಾಸಲ್‌ನಲ್ಲಿ ಫೈರ್‌ಸೈಡ್ ನಲ್ಲಿ ಮೊದಲು ಭೇಟಿಯಾದರು. ಇಲ್ಲಿ ಭಾಗವಹಿಸಿದವರು 1970ರ ಆರ್ಥಿಕ ಸಮಸ್ಯೆಗಳ ಕುರಿತು ವಿಚಾರಗಳನ್ನು ವಿನಿಮಯ ಮಾಡಿಕೊಂಡರು. ಮೊದಲ ತೈಲ ಬಿಕ್ಕಟ್ಟು ಮತ್ತು ಸ್ಥಿರ ವಿನಿಮಯ ದರಗಳ ವ್ಯವಸ್ಥೆಯ ಕುಸಿತ ಮತ್ತು ಅಂತರರಾಷ್ಟ್ರೀಯ ಆರ್ಥಿಕ ನೀತಿ ಮತ್ತು ಜಾಗತಿಕ ಕುಸಿತದ ವಿರುದ್ಧ ಹೋರಾಡಲು ಆರಂಭಿಕ ಕ್ರಮಗಳನ್ನು ಒಪ್ಪಿಕೊಂಡರು.


ಇದನ್ನೂ ಓದಿ:  Explained: ಅಗ್ನಿವೀರರಿಂದ ಚೀನಾಕ್ಕೆ ಸವಾಲ್! ಸರ್ಕಾರದ ಖಡಕ್ ಪ್ಲಾನ್


ಯುರೋಪಿಯನ್ ದೇಶಗಳ ಜಿ ಗುಂಪು ಅಸ್ತಿತ್ವಕ್ಕೆ ಬಂದಿದ್ದು 1975ರಲ್ಲಿ. 1977ರಲ್ಲಿ ಕೆನಡಾ ದೇಶ ಈ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರವೇ ಜಿ–7 ಗುಂಪು ರಚನೆಯಾಯಿತು. ನಂತರ ನಿಯಮಿತವಾಗಿ ವಾರ್ಷಿಕ ಶೃಂಗಸಭೆಗಳು ನಡೆಯಲಾರಂಭಿಸಿದವು. ಮೊದಲ G7 ಪೋರ್ಟೊ ರಿಕೊದಲ್ಲಿ ಆಯೋಜನೆಯಾಗಿತ್ತು. ಆಗಿನ ಯುರೋಪಿಯನ್ ಸಮುದಾಯ ಮತ್ತು G7 ನಡುವಿನ ಮೊದಲ ಮಾತುಕತೆಯು 1977ರಲ್ಲಿ ಲಂಡನ್‌ನಲ್ಲಿ ನಡೆಯಿತು.


ಏಳನೇ ಬಾರಿಗೆ G7 ಅಧ್ಯಕ್ಷ ಸ್ಥಾನ ಅಲಂಕರಿಸಿದ ಜರ್ಮನಿ
1980ರ ದಶಕದಲ್ಲಿ, G7 ನ ಆಸಕ್ತಿಯು ವಿದೇಶಿ ಮತ್ತು ಭದ್ರತಾ ನೀತಿ ಸಮಸ್ಯೆಗಳನ್ನು ಸೇರಿಸಲು ವಿಸ್ತರಿಸಿತು. ನಂತರ ಸೋವಿಯತ್ ಪ್ರಧಾನ ಕಾರ್ಯದರ್ಶಿ ಮಿಖಾಯಿಲ್ ಗೋರ್ಬಚೇವ್ ಅವರನ್ನು 1991ರಲ್ಲಿ ಲಂಡನ್ ಶೃಂಗಸಭೆಯ ಮಾತುಕತೆಗೆ ಆಹ್ವಾನಿಸಲಾಯಿತು. 1998ರಲ್ಲಿ, ರಷ್ಯಾ ಸದಸ್ಯರಾಗಿ ಎಂಟು ಗುಂಪನ್ನು ರಚಿಸಲಾಯಿತು. 2014ರಲ್ಲಿ ಉಕ್ರೇನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದ ನಂತರ ರಷ್ಯಾವನ್ನು ಜಿ7 ಗುಂಪಿನಿಂದ ಹೊರಹಾಕಲಾಯಿತು. ಜರ್ಮನಿ ಈ ವರ್ಷ ಏಳನೇ ಬಾರಿಗೆ G7 ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ.


G7 ಸಂಖ್ಯೆಗಳು ಜಿ–7 ಸದಸ್ಯ ರಾಷ್ಟ್ರಗಳ ಒಟ್ಟಾರೆ ಜಾಗತಿಕ ಜಿಡಿಪಿ ಶೇ. 40ರಷ್ಟಿದೆ. ವಿಶ್ವದ ಜನಸಂಖ್ಯೆಯ ಶೇ.10 ರಷ್ಟನ್ನು ಈ ದೇಶಗಳು ಪ್ರತಿನಿಧಿಸುತ್ತವೆ. ನ್ಯಾಟೋ ಗುಂಪಿನಂತೆ ಜಿ–7ಗೆ ಯಾವುದೇ ಕಾನೂನು ಅಸ್ತಿತ್ವ, ಶಾಶ್ವತ ಸಚಿವಾಲಯ ಅಥವಾ ಅಧಿಕೃತ ಸದಸ್ಯರಿಲ್ಲ. ಈ ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರಗಳು, ಮಾಡಿಕೊಳ್ಳಲಾದ ಒಪ್ಪಂದಗಳನ್ನು ಆಯಾ ದೇಶಗಳ ಆಡಳಿತ ಮಂಡಳಿಗಳು ಅನುಮೋದಿಸಬೇಕಾಗುತ್ತದೆ.


ಇದನ್ನೂ ಓದಿ:  Explained: LGBT ಸಮುದಾಯಕ್ಕೆ ವಿಶೇಷವಾದ ಪ್ರೈಡ್ ಮಂತ್, ಇವರಿಗ್ಯಾಕೆ ಈ ತಿಂಗಳು ಮುಖ್ಯವಾಗಿದೆ ಗೊತ್ತಾ?


ಎಲ್ಲಾ G7 ದೇಶಗಳಲ್ಲಿ, ವಾರ್ಷಿಕ ಸಾರ್ವಜನಿಕ ವಲಯದ ವೆಚ್ಚವು 2021ರಲ್ಲಿ ಆದಾಯವನ್ನು ಮೀರಿದೆ. ಹೆಚ್ಚಿನ G7 ದೇಶಗಳು ಸಹ ಹೆಚ್ಚಿನ ಮಟ್ಟದ ಒಟ್ಟು ಸಾಲವನ್ನು ಹೊಂದಿವೆ, ವಿಶೇಷವಾಗಿ ಜಪಾನ್ (263% GDP), ಇಟಲಿ (151%) ಮತ್ತು US (133%) ಅನ್ನು ಹೊಂದಿದೆ. G7 ದೇಶಗಳು ಜಾಗತಿಕ ವ್ಯಾಪಾರದಲ್ಲಿ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ನಿರ್ದಿಷ್ಟವಾಗಿ ಯುಎಸ್ ಮತ್ತು ಜರ್ಮನಿ ಪ್ರಮುಖ ರಫ್ತು ರಾಷ್ಟ್ರಗಳಾಗಿವೆ. ಎರಡೂ 2021ರಲ್ಲಿ ವಿದೇಶದಲ್ಲಿ ಒಂದು ಟ್ರಿಲಿಯನ್ US ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಸರಕುಗಳನ್ನು ಮಾರಾಟ ಮಾಡಿದೆ.


ಜಿ7ನಲ್ಲಿ ಭಾರತ
ಭಾರತ, G7 ದೇಶಗಳು ಮತ್ತು ನಾಲ್ಕು ಆಹ್ವಾನಿತ ದೇಶಗಳೊಂದಿಗೆ ಸೋಮವಾರ '2022 ಸ್ಥಿತಿಸ್ಥಾಪಕ ಪ್ರಜಾಪ್ರಭುತ್ವ ಹೇಳಿಕೆ'ಗೆ ಸಹಿ ಹಾಕಿದೆ. ಇಲ್ಲಿ "ನಾಗರಿಕ ಸಮಾಜದ ಸ್ವಾತಂತ್ರ್ಯ ಮತ್ತು ವೈವಿಧ್ಯತೆಯನ್ನು ಕಾಪಾಡಲು "ಆನ್‌ಲೈನ್ ಮತ್ತು ಆಫ್‌ಲೈನ್‌”ನಲ್ಲಿ ಅಭಿವ್ಯಕ್ತಿ ಮತ್ತು ಅಭಿಪ್ರಾಯದ ಸ್ವಾತಂತ್ರ್ಯವನ್ನು ರಕ್ಷಿಸಲು ಬದ್ಧರಾಗಿದ್ದಾರೆ. ” ಎಂದಿದೆ.

Published by:Ashwini Prabhu
First published: