Hussaini Brahmins: ಹುಸೇನಿ ಬ್ರಾಹ್ಮಣರು ಯಾರು? ಇವರು ಹಿಂದೂಗಳಾ, ಮುಸ್ಲಿಮರಾ? ಇಲ್ಲಿದೆ ಆಸಕ್ತಿಕರ ಮಾಹಿತಿ

ಭಾರತ ದೇಶದಲ್ಲಿ ಅನೇಕರಿಗೆ ಹುಸೇನಿ ಬ್ರಾಹ್ಮಣರು ಎಂದರೆ ಯಾರು ಎಂದೇ ತಿಳಿದಿಲ್ಲ. ಏಕೆಂದರೆ ಈ ಸಮುದಾಯದ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಈ ಸಮುದಾಯ ಅಷ್ಟೊಂದು ಹೆಸರುವಾಸಿಯಾಗಿಲ್ಲ ಕೂಡ. ಇವರ ಸಮುದಾಯದವರು ಹಿಂದೂ ಧರ್ಮದವರೇ, ಆದರೆ ಮುಸಲ್ಮಾನ ಪ್ರವಾದಿ ಮೊಹಮ್ಮದರಲ್ಲಿ ನಂಬಿಕೆಯನ್ನು ಇರಿಸಿದ್ದಾರೆ. ಈ ಸಮುದಾಯದವರು ಹಿಂದೂ ವಿಗ್ರಹಗಳು ಮತ್ತು ದೇವರ ಪೋಟೊಗಳಿಗೆ ನಮಸ್ಕಾರ ಮಾಡುತ್ತಾರೆ!

ಹುಸೇನಿ ಬ್ರಾಹ್ಮಣರು

ಹುಸೇನಿ ಬ್ರಾಹ್ಮಣರು

  • Share this:

ಭಾರತ ದೇಶದಲ್ಲಿ ಅನೇಕರಿಗೆ ಹುಸೇನಿ ಬ್ರಾಹ್ಮಣರು (Hussaini Brahmins )ಎಂದರೆ ಯಾರು ಎಂದೇ ತಿಳಿದಿಲ್ಲ. ಏಕೆಂದರೆ ಈ ಸಮುದಾಯದ (Community) ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಈ ಸಮುದಾಯ ಅಷ್ಟೊಂದು ಹೆಸರುವಾಸಿಯಾಗಿಲ್ಲ ಕೂಡ ಹೌದು. ಇವರ ಸಮುದಾಯದವರು ಹಿಂದೂ ಧರ್ಮದವರೇ (Hinduism) ಆದರೆ ಮುಸಲ್ಮಾನ ಪ್ರವಾದಿ ಮೊಹಮ್ಮದರಲ್ಲಿ ನಂಬಿಕೆಯನ್ನು ಇರಿಸಿದ್ದಾರೆ. ಈ ಸಮುದಾಯದವರು ಹಿಂದೂ ವಿಗ್ರಹಗಳು ಮತ್ತು ದೇವರ ಪೋಟೊಗಳಿಗೆ ನಮಸ್ಕಾರ ಮಾಡುತ್ತಾರೆ ಆದರೆ ತಮ್ಮ ಮನೆಯ ಪೂಜಾ ಸ್ಥಳದಲ್ಲಿ ಮುಸ್ಲೀಂ ಸಮಾಜದ (Muslim society) ಸಂಕೇತಗಳನ್ನು ಪ್ರವಾದಿ ಮೊಹಮ್ಮದ್‌ ಅವರ ಲಾಂಛನದೊಂದಿಗೆ ಮನೆಯಲ್ಲಿ ಇರಿಸಿಕೊಳ್ಳುತ್ತಾರೆ.


ಹುಸೇನಿ ಬ್ರಾಹ್ಮಣರು ಯಾರು? ಎಲ್ಲೆಲ್ಲಿ ನೆಲೆಸಿರುವರು?


ಹುಸೇನಿ ಬ್ರಾಹ್ಮಣರು ಪಂಜಾಬ್‌ ಪ್ರಾಂತ್ಯದ ಮೋಹ್ಯಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯವು ಪ್ರಮುಖವಾಗಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯ, ಭಾರತದ ಪಂಜಾಬ್, ರಾಜಸ್ಥಾನ, ದೆಹಲಿ, ಮಹಾರಾಷ್ಟ್ರಗಳಲ್ಲಿ ನೆಲೆಗೊಂಡಿದೆ.ಹಿಂದೂ ಮತ್ತು ಇಸ್ಲಾ ಧರ್ಮವನ್ನು ಬೆಸೆಯುವಂಥಹ ಸಂಸ್ಕೃತಿ ಹೊಂದಿರುವ ಈ ಸಮುದಾಯವು, ತಮ್ಮನ್ನು ತಾವು ಹಿಂದುಗಳೆಂದು ಗುರುತಿಸಿಕೊಳ್ಳುತ್ತಾರೆ. ಇವರು ಮುಸ್ಲಿಂ ಪ್ರವಾದಿ ಮೊಹಮ್ಮದ್‌ರನ್ನು ಹಿಂದೂ ದೇವರ ಒಂದು ಅವತಾರ ಎಂದೇ ಭಾವಿಸುತ್ತಾರೆ. ಆದ್ದರಿಂದ ಕೆಲವು ಇಸ್ಲಾಮಿನ ಆಚರಣೆಗಳನ್ನೂ ಅನುಸರಿಸುತ್ತಾರೆ. ಸುಮಾರು 1400 ಹುಸೇನಿ ಬ್ರಾಹ್ಮಣರು ಕರಬಲಾ ಯುದ್ಧ ನಡೆಯುವ ಸಂದರ್ಭದಲ್ಲಿ ಬಾಗ್ದಾನಿನಲ್ಲಿ ನೆಲೆಸಿದ್ದರೆಂದು ತಿಳಿದು ಬರುತ್ತದೆ. ಸುಮಾರು 125 ಹುಸೇನಿ ಬ್ರಾಹ್ಮಣ ಕುಟುಂಬಗಳು ಪುಣೆಯಲ್ಲಿ ನೆಲೆಸಿರುವರು. ದೆಹಲಿಯಲ್ಲಿ ನೆಲೆಗೊಂಡಿರುವ ಈ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳು ಪ್ರತೀ ವರ್ಷ ಮೊಹರಂ ಆಚರಿಸುತ್ತಾರೆ.


ಹುಸೇನಿ ಬ್ರಾಹ್ಮಣ ಧರ್ಮದಲ್ಲಿ ಎಷ್ಟು ಉಪ ಕುಲಗಳಿವೆ?


ಹುಸೇನಿ ಬ್ರಾಹ್ಮಣರು ಪಂಜಾಬ್ ಪ್ರದೇಶದಲ್ಲಿ ಮೊಹ್ಯಾಲ್ ಬ್ರಾಹ್ಮಣ ಸಮುದಾಯವಾಗಿದೆ. ಮೊಹ್ಯಾಲ್ ಸಮುದಾಯವು ಬಾಲಿ, ಭೀಮ್ವಾಲ್, ಚಿಬ್ಬರ್, ದತ್, ಲೌ, ಮೋಹನ್ ಮತ್ತು ವೈದ್ ಎಂಬ ಏಳು ಉಪ-ಕುಲಗಳನ್ನು ಒಳಗೊಂಡಿದೆ. ದತ್ ಕುಲದ ಮೊಹ್ಯಾಲ್ ಬ್ರಾಹ್ಮಣನು ಕರ್ಬಲಾ ಕದನದಲ್ಲಿ ಇಮಾಮ್ ಹುಸೇನ್ ಪರವಾಗಿ ಹೋರಾಡಿದನು. ಕೆಲವು ದಂತಕಥೆಯ ಪ್ರಕಾರ, ರಹಾಬ್ ಸಿದ್ ದತ್ ಅವರು ಕರ್ಬಲಾ ಯುದ್ಧದ ಸಮಯದಲ್ಲಿ ಬಾಗ್ದಾದ್ ಬಳಿ ವಾಸಿಸುತ್ತಿದ್ದ, ವೃತ್ತಿಜೀವನದ ಸೈನಿಕರ ಸಣ್ಣ ಬ್ಯಾಂಡ್‌ನ ನಾಯಕರಾಗಿದ್ದರು. ದಂತಕಥೆಯಲ್ಲಿ ಅವನು ತಂಗಿದ್ದ ಸ್ಥಳವನ್ನು ಡೈರ್-ಅಲ್-ಹಿಂದಿಯಾ ಎಂದು ಉಲ್ಲೇಖಿಸುತ್ತದೆ, ಅಂದರೆ "ದಿ ಇಂಡಿಯನ್ ಕ್ವಾರ್ಟರ್", ಇದು ಅಲ್-ಹಿಂದಿಯಾದೊಂದಿಗೆ ಇಂದಿಗೂ ಅಸ್ತಿತ್ವದಲ್ಲಿರುವ ಸ್ಥಳವಾಗಿದೆ.


ಇದನ್ನೂ ಓದಿ:  Explained: ಪಂಜಾಬ್, ಬಂಗಾಳದ 1947ರ ಗಡಿ ಆಯೋಗದ ತೀರ್ಪು ಭಾರತಕ್ಕೆ ಸವಾಲಾಗಿದ್ದು ಹೇಗೆ?

ಹಿಂದೂ ಸಂಪ್ರದಾಯಕ್ಕೆ ಅನುಗುಣವಾಗಿ, ಮೊಯ್ಹಾಲ್ ಸಮುದಾಯವು ಭಾರತೀಯವಲ್ಲದ ಸಂಪ್ರದಾಯಗಳನ್ನು ಅಳವಡಿಸಿಕೊಂಡಿತು, ಇದು ಇಸ್ಲಾಂ ಧರ್ಮವನ್ನು ಗೌರವಿಸುವ ಹುಸೇನಿ ಬ್ರಾಹ್ಮಣರ ಒಂದು ಸಣ್ಣ ಉಪ-ಪಂಗಡದ ಹೊರಹೊಮ್ಮುವಿಕೆಗೆ ಕಾರಣವಾಯಿತು.


ಐತಿಹಾಸಿಕ ದಾಖಲೆಗಳಲ್ಲಿ ಏನಿದೆ?


ಐತಿಹಾಸಿಕ ದಾಖಲೆಗಳ ಪ್ರಕಾರ, ಕರ್ಬಲಾ ಕದನ ನಡೆದಾಗ ಸುಮಾರು 1,400 ಬ್ರಾಹ್ಮಣರು ಇರಾಕ್‌ನ ರಾಜಧಾನಿ ಬಾಗ್ದಾದ್‌ನಲ್ಲಿ ವಾಸಿಸುತ್ತಿದ್ದರು. ಇರಾಕ್‌ನ ಕೆಲವು ಭಾಗಗಳಲ್ಲಿ ಇನ್ನೂ ಕೆಲವು ಕುಟುಂಬಗಳು ಕಂಡುಬರುತ್ತವೆ. ಆದರೆ ಹೆಚ್ಚಿನವು ಈಗ ಭಾರತದಲ್ಲಿ ಪುಣೆ, ದೆಹಲಿ, ಚಂಡೀಗಢ, ಅಮೃತಸರ ಮತ್ತು ಜಮ್ಮು, ಸಿಂಧ್ ಮತ್ತು ಪಾಕಿಸ್ತಾನದ ಲಾಹೋರ್ ಮತ್ತು ದಕ್ಷಿಣ ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ನೆಲೆಸಿವೆ.


ಭಾರತ ವಿಭಜನೆ ಆಗುವ ತನಕ , ಅನೇಕ ಹುಸೇನಿ ಬ್ರಾಹ್ಮಣರು ಲಾಹೋರ್‌ನಲ್ಲಿ ವಾಸಿಸುತ್ತಿದ್ದರು. ಹಾಗೆಯೇ ಅಜ್ಮೀರ್‌ನಲ್ಲಿ, ಇಂದಿಗೂ ತಮ್ಮನ್ನು ಹುಸೇನಿ ಬ್ರಾಹ್ಮಣರೆಂದು ಕರೆದುಕೊಳ್ಳುವ ಒಂದು ಸಣ್ಣ ಗುಂಪು ಕೂಡ ಇದೆ. ಬಿಹಾರದಲ್ಲಿ, ಮುಜಾಫರ್‌ಪುರ ಜಿಲ್ಲೆಯ ಭೂಮಿಹಾರ್ ಬ್ರಾಹ್ಮಣರ ಒಂದು ಪಂಗಡವೂ ಹುಸೇನಿ ಬ್ರಾಹ್ಮಣರ ಪೂರ್ವಜರೆಂದು ಹೇಳಿಕೊಳ್ಳುತ್ತದೆ.


ಹುಸೇನಿ ಬ್ರಾಹ್ಮಣರು 'ಸಾಂಪ್ರದಾಯಿಕ ಹಿಂದೂಗಳು' ಅಥವಾ ಸಾಂಪ್ರದಾಯಿಕ ಮುಸ್ಲಿಮರು ಅಲ್ಲ. ಅವರು ಸಾಂಪ್ರದಾಯಿಕ ವೈದಿಕ ಮತ್ತು ಇಸ್ಲಾಮಿಕ್ ಸಂಪ್ರದಾಯಗಳು ಎರಡು ಸಂಪ್ರದಾಯಗಳ ಪದ್ಧತಿಗಳನ್ನು ಆಚರಿಸುತ್ತಾರೆ. ಹಿಂದಿ/ಉರ್ದುವಿನಲ್ಲಿ ಹುಸೇನಿ ಬ್ರಾಹ್ಮಣರನ್ನು "ವಾಹ್ ದತ್ತ್ ಸುಲ್ತಾನ್, ಹಿಂದೂ ಕಾ ಧರ್ಮ್, ಮುಸಲ್ಮಾನ್ ಕಾ ಇಮಾನ್, ಅಧಾ ಹಿಂದೂ ಅಧಾ ಮುಸಲ್ಮಾನ್" ಹೀಗೆ ಉಲ್ಲೇಖಿಸುತ್ತದೆ. ಇದರ ಅರ್ಥ, ಹಿಂದೂ ಧರ್ಮವನ್ನು ಘೋಷಿಸುವುದು ಮತ್ತು ಮುಸ್ಲಿಂ ಆಚರಣೆಯನ್ನು ಅನುಸರಿಸುವುದು. ಸಾಮಾನ್ಯ ಅರ್ಥದಲ್ಲಿ ಹೇಳುವುದಾದರೆ ಅರ್ಧ ಹಿಂದೂ ಮತ್ತು ಅರ್ಧ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುವುದು.


ಹುಸೇನಿ ಬ್ರಾಹ್ಮಣ ಸಮುದಾಯದ ಕೆಲವು ಪ್ರಮುಖ ವ್ಯಕ್ತಿಗಳು


ಮಾಜಿ ಸಂಸತ್‌ ಸದಸ್ಯ ಹಾಗೂ ಚಲನಚಿತ್ರ ನಟ ಸುನಿಲ್‌ ದತ್‌ ಅವರು ಈ ಸಮುದಾಯಕ್ಕೆ ಸೇರಿದ ಖ್ಯಾತ ವ್ಯಕ್ತಿಯಾಗಿದ್ದಾರೆ.ಚಲನಚಿತ್ರ ನಟ ಸಂಜಯ್ ದತ್ ಹಾಗೂ ರಾಜಕಾರಣಿ ಪ್ರಿಯಾ ದತ್ ಅವರು ಇವರ ಮಕ್ಕಳಾಗಿದ್ದಾರೆ. ಚಲನ ಚಿತ್ರ ನಟಿಯರಾದ ಗೀತಾ ಬಾಲಿ, ಅರುಣ ಬಾಲಿ,ಲಾರಾ ದತ್ತಾ, ಚಲನಚಿತ್ರ ಸಾಹಿತಿ ಆನಂದ ಬಕ್ಷಿ, ಪತ್ರಕರ್ತೆ ಬರಖಾ ದತ್ತಾ, ಉರ್ದು ಲೇಖಕ, ಕವಿ ಕಶ್ಮೀರಿ ಲಾಲ್ ಝಾಕಿರ್, ಸಬೀರ್ ದತ್, ನಂದ ಕಿಶೋರ್ ವಿಕ್ರಮ್ ಮುಂತಾದವರು ಕೂಡ ಹುಸೇನಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಖ್ಯಾತನಾಮರಾಗಿದ್ದಾರೆ. ಪುನೀತನಾಥ ದತ್ತಾ, ವಿಜಯ ರತನ್ ಚೌಧರಿ, ರಾಜೀವ ಬಕ್ಷಿ, ಕಲ್ವಂತ್ ಸಿಂಗ್‌ದತ್ತ, ಸರ್ದಾರ್ ಬಹಾದೂರ್ ರಸೀಲ್ದಾರ್ ಮುಂತಾದ ಹುತಾತ್ಮ ಸೈನಿಕರು ಕೂಡ ಇದೇ ಸಮುದಾಯದವರು


ಇದನ್ನೂ ಓದಿ:   Explained: ಹೇಗಿದೆ ಭಾರತ-ಪಾಕ್ ಸಂಬಂಧ? ವಾಸ್ತವಿಕ ಅಂಶಗಳನ್ನು ವಿವರಿಸುವ ಪುಸ್ತಕವಿದು

ಹುಸೇನಿ ಬ್ರಾಹ್ಮಣರು ಆಚರಿಸುವ ಹಬ್ಬಗಳು


ಮೊಹರಂ ತಿಂಗಳಲ್ಲಿ ಶಿಯಾ ಪಂಗಡದ ಮುಸ್ಲಿಮರು ಆಚರಿಸುವ ಎಲ್ಲಾ ಸಂಪ್ರದಾಯಗಳನ್ನು ಹುಸೇನಿ ಬ್ರಾಹ್ಮಣ ಸಮುದಾಯವು ಅನುಸರಿಸುತ್ತದೆ. ಅವರು ಮೊಹರಂ ಅಜಾದಾರಿ ನಡೆಯುವ ಸ್ಥಳವಾದ ಅಜಖಾನ್‌ನಲ್ಲಿ ನಮಸ್ಕಾರಗಳನ್ನು ಸಲ್ಲಿಸುತ್ತಾರೆ. ಮರ್ಸಿಯಾ, ನೌಹಾ ಮತ್ತು ಸಲಾಮ್ ಓದುವ ತಂತ್ರವನ್ನು ಹಲವರು ಚೆನ್ನಾಗಿ ತಿಳಿದಿದ್ದಾರೆ. ಹೆಚ್ಚಿನ ಹುಸೇನಿ ಬ್ರಾಹ್ಮಣರು ಸಾರಸ್ವತ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರು ತಮ್ಮ ಪೂರ್ವಜರಿಂದ ಕಲಿತ ಇಮಾಮ್ ಹುಸೇನ್ ಅವರ ನಂಬಿಕೆಯ ಸಂಪ್ರದಾಯವನ್ನು ಮುಂದುವರಿಸುತ್ತಾರೆ. ಅವರು ಮಜ್ಲಿಸ್‌ಗೆ ಹಾಜರಾಗುತ್ತಾರೆ ಮತ್ತು ಮೊಹರಂನಲ್ಲಿ ಶೋಕಾಚರಣೆಯ ದಿನಗಳಲ್ಲಿ ಕುರಾನ್‌ ಅನ್ನು ಪಠಿಸುತ್ತಾರೆ.


ಠುಮ್ರಿ, ಖಯಾಲ್, ದಾದ್ರಾ ಮತ್ತು ಗಜಲ್‌ಗಳಿಗೆ ಹೆಸರುವಾಸಿಯಾದ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕಿ ಸುನಿತಾ ಜಿಂಗ್ರಾನ್ ಅವರು ಹುಸೇನಿ ಬ್ರಾಹ್ಮಣರ ಬಗ್ಗೆ “ದೇವರು ಮೊದಲು ಮನುಷ್ಯರನ್ನು ಸೃಷ್ಟಿಸಿದನು ಆದರೆ ನಾವು ನಮ್ಮನ್ನು ಧರ್ಮಗಳಾಗಿ ವಿಂಗಡಿಸಿದ್ದೇವೆ. ಹಿಂದೂ ಮತ್ತು ಮುಸಲ್ಮಾನರ ದೇಹದಲ್ಲಿ ರಕ್ತ ಕೆಂಪಾಗಿದೆ. ಮಾನವೀಯತೆಯು ಎಲ್ಲಾ ಧರ್ಮಗಳಿಗಿಂತ ಶ್ರೇಷ್ಠವಾಗಿದೆ ಮತ್ತು ಇದು ಎಲ್ಲರಿಗೂ ಪ್ರೀತಿ ಮತ್ತು ಗೌರವವನ್ನು ಉತ್ತೇಜಿಸುವ ನನ್ನ ಮಾರ್ಗವಾಗಿದೆ ಎಂದು ನಾವು ಅರ್ಥಮಾಡಿಕೊಳ್ಳಬೇಕು” ಎಂದು ಹೇಳುವರು.


ಇದನ್ನೂ ಓದಿ:  Explained: ದೇಶದ ರಕ್ಷಣೆಯ ಮತ್ತೊಬ್ಬ ರಿಯಲ್ ಹೀರೋಗಳಿವರು! ಸೇನಾ ನಾಯಿಗಳ ನೇಮಕ, ತರಬೇತಿ, ಕರ್ತವ್ಯಗಳ ಬಗ್ಗೆ ಇಲ್ಲಿದೆ ವಿವರ


ಅವರು ತನ್ನ ಮಾತನ್ನು ಮುಂದುವರಿಸುತ್ತಾ, "ನನಗೆ, ಧರ್ಮವೆಂದರೆ ದೇವರು ಮತ್ತು ನನ್ನ ನಡುವಿನ ವೈಯಕ್ತಿಕ ಸಂಬಂಧ ಆಗಿರುತ್ತದೆ ಮತ್ತು ನಾನು ಯಾರು ಅಂತ ನನಗೆ ಹೇಳುವ ಹಕ್ಕು ಯಾರಿಗೂ ಇಲ್ಲ. ಭಾರತದಲ್ಲಿ ವಾಸಿಸಲು ಕೋಮು ಸೌಹಾರ್ದತೆಯು ಎಷ್ಟು ಮುಖ್ಯ” ಎಂದು ವೀಡಿಯೊ ಒಂದರಲ್ಲಿ, ಅವರು ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮದ ತತ್ವಗಳನ್ನು ಹೊಂದಿರುವ ಹುಸೇನಿ ಬ್ರಾಹ್ಮಣ ಸಮುದಾಯವನ್ನು ವಿವರಿಸುತ್ತಾರೆ.

Published by:Ashwini Prabhu
First published: