Explained: ‘ಕೆಜಿಎಫ್ ಗೋಲ್ಡ್’ಗೆ ರಾಜಕಾರಣದಿಂದ ಗಾಳ! ರಾಜ್‌ರನ್ನೂ ಕರೆದಿದ್ದರು, ಯಶ್‌ರನ್ನೂ ಕರೆಯುತ್ತಾರೆ!

‘ರಾಕಿಂಗ್ ಸ್ಟಾರ್’ ಯಶ್ (Rocking Star Yash) ರಾಜಕೀಯಕ್ಕೆ (Politics) ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಿದ್ರೆ ಇದು ನಿಜನಾ? ಯಶ್ ಸೇರಿದಂತೆ ಈ ಹಿಂದಿನ ಯಾವೆಲ್ಲ ನಟರು ರಾಜಕೀಯದಿಂದ ಆಫರ್ (Offer) ಪಡೆದಿದ್ದರು? ಯಾವೆಲ್ಲ ನಟರು ರಾಜಕೀಯ ರಂಗದಲ್ಲಿ ಮಿಂಚಿದ್ದಾರೆ? ಡಾ. ರಾಜ್‌ಕುಮಾರ್ ರಾಜಕೀಯಕ್ಕೆ ಯಾಕೆ ಬರಲಿಲ್ಲ? ಈ ಬಗ್ಗೆ ಫುಲ್ ಡಿಟೇಲ್ಸ್ (Details) ಇಲ್ಲಿದೆ ಓದಿ…

ಡಾ. ರಾಜ್‌ಕುಮಾರ್-ರಾಕಿಂಗ್ ಸ್ಟಾರ್ ಯಶ್

ಡಾ. ರಾಜ್‌ಕುಮಾರ್-ರಾಕಿಂಗ್ ಸ್ಟಾರ್ ಯಶ್

  • Share this:
‘ಕೆಜಿಎಫ್ ಚಾಪ್ಟರ್ 2’ (KGF Chapter 2) ಸಿನಿಮಾ (Cinema) ಎಬ್ಬಿಸಿದ ಸುನಾಮಿ (Tsunami) ಅಲೆ (Wave) ವಿಶ್ವದಾದ್ಯಂತ ಜೋರಾಗುತ್ತಲೇ ಇದೆ. ಇಡೀ ಭಾರತೀಯ ಚಿತ್ರರಂಗವಷ್ಟೇ (Indian Film Industry) ಅಲ್ಲ, ವಿಶ್ವದ ಸಿನಿ ಪ್ರಿಯರು ಕನ್ನಡ (Kannada) ಸಿನಿಮಾದತ್ತ ತಿರುಗಿ ನೋಡುವಂತೆ ಮಾಡಿದೆ. ಕನ್ನಡ (Kannada), ಹಿಂದಿ (Hindi), ತಮಿಳು (Tamil), ತೆಲುಗು (Telugu), ಮಲಯಾಳಂ (Malayalam) ಸೇರಿದಂತೆ ಬಹುಭಾಷೆಯಲ್ಲಿ (Multi Languages) ಕೆಜಿಎಫ್ ಚಾಪ್ಟರ್ 2 ರಿಲೀಸ್ ಆಗಿ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. 'ಕೆಜಿಎಫ್ 2' ಕೇವಲ ಹಿಂದಿ ಭಾಷೆಯಲ್ಲಿ ಅಷ್ಟೇ ಅಲ್ಲ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿಯೂ ಜೋರಾಗೇ ಕಲೆಕ್ಷನ್ (Collection) ಮಾಡಿದೆ. 'ಕೆಜಿಎಫ್ 2' ಕನ್ನಡ ವರ್ಷನ್ (Version) ಬರೋಬ್ಬರಿ 100 ಕೋಟಿ ಶೇರ್ (Share) ಪಡೆದುಕೊಂಡಿದೆ. ತೆಲುಗಿನ ಎರಡೂ ರಾಜ್ಯಗಳಿಂದ 128 ಕೋಟಿ ಗಳಿಸಿದೆ. ಎಲ್ಲಾ ಕಡೆ ಒಂದೊಂದು ಮೈಲಿಗಲ್ಲು ದಾಟಿರುವ 'ಕೆಜಿಎಫ್ 2' ವಿಶ್ವದಾದ್ಯಂತ 19 ದಿನಗಳಲ್ಲಿ ಸುಮಾರು 1034.85 ಕೋಟಿ ಲೂಟಿ ಮಾಡಿದೆ. ಈ ಹೊತ್ತಲ್ಲಿ ‘ರಾಕಿಂಗ್ ಸ್ಟಾರ್’ ಯಶ್ (Rocking Star Yash) ರಾಜಕೀಯಕ್ಕೆ (Politics) ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಿದ್ರೆ ಇದು ನಿಜನಾ? ಯಶ್ ಸೇರಿದಂತೆ ಈ ಹಿಂದಿನ ಯಾವೆಲ್ಲ ನಟರು ರಾಜಕೀಯದಿಂದ ಆಫರ್ (Offer) ಪಡೆದಿದ್ದರು? ಯಾವೆಲ್ಲ ನಟರು ರಾಜಕೀಯ ರಂಗದಲ್ಲಿ ಮಿಂಚಿದ್ದಾರೆ? ಈ ಬಗ್ಗೆ ಫುಲ್ ಡಿಟೇಲ್ಸ್ (Details) ಇಲ್ಲಿದೆ ಓದಿ…

ರಾಜಕೀಯಕ್ಕೆ ಬರುತ್ತಾರಾ ರಾಕಿ ಭಾಯ್?

ಹೌದು, ಇಂತದ್ದೊಂದು ಮಾತುಗಳು ಕೇಳಿ ಬರುತ್ತಿವೆ. ರಾಕಿಂಗ್ ಸ್ಟಾರ್ ಯಶ್ ರಾಜಕೀಯಕ್ಕೆ ಬರುತ್ತಾರಂತೆ ಎನ್ನುವ ಮಾತು ಓಡಾಡುತ್ತಿದೆ. ಈ ಬಗ್ಗೆ ನಟ ಯಶ್ ಇದುವರೆಗೂ, ಎಲ್ಲಿಯೂ ಏನನ್ನೂ ಹೇಳಿಲ್ಲ. ಆದರೆ ಅಭಿಮಾನಿಗಳು ಹಾಗೂ ಜನಸಾಮಾನ್ಯರು ಈ ವಿಚಾರದ ಬಗ್ಗೆ ಭಾರೀ ಚರ್ಚೆಯಲ್ಲಿ ತೊಡಗಿದ್ದಾರೆ.

 ಯಶ್ ರಾಜಕೀಯದ ಬಗ್ಗೆ ಜ್ಯೋತಿಷಿ ಭವಿಷ್ಯ

ಯಶ್ ರಾಜಕೀಯ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರಂತೆ. ಹೀಗಂತ ಅಂತೆ-ಕಂತೆಯ ಮಾತುಗಳು ಓಡಾಡುತ್ತಿವೆ. ರಾಕಿ ಭಾಯ್ ಯಶ್ ರಾಜಕೀಯಕ್ಕೆ ಬರುತ್ತಾರಂತೆ ಅದೂ ದಶಕಗಳ ಅಂತ ಆ ಜ್ಯೋತಿಷಿ ಹೇಳಿದ್ದಾರಂತೆ. ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿದೆ.

ಮುಂದೊಂದು ದಿನ ರಾಜಕೀಯ ಸೇರುತ್ತಾರಾ ರಾಕಿಂಗ್ ಸ್ಟಾರ್?

ನಟ ಯಶ್ ಮುಂದೊಂದು ದಿನ ರಾಜಕೀಯಕ್ಕೆ ಬರುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ರಾಜಕೀಯದಲ್ಲಿ ದೊಡ್ಡದಾದ ಸಾಧನೆ ಮಾಡುವುದೇ ಯಶ್ ಮೂಲ ಉದ್ದೇಶ, ಅದಕ್ಕೆ ಸಿನಿಮಾ ಯಶ್‌ಗೆ ಒಂದು ಮೆಟ್ಟಿಲು ಮಾತ್ರ ಆಗಿದೆ ಎನ್ನುತ್ತಿದ್ದಾರೆ ಆಪ್ತರು. ಇತ್ತೀಚೆಗೆ ನಟ ಯಶ್ ಈ ಬಗ್ಗೆ ತಮ್ಮ ಆಪ್ತರೊಬ್ಬರ ಬಳಿ ಈ ಕುರಿತು ಕೇಳಿಕೊಂಡಿರುವುದನ್ನು ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೋಡು ಬರೆದುಕೊಂಡಿದ್ದಾರೆ. "ಇದು ಏನು ಅಲ್ಲ, ಗುರಿ ಬೇರೆನೆ ಇದೆ‌. ಮಾಡುವುದು ತುಂಬಾ ಇದೆ. ಅದಕ್ಕೆ ಸಿನಿಮಾ ಒಂದು ಮೆಟ್ಟಿಲು ಮಾತ್ರ" ಅಂತ ಪತ್ರಕರ್ತ ಗಣೇಶ್ ಕಾರಸಗೋಡು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Explained: ಡಾ. ರಾಜ್‌ಕುಮಾರ್ ಸಾಧನೆಯೇನು ಕಡಿಮೆಯೇ? ‘ಕರ್ನಾಟಕ ರತ್ನ’ಕ್ಕೆ ಸಿಗಲಿಲ್ಲವೇಕೆ ‘ಭಾರತ ರತ್ನ’?

ಈ ಹಿಂದೆ ಪ್ರಚಾರದಲ್ಲೂ ಭಾಗಿಯಾಗಿದ್ದ ಯಶ್

ನಟ ಯಶ್ ಅವರಿಗೆ ರಾಜಕೀಯ ಹೊಸದಲ್ಲ ಅಥವಾ ರಾಜಕೀಯ ವ್ಯಕ್ತಿಗಳ ಸಂಪರ್ಕವೇ ಇಲ್ಲ ಅಂತಲ್ಲ. ಈ ಹಿಂದೆ 2019ರಲ್ಲಿ ಲೋಕಸಭಾ ಚುನಾವಣೆ ವೇಳೆ ಹಿರಿಯ ನಟಿ ಕಮ್ ಮಂಡ್ಯದ ಹಾಲಿ ಸಂಸದೆ ಸುಮಲತಾ ಪರ ಭಾರೀ ಪ್ರಚಾರ ನಡೆಸಿದ್ದರು. ಮತ್ತೋರ್ವ ನಟ ದರ್ಶನ್ ಜೊತೆ ಸೇರಿಕೊಂಡು, ಇನ್ನೋರ್ವ ನಟ ಹಾಗೂ ಆಗಿನ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಆರ್ಭಟಿಸಿದ್ದರು. ಯಶ್ ಹಾಗೂ ದರ್ಶನ್ ಜೋಡಿ ಆ ವೇಳೆ ಮಂಡ್ಯದಲ್ಲಿ ಜೋಡೆತ್ತು ಅಂತಾನೇ ಫೇಮಸ್ ಆಗಿತ್ತು.

‘ಯಶೋಮಾರ್ಗ’ ಮೂಲಕ ಈಗಾಗಲೇ ಜನಸೇವೆ

ಬಹುತೇಕ ರಾಜಕಾರಣಿಗಳು ರಾಜಕೀಯಕ್ಕೆ ಯಾಕೆ ಬಂದ್ರಿ ಅಂತ ಕೇಳಿದ್ರೆ ಹೇಳುವುದು ಒಂದೇ ಉತ್ತರ, ಅದು ಜನ ಸೇವೆ ಅಥವಾ ಸಮಾಜ ಸೇವೆ! ಸಮಾಜಕ್ಕೆ ಏನಾದರೂ ಮಾಡಬೇಕು, ಅದಕ್ಕಾಗಿ ಅಧಿಕಾರ ಬೇಕು ಅಂತ ಬಣ್ಣದ ಮಾತನ್ನಾಡುತ್ತಾರೆ. ಆದರೆ ನಟ ಯಶ್, ಯಾವುದೇ ಅಧಿಕಾರ ಇಲ್ಲದೇ, ಯಶೋಮಾರ್ಗ ಫೌಂಡೇಶನ್ ಸ್ಥಾಪಿಸಿ, ಈ ಮೂಲಕ ಈಗಾಗಲೇ ಸಮಾಜಸೇವೆ ಮಾಡುತ್ತಿದ್ದಾರೆ.

ಸ್ವಂತ ಪಕ್ಷ ಕಟ್ಟುತ್ತಾರಾ ಈ ‘ಕೆಜಿಎಫ್’ ಗೋಲ್ಡ್?

ನಟ ಯಶ್ ರಾಜಕೀಯಕ್ಕೆ ಬರುತ್ತಾರಂತೆ ಎನ್ನುವ ಸುದ್ದಿ ಜೊತೆಗೆ ಅವರೇ ಸ್ವಂತ ರಾಜಕೀಯ ಪಕ್ಷ ಕಟ್ಟುತ್ತಾರಂತೆ ಎಂಬ ಸುದ್ದಿಯೂ ಇದೆ. ಯಶ್ ರಾಜಕೀಯಕ್ಕೆ ಇಳಿಯುತ್ತಾರೆ, ಆದರೆ ಅವರು ತಮ್ಮ ಸ್ವಂತ ಪಕ್ಷವನ್ನು ಕಟ್ಟುವ ಯೋಜನೆಯಲ್ಲಿ ಇದ್ದಾರೆ ಎನ್ನಲಾಗುತ್ತಿದೆ.

ರಾಜಕೀಯದ ಕುರಿತಂತೆ ಯಶ್ ಹೇಳಿದ್ದೇನು?

ಯಶ್ ರಾಜಕೀಯಕ್ಕೆ ಬರುತ್ತಾರಂತೆ ಎಂಬ ಬಗ್ಗೆಯೇ ವಾರದಿಂದ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಆದರೆ ಇದರ ಬಗ್ಗೆ ಖುದ್ದು ಯಶ್ ಆಗಲಿ, ಅವರ ಕುಟುಂಬಸ್ಥರು ಅಥವಾ ಆಪ್ತರಾಗಲಿ ಯಾರೂ ಪ್ರತಿಕ್ರಿಯಿಸಿಲ್ಲ.

ಡಾ. ರಾಜ್‌ಕುಮಾರ್‌ಗೂ ಆಹ್ವಾನ ನೀಡಿದ್ದ ರಾಜಕಾರಣಿಗಳು

ರಾಜಕೀಯ ಪಕ್ಷಗಳು ಯಶಸ್ವಿ ನಟರ ಹಿಂದೆ ಬೀಳೋದು ಇದೇ ಮೊದಲೇನಲ್ಲ. ನಟ ಸಾರ್ವಭೌಮ ಡಾ. ರಾಜ್‌ಕುಮಾರ್ ಸೇರಿದಂತೆ ಅನೇಕ ಯಶಸ್ವಿ ನಟರನ್ನು ರಾಜಕೀಯಕ್ಕೆ ಆಹ್ವಾನಿಸಲಾಗಿತ್ತು. ಆದರೆ ಡಾ. ರಾಜ್‌ಕುಮಾರ್ ರಾಜಕೀಯಕ್ಕೆ ಹೋಗದೇ, ಅದರಿಂದ ದೂರವೇ ಉಳಿದಿದ್ದರು.

 ಇಂದಿರಾಗಾಂಧಿ ವಿರುದ್ಧ ಸ್ಪರ್ಧಿಸುವಂತೆ ಒತ್ತಡ

1978ರ ಉಪ ಚುನಾವಣೆ ಸಂದರ್ಭದಲ್ಲಿ ಭಾರತದ ಉಕ್ಕಿನ ಮಹಿಳೆ ಇಂದಿರಾಗಾಂಧಿ ವಿರುದ್ಧ ಸ್ಪರ್ಧಿಸುವಂತೆ ರಾಜ್‌ ಮೇಲೆ ಒತ್ತಡ ಹೇರಲಾಗಿತ್ತಂತೆ. ತುರ್ತು ಪರಿಸ್ಥಿತಿ ಹೇರಿ ಅಧಿಕಾರ ಕಳೆದುಕೊಂಡಿದ್ದ ಇಂದಿರಾಗೆ ಆ ಚುನಾವಣೆ ಅಂತ್ಯಂತ ಮಹತ್ವದ್ದಾಗಿತ್ತು. ಇತ್ತು ಕರ್ನಾಟಕದಲ್ಲೇ ಇಂದಿರಾಗೆ ಮಣ್ಣು ಮುಕ್ಕಿಸಬೇಕು ಅಂತ ಇಂದಿರಾ ವಿರೋಧಿಗಳು ದೊಡ್ಡ ತಂತ್ರವನ್ನೇ ಹೂಡಿದ್ದರು. ಆಗ ಅವರಿಗೆ ಕಂಡಿದ್ದೇ ಡಾ. ರಾಜ್‌ಕುಮಾರ್.

ಚುನಾವಣೆಯ ಸ್ಪರ್ಧೆಯಿಂದ ದೂರ ಉಳಿದಿದ್ದ ಡಾ. ರಾಜ್‌

ಈ ಸಂದರ್ಭದಲ್ಲಿ ಇಂದಿರಾಗಾಂಧಿ ವಿರುದ್ಧ ಸೆಣೆಸಲು ರಾಜ್ಯದಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿಗಾಗಿ ಹುಡುಕಾಟ ನಡೆದಿತ್ತು. ಆಗ ಡಾ.ರಾಜ್ ಕುಮಾರ್ ಬಿಟ್ಟರೆ ಇನ್ಯಾರೂ ಆ ರೀತಿಯ ವರ್ಚಸ್ಸಿನ ವ್ಯಕ್ತಿ ಇರಲಿಲ್ಲ. ಹಾಗಾಗಿ ಹಲವಾರು ರಾಜಕೀಯ ಪಕ್ಷಗಳು ಅವರನ್ನು ಕಣಕ್ಕಿಳಿಸಲು ಹಾತೊರೆಯುತ್ತಿದ್ದವು. ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಇಂದಿರಾ ವಿರುದ್ಧ ರಾಜ್‌ರನ್ನು ಕಣಕ್ಕಿಳಿಸುವ ತೆರೆಮರೆ ಕಸರತ್ತುಗಳು ಬಿರುಸಾಗಿದ್ದವು. ಆದರೆ ಡಾ. ರಾಜ್‌ಕುಮಾರ್ ರಾಜಕೀಯ ಪಕ್ಷಗಳ ಆಹ್ವಾನವನ್ನು ವಿನಯದಿಂದಲೇ ತಿರಸ್ಕರಿಸಿದ್ದರು.

ರಾಜಕೀಯದಿಂದ ದೂರ ಉಳಿದಿದ್ದೇಕೆ ಅಣ್ಣಾವ್ರು?

ಡಾ. ರಾಜ್‌ಕುಮಾರ್ ತಾವು ರಾಜಕೀಯ ಸೇರದೇ ಇದ್ದಿದ್ದು ಯಾಕೆ ಅಂತ ಎಲ್ಲಿಯೂ ಹೇಳಿರಲಿಲ್ಲ. ಆದರೆ 2005ರಲ್ಲಿ ಈ ಬಗ್ಗೆ ಹೇಳಿದ್ದರು ಅಂತ ಅವರ ಪುತ್ರ, ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಹೇಳಿದ್ದಾರೆ. "2005ರಲ್ಲಿ ಚೆನ್ನೈನಲ್ಲಿ ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಗ ಆಸ್ಪತ್ರೆಯ ಕೊಠಡಿಗೆ ನನ್ನನ್ನು ಏಕಾಂತವಾಗಿ ಬರಲು ಹೇಳಿದರು.  ರಾಜಕೀಯಕ್ಕೆ ನೀವ್ಯಾಕೆ ಬಂದಿಲ್ಲ ಅಂತ ನಾನೊಮ್ಮೆ ಕೇಳಿದ್ದ ಪ್ರಶ್ನೆಗೆ ಆಗ ಉತ್ತರ ಹೇಳಿದ್ದರು.

“ಒಳ್ಳೆ ಉದ್ದೇಶ ಇದ್ದಿದ್ದರೆ ಖಂಡಿತಾ ಸ್ಪರ್ಧಿಸುತ್ತಿದ್ದೆ”

ಅಂದು ಡಾ. ರಾಜ್‌ಕುಮಾರ್ ಹೇಳಿದ್ದು ಇಷ್ಟು, "ಅವರು ನನ್ನನ್ನು ಸ್ಪರ್ಧಿಸಲು ಕೇಳಿದ್ದರ ಹಿಂದೆ ಪಾಸಿಟೀವ್ ಉದ್ದೇಶ ಇದ್ದಿದ್ದರೆ, ಖಂಡಿತ ಸ್ಪರ್ಧಿಸುತ್ತಿದ್ದೆ. ಆದರೆ ಅವರು ನನ್ನನ್ನೊಂದು ಅಸ್ತ್ರದಂತೆ ಬಳಸಲು ನೋಡಿದರು. ಗೋಕಾಕ್ ಚಳವಳಿಗೆ ಧುಮುಕಲು ಹೇಳಿದಾಗ ಹೆಮ್ಮೆಯಿಂದ ಭಾಗಿಯಾಗಿದ್ದೆ. ಆಗ ನನ್ನ ಪಾಲ್ಗೊಳ್ಳುವಿಕೆ ಅಗತ್ಯವಾಗಿ ಬೇಕಾಗಿತ್ತು. ಇದರಲ್ಲಿ ಸಕಾರಾತ್ಮಕ ಉದ್ದೇಶ ಅಡಗಿತ್ತು. ಆದರೆ ಚುನಾವಣೆಗೆ ನಾನು ಬೇಕಾಗಿರಲಿಲ್ಲ. ಬೇರೆ ಯಾರನ್ನೋ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸುವ ಪ್ರಯತ್ನ ಅದು. ನಾನು ಸ್ಪರ್ಧಿಸದಿದ್ದದ್ದೇ ಒಳ್ಳೆಯದಲ್ಲವೇ? ಎಂದು ಕೇಳಿದ್ದರು.

1980ರಲ್ಲಿ ಮತ್ತೊಮ್ಮೆ ಪ್ರಯತ್ನ

1980ರಲ್ಲಿ ರಾಜ್ ಅವರನ್ನು ರಾಜಕೀಯಕ್ಕೆ ಕರೆತರಲು, ಹೊಸ ರಾಜಕೀಯ ಪಕ್ಷ ಕಟ್ಟಲು ಸಾಕಷ್ಟು ಒತ್ತಡ ಹೇರಲಾಯಿತು. ಆಗ ತಮಿಳುನಾಡು, ಆಂಧ್ರದಲ್ಲಿ ಸಿನಿಮಾ ತಾರೆಗಳು ರಾಜಕೀಯದಲ್ಲಿ ಗೆದ್ದಿದ್ದರು. ಆದರೆ ರಾಜ್ ಮಾತ್ರ ಕೊನೆತನಕ ರಾಜಕೀಯಕ್ಕೆ ಬರಲೇ ಇಲ್ಲ.

“ಅಭಿಮಾನಿಗಳನ್ನು ದೂರ ಮಾಡಿಕೊಳ್ಳಲಾರೆ” ಎಂದಿದ್ದರಂತೆ ರಾಜ್

ಆಗ ರಾಜಕಾರಣ ನನಗೇಕೆ ಬೇಡ ಅಂತ ಡಾ. ರಾಜ್‌ಕುಮಾರ್ ಹೇಳಿದ್ದರಂತೆ. "ಇದಕ್ಕೆ ಹಲವಾರು ಕಾರಣಗಳಿವೆ. ನಾನು ಒಳ್ಳೆಯ ಶಿಕ್ಷಣ ಪಡೆದಿಲ್ಲ ಎಂಬುದು ಒಂದು ಕಾರಣ. ಇನ್ನೊಂದು ಜವಾಬ್ದಾರಿ. ತಾನೊಬ್ಬ ಜನಪ್ರಿಯ ವ್ಯಕ್ತಿ ಎಂಬುದನ್ನೇ ಬಂಡವಾಳವಾಗಿಸಿಕೊಂಡು ಅಭಿಮಾನಿಗಳನ್ನು ದೂರಮಾಡಿಕೊಳ್ಳಲು ಇಷ್ಟವಿರಲಿಲ್ಲ. ದೇವರು ನನಗೆ ಕಲೆ ಎಂಬುದನ್ನು ವರವಾಗಿ ನೀಡಿದ್ದಾನೆ. ನನ್ನ ಜೀವನದ ಉದ್ದೇಶ, ಗುರಿ ಇದೊಂದೇ. ಹಾಗಾಗಿ ನಾನು ರಾಜಕೀಯದಿಂದ ದೂರ ಉಳಿದೆ” ಎಂದಿದ್ದರಂತೆ ಅಣ್ಣಾವ್ರು.

ಇದನ್ನೂ ಓದಿ: Explained: ಎಲ್ರೂ RRR, KGF 2 ಗಳಂತಹ ಸಿನಿಮಾ ಮಾಡಿದ್ರೆ ಈ ಟಾಪ್ 10 ಸಿನಿಮಾಗಳು ಬರ್ತಾನೇ ಇರ್ಲಿಲ್ಲ!

ಸಿನಿಮಾ ರಂಗಕ್ಕೂ ರಾಜಕೀಯಕ್ಕೂ ಹಳೆಯ ನಂಟು

ಇನ್ನು ಸಿನಿಮಾ ರಂಗದವರಿಗೇನೂ ರಾಜಕೀಯ ಹೊಸತಲ್ಲ. ಕನ್ನಡ ಹಿರಿ ತೆರೆ ಹಾಗೂ ಕಿರುತೆರೆಯ ಅನೇಕ ಕಲಾವಿದರು ರಾಜಕೀಯಕ್ಕೆ ಧುಮುಕಿ, ಸೋಲು-ಗೆಲುವನ್ನು ಕಂಡಿದ್ದಾರೆ. ಅನಂತನಾಗ್, ಜಗ್ಗೇಶ್, ಮುಖ್ಯಮಂತ್ರಿ ಚಂದ್ರು, ಶಶಿಕುಮಾರ್, ಬಿ.ಸಿ.ಪಾಟೀಲ್, ಸಿ.ಪಿ.ಯೋಗೇಶ್ವರ್, ಉಮಾಶ್ರೀ, ತಾರಾ, ಜಯಮಾಲಾ, ಶ್ರುತಿ, ಮಾಳವಿಕಾ ಸೇರಿದಂತೆ ಸಾಕಷ್ಟು ಸಂಖ್ಯೆಯ ತಾರೆಗಳು ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ.

ರಾಜಕಾರಣಿಗಳಿಗೂ ಸಿನಿಮಾ ನಂಟು

ಇನ್ನು ಸಾಕಷ್ಟು ರಾಜಕಾರಣಿಗಳು ಸಿನಿಮಾದೊಂದಿಗೆ ನಂಟು ಹೊಂದಿದ್ದಾರೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸಿನಿಮಾ ಒಂದರಲ್ಲಿ ಬಣ್ಣ ಹಚ್ಚಿದ್ದರು. ಇತ್ತೀಚಿಗಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಕೂಡ ಸಿನಿಮಾವೊಂದರ ವಿಶೇಷ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
Published by:Annappa Achari
First published: