• Home
 • »
 • News
 • »
 • explained
 • »
 • Explained: ಏಕಾಏಕಿ ಸ್ಥಗಿತಗೊಂಡಿದ್ದೇಕೆ ವಾಟ್ಸಾಪ್? ಕಂಪನಿ ಕೊಟ್ಟ ಸ್ಪಷ್ಟನೆ ಏನು?

Explained: ಏಕಾಏಕಿ ಸ್ಥಗಿತಗೊಂಡಿದ್ದೇಕೆ ವಾಟ್ಸಾಪ್? ಕಂಪನಿ ಕೊಟ್ಟ ಸ್ಪಷ್ಟನೆ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Whatsapp Outrage: ಕೆಲವೊಂದು ವಾಟ್ಸಾಪ್ ಬಳಕೆದಾರರು ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದು ಕ್ಷಿಪ್ರವಾಗಿ ಪ್ರತಿಯೊಬ್ಬರೂ ವಾಟ್ಸಾಪ್ ಅನ್ನು ಬಳಸುವಂತಾಗಲು ನಾವು ಆ್ಯಪ್ ಅನ್ನು ಮರುಸ್ಥಾಪಿಸುತ್ತಿದ್ದೇವೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಫೇಸ್‌ಬುಕ್ ಒಡೆತನವನ್ನು ಮೆಟಾ ಹೊಂದಿದೆ.

ಮುಂದೆ ಓದಿ ...
 • Share this:

  ಇಂದು (25-10-2022) ವಾಟ್ಸಾಪ್ ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು ಹಾಗೂ ವಾಟ್ಸಾಪ್ (Whatsapp) ಬಳಕೆದಾರರಿಗೆ ಸಂದೇಶ ಕಳುಹಿಸಲು ಸ್ವೀಕರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪ್ರಪಂಚವೇ ದಿಕ್ಕೆಟ್ಟ ಪರಿಸ್ಥಿತಿ ಎದುರಾಗಿತ್ತು ಇದರಿಂದ ವೈಯಕ್ತಿಕ ಹಾಗೂ ಗುಂಪು ಚಾಟ್‌ಗಳೂ ಪ್ರಭಾವಕ್ಕೊಳಗಾದವು. ಇದೀಗ ವಾಟ್ಸಾಪ್ ಸೇವೆಗಳು (Whatsapp  Service) ಆನ್‌ಲೈನ್‌ಗೆ ಮರಳಿದ್ದು ವಾಟ್ಸಾಪ್ ಬಳಕೆದಾರರಿಗೆ ಕಾರ್ಯನಿರ್ವಹಿಸದೇ ಇದ್ದಲ್ಲಿ ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ವರದಿ ತಿಳಿಸಿದೆ.


  ಕೆಲವರಿಗೆ ಇನ್ನೂ ಬಗೆಹರಿದಿಲ್ಲ ಸಮಸ್ಯೆ

  ಇದೀಗ ವಾಟ್ಸಾಪ್, ಆ್ಯಂಡ್ರಾಯ್ಡ್ ಹಾಗೂ ಐಓಎಸ್ ಪ್ಲಾಟ್‌ಫಾರ್ಮ್‌ಗಳಿಗಾಗಿ ವಾಟ್ಸಾಪ್ ವೆಬ್ ಮೂಲಕ ಕಾರ್ಯನಿರ್ವಹಿಸುತ್ತಿದೆ. ಅದಾಗ್ಯೂ ಕೆಲವೊಂದು ಬಳಕೆದಾರರು ವಾಟ್ಸಾಪ್ ವೆಬ್‌ನಲ್ಲಿ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರು ನೀಡಿದ್ದು ಇದಕ್ಕಾಗಿ ನಿಮ್ಮ ಫೋನ್ ಆ್ಯಪ್ ಅಪ್‌ಡೇಟ್ ಆಗಿರಬೇಕು ಹಾಗೂ ಚಾಲನೆಯಲ್ಲಿರುವುದು ಮುಖ್ಯವಾಗಿದೆ ಎಂದು ವರದಿ ತಿಳಿಸಿದೆ.


  ಇದನ್ನೂ ಓದಿ: ಇನ್ಸ್ಟಾಗ್ರಾಮ್‌ನಲ್ಲಿ ನಿಮ್ಮ ಫಾಲೋವರ್ಸ್‌ ಹೆಚ್ಚಾಗಬೇಕೇ? ಹಾಗಿದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡಿ!

  ಡೆಸ್ಕ್‌ಟಾಪ್ ಹಾಗೂ ಲ್ಯಾಪ್‌ಟಾಪ್‌ಗಳಲ್ಲಿ ಆ್ಯಪ್‌ಗಳ ವೆಬ್ ಕ್ಲೈಂಟ್ ಸ್ಥಗಿತದ ಕಾರಣ ಪರಿಣಾಮಕ್ಕೊಳಪಟ್ಟಿದೆ. ಆದರೆ ವೆಬ್ ಕ್ಲೈಂಟ್‌ನ ಸೇವೆಗಳನ್ನು ಇದೀಗ ರಿಸ್ಟೋರ್ ಮಾಡಲಾಗಿದೆ. ಆ್ಯಪ್ ಸ್ಥಗಿತಗೊಂಡ ಸಮಯದಲ್ಲಿ ವೆಬ್ ಕ್ಲೈಂಟ್ ಅನ್ನು ಬಳಸಲು ಪ್ರಯತ್ನಿಸಿದ ಬಳಕೆದಾರರು ಸಂಪರ್ಕ ದೋಷವನ್ನು ಎದುರಿಸಿದ್ದಾರೆ ಎಂದು ವರದಿಯಾಗಿದೆ.


  ವಾಟ್ಸಾಪ್ ಸ್ಥಗಿತ; ಕಂಪನಿ ಕೊಟ್ಟ ಕಾರಣವೇನು?


  ಕೆಲವೊಂದು ವಾಟ್ಸಾಪ್ ಬಳಕೆದಾರರು ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆಯನ್ನು ಅನುಭವಿಸುತ್ತಿದ್ದು ಕ್ಷಿಪ್ರವಾಗಿ ಪ್ರತಿಯೊಬ್ಬರೂ ವಾಟ್ಸಾಪ್ ಅನ್ನು ಬಳಸುವಂತಾಗಲು ನಾವು ಆ್ಯಪ್ ಅನ್ನು ಮರುಸ್ಥಾಪಿಸುತ್ತಿದ್ದೇವೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಫೇಸ್‌ಬುಕ್ ಒಡೆತನ ಮೆಟಾ ಕೈಯ್ಯಲ್ಲಿದೆ ಎಂಬುವುದು ಉಲ್ಲೇಖನೀಯ.


  ಭಾರತದಲ್ಲಿ ಮಾತ್ರವೇ ವಾಟ್ಸಾಪ್ ಸ್ಥಗಿತಗೊಂಡಿತ್ತೇ?


  ಪ್ರಪಂಚವೇ ಈ ಸ್ಥಗಿತದ ಪರಿಣಾಮಕ್ಕೆ ಒಳಪಟ್ಟಿದೆ ಎಂದೇ ವರದಿಗಳು ತಿಳಿಸಿವೆ. ಈ ಕುರಿತು- ವಾಟ್ಸಾಪ್ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ವಾಟ್ಸಾಪ್ ಡೌನ್ ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಟ್ವಿಟರ್ ವೇದಿಕೆಯನ್ನು ಬಳಸಿಕೊಂಡ ಇಂಡೋನೇಶ್ಯಾ, ಕೀನ್ಯಾ ಹಾಗೂ ಸ್ಪಾನಿಶ್ ಮಾತನಾಡುವ ಸ್ಥಳೀಯರು ಭಾರತವನ್ನು ಹೊರತುಪಡಿಸಿ ಮೆಸೇಜಿಂಗ್ ಆ್ಯಪ್‌ನಲ್ಲಿ ಕಂಡುಬಂದ ದೋಷವನ್ನು ಕುರಿತು ದೂರು ನೀಡಿದ್ದಾರೆ.


  ಸಮಸ್ಯೆ ಏನಾಗಿತ್ತು?


  ಆದರೆ ಈ ಕುರಿತು ವಾಟ್ಸಾಪ್ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ನೀಡಿಲ್ಲ. ಅಕ್ಟೋಬರ್ 2021 ರಲ್ಲಿ ಮೆಟಾ ಒಡೆತನದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಪ್ರಮುಖ ಡಿಎನ್‌ಎಸ್ ವಿಫಲತೆಯಿಂದ ಆರು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಡಿಎನ್‌ಎಸ್ ಅಥವಾ ಡೊಮೇನ್ ಹೆಸರು ಎಂಬ ವ್ಯವಸ್ಥೆಯಾಗಿದ್ದು, ಮಾನವರು ಓದಬಲ್ಲ ಹೋಸ್ಟ್‌ನೇಮ್‌ಗಳನ್ನು (ಇಂಡಿಯನ್ ಎಕ್ಸ್‌ಪ್ರೆಸ್) ಸಂಖ್ಯಾತ್ಮಕ ಐಪಿ ವಿಳಾಸಗಳಾಗಿ ಅನುವಾದಿಸುತ್ತದೆ.


  ಡೊಮೇನ್ ಹೆಸರು ಸರಿಯಾಗಿ ಕೆಲಸ ಮಾಡದೇ ಇದ್ದರೆ ನಿಮ್ಮ ಕಂಪ್ಯೂಟರ್ ಬಳಕೆದಾರರು ಹುಡುಕುತ್ತಿರುವ ವೆಬ್‌ಸೈಟ್ ಅನ್ನು ಹೋಸ್ಟ್ ಮಾಡುವ ಸರ್ವರ್‌ಗಳಿಗೆ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಈ ಸಂದರ್ಭದಲ್ಲಿ ಸಮಸ್ಯೆಯನ್ನು BGP ರೂಟಿಂಗ್‌ಗೆ ಸಂಪರ್ಕಿಸಲಾಗುತ್ತದೆ. BGP ಎಂದರೆ ಬಾರ್ಡರ್ ಗೇಟ್‌ವೇಯ ಕಿರಿದಾದ ಸ್ವರೂಪವಾಗಿದೆ. ಒಂದು ನೆಟ್‌ವರ್ಕ್ ಬೇರೆ ನೆಟ್‌ವರ್ಕ್‌ಗೆ ಉತ್ತಮ ವಿಧಾನವನ್ನು ಕಂಡುಹಿಡಿಯಲು ಸಹಾಯ ಮಾಡುವ ವ್ಯವಸ್ಥೆಯಾಗಿದೆ.


  ಈ ಹಿಂದೆ ವಾಟ್ಸಾಪ್ ಸೇವೆಗಳು ಯಾವಾಗ ಸ್ಥಗಿತಗೊಂಡಿತ್ತು?


  ಹಿಂದಿನ ಮಾರ್ಚ್ 2021 ರಲ್ಲಿ, ವಾಟ್ಸಾಪ್ ಸುಮಾರು 45 ನಿಮಿಷಗಳ ಕಾಲ ಸ್ಥಗಿತಗೊಂಡಿತು ಮತ್ತು ಮೆಟಾ "ತಾಂತ್ರಿಕ ಸಮಸ್ಯೆ" ಎಂದು ತಿಳಿಸಿತು ಹಾಗೂ "ಕೆಲವು ಫೇಸ್‌ಬುಕ್ ಸೇವೆಗಳನ್ನು ಪ್ರವೇಶಿಸಲು ಜನರಿಗೆ ತೊಂದರೆ ಉಂಟುಮಾಡಿದೆ" ಎಂದು ಕಾರಣ ನೀಡಿತು, ಆದರೆ ಯಾವುದೇ ನಿರ್ದಿಷ್ಟ ಹೇಳಿಕೆಯನ್ನು ನೀಡಲಿಲ್ಲ.


  2020 ರಲ್ಲಿ, ನಾಲ್ಕು ಬಾರಿ ವಾಟ್ಸಾಪ್ ಸ್ಥಗಿತ

  2020 ರಲ್ಲಿ, ನಾಲ್ಕು ಬಾರಿ ವಾಟ್ಸಾಪ್ ಸ್ಥಗಿತಗೊಂಡಿದ್ದು ಅದರಲ್ಲಿ ಪ್ರಮುಖವಾದದ್ದು ಜನವರಿಯಲ್ಲಿ. ಏಕೆಂದರೆ ಸ್ಥಗಿತಗೊಳ್ಳುವಿಕೆಯು ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಇದರ ನಂತರ, ಏಪ್ರಿಲ್‌ನಲ್ಲಿ ಸ್ಥಗಿತಗೊಳಿಸುವಿಕೆ ಸಂಭವಿಸಿತು, ನಂತರ ಜುಲೈನಲ್ಲಿ ಎರಡು ಗಂಟೆಗಳ ನಿಲುಗಡೆ ಮತ್ತು ಆಗಸ್ಟ್ 2020 ರಲ್ಲಿ ದೀರ್ಘಕಾಲದ ಸ್ಥಗಿತಗಳಿಗೆ ಕಾರಣವಾಗಿದೆ.  a-brand-new-feature-has-arrived-on-whatsapp-a-message-sent-once-can-be-edited-again
  ಸಾಂದರ್ಭಿಕ ಚಿತ್ರ

  ಜುಲೈ 2019 ರಲ್ಲಿ, ಪ್ರಪಂಚದಾದ್ಯಂತ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇವೆಗಳು ಸಮಸ್ಯೆಯನ್ನು ಅನುಭವಿಸಿದವು ಇದರಿಂದ ಬಳಕೆದಾರರು ತಮ್ಮ ಫೀಡ್‌ಗಳು ಅಥವಾ ಫೋಟೋಗಳನ್ನು ಪೋಸ್ಟ್ ಮಾಡಲು ಅಥವಾ ನೋಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಫೇಸ್‌ಬುಕ್ ಸಂಸ್ಥೆಯಿಂದ ಉತ್ಪನ್ನಗಳಿಗಾಗಿ, ಅದು ವರ್ಷದ ಮೂರನೇ ಪ್ರಮುಖ ಸ್ಥಗಿತವಾಗಿತ್ತು.


  ಈ ಸ್ಥಗಿತಗಳು ನಡೆಯಲು ಕಾರಣಗಳೇನು?


  2 ಶತಕೋಟಿಗೂ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಹಾಗೂ 3 ಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ ವಿಶ್ವದಾದ್ಯಂತ ಎಲ್ಲಾ ಸಕ್ರಿಯ ಸೇವೆಗಳಿಗೆ ಅಡ್ಡಿಯನ್ನುಂಟು ಮಾಡುವುದು ಬಹಳ ಕಡಿಮೆ. ಈ ಎಲ್ಲಾ ಸೇವೆಗಳು ತಮ್ಮದೇ ಆದ ರಕ್ಷಣಾತ್ಮಕ ವ್ಯವಸ್ಥೆಗಳನ್ನು ಹೊಂದಿರುವುದರಿಂದ ಹಾಗೂ ಇವುಗಳ ಅಡಿಯಲ್ಲೇ ಕೆಲಸ ಮಾಡಬೇಕಾಗಿರುವುದರಿಂದ ಈ ದೊಡ್ಡ ಸೇವೆಯನ್ನು ಪ್ರಪಂಚದಾದ್ಯಂತವಿರುವ ಅನೇಕ ಡೇಟಾ ಕೇಂದ್ರಗಳಲ್ಲಿ ಹೋಸ್ಟ್ ಮಾಡಬೇಕಾಗುತ್ತದೆ.


  ಇದು ಉತ್ಪನ್ನದೊಂದಿಗೆ ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರಬಹುದು. ಈ ಪ್ಲ್ಯಾಟ್‌ಫಾರ್ಮ್‌ಗಳು ಪ್ರಮುಖ ಬದಲಾವಣೆಗಳನ್ನು ಒಂದೇ ಬಾರಿಗೆ ಬಿಡುಗಡೆ ಮಾಡುವುದಿಲ್ಲ. ಬದಲಿಗೆ ವಿಭಿನ್ನ ಗ್ರಾಹಕರ ಸಮೂಹಗಳಿಂದ ಅಪ್‌ಡೇಟ್‌ಗಳನ್ನು ಹೊರತರಲಾಗುತ್ತದೆ. ಇದರಿಂದ ಏನಾದರೂ ದೋಷ ಸಂಭವಿಸಿದಲ್ಲಿ ಮೂಲ ಪ್ರಕ್ರಿಯೆಗೆ ಹಿಂತಿರುಗಲು ಅವಕಾಶ ನೀಡುತ್ತದೆ.


  ಈ ರೀತಿಯ ಸ್ಥಗಿತಗಳು ಆಗಾಗ್ಗೆ ನಡೆಯುತ್ತವೆಯೇ?


  ಈ ಸ್ಥಗಿತಗಳು ಆಗಾಗ್ಗೆ ನಡೆಯುತ್ತದೆ ಎಂದೇ ತೋರುತ್ತದೆ. ಫೇಸ್‌ಬುಕ್ ಸೇವೆಗಳು ಹೊಂದಿರುವ ಬಳಕೆದಾರರ ಅಂಕಿ ಅಂಶಗಳನ್ನು ನೋಡಿದಾಗ ಇಂಟರ್ನೆಟ್ ವಿಷಯದಲ್ಲಿ ಪತ್ತೆಮಾಡದ ಕೆಲವೊಂದು ಭದ್ರತಾ ವಿಷಯದಲ್ಲಿ ಬಳಕೆದಾರರು ವಿಫಲಗೊಂಡಿರುತ್ತಾರೆ. ಇಲ್ಲವೇ ಸುರಕ್ಷತಾ ವ್ಯಾಪ್ತಿಗೆ ಈ ಬಳಕೆದಾರರು ಬಂದಿರುವುದಿಲ್ಲ. ದೊಡ್ಡ ಬಳಕೆದಾರರ ನೆಲೆಗಳನ್ನು ನಿರ್ವಹಿಸುವುದು ಟೆಕ್ ಕಂಪನಿಗಳಿಗೆ ಸವಾಲಿನ ಕೆಲಸವೂ ಹೌದು.


  ಇಂತಹ ಬಳಕೆದಾರರನ್ನು ನಿರ್ವಹಿಸಲು ಕಂಪನಿಗಳು ಥರ್ಡ್ ಪಾರ್ಟಿಯನ್ನು ಹೆಚ್ಚು ಅವಲಂಬಿಸುತ್ತಿದೆ ಇದರಿಂದ ಕಂಡುಬರುವ ಸಣ್ಣ ಸಮಸ್ಯೆ ಕೂಡ ಲಕ್ಷಾಂತರ ಬಳಕೆದಾರರನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಇರುತ್ತದೆ.


  ಇದನ್ನೂ ಓದಿ: WhatsApp ಬಳಕೆದಾರರಿಗೆ ಬ್ಯಾಡ್ ನ್ಯೂಸ್, ದೀಪಾವಳಿಯಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಆ್ಯಪ್​ ಬಂದ್!

  ಅಕ್ಟೋಬರ್ 5 ರಂದು ಸಂಭವಿಸಿದ ಅತಿದೊಡ್ಡ ಮೆಟಾ ನಿಲುಗಡೆಯ ನಂತರ ವಾಟ್ಸಾಪ್ ಎದುರಿಸಿರುವ ಪ್ರಮುಖ ಹಾಗೂ ಮೊದಲ ಸ್ಥಗಿತ ಇದಾಗಿದೆ. ವಾಟ್ಸಾಪ್, ಇನ್‌ಸ್ಟಾಗ್ರಾಮ್ ಹಾಗೂ ಫೇಸ್‌ಬುಕ್ ಸೇವೆಯನ್ನು ಜೊತೆಯಾಗಿ ತೆಗೆದುಹಾಕಿತು ಇದರಿಂದ ಸೇವೆಗಳು ಆನ್‌ಲೈನ್‌ಗೆ ಹಿಂತಿರುಗುವ ಮೊದಲು ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರಿತು.


  ವಾಟ್ಸಾಪ್ ಕಾರ್ಯನಿರ್ವಹಿಸದೇ ಇದ್ದಲ್ಲಿ ಸರಿಪಡಿಸಿಕೊಳ್ಳುವುದು ಹೇಗೆ?


  ಇನ್ನು ಕೆಲವೊಂದು ಸಂದರ್ಭಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸದೇ ಇದ್ದಲ್ಲಿ ನೀವು ಅದನ್ನು ನಿಮ್ಮಷ್ಟಕ್ಕೆ ಭದ್ರಪಡಿಸಬಹುದು. ಆ್ಯಪ್ ಕ್ರ್ಯಾಶ್ ಆಗುತ್ತಿದ್ದರೆ ನಿಮಗೆ ಸಂದೇಶಗಳನ್ನು ಕಳುಹಿಸಲಾಗುವುದಿಲ್ಲ ಇಲ್ಲದಿದ್ದರೆ ಇನ್ನಿತರ ಸಮಸ್ಯೆಗಳನ್ನು ನೀವು ಎದುರಿಸಬಹುದು.


  ವಾಟ್ಸಾಪ್ ಒಮ್ಮೊಮ್ಮೆ ಕಾರ್ಯನಿರ್ವಹಿಸದೇ ಇದ್ದರೆ ಡಿವೈಸ್ ಅನ್ನು ದೂರುತ್ತೇವೆ ಆದರೆ ಸಮಸ್ಯೆ ಸ್ಥಳೀಯವಾಗಿರಬಹುದು. ಅಂದರೆ ಸೇವೆಯು ಸ್ಥಗಿತಗೊಂಡಿದ್ದರೆ ಕೂಡ ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ.


  ಆ್ಯಪ್ ಅನ್ನು ಮುಚ್ಚಿ ಮತ್ತು ಮತ್ತೆ ತೆರೆಯಿರಿ


  ವಾಟ್ಸಾಪ್ ಸಮಸ್ಯೆಯಲ್ಲದಿದ್ದರೆ, ಅದು ಆ್ಯಪ್ ಆಗಿರಬಹುದು. ನೀವು ಪ್ರಯತ್ನಿಸಬಹುದಾದ ಒಂದು ಸುಲಭವಾದ ಪರಿಹಾರವೆಂದರೆ ವಾಟ್ಸಾಪ್ ಅನ್ನು ಮುಚ್ಚುವುದು ಮತ್ತು ಪುನಃ ತೆರೆಯುವುದು. ಇದು ಲಾಗ್ ಔಟ್ ಮಾಡಲು ಮತ್ತು ಮತ್ತೆ ಲಾಗ್ ಇನ್ ಮಾಡಲು ಸಹ ಸಹಾಯ ಮಾಡಬಹುದು. ಇದು ತೊಂದರೆಗೊಳಗಾದ ದೋಷಗಳನ್ನು ನಾಶಪಡಿಸುತ್ತದೆ


  ಆ್ಯಂಡ್ರಾಯ್ಡ್ ಆ್ಯಪ್‌ನಲ್ಲಿ ಅನ್‌ಇನ್‌ಸ್ಟಾಲ್ ಮಾಡುವುದು


  ನಿಮ್ಮ ಹೋಮ್ ಸ್ಕ್ರೀನ್ ಹಾಗೂ ಆ್ಯಪ್ ಡ್ರಾವರ್‌ನಲ್ಲಿ ವಾಟ್ಸಾಪ್ ಆ್ಯಪ್ ಅನ್ನು ಒತ್ತಿ ಎಳೆಯಿರಿ


  ಅನ್‌ಇನ್‌ಸ್ಟಾಲ್ ವಿಭಾಗಕ್ಕೆ ಆ್ಯಪ್ ಅನ್ನು ಎಳೆಯಿರಿ


  ಓಕೆ ಬಟನ್ ದೃಢೀಕರಿಸಿ.


  ಅಪ್‌ಡೇಟ್‌ಗಳಿಗೆ ಪರಿಶೀಲಿಸುವುದು


  ಹಳೆಯ ಆ್ಯಪ್‌ಗಳನ್ನು ಚಾಲನೆ ಮಾಡುವುದು ಸಾಮಾನ್ಯವಾಗಿ ಯಾವುದೇ ಸಮಸ್ಯೆಗಳನ್ನು ತಂದಿಡದೇ ಇದ್ದರೂ, ಕೆಲವೊಮ್ಮೆ ಸೇವೆಗಳು ಸರ್ವರ್-ಸೈಡ್ ಅನ್ನು ಬದಲಾಯಿಸುತ್ತವೆ, ಹಾಗೂ ಕೆಲವು ಕಾರ್ಯಗಳನ್ನು ಇವು ನಿಷ್ಪ್ರಯೋಜಕವೆಂದು ಪರಿಗಣಿಸುತ್ತವೆ. ನೀವು ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಚಲಾಯಿಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಲು ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಮತ್ತು ಅಪ್‌ಡೇಟ್‌ಗಳಿಗಾಗಿ ಪರಿಶೀಲಿಸಿ.


  ಸ್ಥಗಿತದಿಂದ ಕಂಪನಿಗೆ ತಗುಲುವ ನಷ್ಟಗಳೇನು?


  ಕಂಪನಿಯು ಆಫ್‌ಲೈನ್‌ಗೆ ಹೋಗುವ ವೇಳೆಯಲ್ಲಿ ಪ್ರತಿ ಗಂಟೆಗೆ ಕಂಪನಿಯು, $222,000 ಅನ್ನು ಕಳೆದುಕೊಳ್ಳುತ್ತದೆ ಹಾಗೂ ಹಿಂದಿನ ಆರು ಗಂಟೆಗಳ ನಿಲುಗಡೆಗೆ ಮಾರ್ಕ್ ಜುಕರ್‌ಬರ್ಗ್ $8 ಶತಕೋಟಿಗಿಂತ ಹೆಚ್ಚು ವೆಚ್ಚವನ್ನು ಭರಿಸಿದ್ದಾರೆ. ಈ ನಿಲುಗಡೆಯು ಮೆಟಾದ ಷೇರು ಬೆಲೆಯಲ್ಲಿ 5% ಕುಸಿತವನ್ನುಂಟು ಮಾಡಿತ್ತು ಹಾಗೂ ಸಂಪತ್ತಿನ ಬೃಹತ್ ನಷ್ಟಕ್ಕೆ ಕಾರಣವಾಗಿತ್ತು ಎಂಬುದಾಗಿ ಈ ಹಿಂದೆ ವರದಿಯಾಗಿತ್ತು.

  Published by:Precilla Olivia Dias
  First published: