Explained: ತುಟ್ಟಿಭತ್ಯೆ, ಪರಿಹಾರ ಭತ್ಯೆಯಲ್ಲಿ ಹೆಚ್ಚಳ: ವೇತನದಲ್ಲಿ ಆಗುವ ಬದಲಾವಣೆ ಎಷ್ಟು ಗೊತ್ತಾ!

ಒಂದೂವರೆ ವರ್ಷಗಳ ಬಳಿಕ ಪುನಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಸರಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಮೂಲ ಪಾವತಿ, ಪಿಂಚಣಿಯಲ್ಲಿ 28% ಹೆಚ್ಚಳವನ್ನು ನೀಡಲಾಗುತ್ತದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

    ಕೇಂದ್ರ ಸರಕಾರದ ಉದ್ಯೋಗಿಗಳಿಗೆ ತುಟ್ಟಿ ಭತ್ಯೆ ಹಾಗೂ ತುಟ್ಟಿ ಪರಿಹಾರ ಭತ್ಯೆಗಳಲ್ಲಿನ 11% ಏರಿಕೆಯು ಬೊಕ್ಕಸಕ್ಕೆ ವಾರ್ಷಿಕ ರೂ 34,400 ಕೋಟಿ ವೆಚ್ಚವನ್ನುಂಟು ಮಾಡಲಿದೆ. ಪ್ರತಿ ಆರು ತಿಂಗಳಿಗೊಮ್ಮೆ DA ಹಾಗೂ DR ನಲ್ಲಿ ಪರಿಷ್ಕರಣೆಯನ್ನು ಮಾಡಲಾಗುತ್ತಿತ್ತು ಆದರೆ ಈ ಬಾರಿ ಕೋವಿಡ್ – 19 ಸಾಂಕ್ರಾಮಿಕದ ಸಮಯದಲ್ಲಿ ತಡೆಹಿಡಿದಿದ್ದ ತುಟ್ಟಿಭತ್ಯೆ ಹಾಗೂ ತುಟ್ಟಿ ಪರಿಹಾರ ಭತ್ಯೆಯನ್ನು ಒಂದೂವರೆ ವರ್ಷಗಳ ಬಳಿಕ ಪುನಸ್ಥಾಪಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು ಸರಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಮೂಲ ಪಾವತಿ, ಪಿಂಚಣಿಯಲ್ಲಿ 28% ಹೆಚ್ಚಳವನ್ನು ನೀಡಲಾಗುತ್ತದೆ. ಹಾಗಾದರೆ ಕೇಂದ್ರದ ಸಂಬಳ ಹಾಗೂ ಪಿಂಚಣಿ ಮಸೂದೆಯ ಬಗ್ಗೆ ತಿಳಿದುಕೊಳ್ಳಬೇಕಾದ್ದು ಏನು ಎಂಬುದನ್ನು ನೋಡೋಣ.


    ಒಟ್ಟು ಸಂಬಳ ಹಾಗೂ ಪಿಂಚಣಿಯಲ್ಲಿ ಒಟ್ಟು ವ್ಯಯವೆಷ್ಟು?


    ಕೇಂದ್ರ ಸರ್ಕಾರದ ನಾಗರಿಕ ನೌಕರರ ವೇತನ ಮತ್ತು ಭತ್ಯೆಗಳ ಕುರಿತಾದ 2018-19ರ ವಾರ್ಷಿಕ ವರದಿಯ ಪ್ರಕಾರ, ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಖರ್ಚು (DoE) ಸಂಗ್ರಹಿಸಿರುವ ಇತ್ತೀಚಿನ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಳಿಗಾಗಿ ಖರ್ಚಾದ ಒಟ್ಟು ಮೊತ್ತ ವಾರ್ಷಿಕ 2.08 ಲಕ್ಷ ಕೋಟಿ ರೂ ಎಂದು ಅಂದಾಜಿಸಲಾಗಿದ್ದು ಇದು ಹಿಂದಿನ ಹಣಕಾಸು ವರ್ಷದ ವೇತನ ಮತ್ತು ಭತ್ಯೆ ಮಸೂದೆ 1.94 ಲಕ್ಷ ಕೋಟಿ ರೂ ಗಿಂತ 7% ಹೆಚ್ಚಾಗಿದೆ ಎಂಬುದು ತಿಳಿದು ಬಂದಿದೆ.


    ಕೇಂದ್ರ ಸರಕಾರಿ ಉದ್ಯೋಗಿಗಳ ಸಂಖ್ಯೆ ಎಷ್ಟು?


    2018-19 DoE ವರದಿಯನ್ವಯ ಮಾರ್ಚ್ 1, 2019 ರವರೆಗೆ ಒಟ್ಟು ಕೇಂದ್ರ ಸರ್ಕಾರಿ ನಾಗರಿಕ ನೌಕರರ ಸಂಖ್ಯೆ 31.43 ಲಕ್ಷವಾಗಿದ್ದರೆ, ಅವರ ದೃಢೀಕೃತ ಉದ್ಯೋಗಿಗಳ ಸಾಮರ್ಥ್ಯ 40.66 ಲಕ್ಷವಾಗಿದೆ. ಅಂದರೆ ಐದನೇ ಒಂದು ಭಾಗಕ್ಕಿಂತ ಹೆಚ್ಚು ಹುದ್ದೆಗಳು ಖಾಲಿಯಾಗಿವೆ. ರಕ್ಷಣಾ ಸಿಬ್ಬಂದಿ ಮತ್ತು ಸಶಸ್ತ್ರ ಪಡೆಗಳ ಸದಸ್ಯರ ಸಂಬಳ ಮತ್ತು ಪಿಂಚಣಿಗಳನ್ನು ಒಳಗೊಂಡಿದ್ದು ಏಳನೇ ವೇತನ ಆಯೋಗದ ಮಾಹಿತಿಯ ಪ್ರಕಾರ ಅವರ ಸಂಖ್ಯೆ 14 ಲಕ್ಷವಾಗಿದ್ದು, ಅವರ ವರದಿಯನ್ನು ಜೂನ್ 2016 ರಲ್ಲಿ ಸಲ್ಲಿಸಲಾಯಿತು. ಆಗ ಒಟ್ಟು 52 ಲಕ್ಷ ಪಿಂಚಣಿದಾರರು ಇರುವುದನ್ನು ಸಹ ಗಮನಿಸಲಾಗಿದೆ.


    ಇದನ್ನು ಓದಿ: 12-18 ವಯಸ್ಸಿನ ಮಕ್ಕಳಿಗೆ ಶೀಘ್ರದಲ್ಲಿಯೇ ಬರಲಿದೆ ಝೈಡಸ್​​ ಕೋವಿಡ್​ ಲಸಿಕೆ; ಕೇಂದ್ರ

    ಕೇಂದ್ರ ಸರಕಾರಿ ಸಿಬ್ಬಂದಿಗಳ ವೇತನಗಳನ್ನು ಹೇಗೆ ಮರುಪರಿಶೀಲಿಸಲಾಗಿದೆ?


    ಕೇಂದ್ರವು ವೇತನಗಳ ಪರಿಶೀಲನೆಗಾಗಿ ವೇತನ ಆಯೋಗವನ್ನು ನೇಮಿಸುತ್ತದೆ ಈ ನೀತಿಯನ್ನು ರಾಜ್ಯ ಸರಕಾರಗಳು ಅನುಸರಿಸುತ್ತವೆ. ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯಲ್ಲಿ ಬದಲಾವಣೆಗಳನ್ನು ಪರಿಶೀಲಿಸಲು ಮತ್ತು ಪ್ರಸ್ತಾಪಿಸಲು ಪ್ರತಿ 10 ವರ್ಷಗಳಿಗೊಮ್ಮೆ ಪ್ಯಾನಲ್ ಅನ್ನು ರಚಿಸಲಾಗುತ್ತದೆ. ಏಳನೇ ಆಯೋಗವು 2016 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು ಹಾಗೂ ಇತರ ವಿಷಯಗಳ ಜೊತೆಗೆ ಕೇಂದ್ರ ಸರಕಾರದ ಉದ್ಯೋಗಿಯ ಕನಿಷ್ಠ ವೇತನವು ತಿಂಗಳಿಗೆ ರೂ 18,000 ಹಾಗೂ ಅಪೆಕ್ಸ್ ಮಾಪನಕ್ಕಾಗಿ ಗರಿಷ್ಠ ವೇತನವು ಪ್ರತಿ ತಿಂಗಳಿಗೆ ರೂ 2,25,000 ದವರೆಗೆ ಇರಬಹುದೆಂದು ಅದೇ ರೀತಿ ಕ್ಯಾಬಿನೆಟ್ ಕಾರ್ಯದರ್ಶಿಯ ಮಾಸಿಕ ಸಂಬಳವು ರೂ 2,50,000 ಹಾಗೂ ಉಳಿದವರು ಅದೇ ಪಾವತಿ ಮಟ್ಟದಲ್ಲಿರುತ್ತಾರೆ ಎಂದು ತಿಳಿಸಿದೆ.


    ಯಾವ ರಾಜ್ಯಗಳು ಅತಿದೊಡ್ಡ ವೇತನ ಬಿಲ್‌ಗಳನ್ನು ಹೊಂದಿವೆ?


    ಸಂಬಳವು ವಿವಿಧ ರಾಜ್ಯಗಳ ಒಟ್ಟು ಬಜೆಟ್‌ಗಳಲ್ಲಿ ಗಮನಾರ್ಹ ಭಾಗವನ್ನು ಹೊಂದಿದ್ದರೆ, ಅದರ ಪ್ರಮಾಣವು ಬದಲಾಗುತ್ತದೆ. (CBGA) ಯ ವಿಶ್ಲೇಷಣೆಯ ಪ್ರಕಾರ, ಬಿಹಾರ ಮತ್ತು ಉತ್ತರ ಪ್ರದೇಶದ ರಾಜ್ಯ ಸರ್ಕಾರದ ಬಜೆಟ್‌ನ ಶೇಕಡಾ 12 ರಷ್ಟು ವೇತನ ಕೇರಳದಲ್ಲಿ ಶೇಕಡಾ 26 ಮತ್ತು ರಾಜಸ್ಥಾನದಲ್ಲಿ ಶೇ 25 ರಷ್ಟಿದೆ. ಉತ್ತರಾಖಂಡ ಮತ್ತು ಅಸ್ಸಾಂನಂತಹ ರಾಜ್ಯಗಳಲ್ಲಿ ಇದು ಶೇಕಡಾ 30 ರವರೆಗೆ ವಿಸ್ತರಣೆಗೊಳ್ಳಬಹುದು.



    First published: