• Home
 • »
 • News
 • »
 • explained
 • »
 • Explained: ನಾನು ಭಾರತದ ರಾಷ್ಟ್ರಪತಿಯಾದರೆ! ಹೇಗಿರುತ್ತೆ ಜೀವನ?

Explained: ನಾನು ಭಾರತದ ರಾಷ್ಟ್ರಪತಿಯಾದರೆ! ಹೇಗಿರುತ್ತೆ ಜೀವನ?

ನೀವು ಭಾರತದ ರಾಷ್ಟ್ರಪತಿಯಾದರೆ ನಿಮ್ಮ ಲೈಫ್‍ಸ್ಟೈಲ್ ಹೇಗಿರುತ್ತೆ?

ನೀವು ಭಾರತದ ರಾಷ್ಟ್ರಪತಿಯಾದರೆ ನಿಮ್ಮ ಲೈಫ್‍ಸ್ಟೈಲ್ ಹೇಗಿರುತ್ತೆ?

ರಾಷ್ಟ್ರಪತಿ ಹುದ್ದೆ ಅಷ್ಟೊಂದು ಶ್ರೇಷ್ಠ ಹುದ್ದೆಯಾಗಿದೆ. ಹಾಗಿದ್ದರೆ ಇವರ ಲೈಫ್‍ಸ್ಟೈಲ್ ಹೇಗಿರುತ್ತೆ? ನಾವು ಜೀವನದಲ್ಲಿ ಒಮ್ಮೆಯಾದರೂ ರಾಷ್ಟ್ರಪತಿ ಆಗಬಹುದೇ? ಇವರ ಸಂಬಳ, ಪ್ರಯಾಣ ಭತ್ಯೆ ಎಷ್ಟಿರಬಹುದು? ಭಾರತವು ಹೊಸ ರಾಷ್ಟ್ರಪತಿಯನ್ನು ಕಾಣುವ ಸಮಯದತ್ತ ಸಾಗುತ್ತಿರುವಾಗ, ರಾಷ್ಟ್ರಪತಿಯವರ ಜೀವನದ ಬಗ್ಗೆ ನಿಮ್ಮ ಎಲ್ಲಾ ಕುತೂಹಲಗಳನ್ನು ನ್ಯೂಸ್‌ 18 ವಿವರಿಸುತ್ತದೆ. ತಿಳಿಯೋಣ ಬನ್ನಿ.

ಮುಂದೆ ಓದಿ ...
 • Share this:

ಭಾರತದ ಮೊದಲ ಪ್ರಜೆ ಎಂದೇ ಕರೆಯುವ ರಾಷ್ಟ್ರಪತಿ ಎಂದರೆ ಎಲ್ಲರಿಗೂ ಸ್ವಲ್ಪ ಮಟ್ಟಿಗೆ ಅವರ ಬಗ್ಗೆ ತಿಳಿಯುವ ಕುತೂಹಲ ಇದ್ದೆ ಇರುತ್ತದೆ. ಅವರ ಲೈಫ್‍ಸ್ಟೈಲ್ (Lifestyle) ಹೇಗಿರುತ್ತೆ, ಅವರ ಸಂಬಳ ಎಷ್ಟಿರಬಹುದು, ಅವರು ಪ್ರಯಾಣ ಮಾಡಿದರೆ ಅದರ ವೆಚ್ಚ ಯಾರು ಭರಿಸುತ್ತಾರೆ ಹೀಗೆ ಹತ್ತು ಹಲವು ಸಾಮಾನ್ಯ ಪ್ರಶ್ನೆಗಳು ಎಲ್ಲರ ತಲೆಯಲ್ಲೂ ಕೆಲವೊಮ್ಮೆ ಬಂದು ಹೋಗಿರುತ್ತವೆ. ಆ ಎಲ್ಲ ಪ್ರಶ್ನೆಗಳಿಗೆ ನ್ಯೂಸ್‌ 18 ಎಕ್ಸ್‌ಕ್ಲೂಸಿವ್‌ ಮಾಹಿತಿ ನಿಮಗಾಗಿ ನೀಡುತ್ತಿದೆ. ಈಗ ಸದ್ಯದರಲ್ಲಿಯೇ ರಾಷ್ಟ್ರಪತಿ (President Of India Election) ಚುನಾವಣೆ ನಡೆಯಲಿದೆ. ಆದ್ದರಿಂದ ರಾಷ್ಟ್ರಪತಿ ಬಗ್ಗೆ ತಿಳಿಯಲು ನೆಟ್ಟಿಗರು ಗೂಗಲ್‌ ಅಲ್ಲಿ ಹೆಚ್ಚಿನ ಮಟ್ಟದಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಹೇಳಬಹುದು.


ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರ ಅಧಿಕಾರಾವಧಿಯು ಅಂತ್ಯಗೊಳ್ಳುತ್ತಿದ್ದಂತೆ, ರಾಜಕೀಯ ಕ್ಷೇತ್ರದಲ್ಲಿ ದೇಶದ ಕಾರ್ಯಾಂಗದ ಮುಂದಿನ ನಾಮ ಮಾತ್ರದ ಮುಖ್ಯಸ್ಥರು ಯಾರು ಆಗಬಹುದು ಎಂಬ ಕುರಿತ ಮಾತುಕತೆಗಳು ಊಹಾಪೋಹಗಳಿಂದ ತುಂಬಿ ಹೋಗಿವೆ. ಅಭ್ಯರ್ಥಿಗಳ ಮೇಲೆ ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ಒಮ್ಮತವನ್ನು ರಚಿಸಲು ಬಹಳಷ್ಟು ಪ್ರಯತ್ನ ಪಡುತ್ತಿರುವಾಗ, ಸಾಮಾನ್ಯ ಜನರಿಗೆ ಇವರು ಏಕೆ ಇಷ್ಟೊಂದು ಮುತುವರ್ಜಿ ವಹಿಸುತ್ತಿದ್ದಾರೆ ಎಂಬ ಪ್ರಶ್ನೆ ಸಾಮಾನ್ಯವಾಗಿ ತಲೆಗೆ ಬರುತ್ತದೆ.


ಲೈಫ್‍ಸ್ಟೈಲ್ ಹೇಗಿರುತ್ತೆ?


ಇದರ ಜೊತೆಗೆ ರಾಷ್ಟ್ರಪತಿ ಹುದ್ದೆ ಅಷ್ಟೊಂದು ಶ್ರೇಷ್ಠ ಹುದ್ದೆಯಾಗಿದೆಯೇ, ಹಾಗಿದ್ದರೆ ಇವರ ಲೈಫ್‍ಸ್ಟೈಲ್ ಹೇಗಿರುತ್ತೆ? ನಾವು ಜೀವನದಲ್ಲಿ ಒಮ್ಮೆಯಾದರೂ ರಾಷ್ಟ್ರಪತಿ ಆಗಬಹುದೇ? ಇವರ ಸಂಬಳ, ಪ್ರಯಾಣ ಭತ್ಯೆ ಎಷ್ಟಿರಬಹುದು? ಭಾರತವು ಹೊಸ ರಾಷ್ಟ್ರಪತಿಯನ್ನು ಕಾಣುವ ಸಮಯದತ್ತ ಸಾಗುತ್ತಿರುವಾಗ, ರಾಷ್ಟ್ರಪತಿಯವರ ಜೀವನದ ಬಗ್ಗೆ ನಿಮ್ಮ ಎಲ್ಲಾ ಕುತೂಹಲಗಳನ್ನು ನ್ಯೂಸ್‌ 18 ವಿವರಿಸುತ್ತದೆ. ತಿಳಿಯೋಣ ಬನ್ನಿ.


ಭಾರತದ ಸಂವಿಧಾನದ ಪ್ರಕಾರ, ಈ ಶ್ರೇಷ್ಠ ಹುದ್ದೆಗೆ ಇರಬೇಕಾದ ಅರ್ಹತೆಗಳು:


 1. ಭಾರತದ ಪ್ರಜೆಯಾಗಿರಬೇಕು.

 2. 35 ವರ್ಷ ವಯಸ್ಸನ್ನು ಪೂರ್ಣಗೊಳಿಸರಬೇಕು.

 3. ಲೋಕಸಭೆಯ ಸದಸ್ಯರಾಗಿ ಚುನಾವಣೆಗೆ ಅರ್ಹರಾಗಿರಬೇಕು.


ಒಬ್ಬ ವ್ಯಕ್ತಿಯು ಭಾರತ ಸರ್ಕಾರ ಅಥವಾ ರಾಜ್ಯದ ಸರ್ಕಾರ ಅಥವಾ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರದ ಅಡಿಯಲ್ಲಿ ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿದ್ದರೆ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಅರ್ಹರಾಗಿರುವುದಿಲ್ಲ.


ಈಗ ನೀವು ಕಲ್ಪನೆ ಮಾಡಿಕೊಳ್ಳಿ. ಒಂದು ವೇಳೆ ನೀವು ಈಗ ರಾಷ್ಟ್ರಪತಿಯಾಗಿದ್ದರೆ, ನಿಮ್ಮ ಲೈಫ್‍ಸ್ಟೈಲ್ ಹೇಗಿರುತ್ತೆ ನೋಡೋಣ ಬನ್ನಿ.


ಸಂಬಳ ಎಷ್ಟಿರುತ್ತೆ?
ನೀವು ರಾಷ್ಟ್ರಪತಿಯಾದರೆ ನಿಮ್ಮ ಸಂಬಳವು ತಿಂಗಳಿಗೆ 5 ಲಕ್ಷ ರೂಪಾಯಿಗಳು ಆಗಿರುತ್ತದೆ. ಇವರ ಸಂಬಳವನ್ನು ಯಾರು ಮತ್ತು ಹೇಗೆ ನಿರ್ಧರಿಸಲಾಗುತ್ತದೆ ಎಂಬುದು ಮುಂದಿನ ಪ್ರಶ್ನೆ ಆಗಿರುತ್ತದೆ. ಭಾರತೀಯ ರಾಷ್ಟ್ರಪತಿಗಳ ವೇತನವನ್ನು, 1951ರ ರಾಷ್ಟ್ರಪತಿಗಳ ಸಾಧನೆ ಮತ್ತು ಪಿಂಚಣಿ ಕಾಯಿದೆ ಎಂಬ ಕಾನೂನಿನಿಂದ ನಿರ್ಧರಿಸಲಾಗುತ್ತದೆ. ಇದರ ಜೊತೆಗೆ ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ದೇಶದಲ್ಲಿಯೇ ರಾಷ್ಟ್ರಪತಿಗಳು ಅತಿ ಹೆಚ್ಚು ಸಂಭಾವನೆ ಪಡೆಯುವ ಸರ್ಕಾರಿ ಅಧಿಕಾರಿಯಾಗಿದ್ದಾರೆ. 2018 ರಲ್ಲಿ ರಾಷ್ಟ್ರಪತಿಗಳ ವೇತನವನ್ನು ತಿಂಗಳಿಗೆ 1,50,000 ದಿಂದ 5,00,000 ರೂಪಾಯಿಗಳವರೆಗೆ ಹೆಚ್ಚಳ ಮಾಡಿದ್ದಾರೆ. ಇದರ ಜೊತೆ ಹಲವು ಭತ್ಯೆಗಳು ಕೂಡ ಸೇರ್ಪಡೆಗೊಳ್ಳುತ್ತವೆ.


ರಾಷ್ಟ್ರಪತಿಗಳ ವಾಸ ಎಲ್ಲಿ?
ದೇಶದ ಅತ್ಯಂತ ಮುಖ್ಯಸ್ಥರ ಅತಿ ದೊಡ್ಡ ನಿವಾಸದಲ್ಲಿ ಮಾತ್ರ ನೀವು ವಾಸ ಮಾಡಬಹುದು. ನಿಮ್ಮ ಸ್ವಂತ ಮನೆಯಲ್ಲೂ ವಾಸ ಮಾಡುವುದಕ್ಕೆ ನಿಮಗೆ ಅವಕಾಶ ಇರುವುದಿಲ್ಲ. ರಾಷ್ಟ್ರಪತಿಯಾಗಿದ್ದರೆ ನೀವು ಕಡ್ಡಾಯವಾಗಿ ನವದೆಹಲಿಯಲ್ಲಿರುವ ಅಧ್ಯಕ್ಷರ ಎಸ್ಟೇಟ್‌ನ ರಾಷ್ಟ್ರಪತಿ ಭವನದಲ್ಲಿ ವಾಸ ಮಾಡಬೇಕಾಗುತ್ತದೆ.


ನೀವು ಹೇಗೆ ಪ್ರಯಾಣಿಸಬಹುದು?
ಭಾರತೀಯ ರಾಷ್ಟ್ರಪತಿಗಳ ಕಾರುಗಳು ಸಮಯ ಮತ್ತು ತಂತ್ರಜ್ಞಾನಕ್ಕೆ ಅನುಗುಣವಾಗಿ ನವೀಕರಿಸಲ್ಪಟ್ಟಿರುತ್ತವೆ, ಗೃಹ ಸಚಿವಾಲಯವು ಭಾರತದ ಅಧ್ಯಕ್ಷರ ಕಾರುಗಳ ತಯಾರಿಕೆ, ಮಾದರಿ ಮತ್ತು ನೋಂದಣಿ ಸಂಖ್ಯೆಗಳನ್ನು ರಹಸ್ಯವಾಗಿಡುತ್ತದೆ ಮತ್ತು ಈ ಮಾಹಿತಿಗಳನ್ನು ಬಹಿರಂಗಪಡಿಸುವುದು ರಾಷ್ಟ್ರಪತಿಗಳ ಭದ್ರತೆಯ ದೃಷ್ಟಿಯಿಂದ ಸೂಕ್ತವಲ್ಲ, ಯಾವುದಾದರೂ ಅಪಾಯವನ್ನುಂಟುಮಾಡುತ್ತದೆ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.


ಇದನ್ನೂ ಓದಿ: Veerendra Heggade: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯಾರು? ರಾಜ್ಯಸಭೆಗೆ ಅವರನ್ನು ಆಯ್ಕೆ ಮಾಡಿದ್ದು ಯಾಕೆ?


ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಈ ಕಾರುಗಳು ಪರವಾನಗಿ ಫಲಕವನ್ನು ಹೊಂದಿರುವುದಿಲ್ಲ ಮತ್ತು ಅದರ ಬದಲಿಗೆ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭವನ್ನು ಹೊಂದಿರುತ್ತವೆ. ರಾಷ್ಟ್ರಪತಿ ಕೋವಿಂದ್ ಅವರು ಜನವರಿ 2021 ರಲ್ಲಿ ಹೊಸ ಕಾರನ್ನು ಪಡೆಯಬೇಕಾಗಿತ್ತು, ಆದರೆ ಸಾಂಕ್ರಾಮಿಕ ರೋಗವು ಇದಕ್ಕೆ ವಿಳಂಬವನ್ನು ಉಂಟುಮಾಡಿತು ಮತ್ತು ಅವರು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಮೊದಲಿಗೆ ಹೊಸ ವಾಹನವಾದ ಮರ್ಸಿಡಿಸ್ ಮೇಬ್ಯಾಚ್ S600 ಪುಲ್‌ಮ್ಯಾನ್ ಗಾರ್ಡ್ ಕಾರನ್ನು ಪಡೆದಿದ್ದರು.


ಭದ್ರತೆ ಹೇಗಿರುತ್ತೆ?
ರಾಷ್ಟ್ರಪತಿಗಳ ಅಂಗರಕ್ಷಕ ಗುಂಪು (PBG) ಭಾರತದ ರಾಷ್ಟ್ರಪತಿಗಳಿಗೆ ಭದ್ರತೆಯನ್ನು ಒದಗಿಸುತ್ತಾರೆ. PBG ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅತ್ಯಂತ ಹಿರಿಯ ಮಾತ್ರವಲ್ಲದೆ ಅತ್ಯಂತ ಹಳೆಯ ಘಟಕವಾಗಿದೆ. ಇದು ವಿಶ್ವದ ಏಕೈಕ ಕುದುರೆ ಸವಾರಿ ಮಿಲಿಟರಿ ಘಟಕವಾಗಿದೆ.


ನಿವೃತ್ತಿ ಯಾವ ರೀತಿಯಲ್ಲಿ ಇರುತ್ತದೆ?
ನಿವೃತ್ತಿಯ ನಂತರ, ಭಾರತದ ರಾಷ್ಟ್ರಪತಿಗಳು ಹಲವಾರು ಪ್ರಯೋಜನಗಳಿಗೆ ಅರ್ಹರಾಗಿರುತ್ತಾರೆ.


 • ಪಿಂಚಣಿ ತಿಂಗಳಿಗೆ 1.5 ಲಕ್ಷ ರೂಪಾಯಿ ಪಡೆಯುತ್ತಾರೆ. (ಪ್ರಸ್ತುತ ದರದಲ್ಲಿ).

 • ರಾಷ್ಟ್ರಪತಿಯ ಪತಿ ಅಥವಾ ಪತ್ನಿ ತಿಂಗಳಿಗೆ 30,000 ರೂಪಾಯಿಗಳನ್ನು ಪಡೆಯುತ್ತಾರೆ.

 • ಒಂದು ಸಂಪೂರ್ಣ ಸುಸಜ್ಜಿತ ಮತ್ತು ಬಾಡಿಗೆ-ರಹಿತ ಬಂಗಲೆ (ಟೈಪ್ VIII).

 • ಎರಡು ಉಚಿತ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಫೋನ್

 • ಐದು ವೈಯಕ್ತಿಕ ಉದ್ಯೋಗಿಗಳು - ವಾರ್ಷಿಕ ಸಿಬ್ಬಂದಿ ವೆಚ್ಚ ರೂ.60,000 ರೂಪಾಯಿಗಳು ಆಗಿರುತ್ತದೆ.

 • ಉಚಿತ ರೈಲು ಅಥವಾ ವಿಮಾನ ಪ್ರಯಾಣ.


ಇದನ್ನೂ ಓದಿ: Explained: ಏನಿದು G7? ಈ ಶೃಂಗಸಭೆಯಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ


ಆಶ್ಚರ್ಯವಾಗುತ್ತಿದೆಯೇ, ರಾಷ್ಟ್ರಪತಿಯಾದರೆ ಏನೆಲ್ಲ ಸೌಲಭ್ಯಗಳು ಸಿಗುತ್ತವೆ ಎಂದು ನಿಮಗೆ ಈಗ ಗೊತ್ತು ಆಯ್ತು ಅಲ್ವಾ! ಹಾಗಿದ್ದರೆ, ನೀವು ನಿಮ್ಮ ಜೀವನದಲ್ಲಿ ಒಮ್ಮೆ ಆದರೂ ರಾಷ್ಟ್ರಪತಿಯಾಗಲು ಬಯಸುವಿರಾ?

Published by:Ashwini Prabhu
First published: