• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಹೇಗಿರಲಿದೆ ಮರಗಳಿಲ್ಲದ ಭೂಮಿ? ಜಗತ್ತಿನ ಭವಿಷ್ಯದಲ್ಲಿ ಹಸಿರು ಬಿಟ್ಟು ಉಳಿದೆಲ್ಲಾ ಬಣ್ಣಗಳೂ ಇವೆ!

Explained: ಹೇಗಿರಲಿದೆ ಮರಗಳಿಲ್ಲದ ಭೂಮಿ? ಜಗತ್ತಿನ ಭವಿಷ್ಯದಲ್ಲಿ ಹಸಿರು ಬಿಟ್ಟು ಉಳಿದೆಲ್ಲಾ ಬಣ್ಣಗಳೂ ಇವೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜ್ಞಾನಿಗಳು ವ್ಯಕ್ತಪಡಿಸುತ್ತಿರುವ ಆತಂಕ AI ಚಿತ್ರಗಳಿಗಿಂತ ಹೆಚ್ಚು ಭಯಾನಕವಾಗಬಹುದು. ಹಾಗಾದ್ರೆ ಮರಗಳಿಲ್ಲದೆ ಜಗತ್ತು ಹೇಗೆ ಇರುತ್ತದೆ ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.

  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

ಇತ್ತೀಚಿನ ದಿನಗಳಲ್ಲಿ AI ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಮೂಲಕ ಜನರು ತಮ್ಮ ಭವಿಷ್ಯವನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಕೆಲವರು ಯೌವನದಲ್ಲಿ ತಮ್ಮ ವೃದ್ಧಾಪ್ಯವನ್ನು ನೋಡುತ್ತಿದ್ದರೆ, ಮತ್ತೆ ಕೆಲವರು ಬೀದಿಗಳನ್ನು ಹೆದ್ದಾರಿಗಳಾಗುತ್ತಿರುವುದನ್ನು ನೋಡುತ್ತಿದ್ದಾರೆ. ಮನೆಗಳು, ಮಾಲ್‌ಗಳು ನಿರ್ಮಾಣವಾಗುತ್ತಿವೆ. ನಾಳಿನ ಈ ಜಗತ್ತಿನಲ್ಲಿ ಹಸಿರು (Greenery) ಬಣ್ಣ ಬಿಟ್ಟು ಉಳಿದೆಲ್ಲಾ ರಂಗುಗಳು ಕಾಣುತ್ತಿವೆ ಎಂಬುವುದು ದುರಂತ.


ಒಂದೇ ಒಂದು ಮರವೇ (Tree) ಇಲ್ಲದಿದ್ದರೆ ಪ್ರಪಂಚದ ಭೂಪಟ (Map) ಹೇಗಿರುತ್ತದೆ? ಈ ಪ್ರಶ್ನೆಗೆ AI ತೋರಿಸುವ ಚಿತ್ರವು ಹಾಲಿವುಡ್ ಚಲನಚಿತ್ರಗಳಿಂದ ಪ್ರೇರಿತವಾಗಿದೆ ಎಂದು ತೋರುತ್ತದೆ, ಆದರೆ ವಿಜ್ಞಾನಿಗಳು ವ್ಯಕ್ತಪಡಿಸುತ್ತಿರುವ ಆತಂಕ AI ಚಿತ್ರಗಳಿಗಿಂತ ಹೆಚ್ಚು ಭಯಾನಕವಾಗಬಹುದು. ಹಾಗಾದ್ರೆ ಮರಗಳಿಲ್ಲದೆ ಜಗತ್ತು ಹೇಗೆ ಇರುತ್ತದೆ ಎಂಬ ಕುತೂಹಲಕಾರಿ ಪ್ರಶ್ನೆಗೆ ಇಲ್ಲಿದೆ ಉತ್ತರ.


ನಶಿಸಿ ಹೋಗಿದೆ ಶೇ. 32ರಷ್ಟು ಅರಣ್ಯ ಪ್ರದೇಶ


ಅಮೆರಿಕದ ಟ್ರೀ ಫೌಂಡೇಶನ್‌ನ ನಿರ್ದೇಶಕ ಮೆಗ್ ಲೋಮನ್ ಈ ಬಗ್ಗೆ ಮಾತನಾಡಿ, "ಭೂಮಿಗೆ ಹಸಿರು ಮರಗಳು ನೀಡುವ ಕೊಡುಗೆಯಷ್ಟು ಬೇರಾವುದರಿಂದಲೂ ಸಿಗುವುದಿಲ್ಲ. ಅವು ಮನುಷ್ಯರಿಂದ ಮತ್ತು ಇತರ ಪ್ರಾಣಿಗಳಿಂದ ಬಿಡುಗಡೆಯಾಗುವ ಇಂಗಾಲವನ್ನು ಹೀರಿಕೊಳ್ಳುತ್ತವೆ. ಮಣ್ಣನ್ನು ತೇವಗೊಳಿಸುತ್ತದೆ, ನೀರಿನ ಚಕ್ರವನ್ನು ನಿರ್ವಹಿಸುತ್ತದೆ. ಇದರೊಂದಿಗೆ, ಮನುಷ್ಯರು ಮತ್ತು ಪ್ರಾಣಿಗಳು ಆಹಾರ ಮತ್ತು ವ್ಯವಸ್ಥೆಯನ್ನು ನಿರ್ವಹಿಸುತ್ತವೆ. ಮರಗಳು ಇರುವ ಏಕೈಕ ಗ್ರಹ ಭೂಮಿ. ಆದ್ಧರಿಂದ ಮರಗಳು ಬಹಳ ಮುಖ್ಯ, ಹೀಗಿದ್ದರೂ ಅವುಗಳನ್ನು ನಾಶಪಡಿಸುತ್ತಿರುವ ವೇಗ ಬಹಳ ಹೆಚ್ಚಿದೆ.


ಇದನ್ನೂ ಓದಿ: Polluted Cities: ವಿಶ್ವದಲ್ಲಿನ 50 ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಭಾರತದ 39 ನಗರಗಳಿವೆಯಂತೆ!


2015 ರಲ್ಲಿ ಪ್ರಕಟವಾದ ವಿಜ್ಞಾನ ನಿಯತಕಾಲಿಕೆ 'ನೇಚರ್' ಸಂಶೋಧನೆಯಲ್ಲಿ ಮನುಕುಲವು 12 ಸಾವಿರ ವರ್ಷಗಳ ಹಿಂದೆ ಕೃಷಿಯನ್ನು ಪ್ರಾರಂಭಿಸಿತು ಎಂದು ಹೇಳುತ್ತದೆ, ಅಂದಿನಿಂದ ನಾವು ಪ್ರಪಂಚದ ಒಟ್ಟು ಆರು ಟ್ರಿಲಿಯನ್ ಮರಗಳ ಅರ್ಧದಷ್ಟು ಮರಗಳನ್ನು ಕತ್ತರಿಸಿದ್ದೇವೆ. ಕೈಗಾರಿಕಾ ಮತ್ತು ಮಾನವ ಅಭಿವೃದ್ಧಿಗಾಗಿ ನಿರಂತರವಾಗಿ ಮರಗಳನ್ನು ಕಡಿಯುವುದರಿಂದ, ಈಗ ವಿಶ್ವದ ಅರಣ್ಯಗಳ ಸಂಖ್ಯೆ 32 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ತಿಳಿಸಲಾಗಿದೆ.


special protection for sandalwood trees stg mrq


ಒಂದು ಅಂದಾಜಿನ ಪ್ರಕಾರ, ಜಗತ್ತಿನಲ್ಲಿ ಸುಮಾರು 6 ಟ್ರಿಲಿಯನ್ ಮರಗಳಿವೆ, ಅವು ನಿರಂತರವಾಗಿ ಕಡಿಮೆಯಾಗುತ್ತಿವೆ. ಪ್ರತಿ ವರ್ಷ ಸುಮಾರು 12 ಬಿಲಿಯನ್ ಮರಗಳನ್ನು ಕಡಿಯಲಾಗುತ್ತಿದೆ. ಭೂಮಿಯ ಮೇಲಿರುವ ಎಲ್ಲಾ ಮರಗಳನ್ನು ಕಡಿದರೆ, ಅಪೋಕ್ಯಾಲಿಪ್ಸ್ ಹೊರತುಪಡಿಸಿ ಬೇರೆ ಯಾವುದೇ ದೃಶ್ಯವನ್ನು ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.


ಒಂದೇ ರಾತ್ರಿಯಲ್ಲಿ ಎಲ್ಲವೂ ಬದಲಾಗಬಹುದು


ಅದೊಂದು ರಾತ್ರಿ ನೀವು ಶಾಂತವಾಗಿ ಮಲಗುತ್ತೀರಿ ಎಂದು ಊಹಿಸಿ, ಆದರೆ ನೀವು ಕಣ್ಣು ತೆರೆದಾಗ, ಭೂಮಿಯ ಮೇಲೆ ಒಂದು ಮರವೂ ಇಲ್ಲ ಎಂದು ಅರಿವಿಗೆ ಬಂದರೆ? ಬ್ರೆಜಿಲ್‌ನ ರಿಯೊ ಸ್ಟೇಟ್ ಯೂನಿವರ್ಸಿಟಿಯ ಪರಿಸರವಾದಿ ಜೇಮಿ ಪ್ರೆವೆಡೆಲೊ ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಈ ಫ್ಯಾಂಟಸಿ ಅರಿತುಕೊಳ್ಳುವ ಹೊತ್ತಿಗೆ ಮತ್ತು ಯಾರಾದರೂ ಏನನ್ನಾದರೂ ಅರ್ಥಮಾಡಿಕೊಳ್ಳುವ ಮೊದಲು, ಅಪೋಕ್ಯಾಲಿಪ್ಸ್ ಬಂದಿರುತ್ತದೆ. ಎಲ್ಲಾ ರೀತಿಯ ಪ್ರಾಣಿ, ಪಕ್ಷಿಗಳು ನಾಶವಾಗುತ್ತವೆ. ಇದು ಸ್ಥಳೀಯವಾಗಿ ಮಾತ್ರವಲ್ಲ, ಜಾಗತಿಕವಾಗಿಯೂ ಸಂಭವಿಸುತ್ತದೆ.


ಬಯಲು ಪ್ರದೇಶದಲ್ಲಿ ನೇರವಾಗಿ ನಿಂತಿರುವ ಒಂದೇ ಒಂದು ಮರವೂ ಸಹ ಅನೇಕ ಜೀವಿಗಳಿಗೆ ಆಶ್ರಯ ನೀಡುತ್ತದೆ. ಅವರಿಗೆ ಬದುಕಲು ಸಂಪನ್ಮೂಲಗಳನ್ನು ಒದಗಿಸುತ್ತದೆ. ಮರವನ್ನು ಕಡಿದಾಗ ಅನೇಕ ಜೀವಿಗಳು ಹಠಾತ್ತನೆ ಸಾಯುತ್ತವೆ ಎಂಬುದು ಸ್ಪಷ್ಟವಾಗಿದೆ. 2018 ರಲ್ಲಿ, ಪ್ರೆವೆಡೆಲ್ಲೋ ಮತ್ತು ಅವರ ಸಹೋದ್ಯೋಗಿಗಳು ತೆರೆದ ಜಾಗಗಳಿಗೆ ಹೋಲಿಸಿದರೆ 50 ರಿಂದ 100 ರಷ್ಟು ಹೆಚ್ಚು ಜಾತಿಯ ಪ್ರಾಣಿಗಳು ಕಾಡುಗಳಲ್ಲೇ ಇರುತ್ತವೆ ಎಂದು ಕಂಡುಹಿಡಿದರು, ಆದರೆ ನಿರಂತರ ಕೊಯ್ಲು ಪ್ರಾಣಿಗಳ ಸಾವಿಗೆ ಕಾರಣವಾಗುತ್ತಿದೆ ಎಂದೂ ಇದರಲ್ಲಿ ಉಲ್ಲೇಖಿಸಲಾಗಿದೆ.


special protection for sandalwood trees stg mrq
ಸಾಂದರ್ಭಿಕ ಚಿತ್ರ


ಮರಗಳ ಅಂತ್ಯದ ವೇಳೆಗೆ 450 ಗಿಗಾಟನ್ ಕಾರ್ಬನ್ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ ಎಂದು ಥಾಮಸ್ ಕ್ರೌಥರ್ ಭವಿಷ್ಯ ನುಡಿದಿದ್ದಾರೆ. ಇದು ಪ್ರಸ್ತುತ ಇಂಗಾಲದ ಹೊರಸೂಸುವಿಕೆಯನ್ನು ದ್ವಿಗುಣಗೊಳಿಸುತ್ತದೆ. ಆರಂಭದಲ್ಲಿ ಸಣ್ಣ ಸಸ್ಯಗಳು ಮತ್ತು ಕಳೆಗಳು ಈ ಇಂಗಾಲವನ್ನು ಹೀರಿಕೊಳ್ಳುತ್ತವೆ. ಆದರೆ, ಅವು ಅದನ್ನು ತ್ವರಿತವಾಗಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಇದೇ ಕಾರಣದಿಂದ ಕೆಲವು ದಶಕಗಳಲ್ಲಿ ಭೂಮಿಯ ಉಷ್ಣತೆಯು ಬಹಳ ವೇಗವಾಗಿ ಹೆಚ್ಚಾಗುತ್ತದೆ. ಈ ಇಂಗಾಲ ಸಮುದ್ರದ ನೀರಿನಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಿಂದಾಗಿ ಸಮುದ್ರದ ನೀರು ಆಮ್ಲೀಯವಾಗುತ್ತದೆ ಮತ್ತು ಜೆಲ್ಲಿ ಮೀನುಗಳನ್ನು ಹೊರತುಪಡಿಸಿ ಎಲ್ಲಾ ಸಮುದ್ರ ಜೀವಿಗಳು ಸಾಯುತ್ತವೆ.


ಆರ್ಥಿಕತೆ ಮೇಲಾಗುವ ಪರಿಣಾಮವೇನು?


ಮರಗಳಿಂದ ನಮಗೆ ಆಹಾರ ಮಾತ್ರವಲ್ಲ, ಆಶ್ರಯ ಮತ್ತು ಔಷಧಗಳೂ ಸಿಗುತ್ತವೆ. ಅವುಗಳ ಹಠಾತ್ ಕಣ್ಮರೆ ಭೂಮಿಯ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸ್ವಿಟ್ಜರ್ಲೆಂಡ್‌ನ ಪರಿಸರ ವಿಜ್ಞಾನಿ ಥಾಮಸ್ ಕ್ರೌಥರ್ ಈ ಬಗ್ಗೆ ಮಾತನಾಡುತ್ತಾ, ಭೂಮಿಯಿಂದ ಮರಗಳನ್ನು ತೆಗೆದುಹಾಕುವುದರಿಂದ, ಭೂಮಿಯ ಅಧಿಕ ಭಾವವನ್ನು ಸಮುದ್ರ ಆಕ್ರಮಿಸಿಕೊಳ್ಳುತ್ತದೆ. ಆವಿಯಾಗುವಿಕೆಯ ಮೂಲಕ, ಸೂರ್ಯನ ಶಕ್ತಿಯೊಂದಿಗೆ ನೀರನ್ನು ಹಬೆಯಾಗಿ ಪರಿವರ್ತಿಸುತ್ತದೆ. ಮರಗಳ ಜೊತೆಗೆ ತಾಪಮಾನವನ್ನು ಕಡಿಮೆ ಮಾಡುವ ಈ ನೈಸರ್ಗಿಕ ವ್ಯವಸ್ಥೆಯೂ ಕೊನೆಗೊಳ್ಳುತ್ತದೆ.


ಇದನ್ನೂ ಓದಿ: Plastic: ಎಲ್ಲಾ ಪ್ಲಾಸ್ಟಿಕ್‌ಗಳು ಮರುಬಳಕೆಗೆ ಯೋಗ್ಯವೇ? ಹೀಗಾದರೆ ಪರಿಸರ ರಕ್ಷಣೆ ಹೇಗೆ?

 ಅಂತಹ ಪರಿಸ್ಥಿತಿಯಲ್ಲಿ, ಎಲ್ಲಿ ಕಾಡುಗಳಿವೆ, ಆ ಪ್ರದೇಶಗಳು ಬಿಸಿಯಾಗುತ್ತವೆ. ಮತ್ತೊಂದು ಸಂಶೋಧನೆಯಲ್ಲಿ, ಪ್ರೆವೆಡೆಲೊ ಮತ್ತು ಅವರ ಸಹೋದ್ಯೋಗಿಗಳು 25 ಚದರ ಕಿಲೋಮೀಟರ್‌ನಿಂದ ಎಲ್ಲಾ ಮರಗಳನ್ನು ತೆಗೆದುಹಾಕಿದರೆ, ಸ್ಥಳೀಯ ಮಟ್ಟದಲ್ಲಿ ತಾಪಮಾನವು ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ. ಪ್ರಪಂಚದ ಎಲ್ಲಾ ಮರಗಳ ನಾಶದಿಂದಾಗಿ, ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ಹೆಚ್ಚಾಗುತ್ತದೆ. ಹವಾಮಾನ ಬದಲಾವಣೆಯ ಪ್ರಕ್ರಿಯೆಯು ತುಂಬಾ ವೇಗವಾಗಿ ಆಗುತ್ತದೆ ಎಂದು ಕಂಡುಕೊಂಡಿದ್ದಾರೆ.


ಎರಡನೆಯ ಪರಿಣಾಮವು ವಿಶ್ವ ಆರ್ಥಿಕತೆಯ ಮೇಲೆ ಇರುತ್ತದೆ. ಬದುಕುಳಿದ ಜನರೂ ಬದುಕು ಸಾಗಿಸುವ ಸಾಧ್ಯತೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಇಂದಿನ ದಿನಮಾನದಲ್ಲಿ 1.32 ಕೋಟಿ ಜನರು ಮರ ಉದ್ಯಮದಿಂದಲೇ ಉದ್ಯೋಗ ಪಡೆದಿದ್ದಾರೆ. ಈ ವಲಯದಲ್ಲಿ ಪ್ರತಿ ವರ್ಷ $ 600 ಬಿಲಿಯನ್ ಗಳಿಸಲಾಗುತ್ತದೆ. ಮರಗಳಿಲ್ಲದಿದ್ದರೆ ಕೃಷಿ ವ್ಯವಸ್ಥೆ ಅನಿಯಂತ್ರಿತವಾಗುತ್ತದೆ. ಮರಗಳನ್ನು ನಾಶಪಡಿಸಿದರೆ, ನಾವು ಹೊಸ ರೋಗಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ..


top videos



    ಮಾನವರ ಮೇಲೆ ಎಬೋಲಾ, ನಿಫಾ ಮತ್ತು ವೆಸ್ಟ್ ನೈಲ್ ವೈರಸ್‌ಗಳ ದಾಳಿ ಹೆಚ್ಚಾಗುತ್ತದೆ. ಇದಲ್ಲದೆ, ಮಲೇರಿಯಾ ಮತ್ತು ಡೆಂಗ್ಯೂ ರೋಗಿಗಳ ಸಂಖ್ಯೆಯೂ ಹೆಚ್ಚಾಗಬಹುದು. ಅಭಿವೃದ್ಧಿ ವೇಗವಾಗಿ ನಡೆಯುತ್ತಿದೆ, ಹೊಸ ತಂತ್ರಜ್ಞಾನ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ತಂತ್ರಜ್ಞಾನದ ಸಹಾಯದಿಂದ ಮನುಷ್ಯರು ಮರಗಳಿಲ್ಲದ ಜಗತ್ತಿನಲ್ಲಿ ಬದುಕಲು ಸಾಧ್ಯ, ಆದರೆ ಅಂತಹ ಜಗತ್ತಿನಲ್ಲಿ ಬದುಕಲು ಯಾರು ಬಯಸುತ್ತಾರೆ ಅಲ್ಲವೇ?

    First published: