• Home
 • »
 • News
 • »
 • explained
 • »
 • Kanhaiya Kumar: ಎಡಪಂಥೀಯ ವಿಚಾರಧಾರೆಯ ಕನ್ಹಯ್ಯ ಕುಮಾರ್​ ಕಾಂಗ್ರೆಸ್​ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವೇನು?

Kanhaiya Kumar: ಎಡಪಂಥೀಯ ವಿಚಾರಧಾರೆಯ ಕನ್ಹಯ್ಯ ಕುಮಾರ್​ ಕಾಂಗ್ರೆಸ್​ ಸೇರ್ಪಡೆಯಿಂದ ಪಕ್ಷಕ್ಕೆ ಲಾಭವೇನು?

ಕನ್ಹಯ್ಯ ಕುಮಾರ್​ ಫೈಲ್​ ಫೋಟೊ

ಕನ್ಹಯ್ಯ ಕುಮಾರ್​ ಫೈಲ್​ ಫೋಟೊ

Kanhaiya Kumar joins congress party: ಕನ್ಹಯ್ಯ ಪರ ಮತ್ತು ವಿರೋಧ ದೊಡ್ಡ ಸಮೂಹವೇ ಇದೆ. ಕನ್ಹಯ್ಯ ಕುಮಾರ್​ರನ್ನು ಬಲಪಂಥೀಯ ನಾಯಕರು ಹೀಗಳೆದರೆ, ಎಡಪಂಥೀಯರು ಭವಿಷ್ಯದ ನಾಯಕನಾಗಿ ಕಾಣುತ್ತಾರೆ

 • Share this:

  ನವದೆಹಲಿ: ದೆಹಲಿ ಜವಹರಲಾಲ್​ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ಸಂಘಟನೆಯಿಂದ ಮುನ್ನಲೆಗೆ ಬಂದ ಕನ್ಹಯ್ಯ ಕುಮಾರ್​, ಉತ್ತಮ ವಾಕ್ಚಾತುರ್ಯದಿಂದ ಸಾವಿರಾರು ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ಮಾತಿನ ವೈಖರಿ, ಕರಾರುವಕ್ಕಾಗಿ ತಮ್ಮ ಚಿಂತನೆಯನ್ನು ಯುವ ಸಮುದಾಯಕ್ಕೆ ತಿಳಿಸುವ ಶೈಲಿ ಎಲ್ಲವೂ ಅವರನ್ನು ಯುವ ನಾಯಕನನ್ನಾಗಿ ಮಾಡಿದೆ. ಕನ್ಹಯ್ಯ ಪರ ಮತ್ತು ವಿರೋಧ ದೊಡ್ಡ ಸಮೂಹವೇ ಇದೆ. ಕನ್ಹಯ್ಯ ಕುಮಾರ್​ರನ್ನು ಬಲಪಂಥೀಯ ನಾಯಕರು ಹೀಗಳೆದರೆ, ಎಡಪಂಥೀಯರು ಭವಿಷ್ಯದ ನಾಯಕನಾಗಿ ಕಾಣುತ್ತಾರೆ. ಸಿಪಿಐಎಂ (Communist Party of India Marxist) ಪಕ್ಷವನ್ನು ಕೆಲ ವರ್ಷಗಳ ಹಿಂದೆ ಸೇರಿದ ಕನ್ಹಯ್ಯ, ನನ್ನ ವಿಚಾರಧಾರೆಗೆ ಅನುಗುಣವಾದ ಪಕ್ಷ ಸಿಪಿಐಎಂ ಮಾತ್ರ. ಅದಕ್ಕಾಗಿಯೇ ಸಿಪಿಐಎಂ ಸೇರಿದ್ದೇನೆ ಎಂದಿದ್ದರು. ನಂತರ ಸಿಪಿಐಎಂ ಪಕ್ಷದ ರಾಷ್ಟ್ರೀಯ ಯು ಅಧ್ಯಕ್ಷರಾಗಿಯೂ ಪಕ್ಷ ಕನ್ಹಯ್ಯರನ್ನು ಆಯ್ಕೆ ಮಾಡಿತ್ತು. ಕೇರಳ ಹೊರತುಪಡಿಸಿ ದೇಶದ ಯಾವ ರಾಜ್ಯದಲ್ಲೂ ನೆಲೆಯಿಲ್ಲದ ಸಿಪಿಐಎಂ ಕೂಡ ಕನ್ಹಯ್ಯರಿಂದ ಪಕ್ಷಕ್ಕೆ ಹೊಸ ಚೈತನ್ಯದ ನಿರೀಕ್ಷೆಯಲ್ಲಿತ್ತು. ಆದರೆ ಈಗ ಅವೆಲ್ಲವೂ ಅಂತ್ಯಗೊಂಡಿದೆ. 


  ಕಾಂಗ್ರೆಸ್​ ಸೇರ್ಪಡೆ:


  ಇಂದು ನವದೆಹಲಿಯ ಕಾಂಗ್ರೆಸ್​ ಕೇಂದ್ರ ಕಚೇರಿಯಲ್ಲಿ ಕನ್ಹಯ್ಯ ಕುಮಾರ್​ ಮತ್ತು ದಲಿತ ನಾಯಕ ಜಿಗ್ನೇಶ್​ ಮೇವಾನಿ ಕಾಂಗ್ರೆಸ್​ ಸೇರ್ಪಡೆಯಾದರು. ರಾಹುಲ್​ ಗಾಂಧಿ (Rahul Gandhi) ಉಪಸ್ಥಿತಿಯಲ್ಲಿ ಕಾಂಗ್ರೆಸ್​ ಪಕ್ಷ ಸೇರಿಕೊಂಡರು. ಜಿಗ್ನೇಶ್​ ಕಾಂಗ್ರೆಸ್​ ಪಕ್ಷವನ್ನು ಬಿಟ್ಟು ಹೋದವರು, ಮತ್ತೆ ಸೇರ್ಪಡೆಯಾಗಿದ್ದಾರೆ.


  ಕನ್ಹಯ್ಯ ಕುಮಾರ್​ ಕಳೆದ ಬಾರಿ ಬಿಹಾರದ ಬೇಗುಸರಾಯಿ ಲೋಕಸಭಾ ಕ್ಷೇತ್ರದಿಂಧ ಸ್ಪರ್ಧಿಸಿ, ಬಿಜೆಪಿ ನಾಯಕ ಗಿರಿರಾಜ್​ ಸಿಂಗ್​ರ ಮುಂದೆ ಸೋಲು ಕಂಡಿದ್ದರು. ಕನ್ಹಯ್ಯ ಪರವಾಗಿ ಸ್ಟಾಂಡ್​ ಅಪ್​ ಕಾಮಿಡಿಯನ್​ ಕುನಾಲ್​ ಕಾಮ್ರಾ, ಬಾಲಿವುಡ್​ ನಟಿ ಸ್ವರ ಭಾಸ್ಕರ್​, ಜೆಎನ್​ಯು ವಿದ್ಯಾರ್ಥಿ ಸಂಘಟನೆಯ ಹಲವರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಕನ್ಹಯ್ಯ ಮೂಲತಃ ಬೇಗುಸರಾಯಿ ಕ್ಷೇತ್ರದಲ್ಲೇ ಜನಿಸಿದವರು. ಅಲ್ಲಿನ ಸಮಸ್ಯೆಗೆ ಬಿಜೆಪಿ ಪರಿಹಾರ ನೀಡಿಲ್ಲ, ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ತಮ್ಮನ್ನು ಆಯ್ಕೆ ಮಾಡಿ ಎಂದು ಕನ್ಹಯ್ಯ ಹೇಳಿಕೊಂಡಿದ್ದರು. ಆದರೆ ಸುಮಾರು 3 ಲಕ್ಷ 90 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕನ್ಹಯ್ಯ ಸೋಲು ಅನುಭವಿಸಬೇಕಾಯಿತು.


  ಇದನ್ನೂ ಓದಿ: ಕನ್ಹಯ್ಯ ಸೇರ್ಪಡೆಗೆ 'ಕೈ'ಅಂಗಳದಲ್ಲಿ ಶುರುವಾಯ್ತು ಕಲಹ; ಕಾಂಗ್ರೆಸ್‍ಗೆ ಸಂಜೀವಿನಿ ಆಗ್ತಾರಾ ಕನ್ಹಯ್ಯಾ, ಜಿಗ್ನೇಶ್?


  ಕನ್ಹಯ್ಯ ಎಡ - ಕಾಂಗ್ರೆಸ್​ ಸೆಂಟರ್​:


  ಕನ್ಹಯ್ಯ ಕುಮಾರ್​ ಎಡಪಂಥೀಯ ಚಿಂತನೆಯವರಾದರೆ, ಕಾಂಗ್ರೆಸ್​ ಎಡ ಮತ್ತು ಬಲದ ನಡುವೆ ತಟಸ್ಥರಾಗಿ ನಿಂತಿರುವ ಪಕ್ಷ. ಕನ್ಹಯ್ಯ ಕಾಂಗ್ರೆಸ್​ ಸೇರ್ಪಡೆಯಿಂದ ಕಾಂಗ್ರೆಸ್​ಗೆ ಲಾಭವೇನು ಎಂದು ಯೋಚಿಸಿದರೆ, ಅಷ್ಟೇನು ಇಲ್ಲ ಎಂದೇ ಅನಿಸುತ್ತದೆ. ಯಾಕೆಂದರೆ, ಕನ್ಹಯ್ಯ ಸೇರ್ಪಡೆಯಿಂದ, ಕಾಂಗ್ರೆಸ್​ ಪರ ಇರುವ ಒಂದು ವರ್ಗ ದೂರ ಹೋಗುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಕನ್ಹಯ್ಯ ಅವರ ತೀಕ್ಷ್ಣ ವಾಗ್ದಾಳಿ ಕಡಿಮೆ ಮಾಡದಿದ್ದರೆ ಬ್ರಾಹ್ಮಣ ವರ್ಗ ಮತ್ತು ಉಳಿದ ಮೇಲ್ವರ್ಗದ ಮತಗಳು ಕಾಂಗ್ರೆಸ್​ ವಿರುದ್ಧ ಹೋಗುವ ಸಾಧ್ಯತೆಯಿದೆ. ಕನ್ಹಯ್ಯ ಬ್ರಾಹ್ಮಣ್ಯದ ಮತ್ತು ಮೇಲ್ಜಾತಿ ದೌರ್ಜನ್ಯದ ವಿರುದ್ಧ ಹಿಂದಿನಿಂದಲೂ ಟೀಕೆ ಮಾಡುತ್ತಲೇ ಬಂದಿದ್ದಾರೆ. ಅದನ್ನು ಕನ್ಹಯ್ಯ ಮುಂದುವರೆಸುತ್ತಾರ, ಅಥವಾ ಸ್ವಲ್ಪ ಮಟ್ಟಿಗೆ ಹೊಂದಾಣಿಕೆಯ ರಾಜಕೀಯಕ್ಕೆ ಮೊರೆ ಹೋಗುತ್ತಾರ ಎಂಬುದನ್ನು ಕಾದು ನೋಡಬೇಕು.


  ಇದನ್ನೂ ಓದಿ: ಅಪ್ಘಾನಿಸ್ತಾನದ ನಾಗರಿಕರಿಗೆ ಹೊಸ ಪಾಸ್‍ಪೋರ್ಟ್ ಮತ್ತು ರಾಷ್ಟ್ರೀಯ ಗುರುತಿನ ಚೀಟಿ: ತಾಲಿಬಾನ್ ಘೋಷಣೆ


  ಬಿಜೆಪಿ ವಿರುದ್ಧ ಉತ್ತಮ ಅಸ್ತ್ರ:


  ಕನ್ಹಯ್ಯ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದಲ್ಲಿ, ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಮಾತನಾಡಲು ಉತ್ತಮ ಶಕ್ತಿಯಾಗಲಿದ್ದಾರೆ ಎನ್ನಲಾಗಿದೆ. ಕನ್ಹಯ್ಯ ಕರಾರುವಕ್​ ಮಾತನಾಡುವ ಶೈಲಿ ಕಾಂಗ್ರೆಸ್​ಗೆ ಲೋಕಸಭೆಯಲ್ಲಿ ಉಪಯೋಗಕ್ಕೆ ಬರಲಿದೆ. ಲೋಕಸಭೆ ಚುನಾವಣೆಗೂ ಮುನ್ನವೂ ಬಿಜೆಪಿಯನ್ನು ವಿರೋಧಿಸಲು ಕನ್ಹಯ್ಯ ಅವರು ಉತ್ತಮ ಅಸ್ತ್ರವೇ ಅನ್ನುತ್ತಾರೆ ರಾಜಕೀಯ ನಿಪುಣರೊಬ್ಬರು. ಒಟ್ಟಿನಲ್ಲಿ ಕನ್ಹಯ್ಯ ಕಾಂಗ್ರೆಸ್​ ಸೇರ್ಪಡೆಯಿಂದ ಒಳಿತು ಮತ್ತು ಕೆಡುಕು ಎರಡೂ ಕಾಂಗ್ರೆಸ್​ಗೆ ಸೇರಲಿದೆ ಎಂಬುದು ತಜ್ಞರ ಅಭಿಪ್ರಾಯ.

  Published by:Sharath Sharma Kalagaru
  First published: