Damage Note from ATM: ಎಟಿಎಂ ಮಿಷಿನ್​​ನಿಂದ ಹರಿದ ನೋಟು ಬಂದರೆ ಕೂಡಲೇ ಈ ರೀತಿ ಮಾಡಿ..

What to do if you get damaged notes: ನಿಮ್ಮ ಕೈ ಸೇರಿರುವ ಹರಿದು ನೋಟು ಬಳಕೆಗೆ ಯೋಗ್ಯವಾಗಿರೋಲ್ಲ. ಹರಿದ ನೋಟುಗಳನ್ನು ಯಾರೂ ಸ್ವೀಕರಿಸಲ್ಲ. ಇಂಥ ಸಮಯದಲ್ಲಿ ನೀವು ಏನು ಮಾಡಬೇಕು ಅಂತ ಇಲ್ಲಿ ವಿವರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ATM Money: ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಡಿಜಿಟಲೀಕರಣ(digitization) ಹೆಚ್ಚಾಗಿದ್ದರೂ, ನಮಗೆ ಕೈಯಲ್ಲಿ ನಗದು ಬೇಕು. ಈಗ ನಗದು ಪಡೆಯಲು ಇರುವ ಸುಲಭ ಮಾರ್ಗವೆಂದರೆ ಎಟಿಎಂನಿಂದ ಹಣ ತೆಗೆಯುವುದು. ATMಗಳು ಇಂದು ಜನಸ್ನೇಹಿಯಾಗಿವೆ. ಆದರೆ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಸಣ್ಣಪುಟ್ಟ ಸಮಸ್ಯೆಗಳು ತಲೆದೂರುತ್ತವೆ. ಕೆಲವೊಮ್ಮೆ ಎಟಿಎಂ ಮಿಷಿನ್​ನಿಂದ ಹರಿದ, ಹಾಳಾದ ನೋಟು ಬಂದಿರುವ ಉದಾಹರಣೆಗಳು ಇವೆ. ಇಂಥ ಸಮಯದಲ್ಲಿ ನಿಮ್ಮ ಖಾತೆಯಿಂದ ಹಣ ಕಡಿತವಾಗಿರುತ್ತೆ. ಆದರೆ ನಿಮ್ಮ ಕೈ ಸೇರಿರುವ ಹರಿದು ನೋಟು ಬಳಕೆಗೆ ಯೋಗ್ಯವಾಗಿರೋಲ್ಲ. ಹರಿದ ನೋಟುಗಳನ್ನು ಯಾರೂ ಸ್ವೀಕರಿಸಲ್ಲ. ಇಂಥ ಸಮಯದಲ್ಲಿ ನೀವು ಏನು ಮಾಡಬೇಕು ಅಂತ ಇಲ್ಲಿ ವಿವರಿಸಲಾಗಿದೆ.

ಹಾಳಾದ/ಹರಿದ ನೋಟು ವಿನಿಮಯ ಮಾಡಲು ನೀವು ಬ್ಯಾಂಕಿಗೆ ಅರ್ಜಿ ಸಲ್ಲಿಸಬೇಕು. ಎಟಿಎಮ್‌ ನಿಂದ ಹಣ ಪಡೆದ ದಿನಾಂಕ, ಸಮಯ ಮತ್ತು ಸ್ಥಳವನ್ನು ನಮೂದಿಸಬೇಕು  ಜೊತೆಗೆ ವಿತ್‌ಡ್ರಾಲ್ ಸ್ಲಿಪ್ ಅನ್ನು ಲಗತ್ತಿಸಬೇಕು. ನಿಮ್ಮ ಬಳಿ ಸ್ಲಿಪ್ ಇಲ್ಲದಿದ್ದರೆ, ನಿಮ್ಮ ಮೊಬೈಲ್‌ನಲ್ಲಿ ಸ್ವೀಕರಿಸಿದ ಮೆಸೇಜ್​​ ವಿವರಗಳನ್ನು  ನೀಡಬೇಕಾಗುತ್ತದೆ.

ಆರ್‌ಬಿಐ ನಿಯಮಗಳ ಪ್ರಕಾರ, ವಿರೂಪಗೊಂಡ ನೋಟುಗಳನ್ನು ವಿನಿಮಯ ಮಾಡಲಾಗುವುದಿಲ್ಲ. ಆದರೆ ಗ್ರಾಹಕರು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬ್ಯಾಂಕ್ ತಿಳಿಸಿದೆ.  SBI ಪ್ರಕಾರ ಹರಿದ ನೋಟು ಪಡೆದವರು ಆ ಬಗ್ಗೆ ದೂರು ಸಲ್ಲಿಸಬಹುದು .https://crcf.sbi.co.in/ccf/ ಜನರಲ್ ಬ್ಯಾಂಕಿಂಗ್ // ನಗದು ಸಂಬಂಧಿತ ವರ್ಗದ ಅಡಿಯಲ್ಲಿ. ಈ ಲಿಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ATM ಗಾಗಿ. ಯಾವುದೇ ಬ್ಯಾಂಕ್ ಎಟಿಎಂಗಳಿಂದ ವಿಕೃತಗೊಂಡ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ. ಇದರ ಹೊರತಾಗಿಯೂ, ಬ್ಯಾಂಕುಗಳು ನಿಯಮಗಳನ್ನು ಉಲ್ಲಂಘಿಸಿದರೆ ಬ್ಯಾಂಕ್ ಉದ್ಯೋಗಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದು. ಗ್ರಾಹಕರ ದೂರಿನ ಆಧಾರದ ಮೇಲೆ ಬ್ಯಾಂಕ್ 10,000 ರೂ.ಗಳವರೆಗೆ ಹಾನಿಯನ್ನು ಪಾವತಿಸಬೇಕಾಗಬಹುದು.

ಇದನ್ನೂ ಓದಿ: Post Office Schemes: ನಿಮ್ಮ ಹಣವನ್ನು ದ್ವಿಗುಣಗೊಳಿಸುವ ಫೋಸ್ಟ್​​​ಆಫೀಸ್​​ನ 8 ಯೋಜನೆಗಳ ಸಂಪೂರ್ಣ ವಿವರ ಇಲ್ಲಿದೆ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: