ಉದ್ಯೋಗಿಯನ್ನು (Employs) ಸಂಸ್ಥೆಯು (Organization) ಕೆಲಸದಿಂದ (Job) ವಜಾಗೊಳಿಸುವುದು (Layoff) ಎಂದರೆ ಅದೊಂದು ರೀತಿಯ ಯಾತನಾಮಯ ಸ್ಥಿತಿಯೇ ಆಗಿರುತ್ತದೆ. ಉದ್ಯೋಗವನ್ನೇ ನಂಬಿ ಬದುಕು ಸಾಗಿಸುವ ಉದ್ಯೋಗಿ ಹಾಗೂ ಆತನ ಕುಟುಂಬಕ್ಕೆ (Family) ದಿಕ್ಕೇ ತೋಚದ ಸನ್ನಿವೇಶ ಎದುರಾಗುತ್ತದೆ. ಕಷ್ಟಕರ ಹಾಗೂ ಒತ್ತಡದ ಸಮಯ ಇದಾಗಿರುತ್ತದೆ. ಈ ಸಮಯದಲ್ಲಿ ಇಂತಹ ಪರಿಸ್ಥಿತಿಗಳನ್ನು (Situation) ಹೇಗೆ ಎದುರಿಸಬಹುದು ಹಾಗೂ ನಾವು ಹೇಗೆ ಸಿದ್ಧರಾಗಿರಬೇಕು ಎಂಬ ಸಲಹೆಗಳನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ. ಆರ್ಥಿಕ ಅನಿಶ್ಚತೆ ಎಂಬುದು ಅನಿರೀಕ್ಷಿತವಾಗಿ (Unexpected) ಎದುರಾಗುವ ಸನ್ನಿವೇಶವಾಗಿದೆ. ಈ ಸಮಯದಲ್ಲಿ ನಮ್ಮ ನೆರವಿಗೆ ಬರುವುದು ನಾವು ಕೂಡಿಟ್ಟ ಅಲ್ಪ ಸ್ವಲ್ಪ ಉಳಿಕೆಯಾಗಿದೆ. ಬೇಕಾಬಿಟ್ಟಿ ಖರ್ಚುಮಾಡುವ ಬದಲಿಗೆ ಬೇಕಾದ್ದಕ್ಕೆ ಮಾತ್ರವೇ ಹಣ ಖರ್ಚುಮಾಡಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.
ಕ್ರೆಡಿಟ್ ಕಾರ್ಡ್‌ಗಳನ್ನು ಬೇಕಾಬಿಟ್ಟಿ ಖರ್ಚುಮಾಡುತ್ತಿದ್ದೀರಿ ಎಂದಾದಲ್ಲಿ ಅದಕ್ಕೆ ಕಡಿವಾಣ ಹಾಕಿ ಎಂಬ ಸಲಹೆಯನ್ನು ನೀಡಿದ್ದಾರೆ.
ವಜಾಗೊಳಿಸುವಿಕೆ ಎಂಬ ಪೆಡಂಭೂತ
ಇತ್ತೀಚಿನ ದಿನಗಳಲ್ಲಿ ಟೆಕ್ ವಲಯಗಳು ಸೇರಿದಂತೆ ಹಲವಾರು ಕಂಪನಿಗಳು ಸಾಮೂಹಿಕವಾಗಿ ಉದ್ಯೋಗಿ ವಜಾಗೊಳಿಸುವಿಕೆಯಂತಹ ಕಠಿಣ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ ಹಾಗೂ ನಿರ್ದಾಕ್ಷಿಣ್ಯವಾಗಿ ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ. ಈ ಲೇಆಫ್ ಸೀಸನ್ ಎನ್ನುವುದು ಭಾರತದ ಟೆಕ್ ದಿಗ್ಗಜರಿಂದ ಆರಂಭಿಸಿ ಹೊಸದಾಗಿ ಮೊಳೆಯೊಡೆಯುತ್ತಿರುವ ಸ್ಟಾರ್ಟಪ್ ಸಂಸ್ಥೆಗಳಿಗೂ ಬಿಸಿಮುಟ್ಟಿಸಿದೆ.
ಆರ್ಥಿಕ ಯೋಜನೆ ಅತ್ಯಗತ್ಯ
ಇಂತಹ ಸಮಯದಲ್ಲಿ ದೃತಿಗೆಡದೆ ಹಣಕಾಸಿನ ಜವಬ್ದಾರಿಗಳನ್ನು ಹೇಗೆ ನಿರ್ವಹಿಸಬಹುದು ಮತ್ತು ಹೊಣೆಗಾರಿಕೆಗಳನ್ನು ಹೇಗೆ ಸಮತೋಲನಗೊಳಿಸಬಹುದು ಎಂಬುದನ್ನು ಕುರಿತು Ladder7 ಫೈನಾನ್ಷಿಯಲ್ ಅಡ್ವೈಸರೀಸ್‌ನ ಸಂಸ್ಥಾಪಕರಾದ ಸುರೇಶ್ ಸದಾಗೋಪನ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.
ಅವರೊಂದಿಗೆ ಪ್ರಶ್ನಾರ್ಥಕ ಸಂವಾದಗಳನ್ನು ನಡೆಸಿದ್ದು ಸದಾಗೋಪನ್ ಸಲಹೆ ನೀಡಿದ್ದಾರೆ.
ಉದ್ಯೋಗಿಯು ವಜಾಗೊಳಿಸುವಿಕೆಯನ್ನು ಹೇಗೆ ಎದುರಿಸಬಹುದು ಹಾಗೂ ಈ ಸಮಯದಲ್ಲಿ ಹಣಕಾಸು ನಿರ್ವಹಣೆಯನ್ನು ಹೇಗೆ ನಡೆಸಬಹುದು ಎಂಬುದಕ್ಕೆ ಕೆಲವು ಸಲಹೆಗಳು ಹಾಗೂ ತಂತ್ರಗಳನ್ನು ಸದಾಗೋಪನ್ ನೀಡಿದ್ದಾರೆ.
ಉಳಿತಾಯದ ಪಾತ್ರವೇನು?
ವಜಾಗೊಳಿಸುವಿಕೆಗಳು ವಿಪರೀತವಾಗುತ್ತಿರುವ ಈ ಸಮಯದಲ್ಲಿ ಸರಿಯಾದ ಆರ್ಥಿಕ ಯೋಜನೆಯನ್ನು ಅನುಸರಿಸುವ ಮೂಲಕ ಆರ್ಥಿಕ ಸಂಕಷ್ಟವನ್ನು ಎದುರಿಸಬೇಕು ಎಂದು ಸದಾಗೋಪನ್ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಜಾಗೊಳಿಸುವಿಕೆ ಎಂಬುದು ಬರಿಯ ತಂತ್ರಜ್ಞಾನ ಕ್ಷೇತ್ರಕ್ಕೆ ಸೀಮಿತವಾಗಿಲ್ಲ ಎಂಬುದು ಸದಾಗೋಪನ್ ಮಾತಾಗಿದೆ.
ವಜಾಗೊಳಿಸುವಿಕೆ ಎಂಬುದು ಆಕಸ್ಮಿಕ ಘಟನೆಯಾಗಿದೆ. ಯಾವಾಗ ಬೇಕಾದರೂ ಈ ಅನಿಶ್ಚಿತತೆ ಸಂಭವಿಸಬಹುದು ಹಾಗಾಗಿ ಒಂದಿಷ್ಟು ಸೇವಿಂಗ್ ಅನ್ನು ಹೊಂದಿರಬೇಕು ಎಂದು ಸದಾಗೋಪನ್ ತಿಳಿಸುತ್ತಾರೆ.
ಆರುತಿಂಗಳ ಖರ್ಚುವೆಚ್ಚ, ಇಮ್‌ಐ ಖರ್ಚು ಸೇವಿಂಗ್ಸ್ ಈ ರೀತಿ ಇರಲಿ
ತುರ್ತುಸ್ಥಿತಿಗಳಲ್ಲಿ ನಾವು ಕೂಡಿಟ್ಟ ಹಣ ನೆರವಿಗೆ ಬರುತ್ತದೆ ಎಂಬುದು ಸದಾಗೋಪನ್ ಹೇಳಿಕೆಯಾಗಿದೆ. ಮೂರು ತಿಂಗಳಿನಿಂದ ಆರು ತಿಂಗಳ ನಿರ್ಬಂಧನೆಯನ್ನು ತಮಗೆ ತಾವೇ ಹಾಕಿಕೊಂಡು ಹಣವನ್ನು ಉಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಬ್ಯಾಂಕ್ ಖಾತೆಯಲ್ಲಿ ಉಳಿಸಿರಬಹುದಾದ ಮೊತ್ತವಾಗಿರಬಹುದು ಅಥವಾ ಲಿಕ್ವಿಡ್ ಫಂಡ್, ಆರ್ಬಿಟ್ರೇಜ್ ಫಂಡ್ ಮೊದಲಾದ ರೂಪದಲ್ಲಿ ಹೂಡಿಕೆ ಮಾಡಿರಬಹುದಾದ ಮೊತ್ತವೂ ಆಗಿರಬಹುದು ಎಂಬುದು ಸದಾಗೋಪನ್ ಮಾತಾಗಿದೆ.
ಬೇರೆ ಉದ್ಯೋಗದ ಹುಡುಕಾಟ ಏಕೆ ಅಗತ್ಯವಾಗಿದೆ
ವಜಾಗೊಂಡವರ ಕೈಯಲ್ಲಿ ಹಣವಿಲ್ಲದಿದ್ದರೆ ಹಾಗೂ ವಜಾಗೊಳ್ಳುವ ಪರಿಸ್ಥಿತಿ ಎದುರಾಗಿದ್ದರೆ ಪ್ರಸ್ತುವಿರುವ ಹೂಡಿಕೆಗಳನ್ನು ಮಾತ್ರ ಉದ್ಯೋಗಿ ನೋಡಬೇಕು. ಇಎಮ್‌ಐ ಹಾಗೂ ಇನ್ನಿತರ ಖರ್ಚುವೆಚ್ಚಗಳು ಆ ಉದ್ಯೋಗಿಗೆ ಇದ್ದರೆ ಇನ್ನೊಂದು ಉದ್ಯೋಗ ದೊರೆಯುವವರೆಗೆ ಈ ಹೂಡಿಕೆಗಳನ್ನು ಅವರು ಬಳಸಬಹುದಾಗಿದೆ.
ಉದ್ಯೋಗಿಯು ಪಡೆದುಕೊಂಡಿರುವ ಸಾಲ ಹೆಚ್ಚು ಮೊತ್ತದ್ದಲ್ಲ ಎಂದಾಗಿದ್ದರೆ ಈ ಹೂಡಿಕೆಯನ್ನು ಸಾಲವನ್ನು ಪೂರ್ತಿಯಾಗಿ ಸಂದಾಯಗೊಳಿಸಲು ಅವರು ಬಳಸಬಹುದಾಗಿದೆ ಸದಾಗೋಪನ್ ಸಲಹೆ ನೀಡಿದ್ದಾರೆ. ಸಾಲದ ಮೊತ್ತವು ದೊಡ್ಡದಾಗಿದ್ದರೆ ಕೂಡಲೇ ಉತ್ತಮ ಉದ್ಯೋಗಕ್ಕಾಗಿ ಅವರು ಶೋಧಿಸಬೇಕು.
ನಿಮ್ಮ ಹೂಡಿಕೆಯಿಂದ ನೀವು ಆರ್ಥಿಕ ನೆರವನ್ನು ಪಡೆಯುವಂತಿರಬೇಕು ಎಂದು ಸದಾಗೋಪನ್ ಮಾಹಿತಿ ನೀಡಿದ್ದಾರೆ. ಇದು ಸಾಧ್ಯವಿಲ್ಲ ಎಂದಾದರೆ ಸಾಲ ಮಾಡುವುದು ಎರಡನೆಯ ಆಯ್ಕೆಯಾಗಿದೆ ಎಂದು ಸಲಹೆ ನೀಡಿದ್ದಾರೆ.
ಯಾವ ರೀತಿಯ ಹೂಡಿಕೆ ಆಯ್ಕೆ ಮಾಡುವುದು ಹೇಗೆ?
ಹೂಡಿಕೆಯಿಂದ ಹಣ ಪಡೆದುಕೊಳ್ಳುವುದು ಕೊಂಚ ಸಮಸ್ಯೆಯಾಗಿರುತ್ತದೆ. ಮಾರುಕಟ್ಟೆ ಸಂಬಂಧಿತ ಹೂಡಿಕೆಗಳು, ಇಕ್ವಿಟಿ ಆಧಾರಿತ ಹೂಡಿಕೆಗಳು, ಸ್ಥಿರ ಆದಾಯ ಹೂಡಿಕೆಗಳನ್ನು ಹೊಂದಿದ್ದರೆ - ನೀವು ಮೊದಲು ಯಾವ ರೀತಿಯ ಹೂಡಿಕೆಯನ್ನು ಆಯ್ಕೆಮಾಡಬೇಕು ಹಾಗೂ ಇದು ಹೇಗೆ ನಿರ್ಣಾಯಕವಾಗುತ್ತದೆ
ಈ ಸಮಯದಲ್ಲಿ ಸಹಾಯಕ್ಕೆ ಬರುವುದು ಮಧ್ಯಸ್ಥಿಕೆ ನಿಧಿ ಇಲ್ಲವೇ ಸಾಲ ನಿಧಿಗಳು ಎಂಬ ಸಲಹೆಯನ್ನು ಸದಾಗೋಪನ್ ನೀಡಿದ್ದಾರೆ. ಅಲ್ಪಾವಧಿಯ ಫಂಡ್, ಸಣ್ಣ ಅವಧಿಯ ಫಂಡ್, ಕಡಿಮೆ ಅವಧಿ, ಲಿಕ್ವಿಡ್ ಫಂಡ್, ಅಲ್ಟ್ರಾ ಶಾರ್ಟ್ ಟರ್ಮ್ ಫಂಡ್ ಈ ರೀತಿಯ ಫಂಡ್‌ಗಳಲ್ಲಿ ಹಣ ಹೂಡಬೇಕು ಮತ್ತು ಅದನ್ನೇ ಆರ್ಥಿಕ ಸಂಕಷ್ಟಗಳಲ್ಲಿ ವಿನಿಯೋಗಿಸಬೇಕು ಎಂಬುದು ಅವರ ಸಲಹೆಯಾಗಿದೆ.
ಇಂತಹ ನಿಧಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಣ ಹೊಂದಿರಬೇಕು. ಹಾಗೂ ವಜಾಗೊಳ್ಳುವ ಸನ್ನಿವೇಶದ ಮೊದಲೇ ನಾವು ಸಿದ್ಧಗೊಂಡಿರಬೇಕು ಎಂಬುದು ಸದಾಗೋಪನ್ ಸಲಹೆಯಾಗಿದೆ. ಮತ್ತೊಂದು ಲೋನ್ ಬದಲಿಗೆ ಆತ್ಮೀಯರಲ್ಲಿ ಹಣ ಎರವಲು ಪಡೆದುಕೊಳ್ಳಬಹುದು ಎಂಬ ಸಲಹೆಯನ್ನು ಸದಾಗೋಪನ್ ನೀಡಿದ್ದಾರೆ.
ಆರ್ಥಿಕ ಬಿಕ್ಕಟ್ಟಿನ ಇಂತಹ ಪರಿಸ್ಥಿತಿಗಳಲ್ಲಿ ಜನರು ವೈಯಕ್ತಿಕ ಸಾಲ ಮಾಡುತ್ತಾರೆ ಇಲ್ಲವೇ ಕ್ರೆಡಿಟ್ ಕಾರ್ಡ್‌ಗಳಲ್ಲಿ ಜೀವನ ಸಾಗಿಸುತ್ತಿರುತ್ತಾರೆ ಇದು ಅಷ್ಟೊಂದು ಉತ್ತಮ ಆಯ್ಕೆಯಲ್ಲ. ಹೂಡಿಕೆಯ ನಂತರವೂ ಆತ್ಮೀಯರಿಂದ ಹಣ ಪಡೆದುಕೊಳ್ಳುವುದು ಯಾವ ಸಮಯದಲ್ಲಿ ಸೂಕ್ತವಾದುದು?
ಕ್ರೆಡಿಟ್ ಕಾರ್ಡ್‌ನಲ್ಲಿ ಖರ್ಚುವೆಚ್ಚಗಳನ್ನು ಸರಿದೂಗಿಸಿಕೊಳ್ಳುವುದು ಒಳ್ಳೆಯ ನಿರ್ಧಾರವೇ? ವೈಯಕ್ತಿಕ ಸಾಲವನ್ನು ಯಾವ ಸಂದರ್ಭದಲ್ಲಿ ಮಾಡಬೇಕು?
ಕೆಲವೊಂದು ಕಠಿಣ ಪರಿಸ್ಥಿತಿಗಳಲ್ಲಿ ಮಾತ್ರವೇ ಜನರು ಲೋನ್ ಮಾಡುವಂತಹ ಆಯ್ಕೆಯನ್ನು ಮಾಡಬೇಕು ಎಂಬುದು ಸದಾಗೋಪನ್ ಹೇಳಿಕೆಯಾಗಿದೆ.
ಇದನ್ನೂ ಓದಿ:Investment Tips: ಈ ವರ್ಷದ ಟಾಪ್ 10 ಮ್ಯೂಚುವಲ್ ಫಂಡ್ಗಳು; ಇಲ್ಲಿ ಹಣ ಹೂಡಿಕೆ ಮಾಡಿದ್ರೆ ಲಾಭ ಗ್ಯಾರಂಟಿ
ಹೆಚ್ಚಿನ ಸಾಲಗಳಿದ್ದರೆ ಒಂದಾ ಆತ್ಮೀಯರ ನೆರವನ್ನು ಪಡೆದುಕೊಳ್ಳಬಹುದು ಹಾಗೂ ಖರ್ಚುವೆಚ್ಚಗಳನ್ನು ಯಾವಾಗಲೂ ಮಿತವಾಗಿರಿಸಿ ಎಂಬ ಸಲಹೆಯನ್ನು ಸದಾಗೋಪನ್ ನೀಡಿದ್ದಾರೆ. ಏನಾದರೂ ತುರ್ತು ಅಗತ್ಯವಿದ್ದರೆ ಮಾತ್ರವೇ ವೈಯಕ್ತಿಕ ಸಾಲಗಳನ್ನು ಮಾಡಿ ಎಂಬ ಸಲಹೆಯನ್ನು ಸದಾಗೋಪನ್ ನೀಡಿದ್ದಾರೆ.
ವಿಪರೀತ ಖರ್ಚಿದ್ದರೆ ಮಾತ್ರ ಲೋನ್ ಮಾಡಿ
ಬಹಳಷ್ಟು ಗುರಿ ಹಾಗೂ ಸಾಕಷ್ಟು ಖರ್ಚುವೆಚ್ಚಗಳಿಂದ ಬಳಲುತ್ತಿದ್ದರೆ ಮಾತ್ರವೇ ವೈಯಕ್ತಿಕ ಸಾಲಗಳನ್ನು ಮಾಡಿ ಎಂದು ಅವರು ಸಲಹೆ ನೀಡುತ್ತಾರೆ. ಮಕ್ಕಳ ಓದು ಅವರ ಟ್ಯೂಷನ್ ಖರ್ಚು, ಶಾಲಾ ಫೀಸ್ ಖರ್ಚು ಹೀಗೆ ಅಗತ್ಯವಿದ್ದರೆ ಮಾತ್ರವೇ ಲೋನ್ ಮಾಡಿ ಎಂಬುದು ಸದಾಗೋಪನ್ ಹೇಳಿಕೆಯಾಗಿದೆ.
ಮಕ್ಕಳ ಶಿಕ್ಷಣ ಅಗತ್ಯತೆಗಳನ್ನು ಪೂರೈಸಲು ಇಎಮ್‌ಐಗಳ ಸಹಾಯವನ್ನು ಪಡೆಯಬಹುದು ಇಲ್ಲದಿದ್ದರೆ ಮಕ್ಕಳ ಶಾಲಾ ಫೀಸ್ ಅಧಿಕವಾಗಿದ್ದರೆ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಬಹುದು. ಇದನ್ನು ಬ್ಯಾಂಕ್ ಮೂಲಕ ಹೇಗೆ ಸಾಧಿಸಬಹುದು? ಇದಕ್ಕೆ ಬ್ಯಾಂಕ್ ನೆರವು ನೀಡುತ್ತದೆಯೇ?
ನೀವು ತುಂಬಾ ಕಷ್ಟದಲ್ಲಿ ಬಳಲುತ್ತಿದ್ದರೆ ಬ್ಯಾಂಕ್‌ಗೆ ತೆರಳಿ ಸಂಸ್ಥೆಯ ನೆರವನ್ನು ಪಡೆದುಕೊಳ್ಳಬಹುದು ಎಂದು ಸದಾಗೋಪನ್ ತಿಳಿಸುತ್ತಾರೆ.
ಗೃಹ ಸಾಲವನ್ನು ತೆಗೆದುಕೊಂಡ ಸಮಯದಲ್ಲಿ ಅವಧಿಯನ್ನು ವಿಸ್ತರಿಸಲು ಹಾಗೂ ಇಎಮ್‌ಐ ಅನ್ನು ಕಡಿಮೆ ಮಾಡಲು ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಸಂವಹನ ನಡೆಸಬಹುದು ಎಂದು ಸದಾಗೋಪನ್ ಸಲಹೆ ನೀಡುತ್ತಾರೆ.
ಬ್ಯಾಂಕ್ ಸಹಾಯ ಪಡೆದುಕೊಳ್ಳಬಹುದು
ಬ್ಯಾಂಕ್‌ನೊಂದಿಗೆ ಈ ಕುರಿತು ಸಂವಾದ ನಡೆಸುವ ಸಮಯದಲ್ಲಿ ಸಾಧ್ಯವಾದಷ್ಟು ಲೋನ್‌ಗಳನ್ನು ಹೇಗೆ ತೀರಿಸಬಹುದು ಎಂಬ ಅಂಶಗಳತ್ತ ಗಮನಹರಿಸಿ ಎಂದು ಅವರು ಸಲಹೆ ನೀಡುತ್ತಾರೆ.
ಏಕೆಂದರೆ ಲೋನ್ ವಿಸ್ತರಣೆ ಕ್ರೆಡಿಟ್ ಸ್ಕೋರ್‌ಗಳ ಮೇಲೆ ಪರಿಣಾಮ ಬೀರುವ ಅಪಾಯ ಕೂಡ ಇರುತ್ತದೆ ಹಾಗಾಗಿ ಬ್ಯಾಂಕ್‌ಗೆ ಹೋಗಿ ಅಧಿಕಾರಿಗಳೊಂದಿಗೆ ಮಾತನಾಡುವುದು ಕೊನೆಯ ಆಯ್ಕೆಯಾಗಿರಲಿ ಎಂದು ಸದಾಗೋಪನ್ ಸಲಹೆ ನೀಡುತ್ತಾರೆ.
ತುರ್ತು ನಿಧಿ ಹಾಗೂ ಆಕಸ್ಮಿಕ ನಿಧಿಯನ್ನು ಪ್ರತಿಯೊಬ್ಬರೂ ಹೊಂದಿರುವುದು ಅಗತ್ಯವಾಗಿದೆ. ಖರ್ಚುವೆಚ್ಚಗಳನ್ನು ಈ ನಿಧಿಯಲ್ಲಿ ಬರುವಂತೆ ನೋಡಿಕೊಳ್ಳಬೇಕು ಹಾಗಿದ್ದರೆ ನಿಧಿಯ ಮೊತ್ತವು ಎಷ್ಟು ಪ್ರಮಾಣದ್ದಾಗಿರಬೇಕು?
ತುರ್ತು ಪರಿಸ್ಥಿತಿ ಯಾವಾಗ ಬರುತ್ತದೋ ಅಥವಾ ಯಾವಾಗ ಅನಿಶ್ಚಿತತೆ ಬರುತ್ತದೋ ಗೊತ್ತಿಲ್ಲ. ಹಾಗಾಗಿ ಆರು ತಿಂಗಳ ಖರ್ಚುವೆಚ್ಚಗಳು ಜೊತೆಗೆ ಇಎಮ್‌ಐ ಮೊತ್ತಗಳಷ್ಟು ಹಣ ನಿಮ್ಮಲ್ಲಿರಬೇಕು ಎಂಬುದು ಸದಾಗೋಪನ್ ಮಾತಾಗಿದೆ.
ಇನ್ನು ಕೆಲವರು ಹೂಡಿಕೆಗಳನ್ನು ಮಾಡುತ್ತಾರೆ ಈ ಹೂಡಿಕೆಗಳು ಆರ್ಥಿಕ ಸಂಕಷ್ಟದಲ್ಲಿ ನೆರವನ್ನು ನೀಡುತ್ತದೆ ಎಂಬುದು ಸದಾಗೋಪನ್ ಮಾತಾಗಿದೆ. ಒಟ್ಟಿನಲ್ಲಿ ಆರು ತಿಂಗಳ ಖರ್ಚುವೆಚ್ಚ ಹಾಗೂ ಇನ್ನಿತರ ಖರ್ಚುಗಳಿಗೆ ಸರಿಹೊಂದುವಷ್ಟು ಹಣವನ್ನು ಉಳಿತಾಯ ಮಾಡಬೇಕು ಎಂಬುದು ಸದಾಗೋಪನ್ ಮಾತಾಗಿದೆ.
ತುರ್ತು ಪರಿಸ್ಥಿತಿಗಳಲ್ಲಿ ಹಣದ ವಿನಿಯೋಗ
ಕುಟುಂಬದ ಕೆಲವು ಅಗತ್ಯತೆಗಳಿಗೆ ಕೂಡ ಈ ಆಕಸ್ಮಿಕ ನಿಧಿಯನ್ನು ಬಳಸಬಹುದು ಎಂಬುದು ಸದಾಗೋಪನ್ ಹೇಳಿಕೆಯಾಗಿದೆ. ವಿವಾಹ ಕಾರ್ಯಗಳು ಇನ್ನಿತರ ಸಮಾರಂಭಗಳ ಸಮಯದಲ್ಲಿ ಕೂಡಿಟ್ಟ ಹಣವನ್ನು ವಿನಿಯೋಗಿಸಬಹುದು ಎಂದು ಸಲಹೆ ನೀಡುತ್ತಾರೆ.
ಅದಕ್ಕಾಗಿಯೇ ಮೊದಲೇ ಯೋಜನೆ ಮಾಡಿ ಪ್ರತ್ಯೇಕವಾಗಿ ಹಣ ಎತ್ತಿಟ್ಟುಕೊಳ್ಳಬೇಕು ಎಂಬುದು ಸದಾಗೋಪನ್ ಸಲಹೆಯಾಗಿದೆ.
ಹೀಗಾಗಿ ತುರ್ತು ಪರಿಸ್ಥಿತಿಗಳಲ್ಲಿ ಬರುವ ಎಲ್ಲಾ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಹಣ ಉಳಿತಾಯ ಮಾಡಬೇಕು ಎಂದು ಸದಾಗೋಪನ್ ಸಲಹೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ