• Home
 • »
 • News
 • »
 • explained
 • »
 • Explained: ಆಧಾರ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಈ 3 ಕ್ರಮ ಅತ್ಯಗತ್ಯ!

Explained: ಆಧಾರ್‌ ಕಾರ್ಡ್‌ ಕಳೆದು ಹೋದರೆ ಏನು ಮಾಡಬೇಕು? ಈ 3 ಕ್ರಮ ಅತ್ಯಗತ್ಯ!

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆಧಾರ್‌ ಕಾರ್ಡ್‌ ದುರ್ಬಳಕೆಯಾಗಿರುವುದು ಖಚಿತವಾಗಿದೆ. ಹೀಗಾಗಿ ನೀವೇನಾದರೂ ನಿಮ್ಮ ಆಧಾರ್‌ ಕಾರ್ಡ್‌ ಕಳೆದುಕೊಂಡರೆ ಏನು ಮಾಡಬೇಕು, ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆಧಾರ್‌ ಕಾರ್ಡ್‌ ದುರ್ಬಳಕೆಯಾಗಿರುವುದು ಖಚಿತವಾಗಿದೆ. ಹೀಗಾಗಿ ನೀವೇನಾದರೂ ನಿಮ್ಮ ಆಧಾರ್‌ ಕಾರ್ಡ್‌ ಕಳೆದುಕೊಂಡರೆ ಏನು ಮಾಡಬೇಕು, ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆಧಾರ್‌ ಕಾರ್ಡ್‌ ದುರ್ಬಳಕೆಯಾಗಿರುವುದು ಖಚಿತವಾಗಿದೆ. ಹೀಗಾಗಿ ನೀವೇನಾದರೂ ನಿಮ್ಮ ಆಧಾರ್‌ ಕಾರ್ಡ್‌ ಕಳೆದುಕೊಂಡರೆ ಏನು ಮಾಡಬೇಕು, ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

 • Trending Desk
 • 5-MIN READ
 • Last Updated :
 • Bangalore [Bangalore], India
 • Share this:

  ಗುರುತಿನ ಚೀಟಿಗಳು (Identity Card) ಒಬ್ಬ ವ್ಯಕ್ತಿಗೆ ತುಂಬಾ ಮುಖ್ಯ. ಆಧಾರ್‌ (Adhaar Card), ವೋಟರ್‌ ಐಡಿ (Voter ID), ಡ್ರೈವಿಂಗ್‌ ಲೈಸೆನ್ಸ್‌ (Driving License) ಹೀಗೆ ಎಲ್ಲವೂ ತುಂಬಾ ಅಮೂಲ್ಯವಾದದ್ದು. ಇವು ಕಳೆದು ಹೋದಲ್ಲಿ ಮೊದಲು ನಾವು ಸಂಬಂಧ ಪಟ್ಟ ಕಡೆ ತಿಳಿಸಬೇಕು. ಇಲ್ಲವಾದಲ್ಲಿ ನೀವು ಸಹ ಹುಬ್ಬಳಿಯ ಪ್ರೇಮ್‌ ರಾಜ್‌ ಹುಟಗಿ ರೀತಿ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಹೌದು, ಯಾವುದೇ ಅಹಿತಕರ ಘಟನೆಯಲ್ಲಿ ನಿಮಗೆ ಸಂಬಂಧವಿಲ್ಲದಿದ್ದರೂ ಕೆಲವೊಮ್ಮೆ ಆ ಜಾಗದಲ್ಲಿ ನಿಮಗೆ ಸಂಬಂಧಪಟ್ಟ ಯಾವುದಾದರೂ ದಾಖಲೆ ಸಿಕ್ಕರೆ ಖಂಡಿತ ಪೊಲೀಸರು ನಿಮ್ಮನ್ನು ವಿಚಾರಣೆಗೆ ಒಳಪಡಿಸುತ್ತಾರೆ. ಪ್ರೇಮ್‌ರಾಜ್‌ ಸ್ಥಿತಿಯೂ ಇದೆ ಆಗಿದೆ.


  ಏನಿದು ಪ್ರೇಮ್‌ ರಾಜ್‌ ಪ್ರಕರಣ?


  ಮಂಗಳೂರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೊರಿಕ್ಷಾದಲ್ಲಿ ಸಿಕ್ಕ ಭಾರತೀಯ ರೈಲ್ವೆ ನೌಕರ ಪ್ರೇಮ್ ರಾಜ್ ಹುಟಗಿ ಅವರ ಆಧಾರ್ ಕಾರ್ಡ್ ಪತ್ತೆಯಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಪೊಲೀಸರು ಮಧುರಾ ಕಾಲೋನಿಯಲ್ಲಿ ಪ್ರೇಮರಾಜ್ ಹುಟಗಿ ಅವರನ್ನು ವಿಚಾರಣೆ ನಡೆಸಿದರು.


  ಆಟೋದಲ್ಲಿ ಸಿಕ್ಕ ಆಧಾರ್ ಕಾರ್ಡ್‌ನಲ್ಲಿ ತುಮಕೂರು ಬಳಿ ಗೇಟ್‌ಮ್ಯಾನ್ ಆಗಿ ಕೆಲಸ ಮಾಡುವ ಹುಬ್ಬಳ್ಳಿಯ ಪ್ರೇಮರಾಜ್ ಅವರ ವಿಳಾಸವಿರುವುದು ಕಂಡು ಬಂದಿತ್ತು. ಹುಬ್ಬಳ್ಳಿ ನಿವಾಸಿ ಪ್ರೇಮರಾಜ್ ಅವರ ಆಧಾರ್ ಕಾರ್ಡ್ ಸುಮಾರು ಆರು ತಿಂಗಳ ಹಿಂದೆ ಕಳೆದು ಹೋಗಿದೆ. ಆಧಾರ್ ಕಾರ್ಡ್ ಕಳೆದು ಹೋಗಿದ್ದರೂ ಪ್ರೇಮರಾಜ್ ತಲೆ ಕೆಡಿಸಿಕೊಂಡಿರಲಿಲ್ಲ ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಮಂಗಳೂರು ಭಯೋತ್ಪಾದಕ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಪೊಲೀಸರಿಂದ ಕರೆ ಬಂದಿತ್ತು. ಗೊಂದಲ ಮತ್ತು ಆಘಾತಕ್ಕೊಳಗಾದ ಪ್ರೇಮ್‌ರಾಜ್‌ಗೆ ಏನೂ ತಿಳಿಯದೇ ಠಾಣೆಗೆ ಹೋಗಿ ವಿಚಾರಣೆಗೆ ಹಾಜರಾದರು.


  ಇದನ್ನೂ ಓದಿ: ಎಷ್ಟು ಬಾರಿ ಆಧಾರ್ ಕಾರ್ಡ್ ಅಪ್​ಡೇಟ್ ಮಾಡಬಹುದು? ಈ ನಿಯಮಗಳು ತಿಳಿದಿರಲಿ


  “7:30 ರ ಸುಮಾರಿಗೆ, ನನಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನಿಂದ ಕರೆ ಬಂದಿತು. ಎಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಕಳೆದುಕೊಂಡಿದ್ದೀರಾ ಎಂದು ಕೇಳಿದರು. ಅವರು ನನ್ನ ಹೆತ್ತವರ ಬಗ್ಗೆಯೂ ಕೇಳಿದರು. ನನ್ನ ಫೋಟೋಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ನಾನು ನೀಡಿದ್ದೇನೆ" ಎಂದಿದ್ದಾರೆ. ಇದಾದ ನಂತರ ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಸೂದ್ ಟ್ವೀಟ್ ಮಾಡಿ, ಪ್ರೇಮ್‌ರಾಜ್‌ಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


  ಪ್ರೇಮ್‌ರಾಜ್‌ಗೆ ಬಂದಿದ್ದ ಅಪಾಯ ಸುಖಾಂತ್ಯ ಕಂಡಿದ್ದರೂ, ಇಂತಹ ಸ್ಥಿತಿಗಳು ಸಜಹವಾಗಿಯೇ ಆತಂಕ ಸೃಷ್ಟಿಸುತ್ತವೆ. ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಆಧಾರ್‌ ಕಾರ್ಡ್‌ ದುರ್ಬಳಕೆಯಾಗಿರುವುದು ಖಚಿತವಾಗಿದೆ. ಹೀಗಾಗಿ ನೀವೇನಾದರೂ ನಿಮ್ಮ ಆಧಾರ್‌ ಕಾರ್ಡ್‌ ಕಳೆದುಕೊಂಡರೆ ಏನು ಮಾಡಬೇಕು, ಹೇಗೆಲ್ಲಾ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


  ಆಧಾರ್‌ ಕಾರ್ಡ್‌ ಕಳೆದುಕೊಂಡರೆ ಏನು ಮಾಡಬೇಕು ?


  ಆಧಾರ್‌ ಕಾರ್ಡ್‌ ಪ್ರಸ್ತುತ ಪ್ರತಿಯೊಬ್ಬ ಭಾರತೀಯನ ಪ್ರಮುಖವಾದ ಗುರುತಿನ ಚೀಟಿಯಾಗಿದೆ. ಎಲ್ಲಾ ಸರ್ಕಾರಿ ಕೆಲಸದಲ್ಲೂ ಈ ಮುಖ್ಯ ದಾಖಲೆಯನ್ನು ಕೇಳುತ್ತಾರೆ. ಹಾಗೇ ಇದರಲ್ಲಿ ನಮ್ಮ ಸಂಪೂರ್ಣ ಜಾತಕವೇ ಇರುತ್ತದೆ. ಆದ್ದರಿಂದ ಇದನ್ನು ಕಳೆದು ಹೋಗದಂತೆ ಅಥವಾ ಇನ್ಯಾರೋ ದುರಪಯೋಗ ಪಡಿಸಿಕೊಳ್ಳದಂತೆ ನೋಡಿಕೊಳ್ಳಬೇಕು.


  ಇದನ್ನೂ ಓದಿ: Film Release on August 2022: ಆಗಸ್ಟ್ ತಿಂಗಳಲ್ಲಿ ಸಿನಿ ರಸಿಕರಿಗೆ ಭರ್ಜರಿ ಹಬ್ಬ, ರಿಲೀಸ್​ ಆಗ್ತಿದೆ ಬಿಗ್​ ಬಜೆಟ್​ ಸಿನಿಮಾಗಳು


  * ಪೊಲೀಸ್ ಕಂಪ್ಲೇಂಟ್ ಕೊಡಿ


  ಆಧಾರ್ ಕಾರ್ಡ್‌ ಕಳೆದುಹೋದಲ್ಲಿ ನೀವು ಮಾಡಬೇಕಾದ ಮೊದಲ ಕೆಲಸವೆಂದರೆ ಪೊಲೀಸ್ ದೂರು.‌ ಆದರೆ ಪ್ರೇಮ್‌ರಾಜ್‌ ತಮ್ಮ ಗುರುತಿನ ಚೀಟಿಯನ್ನು ಕಳೆದುಕೊಂಡ ಮೇಲೆ ನಿರ್ಲಕ್ಷ್ಯ ಮಾಡಿ ದೂರನ್ನೇ ನೀಡಿರಲಿಲ್ಲ. ಏತನ್ಮಧ್ಯೆ, ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರು ಈ ಘಟನೆಯನ್ನು ಉಲ್ಲೇಖಿಸಿ ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಸಲಹೆ ನೀಡಿದ್ದಾರೆ.


  * UIDAI ಸೌಲಭ್ಯ ಬಳಸಿ ಎಂದ ಅಲೋಕ್‌ ಕುಮಾರ್‌


  ಎಡಿಜಿಪಿ ಅಲೋಕ್‌ ಕುಮಾರ್‌ ಈ ಸ್ಫೋಟ ಪ್ರಕರಣದಿಂದ ನಾವೆಲ್ಲರೂ ಪಾಠ ಕಲಿಯಬೇಕಿದೆ ಎಂದು ಸಾರ್ವಜನಿಕರನ್ನು ಎಚ್ಚರಿಸಿದ್ದು, ನೀವು ಆಧಾರ್‌ ಕಾರ್ಡ್‌ ಕಳೆದುಕೊಂಡರೆ ದಯವಿಟ್ಟು ಎಚ್ಚರ ವಹಿಸಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಆಧಾರ್‌ ಕಾರ್ಡ್‌ ಅನ್ನು ಕಳೆದುಕೊಂಡಾಗ ಎಚ್ಚರ ವಹಿಸಿ. ಆಧಾರ್‌ ದುರ್ಬಳಕೆ ತಡೆಗಟ್ಟಲು ಆಧಾರ್ ಸಂಖ್ಯೆಯನ್ನು ನೀಡುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (Unique Identification Authority of India – UIDAI) ವೆಬ್ಸೈಟ್ನಲ್ಲಿ ಲಭ್ಯವಿರುವ ಆಧಾರ್‌ ಲಾಕ್ ಮತ್ತು ಅನ್ಲಾಕ್ ಮಾಡುವ ಸೌಲಭ್ಯವನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ.


  ಜೊತೆಗೆ ನಿಮ್ಮ ಮನೆ ಬಾಡಿಗೆ ನೀಡುವ ಮುನ್ನ ಬಾಡಿಗೆದಾರರ ಸಂಪೂರ್ಣ ವಿವರಗಳನ್ನು ಪರಿಶೀಲಿಸಿ. ಜೊತೆಗೆ ನಿಮ್ಮ ಮನೆಯ ಅಕ್ಕಪಕ್ಕ ಏನು ನಡೆಯುತ್ತಿದೆ ಎಂಬುದನ್ನು ಕೂಡ ಗಮನಿಸಿ ಎಂದು ಸಾರ್ವಜನಿಕರಿಗೆ ಎಡಿಜಿಪಿ ಅಲೋಕ್‌ ಕುಮಾರ್‌ ಟ್ವೀಟ್‌ ಮೂಲಕ ಎಚ್ಚರಿಕೆ ನೀಡಿದ್ದಾರೆ.


  * ನಕಲಿ ಇ-ಆಧಾರ್ ಕಾರ್ಡ್ ಪಡೆಯಿರಿ


  ನೀವು ಆಧಾರ್ ಕಳೆದುಕೊಂಡರೆ ಆನ್ಲೈನ್ ಮನವಿ ಮೂಲಕ ನಕಲಿ ಕಾರ್ಡ್ ಪ್ರಿಂಟ್ ಪಡೆಯಬಹುದು. ಇದಕ್ಕಾಗಿ ನಾಮಿನಲ್ ಮೊತ್ತ ರೂ. 50 ಪಾವತಿಸಬೇಕಾಗುತ್ತದೆ. ಜೊತೆಗೆ ನಿಮ್ಮ Virtual Identification number ಗೊತ್ತಿರಬೇಕು. ಮೊಬೈಲ್ ನಂಬರ್ ಆಧಾರ್ ನೊಂದಿಗೆ ಲಿಂಕ್ ಆಗಿದ್ದರೆ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ.


  ಆಧಾರ್‌ ಕಾರ್ಡ್‌ ರಕ್ಷಿಸುವ ಜವಾಬ್ದಾರಿ ನಿಮ್ಮದೇ


  ಮೊದಲಿಗೆ ಆಧಾರ್‌ ಕಾರ್ಡ್‌ ಕಳೆದುಹೋಗದಂತೆ ಎಚ್ಚರಿಕೆ ವಹಿಸಿ. ಪ್ರತಿ ಆಧಾರ್‌ ಕಾರ್ಡ್‌ ಹೊಂದಿರುವ ವ್ಯಕ್ತಿಗೂ ಅದರಲ್ಲಿರುವ ಸಂಖ್ಯೆ ಬೇರೆ ಬೇರೆಯಾಗಿರುತ್ತದೆ. ಹೀಗಾಗಿ ನಿಮ್ಮ ಸ್ವಂತ ಡೇಟಾವನ್ನು ರಕ್ಷಿಸುವಲ್ಲಿ ನಿಮ್ಮ ಹೊಣೆಯ ಪಾತ್ರ ದೊಡ್ಡದು. ಬೆಂಗಳೂರು ದಕ್ಷಿಣದ ಸೈಬರ್ ಕೋಶದ ಪೊಲೀಸ್ ಇನ್ಸ್‌ಪೆಕ್ಟರ್ ಅರ್ಜುನ್ ಸಿಆರ್, ಮಾತನಾಡಿ “ಯುಐಡಿಎಐ ಆಧಾರ್ ಕಾರ್ಡ್ ಡೇಟಾದೊಂದಿಗೆ ವ್ಯವಹರಿಸುವ ಏಕೈಕ ಅಧಿಕಾರವಾಗಿದೆ ಮತ್ತು ಅವರು ಮಾತ್ರ ಅದನ್ನು ಪರಿಶೀಲಿಸಬಹುದು. ಆಧಾರ್ ಕಾರ್ಡ್ ಮೂಲವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಪೊಲೀಸ್ ಅಥವಾ ಗುಪ್ತಚರರೊಂದಿಗೆ ಯಾವುದೇ ಚಾನಲ್ ಅಥವಾ ಪೋರ್ಟ್ ಇಲ್ಲ. ಆದ್ದರಿಂದ, ವಂಚಕರು ಸತ್ತವರ ಹೆಸರಿನಲ್ಲಿಯೂ ಆಧಾರ್ ಕಾರ್ಡ್‌ಗಳನ್ನು ಹೊಂದಿರುವ ಹಲವಾರು ಪ್ರಕರಣಗಳನ್ನು ನಾವು ನೋಡುತ್ತೇವೆ. ಇದರಿಂದಾಗಿ ಅದನ್ನು ಕಳೆದುಹೋಗದಂತೆ, ದುರುಪಯೋಗವಾಗದಂತೆ ನೋಡಿಕೊಳ್ಳಿ" ಎಂದಿದ್ದಾರೆ.


  ಡೇಟಾವನ್ನು ರಕ್ಷಿಸುವ ಏಕೈಕ ಮಾರ್ಗ ಜಾಗೃತಿ


  ಯುಐಡಿಎಐನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, “ಆಧಾರ್‌ ಡೇಟಾ ಒಂದು ನಿಧಿ ಮತ್ತು ಇದು ಹೆಚ್ಚು ದುಬಾರಿಯಾಗಿದೆ. ಯಾವುದೇ ವಿಷಯದ ಬಗ್ಗೆ ಗಣನೀಯ ಡೇಟಾವನ್ನು ಹೊಂದಿರುವ ಯಾರಾದರೂ ಅನೇಕರಿಗೆ ಬೇಕಾಗಬಹುದು. ಇತ್ತೀಚಿನ ದಿನಗಳಲ್ಲಿ ಡೇಟಾ ಹ್ಯಾಕ್‌ ಮಾಡಿ ಹಣ ಸಂಪಾದಿಸುವ ಪ್ರಕರಣಗಳು ಹೆಚ್ಚಾಗಿವೆ.


  Work From Home: ಇನ್ಮುಂದೆ ಆಫೀಸ್​ಗೆ ಕರೆದ್ರೆ ಕೇಸ್​ ಹಾಕ್ಬಹುದು, ಇಲ್ಲಿ ವರ್ಕ್ ಫ್ರಮ್​ ಹೋಮ್​ ಮಾಡೋದು ಉದ್ಯೋಗಿಯ ಹಕ್ಕು!


  ನಮ್ಮ ಡೇಟಾವನ್ನು ರಕ್ಷಿಸುವ ಏಕೈಕ ಮಾರ್ಗವೆಂದರೆ ಜಾಗೃತಿ. ಆದರೆ ಇಲ್ಲಿಯವರೆಗೆ ಸರ್ಕಾರ ನಾಗರಿಕರಿಗೆ ಸಾರ್ವತ್ರಿಕ ಗುರುತನ್ನು ರೂಪಿಸುವ ವ್ಯವಸ್ಥೆ ಬಗ್ಗೆ ಹೆಚ್ಚು ಗಮನಹರಿಸಿದೆ ಬಿಟ್ಟರೆ ಡೇಟಾ ಮತ್ತು ಗೌಪ್ಯತೆಯ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ತರಲು ಸಾಧ್ಯವಾಗಿಲ್ಲ” ಎಂದು ಅವರು ವಿವರಿಸಿದರು.


  "ಡೇಟಾ ಕಾಪಾಡಲು ಸರ್ಕಾರದಲ್ಲಿ ಕಠಿಣ ಕ್ರಮಗಳಿಲ್ಲ"


  ಬೆಂಗಳೂರು ಮೂಲದ ಆಧಾರ್ ಸುಧಾರಣೆಗಳ ಕಾರ್ಯಕರ್ತ ವಿನಯ್ ಕುಮಾರ್ ಕೇಂದ್ರವನ್ನು ಈ ವಿಷಯದಲ್ಲಿ ದೂಷಿಸಿದ್ದಾರೆ. "ಆರಂಭದಿಂದಲೂ, ಆಧಾರ್ ಮೂಲಕ ಗುರುತಿನ ಕಳ್ಳತನ ಮತ್ತು ವಂಚನೆಯ ಹಲವಾರು ಪ್ರಕರಣಗಳು ವರದಿಯಾಗಿರುವುದನ್ನು ನಾವು ನೋಡಿದ್ದೇವೆ, ಆದರೂ ಯುಐಡಿಎಐ ತಮ್ಮ ವೆಬ್‌ಸೈಟ್‌ನಲ್ಲಿ 'ಇಲ್ಲಿಯವರೆಗೆ, ಯಾವುದೇ ಆಧಾರ್ ಹೊಂದಿರುವವರು ಅಂತಹ ದುರುಪಯೋಗದ ಖಾತೆಯಲ್ಲಿ ಯಾವುದೇ ಹಣಕಾಸಿನ ನಷ್ಟವನ್ನು ಅನುಭವಿಸಿಲ್ಲ' ಎಂದು ಹೇಳಿಕೊಂಡಿದೆ.


  ಆದರೆ ಇಂಟರ್‌ನೆಟ್‌ನಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಕಳೆದುಕೊಂಡಿರುವವರ ಪ್ರಕರಣ ಹೆಚ್ಚಿದೆ. ಆಧಾರ್‌ ವಿನ್ಯಾಸ ಮತ್ತು ಅನುಷ್ಠಾನವು ದೋಷಪೂರಿತವಾಗಿದೆ. ದುರುಪಯೋಗವನ್ನು ತಡೆಯಲು ನಮಗೆ ಸಾಕಷ್ಟು ಕಾನೂನಿನಡಿ ಸಲಹೆ ಇಲ್ಲ" ಎಂದು ಕುಮಾರ್ ತಿಳಿಸುತ್ತಾರೆ.


  ಸಾಕಷ್ಟು ಡೇಟಾ ರಕ್ಷಣೆ ಮತ್ತು ಗೌಪ್ಯತೆ ರಕ್ಷಣಾ ಕ್ರಮಗಳಿಲ್ಲದೆ ಒಂದೇ ಗುರುತಿನ ಮತ್ತು ದೃಢೀಕರಣ ಕಾರ್ಯವಿಧಾನವನ್ನು ನೀಡುವ ಮೂಲಕ ಸರ್ಕಾರವು ಜನರನ್ನು ದುರ್ಬಲಗೊಳಿಸಿದೆ, ” ಎಂದು ಅವರು ಆರೋಪಿಸಿದರು.


  * ಫೋಟೋಕಾಪಿಯನ್ನು ಹಂಚಿಕೊಳ್ಳಬೇಡಿ.


  “ನಿಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ ಏಕೆಂದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಪರ್ಯಾಯವಾಗಿ, ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ಮಾತ್ರ ಪ್ರದರ್ಶಿಸುವ ಆಧಾರ್ ಅನ್ನು ಬಳಸಿ. ಇದನ್ನು UIDAI ಅಧಿಕೃತ ವೆಬ್‌ಸೈಟ್ https://myaadhaar.uidai.gov.in ನಿಂದ ಡೌನ್‌ಲೋಡ್ ಮಾಡಬಹುದು" ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಹೇಳಿಕೆಯಲ್ಲಿ ತಿಳಿಸಿದೆ. ಯಾವುದೇ ಆಧಾರ್ ಸಂಖ್ಯೆಯ ಅಸ್ತಿತ್ವವನ್ನು https://myaadhaar.uidai.gov.in/verifyAadhaar ನಲ್ಲಿ ಪರಿಶೀಲಿಸಬಹುದು.


  ಆಫ್‌ಲೈನ್‌ನಲ್ಲಿ ಪರಿಶೀಲಿಸಲು, ನೀವು mAadhaar ಮೊಬೈಲ್ ಅಪ್ಲಿಕೇಶನ್‌ನಲ್ಲಿ QR ಕೋಡ್ ಸ್ಕ್ಯಾನರ್ ಬಳಸಿ ಇ-ಆಧಾರ್ ಅಥವಾ ಆಧಾರ್ ಪತ್ರ ಅಥವಾ ಆಧಾರ್ PVC ಕಾರ್ಡ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಎಂದು ಅದು ಹೇಳಿದೆ.


  * UIDAI ನಿಂದ ಮಾನ್ಯವಾದ ಬಳಕೆದಾರ ಪರವಾನಗಿ ಬಗ್ಗೆ ಇರಲಿ ಎಚ್ಚರ


  ಯುಐಡಿಎಐನಿಂದ ಬಳಕೆದಾರರ ಪರವಾನಗಿ ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಆಧಾರ್ ಅನ್ನು ಬಳಸಬಹುದು. ಹೋಟೆಲ್‌ಗಳು ಅಥವಾ ಫಿಲ್ಮ್ ಹಾಲ್‌ಗಳಂತಹ ಪರವಾನಗಿ ಪಡೆಯದ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್‌ನ ಪ್ರತಿಗಳನ್ನು ಸಂಗ್ರಹಿಸಲು ಅಥವಾ ಇರಿಸಿಕೊಳ್ಳಲು ಅನುಮತಿಸುವುದಿಲ್ಲ. ಇದು ಆಧಾರ್ ಕಾಯಿದೆ 2016 ರ ಅಡಿಯಲ್ಲಿ ಅಪರಾಧವಾಗಿದೆ. ಆದಾಗ್ಯೂ ನಿಮ್ಮ ಆಧಾರ್ ಕಾರ್ಡ್ ಅನ್ನು ನೋಡಲು ಅಥವಾ ನಿಮ್ಮ ಆಧಾರ್ ಕಾರ್ಡ್‌ನ ಫೋಟೊಕಾಪಿಯನ್ನು ಕೇಳಿದರೆ, ಇಲ್ಲಿ ನೀವು ತಕ್ಷಣ ಅವರು UIDAI ನಿಂದ ಮಾನ್ಯವಾದ ಬಳಕೆದಾರ ಪರವಾನಗಿಯನ್ನು ಹೊಂದಿದ್ದಾರೆಯೇ ಎಂದು ಪರಿಶೀಲಿಸಿ.


  ಇದನ್ನೂ ಓದಿ: ವೋಟರ್​ ಐಡಿಗೆ ಆಧಾರ್​ ಕಾರ್ಡ್​ ಲಿಂಕ್​ ಮಾಡಲು ಈ ಸುಲಭ ವಿಧಾನ ಅನುಸರಿಸಿ


  ಇಂಟರ್ನೆಟ್ ಕೆಫೆಗಳಲ್ಲಿ ಸಾರ್ವಜನಿಕ ಕಂಪ್ಯೂಟರ್‌ಗಳಲ್ಲಿ ಇ-ಆಧಾರ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡುವುದನ್ನು ತಪ್ಪಿಸುವಂತೆ ಸಚಿವಾಲಯವು ಜನರನ್ನು ಕೋರಿದೆ. ಒಂದು ವೇಳೆ ಡೌನ್‌ಲೋಡ್‌ ಮಾಡಿದರೂ ಸಹ ಎಲ್ಲಾ ಹಿಸ್ಟರಿಯನ್ನು ಅಳಿಸಿ ಹಾಕುವಂತೆ ಸಚಿವಾಲಯ ಹೇಳಿದೆ.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು