• Home
  • »
  • News
  • »
  • explained
  • »
  • Explained: ಮಕ್ಕಳಿಗೆ ಪಾಠದೊಂದಿಗೆ ಆಟವೂ ಇರಬೇಕಾ? ಆರು ವರ್ಷದೊಳಗಿನ ಮಕ್ಕಳ ಶಿಕ್ಷಣ ಹೇಗಿರಬೇಕು?

Explained: ಮಕ್ಕಳಿಗೆ ಪಾಠದೊಂದಿಗೆ ಆಟವೂ ಇರಬೇಕಾ? ಆರು ವರ್ಷದೊಳಗಿನ ಮಕ್ಕಳ ಶಿಕ್ಷಣ ಹೇಗಿರಬೇಕು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಡಿಮೆ ಆದಾಯದ ಕುಟುಂಬಗಳಿಗೆ ನೀತಿಯು ಆದ್ಯತೆಯನ್ನು ನೀಡುತ್ತದೆ. ಗುಣಮಟ್ಟದ ಬಾಲ್ಯದ ಆರೈಕೆ ಹಾಗೂ ಉತ್ತಮ ಶಿಕ್ಷಣವನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಮಕ್ಕಳಿಗೆ ಶಾಲೆಗಳು ಒದಗಿಸಿದರೆ ಅದು ಅವರಿಗೆ ಅತ್ಯುತ್ತಮ ಪ್ರಯೋಜವನ್ನು ಒದಗಿಸಿದಂತೆ ಎಂದು ದಾಖಲೆ ಉಲ್ಲೇಖಿಸಿದೆ.

ಮುಂದೆ ಓದಿ ...
  • Share this:

ಹೊಸ ಶಿಕ್ಷಣ ನೀತಿ 2020 ಅನ್ನು ಭಾರತ ಸರಕಾರ (Indian Government) ಘೋಷಿಸಿದಾಗ ತಜ್ಞರು ನೀತಿಯ ಅರ್ಹತೆ ಹಾಗೂ ದೋಷಗಳ ಕುರಿತು ಚರ್ಚಿಸಿದರು. ಶಿಕ್ಷಣ ಮಾದರಿಯಲ್ಲಿ ಬದಲಾವಣೆಯನ್ನು ಅಳವಡಿಸಲು ಈ ನೀತಿ ದಾಖಲೆಯನ್ನು ಹೊಂದಿಸಲಾಗಿದೆ. ಬಾಲ್ಯದ ಆರೈಕೆ ಹಾಗೂ ಶಿಕ್ಷಣದ (Education) ಪ್ರಾಮುಖ್ಯತೆಯನ್ನು ಡಾಕ್ಯುಮೆಂಟ್ ಪ್ರಚೋದಿಸುತ್ತದೆ. ಕಡಿಮೆ ಆದಾಯದ ಕುಟುಂಬಗಳಿಗೆ ನೀತಿಯು ಆದ್ಯತೆಯನ್ನು ನೀಡುತ್ತದೆ. ಗುಣಮಟ್ಟದ ಬಾಲ್ಯದ ಆರೈಕೆ (Early Childhood Care) ಹಾಗೂ ಉತ್ತಮ ಶಿಕ್ಷಣವನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಮಕ್ಕಳಿಗೆ ಶಾಲೆಗಳು (School) ಒದಗಿಸಿದರೆ ಅದು ಅವರಿಗೆ ಅತ್ಯುತ್ತಮ ಪ್ರಯೋಜವನ್ನು ಒದಗಿಸಿದಂತೆ ಎಂದು ದಾಖಲೆ ಉಲ್ಲೇಖಿಸಿದೆ.


ಬಾಲ್ಯದ ಆರೈಕೆ ಮತ್ತು ಶಿಕ್ಷಣ ನೀತಿ (ECCE)
ರಾಷ್ಟ್ರೀಯ ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ (ECCE) ನೀತಿಯನ್ನು ಅಳವಡಿಸಿಕೊಳ್ಳಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತೆಗೆದುಕೊಂಡ 2013 ರ ನಿರ್ಣಯದ ಕೆಲವು ವರ್ಷಗಳ ನಂತರ ಈ ಹೇಳಿಕೆಯ ಪ್ರಸ್ತಾವನೆಯಾಗಿದೆ. ಈ 2013 ರ ನಿರ್ಣಯದೊಂದಿಗೆ, ಸರ್ಕಾರವು 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲಾ ಮಕ್ಕಳ ಅತ್ಯುತ್ತಮ ಅಭಿವೃದ್ಧಿ ಮತ್ತು ಸಕ್ರಿಯ ಕಲಿಕಾ ಸಾಮರ್ಥ್ಯವನ್ನು ಉತ್ತೇಜಿಸುವ ತೀರ್ಮಾನವನ್ನು ತೆಗೆದುಕೊಂಡಿತು.


ಮೊದಲ ಆರು ವರ್ಷಗಳ ಅನುಭವವು ಮಗುವಿನ ಸಂಪೂರ್ಣ ಜೀವನ ಪಥವನ್ನು ಮತ್ತು ಕಲಿಕೆ, ಶಿಕ್ಷಣ, ಸಾಮಾಜಿಕ-ಭಾವನಾತ್ಮಕ ಬೆಳವಣಿಗೆ, ದೈಹಿಕ ಬೆಳವಣಿಗೆ ಇತ್ಯಾದಿಗಳನ್ನು ಒಳಗೊಂಡಂತೆ ಅದರ ಎಲ್ಲಾ ಅಂಶಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಮಗುವಿನ ಬೆಳವಣಿಗೆಯಲ್ಲಿ ಈ ಹಂತವು ಹೆಚ್ಚು ನಿರ್ಣಾಯಕವಾಗಿರುವುದರಿಂದ ಅಂಗನವಾಡಿ ಹಾಗೂ ನರ್ಸರಿ ಹಂತಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಬಾಲ್ಯದ ಆರೈಕೆಯನ್ನು ಒದಗಿಸಲು NEP ಶಿಕ್ಷಕರಿಗೆ ಚೌಕಟ್ಟನ್ನು ರೂಪಿಸುತ್ತದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದವರು ಮಗುವಿನ ಶಿಕ್ಷಣ ಹಾಗೂ ಆರೈಕೆಯಲ್ಲಿ ಹೇಗೆ ಸಕ್ರಿಯ ಪಾಲುದಾರರಾಗಬಹುದು ಎಂಬುದಕ್ಕೆ ನೀತಿಯು ಮಾರ್ಗದರ್ಶನ ನೀಡುತ್ತದೆ.


ಆರಂಭಿಕ ಬಾಲ್ಯದ ಕಲಿಕೆ ಎಂದರೇನು?
ಬೆಂಗಳೂರು ಮೂಲದ ಲಾಭೋದ್ದೇಶವಿಲ್ಲದ ಕೀ ಎಜುಕೇಶನ್ ಫೌಂಡೇಶನ್ (ಕೆಇಎಫ್) ಕರ್ನಾಟಕದಲ್ಲಿ 65 ಬಜೆಟ್ ಶುಲ್ಕದ ಪ್ರಿಸ್ಕೂಲ್‌ಗಳಿಗಾಗಿ ತನ್ನ ಪ್ರಮುಖ ಶಾಲಾ ಸಿದ್ಧತೆ ಕಾರ್ಯಕ್ರಮವನ್ನು ನಡೆಸುತ್ತದೆ. ಈ ಯೋಜನೆಯ ಮೂಲಕ ಬಜೆಟ್‌ ನೆಲೆಗಟ್ಟಿನಲ್ಲಿರುವ ಪ್ರಿಸ್ಕೂಲ್ (ನರ್ಸರಿ) ಗಳೊಂದಿಗೆ ಕೈ ಜೋಡಿಸಿ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಮಕ್ಕಳು ಪ್ರಿಸ್ಕೂಲ್‌ಗೆ ದಾಖಲಾಗಲು ನೆರವನ್ನು ನೀಡುತ್ತಾರೆ. ಆರಂಭಿಕ ಶಿಕ್ಷಣ ನೀತಿಯಲ್ಲಿ ಮಗುವಿಗೆ ಆಯ್ಕೆಯನ್ನು ನೀಡುವುದು ಮುಖ್ಯವಾಗಿದೆ ಎಂಬುದು ಕೀ ಎಜ್ಯುಕೇಶನ್ ಫೌಂಡೇಶನ್‌ನ ಸಹ-ಸ್ಥಾಪಕಿ ಶ್ವೇತಾ ಅವರ ಮಾತಾಗಿದೆ.


ಇದನ್ನೂ ಓದಿ: Baby Care: ನಿಮ್ಮ ಮಗು ಚೆನ್ನಾಗಿ ಊಟ ಮಾಡುತ್ತಿಲ್ಲವೇ? ಇಲ್ಲಿದೆ ಸಲಹೆ


ಮಕ್ಕಳಿಗೆ ಆಟದ ಮೂಲಕ ಸ್ವಾತಂತ್ರ್ಯ ಮತ್ತು ಆಯ್ಕೆಯನ್ನು ಒದಗಿಸುವುದು, ವಿಷಯಗಳನ್ನು ಕಂಡುಹಿಡಿಯಲು ಮತ್ತು ಅರಿವಿನ ಸಾಮರ್ಥ್ಯಗಳನ್ನು ನಿರ್ಮಿಸಲು ಅವರಿಗೆ ಅತ್ಯಗತ್ಯ ಅಂಶಗಳಾಗಿವೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ ಎಂಬುದು ಶ್ವೇತಾ ಅವರ ಮಾತಾಗಿದೆ. ನಾವು ಕಲಿಸುವ ಪರಿಭಾಷೆಯಲ್ಲಿ ಮಗು ಅನುಭವವನ್ನು ಪಡೆದುಕೊಳ್ಳುತ್ತದೆ. ಆ ಅನುಭವದ ಮೂಲಕ ಮಗು ಏನನ್ನಾದರೂ ಕಂಡುಕೊಳ್ಳಬೇಕು. ಇದನ್ನು ಅನುಸರಿಸಿ, ಮಗು ಈ ಅನುಭವವನ್ನು ಚಟುವಟಿಕೆಯಲ್ಲಿ ಅನ್ವಯಿಸುತ್ತದೆ ಮತ್ತು ಅಂತಿಮವಾಗಿ, ಮಗು ಅದನ್ನು ಅಭ್ಯಾಸ ಮಾಡುತ್ತದೆ.


ಆದರೆ, ಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆಯು ಅನುಭವ ಹಾಗೂ ಚಟುವಟಿಕೆಯ ಅಂಶಗಳನ್ನು ಮರೆತುಬಿಟ್ಟಿದೆ. ನೇರವಾಗಿ ಮಕ್ಕಳಿಗೆ ಹೋಮ್‌ವರ್ಕ್‌ಗಳಂತಹ ಅಭ್ಯಾಸಗಳನ್ನು ಮಾಡಿಸುತ್ತಾರೆ, ಹೀಗಾದಾಗ ಮಗು ಕಲಿತಿದೆ ಎಂಬ ಭಾವನೆ ಮೂಡುತ್ತದೆ. ಇದರ ಬದಲಿಗೆ ತರಗತಿ ಸಮಯವನ್ನು 100% ಆಟದಲ್ಲಿ ತೊಡಗಿಸುವ ಮೂಲಕ ಅಂದರೆ ಪಠ್ಯ ವಿಧಾನವನ್ನೇ ಆಟದ ಮೂಲಕ ಕಲಿಸುವುದರಿಂದ ಮಕ್ಕಳು ಓದಿನತ್ತ ಆಸಕ್ತರಾಗುತ್ತಾರೆ ಎಂಬುದು ಅವರ ಹೇಳಿಕೆಯಾಗಿದೆ. ಮಕ್ಕಳು ಶಿಸ್ತು ಕಲಿಯಲು ಶಾಲೆಗೆ ತೆರಳುತ್ತಾರೆ ಎಂಬುದು ಪೋಷಕರ ಭಾವನೆಯಾಗಿದೆ ಇದು ಮಕ್ಕಳಿಗೆ ಇರಿಸು ಮುರಿಸನ್ನು ತರಿಸುತ್ತದೆ ಎಂಬುದು ಶ್ವೇತಾ ಅಭಿಪ್ರಾಯವಾಗಿದೆ.


ಮಗುವಿನ ಬೆಳವಣಿಗೆಗೆ ಯಾವುದು ಅವಶ್ಯಕ?
ಮಗುವು 6 ವರ್ಷಕ್ಕಿಂತ ಮೊದಲೇ ತನ್ನ ಸಂಪೂರ್ಣ ದೇಹವನ್ನು ಚಲಿಸುವ ಹಾಗೂ ಬಳಸುವ ಮೂಲಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಇಲ್ಲದಿದ್ದರೆ ದೈಹಿಕ ಬೆಳವಣಿಗೆಯುಂಟಾಗುವುದಿಲ್ಲ ಎಂಬುದು ತಜ್ಞರ ಹೇಳಿಕೆಯಾಗಿದೆ ಎಂದು ಶ್ವೇತಾ ತಿಳಿಸುತ್ತಾರೆ. ಹಾಗಾಗಿ ಬಾಲ್ಯದ ಕಾಳಜಿ ಹಾಗೂ ಶಿಕ್ಷಣ ಮಕ್ಕಳಿಗೆ 6 ವರ್ಷಕ್ಕಿಂತ ಮೊದಲೇ ಉತ್ತಮವಾಗಿ ದೊರೆಯಬೇಕು ಎಂಬುದು ಇಲ್ಲಿ ಹೆಚ್ಚು ಪ್ರಶಸ್ತ ಮಾತಾಗಿದೆ.


ಯಾವುದೇ ವಿಷಯವನ್ನು ಮಕ್ಕಳಿಗೆ ತಿಳಿಸುವುದಕ್ಕೆ ಪರಿಕರಗಳನ್ನು ಬಳಸುವುದು, ಅವರಿಗೆ ವಿಷಯದ ಅರ್ಥೈಸುವಿಕೆಯನ್ನು ಚೆನ್ನಾಗಿ ಮಾಡುತ್ತದೆ ಎಂಬುದು ಶ್ವೇತಾ ಅವರ ಹೇಳಿಕೆಯಾಗಿದೆ. ಸಂಖ್ಯೆಯನ್ನು ಎಣಿಸುವ ಸಮಯಯದಲ್ಲಿ ಅವರಿಗೆ ಚಿಕ್ಕ ಬ್ಲಾಕ್ ಇಲ್ಲವೇ ಕಲ್ಲುಗಳನ್ನು ನೀಡಿದಾಗ ಮಗು ಅವುಗಳನ್ನು ಸ್ಪರ್ಶಿಸುವ ಮೂಲಕ ಎಣಿಕೆ ಮಾಡುತ್ತದೆ ಇದು ಹೆಚ್ಚು ಆಳವಾಗಿ ಅವರ ಮನದಲ್ಲಿ ಪರಿಣಾಮವನ್ನು ಬೀರುತ್ತದೆ.


ಶಿಕ್ಷಕರು ಯಾವುದೇ ವಿಷಯವನ್ನು ಭೌತಿಕವಾಗಿ ವಿವರಿಸಲು ಕಥೆ, ಕವಿತೆ ಹಾಗೂ ಸಂಭಾಷಣೆಗಳನ್ನು ಬಳಸಿಕೊಳ್ಳಬಹುದು. ಮಗುವಿಗೆ ಆರಂಭ ಶಿಕ್ಷಣವನ್ನು ತಿಳಿಸುವಾಗ ಸರಳವಾದ ರೀತಿಯಲ್ಲಿ ಅರ್ಥಪಡಿಸಬೇಕು. ಆದಷ್ಟು ಸಂಭಾಷಣೆಯ ಮೂಲಕ ಅವರಿಗೆ ವಿವರವಾಗಿ ವಿಷಯವನ್ನು ತಿಳಿಯಪಡಿಸಿ. ಮೋಜಿನ ರೀತಿಯಲ್ಲಿ ಪಾಠವನ್ನು ಕಲಿಸಿ ಎಂಬುದು ಶ್ವೇತಾ ಅವರ ಅಭಿಪ್ರಾಯವಾಗಿದೆ.


ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರವೇನು?
ಬಾಲ್ಯದ ಪೋಷಣೆ ಹಾಗೂ ಶಿಕ್ಷಣದ ವಿಷಯದಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಕ್ಕಳೊಂದಿಗೆ ಅವರು ನಡೆಸುವ ಸಂವಾದ, ಮನೆಯಲ್ಲಿ ಮಕ್ಕಳಿಗೆ ದೊರೆಯುವ ಬೆಂಬಲ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪೋಷಕರು ಮಕ್ಕಳಿಗೆ ಮನೆಯಲ್ಲಿ ಹೇಗೆ ವಿಷಯವನ್ನು ಬೋಧಿಸುತ್ತಾರೆ ಹಾಗೂ ಮಕ್ಕಳನ್ನು ಹೇಗೆ ಬೆಂಬಲಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ.


ಇದನ್ನೂ ಓದಿ:  Explained: ಕೃತಕ ಬುದ್ಧಿಮತ್ತೆಯು ಭವಿಷ್ಯದಲ್ಲಿ ಮಾನವನ ಕ್ರಿಯಾತ್ಮಕತೆ ಮೇಲೆ ಪರಿಣಾಮ ಬೀರಲಿದ್ಯಾ?


ಶ್ರೀಮಂತ ಕುಟುಂಬದ ಮಕ್ಕಳು ಗುಣಮಟ್ಟದ ಡೇಕೇರ್‌ಗಳಲ್ಲಿ ದಾಖಲಾತಿ ಪಡೆಯುತ್ತಾರೆ ಹಾಗೂ ಮಕ್ಕಳ ಪೋಷಕರು ಕೂಡ ಮಕ್ಕಳೊಂದಿಗೆ ಶಾಲಾ ಚಟುವಟಿಕೆಗಳಲ್ಲಿ ಬೆರೆಯುತ್ತಾರೆ. ಆದರೆ ಮಕ್ಕಳ ಪೋಷಕರು ಅನಕ್ಷರಸ್ಥರಾಗಿದ್ದು ಆರ್ಥಿಕವಾಗಿ ಹಿಂದುಳಿದವರಾಗಿದ್ದರೆ ಮಕ್ಕಳು ಇದರಿಂದ ವಂಚಿತರಾಗುತ್ತಾರೆ. ಈ ಸಮಯದಲ್ಲಿ ಅಂಗನವಾಡಿಯಂತಹ ಉಚಿತ ಶಿಕ್ಷಣ ಸಂಸ್ಥೆಗಳು ಮಕ್ಕಳ ಬಾಲ್ಯದ ಶಿಕ್ಷಣ ಹಾಗೂ ಪೋಷಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.


ನಿಯಮಿತವಾಗಿ ಓದುವುದು, ಆಟವಾಡುವುದು ಮತ್ತು ಮಗುವಿನೊಂದಿಗೆ ಸಂಭಾಷಣೆ ನಡೆಸುವುದು, ಮನೆಯಲ್ಲಿ ಭಾವನಾತ್ಮಕವಾಗಿ ಸುರಕ್ಷಿತ ವಾತಾವರಣವನ್ನು ನಿರ್ಮಿಸುವುದು ಅಥವಾ ಸಾಮಾಜಿಕ ಅಭಿವೃದ್ಧಿಯಲ್ಲಿ ಪೋಷಕರು ಮೂಲಭೂತ ಪಾತ್ರವನ್ನು ವಹಿಸುತ್ತಾರೆ. ಇದಿಷ್ಟೇ ಅಲ್ಲದೆ ಮಕ್ಕಳ ನೈರ್ಮಲ್ಯದ ವಿಷಯದಲ್ಲೂ ಮನೆಯೇ ಮೊದಲ ಪಾಠಶಾಲೆಯಾಗಿರುತ್ತದೆ ಹಾಗೂ ಪೋಷಕರು ಮಕ್ಕಳಿಗೆ ಸ್ವಚ್ಛತೆಯ ಪಾಠವನ್ನು ತಿಳಿಸಿಕೊಡಬೇಕಾಗುತ್ತದೆ.


ಮಗುವಿನ ಮನೆಯೇ ಅದಕ್ಕೆ ಆಟದ ಮೈದಾನವಾಗಿರುತ್ತದೆ. ಅಡುಗೆಮನೆಯಲ್ಲಿರುವ ಸುರಕ್ಷಿತ ಪರಿಕರಗಳನ್ನೇ ಮಗುವಿಗೆ ಆಟವಾಡಲು ನೀಡಬಹುದು. ಹೀಗೆ ಮಕ್ಕಳನ್ನು ಹೆಚ್ಚಾಗಿ ಆಟದಲ್ಲಿ ತೊಡಗಿಸಿಕೊಳ್ಳಿ. ಆರಂಭಿಕ ಕಲಿಕೆಯ ಸಮಯದಲ್ಲಿ ಮಗುವಿನ ಅರಿವಿನ ಬೆಳವಣಿಗೆಗೆ ವಿಸ್ತಾರವಾದ ನೆಲೆಗಟ್ಟನ್ನು ಒದಗಿಸುವಂತಿರಬೇಕು. ಸಾಮಾಜಿಕ-ಭಾವನಾತ್ಮಕ ಬೆಳವಣಿಗೆಗೂ ಕಲಿಕೆಯ ಸಮಯದ ಚಟುವಟಿಕೆ ಹೆಚ್ಚು ಉಪಯುಕ್ತವಾದುದು.


ಅಂಗನವಾಡಿ ಕಾರ್ಯಕರ್ತೆಯರ ಪಾತ್ರ
ಮಗುವಿನ ಆರಂಭಿಕ ಶಿಕ್ಷಣ ಹಂತದಲ್ಲಿ ಅಂಗನವಾಡಿಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಇಂದು ಅಂಗನವಾಡಿಗಳು ಉಚಿತ ಶಿಕ್ಷಣ ಹಾಗೂ ಊಟೋಪಚಾರ ವ್ಯವಸ್ಥೆಯನ್ನು ಮಾಡುತ್ತಿವೆ, ಇದರಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳು ಕೂಡ ಆರಂಭಿಕ ಶಿಕ್ಷಣವನ್ನು ಪಡೆದುಕೊಳ್ಳಬಹುದಾಗಿದೆ.


ಭಾರತವು ಒಂದು ದಶಲಕ್ಷಕ್ಕೂ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಹೊಂದಿದೆ. ಹಿಂದುಳಿದ ಸಮುದಾಯಗಳೊಂದಿಗೆ ಅಗತ್ಯ ವ್ಯಾಪ್ತಿಯನ್ನು ಹೊಂದಿರುವ ಸಂಪನ್ಮೂಲವನ್ನು ಈ ಅಂಗನವಾಡಿಗಳು ಹೊಂದಿವೆ. ಅಂಗನವಾಡಿ ಕಾರ್ಯಕರ್ತೆಯರು ಪ್ರತೀ ವರ್ಷ ಲಕ್ಷಾಂತರ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖರಾಗಿದ್ದಾರೆ. ಮಕ್ಕಳ ಬಾಲ್ಯದ ಪೋಷಣೆ ಹಾಗೂ ಶಿಕ್ಷಣದ ವಿಷಯದಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಕಾರ್ಯಕರ್ತೆಯರ ಪಾತ್ರ ಹಿರಿದಾದುದು.


ಇದನ್ನೂ ಓದಿ:  Cancer from Mobile: ಕುಂತ್ರೂ, ನಿಂತ್ರೂ ಮಲಗಿದ್ರೂ ಮೊಬೈಲ್ ನೋಡ್ತೀರಾ? ಹಾಗಿದ್ರೆ ಕ್ಯಾನ್ಸರ್‌ ಬರಬಹುದು ಹುಷಾರ್!


ಲಕ್ಷಾಂತರ ಭಾರತೀಯ ಮಕ್ಕಳಿಗೆ ಕಲಿಕೆಯ ಅವಕಾಶಗಳನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಲಾಭರಹಿತ ಪ್ರತಿಷ್ಠಾನವಾದ EkStep ಫೌಂಡೇಶನ್ ತಿಳಿಸುವಂತೆ ಕಿರಿಯರ ಬಗ್ಗೆ ಸಾಮಾಜಿಕ ಜವಬ್ದಾರಿಯನ್ನು ಹೊಂದಿದಾಗ ಮಗುವಿನ ಬಾಲ್ಯದ ಪೋಷಣೆ ಹಾಗೂ ಶಿಕ್ಷಣದ ಅಂಶಗಳತ್ತ ಗಮನಹರಿಸುವುದು ಕಡ್ಡಾಯವಾಗಿದೆ. ಮಗುವಿನ ಸಂಪೂರ್ಣ ಯೋಗಕ್ಷೇಮ ಹಾಗೂ ಬಾಲ್ಯದ ಜೀವನವನ್ನು ಉತ್ತಮಗೊಳಿಸಲು ಅಂಗನವಾಡಿ ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ.

Published by:Ashwini Prabhu
First published: