Explainer: ಫೈಜರ್ ಲಸಿಕೆಯ 2ನೇ ಡೋಸನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು.. ಏಕೆ ಗೊತ್ತೆ?

ಪುಲೆಂದ್ರನ್ ತಿಳಿಸಿರುವಂತೆ ಎರಡನೆಯ ಡೋಸ್ ಶಕ್ತಿಯುತ ಹಾಗೂ ಪ್ರಯೋಜನಕಾರಿ ಎಂದು ಗುರುತಿಸಲಾಗಿದ್ದು ಇದು ಪ್ರತಿಕಾಯದ ಮಟ್ಟದಲ್ಲಿ ತೀವ್ರ ಏರಿಕೆಯನ್ನು ಕಂಡುಕೊಂಡಿದೆ.

ಇಸ್ರೇಲ್​ನಲ್ಲಿ ಲಸಿಕೆ ಪಡೆಯುತ್ತಿರುವ ಜನ.

ಇಸ್ರೇಲ್​ನಲ್ಲಿ ಲಸಿಕೆ ಪಡೆಯುತ್ತಿರುವ ಜನ.

  • Share this:

    ಫೈಜರ್ ಲಸಿಕೆಯ ಎರಡನೇ ಡೋಸ್ ಅನ್ನು ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕೆಂದು ಸ್ಟ್ಯಾನ್‌ಫೋರ್ಡ್ ಮೆಡಿಸಿನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಸ್ಟ್ಯಾನ್‌ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್ ಹೊಸ ಅಧ್ಯಯನವೊಂದನ್ನು ಮಾಡಿದ್ದು, ಈ ಅಧ್ಯಯನದ ಪ್ರಕಾರ ಕೋವಿಡ್ – 19 ಲಸಿಕೆಯ ಎರಡನೇ ಡೋಸ್ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ಶಕ್ತಿಯು ಅಂಶಗಳನ್ನು ಒಳಗೊಂಡಿದ್ದು ಇದು ವೈರಸ್‌ನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲಿದೆ ಎಂದು ತಿಳಿಸಿದೆ. ಹಾಗಾಗಿ ಪ್ರತಿಯೊಬ್ಬರೂ ಲಸಿಕೆಯ ಎರಡನೇ ಡೋಸ್ ಅನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕೆಂದು ಸ್ಟ್ಯಾನ್‌ಫೋರ್ಡ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.


    ನೇಚರ್ ಹೆಸರಿನ ನಿಯತಕಾಲಿಕೆಯಲ್ಲಿ ಈ ಅಧ್ಯಯನವನ್ನು ಪ್ರಸ್ತುತಪಡಿಸಲಾಗಿದ್ದು, ಸ್ಟ್ಯಾನ್‌ಫೋರ್ಡ್ ಮೆಡಿಸಿನ್ 2020 ರಲ್ಲಿ ಜನರಿಗೆ ನೀಡಿರುವ ಫಿಜರ್ ಲಸಿಕೆಯ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಅಧ್ಯಯನ ನಡೆಸಿದ್ದು ಈ ಮಾಹಿತಿ ತಿಳಿಸಿದೆ. ಲಸಿಕೆ ಪಡೆದುಕೊಂಡ ವ್ಯಕ್ತಿಗಳ ರಕ್ತದ ಮಾದರಿಗಳನ್ನು ಸಂಶೋಧಕರು ವಿಶ್ಲೇಷಣೆ ನಡಿಸಿದ್ದು ಪ್ರತಿಕಾಯಗಳ ಎಣಿಕೆಯನ್ನು ಮಾಡಿದ್ದಾರೆ ಹಾಗೂ ಪ್ರತಿರಕ್ಷಣೆಯನ್ನು ಸಂಕೇತಿಸುವ ಪ್ರೊಟೀನ್ ಮಟ್ಟವನ್ನು ಅಳತೆ ಮಾಡಿದ್ದಾರೆ. 242,479 ಪ್ರತ್ಯೇಕ ಪ್ರತಿರಕ್ಷಣಾ ಕೋಶಗಳ ವಿಧ ಮತ್ತು ಸ್ಥಿತಿಯ ಜೀನೋಮ್‌ನಲ್ಲಿನ ಪ್ರತಿಯೊಂದು ಜೀನ್‌ನ ಅಭಿವ್ಯಕ್ತಿಯನ್ನು ವಿವರಿಸಿದರು.


    ಹಿರಿಯ ಲೇಖಕರಲ್ಲಿ ಒಬ್ಬರಾದ ಸ್ಟ್ಯಾನ್‌ಫೋರ್ಡ್ ಮೆಡಿಸಿನ್ ಪ್ರೊಫೆಸರ್ ಬಾಲಿ ಪುಲೆಂದ್ರನ್ ಮತ್ತು ಅವರ ಸಹೋದ್ಯೋಗಿಗಳು ಲಸಿಕೆಯಿಂದ ಪ್ರಭಾವಿತವಾದ ಎಲ್ಲಾ ರೋಗನಿರೋಧಕ ಕೋಶ ಪ್ರಕಾರಗಳ ಚಟುವಟಿಕೆಯನ್ನು ನಿರ್ಣಯಿಸಿದ್ದಾರೆ: ಅವುಗಳ ಸಂಖ್ಯೆ, ಅವುಗಳ ಚಟುವಟಿಕೆ ಮಟ್ಟ, ಜೀನ್‌ಗಳು ಹಾಗೂ ಇನಾಕ್ಯುಲೇಶನ್ ಆಧರಿಸಿ ಅವುಗಳು ತಯಾರಿಸುವ ಹಾಗೂ ಸ್ರವಿಸುವ ಪ್ರೊಟೀನ್‌ಗಳು ಮತ್ತು ಚಯಾಪಚಯ ಕ್ರಿಯೆಗಳು ಹೀಗೆ ಪ್ರತಿಯೊಂದು ವಿವರಗಳನ್ನು ದಾಖಲಿಸಿದ್ದಾರೆ.


    ಇದನ್ನೂ ಓದಿ: Explained: ಮತ್ತೆ ಭುಗಿಲೆದ್ದ ಅಸ್ಸಾಂ-ಮಿಜೋರಾಂ ಗಡಿ ವಿವಾದ: ಈಗ ನಡೆಯುತ್ತಿರೋ ಎಲ್ಲಾ ಗಲಾಟೆಗೆ ಬ್ರಿಟಿಷರೇ ಕಾರಣವಾ?

    ಮೊದಲ ಹಾಗೂ ಎರಡನೇ ಲಸಿಕೆ ಪಡೆದ 56 ಆರೋಗ್ಯವಂತ ಭಾಗವಹಿಸುವವರನ್ನು ತಂಡವು ಆಯ್ಕೆಮಾಡಿತು ಹಾಗೂ ಲಸಿಕೆಯ ಮುನ್ನ, ನಂತರದ ರಕ್ತದ ಮಾದರಿಗಳನ್ನು ಸಂಗ್ರಹಿಸಿತು. ನಿರೀಕ್ಷಿಸಿದ ಹಾಗೆ ಲಸಿಕೆಯ ಮೊದಲ ಡೋಸ್ SARS-CoV-2 ನಿರ್ದಿಷ್ಟ ಪ್ರತಿಕಾಯ ಮಟ್ಟವನ್ನು ಹೆಚ್ಚಿಸಿರುವುದು ತಿಳಿದು ಬಂದಿದ್ದು ಎರಡನೆಯ ಡೋಸ್‌ಗಿಂತ ಇದು ಹೆಚ್ಚು ಪ್ರಮಾಣದಲ್ಲಿರಲಿಲ್ಲ. ಮೊದಲ ಡೋಸ್ ಮಾಡದೇ ಇರುವ ಅನೇಕ ಕೆಲಸಗಳನ್ನು ಎರಡನೆಯ ಡೋಸ್ ಮಾಡಿದೆ ಹಾಗೂ ಎರಡನೆಯ ಡೋಸ್‌ನಲ್ಲಿ ಪ್ರತಿಕಾಯಗಳ ಮಟ್ಟ ಮೊದಲನೆಯದಕ್ಕಿಂತ ಹೆಚ್ಚಾಗಿದೆ ಎಂಬುದು ತಿಳಿದುಬಂದಿದೆ.


    ಪುಲೆಂದ್ರನ್ ತಿಳಿಸಿರುವಂತೆ ಎರಡನೆಯ ಡೋಸ್ ಶಕ್ತಿಯುತ ಹಾಗೂ ಪ್ರಯೋಜನಕಾರಿ ಎಂದು ಗುರುತಿಸಲಾಗಿದ್ದು ಇದು ಪ್ರತಿಕಾಯದ ಮಟ್ಟದಲ್ಲಿ ತೀವ್ರ ಏರಿಕೆಯನ್ನು ಕಂಡುಕೊಂಡಿದೆ. ರೋಗನಿರೋಧಕ ಸ್ತರದಲ್ಲೂ ಎರಡನೆಯ ಡೋಸ್ ಹೆಚ್ಚಳವನ್ನು ಪಡೆದಿದೆ ಎಂದು ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.


    ಲಸಿಕೆಯಲ್ಲಿ ಎರಡನೆಯ ಡೋಸ್ ಹೊಸದಾಗಿ ಪತ್ತೆಯಾದ ಮೊದಲ-ಪ್ರತಿಕ್ರಿಯೆ ಕೋಶಗಳ ಬೃಹತ್ ಕ್ರೋಢೀಕರಣಕ್ಕೂ ಕಾರಣವಾಯಿತು. ಪುಲೇಂದ್ರನ್ ನೇತೃತ್ವದಲ್ಲಿ ಇತ್ತೀಚೆಗೆ ನಡೆಸಿದ ಲಸಿಕೆ ಅಧ್ಯಯನದಲ್ಲಿ ಮೊದಲು ಗುರುತಿಸಲಾದ ಈ ಕೋಶಗಳು ನೈಜ ಕೋವಿಡ್ – 19 ಸೋಂಕಿಗೆ ಪ್ರತಿಕ್ರಿಯೆ ನೀಡದೇ ಇದ್ದರೂ ಫಿಜರ್ ಲಸಿಕೆಯು ಈ ಕೋಶಗಳನ್ನು ರೋಗದ ವಿರುದ್ಧ ಪ್ರಬಲವಾಗಿ ಹೋರಾಡುವಂತೆ ಪ್ರೇರೇಪಿಸುತ್ತದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಹಾಗಾಗಿ ಸ್ಟ್ಯಾನ್‌ಫೋರ್ಡ್ ಹೇಳಿರುವಂತೆ ಫಿಜರ್‌ನ ಎರಡನೆಯ ಡೋಸ್ ಅನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ತೆಗೆದುಕೊಳ್ಳಬೇಕಾಗಿದೆ.

    First published: