Explained: ಝೋಂಬಿ ಐಸ್​ನಿಂದ ವಿಶ್ವಾದ್ಯಂತ ಆತಂಕ: ಜಾಗತಿಕ ಸಮುದ್ರ ಮಟ್ಟ ಭಾರೀ ಹೆಚ್ಚಳ!

ಇದೀಗ ಜಗತ್ತು ಯಾವುದೇ ಹವಾಮಾನ ಕ್ರಮದ ತ್ವರಿತ ನಿರ್ಧಾರ ತೆಗೆದುಕೊಂಡರೂ ಸಹ ಅದಕ್ಕೆ ನೇರ ಕಾರಣ ಈ ಝೋಂಬಿ ಐಸ್‌ ಆಗಿರುತ್ತದೆ. ಜಾಗತಿಕ ತಾಪಮಾನದ ಹೆಚ್ಚಳದಿಂದ ಈ ಝೋಂಬಿ ಐಸ್‌ ಎಂದು ಕರೆಯುವ ಐಸ್‌ಶೀಟ್‌ ಕರಗಿ, ಸಾಗರದಲ್ಲಿ ಹೋಗಿ ಸೇರಿಕೊಳ್ಳುವುದು ಖಚಿತ. ಇದರಿಂದ ಅನೇಕ ಹವಾಮಾನ ವೈಪರಿತ್ಯಗಳು ಕೂಡ ಸಂಭವಿಸುತ್ತವೆ.

ಝೋಂಬಿ ಐಸ್‌

ಝೋಂಬಿ ಐಸ್‌

  • Share this:
ಗ್ರೀನ್‌ಲ್ಯಾಂಡ್ ಐಸ್‌ಶೀಟ್‌ (Greenland Ice Sheet) ಎಂದು ಕರೆಸಿಕೊಳ್ಳುವ ಝೋಂಬಿ ಐಸ್‌ (Zombie Ice)ಕೂಡ ನಿಧಾನವಾಗಿ ಕರಗಲಾರಂಭಿಸಿದೆ. ಇದು ಜಾಗತಿಕ ಸಮುದ್ರ ಮಟ್ಟವನ್ನು ಕನಿಷ್ಠ 10.6 ಇಂಚುಗಳು ಅಥವಾ 27 ಸೆಂಟಿಮೀಟರ್‌ಗಳಷ್ಟು ಹೆಚ್ಚಿಸುತ್ತದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹಾಗಿದ್ರೆ ಈ ಝೋಂಬಿ ಐಸ್‌ ಎಂದ್ರೇನು? ಅದರ ಪರಿಣಾಮಗಳೇನು? ಎಂಬೆಲ್ಲ ಮಾಹಿತಿಗಳನ್ನು ಇಲ್ಲಿ ತಿಳಿಯೋಣ ಬನ್ನಿ. ಇದೀಗ ಜಗತ್ತು ಯಾವುದೇ ಹವಾಮಾನ (Weather) ಕ್ರಮದ ತ್ವರಿತ ನಿರ್ಧಾರ ತೆಗೆದುಕೊಂಡರೂ ಸಹ ಅದಕ್ಕೆ ನೇರ ಕಾರಣ ಈ ಝೋಂಬಿ ಐಸ್‌ ಆಗಿರುತ್ತದೆ. ಜಾಗತಿಕ ತಾಪಮಾನದ ಹೆಚ್ಚಳದಿಂದ ಈ ಝೋಂಬಿ ಐಸ್‌ ಎಂದು ಕರೆಯುವ ಐಸ್‌ಶೀಟ್‌ ಕರಗಿ, ಸಾಗರದಲ್ಲಿ ಹೋಗಿ ಸೇರಿಕೊಳ್ಳುವುದು ಖಚಿತ. ಇದರಿಂದ ಅನೇಕ ಹವಾಮಾನ ವೈಪರಿತ್ಯಗಳು (Climate change) ಕೂಡ ಸಂಭವಿಸುತ್ತವೆ.

ಮೇಲ್ಕಂಡ ಎಲ್ಲ ಮಾಹಿತಿಯು ನೇಚರ್ ಕ್ಲೈಮೇಟ್ ಚೇಂಜ್ ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿದೆ. ಈ ಅಧ್ಯಯನ ಕೈಗೊಂಡ ವಿಜ್ಞಾನಿಗಳು ಜಾಗತಿಕವಾಗಿ ಏರಿಕೆ ಕಾಣುತ್ತಿರುವ ಸಮುದ್ರ ಮಟ್ಟದಿಂದ ಮೊದಲ ಬಾರಿಗೆ ಗ್ರೀನ್‌ಲ್ಯಾಂಡ್‌ನಲ್ಲಿ ಕನಿಷ್ಠವಾಗಿ ಕರಗುವ ಹಿಮದ ನಷ್ಟವನ್ನು ಕೂಡ ಲೆಕ್ಕ ಹಾಕಿದ್ದಾರೆ.

ಹಾಗಿದ್ರೆ ಈ ಝೋಂಬಿ ಐಸ್‌ ಎಂದ್ರೇನು?
ಈ ಝೋಂಬಿ ಐಸ್‌ ಅನ್ನು ಡೆಡ್ ಅಥವಾ ಡೂಮ್ಡ್ ಐಸ್ ಎಂದು ಕೂಡ ಕರೆಯಲಾಗುತ್ತದೆ. ಈ ಝೋಂಬಿ ಐಸ್‌, ಗ್ರೀನ್‌ಲ್ಯಾಂಡ್‌ನ ಐಸ್‌ ಶೀಟ್‌ನ ಒಂದು ಭಾಗವಾಗಿ ಮುಂದುವರಿದಾಗಲೂ ಕೂಡ ಇದು ಹಿಮವನ್ನು ಸಂಗ್ರಹಿಸುವುದಿಲ್ಲ. ಅಂತಹ ಮಂಜುಗಡ್ಡೆಯು ಕರಗಲು ಮತ್ತು ಸಮುದ್ರ ಮಟ್ಟವನ್ನು ಹೆಚ್ಚಿಸಲು ನೇರ ಕಾರಣವಾಗಿದೆ. ಜಗತ್ತಿನಲ್ಲಿ ಸಂಭವಿಸುವ ಹವಾಮಾನ ಬದಲಾವಣೆಯಿಂದಾಗಿ ಡೂಮ್ಡ್ ಐಸ್ ಕರಗುತ್ತಿದೆ ಎಂದು ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ಭೂವೈಜ್ಞಾನಿಕ ಸಮೀಕ್ಷೆಯ ಗ್ಲೇಶಿಯಾಲಜಿಸ್ಟ್ ಅಧ್ಯಯನದ ಸಹ-ಲೇಖಕ ವಿಲಿಯಂ ಕೋಲ್ಗನ್ ಹೇಳಿದ್ದಾರೆ.

ಇದನ್ನೂ ಓದಿ: Memorial of Love: ಐತಿಹಾಸಿಕ ಬಾವಿಗಳಿಗೆ ಮೆಟ್ಟಿಲುಗಳು ಏಕಿರುತ್ತವೆ? ಇವುಗಳ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ

"ಈ ಮಂಜುಗಡ್ಡೆಯು ಕರಗಿ ಸಮುದ್ರಕ್ಕೆ ಹೋಗಿ ಸೇರುತ್ತದೆ. ಆಗ ಸಮುದ್ರ ಮಟ್ಟ ಅಕ್ಷರಶಃ ಏರಿಕೆ ಆಗುವುದನ್ನು ನಾವೆಲ್ಲರೂ ಗಮನಿಸಿಯೇ ಇರುತ್ತೇವೆ. ಇದರಿಂದ ಅನೇಕ ಹವಾಮಾನ ವೈಪರೀತ್ಯಗಳು ಸಂಭವಿಸುತ್ತವೆ. ಹವಾಮಾನ ವೈಪರೀತ್ಯಗಳಿಂದ ಜನ ಜೀವನ ಅಸ್ತವ್ಯಸ್ತಗೊಳ್ಳಲು ಕಾರಣವಾಗುತ್ತವೆ” ಎಂದು ನೇಚರ್‌ ಕ್ಲೈಮೆಟ್‌ ಚೇಂಜ್‌ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಲೇಖಕ ಜೇಸನ್ ಬಾಕ್ಸ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು.

ಇದು ಪ್ರಾಥಮಿಕವಾಗಿ ಆರ್ಕ್ಟಿಕ್ ನಲ್ಲಿ ಕಂಡುಬರುತ್ತದೆ. ಹೆಪ್ಪುಗಟ್ಟಿದ ಮಂಜುಗಡ್ಡೆಯು 18 ಮಿಲಿಯನ್ ವರ್ಷಗಳವರೆಗೆ ಗ್ರೀನ್‌ಲ್ಯಾಂಡ್‌ನ ಬಹುಪಾಲು ಭಾಗವನ್ನು ಆವರಿಸಿದೆ. ಈ ಮಂಜುಗಡ್ಡೆಯು ಸುಮಾರು 1,380 ಮೈಲಿಗಳಿಂದ 680 ಮೈಲಿಗಳಷ್ಟು ಪ್ರದೇಶವನ್ನು ಆವರಿಸುತ್ತದೆ. ಸುಮಾರು 5,000 ಅಡಿಗಳಷ್ಟು ದಪ್ಪವಿದೆ. ಜಾಗತಿಕ ತಾಪಮಾನಕ್ಕೆ ಅಂದಾಜು 120 ಶತಕೋಟಿ ಟನ್‌ಗಳಷ್ಟು ಮಂಜುಗಡ್ಡೆಯು ಪರಿಣಾಮ ಬೀರುತ್ತದೆ. ಅಂದರೆ ಗ್ರೀನ್‌ಲ್ಯಾಂಡ್‌ನ ಒಟ್ಟು ಮಂಜುಗಡ್ಡೆಯ ಶೇಕಡಾ 3.3 ರಷ್ಟು ಸಮುದ್ರದಲ್ಲಿ ಕರಗುವ ನಿರೀಕ್ಷೆಯಿದೆ.

ಇದಕ್ಕೆ ಕಾರಣವೇನು?
ಇದಕ್ಕೆ ಕಾರಣವೆಂದರೆ ಈಗ ಸಂಭವಿಸುತ್ತಿರುವ ಜಾಗತಿಕ ತಾಪಮಾನ ಏರಿಕೆಯಿಂದ ಈ ಝೋಂಬಿ ಐಸ್‌ ಕರಗುತ್ತಿದೆ. ಆದರೆ ಸಂಶೋಧನೆ ಅಧ್ಯಯನಗಳ ಪ್ರಕಾರ, ಈಗ ಜಾಗತಿಕ ತಾಪಮಾನವು ಸ್ವಲ್ಪ ಮಟ್ಟಿಗೆ ಸಮತೋಲನ ಸ್ಥಿತಿಯನ್ನು ಸೂಚಿಸುತ್ತದೆ ಎಂದು ಹೇಳುತ್ತಿದ್ದಾರೆ.

ಗ್ರೀನ್‌ಲ್ಯಾಂಡ್ ಐಸ್ ಕ್ಯಾಪ್‌ನ ಎತ್ತರದ ಪ್ರದೇಶಗಳಿಂದ ಉಂಟಾಗುವ ಹಿಮಪಾತವು ಹಿಮನದಿಗಳನ್ನು ತೀಕ್ಷ್ಣವಾಗಿ ಹರಿಯುವಂತೆ ಮಾಡಲು ಮತ್ತು ನದಿಗಳು ತುಂಬಿ ಹರಿಯುವಂತೆ ಮಾಡಲು ಸಹಾಯ ಮಾಡುತ್ತದೆ. ಕಳೆದ ಹಲವಾರು ದಶಕಗಳಲ್ಲಿ ಈ ಗ್ರೀನ್‌ಲ್ಯಾಂಡ್‌ನ ಐಸ್‌ಶೀಟ್‌ನ ಮಂಜುಗಡ್ಡೆ ಹೆಚ್ಚು ಕರಗುತ್ತಿದೆ. ಆದರೆ ಮತ್ತೆ ಅಷ್ಟೆ ಪ್ರಮಾಣದಲ್ಲಿ ಮಂಜುಗಡ್ಡೆ ಸಂಗ್ರಹವಾಗುತ್ತಿಲ್ಲ ಎಂದು ಅಧ್ಯಯನಗಳು ಹೇಳುತ್ತಿವೆ.

ಇದರ ನಂತರ ಏನಾಗಬಹುದು? ಮತ್ತು ಯಾವಾಗ ಸಂಭವಿಸಬಹುದು? ವಿಜ್ಞಾನಿಗಳು ಏನ್‌ ಹೇಳ್ತಿದಾರೆ?
ಗ್ರೀನ್‌ಲ್ಯಾಂಡ್‌ನ ಕರಗುತ್ತಿರುವ ಮಂಜುಗಡ್ಡೆಯು ಮತ್ತೆ ಸಂಗ್ರಹವಾಗುತ್ತಿಲ್ಲ. ಆದರೆ ತೀವ್ರವಾಗಿ ಕರಗುತ್ತಿದೆ. ಇದರ ಆಧಾರದ ಮೇಲೆ ಕನಿಷ್ಠವಾಗಿ ಕರಗುವ ಮಂಜುಗಡ್ಡೆಯ ನಷ್ಟವನ್ನು ಲೆಕ್ಕಾಚಾರ ಮಾಡುವ ಮೂಲಕ, ವಿಜ್ಞಾನಿಗಳು ಗ್ರೀನ್‌ಲ್ಯಾಂಡ್‌ನ ಒಟ್ಟು ಹಿಮದ ಪರಿಮಾಣದ 3.3% ರಷ್ಟು ಕರಗುತ್ತದೆ ಎಂದು ಅಂದಾಜಿಸಿದ್ದಾರೆ. ಇದು ಪ್ರಸ್ತುತ ಮಟ್ಟದಲ್ಲಿ ಜಾಗತಿಕ ತಾಪಮಾನವನ್ನು ಸ್ಥಿರಗೊಳಿಸಿದರೂ ಸಹ ಸಂಭವಿಸುತ್ತದೆ.

ಇದನ್ನೂ ಓದಿ:  Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?

ಜಾಗತಿಕ ತಾಪಮಾನ ಸ್ಥಿರವಾದರೂ ಸಹ, ಹಿಂದೆಂದಿಗಿಂತಲೂ ಜಾಗತಿಕ ತಾಪಮಾನವು ಅತ್ಯಂತ ಹೆಚ್ಚಾಗಲಿದೆ ಎಂದು ಊಹಿಸಲಾಗಿದೆ. ಕರಗುವಿಕೆ ಮತ್ತು ಸಮುದ್ರ ಮಟ್ಟದಲ್ಲಿನ ಅನುಗುಣವಾದ ಏರಿಕೆಯು ಹೆಚ್ಚು ತೀಕ್ಷ್ಣವಾಗಿರಬಹುದು.ವಾಸ್ತವವಾಗಿ, ಗ್ರೀನ್‌ಲ್ಯಾಂಡ್‌ನ ಝೋಂಬಿ ಐಸ್‌ 2012 ರ ಹವಾಮಾನ ದತ್ತಾಂಶದ ಆಧಾರದ ಮೇಲೆ ಸಮುದ್ರ ಮಟ್ಟವು 30 ಇಂಚುಗಳಷ್ಟು (78.2 ಸೆಂಟಿಮೀಟರ್‌ಗಳು) ಹೆಚ್ಚಾಗಲು ಕಾರಣವಾಗಬಹುದು. ಇದು ಭವಿಷ್ಯದಲ್ಲಿ ಗ್ರೀನ್‌ಲ್ಯಾಂಡ್‌ನ ಹವಾಮಾನವನ್ನು ಪ್ರತಿನಿಧಿಸುವಲ್ಲಿ ಹೆಚ್ಚು ನಿಖರವಾದ "ದೊಡ್ಡ ಕರಗುವ" ವರ್ಷವಾಗಿದೆ. ಇದರಿಂದ ʼಹವಾಮಾನ ಬದಲಾವಣೆಯು ಹೇಗೆ ಕಾರ್ಯನಿರ್ವಹಿಸುತ್ತದೆʼ?” ಎಂದು ಕೋಲ್ಗನ್ ಹೇಳಿದರು.

ಇದರ ಬಗ್ಗೆ ಅಧ್ಯಯನ ನಡೆಸಿದ ಸಂಶೋಧನಾ ತಂಡ ಇದಕ್ಕೆ ಯಾವ ಕಾಲಮಿತಿಯನ್ನು ಸಹ ನೀಡಿಲ್ಲ. ಈ ಮಂಜುಗಡ್ಡೆ ಕರಗುವಿಕೆಯು ಈ ಶತಮಾನದೊಳಗೆ ಹೆಚ್ಚು ಕರಗಬಹುದು ಎಂದು ಅಧ್ಯಯನವು ಉಲ್ಲೇಖಿಸುತ್ತದೆ. ಆದರೆ ಕೆಲವರು ಇದಕ್ಕೆ ಸೂಕ್ತವಾದ ಸಮಯವನ್ನು ಹೇಳುವುದರಿಂದ ಭವಿಷ್ಯದಲ್ಲಿ ಸಂಭವಿಸುವ ಸಮಸ್ಯೆಗಳಿಗೆ ಎಚ್ಚರಿಕೆಯನ್ನು ವಹಿಸಬಹುದು. ಇದಕ್ಕೆ ಸೂಕ್ತ ಸಮಯ ಯಾವಾಗ ಎಂದು ಪ್ರಶ್ನೆ ಮಾಡಿದ್ದಾರೆ.  ಇನ್ನು ಕೆಲವರು, ಇದರಿಂದ ಏನಾಗಬಹುದು? ಏನಾದರೂ ಅನಾಹುತಗಳು ಸಂಭವಿಸಬಹುದೇ? ಅಥವಾ ಮತ್ತಷ್ಟು ಜಾಗತಿಕ ತಾಪಮಾನ ಏರಿಕೆ ಆಗಬಹುದಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇವೆಲ್ಲದರ ಬಗ್ಗೆ ಅಧ್ಯಯನವು ಕೆಲ ಮಾಹಿತಿಗಳ ಅಂದಾಜನ್ನು ಮಾತ್ರ ಕೊಡಲು ಸಾದ್ಯವಾಗಿದೆ ಎಂದು ಅಧ್ಯಯನ ಲೇಖಕರು ಹೇಳುತ್ತಾರೆ.

ಇದರ ಬಗ್ಗೆ “ಈ ವಿಧಾನವು ಹಿಂದಿನ ಐಸ್ ಶೀಟ್ ಮಾದರಿಗಿಂತ ಈಗಾಗಲೇ ಏನಾಗಿದೆ, ಮುಂದೆ ಏನಾಗಲಿದೆ ಎಂಬ ವಿಷಯದಲ್ಲಿ ಹೆಚ್ಚು ಆಧಾರವಾಗಿದೆ" ಎಂದು ಅಲಾಸ್ಕಾ ಫೇರ್‌ಬ್ಯಾಂಕ್ಸ್ ವಿಶ್ವವಿದ್ಯಾಲಯದ ಮುಖ್ಯ ವಿಜ್ಞಾನಿ ಜಾನ್ ವಾಲ್ಷ್ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದರು.

ಸಮುದ್ರ ಮಟ್ಟದಲ್ಲಿ ಏರಿಕೆಯಾಗುತ್ತಿರುವ 10 ಇಂಚಿನಷ್ಟು ಏರಿಕೆಗೆ ಕಾರಣವೇನು?
ಸಮುದ್ರ ಮಟ್ಟದ ಏರಿಕೆ ಕುರಿತು ಅಧ್ಯಯನ ನಡೆಸಿರುವ ಅಧ್ಯಯನಗಳ ಪ್ರಕಾರ “ ಈ ಅಧ್ಯಯನವು ನಿಮಗೆ ಸಮುದ್ರ ಮಟ್ಟ ಏರಿಕೆಗೆ ಸೂಕ್ತವಾದ ಕಾರಣಗಳನ್ನು ನೀಡುತ್ತದೆ. ಅದರ ಜೊತೆಗೆ ಸಮುದ್ರ ಮಟ್ಟ ಏರಿಕೆಯು ಕರಾವಳಿ ವಲಯಗಳಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಹೇಗೆ ಶಾಪವಾಗಿ ಪರಿಣಮಿಸುತ್ತದೆ ಎಂಬುದನ್ನು ಸಹ ವಿವರವಾಗಿವಾಗಿ ತಿಳಿಸುತ್ತದೆ. ಇದೇ ದೊಡ್ಡ ಸುದ್ದಿಯಾಗಿ ಹೊರಹೊಮ್ಮುತ್ತಿದೆ” ಎಂದು ಹೇಳಿದೆ.

ಯುಎನ್ ಅಟ್ಲಾಸ್ ಆಫ್ ದಿ ಓಶಿಯನ್ಸ್ ಪ್ರಕಾರ, “ವಿಶ್ವದ 10 ದೊಡ್ಡ ನಗರಗಳಲ್ಲಿ 8 ಕರಾವಳಿ ಪ್ರದೇಶಗಳು ಸಮೀಪದಲ್ಲಿದೆ. ಇದರ ಪರಿಣಾಮ ಹೆಚ್ಚುತ್ತಿರುವ ಸಮುದ್ರ ಮಟ್ಟವು ಪ್ರವಾಹ, ಉಬ್ಬರವಿಳಿತಗಳು ಮತ್ತು ಚಂಡಮಾರುತಗಳಂತಹ ಹವಾಮಾನ ವೈಪರೀತ್ಯಗಳನ್ನು ಉಂಟು ಮಾಡುತ್ತಲೇ ಇರುತ್ತದೆ.

ಏಕೆಂದರೆ, ಅವುಗಳ ಪ್ರಭಾವವು ಹೆಚ್ಚು ಪ್ರದೇಶಕ್ಕೆ ತಲುಪುತ್ತದೆ. ಇದು ಪ್ರತಿಯಾಗಿ, ಸ್ಥಳೀಯ ಆರ್ಥಿಕತೆ ಮತ್ತು ಮೂಲಸೌಕರ್ಯಗಳನ್ನು ಹಾಳು ಮಾಡುವ ಕ್ರಮವಾಗಿದೆ. ಇದಲ್ಲದೇ, ತಗ್ಗು ಪ್ರದೇಶದ ಕರಾವಳಿ ಪ್ರದೇಶಗಳು ಹೆಚ್ಚು ಹಾನಿಗೊಳಗಾಗುತ್ತವೆ” ಎಂದು ಹೇಳಿದೆ. 2020 ರಲ್ಲಿ ನಡೆದಿರುವ ನೇಚರ್ ಅಧ್ಯಯನವು ಕರಗುವ ಅಂಟಾರ್ಕ್ಟಿಕ್ ಮಂಜುಗಡ್ಡೆಯಿಂದ ಭೂಮಿಯು ಪ್ರತಿ ಹಂತದವರೆಗೆ ಕೈಗಾರಿಕಾ ಪೂರ್ವದ ಮಟ್ಟಕ್ಕಿಂತ ಬೆಚ್ಚಗಾಗುತ್ತದೆ ಎಂಬ ವಿಷಯವನ್ನು ಕಂಡುಹಿಡಿದಿದೆ.

ಇದನ್ನೂ ಓದಿ:  Beauty of Shivamogga: ಮಲೆನಾಡಿನ ಪ್ರಕೃತಿ ಸೌಂದರ್ಯವಷ್ಟೇ ರೋಚಕವಾಗಿದೆ ಅಲ್ಲಿನ ಇತಿಹಾಸ ಮತ್ತು ಸಂಸ್ಕೃತಿ

ಈ ಐಸ್ ಶೀಟ್‌ನ ಮಂಜುಗಡ್ಡೆಯು ಕರಗುವುದರಿಂದ ಪ್ರಸ್ತುತ ಸಮುದ್ರ ಮಟ್ಟವು 1.3 ಮೀಟರ್‌ಗಳಷ್ಟು ಹೆಚ್ಚು ಏರಿಕೆಯಾಗುವ ಸಂಭವ ಹೆಚ್ಚಿದೆ. ಜಾಗತಿಕ ತಾಪಮಾನ ಏರಿಕೆಯನ್ನು 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರಿಸುವ ಪ್ಯಾರಿಸ್ ಒಪ್ಪಂದದ ಗುರಿಯನ್ನು ಪೂರೈಸಲು ಜಗತ್ತು ವಿಫಲವಾದರೆ, ಅಂಟಾರ್ಕ್ಟಿಕ್ ಹಿಮದ ಒಪ್ಪಂದದಿಂದ ಪ್ರತಿ ಹಂತದ ತಾಪಮಾನವು ಸರಾಸರಿ ಸಮುದ್ರ ಮಟ್ಟಕ್ಕಿಂತ 2.4 ಮೀಟರ್ ಏರಿಕೆ ಆಗುತ್ತದೆ. ಆರು ಮತ್ತು ಒಂಬತ್ತು ಡಿಗ್ರಿ ತಾಪಮಾನದ ನಡುವೆ, ಪ್ರತಿ ಡಿಗ್ರಿಯ ಸರಾಸರಿ ಸಮುದ್ರ ಮಟ್ಟಕ್ಕೆ ಸುಮಾರು 10 ಮೀಟರ್‌ಗಳಷ್ಟು ಏರಿಕೆ ಆಗುತ್ತದೆ.
Published by:Ashwini Prabhu
First published: