• ಹೋಂ
  • »
  • ನ್ಯೂಸ್
  • »
  • Explained
  • »
  • Zika Virus: ಜಿಗಿದು ಜಿಗಿದು ಬರುತ್ತಿದೆ ಝೀಕಾ ವೈರಸ್! ಸೋಂಕು ಹರಡುವ ಮುನ್ನ ಇರಲಿ ಮುಂಜಾಗ್ರತೆ

Zika Virus: ಜಿಗಿದು ಜಿಗಿದು ಬರುತ್ತಿದೆ ಝೀಕಾ ವೈರಸ್! ಸೋಂಕು ಹರಡುವ ಮುನ್ನ ಇರಲಿ ಮುಂಜಾಗ್ರತೆ

ಏನಿದು ಝೀಕಾ ವೈರಸ್ ಸೋಂಕು? (ಚಿತ್ರ: Internet)

ಏನಿದು ಝೀಕಾ ವೈರಸ್ ಸೋಂಕು? (ಚಿತ್ರ: Internet)

ರಾಯಚೂರು ಮೂಲದ 5 ವರ್ಷದ ಪುಟ್ಟ ಕಂದಮ್ಮನಲ್ಲಿ ಝೀಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಬಾಲಕಿ ಆರೋಗ್ಯದಿಂದ ಇದ್ದಾಳೆ ಅಂತ ವೈದ್ಯರು ಹೇಳಿದ್ದಾರೆ. ಹಾಗಿದ್ರೆ ಏನಿದು ಝೀಕಾ ವೈರಸ್ ಸೋಂಕು? ಇದು ಹರಡುವುದು ಹೇಗೆ? ಇದರ ಲಕ್ಷಣ, ಸಮಸ್ಯೆ ಏನು? ಇದಕ್ಕೆ ಔಷಧಿ ಇದೆಯೇ? ಇದನ್ನು ತಡೆಯುವ ಮುಂಜಾಗ್ರತಾ ಕ್ರಮಗಳೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ಕೊರೋನಾ (corona) ಅಬ್ಬರ ಕೊಂಚ ಕಡಿಮೆಯಾಯ್ತು ಎನ್ನುತ್ತಿರುವಾಗಲೇ ಹೊಸ ಹೊಸ ರೋಗಗಳು (diseases) ವಕ್ಕರಿಸಿಕೊಳ್ಳುತ್ತಿವೆ. ಕೊರೋನಾ ಬೆನ್ನಲ್ಲೇ ಮಂಕಿಪಾಕ್ಸ್ (monkeypox) ರೋಗ ಜಗತ್ತನ್ನೇ ಆತಂಕಕ್ಕೆ ತಳ್ಳಿತ್ತು. ಅದರ ಹಿಂದೆ ಬಾವಲಿ ಜ್ವರ (Nifa virus), ಹಕ್ಕಿ ಜ್ವರ (Bird Flue) ಸೇರಿದಂತೆ ಹಲವು ರೋಗಗಳು ಕಾಣಿಸಿಕೊಂಡವು. ಇದೀಗ ಝೀಕಾ ವೈರಸ್ ಸೋಂಕು (Zika virus infection) ಎಂಬ ಹಳೆ ರೋಗ ಮತ್ತೆ ಕಾಣಿಸಿಕೊಂಡಿದೆ. ಅದರಲ್ಲೂ ಈ ಬಾರಿ ಕರ್ನಾಟಕದಲ್ಲೇ (Karnataka) ಕಾಣಿಸಿಕೊಂಡಿದೆ. ರಾಯಚೂರು (Raichur) ಮೂಲದ 5 ವರ್ಷದ ಪುಟ್ಟ ಕಂದಮ್ಮನಲ್ಲಿ ಝೀಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಅದೃಷ್ಟವಶಾತ್ ಬಾಲಕಿ ಆರೋಗ್ಯದಿಂದ ಇದ್ದಾಳೆ ಅಂತ ವೈದ್ಯರು ಹೇಳಿದ್ದಾರೆ. ಹಾಗಿದ್ರೆ ಏನಿದು ಝೀಕಾ ವೈರಸ್ ಸೋಂಕು? ಇದು ಹರಡುವುದು ಹೇಗೆ? ಇದರ ಲಕ್ಷಣ, ಸಮಸ್ಯೆ ಏನು? ಇದಕ್ಕೆ ಔಷಧಿ ಇದೆಯೇ? ಇದನ್ನು ತಡೆಯುವ ಮುಂಜಾಗ್ರತಾ ಕ್ರಮಗಳೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…


ಝೀಕಾ ವೈರಸ್ ಸೋಂಕು ಎಂದರೇನು?


ಝೀಕಾ ಎನ್ನುವುದು ವೈರಸ್‌ನಿಂದ ಹರಡುವ ಸೋಂಕು. ಇದು ಮುಖ್ಯವಾಗಿ ಸೊಳ್ಳೆಗಳಿಂದ ಹರಡುವ ಕಾಯಿಲೆಯಾಗಿದೆ. ಪ್ರಾರಂಭದಲ್ಲಿ ಸೌಮ್ಯ ಲಕ್ಷಣ ತೋರುತ್ತಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಣಾಂತಿಕ ರೋಗವಾಗಿ ಬದಲಾಗುತ್ತವೆ. ಝೀಕಾ ಸ್ವತಃ ಮಾರಣಾಂತಿಕವಲ್ಲದಿದ್ದರೂ ಅಪಾಯತರುತ್ತವೆ. ಈ ಅನಾರೋಗ್ಯದ ಲಕ್ಷಣಗಳು ಒಂದು ವಾರದೊಳಗೆ ಕಣ್ಮರೆಯಾಗುತ್ತವೆ, ತಾಯಿಯು ಸೋಂಕಿಗೆ ಒಳಗಾದಾಗ ಈ ರೋಗವು ಹುಟ್ಟಲಿರುವ ಮಗುವಿನ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತದೆ. ಝೀಕಾ ವೈರಸ್ ಮೈಕ್ರೊಸೆಫಾಲಿ ಮತ್ತು ಗ್ವಿಲೆನ್-ಬಾರ್ರೆ ಸಿಂಡ್ರೋಮ್‌ಗೆ ಕಾರಣ ಎಂದು ಪ್ರಸ್ತುತ ವೈಜ್ಞಾನಿಕ ಒಮ್ಮತವಿದೆ.


ಝೀಕಾ ವೈರಸ್ ಹರಡುವ ಸೊಳ್ಳೆ (ಸಾಂಕೇತಿಕ ಚಿತ್ರ)


ಝೀಕಾ ಮೊದಲು ಕಾಣಿಸಿದ್ದು ಎಲ್ಲಿ?


ಝೀಕಾ ವೈರಸ್ ಸೋಂಕು 1947 ರಲ್ಲಿ ಉಗಾಂಡಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತು. ಇದು ಈಡಿಸ್ ಸೊಳ್ಳೆಯಿಂದ ಹರಡುತ್ತದೆ. ಅದೇ ಸೊಳ್ಳೆ ಡೆಂಗ್ಯೂ, ಹಳದಿ ಜ್ವರ ಮತ್ತು ಚಿಕೂನ್‌ ಗುನ್ಯಾದಂತ ರೋಗಗಳಿಗೆ ಕಾರಣವಾಗುವ ವೈರಸ್‌ಗಳನ್ನೂ ಹರಡುತ್ತದೆ.


ಸೊಳ್ಳೆ ಕಡಿತದಿಂದ ಸೋಂಕು


ಸೊಳ್ಳೆಯಿಂದ ಹರಡುವ ಸೋಂಕು!


ಝೀಕಾ ವೈರಸ್ ಸೋಂಕು ಹಗಲಿನಲ್ಲಿ ಸಕ್ರಿಯವಾಗಿರುವ ಈಡಿಸ್ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಸೋಂಕುಗಳನ್ನು ಹರಡಲು ಕಾರಣವಾಗಿದೆ. ಝೀಕಾ ವೈರಸ್ ಸೊಳ್ಳೆ ಕಡಿತ, ಲೈಂಗಿಕ ಸಂಭೋಗ ಮತ್ತು ರಕ್ತ ವರ್ಗಾವಣೆಯ ಮೂಲಕ ಹರಡುತ್ತದೆ. ಇದು ಗರ್ಭಿಣಿಯರಲ್ಲಿ ಭ್ರೂಣಕ್ಕೂ ಹರಡಬಹುದು.


ಝೀಕಾ ಸೋಂಕಿನ ಲಕ್ಷಣ


ಇದನ್ನೂ ಓದಿ: Explainer: ಶೀತ, ಜ್ವರ ಚಳಿಗಾಲದಲ್ಲಿಯೇ ಹೆಚ್ಚು ಕಾಡುತ್ತವೆ ಏಕೆ? ಅಧ್ಯಯನಗಳು ಏನ್‌ ಹೇಳ್ತಿವೆ?


ಲೈಂಗಿಕ ಸಂಪರ್ಕದ ಮೂಲಕ ಹರಡುತ್ತದೆ!


ಹೌದು, ಇದೊಂದು ಲೈಂಗಿಕ ರೋಗ ಅಲ್ಲದಿದ್ದರೂ, ಲೈಂಗಿಕ ಸಂಪರ್ಕದ ಮೂಲಕವೂ ಹರಡುವ ಸಾಧ್ಯತೆ ಇರುತ್ತದೆ. ಲೈಂಗಿಕ ಸಂಪರ್ಕ ಅಂದರೆ ಯೋನಿ, ಗುದ, ಮತ್ತು ಮೌಖಿಕ ಸಂಭೋಗದ ವೇಳೆ ಹರಡಬಹುದು. ಇನ್ನು ಲೈಂಗಿಕ ಆಟಿಕೆಗಳಿಂದ ಸಂಭೋಗಿಸುವಾಗ ಹರಡುತ್ತದೆ. ಮುಖ್ಯವಾಗಿ ಗಂಡು-ಹೆಣ್ಣು, ಪುರುಷ-ಪುರುಷ ಲೈಂಗಿಕ ಪಾಲುದಾರರ ನಡುವೆ ಸಂಪರ್ಕ ಏರ್ಪಟ್ಟಾಗ ಹರಡುತ್ತದೆ. ಆದರೆ ಇದುವರೆಗೆ ಇಂತಹ ಯಾವುದೇ ದೃಢಪಡಿಸಿದ ಪ್ರಕರಣಗಳು ಪತ್ತೆಯಾಗಿಲ್ಲ.


ಝೀಕಾ ಲಕ್ಷಣ


ಝೀಕಾ ವೈರಸ್ ದೇಹವನ್ನು ಹೇಗೆ ಪ್ರವೇಶಿಸುತ್ತದೆ?


ಸೋಂಕಿತ ಹೆಣ್ಣು Aedes aegypti ಮತ್ತು Aedes albopictus ಸೊಳ್ಳೆಗಳಿಂದ zika ವೈರಸ್ ಮನುಷ್ಯನಿಗೆ ಹರಡುತ್ತದೆ. ಸೊಳ್ಳೆಯು ಸೋಂಕಿತ ವ್ಯಕ್ತಿಯನ್ನು ಕಚ್ಚಿದ ನಂತರ, ಝೀಕಾ ವೈರಸ್ ಸೊಳ್ಳೆಯ ವ್ಯವಸ್ಥೆಯನ್ನು ಪ್ರವೇಶಿಸುತ್ತದೆ, ಅದರ ದೇಹದಲ್ಲಿ ಪುನರಾವರ್ತಿಸುತ್ತದೆ ಮತ್ತು ಅದರ ಲಾಲಾರಸ ಗ್ರಂಥಿಗಳಿಗೆ ಹರಡುತ್ತದೆ. ಈ ವೈರಸ್ ಸೊಳ್ಳೆಯಲ್ಲಿ ಎಂಟರಿಂದ ಹತ್ತು ದಿನಗಳವರೆಗೆ ಕಾವುಕೊಡುತ್ತದೆ.


ರಕ್ತದ ಮೂಲಕ ನರಮಂಡಲ ಪ್ರವೇಶಿಸುವ ವೈರಸ್


ಸ್ವಲ್ಪ ಸಮಯದ ನಂತರ, ಸೊಳ್ಳೆಯು ವ್ಯಕ್ತಿಯ ಮೇಲೆ ಆಹಾರವನ್ನು ಸೇವಿಸಿದಾಗ, ವೈರಸ್ ವ್ಯಕ್ತಿಗೆ ಹರಡುತ್ತದೆ. ಸೊಳ್ಳೆ ಕಚ್ಚಿದ ನಂತರ ವ್ಯಕ್ತಿಯಲ್ಲಿ ಝಿಕಾ ವೈರಸ್‌ನ ಕಾವು ಕಾಲಾವಧಿಯು ಸುಮಾರು ಮೂರರಿಂದ 12 ದಿನಗಳವರೆಗೆ ಇರುತ್ತದೆ. ಈ ಸಮಯದಲ್ಲಿ ವೈರಸ್ ಅವನ ದೇಹದ ಮೂಲಕ ಚಲಿಸುತ್ತದೆ ಮತ್ತು ದೇಹದ ವಿವಿಧ ಗ್ರಂಥಿಗಳಿಗೆ ಹರಡುತ್ತದೆ. ಇದು ರಕ್ತಪ್ರವಾಹಕ್ಕೆ ಪ್ರವೇಶಿಸುತ್ತದೆ ಮತ್ತು ಅಲ್ಲಿಂದ ನರಮಂಡಲಕ್ಕೆ ಪ್ರವೇಶಿಸುತ್ತದೆ.


ಝೀಕಾ.. ಇರಲಿ ಎಚ್ಚರ


ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ಧಕ್ಕೆ


ಝೀಕಾ ವೈರಸ್ ನರಮಂಡಲದ ಮೇಲೆ ದಾಳಿ ಮಾಡಿದಾಗ, ಸಣ್ಣ ಶೇಕಡಾವಾರು ಜನರು ಗುಯಿಲಿನ್-ಬಾರೆ ಸಿಂಡ್ರೋಮ್ ಅನುಭವಿಸುತ್ತಾರೆ. ಅಂದರೆ ಅವರ ಪ್ರತಿರಕ್ಷಣಾ ವ್ಯವಸ್ಥೆಯು ನರಗಳ ಮೇಲೆ ದಾಳಿ ಮಾಡುವ ಸ್ಥಿತಿ, ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಈ ನಂತಹ ಅವರು ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಈ ತೀವ್ರತರವಾದ ಪ್ರಕರಣಗಳಲ್ಲಿ ಒಬ್ಬ ವ್ಯಕ್ತಿಗೆ ನೇರವಾಗಿ ಹಾನಿ ಉಂಟುಮಾಡುವ ಬದಲು, ವೈರಸ್ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ತನ್ನದೇ ಆದ ನರಮಂಡಲದ ಮೇಲೆ ಆಕ್ರಮಣ ಮಾಡಲು ಪ್ರಚೋದಿಸುತ್ತದೆ.


ಯಾರು ಝೀಕಾ ಸೋಂಕಿಗೆ ಒಳಗಾಗುತ್ತಾರೆ?


ಝೀಕಾ ವೈರಸ್ ಹೊಂದಿರುವ ಈಡಿಸ್ ಸೊಳ್ಳೆಯಿಂದ ಯಾರಾದರೂ ಕಚ್ಚಿಸಿಕೊಂಡರೆ, ಝೀಕಾ ಸೋಂಕಿತ ಸಂಗಾತಿಯೊಂದಿಗೆ ಲೈಂಗಿಕತೆಯನ್ನು ಹೊಂದಿರುವ ವ್ಯಕ್ತಿ, ಝೀಕಾ ಸೋಂಕಿತ ಗರ್ಭಿಣಿಯರ ಹುಟ್ಟಲಿರುವ ಶಿಶುಗಳು, ಸೋಂಕಿತ ರಕ್ತದ ರಕ್ತ ವರ್ಗಾವಣೆಯನ್ನು ಹೊಂದಿರುವ ಯಾರಾದರೂ ಈ ಸೋಂಕಿಗೆ ಒಳಗಾಗುವ ಅಪಾಯವಿದೆ.


ಝೀಕಾ ವೈರಸ್‌ ಸೋಂಕಿನ ಲಕ್ಷಣಗಳೇನು?


ಝೀಕಾ ವೈರಸ್ ಸೋಂಕಿಗೆ ಒಳಗಾದ ಜನರು ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು ಅನುಭವಿಸುವುದಿಲ್ಲ ಅಥವಾ ತುಂಬಾ ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಸೌಮ್ಯವಾದ ರೋಗಲಕ್ಷಣಗಳು, ಅವು ಸಂಭವಿಸಿದಾಗ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತೆಯೇ ಇರುತ್ತದೆ, 3 ರಿಂದ 12 ದಿನಗಳಲ್ಲಿ ಬೆಳವಣಿಗೆಯಾಗುತ್ತದೆ ಮತ್ತು ಸುಮಾರು ಒಂದು ವಾರದವರೆಗೆ ಇರುತ್ತದೆ. ಜ್ವರ, ದದ್ದು, ತಲೆನೋವು, ಕೀಲು ನೋವು, ಆಯಾಸ, ಕೆನ್ನೆಗಳ ಊತ, ಬೆವರುವುದು, ತಣ್ಣಗಾಗುವುದು, ವಾಂತಿ, ರಕ್ತಸಿಕ್ತ ಕಣ್ಣುಗಳು ಇತ್ಯಾದಿ ಲಕ್ಷಣಗಳು ಗೋಚರಿಸುತ್ತವೆ.


ರೋಗನಿರ್ಣಯ ಮಾಡುವುದು ಹೇಗೆ?


ಝೀಕಾ ವೈರಸ್ ಸೋಂಕಿನ ರೋಗನಿರ್ಣಯವನ್ನು ರಕ್ತ ಪರೀಕ್ಷೆಗಳು ಮತ್ತು ಮೂತ್ರ, ಲಾಲಾರಸ ಮತ್ತು ವೀರ್ಯದ ಪ್ರಯೋಗಾಲಯ ಪರೀಕ್ಷೆಗಳ ಮೂಲಕ ದೃಢೀಕರಿಸಬಹುದು.


ಇದಕ್ಕೆ ಚಿಕಿತ್ಸೆ ಏನು?


ಪ್ರಸ್ತುತ ಝೀಕಾ ವೈರಸ್ ಸೋಂಕಿಗೆ ಯಾವುದೇ ನಿರ್ದಿಷ್ಟ ಔಷಧಿ ಇಲ್ಲ.  ಏಕೆಂದರೆ ವಿಜ್ಞಾನಿಗಳು ದೀರ್ಘಕಾಲದವರೆಗೆ ವೈರಸ್ ಹಾನಿಕರವಲ್ಲ ಅಂತ ಭಾವಿಸಿದ್ದರು. ಆದಾಗ್ಯೂ, ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು, ಆದ್ದರಿಂದ ನಿಮ್ಮ ವೈದ್ಯರು ಜ್ವರ ಕಡಿಮೆ ಮಾಡುವವರು ಮತ್ತು ವಾಂತಿ ಮತ್ತು ದದ್ದುಗಳಿಗೆ ಔಷಧಿಗಳನ್ನು ಸೂಚಿಸಬಹುದು. ಇದೀಗ ಇದಕ್ಕೆ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.


ಇದನ್ನೂ ಓದಿ: Explained: ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳ ಸವಾಲನ್ನು ಹೇಗೆ ಎದುರಿಸುತ್ತೆ WHO? ಸಿದ್ಧತೆ ಆರಂಭ!


ಇದು ಬಾರದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು?


ಸೋಂಕು ಬಂದ ಮೇಲೆ ಪರದಾಡುವುದಕ್ಕಿಂತ ಸೋಂಕು ಬಾರದಂತೆ ತಡೆಯುವುದು ಅತೀ ಅಗತ್ಯ. ಇದಕ್ಕಾಗಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ನಿಮ್ಮ ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಕೊಳಚೆ ನೀರಲ್ಲಿ ಸೊಳ್ಳೆಗಳು ಸಂತನೋತ್ಪತ್ತಿ ಹೆಚ್ಚಿಸಿಕೊಂಡು ಮನುಷ್ಯರ ಮೇಲೆ ಹಗಲಿನ ವೇಳೆ ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಣೆ ಪಡೆದುಕೊಳ್ಳಲು ಬೇಕಾದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು. ಸೊಳ್ಳೆ ಕಡಿತದಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಝಿಕಾವನ್ನು ತಡೆಗಟ್ಟಲು ಉತ್ತಮ ಮಾರ್ಗವಾಗಿದೆ. ಗರ್ಭಿಣಿಯರು, ಬಾಣಂತಿಯರು ಸೇರಿದಂತೆ ಎಲ್ಲರೂ ಸೊಳ್ಳೆಗಳ ಕಾಟ ತಡೆಗೆ ಕ್ರಮಕೈಗೊಳ್ಳಬೇಕು.

Published by:Annappa Achari
First published: