• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಚುನಾವಣೆಯಲ್ಲಿ ಬಳಸುವ ವಿವಿಪ್ಯಾಟ್​ಗಳ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ

Explained: ಚುನಾವಣೆಯಲ್ಲಿ ಬಳಸುವ ವಿವಿಪ್ಯಾಟ್​ಗಳ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ

ವಿವಿಪ್ಯಾಟ್

ವಿವಿಪ್ಯಾಟ್

ಈ ಚುನಾವಣೆಗಳಲ್ಲಿ ಬಳಸುವ ಮತ ಹಾಕುವ ಯಂತ್ರಗಳು ಅಂತ ನೆನಪಿಗೆ ಬಂದಾಗ ನಮಗೆ ಮೊದಲು ನೆನಪಾಗುವುದೇ 'ವಿವಿಪ್ಯಾಟ್' ಯಂತ್ರಗಳು ಅಂತ ಹೇಳಬಹುದು. ಇದು 'ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್' ಅನ್ನು ಸೂಚಿಸುತ್ತದೆ. ಇದನ್ನು ಭಾರತದಲ್ಲಿ ಮೊದಲ ಬಾರಿಗೆ 2014 ರ ಲೋಕಸಭಾ ಚುನಾವಣೆಯಲ್ಲಿ ಪರಿಚಯಿಸಲಾಯಿತು.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Bangalore [Bangalore], India
  • Share this:

    ಈಗಂತೂ ಚುನಾವಣೆಗಳ (Elections) ದಿನಾಂಕ ಹತ್ತಿರ ಬರುತ್ತಿದೆ ಎಂದರೆ ಸಾಕು ಚುನಾವಣಾ ಕಣದಲ್ಲಿ ಇರುವಂತಹ ರಾಜಕೀಯ ಪಕ್ಷಗಳು ಮತ್ತು ಅವುಗಳ ನಾಯಕರುಗಳು ಆರೋಪ ಪ್ರತ್ಯಾರೋಪಗಳಲ್ಲಿ ತೊಡಗುವುದು ಮತ್ತು ಪರಸ್ಪರರ ನಡುವೆ ಮಾತಿನ ದಾಳಿಗಳು, ಬಿರುಸಿನ ಚುನಾವಣೆ ಪ್ರಚಾರಗಳು (Election Campaigns) , ಹೀಗೆ ಒಂದೇ ಎರಡೇ.. ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯನ್ನೇ ಸಿದ್ದಪಡಿಸುವ ಭರ್ಜರಿ ಸಿದ್ದತೆಗಳನ್ನು ಆಯಾ ರಾಜಕೀಯ ಪಕ್ಷಗಳು ಮಾಡಿಕೊಳ್ಳುತ್ತಾ ಇರುವುದನ್ನು ನಾವು ನೋಡುತ್ತೇವೆ.


    ಇಷ್ಟೇ ಅಲ್ಲದೆ ಚುನಾವಣಾ ಆಯೋಗದ ಅಧಿಕಾರಿಗಳು ಸಹ ಈ ಚುನಾವಣೆಗಳು ಸುವ್ಯವಸ್ಥಿತವಾಗಿ ಮತ್ತು ನ್ಯಾಯಬದ್ದವಾಗಿ ನಡೆಯಬೇಕು ಎಂದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುತ್ತಾರೆ ಅಂತ ಹೇಳಬಹುದು.


    ಇದನ್ನೂ ಓದಿ: ರಾಜ್ಯದ ಮೊದಲ ಇವಿಎಂ ಉಗ್ರಾಣ ಗದಗದಲ್ಲಿ ಲೋಕಾರ್ಪಣೆ; ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ಉದ್ಘಾಟನೆ


    ಕೆಲವು ರಾಜ್ಯಗಳಲ್ಲಿ 2023 ರ ವಿಧಾನಸಭಾ ಚುನಾವಣೆಯ ದಿನಾಂಕಗಳು ಹತ್ತಿರ ಬರುತ್ತಿವೆ, ಈಗಾಗಲೇ ಫೆಬ್ರವರಿ ತಿಂಗಳಲ್ಲಿ ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ವಿಧಾನಸಭಾ ಚುನಾವಣೆ ಮುಗಿದಿದೆ. ಇನ್ನು ಕರ್ನಾಟಕದಲ್ಲೂ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ.


    ವಿವಿಪ್ಯಾಟ್ ಯಂತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?


    ಈ ಚುನಾವಣೆಗಳಲ್ಲಿ ಬಳಸುವ ಮತ ಹಾಕುವ ಯಂತ್ರಗಳು ಅಂತ ನೆನಪಿಗೆ ಬಂದಾಗ ನಮಗೆ ಮೊದಲು ನೆನಪಾಗುವುದೇ 'ವಿವಿಪ್ಯಾಟ್' (VVPAT) ಯಂತ್ರಗಳು ಅಂತ ಹೇಳಬಹುದು. ಇದು 'ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್' ಅನ್ನು ಸೂಚಿಸುತ್ತದೆ. ಇದನ್ನು ಭಾರತದಲ್ಲಿ ಮೊದಲ ಬಾರಿಗೆ 2014 ರ ಲೋಕಸಭಾ ಚುನಾವಣೆಯಲ್ಲಿ ಪರಿಚಯಿಸಲಾಯಿತು.


    ಭಾರತದ ಚುನಾವಣಾ ಆಯೋಗದ ಪ್ರಕಾರ, ವಿವಿಪ್ಯಾಟ್ ಎಂಬುದು ವಿದ್ಯುನ್ಮಾನ ಮತದಾನ ಯಂತ್ರಕ್ಕೆ (ಇವಿಎಂ) ಸಂಪರ್ಕ ಹೊಂದಿದ ಮತಪತ್ರರಹಿತ ವ್ಯವಸ್ಥೆಯಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.


    ಅಭ್ಯರ್ಥಿಯ ಹೆಸರು ಮತ್ತು ಅವರು ಪ್ರತಿನಿಧಿಸುತ್ತಿರುವ ಅಥವಾ ಪಕ್ಷದ ಪರವಾಗಿ ನಿಂತಿರುವ ಪಕ್ಷದ ಚಿಹ್ನೆಯ ಮೇಲೆ ಇವಿಎಂನಲ್ಲಿ ಜನರು ತಮ್ಮ ತಮ್ಮ ಮತವನ್ನು ಚಲಾಯಿಸಿದಾಗ ಈ ಯಂತ್ರವು ಕಾಗದದ ಸ್ಲಿಪ್ ಅನ್ನು ಮುದ್ರಿಸುತ್ತದೆ.


    ಮತ ಚಲಾಯಿಸಿದ ನಂತರ ಈ ಯಂತ್ರ ಹೇಗೆ ಕೆಲಸ ಮಾಡುತ್ತದೆ?


    ಮತದಾರ ಇವಿಎಂನಲ್ಲಿ ಬಟನ್ ಒತ್ತಿದ ತಕ್ಷಣ, ವಿವಿಪ್ಯಾಟ್ ಯಂತ್ರವು ಅವರು ಮತ ಚಲಾಯಿಸಿದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಹೊಂದಿರುವ ಸ್ಲಿಪ್ ಅನ್ನು ಸುಮಾರು 7 ಸೆಕೆಂಡುಗಳ ಕಾಲ ಮುದ್ರಿಸುತ್ತದೆ.


    ಇದನ್ನೂ ಓದಿ: ಭಾರತದಲ್ಲಿ 1982 ರಲ್ಲೇ EVM ಬಳಕೆ..! ಮತಯಂತ್ರ ಬಳಸುತ್ತಿರುವ ದೇಶಗಳ ಪಟ್ಟಿ ಇಲ್ಲಿದೆ


    ಈ ಯಂತ್ರವು ಒಂದು ಪಾರದರ್ಶಕವಾದ ಎಂದರೆ ಮತದಾರರಿಗೆ ಕಾಣಿಸುವ ಒಂದು ವಿಂಡೋವನ್ನು ಸಹ ಹೊಂದಿರುತ್ತದೆ, ಅಲ್ಲಿ ಮತದಾರನು ಮುದ್ರಿತ ಸ್ಲಿಪ್ ಅನ್ನು ನೋಡಬಹುದು.


    ಇದರ ನಂತರ, ಆ ಸ್ಲಿಪ್ ಯಂತ್ರದ ಮುಚ್ಚಿದ ಪೆಟ್ಟಿಗೆಯೊಳಗೆ ಹೋಗುತ್ತದೆ. ವಿವಿಪ್ಯಾಟ್ ಮೂಲಭೂತವಾಗಿ ಮತದಾರನಿಗೆ ಅವರು ಮತ ಚಲಾಯಿಸಿದ ಮತವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪರಿಶೀಲನಾ ಯಂತ್ರವಾಗಿ ಕಾರ್ಯ ನಿರ್ವಹಿಸುತ್ತದೆ.




    ಮತ ವಂಚನೆ ಅಥವಾ ಮತ ಎಣಿಕೆಯಲ್ಲಿ ವ್ಯತ್ಯಾಸಗಳ ಆರೋಪಗಳಿದ್ದರೆ ಇವಿಎಂನ ಫಲಿತಾಂಶಗಳನ್ನು ದೃಢೀಕರಿಸಲು ಈ ಸ್ಲಿಪ್ ಗಳನ್ನು ಬಳಸಲಾಗುತ್ತದೆ.


    ಇವಿಎಂಗಳು ಮತ್ತು ವಿವಿಪ್ಯಾಟ್ ಗಳು ಪ್ರತ್ಯೇಕ ಘಟಕಗಳಾಗಿವೆ ಮತ್ತು ಯಾವುದೇ ನೆಟ್ವರ್ಕ್ ಗೆ ಸಂಪರ್ಕ ಹೊಂದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.


    ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಮತ್ತು ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್) ಈ ಯಂತ್ರಗಳನ್ನು ಅಭಿವೃದ್ಧಿಪಡಿಸಿವೆ.

    Published by:Precilla Olivia Dias
    First published: