Vulvar Cancer: ಹೆಣ್ಣುಮಕ್ಕಳನ್ನು ಕಾಡುವ ಈ ವಿಚಿತ್ರ ಕ್ಯಾನ್ಸರ್ ಬಗ್ಗೆ ಎಲ್ಲರೂ ತಿಳಿದಿರಲೇಬೇಕು

ಕ್ಯಾನ್ಸರ್ ಎನ್ನುವುದು ಒಂದು ಮಹಾಮಾರಿ ರೋಗ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ಇದರಲ್ಲಿ ಅನೇಕ ರೀತಿಯ ಕ್ಯಾನ್ಸರ್ ಗಳಿವೆ. ಅಪರೂಪದ ಕ್ಯಾನ್ಸರ್ ಗಳಲ್ಲಿ ಒಂದಾದ ವೂಲ್ವಾರ್ ಕ್ಯಾನ್ಸರ್ ಬಗ್ಗೆ ನೀವು ಕೇಳಿದ್ದೀರಾ? ಇದು ಸ್ತ್ರೀ ಜನನಾಂಗದ ಹೊರ ಮೇಲ್ಮೈಯಲ್ಲಿ ಬೆಳೆಯುತ್ತದೆ.

ವೂಲ್ವಾರ್ ಕ್ಯಾನ್ಸರ್

ವೂಲ್ವಾರ್ ಕ್ಯಾನ್ಸರ್

  • Share this:
ಕ್ಯಾನ್ಸರ್ (Cancer) ಎನ್ನುವುದು ಒಂದು ಮಹಾಮಾರಿ ರೋಗ (Disease) ಎಂದು ಹೇಳಿದರೆ ತಪ್ಪಾಗುವುದಿಲ್ಲ, ಏಕೆಂದರೆ ಇದರಲ್ಲಿ ಅನೇಕ ರೀತಿಯ ಕ್ಯಾನ್ಸರ್ ಗಳಿವೆ. ಅಪರೂಪದ ಕ್ಯಾನ್ಸರ್ ಗಳಲ್ಲಿ ಒಂದಾದ ವೂಲ್ವಾರ್ ಕ್ಯಾನ್ಸರ್ (Vulvar cancer) ಬಗ್ಗೆ ನೀವು ಕೇಳಿದ್ದೀರಾ? ಇದು ಸ್ತ್ರೀ ಜನನಾಂಗದ (Female genitalia) ಹೊರ ಮೇಲ್ಮೈಯಲ್ಲಿ ಬೆಳೆಯುತ್ತದೆ. ಕ್ಯಾನ್ಸರ್ ಸಾಮಾನ್ಯವಾಗಿ ನಿಧಾನವಾಗಿ ಬೆಳೆಯುತ್ತದೆ ಮತ್ತು ಅದರ ರೋಗಲಕ್ಷಣಗಳು ಕೆಲವೊಮ್ಮೆ ನಮ್ಮ ಗಮನಕ್ಕೆ ಬರುವುದಿಲ್ಲ. ಆರಂಭಿಕ ಚಿಹ್ನೆಗಳಲ್ಲಿ (Sign) ಒಂದು ಕ್ಯಾನ್ಸರ್ ಗೆ ಮುಂಚಿನ ಗಾಯವು ಕಾಣಿಸಿಕೊಳ್ಳಬಹುದು, ಅದು ಚರ್ಮದ (Skin) ಹೊರಪದರದಲ್ಲಿ ಅಸಹಜ ಕೋಶ ಬೆಳವಣಿಗೆಯನ್ನು ಸೂಚಿಸುತ್ತದೆ. ಇತರ ರೋಗಲಕ್ಷಣಗಳಲ್ಲಿ ಯೋನಿಯ ಹೊರಭಾಗದಲ್ಲಿ ನಿರಂತರ ತುರಿಕೆ, ಅಸ್ವಸ್ಥತೆ, ಸಂವೇದನಾಶೀಲತೆ ಇತ್ಯಾದಿಗಳು ಸೇರಿರಬಹುದು.

"ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಅಂಗಗಳು ಮತ್ತು ಜನನಾಂಗಗಳ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ಅನೇಕ ಸಂದರ್ಭಗಳಲ್ಲಿ ಕಡೆಗಣಿಸಲಾಗುತ್ತದೆ. ವಿವಿಧ ಸ್ತ್ರೀರೋಗ-ಸಂಬಂಧಿತ ಕ್ಯಾನ್ಸರ್ ಬಗ್ಗೆ ಸಾಮಾನ್ಯ ಜ್ಞಾನವನ್ನು ಹೊಂದಿದ್ದರೂ, ರೋಗಲಕ್ಷಣಗಳು ಮತ್ತು ಅದು ನಿಕಟ ಪ್ರದೇಶಕ್ಕೆ ಉಂಟು ಮಾಡುವ ಸಂಭಾವ್ಯ ಬೆದರಿಕೆಯ ವಿಷಯಕ್ಕೆ ಬಂದಾಗ ಅನೇಕರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಅರಿವು ಇಲ್ಲ ಎಂದು ಹೇಳಬಹುದು. ಕ್ಯಾನ್ಸರ್ ನಲ್ಲಿಯೇ ತುಂಬಾನೇ ಅಪರೂಪದ ಕ್ಯಾನ್ಸರ್ ಎಂದರೆ ಅದು ವಲ್ವಾರ್ ಕ್ಯಾನ್ಸರ್ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಈ ಕ್ಯಾನ್ಸರ್ ಸ್ತ್ರೀಯರ ಜನನಾಂಗಗಳ ಹೊರಭಾಗವಾದ ವೂಲ್ವಾದ ಮೇಲೆ ಪರಿಣಾಮ ಬೀರುತ್ತದೆ" ಎಂದು ನಾಗ್ಪುರದ ಎಚ್‌ಸಿಜಿ ಎನ್‌ಸಿಎಚ್ಆರ್‌ಐ ಕ್ಯಾನ್ಸರ್ ಸೆಂಟರ್ ನ ಕನ್ಸಲ್ಟೆಂಟ್ ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಪರಾಗ್ ಇಂಗಳೆ ಹೇಳುತ್ತಾರೆ. ಋತುಬಂಧದ ನಂತರದ ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚು ಸಾಮಾನ್ಯವಾಗಿದೆ, ಏಕೆಂದರೆ ಜೀವನಶೈಲಿಯಲ್ಲಿ ಹಠಾತ್ ಬದಲಾವಣೆ ಮತ್ತು ಧೂಮಪಾನದಂತಹ ಅನಾರೋಗ್ಯಕರ ಅಭ್ಯಾಸಗಳು, ಇತರ ಮಹಿಳೆಯರು ಸಹ ಜಾಗರೂಕರಾಗಿರಬೇಕು ಎಂದು ಡಾ. ಇಂಗಳೆ ಹೇಳುತ್ತಾರೆ.

ಏನಿದು ವೂಲ್ವಾರ್ ಕ್ಯಾನ್ಸರ್?
ವೂಲ್ವಾರ್ ಕಾರ್ಸಿನೋಮಾ ಹೆಚ್ಚಾಗಿ ಯೋನಿಯ ಹೊರ ಮೇಲ್ಮೆಯ ಮೇಲೆ ಪರಿಣಾಮ ಬೀರುತ್ತದೆ. ಯೋನಿಯಲ್ಲಿ ಪ್ರಾರಂಭವಾಗುವ ಕ್ಯಾನ್ಸರ್ ಅನ್ನು ಪ್ರಾಥಮಿಕ ವೂಲ್ವಾರ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್ ದೇಹದ ಇತರ ಭಾಗದಿಂದ ಯೋನಿಯವರೆಗೆ ಹರಡಿದಾಗ ಅದನ್ನು ದ್ವಿತೀಯಕ ವೂಲ್ವಾರ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: Explained: ಮತ್ತೆ ಹೊಸ ರೂಪದಲ್ಲಿ ಬಂತಾ ಒಮೈಕ್ರಾನ್‌? ಭಾರತದಲ್ಲಿ ಮತ್ತಷ್ಟು ಉಲ್ಬಣಿಸುತ್ತಾ ಕೋವಿಡ್?

ಈ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗಮನಿಸಿ
ಮೊದಲ ರೋಗಲಕ್ಷಣವು ಸಾಮಾನ್ಯವಾಗಿ ಗಡ್ಡೆ ಅಥವಾ ಹುಣ್ಣು ಆಗುವುದರೊಂದಿಗೆ ಶುರುವಾಗಿ, ಇದು ತುರಿಕೆ, ಅಸ್ವಸ್ಥತೆ ಅಥವಾ ರಕ್ತಸ್ರಾವದೊಂದಿಗೆ ಮುಂದುವರೆಯಬಹುದು ಎಂದು ಡಾ. ಇಂಗಳೆ ಹೇಳುತ್ತಾರೆ. ಹೆಚ್ಚಿನ ಸಾಮಾನ್ಯ ರೋಗಲಕ್ಷಣಗಳಲ್ಲಿ ಈ ಕೆಳಗಿನವುಗಳು ಸೇರಿವೆ.

  • ನೋವಿನಿಂದ ಕೂಡಿದ ಲೈಂಗಿಕ ಸಂಭೋಗ

  • ನೋವಿನಿಂದ ಕೂಡಿದ ಮೂತ್ರವಿಸರ್ಜನೆ

  • ವಾರ್ಟ್-ತರಹದ ಬೆಳವಣಿಗೆ

  • ಸಂವೇದನಾಶೀಲತೆ

  • ಹುಣ್ಣು ಆಗುವುದು

  • ಚರ್ಮ ದಪ್ಪಾಗುವುದು

  • ಅಪಾಯದ ಅಂಶಗಳು


ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್‌ಪಿವಿ) ಸೋಂಕಿಗೆ ಒಳಗಾದ ಮಹಿಳೆಯರಿಗೆ ವೂಲ್ವಾರ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ವೂಲ್ವಾರ್ ಚರ್ಮದ ಕೋಶಗಳು ಕ್ಯಾನ್ಸರ್ ಕೋಶಗಳಾಗಿ ಬೆಳೆಯುವ ಒಂದು ಅಸ್ವಸ್ಥತೆಯಾದ ವೂಲ್ವಾರ್ ಇಂಟ್ರಾಎಪಿಥೆಲಿಯಲ್ ನಿಯೋಪ್ಲಾಸಿಯಾ (ವಿಐಎನ್) ಹೊಂದಿರುವ ಮಹಿಳೆಯರು ವೂಲ್ವಾರ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸಿಕೊಳ್ಳುವ ಸಾಧ್ಯತೆ ಗಣನೀಯವಾಗಿ ಹೆಚ್ಚಾಗಿದೆ. ಲಿಚೆನ್ ಸ್ಕ್ಲೆರೊಸಸ್, ಚರ್ಮವು ದಪ್ಪವಾಗಲು ಮತ್ತು ತುರಿಕೆಯಾಗಲು ಕಾರಣವಾಗುವ ಒಂದು ಸ್ಥಿತಿಯಾಗಿದ್ದು, ಇದು ವೂಲ್ವಾರ್ ಕ್ಯಾನ್ಸರ್ ನ ಅಪಾಯವನ್ನು ಸ್ವಲ್ಪ ಹೆಚ್ಚಿಸಬಹುದು.

ಇದನ್ನೂ ಓದಿ: Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?

ನಿಯಮಿತವಾಗಿ ಧೂಮಪಾನ ಮಾಡುವ ಮಹಿಳೆಯರಿಗೆ ವೂಲ್ವಾರ್ ಕ್ಯಾನ್ಸರ್ ಬರುವ ಸಾಧ್ಯತೆ ಮೂರರಿಂದ ಆರು ಪಟ್ಟು ಹೆಚ್ಚು. ಧೂಮಪಾನಿಯು ಹೆಚ್ಚುವರಿಯಾಗಿ ಎಚ್‌ಪಿವಿ ಸೋಂಕನ್ನು ಹೊಂದಿದ್ದರೆ, ಅಪಾಯವು ಇನ್ನೂ ಹೆಚ್ಚಾಗುತ್ತದೆ" ಎಂದು ಡಾ. ಇಂಗಳೆ ಹೇಳುತ್ತಾರೆ.

ವೂಲ್ವಾರ್ ಕ್ಯಾನ್ಸರ್ ನ ಹಂತಗಳು ಹೀಗಿರುತ್ತವೆ ನೋಡಿ
* ಪ್ರಾರಂಭದ ಹಂತ ಎಂದರೆ ಹಂತ 0 ದಲ್ಲಿ ಕ್ಯಾನ್ಸರ್ ಚರ್ಮದ ಮೇಲ್ಮೈಯಲ್ಲಿ ಮಾತ್ರ ಗೋಚರಿಸುತ್ತದೆ.

* ಹಂತ 1 ಮತ್ತು 2 - ಕ್ಯಾನ್ಸರ್ ಯೋನಿಯೊಳಗೆ ಬೆಳೆಯಲು ಶುರುವಾಗುತ್ತದೆ ಮತ್ತು 2 ಸೆಂಟಿ ಮೀಟರ್ ವರೆಗೆ ಬೆಳೆಯುತ್ತದೆ. 3ನೇಯ ಹಂತದಲ್ಲಿ ಕ್ಯಾನ್ಸರ್ ಗುದದ್ವಾರ ಅಥವಾ ಯೋನಿಯಂತಹ ಪಕ್ಕದ ಅಂಗಾಂಶಗಳಿಗೆ ಮತ್ತು ದುಗ್ಧರಸ ಗ್ರಂಥಿಗಳಿಗೆ ಹರಡಿರುವುದು ಕಂಡುಬರುತ್ತದೆ.

* ಇನ್ನೂ 4ನೇ ಹಂತದಲ್ಲಿ ತೊಡೆಯ ಎರಡೂ ಬದಿಗಳಲ್ಲಿರುವ ದುಗ್ಧರಸ ಗ್ರಂಥಿಗಳಿಗೆ ಹರಡಿದ ನಂತರ, ಕ್ಯಾನ್ಸರ್ ಕರುಳುಗಳು, ಮೂತ್ರಕೋಶ ಅಥವಾ ಮೂತ್ರನಾಳಗಳಿಗೆ ಹರಡಬಹುದು.

ಇದಕ್ಕೇನು ಚಿಕಿತ್ಸೆ
1. ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ವಿಕಿರಣ ಚಿಕಿತ್ಸೆ ಮತ್ತು ಜೈವಿಕ ಚಿಕಿತ್ಸೆಗಳು ವೂಲ್ವಾರ್ ಕ್ಯಾನ್ಸರ್ ಗೆ ಅತ್ಯಂತ ಸಾಮಾನ್ಯ ಚಿಕಿತ್ಸೆಗಳಾಗಿವೆ.

2. ವೂಲ್ವಾರ್ ಕ್ಯಾನ್ಸರ್ ಗೆ ಚಿಕಿತ್ಸೆ ನೀಡುವ ಪ್ರಾಥಮಿಕ ವಿಧಾನವೆಂದರೆ ಶಸ್ತ್ರಚಿಕಿತ್ಸೆ. ಕ್ಯಾನ್ಸರ್ ಅದರ ಆರಂಭಿಕ ಹಂತಗಳಲ್ಲಿ ಪತ್ತೆಯಾದರೆ, ಅದನ್ನು ಕೇವಲ ಸಣ್ಣ ಶಸ್ತ್ರಚಿಕಿತ್ಸೆಯಿಂದ ಗುಣಪಡಿಸಬಹುದು. ಮೂತ್ರನಾಳ, ಯೋನಿ ಅಥವಾ ಗುದನಾಳದಂತಹ ನೆರೆಹೊರೆಯ ಅಂಗಗಳಿಗೆ ಕ್ಯಾನ್ಸರ್ ಹರಡಿದಾಗ ನಂತರದ ಹಂತಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿದರೆ ಶಸ್ತ್ರಚಿಕಿತ್ಸೆ ಹೆಚ್ಚು ಸಂಕೀರ್ಣವಾಗಿರುತ್ತದೆ.

3. ಸುರಕ್ಷಿತ ಲೈಂಗಿಕತೆಯನ್ನು ಅಭ್ಯಾಸ ಮಾಡುವುದು, ಧೂಮಪಾನ ಮಾಡದಿರುವುದು, ಎಚ್‌ಪಿವಿ ಲಸಿಕೆಯನ್ನು ಪಡೆಯುವುದು ಮತ್ತು ಗರ್ಭಕಂಠದ ಸ್ಮಿಯರ್ ಪರೀಕ್ಷೆಗಳಿಗೆ ಹೋಗುವುದು ವೂಲ್ವಾರ್ ಕ್ಯಾನ್ಸರ್ ಅನ್ನು ತಡೆಗಟ್ಟಲು ಸಹಾಯ ಮಾಡುವ ಕೆಲವು ಕ್ರಮಗಳಾಗಿವೆ.

ಇದನ್ನೂ ಓದಿ: Explained: ಫ್ಯಾಟ್ ಸರ್ಜರಿ ಎಂದರೇನು? ಇದು ಕೊಬ್ಬು ಕರಗಿಸುತ್ತಾ ಅಥವಾ ಪ್ರಾಣವನ್ನೇ ತೆಗೆಯುತ್ತಾ?

ಅಪಾಯವನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಮತ್ತು ಅವು ಕಾಣಿಸಿಕೊಂಡ ತಕ್ಷಣ ತಪಾಸಣೆಗೆ ಒಳಗಾಗುವುದು. ವರ್ಷಕ್ಕೆ ಒಮ್ಮೆಯಾದರೂ ದೈಹಿಕ ಪರೀಕ್ಷೆ ಸೇರಿದಂತೆ ಆಗಾಗ್ಗೆ ಸ್ತ್ರೀರೋಗದ ಆರೋಗ್ಯ ತಪಾಸಣೆಗಳನ್ನು ನಿಗದಿಪಡಿಸುವುದು ಸಹ ನಿರ್ಣಾಯಕವಾಗಿದೆ.
Published by:Ashwini Prabhu
First published: