Explained: ಪ್ರಿಯಾಪಿಸಮ್ ಎಂಬ ಸ್ಥಿತಿಗೆ ಕಾರಣವಾಗುತ್ತಂತೆ ವಯಾಗ್ರಾದ ಓವರ್ ಡೋಸ್! ಹೀಗೆಂದರೇನು? ಇಲ್ಲಿದೆ ವಿವರ

ಇಂದು ನಾವು ಸೇವಿಸುವ ಎಲ್ಲವೂ ನೈಸರ್ಗಿಕವಾಗಿರುವುದಿಲ್ಲ, ಹಾಗಾಗಿ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದ್ದೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಔಷಧಿಗಳ ವಿಷಯಕ್ಕೆ ಬಂದಾಗ ನಾವು ತುಸು ಹೆಚ್ಚೇ ಜಾಗರೂಕರಾಗಿರಬೇಕು ಮತ್ತು ಆದಷ್ಟು ವೈದ್ಯರ ಪ್ರಿಸ್ಕ್ರಿಪ್ಷನ್ ಗೆ ಮಾತ್ರವೇ ಅಂಟಿಕೊಳ್ಳಬೇಕು. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ನವವಿವಾಹಿತರು ಏನು ಅನುಭವಿಸಬೇಕಾಯಿತೋ ಅದನ್ನೇ ಎದುರಿಸಬೇಕಾಗಬಹುದು.

ವಯಾಗ್ರಾ

ವಯಾಗ್ರಾ

  • Share this:
ಸಾಮನ್ಯವಾಗಿ ನೈಸರ್ಗಿಕವಾಗಿ (Natural) ದೊರೆಯುವ ಪದಾರ್ಥಗಳನ್ನು ಸೇವಿಸಿದರೆ ಯಾವ ಕೆಟ್ಟ ಪರಿಣಾಮಗಳು (Bad effects) ಆಗುವುದಿಲ್ಲ. ಆದರೆ ಇಂದು ನಾವು ಸೇವಿಸುವ ಎಲ್ಲವೂ ನೈಸರ್ಗಿಕವಾಗಿರುವುದಿಲ್ಲ, ಹಾಗಾಗಿ ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡರೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದ್ದೆ ಇರುತ್ತದೆ. ಅದರಲ್ಲೂ ವಿಶೇಷವಾಗಿ ಔಷಧಿಗಳ ವಿಷಯಕ್ಕೆ ಬಂದಾಗ ನಾವು ತುಸು ಹೆಚ್ಚೇ ಜಾಗರೂಕರಾಗಿರಬೇಕು ಮತ್ತು ಆದಷ್ಟು ವೈದ್ಯರ ಪ್ರಿಸ್ಕ್ರಿಪ್ಷನ್ ಗೆ (Doctor's prescription) ಮಾತ್ರವೇ ಅಂಟಿಕೊಳ್ಳಬೇಕು. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ, ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನ ನವವಿವಾಹಿತರು ಏನು ಅನುಭವಿಸಬೇಕಾಯಿತೋ ಅದನ್ನೇ ಎದುರಿಸಬೇಕಾಗಬಹುದು.

ಏನದು ಘಟನೆ
ವ್ಯಕ್ತಿಯೊಬ್ಬ ತನ್ನ ಸ್ನೇಹಿತರ ಸಲಹೆಯನ್ನು ಪಡೆದ ನಂತರ ತನ್ನ ಲೈಂಗಿಕ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಲು ನಿರ್ಧರಿಸಿ ವಯಾಗ್ರವನ್ನು ತೆಗೆದುಕೊಂಡನು. ಔಷಧಿಯನ್ನು ಸೇವಿಸುವಾಗ, ಆತ ಅದರೊಂದಿಗೆ ವಹಿಸಬೇಕಾಗಿದ್ದ ಕಾಳಜಿಯನ್ನು ನಿರ್ಲಕ್ಷಿಸಿದ್ದ. ಔಷಧದ ನಿಗದಿತ ಡೋಸೇಜ್ ಎಷ್ಟಿರಬೇಕೋ ಅದಕ್ಕಿಂತ ಹೆಚ್ಚೆ ತೆಗೆದುಕೊಂಡ. ವೈದ್ಯಕೀಯ ವರದಿಗಳ ಪ್ರಕಾರ ಆ ವ್ಯಕ್ತಿಯು ತನ್ನ ವಯಾಗ್ರ ಡೋಸೇಜ್ ಅನ್ನು ದಿನಕ್ಕೆ 200 ಮಿಗ್ರಾಂಗೆ ಹೆಚ್ಚಿಸಿದ್ದ, ಇದು ಶಿಫಾರಸು ಮಾಡಿರುವ ಪ್ರಮಾಣಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ.

ಆ ವ್ಯಕ್ತಿ ಆಸ್ಪತ್ರೆಗೆ ಏಕೆ ಸೇರಿದ?
28 ವರ್ಷದ ಆ ವ್ಯಕ್ತಿ ತಾನು ವಯಾಗ್ರಾ ಸೇವಿಸಿ 20 ದಿನಗಳು ಕಳೆದರೂ ನಿಮಿರುವಿಕೆ ಅವನಲ್ಲಿ ಕಡಿಮೆಯಾಗಲೇ ಇಲ್ಲ. ಹೀಗೆ ದೀರ್ಘಾವಧಿಯವರೆಗೂ ಶಿಶ್ನದ ನಿಮಿರುವಿಕೆಯ ಸ್ಥಿತಿಯನ್ನು ಪ್ರಿಯಾಪಿಸಮ್ ಎಂದು ಕರೆಯಲಾಗುತ್ತದೆ. ವ್ಯಕ್ತಿಯ ಪೂರ್ಣ ಅಥವಾ ಭಾಗಶಃ ನಿಮಿರುವಿಕೆ ಲೈಂಗಿಕ ಪ್ರಚೋದನೆಯಿಂದ ಪ್ರಾರಂಭವಾಗಿ ಗಂಟೆಗಳವರೆಗೆ ಮುಂದುವರೆದಿತ್ತು. ತದನಂತರ ಈ ಸ್ಥಿತಿಯ ಕಾರಣದಿಂದಾಗಿ, ಲೈಂಗಿಕವಾಗಿ ಪ್ರಚೋದಿಸಲ್ಪಡದೆ ಇದ್ದರೂ, ಆ ವ್ಯಕ್ತಿಯ ನಿಮಿರುವಿಕೆ ಕಡಿಮೆಯಾಗಲೇ ಇಲ್ಲ, ಅದು ಹಾಗೆ ಮುಂದುವರಿಯಿತು.

ಇದನ್ನೂ ಓದಿ: Explained: ಪೋಷಕರ ಜೀನ್‌ಗಳು ಮಕ್ಕಳ ನಡವಳಿಕೆಯನ್ನು ರೂಪಿಸುತ್ತವೆಯಂತೆ; ಅದು ಹೇಗೆ ಗೊತ್ತಾ?

ನಂತರ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಆತನಿಗೆ ಕೃತಕ ಶಿಶ್ನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದರು. ಆದಾಗ್ಯೂ, ಈಗ ಮನುಷ್ಯನಿಗೆ ಒಂದು ಸಮಸ್ಯೆ ಇದೆ ಹಾಗೂ ಆ ಸಮಸ್ಯೆ ಆ ವ್ಯಕ್ತಿಯೊಂದಿಗೆ ಜೀವಿತಾವಧಿಯ ಕೊನೆಯವರೆಗೂ ಉಳಿಯಲಿದೆ. ವೈದ್ಯರು ಹೇಳುವ ಪ್ರಕಾರ, ಆ ಮನುಷ್ಯನು ಮಕ್ಕಳನ್ನು ಹೊಂದಬಹುದು ಮತ್ತು ಸಾಮಾನ್ಯ ಜೀವನವನ್ನು ನಡೆಸಬಹುದು, ಆದರೆ, ಅವನ ಖಾಸಗಿ ಅಂಗದಲ್ಲಿ ಒತ್ತಡ ಯಾವಾಗಲೂ ಇದ್ದೆ ಇರುತ್ತದೆ ಮತ್ತು ಆ ಜಾಗದಲ್ಲಿನ ಉಬ್ಬುವಿಕೆಯನ್ನು ಮರೆಮಾಡಲು ಆ ವ್ಯಕ್ತಿ ಶಾಶ್ವತವಾಗಿ ಬಿಗಿಯಾದ ಬಟ್ಟೆಯನ್ನು ಧರಿಸಬೇಕಾಗುತ್ತದೆ.

ವಯಾಗ್ರ ಹೇಗೆ ಕೆಲಸ ಮಾಡುತ್ತದೆ?
ಕಳೆದ ಮೂರು ದಶಕಗಳಲ್ಲಿ ವಯಾಗ್ರ ಅತ್ಯಂತ ಜನಪ್ರಿಯ ಔಷಧಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದು ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯ ಚಿಕಿತ್ಸೆಗಾಗಿ ಕಂಡುಹಿಡಿದ ಮೊದಲ ಮೌಖಿಕ ಚಿಕಿತ್ಸೆಯಾಗಿದೆ. ಆದಾಗ್ಯೂ, ಅದರ ಮೂಲ ಕೆಲಸವು ಅಧಿಕ ರಕ್ತದೊತ್ತಡ ಮತ್ತು ಅಂಜಿನಾ ಚಿಕಿತ್ಸೆಗೆ ಸಹಾಯ ಮಾಡುವುದು. ಆದರೆ ಅದರ ಪ್ರತಿಕೂಲ ಪರಿಣಾಮಗಳು ನಿಮಿರುವಿಕೆಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಉಪಯುಕ್ತವಾದ ಔಷಧದ ಆವಿಷ್ಕಾರಕ್ಕೆ ಕಾರಣವಾಯಿತು.

ಇದು ಔಷಧ ತಯಾರಕರಿಗೆ ಸಂಪೂರ್ಣ ಹೊಸ ಮಾರುಕಟ್ಟೆಯನ್ನು ತೆರೆಯಿತು ಮತ್ತು ಕಡಿಮೆ ಅವಧಿಯಲ್ಲಿ ಇದು ಪ್ರಪಂಚದಾದ್ಯಂತ ಬಹಳ ಜನಪ್ರಿಯವಾಯಿತು. ಯುಕೆನಲ್ಲಿ, ನಿಮ್ಮ ಅಗತ್ಯತೆಗಳನ್ನು ಸಮಾಲೋಚಿಸಿದ ನಂತರ ಮತ್ತು ಚರ್ಚಿಸಿದ ನಂತರ ವೈದ್ಯರಿಂದ ಪ್ರಿಸ್ಕ್ರಿಪ್ಷನ್‌ನಲ್ಲಿ ವಯಾಗ್ರವನ್ನು ಪಡೆಯಬಹುದು.

ವಯಾಗ್ರ ಕಿಣ್ವದ ಕ್ರಿಯೆಯನ್ನು ನಿರ್ಬಂಧಿಸುತ್ತದೆ, ಇದು ಸಾಮಾನ್ಯವಾಗಿ ರಕ್ತನಾಳಗಳನ್ನು ಕಿರಿದಾಗುವಂತೆ ಮಾಡುತ್ತದೆ. ಈ ಕಿಣ್ವವನ್ನು ತಡೆಯುವ ಮೂಲಕ, ರಕ್ತನಾಳಗಳನ್ನು ವಿಸ್ತರಿಸಲಾಗುತ್ತದೆ, ಇದು ಶಿಶ್ನಕ್ಕೆ ರಕ್ತ ಪೂರೈಕೆಯನ್ನು ಹೆಚ್ಚಿಸುತ್ತದೆ, ಆದ್ದರಿಂದ, ನಿಮಿರುವಿಕೆಯನ್ನು ಪಡೆಯಲು ಮತ್ತು ನಿರ್ವಹಿಸಲು ಇದರಿಂದ ಸಾಧ್ಯವಾಗುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ವಯಾಗ್ರಾ ಕೆಲಸ ಮಾಡಲು ಮೊದಲಿಗೆ ಲೈಂಗಿಕ ಪ್ರಚೋದನೆ ನಡೆಯಲೇಬೇಕು, ಅದಿಲ್ಲದೆ ವಯಾಗ್ರ ಮಾತ್ರೆ ತೆಗೆದುಕೊಂಡರೂ ನಿಮಿರುವಿಕೆ ಉಂಟಾಗುವುದಿಲ್ಲ.

ಇದನ್ನೂ ಓದಿ: Kids Applications: ಪೋಷಕರೇ ಹುಷಾರ್, ಈ ಆ್ಯಪ್‌ಗಳು ನಿಮ್ಮ ಮಕ್ಕಳ ಮೇಲೆ ಕಣ್ಣಿಟ್ಟಿವೆಯಂತೆ!

ವಯಾಗ್ರವು 25 ಮಿಗ್ರಾಂ, 50 ಮಿಗ್ರಾಂ ಮತ್ತು 100 ಮಿಗ್ರಾಂ ಮೌಖಿಕ ಮಾತ್ರೆಗಳಲ್ಲಿ ಲಭ್ಯವಿದೆ ಮತ್ತು ಸಾಮಾನ್ಯವಾಗಿ, ಖಾಲಿ ಹೊಟ್ಟೆಯಲ್ಲಿ ಮತ್ತು ಪೂರ್ಣ ಲೋಟ ನೀರಿನೊಂದಿಗೆ 24 ಗಂಟೆಗಳಲ್ಲಿ ಕೇವಲ ಒಂದು ಟ್ಯಾಬ್ಲೆಟ್ ಅನ್ನು ತೆಗೆದುಕೊಳ್ಳಬೇಕು. ಇದರ ಪರಿಣಾಮಗಳು ಸಾಮಾನ್ಯವಾಗಿ 5 ಗಂಟೆಗಳವರೆಗೆ ಇರುತ್ತದೆ ಮತ್ತು ಹೆಚ್ಚಿನ ಪುರುಷರು 2 ಅಥವಾ 3 ಗಂಟೆಗಳ ಒಳಗೆ ಇದು ಪರಿಣಾಮ ಬೀರುವುದನ್ನು ಗಮನಿಸುತ್ತಾರೆ ಆದಾಗ್ಯೂ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ಇತರೆ ಅಂಶಗಳೂ ಇವೆ.

ವಯಾಗ್ರ ಮಿತಿಮೀರಿದ ಸೇವನೆ ಎಂದರೇನು?
ನಿಮ್ಮ ವೈದ್ಯರು ಶಿಫಾರಸು ಮಾಡಿದಂತೆ ವಯಾಗ್ರವನ್ನು ಸುರಕ್ಷಿತ ಔಷಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಒಬ್ಬ ವ್ಯಕ್ತಿಯು ವಯಾಗ್ರವನ್ನು ಹೆಚ್ಚು ಸೇವಿಸಿದರೆ, ಅವನು ಹಲವಾರು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯ ಡೋಸೇಜ್‌ಗಳಲ್ಲಿ ವಯಾಗ್ರವನ್ನು ತೆಗೆದುಕೊಳ್ಳುವಾಗ ಅಪರೂಪದ ಒಂದು ನಿರ್ದಿಷ್ಟ ಅಡ್ಡ ಪರಿಣಾಮವೆಂದರೆ ಪ್ರಿಯಾಪಿಸಮ್ ಎಂಬ ಸ್ಥಿತಿ.

ವಯಾಗ್ರ ಶಿಶ್ನ ಮತ್ತು ದೇಹದ ಇತರ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ತುಂಬಾ ಹೆಚ್ಚು ಪ್ರಿಯಾಪಿಸಮ್, ಅನಾನುಕೂಲ ಮತ್ತು ಅಸಮಾನವಾಗಿ ದೊಡ್ಡ ನಿಮಿರುವಿಕೆಗೆ ಕಾರಣವಾಗಬಹುದು. ಅದು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಇರುತ್ತದೆ. ದೀರ್ಘಕಾಲದ ನಿಮಿರುವಿಕೆಯು ಶಿಶ್ನದ ಅಂಗಾಂಶಗಳಿಗೆ ಶಾಶ್ವತ ಹಾನಿ ಉಂಟು ಮಾಡಲು ಕಾರಣವಾಗಬಹುದು. ತಕ್ಷಣ ಚಿಕಿತ್ಸೆ ಸಿಗದಿದ್ದರೆ, ಶಿಶ್ನಕ್ಕೆ ಶಾಶ್ವತ ಹಾನಿಯೂ ಆಗಬಹುದು.

ವಯಾಗ್ರವನ್ನು ನಿಗದಿತ ಡೋಸ್‌ಗಿಂತ ಹೆಚ್ಚು ತೆಗೆದುಕೊಂಡರೆ ನಿಮ್ಮ ರಕ್ತದೊತ್ತಡವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಇದು ಅನಿಯಮಿತ ಹೃದಯ ಬಡಿತದಂತಹ ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು ಅಥವಾ ಇನ್ನೂ ಕೆಟ್ಟದಾಗಿ ಹೇಳಬೇಕೆಂದರೆ ಹೃದಯಾಘಾತಕ್ಕೂ ಕಾರಣವಾಗಬಹುದು. ಆದ್ದರಿಂದ ನಿಮ್ಮ ವೈದ್ಯರು ಸೂಚಿಸಿದಲ್ಲಿ ಮಾತ್ರ ನೀವು ವಯಾಗ್ರವನ್ನು ತೆಗೆದುಕೊಳ್ಳುವುದು ಅತ್ಯಗತ್ಯ ಮತ್ತು ನೀವು ಶಿಫಾರಸು ಮಾಡಿದ ಡೋಸ್ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.

ಔಷಧವನ್ನು ಸೇವಿಸುವಾಗ ತೆಗೆದುಕೊಳ್ಳಬೇಕಾದ ಇನ್ನೊಂದು ಮುನ್ನೆಚ್ಚರಿಕೆ ಏನೆಂದರೆ, ವಯಾಗ್ರವನ್ನು ಬಳಸುವಾಗ ದ್ರಾಕ್ಷಿಹಣ್ಣಿನ ರಸವನ್ನು ಕುಡಿಯುವುದನ್ನು ತಪ್ಪಿಸಬೇಕು. ಒಂದು ಲೋಟ ದ್ರಾಕ್ಷಿಹಣ್ಣಿನ ರಸವು ಅಡ್ಡಪರಿಣಾಮಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಹೆಚ್ಚಿನ ಆರೋಗ್ಯ ಪೂರೈಕೆದಾರರು ದ್ರಾಕ್ಷಿಹಣ್ಣಿನ ಉತ್ಪನ್ನಗಳನ್ನು ತಪ್ಪಿಸಲು ಶಿಫಾರಸು ಮಾಡುತ್ತಾರೆ. ದ್ರಾಕ್ಷಿಹಣ್ಣು ದೇಹದಲ್ಲಿ ರಕ್ತದ ಮಟ್ಟವನ್ನು ಹೆಚ್ಚಿಸಬಹುದು, ಇದು ಈಗಾಗಲೇ ವಯಾಗ್ರ ಬಳಕೆಯಿಂದ ಮತ್ತಷ್ಟು ಹೆಚ್ಚಾಗುತ್ತದೆ.

ವಯಾಗ್ರದ ಅಡ್ಡಪರಿಣಾಮಗಳು
ವಯಾಗ್ರ ಸೇವನೆ ಸಹ ಅಡ್ಡಪರಿಣಾಮಗಳನ್ನು ಹೊಂದಿದೆ, ಆದಾಗ್ಯೂ, ಅವುಗಳಲ್ಲಿ ಹೆಚ್ಚಿನವುಗಳು ಸೌಮ್ಯವಾಗಿರುತ್ತವೆ ಮತ್ತು ಅವು ತಮ್ಮಷ್ಟಕ್ಕೆ ತಾವೇ ಕಡಿಮೆಯಾಗುತ್ತವೆ. ಈ ಪರಿಣಾಮಗಳು ಸಾಮಾನ್ಯವಾಗಿ ಸ್ವಲ್ಪ ಮುಖದಲ್ಲಿ ಫ್ಲಶಿಂಗ್ ಆಗುವುದು ಅಥವಾ ಮೂಗಿನಲ್ಲಿ ದಟ್ಟಣೆಯಂತಹವುಗಳನ್ನು ಹೊಂದಿದ್ದು ಕೆಲ ಪುರುಷರು ತಲೆನೋವು ಕೂಡ ಅನುಭವಿಸುತ್ತಾರೆ. ಈ ಅಡ್ಡಪರಿಣಾಮಗಳನ್ನು ಸಾಮಾನ್ಯವಾಗಿ ಸಮರ್ಥವಾಗಿ ಸಹಿಸಿಕೊಳ್ಳಬಹುದು ಮತ್ತು ಕಾಲಾನಂತರ ಇವು ಸುಧಾರಿಸಲೂ ಬಹುದು.

ತಲೆಹಗುರಾಗುವಿಕೆಯನ್ನು ಅನುಭವಿಸುವುದು ಸಾಮಾನ್ಯವಲ್ಲದ ಲಕ್ಷಣ ಏಕೆಂದರೆ ಅದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಆದರೆ ಇದು ಸಹ ಕಾಲಾನಂತರದಲ್ಲಿ ಸುಧಾರಿಸುತ್ತದೆ.

ಇದನ್ನೂ ಓದಿ: Explained: ಭಾರತೀಯರ ಪಾಲಿಗೆ ವಿಷವಾಗುತ್ತಿದೆ ಕಳಪೆ ಆಹಾರ; ವರ್ಷಕ್ಕೆ ಲಕ್ಷಾಂತರ ಜನ ಸಾಯುತ್ತಿದ್ದಾರಂತೆ!

ಹಾಗಾಗಿ, ವಯಾಗ್ರಾ ಸೇವನೆ ಕೆಲವು ಗಮನಾರ್ಹ ಫಲಿತಾಂಶಗಳನ್ನುಕೊಟ್ಟರೂ ಸಹ ಅದನ್ನು ವೈದ್ಯರ ಸಲಹೆ ಪಡೆಯದೆ ಸೇವಿಸುವುದು ಉತ್ತಮ ಅಭ್ಯಾಸ ಅಥವಾ ರೂಢಿಯಲ್ಲ ಎಂದಷ್ಟೇ ಹೇಳಬಹುದು. ನಿಮಗೆ ನಿಜಕ್ಕೂ ನಿಮಿರುವಿಕೆಯ ಸಮಸ್ಯೆ ಇದ್ದಲ್ಲಿ ಮೊದಲು ಸಂಬಂಧಿಸಿದ ವೈದ್ಯರನ್ನು ಭೇಟಿ ಮಾಡಿ ಸ್ಮಾಲೋಚನೆ ನಡೆಸಿ. ನಿಮಗೆ ಅವರೇ ವಯಾಗ್ರಾದ ಅವಶ್ಯಕತೆ ಇದೆಯೋ ಇಲ್ಲವೋ ಅಥವಾ ಇದ್ದರೂ ಎಷ್ಟು ಡೋಸೇಜ್ ನಿಮಗೆ ಪರ್ಯಾಪ್ತವಾಗಬಹುದೆಂದು ನಿಮ್ಮನ್ನುಪರೀಕ್ಷಿಸಿ ಹೇಳುತ್ತಾರೆ.
Published by:Ashwini Prabhu
First published: