• ಹೋಂ
 • »
 • ನ್ಯೂಸ್
 • »
 • Explained
 • »
 • Explained: 10 ಕೋಟಿ ದಂಡ ಜೀವಾವಧಿ ಶಿಕ್ಷೆ: ಏನಿದು ಆ್ಯಂಟಿ-ಚೀಟಿಂಗ್ ಕಾನೂನು?

Explained: 10 ಕೋಟಿ ದಂಡ ಜೀವಾವಧಿ ಶಿಕ್ಷೆ: ಏನಿದು ಆ್ಯಂಟಿ-ಚೀಟಿಂಗ್ ಕಾನೂನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪರೀಕ್ಷೆಗಳಲ್ಲಿ ನಡೆಯುವ ಅನ್ಯಾಯವನ್ನು ತಡೆಗಟ್ಟಲು ಪುಷ್ಕರ್ ಸಿಂಗ್ ಧಾಮಿ ನೇತೃತ್ವದ ಬಿಜೆಪಿ ಸರಕಾರವು ಜಾರಿಗೆ ತಂದಿರುವ ಸುಗ್ರೀವಾಜ್ಞೆಗೆ ಉತ್ತರಾಖಂಡ ರಾಜ್ಯಪಾಲರು ಅಂಗೀಕಾರ ನೀಡಿದ್ದಾರೆ.

 • Trending Desk
 • 5-MIN READ
 • Last Updated :
 • Dehradun, India
 • Share this:

  ಸರಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಹಗರಣಗಳ ಕುರಿತು ಡೆಹ್ರಾಡೂನ್‌ನಲ್ಲಿ (Dehradun) ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ (Violence) ತಿರುಗಿ ಕೋಲಾಹಲವನ್ನೇ ಎಬ್ಬಿಸಿತ್ತು. ಇದೀಗ ಪರೀಕ್ಷೆಗಳಲ್ಲಿ ನಡೆಯುವ ಅನ್ಯಾಯವನ್ನು ತಡೆಗಟ್ಟಲು ಪುಷ್ಕರ್ ಸಿಂಗ್ ಧಾಮಿ (Pushkar Singh Dhami)  ನೇತೃತ್ವದ ಬಿಜೆಪಿ ಸರಕಾರವು (BJP Govt) ಜಾರಿಗೆ ತಂದಿರುವ ಸುಗ್ರೀವಾಜ್ಞೆಗೆ ಉತ್ತರಾಖಂಡ ರಾಜ್ಯಪಾಲರು ಅಂಗೀಕಾರ ನೀಡಿದ್ದಾರೆ.


  ಸುಗ್ರೀವಾಜ್ಞೆ ಜಾರಿ


  ಉತ್ತರಾಖಂಡ್ ಸ್ಪರ್ಧಾತ್ಮಕ ಪರೀಕ್ಷೆ (ನೇಮಕಾತಿಯಲ್ಲಿ ಅನ್ಯಾಯದ ವಿಧಾನಗಳ ನಿಯಂತ್ರಣ ಮತ್ತು ತಡೆಗಟ್ಟುವಿಕೆಗಾಗಿ ಕ್ರಮಗಳು) ಸುಗ್ರೀವಾಜ್ಞೆ, 2023, 10 ಕೋಟಿ ರೂ.ವರೆಗಿನ ದಂಡ ಮತ್ತು ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆಯ ನಿಬಂಧನೆಗಳನ್ನು ಹೊಂದಿದೆ.


  ಈ ಸುಗ್ರೀವಾಜ್ಞೆಯನ್ನು ಸಿಎಂ ಧಾಮಿ ತುರ್ತಾಗಿ ಅನುಮೋದಿಸಿ ರಾಜಭವನಕ್ಕೆ ರವಾನಿಸಿದ್ದು ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಅವರ ಒಪ್ಪಿಗೆಯೊಂದಿಗೆ, 24 ಗಂಟೆಗಳಲ್ಲಿ ಕಾನೂನಾಗಿ ಮಾರ್ಪಟ್ಟಿದೆ.


  ಇದನ್ನೂ ಓದಿ: Kalaburagi: ತೊಡೆಗೆ ಗೋಧಿ ಹಿಟ್ಟು ಕಟ್ಟಿಕೊಂಡು ದೈಹಿಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿ; ತಗ್ಲಾಕೊಂಡಿದ್ದು ಹೇಗೆ?


  ಉತ್ತರಾಖಂಡ ಬೆರೋಜ್‌ಗಾರ್ ಒಕ್ಕೂಟದ ಪ್ರತಿಭಟನೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಮಯದಲ್ಲಿ ಸಿಎಂ ಧಾಮಿ ಒಕ್ಕೂಟದ ಪ್ರತಿನಿಧಿಗಳನ್ನು ಭೇಟಿಯಾಗಿ ಪಕ್ಷಪಾತವಿಲ್ಲದ ಮೋಸಮುಕ್ತ ಹಾಗೂ ಪಾರದರ್ಶಕ ಪರೀಕ್ಷಾ ವಿಧಾನಗಳನ್ನು ಅಳವಡಿಸಲು ಸರಕಾರ ಬದ್ಧವಾಗಿರುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.


  ಆ್ಯಂಟಿ ಚೀಟಿಂಗ್ (ಮೋಸ ವಿರೋಧಿ) ಕಾನೂನಿನ ನಿಬಂಧನೆಗಳು


  ಪರೀಕ್ಷೆಗಳ ಆದರ್ಶ ಹಾಗೂ ಪಾವಿತ್ರ್ಯಕ್ಕೆ ಧಕ್ಕೆ ತರುವುದು, ಅಡ್ಡಿಯನ್ನುಂಟು ಮಾಡುವುದು, ಅನ್ಯಾಯದ ವಿಧಾನಗಳ ಬಳಕೆ, ಪ್ರಶ್ನೆ ಪತ್ರಿಕೆಗಳ ಸೋರಿಕೆ ಮತ್ತು ಇತರ ಅಕ್ರಮಗಳಿಗೆ ಸಂಬಂಧಿಸಿದ ಅಪರಾಧಗಳನ್ನು ತಡೆಗಟ್ಟುವುದು ಈ ಕಾನೂನಿನ ಹಿಂದಿರುವ ಮುಖ್ಯ ಉದ್ದೇಶವಾಗಿದೆ ಎಂದು ಸುಗ್ರೀವಾಜ್ಞೆ ಸ್ಪಷ್ಟಪಡಿಸಿದೆ.


  ಇದು ರಾಜ್ಯ ಸರ್ಕಾರದ ಅಡಿಯಲ್ಲಿ ಹುದ್ದೆಗಳಿಗೆ ನೇಮಕಾತಿಗಾಗಿ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವುದನ್ನು ಒಳಗೊಂಡಿದೆ ಹಾಗೂ ಸರ್ಕಾರವು ನಡೆಸುವ ಸ್ವಾಯತ್ತ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಅನುದಾನದೊಂದಿಗೆ ಕಾರ್ಯನಿರ್ವಹಿಸುವ ಅಧಿಕಾರಿಗಳು, ನಿಗಮಗಳು ಮತ್ತು ಸಂಸ್ಥೆಗಳ ನಿಯಮಗಳಿಗೆ ಬದ್ಧವಾಗಿವೆ.


  ಸುಗ್ರೀವಾಜ್ಞೆಯ ಪ್ರಕಾರ, ಯಾವುದೇ ಪರೀಕ್ಷಾರ್ಥಿಯು ವಂಚನೆ ಅಥವಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ (ಆನ್‌ಲೈನ್ ಮತ್ತು ಆಫ್‌ಲೈನ್) ಮತ್ತೊಬ್ಬ ಪರೀಕ್ಷಾರ್ಥಿಯನ್ನು ವಂಚಿಸಲು ಅಥವಾ ಅನ್ಯಾಯದ ವಿಧಾನವನ್ನು ಅನುಸರಿಸಿದರೆ, ಆ ಪರೀಕ್ಷಾರ್ಥಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಠ ರೂ. 5 ಲಕ್ಷ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ ದಂಡವನ್ನು ಪಾವತಿಸದಿದ್ದರೆ, ಪರೀಕ್ಷಾರ್ಥಿಗೆ ಹೆಚ್ಚುವರಿ ಒಂಬತ್ತು ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ.


  ಎರಡನೇ ಬಾರಿಯ ತಪ್ಪಿತಸ್ಥರಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಲಾಗುತ್ತದೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 30 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.


  ಶಿಕ್ಷೆ ಹಾಗೂ ದಂಡ ಕಟ್ಟಿಟ್ಟ ಬುತ್ತಿ


  ಪಿತೂರಿ ಹಾಗೂ ಅನ್ಯಾಯದ ವಿಧಾನಗಳಲ್ಲಿ ತೊಡಗಿಸಿಕೊಂಡಿರುವ ಯಾವುದೇ ವ್ಯಕ್ತಿ, ಪ್ರಿಂಟಿಂಗ್ ಪ್ರೆಸ್, ಸೇವಾ ಪೂರೈಕೆದಾರರು ಪರೀಕ್ಷಾ ಸಾಮಗ್ರಿಯನ್ನು ಇಟ್ಟುಕೊಳ್ಳಲು ಮತ್ತು ಸಾಗಿಸಲು ಅಧಿಕಾರ ಹೊಂದಿರುವ ಯಾವುದೇ ವ್ಯಕ್ತಿ ಮತ್ತು ಸಂಸ್ಥೆ, ಪರೀಕ್ಷಾ ಪ್ರಾಧಿಕಾರದ ಯಾವುದೇ ಉದ್ಯೋಗಿ, ಸೀಮಿತ ಹೊಣೆಗಾರಿಕೆ ಪಾಲುದಾರಿಕೆ, ಕೋಚಿಂಗ್ ಸೆಂಟರ್ ಅಥವಾ ಯಾವುದಾದರೂ ಇತರ ಸಂಸ್ಥೆಗಳಿಗೆ ಹತ್ತು ವರ್ಷಕ್ಕಿಂತ ಕಡಿಮೆ ಇಲ್ಲದ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.


  ಇದನ್ನು ಜೀವಾವಧಿ ಶಿಕ್ಷೆಗೂ ವಿಸ್ತರಿಸಬಹುದು. ಇನ್ನು ತಪ್ಪಿತಸ್ಥರಿಗೆ ರೂ 1 ಕೋಟಿ ದಂಡ ವಿಧಿಸಲಾಗುವುದು ಹಾಗೂ 10 ಕೋಟಿಯವರೆಗೆ ಇದು ವಿಸ್ತರಣೆಯಾಗಲೂಬಹುದು. ದಂಡವನ್ನು ಪಾವತಿಸದೇ ಇದ್ದರೆ, ಅಪರಾಧಿಗಳಿಗೆ ಮೂರು ವರ್ಷಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.


  ಅಲ್ಲದೆ, ವಂಚನೆಯನ್ನು ಕಂಡುಹಿಡಿದ ಅರ್ಜಿದಾರರನ್ನು ಆರೋಪಪಟ್ಟಿ ದಿನಾಂಕದಿಂದ ಎರಡರಿಂದ ಐದು ವರ್ಷಗಳವರೆಗೆ ಮತ್ತು ಶಿಕ್ಷೆಯ ಸಂದರ್ಭದಲ್ಲಿ, 10 ವರ್ಷಗಳವರೆಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಬಹಿಷ್ಕರಿಸಲಾಗುತ್ತದೆ. ಅನ್ಯಾಯದ ರೀತಿಯಲ್ಲಿ ಗಳಿಸಿದ ಎಲ್ಲಾ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.


  ಇದಕ್ಕೂ ಮುನ್ನ, ಉತ್ತರಾಖಂಡ ಬಿಜೆಪಿ ಮಾಧ್ಯಮ ಉಸ್ತುವಾರಿ ಮನ್ವೀರ್ ಚೌಹಾಣ್ ಅವರು ಉತ್ತರಾಖಂಡ ಅಧೀನ ಸೇವೆಗಳ ಆಯ್ಕೆ ಆಯೋಗದ (ಯುಕೆಎಸ್ಎಸ್ಎಸ್ಸಿ) ಪರೀಕ್ಷೆಗಳಲ್ಲಿ ಅಕ್ರಮಗಳ ಆರೋಪದ ನಂತರ ಕಳೆದ ವರ್ಷದಿಂದ ಜಾರಿಗೊಳಿಸಿದ ಕಾನೂನು ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದರು.


  ಕ್ಯಾಬಿನೆಟ್ ಸಭೆಯಲ್ಲಿ ಈ ಸುಗ್ರೀವಾಜ್ಞೆಯನ್ನು ಹೊರಡಿಸಬೇಕಾಗಿತ್ತು ಆದರೆ ಸಭೆಯನ್ನು ಮುಂದೂಡಲಾಯಿತು ಹಾಗೂ ಇದೇ ಸಂದರ್ಭದಲ್ಲಿ ಪ್ರತಿಭಟನೆ ನಡೆದಿದ್ದು ಹಿಂಸಾಚಾರ ಸಂಭವಿಸಿತು ಹಾಗೂ ಕಾನೂನು ಜಾರಿಗೆ ತರುವ ನಿರ್ಧಾರವನ್ನು ಕೆಲವು ದಿನಗಳ ಹಿಂದಷ್ಟೇ ತೆಗೆದುಕೊಂಡಿದ್ದೆವು ಎಂದು ಚೌಹಾಣ್ ತಿಳಿಸಿದ್ದಾರೆ.


  ಇದನ್ನೂ ಓದಿ: Tunisha Sharma: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ನಟಿ ತುನಿಶಾ ಸಾವಿನ ಸೀಕ್ರೆಟ್; ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ರಾ ನಟಿ?


  ಪರೀಕ್ಷೆಗಳಲ್ಲಿ ನಡೆದ ಇತ್ತೀಚಿನ ಹಗರಣಗಳು


  ಕಳೆದ ಕೆಲವು ದಿನಗಳಿಂದ, 2016 ರಿಂದ ಉತ್ತರಾಖಂಡದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ನಿರಂತರ ಆಂದೋಲನಗಳು ನಡೆಯುತ್ತಿವೆ.


  2016 ರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರೀಕ್ಷೆಯಲ್ಲಿ ಅಕ್ರಮಗಳು ಕಂಡುಬಂದಿವೆ. ಇತ್ತೀಚಿನ ಉತ್ತರಾಖಂಡ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಕೆಪಿಎಸ್‌ಸಿ) ಪರೀಕ್ಷೆಯ ಪತ್ರಿಕೆಗಳು ಸೋರಿಕೆಯಾಗಿ ಅಭ್ಯರ್ಥಿಗಳಿಗೆ ಮಾರಾಟವಾದ ನಂತರ ರದ್ದುಗೊಳಿಸಲಾಗಿದೆ.


  2021 ರ ಡಿಸೆಂಬರ್ 4 ಮತ್ತು 5 ರಂದು UKSSSC ನಡೆಸಿದ ಲಿಖಿತ ಪರೀಕ್ಷೆಗೆ ಸಂಬಂಧಿಸಿದ ಪ್ರಕರಣವು ದೊಡ್ಡ ಹಗರಣ ಎಂದೆನಿಸಿದೆ, ಇದರಲ್ಲಿ ಸುಮಾರು 1.6 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು ಮತ್ತು 916 ವಿವಿಧ ವಿಭಾಗಗಳಿಗೆ ಆಯ್ಕೆಯಾಗಿದ್ದಾರೆ.


  ಫಲಿತಾಂಶ ಪ್ರಕಟವಾದ ನಂತರ, ಪರೀಕ್ಷಾರ್ಥಿಗಳಿಗೆ ಪರೀಕ್ಷೆಗೂ ಮುನ್ನವೇ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡಲಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.


  ಪ್ರತಿಭಟನೆಗಳಿಗೆ ಇತ್ತೀಚಿನ ಪ್ರಚೋದನೆ ಎಂದರೆ ಜನವರಿಯಲ್ಲಿ ನಡೆದ UKPSC ಪಟ್ವಾರಿ ಮತ್ತು ಅಕೌಂಟೆಂಟ್ ಪರೀಕ್ಷೆ, ಇದರಲ್ಲಿ 1.4 ಲಕ್ಷ ಅಭ್ಯರ್ಥಿಗಳು 563 ಖಾಲಿ ಹುದ್ದೆಗಳಿಗೆ ಹಾಜರಾಗಿದ್ದರು. ನಂತರ ಪರೀಕ್ಷೆಯನ್ನು ರದ್ದುಗೊಳಿಸಲಾಯಿತು ಮತ್ತು ಭಾನುವಾರ ಮತ್ತೆ ನಡೆಸಲಾಯಿತು.


  ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ


  1992 ರ ಯುಪಿಯ ಆ್ಯಂಟಿ ಚೀಟಿಂಗ್ ಕಾನೂನು


  1980 ರ ದಶಕದ ಉತ್ತರಾರ್ಧದಲ್ಲಿ ಮತ್ತು 90 ರ ದಶಕದ ಆರಂಭದಲ್ಲಿ, ಉತ್ತರ ಪ್ರದೇಶದ ಸಾರ್ವಜನಿಕ ಪರೀಕ್ಷೆಗಳು ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಸ್ಥಳೀಯ ದರೋಡೆಕೋರರನ್ನು ಒಳಗೊಂಡಿರುವ ವಂಚನೆಯ ಆರೋಪಗಳಿಗೆ ಆಗಾಗ್ಗೆ ಸಾಕ್ಷಿಯಾಯಿತು.


  1991 ರಲ್ಲಿ ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರು ರಾಜನಾಥ್ ಸಿಂಗ್ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಿಸಿದರು.


  1992 ರಲ್ಲಿ, ಕಲ್ಯಾಣ್ ಸಿಂಗ್ ಸರ್ಕಾರವು ಕಠಿಣ ವಂಚನೆ-ವಿರೋಧಿ ಕಾಯ್ದೆಯನ್ನು ಘೋಷಿಸಿತು. ಈ ಕಾಯ್ದೆಯು ಶಾಲೆ ಮತ್ತು ವಿಶ್ವವಿದ್ಯಾನಿಲಯ ಪರೀಕ್ಷೆಗಳಲ್ಲಿ ಸಾಮೂಹಿಕ ನಕಲು ಮಾಡುವ ಅಭ್ಯಾಸವನ್ನು ಕೊನೆಗೊಳಿಸುವ ಕಾನೂನು ಗುರಿಯನ್ನು ಹೊಂದಿತ್ತು.


  ಹಾಗೂ ವಿದ್ಯಾರ್ಥಿಗಳು ನಕಲು ಮಾಡುವುದು ಪತ್ತೆಯಾದರೆ ಅವರ ಕೈಗೆ ಕೋಳ ತೊಡಿಸುವುದು ಹಾಗೂ ಜೈಲಿಗೆ ಕಳುಹಿಸುವ ನಿಬಂಧನೆಯನ್ನು ಒಳಗೊಂಡಿದೆ.


  ಇದನ್ನೂ ಓದಿ: UPSC Examನಲ್ಲಿ ಯಶಸ್ವಿಯಾಗುವುದು ಸುಲಭವಲ್ಲ: ಈ ಪಂಚ ಸೂತ್ರ ಬಳಸಿದ್ರೆ ಅಷ್ಟೇನೂ ಕಷ್ಟವೂ ಅಲ್ಲ


  ನಡೆದ ಕೋಲಾಹಲಗಳೇನು?


  1992 ರ ಯುಪಿ-ಬೋರ್ಡ್ ಪರೀಕ್ಷೆಗಳ ಸಮಯದಲ್ಲಿ, ರಾಜ್ಯದ ಪತ್ರಿಕೆಗಳು ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದ ಕೈಗೆ ಕೋಳ ತೊಡಿಸಿದ ವಿದ್ಯಾರ್ಥಿಗಳ ಚಿತ್ರಗಳನ್ನು ಪ್ರಕಟಿಸಿ ಕೋಲಾಹಲಕ್ಕೆ ಕಾರಣವಾಯಿತು.


  ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನದಿಂದಾಗಿ, ಸುಮಾರು 17% ದಷ್ಟು ವಿದ್ಯಾರ್ಥಿಗಳು ಪರೀಕ್ಷೆಯನ್ನು ಮಧ್ಯದಲ್ಲಿಯೇ ತೊರೆದರು. ಈ ಪರಿಣಾಮವಾಗಿ ಮಧ್ಯಂತರದಲ್ಲಿ ಶೇ 14.70 ಮತ್ತು ಪ್ರೌಢಶಾಲಾ ಅಭ್ಯರ್ಥಿಗಳಲ್ಲಿ ಶೇ 30.30 ರಷ್ಟು ವಿದ್ಯಾರ್ಥಿಗಳು ಮಾತ್ರ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರು.


  ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ಈ ವಿಷಯವನ್ನು ಚುನಾವಣಾ ವಿಷಯವಾಗಿ ಮಾಡಿ ಇನ್ನಷ್ಟು ಕಾವೇರಿಸಿದ್ದರು.


  ಮೋಸ ಮತ್ತು ಅನ್ಯಾಯದ ಪ್ರಕರಣಗಳು ಹೆಚ್ಚಾಗುತ್ತಿವೆ


  1993 ರ ಚುನಾವಣೆಯಲ್ಲಿ, ಎಸ್‌ಪಿ ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿತು ಮತ್ತು ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಕಲು ವಿರೋಧಿ ಸುಗ್ರೀವಾಜ್ಞೆಯನ್ನು ರದ್ದುಗೊಳಿಸಿತು.


  ಸರ್ಕಾರವು ‘ಸ್ವಯಂ ಕೇಂದ್ರ’ ನಿಯಮವನ್ನು ಜಾರಿಗೆ ತಂದಿತು, ಶಾಲೆಗಳು ಮತ್ತು ಕಾಲೇಜುಗಳು ತಮ್ಮದೇ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರವಾಗಲು ಅವಕಾಶ ಮಾಡಿಕೊಟ್ಟವು.
  ಈ ನಿರ್ಣಯದ ಬಗ್ಗೆ ಮಾತನಾಡಿದ ಅಯೋಧ್ಯೆಯ (ಉತ್ತರ ಪ್ರದೇಶ) ಸರ್ಕಾರಿ ಇಂಟರ್ ಕಾಲೇಜಿನ ಉಪ-ಪ್ರಾಂಶುಪಾಲರಾದ ರಾಜೇಶ್ ತಿವಾರಿ ಅವರು ಸರ್ಕಾರಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾದ ಶೇಕಡಾವಾರು ಪ್ರಮಾಣ ಸುಧಾರಣೆಯಾದರೂ ಮೋಸ ಮತ್ತು ಅನ್ಯಾಯದ ಪ್ರಕರಣಗಳು ಹೆಚ್ಚಾದವು ಎಂದು ಹೇಳಿದರು.


  1997 ರಲ್ಲಿ, ಬಿಜೆಪಿ ಮತ್ತು ಕಲ್ಯಾಣ್ ಸಿಂಗ್ ಅವರು ಸಿಎಂ ಆಗಿ ಮರಳಿದ ನಂತರ, ಸರ್ಕಾರವು ನಕಲು ವಿರೋಧಿ ಕಾಯಿದೆಯನ್ನು ಕೆಲವೊಂದು ಬದಲಾವಣೆಗಳನ್ನು ಮಾಡುವ ಮೂಲಕ ಪುನಃ ಪರಿಚಯಿಸಿತು.

  Published by:Precilla Olivia Dias
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು