• Home
  • »
  • News
  • »
  • explained
  • »
  • Trial Blast: ಏನಿದು ಟ್ರಯಲ್ ಬ್ಲಾಸ್ಟ್? ಕೆಆರ್‌ಎಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಶುರುವಾಗಿದ್ದೇಕೆ?

Trial Blast: ಏನಿದು ಟ್ರಯಲ್ ಬ್ಲಾಸ್ಟ್? ಕೆಆರ್‌ಎಸ್ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಶುರುವಾಗಿದ್ದೇಕೆ?

ಕೆಆರ್‌ಎಸ್ ಡ್ಯಾಂನ ವಿಹಂಗಮ ನೋಟ (ಕೃಪೆ: internet)

ಕೆಆರ್‌ಎಸ್ ಡ್ಯಾಂನ ವಿಹಂಗಮ ನೋಟ (ಕೃಪೆ: internet)

ರೈತರು ಮತ್ತು ಗಣಿ ಮಾಲೀಕರ ಮಧ್ಯೆ ಸಿಲುಕಿರುವ ರಾಜ್ಯ ಸರ್ಕಾರ ಟ್ರಯಲ್ ಬ್ಲಾಸ್ಟ್ ನಡೆಸಲು ತೀರ್ಮಾನಿಸಿದೆ. ನಾಳೆಯಿಂದ 7 ದಿನಗಳ ಕಾಲ ಟ್ರಯಲ್ ಬ್ಲಾಸ್ಟ್ ನಡೆಯಲಿದ್ದು, 3 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಲಿದೆ. ಆದಾದ ಬಳಿಕ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ನೀಡಬೇಕೋ, ಬೇಡವೋ ಎನ್ನುವುದು ತೀರ್ಮಾನವಾಗಲಿದೆ. ಹಾಗಿದ್ರೆ ಏನಿದು ಟ್ರಯಲ್ ಬ್ಲಾಸ್ಟ್? ಇದು ನಡೆಯುವುದು ಹೇಗೆ? ಇದಕ್ಕೆ ರೈತರ ವಿರೋಧ ಏಕೆ? ಈ ಬಗ್ಗೆ ಮಾಹಿತಿ ಇಲ್ಲಿದೆ...

ಮುಂದೆ ಓದಿ ...
  • Share this:

 ರಾಜ್ಯದ ಜೀವನಾಡಿ ಕಾವೇರಿಯ (Cauvery) ವೇಗಕ್ಕೆ ಲಗಾಮು ಹಾಕುವ ಕೆಆರ್‌ಎಸ್‌ ಜಲಾಶಯ (KRS Dam) ಎರಡು ಕಾರಣಕ್ಕಾಗಿ ಮತ್ತೆ ಸುದ್ದಿಯಲ್ಲಿದೆ. ಒಂದು ಈ ಬಾರಿ ಉತ್ತಮ ಮಳೆಯಿಂದಾಗಿ (Rain) ಕೃಷ್ಣರಾಜ ಸಾಗರ (Krishana Raja Sagar) ತುಂಬಿದೆ. ಇದು ಅನ್ನದಾತರಿಗೆ ಮುಖ್ಯವಾಗಿ ಮಂಡ್ಯದ ರೈತರು (Mandya Farmers), ಬೆಂಗಳೂರಿನ (Bengaluru) ಜನರಿಗೆ ಸಂತಸದ ವಿಚಾರವಾಗಿದೆ. ಮತ್ತೊಂದು ನಾಳೆಯಿಂದ ಕೆಆರ್‌ಎಸ್ ಜಲಾಶಯದ ಸುತ್ತಮುತ್ತ ಟ್ರಯಲ್ ಬ್ಲಾಸ್ಟ್ (Trial Blast) ನಡೆಯಲಿದೆ. ಇದು ಆ ಭಾಗದ ರೈತರ ಆತಂಕಕ್ಕೆ ಕಾರಣವಾಗಿದೆ. ಕೆಆರ್‌ಎಸ್‌ ಸಮೀಪದಲ್ಲೇ ಬೆಟ್ಟಗಳಲ್ಲಿ ಗಣಿಗಾರಿಕೆ (Mining) ನಡೆಯುತ್ತಿದೆ. ಇದರಿಂದ ಡ್ಯಾಂಗೆ ಹಾನಿಯಾಗುತ್ತದೆ (Damage) ಎಂಬ ಆತಂಕ ಈ ಹಿಂದೆ ಕೇಳಿಬಂದಿತ್ತು. ಹೀಗಾಗಿ ಸದ್ಯ ಕೆಆರ್‌ಎಸ್‌ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲಾಗಿದೆ. ಆದರೆ ಗಣಿಗಾರಿಕೆಗೆ ಅವಕಾಶ ನೀಡುವಂತೆ ಗಣಿಮಾಲೀಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ಹೀಗಾಗಿ ರೈತರು ಮತ್ತು ಗಣಿ ಮಾಲೀಕರ ಮಧ್ಯೆ ಸಿಲುಕಿರುವ ರಾಜ್ಯ ಸರ್ಕಾರ ಇದರ ಸತ್ಯಾಸತ್ಯತೆ ಪರೀಕ್ಷಿಸಲು ಟ್ರಯಲ್ ಬ್ಲಾಸ್ಟ್ ನಡೆಸಲು ತೀರ್ಮಾನಿಸಿದೆ. ನಾಳೆಯಿಂದ 7 ದಿನಗಳ ಕಾಲ ಟ್ರಯಲ್ ಬ್ಲಾಸ್ಟ್ ನಡೆಯಲಿದ್ದು, 3 ತಿಂಗಳೊಳಗೆ ಸರ್ಕಾರಕ್ಕೆ ವರದಿ (Report) ಸಲ್ಲಿಕೆಯಾಗಲಿದೆ. ಆದಾದ ಬಳಿಕ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ನೀಡಬೇಕೋ, ಬೇಡವೋ ಎನ್ನುವುದು ತೀರ್ಮಾನವಾಗಲಿದೆ.


ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಹಾನಿಯಾಗ್ತಿದ್ಯಾ?


ಕೆಆರ್‌ಎಸ್‌ ಅಣೆಕಟ್ಟು 8600 ಅಡಿ ಉದ್ದವಿದ್ದು 130 ಅಡಿ ಎತ್ತರವಿದೆ. 4,83,350 ಲಕ್ಷ ಘನ ಅಡಿಗಳ ನೀರು ಸಂಗ್ರಹ ಸಾಮರ್ಥ್ಯವಿರುವ ಈ ಅಣೆಕಟ್ಟಿಗೆ ಧಕ್ಕೆಯಾದರೆ ಅದರಿಂದ ಉಂಟಾಗುವ ಅಪಾಯ ಕಲ್ಪಿಸಿಕೊಳ್ಳುವುದೂ ಅಸಾಧ್ಯ. ಪರಿಸ್ಥಿತಿ ಹೀಗಿರುವಾಗ ಕೆಆರ್‌ಎಸ್ ಹತ್ತಿರದಲ್ಲೇ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿತ್ತು. ಮುಖ್ಯವಾಗಿ ಬೇಬಿ ಬೆಟ್ಟದಲ್ಲಿ ಗಣಗಾರಿಕೆ ನಡೆಯುತ್ತಿತ್ತು. ಬೆಟ್ಟದಲ್ಲಿ ಸುಮಾರು 200ರಿಂದ 500 ಅಡಿ ಆಳದಲ್ಲಿ ಬ್ಲಾಸ್ಟ್‌ ನಡೆಯುತ್ತಿದ್ದು, ಇದರಿಂದ ಕೆಆರ್‌ಎಸ್‌ಗೆ ಧಕ್ಕೆಯಾಗುತ್ತದೆ ಎನ್ನುವುದು ರೈತ ಸಂಘ ಹಾಗೂ ಪ್ರಗತಿಪರರ ಆರೋಪವಾಗಿತ್ತು.


ರೈತರ ಆರೋಪ ತಳ್ಳಿ ಹಾಕುತ್ತಿರುವ ಗಣಿ ಮಾಲೀಕರು


ಆದರೆ ರೈತರು, ಪ್ರಗತಿಪರರ ಆರೋಪವನ್ನು ಗಣಿ ಮಾಲೀಕರು ತಳ್ಳಿ ಹಾಕಿದ್ದಾರೆ. ಕಾನೂನು ಬದ್ಧವಾಗಿ ಪರ್ಮಿಷನ್ ಪಡೆದು, ಗಣಿಗಾರಿಕೆ ಮಾಡುತ್ತಿದ್ದೇವೆ. ಇಲ್ಲಿ ಗಣಿಗಾರಿಕೆಯಿಂದ ಕೆಆರ್‌ಎಸ್‌ಗೆ ಯಾವುದೇ ಧಕ್ಕೆ ಆಗುವುದಿಲ್ಲ. ಹೀಗಾಗಿ ಸರ್ಕಾರವೇ ಮುಂದೆ ನಿಂತು, ತಜ್ಞರನ್ನು ಕರೆಸಿ, ಪರಿಶೀಲನೆ ಮಾಡಿಸಲಿ ಅಂತ ಗಣಿ ಮಾಲೀಕರು ಆಗ್ರಹಿಸಿದ್ದರು.


2018ರಲ್ಲಿ ನಿಗೂಢ ಶಬ್ದಕ್ಕೆ ಬೆಚ್ಚಿಬಿದ್ದಿದ್ದ ಮಂಡ್ಯ


ಅದು 2018ರ ಸೆಪ್ಟೆಂಬರ್ 25ನೇ ತಾರೀಖು. ಮಧ್ಯಾಹ್ನ ಸರಿ ಸುಮಾರು 2 ಗಂಟೆ ಸಮಯ. ಆಗ ಮಂಡ್ಯದ ಬೇಬಿ ಬೆಟ್ಟ ಸೇರಿದಂತೆ  ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಶಬ್ದವಾಗಿತ್ತು. ಸುಮಾರು ಅರ್ಧ ಗಂಟೆಗಳ ಅವಧಿಯಲ್ಲಿ ಬ್ಯಾಕ್ ಟು ಬ್ಯಾಕ್ ಶಬ್ದವಾಗಿದ್ದು, ಮಂಡ್ಯ ಜನರು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಭೂಕಂಪವೋ, ಉಗ್ರಗಾಮಿಗಳು ಬಾಂಬ್ ಸ್ಫೋಟಿಸಿದ್ರೋ, ಇನ್ನೇನೋ ಅನಾಹುತವಾಯ್ತೋ ಅಂತ ಕಂಗೆಟ್ಟಿದ್ದರು.


ಇದನ್ನೂ ಓದಿ: Air Pollution: ಈ ಪಟ್ಟಣಕ್ಕೆ ಏನಾಗಿದೆ? ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವೇನು?


 ಇದು ಗಣಿಗಾರಿಕೆ ಎಫೆಕ್ಟ್ ಎಂದಿದ್ದ ತಜ್ಞರು


ಬಳಿಕ ಕೆಆರ್‌ಎಸ್‌ ಅಣೆಕಟ್ಟು ಸುರಕ್ಷತಾ ಸಮಿತಿಯು ನೈಸರ್ಗಿಕ ವಿಕೋಪ ತಡೆ ಸಮಿತಿ ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿತ್ತು. ಈ ವೇಳೆ ಇದು ಗಣಿಗಾರಿಕೆ ಎಫೆಕ್ಟ್ ಅಂತ ತಜ್ಞರು ವರದಿ ನೀಡಿದ್ದರು. ಇದರಿಂದಾಗಿ ಕೆಆರ್‌ಎಸ್‌ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಸಮಿತಿ ಶಿಫಾರಸು ಮಾಡಿತ್ತು. ಇದರಿಂತ ಕೆಆರ್‌ಎಸ್‌ಗೆ ಹಾನಿಯಾಗಬಹುದು ಅಂತ ಎಚ್ಚರಿಕೆಯನ್ನೂ ನೀಡಿತ್ತು. ಇದಾದ ಬಳಿಕ ಕೆಆರ್‌ಎಸ್‌ ಸುತ್ತಮುತ್ತಲ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಲಾಗಿತ್ತು.


2019ರಲ್ಲಿ ನಡೆದಿತ್ತು ಟ್ರಯಲ್ ಬ್ಲಾಸ್ಟ್‌ಗೆ ಯತ್ನ


ಗಣಿಗಾರಿಕೆ ನಿಷೇಧದಿಂದ ಕಂಗೆಟ್ಟಿದ್ದ ಗಣಿಮಾಲೀಕರು ಸರ್ಕಾರದ ಮೇಲೆ ಒತ್ತಡ ಹೇರಿದ್ದರು. 2019ರಲ್ಲಿ ಗಣಿ ಮಾಲೀಕರ ಮನವಿಯಂತೆ ಆಗಿನ ಸರ್ಕಾರ ಪುಣೆಯ .. 2019 ಕೇಂದ್ರ ನೀರು ಮತ್ತು ವಿದ್ಯುತ್ ಸಂಶೋಧನಾ ಕೇಂದ್ರ (CWPRS) ದಿಂದ ತಜ್ಞರು ಹಾಗೂ ವಿಜ್ಞಾನಿಗಳನ್ನು ಕರೆಸಿತ್ತು. ಜನವರಿ 24ರಿಂದ 28ರವರೆಗೆ ಮೊದಲ ಬಾರಿಗೆ ಟ್ರಯಲ್ ಬ್ಲಾಸ್ಟ್ ನಡೆಸಲು ತಯಾರಿ ನಡೆಸಲಾಗಿತ್ತು. ಪ್ರೊ. ಎಕೆ ಘೋಷ್ ನೇತೃತ್ವದ ನಾಲ್ವರು ತಜ್ಞರು ಆಗಮಿಸಿ, ಕೆಆರ್‌ಎಸ್‌ ಅಕ್ಕಪಕ್ಕ 400 ಕುಣಿಗಳನ್ನು ತೋಡಿಸಿ ಬ್ಲಾಸ್ಟ್‌ಗೆ ಸಜ್ಜಾಗಿದ್ದರು.


ಗೋಬ್ಯಾಕ್ ಚಳವಳಿ ಮಾಡಿದ್ದ ರೈತರು


ಆಗ ರೈತರು ಮತ್ತು ಪ್ರಗತಿಪರರು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ ಗೋಬ್ಯಾಕ್ ಚಳವಳಿ ಮಾಡಿದ್ದರು. ಟ್ರಯಲ್ ಬ್ಲಾ,ಸ್ಟ್‌ನಿಂದ ಕೆಆರ್‌ಎಸ್‌ಗೆ ಹಾನಿಯಾದರೆ ಯಾರು ಹೊಣೆ ಅಂತ ಪ್ರಶ್ನಿಸಿದ್ದರು. ಪ್ರತಿಭಟನಾಕಾರರ ಆಕ್ರೋಶಕ್ಕೆ ಹೆದರಿದ ತಜ್ಞರು, ಅಲ್ಲಿಂದ ವಾಪಸ್ಸಾಗಿದ್ದರು.


ಕೆಆರ್‌ಎಸ್‌ನಲ್ಲಿ ಬಿರುಕು ಅಂತ ಆರೋಪಿಸಿದ್ದ ಸುಮಲತಾ


ಮಂಡ್ಯ ಸಂಸದೆ ಸುಮಲತಾ 2021ರ ಮೇನಲ್ಲಿ ಕೆಆರ್‌ಎಸ್‌ ಜಲಾಶಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದಕ್ಕೆ ಅಕ್ರಮವಾಗಿ ನಡೆಯುತ್ತಿರುವ ಗಣಿಗಾರಿಕೆಯೇ ಕಾರಣ ಅಂತ ಆರೋಪಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಲ್ಲದೇ ಸಂಸತ್‌ನಲ್ಲೂ ಈ ಬಗ್ಗೆ ದನಿಯೆತ್ತಿದ್ದರು. ಆಗ ಸುಮಲತಾ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ, ಕೇಂದ್ರ ಜಲಶಕ್ತಿ ಸಚಿವಾಲಯದ ಅಪರ ಕಾರ್ಯದರ್ಶಿ ನೇತೃತ್ವದಲ್ಲಿ ತಂಡ ಕಳಿಸಿ, ಪರಿಶೀಲಿಸಿತ್ತು. ಇದಾದ ಮೇಲೆ ಇದಕ್ಕೆ ಪುಷ್ಟಿ ನೀಡುವಂತೆ ಕೆಆರ್‌ಎಸ್ ಮೆಟ್ಟಿಲು ಸಣ್ಣ ಪ್ರಮಾಣದಲ್ಲಿ ಕುಸಿತವಾಗಿತ್ತು. ಇಷ್ಟೆಲ್ಲಾ ಅವಾಂತರದ ಬಳಿಕ ಕಳೆದ 2-3 ವರ್ಷಗಳಿಂದ ಅಲ್ಲಿ ಗಣಿಗಾರಿಕೆ ಸ್ತಬ್ಧವಾಗಿತ್ತು.


ಮತ್ತೆ ಗಣಿ ಮಾಲೀಕರಿಂದ ಒತ್ತಡ


ಗಣಿಗಾರಿಕೆ ನಿಷೇಧದಿಂದ ಕಂಗೆಟ್ಟ ಗಣಿಮಾಲೀಕರು ಮತ್ತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ರಾಜ್ಯದ ಹೊರಗಿನ ವಿಜ್ಞಾನಿಗಳು, ತಜ್ಞರು ಬಂದು ಪರಿಶೀಲನೆ ಮಾಡಲಿ. ಅವರ ವರದಿಯಂತೆ ಕ್ರಮ ಕೈಗೊಳ್ಳಿ ಅಂತ ಮನವಿ ಮಾಡಿದ್ದರು.


ಜಾರ್ಖಂಡ್‌ನಿಂದ ತಜ್ಞರನ್ನು ಕರೆಸಿರುವ ಸರ್ಕಾರ


ರೈತರು ಮತ್ತು ಗಣಿ ಮಾಲೀಕರ ಮಧ್ಯೆ ಸಿಲುಕಿರುವ ರಾಜ್ಯ ಸರ್ಕಾರ ಇದರ ಸತ್ಯಾಸತ್ಯತೆ ಪರೀಕ್ಷಿಸಲು ಟ್ರಯಲ್ ಬ್ಲಾಸ್ಟ್ ನಡೆಸಲು ತೀರ್ಮಾನಿಸಿದೆ. ಇದಕ್ಕಾಗಿ ಜಾರ್ಖಂಡ್‌ನ ಧನಾಬಾದ್‌ನಿಂದ ತಜ್ಞರು ಹಾಗೂ ವಿಜ್ಞಾನಿಗಳನ್ನು ಕರೆಸಿದೆ. ನಾಳೆಯಿಂದ 7 ದಿನಗಳ ಕಾಲ ಟ್ರಯಲ್ ಬ್ಲಾಸ್ಟ್ ನಡೆಯಲಿದ್ದು, 3 ತಿಂಗಳೊಳಗೆ ಸರ್ಕಾರಕ್ಕೆ ವರದಿ (Report) ಸಲ್ಲಿಕೆಯಾಗಲಿದೆ. ಆದಾದ ಬಳಿಕ ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ನೀಡಬೇಕೋ, ಬೇಡವೋ ಎನ್ನುವುದು ತೀರ್ಮಾನವಾಗಲಿದೆ.


5 ಕಡೆ ಟ್ರಯಲ್ ಬ್ಲಾಸ್ಟ್


ನಾಳೆಯಿಂದ ಕೆಆರ್‌ಎಸ್‌ ಡ್ಯಾಂನ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ, ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕಿನ 5 ಕಡೆ ಟ್ರಯಲ್ ಬ್ಲಾಸ್ಟ್ ನಡೆಯಲಿದೆ. ಬೇಬಿ ಬೆಟ್ಟ, ಪನ್ನಂಗಾಡಿ ಗ್ರಾಮ, ನಾರ್ತ್ ಬ್ಯಾಕ್ ಪ್ರದೇಶ, ನೀಲನಹಳ್ಳಿ ಸೇರಿದಂತೆ 5 ಬ್ಲಾಸ್ಟ್ ನಡೆಯಲಿದೆ.


ಹೇಗೆ ನಡೆಯಲಿದೆ ಟ್ರಯಲ್ ಬ್ಲಾಸ್ಟ್?


ಟ್ರಯಲ್ ಬ್ಲಾಸ್ಟ್ ಮಾಡುವ ಹೊಣೆಯನ್ನು ಕೊಡಗಿನ ಕುಶಾಲನಗರದ ಬಿಎಸ್ಆರ್ ಎಂಟರ್‌ಪ್ರೈಸರ್ ಎಂಬ ಸಂಸ್ಥೆ ಹೊತ್ತುಕೊಂಡಿದೆ. ಈಗಾಗಲೇ ನಿರ್ದಿಷವಾಗಿ ಗುರುತಿಸಿದ 5 ಪ್ರದೇಶಗಳಲ್ಲಿ ಆಳದ ಕುಣಿ ತೋಡಲಾಗಿದೆ. ಇದರಲ್ಲಿ ಸಣ್ಣ ಪ್ರಮಾಣದ ಸ್ಫೋಟಕ ಇರಿಸಿ, ನಾಳೆಯಿಂದ ಸ್ಫೋಟಿಸಲಾಗುತ್ತದೆ.


ಟ್ರಯಲ್ ಬ್ಲಾಸ್ಟ್ ಹೇಗೆ ನಿರ್ಧಾರವಾಗುತ್ತದೆ?


ಮೊದಲು ಕುಣಿ ತೋಡಿ, ಅದರಲ್ಲಿ ಸ್ಫೋಟಕಗಳನ್ನು ತುಂಬಲಾಗುತ್ತದೆ. ಬಳಿಕ ನಿರ್ದಿಷ್ಟ ಸಮಯಕ್ಕೆ ಅದನ್ನು ಬ್ಲಾಸ್ಟ್ ಮಾಡಲಾಗುತ್ತದೆ. ಈ ಸ್ಫೋಟಕದ ಸ್ಫೋಟಕ ಶಬ್ಧ, ಗಾಳಿ, ಹಾಗೂ ಪ್ಲೇರಾಕ್ ನ ತೀವ್ರತೆ ನೋಡಿ ಅಳೆಯುತ್ತಾರೆ. ಬಳಿಕ ಇದನ್ನು ಅಧ್ಯಯನ ಮಾಡಿ 3 ತಿಂಗಳ ಒಳಗೆ ಸರ್ಕಾರಕ್ಕೆ ವರದಿ ನೀಡಲಾಗುತ್ತದೆ. ಈ ವರದಿ ಆಧಾರದ ಮೇಲೆ ಗಣಿಗಾರಿಕೆಯ ಭವಿಷ್ಯ ನಿಂತಿದೆ.


 ಇದನ್ನೂ ಓದಿ: Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!


 ಮತ್ತೆ ಪ್ರತಿಭಟನೆಗೆ ರೈತರ ನಿರ್ಧಾರ


ಕಳೆದ ಬಾರಿಯಂತೆ ಈ ಬಾರಿಯೂ ಮತ್ತೆ ಪ್ರತಿಭಟನೆಗೆ ರೈತ ಸಂಘಟನೆ ಹಾಗೂ ಪ್ರಗತಿಪರ  ಸಂಘಟನೆಗಳು ನಿರ್ಧರಿಸಿವೆ. ಕೆಆರ್‌ಎಸ್‌ ಬಳಿಯೇ ಪ್ರತಿಭಟನೆಗೆ ಸಜ್ಜಾಗಿದೆ. KRSನ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ ನಡೆಯಲಿದೆ. ಹೀಗಾಗಿ ನಾಳೆ ಏನಾಗಲಿದೆ ಎಂಬ ಆತಂಕ, ಕುತೂಹಲ ಎಲ್ಲರಲ್ಲೂ ಇದೆ.


(ಮಾಹಿತಿ: ಸುನೀಲ್ ಗೌಡ, ನ್ಯೂಸ್ 18 ಕನ್ನಡ, ಮಂಡ್ಯ)

Published by:Annappa Achari
First published: