Explained: ಭವಿಷ್ಯ ನಿಧಿಯ ಮೇಲಿನ ಬಡ್ಡಿಗೆ ಹೇಗೆ ತೆರಿಗೆ ವಿಧಿಸಲಾಗುತ್ತದೆ..? ಇಲ್ಲಿದೆ ಸಂಪೂರ್ಣ ವಿವರ

Tax on Employee Provident Fund Explained: ಪಿಎಫ್ ಕೊಡುಗೆಯು ಆರ್ಥಿಕ ವರ್ಷ 2023ಕ್ಕೆ ಒಂದೇ ಆಗಿದ್ದರೆ ಆದಾಯ ಬಡ್ಡಿ 15 ಲಕ್ಷ ರೂ. ಗೆ ತೆರಿಗೆ ವಿಧಿಸಲಾಗುತ್ತದೆ. ಅದೇ ರೀತಿ ನೀವು ಕಳೆದ ವರ್ಷ ನೀವು ಬಡ್ಡಿ 8.5% ಗಳಿಸಿದಲ್ಲಿ, ಹಾಗೂ ಹೆಚ್ಚಿನ ತೆರಿಗೆ ವ್ಯಾಪ್ತಿಯಲ್ಲಿ ಒಳಪಟ್ಟರೆ ಮುಂದಿನ ವರ್ಷ ನೀವು ಹೆಚ್ಚುವರಿ ಕೊಡುಗೆಯ ಮೇಲೆ 5.85%ನಷ್ಟು ಪರಿಣಾಮಕಾರಿಯಾಗಿ ಗಳಿಸುತ್ತೀರಿ

ಇಪಿಎಫ್​ಒ

ಇಪಿಎಫ್​ಒ

  • Share this:
Tax on EPFO Savings and Interest: ಪ್ರಸ್ತುತ ಬಜೆಟ್ ಘೋಷಣೆಯಲ್ಲಿ ತಿಳಿಸಿರುವಂತೆ ಹಣಕಾಸು ಸಚಿವಾಲಯವು ಖಾಸಗಿ ವಲಯದ ಉದ್ಯೋಗಿಗಳಿಗೆ (Private Sector Employees) ಉದ್ಯೋಗಿಯ ಭವಿಷ್ಯ ನಿಧಿ (Employee Provident Fund) ಕೊಡುಗೆಯು (ಇಪಿಎಫ್) 2.5 ಲಕ್ಷ ರೂ. ಹಾಗೂ ಸರಕಾರಿ ವಲಯದ ಉದ್ಯೋಗಿಗಳಿಗೆ (Government Employees) ರೂ 5 ಲಕ್ಷ ಮೀರಿದಲ್ಲಿ ಬಡ್ಡಿ ಆದಾಯಗಳ ಮೇಲೆ ತೆರಿಗೆ ವಿಧಿಸುವುದಾಗಿ ತಿಳಿಸಿದೆ. 2021-22 ರ ಭವಿಷ್ಯ ನಿಧಿ ಖಾತೆಯಲ್ಲಿಯೇ ನೀವು ಪ್ರತ್ಯೇಕ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ. ಹಾಗೂ ವ್ಯಕ್ತಿಯು ಈ ಎರಡೂ ಖಾತೆಗಳಲ್ಲಿ ತೆರಿಗೆ ಸಹಿತ ಹಾಗೂ ತೆರಿಗೆ ರಹಿತ ಕೊಡುಗೆಗಳನ್ನು ನೀಡಬಹುದಾಗಿದೆ. 2021ನೇ ಬಜೆಟ್ ಸಂದರ್ಭದಲ್ಲಿ ಉದ್ಯೋಗಿಯ ಭವಿಷ್ಯ ನಿಧಿ (Provident Fund - ಪ್ರಾವಿಡೆಂಡ್ ಫಂಡ್) ಹಾಗೂ ಸ್ವಯಂಪ್ರೇರಿತ (Voluntary Provident Fund - ವಾಲಂಟರಿ) ಭವಿಷ್ಯ ನಿಧಿ ಕೊಡುಗೆಗಳು ರೂ 2.5 ಲಕ್ಷ ಮೀರಿದ್ದರೆ ಈ ಕೊಡುಗೆಗೆ ತೆರಿಗೆ ಅನ್ವಯವಾಗುತ್ತದೆ ಎಂಬುದಾಗಿ ಘೋಷಣೆಯಾಗಿದೆ.

ಅಧಿಸೂಚನೆಯ ಪ್ರಕಾರ ತೆರಿಗೆಗೆ ವಿಧಿಸುವ ಬಡ್ಡಿಯ ಲೆಕ್ಕಾಚಾರ ನಡೆಸಲು ಭವಿಷ್ಯ ನಿಧಿ ಖಾತೆಗಳನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು ಎಂಬ ಸೂಚನೆಯನ್ನೊಳಗೊಂಡಿದೆ. ಮಾರ್ಚ್ 31, 2021ರವರೆಗೆ ಮಾಡುವ ಯಾವುದೇ ಕೊಡುಗೆಗಳನ್ನು ತೆರಿಗೆ ರಹಿತ ಕೊಡುಗೆಗಳು (Tax Free Benefits) ಎಂದು ಪರಿಗಣಿಸಲಾಗುತ್ತದೆ.ಹಾಗಿದ್ದರೆ ಈ ಕುರಿತು ಇನ್ನಷ್ಟು ಮಾಹಿತಿ ತಿಳಿದುಕೊಳ್ಳೋಣ.

ಇಪಿಎಫ್ ಕೊಡುಗೆಗಳ ಮೇಲಿನ ತೆರಿಗೆ ವಿಧಿಸುವಿಕೆ ಎಂದರೇನು..?:

ಫೆಬ್ರವರಿಯಲ್ಲಿ ಘೋಷಣೆಯಾಗಿರುವ ಬಜೆಟ್ ವಿವರಗಳನ್ನು ಆಧರಿಸಿ ಒಂದು ವರ್ಷದಲ್ಲಿ 2.5 ಲಕ್ಷಕ್ಕಿಂತ ಹೆಚ್ಚಿನ ಪಿಎಫ್ ಕೊಡುಗೆಗಳ ಮೇಲೆ ತೆರಿಗೆ ವಿನಾಯಿತಿ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಇಪಿಎಫ್ ಕೊಡುಗೆ ನೀಡುವವರಿಗೆ ಇದು ಕೊಂಚ ಕಳವಳಕಾರಿ ಅಂಶವಾಗಿದ್ದರೂ ಇದು 2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆ ನೀಡುವವರ ಮೇಲೆ ಪರಿಣಾಮ ಬೀರಲಿದೆ. ಅದೇ ರೀತಿ ಅಸ್ತಿತ್ವದಲ್ಲಿರುವ ಒಟ್ಟು ವಾರ್ಷಿಕ ಬಡ್ಡಿಯ ಮೇಲೆ ಪರಿಣಾಮ ಬೀರುವುದಿಲ್ಲ.

ಮಾರ್ಚ್ ತಿಂಗಳಿನಲ್ಲಿ ಸರಕಾರವು ಆರ್ಥಿಕ ಮಸೂದೆ, 2021ಕ್ಕೆ ತಿದ್ದುಪಡಿ ಪರಿಚಯಿಸಿತು, ಈ ತಿದ್ದುಪಡಿಯಲ್ಲಿ 2.5 ಲಕ್ಷದಿಂದ 5 ಲಕ್ಷದವರೆಗಿನ ಕೊಡುಗೆಯ ಮೇಲಿನ ಮಿತಿಯನ್ನು ದ್ವಿಗುಣಗೊಳಿಸಲು ಪ್ರಸ್ತಾವನೆ ಸಲ್ಲಿಸಿದೆ. ಇನ್ನು ತೆರಿಗೆ ವಿಧಿಸುವ ಇಲ್ಲವೇ ತೆರಿಗೆ ರಹಿತವಾದ ಕೊಡುಗೆ ಬೇರ್ಪಡಿಸುವುದನ್ನು ಇನ್ನೂ ಔಪಚಾರಿಕಗೊಳಿಸಿಲ್ಲ. ಇದಕ್ಕೆ ಸ್ವಲ್ಪ ಕಾವಾವಕಾಶ ಬೇಕು. ಅದೇ ರೀತಿ ಇದಕ್ಕೆ ಸಂಬಂಧಿಸಿದ ಡೇಟಾ ಒಟ್ಟುಗೂಡಿಸಬೇಕು ಹಾಗೂ ಪ್ರತ್ಯೇಕ ಲೆಕ್ಕಪತ್ರ ಪ್ರಕ್ರಿಯೆ ನಿರ್ಧರಿಸಬೇಕು ಎಂದು ಸಚಿವಾಲಯದ ಸದಸ್ಯರು ಹೇಳಿದ್ದಾರೆ.

CBDT ಈಗಾಗಲೇ ಹೇಳಿರುವಂತೆ ಮಾರ್ಚ್ 31, 2021ರಂದು ಮುಕ್ತಾಯವಾಗುವ ಬಾಕಿ ಹಾಗೂ ಅದರ ಮೇಲೆ ವಿಧಿಸುವ ಬಡ್ಡಿಗೆ ತೆರಿಗೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದೆ.

ತೆರಿಗೆ ಸಕ್ರಿಯಗೊಳಿಸಲು ಇರುವ ನಿಯಮಗಳೇನು?:

ಹಣಕಾಸು ಸಚಿವಾಲಯವು (Finance Department) ತೆರಿಗೆ ನಿಯಮಗಳನ್ನು ಆಗಸ್ಟ್ 31ರಂದು ಸೂಚಿಸಿದ್ದು ಈ ತೆರಿಗೆ ನಿಯಮಗಳು ಏಪ್ರಿಲ್ 1, 2022ರಿಂದ ಜಾರಿಗೆ ಬರಲಿವೆ. ಕೇಂದ್ರದ ನೇರ ತೆರಿಗೆಗಳ ಮಂಡಳಿಯು ನಿಯಮ 9ಡಿಯನ್ನು ಸೇರಿಸಿದ್ದು ಇದರ ಅನ್ವಯ ಹಿಂದಿನ ವರ್ಷದಲ್ಲಿ ಸಂಗ್ರಹಿಸಿದ ಬಡ್ಡಿ ಆದಾಯಗಳಿಗೆ ವಿನಾಯಿತಿ ನೀಡಲಾಗಿಲ್ಲ (ಖಾಸಗಿ ವಲಯದ ಉದ್ಯೋಗಿಗಳಿಗೆ 2.5 ಲಕ್ಷ ಹಾಗೂ ಸರಕಾರಿ ಉದ್ಯೋಗಿಗಳಿಗೆ 5 ಲಕ್ಷಕ್ಕಿಂತ ಹೆಚ್ಚು) ಹಾಗೂ ಹಿಂದಿನ ವರ್ಷದ ಸಂಚಿತ ಬಡ್ಡಿಯನ್ನು ಲೆಕ್ಕಹಾಕಲಾಗುತ್ತದೆ. ಭವಿಷ್ಯನಿಧಿ ಖಾತೆಯೊಳಗಿನ ಪ್ರತ್ಯೇಕ ಖಾತೆಗಳನ್ನು 2021-2022 ಮತ್ತು ನಂತರದ ವರ್ಷಗಳಲ್ಲಿ ವ್ಯಕ್ತಿಯ ತೆರಿಗೆಯ ಕೊಡುಗೆ ಮತ್ತು ತೆರಿಗೆಯಲ್ಲದ ಕೊಡುಗೆಗಾಗಿ ನಿರ್ವಹಿಸಲಾಗುತ್ತದೆ.

ಈ ಪ್ರಸ್ತಾವನೆಯ ಉದ್ದೇಶವೇನು?:

ಕೆಲವು ಉದ್ಯೋಗಿಗಳು ಭವಿಷ್ಯ ನಿಧಿಗೆ ಹೆಚ್ಚಿನ ಮೊತ್ತ ನೀಡುತ್ತಿದ್ದು ತೆರಿಗೆಯಿಂದ ವಿನಾಯಿತಿ ಪಡೆಯುತ್ತಿದ್ದಾರೆ ಎಂಬ ಅಂಶವನ್ನು ಸರಕಾರವು ಕಂಡುಕೊಂಡಿದೆ. ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳು (HNIs) ನೀಡುವ ದೊಡ್ಡ ಕೊಡುಗೆಗಳ ಮೇಲಿನ ಹೆಚ್ಚು ತೆರಿಗೆ ರಹಿತ ಬಡ್ಡಿ ಆದಾಯದ ಲಾಭದಿಂದ ಪ್ರತ್ಯೇಕಗೊಳಿಸುವ ಗುರಿಯೊಂದಿಗೆ ತೆರಿಗೆ ವಿನಾಯಿತಿಗಾಗಿ ಮಿತಿ ವಿಧಿಸಲು ಸರಕಾರ ಪ್ರಸ್ತಾಪಿಸಿದೆ. ಏಪ್ರಿಲ್ 1, 2021ರಿಂದ ಆರಂಭವಾಗುವ ಎಲ್ಲಾ ಕೊಡುಗೆಗಳಿಗೆ ಇದು ಅನ್ವಯವಾಗಲಿದೆ.

ಈ ನಿಧಿಯು ಕಾರ್ಮಿಕರ ಕ್ಷೇಯೋಭಿವೃದ್ಧಿಗಾಗಿ ರೂಪಿಸಲಾಗಿದ್ದು, ಬಡ ಕಾರ್ಮಿಕರ ಮೇಲೆ ಈ ತೆರಿಗೆ ಪರಿಣಾಮ ಬೀರುವುದಿಲ್ಲವೆಂದು ಬಜೆಟ್ ಮಂಡನೆಯ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದು ದೊಡ್ಡ ಆದಾಯಗಳಿಗೆ ಮಾತ್ರ ಅನ್ವಯವಾಗುತ್ತಿದ್ದು ಇದು ತೆರಿಗೆ ಪ್ರಯೋಜನಗಳನ್ನು ಒಳಗೊಂಡಿದೆ ಹಾಗೂ 8% ರಿಟರ್ನ್ ಅನ್ನು ಖಾತ್ರಿಪಡಿಸುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ತೆರಿಗೆಯನ್ನು ಹೇಗೆ ವಿಧಿಸಲಾಗುತ್ತದೆ?:

30%ಗೂ ಹೆಚ್ಚು ತೆರಿಗೆ ವ್ಯಾಪ್ತಿಯಲ್ಲಿರುವ ವ್ಯಕ್ತಿಗೆ 2.5 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆಯ ಮೇಲಿನ ಬಡ್ಡಿಯ ಮೇಲೆ ವಿಧಿಸುವ ತೆರಿಗೆಯು ಅಷ್ಟೇ ಆಗಿರುತ್ತದೆ. ಅಂದರೆ ಒಬ್ಬ ವ್ಯಕ್ತಿ ಭವಿಷ್ಯ ನಿಧಿಗೆ 3 ಲಕ್ಷ ಕೊಡುಗೆ ನೀಡಿದರೆ, ಅವನಿಗೆ ವಿಧಿಸುವ ತೆರಿಗೆ 50,000 ರೂ. ಆಗಿರುತ್ತದೆ. ಹಾಗಾಗಿ ಕನಿಷ್ಠ ದರದಲ್ಲಿ ವಿಧಿಸುವ ತೆರಿಗೆಯು 4,250 ರೂ. ಬಡ್ಡಿ ದರಕ್ಕೆ ಆಗಿರುತ್ತದೆ. ವ್ಯಕ್ತಿಯು 30% ತೆರಿಗೆ ವ್ಯಾಪ್ತಿಯಲ್ಲಿದ್ದರೆ ಅವರು ನೀಡಬೇಕಾಗಿರುವ ತೆರಿಗೆ 1,325 ರೂ. ಆಗಿರುತ್ತದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಸರ್ವೋಚ್ಚ ನಾಯಕನಾಗಲಿರುವ ಶೇಖ್ ಹೈಬತುಲ್ಲಾ ಅಖುಂದ್ಜಾಡಾ ಯಾರು..? 

ಒಂದು ವರ್ಷದಲ್ಲಿ 12 ಲಕ್ಷ ರೂ. ಕೊಡುಗೆ ನೀಡಿದಲ್ಲಿ, ಬಡ್ಡಿ ಆದಾಯ 9.5 ಲಕ್ಷ ರೂ. ಗೆ ತೆರಿಗೆ ವಿಧಿಸಲಾಗುತ್ತದೆ ಅಂದರೆ ವಿಧಿಸುವ ತೆರಿಗೆ 25,200 ರೂ. ಆಗಿರುತ್ತದೆ.

ಕೊಡುಗೆಗಳ ಮೇಲೆ ಶಾಶ್ವತವಾಗಿ ತೆರಿಗೆ ವಿಧಿಸಲಾಗುತ್ತದೆಯೇ?:

ಅಧಿಸೂಚನೆ ಪ್ರಕಾರ, ಹೆಚ್ಚುವರಿ ಕೊಡುಗೆಯ ಮೇಲೆ ವಿಧಿಸಲಾಗುವ ಬಡ್ಡಿ ಆದಾಯಕ್ಕೆ ಪ್ರತಿ ವರ್ಷ ತೆರಿಗೆ ವಿಧಿಸಲಾಗುತ್ತದೆ. ಆರ್ಥಿಕ ವರ್ಷ 2022ಕ್ಕೆ ನಿಮ್ಮ ವಾರ್ಷಿಕ ಕೊಡುಗೆಯು 10 ಲಕ್ಷ ರೂ. ಆಗಿದ್ದರೆ ಆದಾಯ ಬಡ್ಡಿ 7.5 ಲಕ್ಷ ರೂ.ಗೆ ತೆರಿಗೆ ವಿಧಿಸಲಾಗುತ್ತದೆ. ಇದು ಆ ವರ್ಷಕ್ಕೆ ಮಾತ್ರ ಅನ್ವಯವಾಗುವುದಲ್ಲದೆ ನಂತರದ ಎಲ್ಲಾ ವರ್ಷಗಳಿಗೂ ತೆರಿಗೆ ವಿಧಿಸಲಾಗುತ್ತದೆ.

ಇದನ್ನೂ ಓದಿ: Fact Check: ಭಾರತದ ಅಧ್ಯಕ್ಷತೆಯಲ್ಲಿ ಯುಎನ್ಎಸ್‌ಸಿ ತಾಲಿಬಾನ್ ಅನ್ನು ಭಯೋತ್ಪಾದಕ ಪಟ್ಟಿಯಿಂದ ತೆಗೆದುಹಾಕಿದೆಯೇ..?

ಇನ್ನು ಪಿಎಫ್ ಕೊಡುಗೆಯು ಆರ್ಥಿಕ ವರ್ಷ 2023ಕ್ಕೆ ಒಂದೇ ಆಗಿದ್ದರೆ ಆದಾಯ ಬಡ್ಡಿ 15 ಲಕ್ಷ ರೂ. ಗೆ ತೆರಿಗೆ ವಿಧಿಸಲಾಗುತ್ತದೆ. ಅದೇ ರೀತಿ ನೀವು ಕಳೆದ ವರ್ಷ ನೀವು ಬಡ್ಡಿ 8.5% ಗಳಿಸಿದಲ್ಲಿ, ಹಾಗೂ ಹೆಚ್ಚಿನ ತೆರಿಗೆ ವ್ಯಾಪ್ತಿಯಲ್ಲಿ ಒಳಪಟ್ಟರೆ ಮುಂದಿನ ವರ್ಷ ನೀವು ಹೆಚ್ಚುವರಿ ಕೊಡುಗೆಯ ಮೇಲೆ 5.85%ನಷ್ಟು ಪರಿಣಾಮಕಾರಿಯಾಗಿ ಗಳಿಸುತ್ತೀರಿ (ಬಡ್ಡಿ ದರ ಬದಲಾಗದೇ ಇದ್ದಲ್ಲಿ).
Published by:Sharath Sharma Kalagaru
First published: