• Home
  • »
  • News
  • »
  • explained
  • »
  • President of India: ರಾಷ್ಟ್ರಪತಿ ಹುದ್ದೆ ಎಷ್ಟು ಮಹತ್ವದ್ದು? ಅವರ ಸಂಬಳ, ಸವಲತ್ತುಗಳೇನು?

President of India: ರಾಷ್ಟ್ರಪತಿ ಹುದ್ದೆ ಎಷ್ಟು ಮಹತ್ವದ್ದು? ಅವರ ಸಂಬಳ, ಸವಲತ್ತುಗಳೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಷ್ಟ್ರಪತಿಗಳು ಭಾರತ ಗಣರಾಜ್ಯದ ಅಧ್ಯಕ್ಷರೂ ಆಗಿರುತ್ತಾರೆ. ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕರೂ ಇವರೇ ಆಗಿರುತ್ತಾರೆ. ಹಾಗಿದ್ರೆ ಭಾರತದಲ್ಲಿ ರಾಷ್ಟ್ರಪತಿ ಸ್ಥಾನದ ಮಹತ್ವವೇನು? ಅವರಿಗೆ ಸಿಗುವ ಸಂಬಳ, ಸೌಲಭ್ಯಗಳೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ಭಾರತ (India) ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ (democratic country) ಒಂದು. ಹಲವು ಒಕ್ಕೂಟ, ಹಲವು ರಾಜ್ಯ, ಹಲವು ಧರ್ಮ, ಹಲವು ಪ್ರಾಕೃತಿಕ ವಿಭಿನ್ನತೆ, ಹಲವು ಭಾಷೆ, ಹಲವು ಜನಾಂಗ.. ಹೀಗೆ ಭಿನ್ನತೆಯಿದ್ದರೂ ಏಕತೆಯನ್ನು ಸಾಧಿಸಿದ ರಾಷ್ಟ್ರ ಈ ರಾಷ್ಟ್ರದ ಮುಖ್ಯಸ್ಥರೇ ರಾಷ್ಟ್ರಪತಿಗಳು (President). ದೇಶದ ಪ್ರಥಮ ಪ್ರಜೆಯ (First Citizen) ಸ್ಥಾನವನ್ನು ನೀಡಿ ಅವರನ್ನು ಗೌರವಿಸಲಾಗುತ್ತದೆ. ರಾಷ್ಟ್ರಪತಿಗಳು ಭಾರತ ಗಣರಾಜ್ಯದ ಅಧ್ಯಕ್ಷರೂ ಆಗಿರುತ್ತಾರೆ. ಸಾಂವಿಧಾನಿಕವಾಗಿ ಭಾರತದ ಮುಖ್ಯಸ್ಥರಾಗಿರುತ್ತಾರೆ ಮತ್ತು ಭಾರತೀಯ ಸಶಸ್ತ್ರ ಪಡೆಗಳ ದಂಡನಾಯಕರೂ ಇವರೇ ಆಗಿರುತ್ತಾರೆ. ಹಾಗಿದ್ರೆ ಭಾರತದಲ್ಲಿ ರಾಷ್ಟ್ರಪತಿ ಸ್ಥಾನದ ಮಹತ್ವವೇನು? ಅವರಿಗೆ ಸಿಗುವ ಸಂಬಳ, ಸೌಲಭ್ಯಗಳೇನು? ಈ ಬಗ್ಗೆ ಮಾಹಿತಿ ಇಲ್ಲಿದೆ ಓದಿ…


 ಸಂವಿಧಾನದಲ್ಲಿ ರಾಷ್ಟ್ರಪತಿ ಬಗ್ಗೆ ಉಲ್ಲೇಖ


ಭಾರತದ ಸಂವಿಧಾನದ 52ನೇ ವಿಧಿಯು ರಾಷ್ಟ್ರಕ್ಕೆ ರಾಷ್ಟ್ರಪತಿ ಸ್ಥಾನವನ್ನು ಹೊಂದಿರಲು ನಿರ್ದೇಶಿಸುತ್ತದೆ. ರಾಷ್ಟ್ರಪತಿಯವರು ಸಂವಿಧಾನ ಮುಖ್ಯಸ್ಥರೂ, ರಾಷ್ಟ್ರದ ಪ್ರಥಮ ಪ್ರಜೆಯೂ, ಕಾರ್ಯಾಂಗದ ಮುಖ್ಯಸ್ಥರೂ ಹಾಗೂ ಭಾರತದ ವಾಯುಪಡೆ, ಭೂಪಡೆ, ಮತ್ತು ನೌಕಾಪಡೆಯ ಮಹಾದಂಡನಾಯಕರೂ ಆಗಿರುತ್ತಾರೆ. ರಾಷ್ಟ್ರದ ಮುಖ್ಯಸ್ಥರೂ ಆಗಿದ್ದು ವಿಶೇಷ ಅಧಿಕಾರಗಳನ್ನು ಹೊಂದಿದ್ದು ಸರ್ವೋನ್ನತ ಸ್ಥಾನವನ್ನು ಹೊಂದಿದ್ದಾರೆ.


 ರಾಷ್ಟ್ರಪತಿಯಾಗಲು ಬೇಕಾದ ಅರ್ಹತೆಗಳೇನು?


ಭಾರತೀಯ ಸಂವಿಧಾನದ 52ನೇ ಪರಿಚ್ಛೇದ ಅಧ್ಯಕ್ಷರ ಪದವಿಯ ಸೃಷ್ಟಿಯನ್ನು ತೋರಿಸುತ್ತದೆ. ಸಂವಿಧಾನದ ಪ್ರಕಾರ, ಭಾರತದ ರಾಷ್ಟ್ರಪತಿಯಾಗಲು ಭಾರತೀಯ ಪ್ರಜೆಯಾಗಿರಬೇಕು. ಇನ್ನು ಎಷ್ಟು ಅವಧಿಗಳಿಗಾದರೂ ಚುನಾಯಿತರಾಗಬಹುದು. ಇನ್ನು ಕನಿಷ್ಠ 35 ವರ್ಷ ಪೂರ್ಣವಾಗಿರುವ ವ್ಯಕ್ತಿ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡಬಹುದು.


ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?


 ರಾಷ್ಟ್ರಪತಿಯವರ ಅಧಿಕಾರ


ರಾಷ್ಟ್ರಪತಿಗಳು ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದಾರೆ. ಅಲ್ಲದೆ ಸಂವಿಧಾನದ ರಕ್ಷಕರೂ ಆಗಿದ್ದಾರೆ. ಆದರೆ ಈ ಎಲ್ಲಾ ಅಧಿಕಾರಗಳ ಮಿತಿಗಾಗಿ ಅವರು ಯಾವುದೇ ಅಧಿಕಾರ ಚಲಾಯಿಸಲು ಪ್ರಧಾನ ಮಂತ್ರಿಯವರ ಅಥವಾ ಕೇಂದ್ರ ಮಂತ್ರಿಮಂಡಳದ ಸಲಹೆಯ ಮೇಲೆ ಮಾತ್ರ ಆಜ್ಞೆ ಮಾಡಬಹುದು.


 ರಾಷ್ಟ್ರಪತಿ ಭವನದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ


 ಭಾರತದ ರಾಷ್ಟ್ರಪತಿಗಳಾಗಿ ಹುದ್ದೆ ಅಲಂಕರಿಸಿದ ಮೇಲೆ, ರಾಷ್ಟ್ರಪತಿಗಳಿಗೆ ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನವನ್ನ ವಾಸ್ತವ್ಯಕ್ಕೆ ನೀಡಲಾಗುತ್ತದೆ. ರಾಷ್ಟ್ರಪತಿ ಭವನವು ವಿಶ್ವದ ಎಲ್ಲಾ ದೇಶದ ಮುಖ್ಯಸ್ಥರು ಹೊಂದಿರುವ ನಿವಾಸಗಳಲ್ಲಿಯೇ ಅತಿದೊಡ್ಡದಾಗಿದೆ.


ಭವ್ಯ ನಿವಾಸದಲ್ಲಿ ಪ್ರಥಮ ಪ್ರಜೆಯ ವಾಸ


ರಾಷ್ಟ್ರಪತಿ ಭವನ ಸುಮಾರು 330 ಎಕೆರೆ ಜಾಗದಲ್ಲಿ ಬರೋಬ್ಬರಿ 340 ಕೊಠಡಿಗಳಿವೆ. ಈ ಪೈಕಿ 63 ಲಿವಿಂಗ್ ರೂಮ್‌ಗಳಾಗಿವೆ. ಸ್ವಾಗತ ಕೊಠಡಿಗಳು, ವಸತಿ ಗೃಹಗಳು, ಕಚೇರಿಗಳು ಇವೆ. ಇದರಲ್ಲಿ ಸುಂದರ ಉದ್ಯಾನವನ, ಬಯಲು, ಅಂಗರಕ್ಷಕರು ಮತ್ತು ಸಿಬ್ಬಂದಿ ವಸತಿ ಗೃಹಗಳು ಸೇರಿದಂತೆ ಹಲವು ಸೌಕರ್ಯಗಳು ಇವೆ. ರಾಷ್ಟ್ರಪತಿಗಳ ಸೇವೆಗಾಗಿ ಮತ್ತು ನಿರ್ವಹಣೆಗಾಗಿ 200 ಸಿಬ್ಬಂದಿಗಳಿದ್ದಾರೆ.


ಇನ್ನೂ ಎರಡು ಪ್ರತ್ಯೇಕ ನಿವಾಸ


ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಜೊತೆಗೆ ಇನ್ನೂ ಎರಡು ಪ್ರತ್ಯೇಕ ವಸತಿಗೃಹಗಳು ರಾಷ್ಟ್ರಪತಿಗಳಿಗಾಗಿ ಮೀಸಲಾಗಿರುತ್ತವೆ. ಈ ಪೈಕಿ ಒಂದು ಉತ್ತರ ಭಾರತದ ಶಿಮ್ಲಾದಲ್ಲಿದ್ದರೆ, ಮತ್ತೊಂದು ದಕ್ಷಿಣ ಭಾರತದ ಹೈದರಾಬಾದ್ ನಲ್ಲಿದೆ. ಶಿಷ್ಟಾಚಾರದಂತೆ ರಾಷ್ಟ್ರಪತಿಗಳು ಹೈದರಾಬಾದ್‌ ನಿವಾಸಕ್ಕೆ ವರ್ಷದಲ್ಲಿ ಕನಿಷ್ಠ ಒಮ್ಮಯಾದರು ಭೇಟಿ ನೀಡಿ ಅಲ್ಲಿಂದಲೇ ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ.


ರಾಷ್ಟ್ರಪತಿಗಳ ವೇತನ ಎಷ್ಟು?


ಭಾರತದಲ್ಲಿ ಅತಿ ಹೆಚ್ಚು ವೇತನ ಪಡೆಯುವ ವ್ಯಕ್ತಿ ರಾಷ್ಟ್ರಪತಿಗಳು. ಅವರಿಗೆ ಪ್ರತಿ ತಿಂಗಳಿಗೆ ಐದು ಲಕ್ಷ ವೇತನ ನೀಡಲಾಗುತ್ತದೆ. 2018 ರಲ್ಲಿ ರಾಷ್ಟ್ರಪತಿ ವೇತನವನ್ನು 1.50 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಯಿತು. 1998 ಕ್ಕೂ ಮೊದಲು ರಾಷ್ಟ್ರಪತಿಗಳಿಗೆ ರೂ.10,000 ವೇತನ ನೀಡಲಾಗುತ್ತಿತ್ತು. 1998ರಲ್ಲಿ ಈ ಮೊತ್ತವನ್ನು 50,000ಕ್ಕೆ ಹೆಚ್ಚಿಸಲಾಯಿತು. ರಾಷ್ಟ್ರಪತಿಗಳು ವೇತನದ ಜೊತೆಗೆ ಹಲವು ಭತ್ಯೆಗಳನ್ನೂ ಸಹ ಸಿಗುತ್ತವೆ.


ವೈದ್ಯಕೀಯ ಮತ್ತು ಇತರೇ ಸೌಲಭ್ಯ


ಭಾರತದ ರಾಷ್ಟ್ರಪತಿಗಳು ಇಡೀ ಜೀವನ ಪರ್ಯಂತ ಉಚಿತ ವೈದ್ಯಕೀಯ ಸೇವೆಗಳಿಗೆ ಅರ್ಹರಾಗಿದ್ದಾರೆ. ಇವರ ಭದ್ರತೆಗಾಗಿ ಕಸ್ಟಮ್-ನಿರ್ಮಿತ ಕಪ್ಪು ಮರ್ಸಿಡಿಸ್ ಬೆಂಜ್ S600 (W221) ಪುಲ್‌ಮನ್ ಗಾರ್ಡ್‌ ನೀಡಲಾಗುತ್ತದೆ. ಅಧ್ಯಕ್ಷರು ಅಧಿಕೃತ ಭೇಟಿಗಳಿಗಾಗಿ ಹೆಚ್ಚು ಶಸ್ತ್ರಸಜ್ಜಿತ ಸ್ಟ್ರೆಚ್ ಲಿಮೋಸಿನ್ ಅನ್ನು ಹೊಂದಿದ್ದಾರೆ.


ಮಹಾಭಿಯೋಗದ ಮೂಲಕ ಪದಚ್ಯುತಿ


ಸಂವಿಧಾನದ 61 ನೆಯ ಪರಿಚ್ಛೇದದಂತೆ, ಅಧ್ಯಕ್ಷರು ಭಾರತೀಯ ಸಂವಿಧಾನವನ್ನು ಮೀರಿದ ಸಂದರ್ಭದಲ್ಲಿ ಅವರನ್ನು ತಮ್ಮ ಸ್ಥಾನ ದಿಂದ ತೆಗೆಯುವ ಅಧಿಕಾರ ಸಂಸತ್ತಿಗುಂಟು.


ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ


ನಿವೃತ್ತಿ ನಂತರ ಸೌಲಭ್ಯ


ರಾಷ್ಟ್ರಪತಿಗಳು ನಿವೃತ್ತರಾದ ಬಳಿಕ ತಿಂಗಳಿಗೆ  1.5 ಲಕ್ಷ ಪಿಂಚಣಿ ದೊರೆಯುತ್ತದೆ. - ಅಧ್ಯಕ್ಷರ ಸಂಗಾತಿಗಳು ಕಾರ್ಯದರ್ಶಿಗೆ ಪಿಂಚಣಿಯಾಗಿ ತಿಂಗಳಿಗೆ 30,000 ರೂಪಾಯಿ ನೀಡಲಾಗುತ್ತದೆ. ಜೊತೆಗೆ ಒಂದು ಸುಸಜ್ಜಿತ ಬಾಡಿಗೆ ಮುಕ್ತ ಬಂಗಲೆ, ಎರಡು ಉಚಿತ ಲ್ಯಾಂಡ್‌ಲೈನ್‌ಗಳು ಮತ್ತು ಮೊಬೈಲ್ ಫೋನ್, ಐದು ವೈಯಕ್ತಿಕ ಸಿಬ್ಬಂದಿ, ಸಿಬ್ಬಂದಿ ವೆಚ್ಚಗಳು ವರ್ಷಕ್ಕೆ 60,000 ರೂ. ಹಾಗೂ ರೈಲು ಅಥವಾ ವಿಮಾನದಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇದೆ.

Published by:Annappa Achari
First published: