Ganesh Chaturthi 2022: ಗಣೇಶ ಪ್ರತಿಷ್ಠಾಪನೆಯಂತೆ ವಿಸರ್ಜನೆಗೂ ಇದೆ ಮಹತ್ವ! ಹೇಗಿರಬೇಕು ಗೊತ್ತಾ ವಿಧಿವಿಧಾನ?

ಗಣೇಶನ ಪ್ರತಿಷ್ಠಾಪನೆ, ಪೂಜೆ ಎಷ್ಟು ಮಹತ್ವದ್ದೋ ಅಷ್ಟೇ ಮಹತ್ವ ಗಣೇಶನ ಮೂರ್ತಿಗಳ ವಿಸರ್ಜನೆಗೆ ಇರುತ್ತದೆ. ಹಾಗಿದ್ರೆ ಗಣೇಶನ ಮೂರ್ತಿ ವಿಸರ್ಜನೆ ಮಹತ್ವವೇನು? ಅದನ್ನು ನೀರಲ್ಲೇ ಯಾಕೆ ಮುಳುಗಿಸಲಾಗುತ್ತದೆ? ಇದರ ವಿಧಿವಿಧಾನಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ…

ಗಣೇಶ ವಿಸರ್ಜನೆಯ ಸಂಗ್ರಹ ಚಿತ್ರ

ಗಣೇಶ ವಿಸರ್ಜನೆಯ ಸಂಗ್ರಹ ಚಿತ್ರ

  • Share this:
ಇಡೀ ದೇಶ ಗಣೇಶ ಹಬ್ಬದ (Ganesh Festival) ಸಂಭ್ರಮದಲ್ಲಿದೆ. ಈಗಾಗಲೇ ಮನೆ ಮನೆಗೆ ಗಣಪತಿ (Ganapathi) ಬಂದಾಗಿದೆ. ಕರೋನಾ (Corona) ಆತಂಕ, ಮಳೆ (Rain) ಅಬ್ಬರದ ನಡುವೆಯೂ ಗಣೇಶನ ಹಬ್ಬದ ಸಂಭ್ರಮ ಕುಂದಿಲ್ಲ. ಇನ್ನು ಗಣೇಶನ ಪ್ರತಿಷ್ಠಾಪನೆ, ಪೂಜೆ ಎಷ್ಟು ಮಹತ್ವದ್ದೋ ಅಷ್ಟೇ ಮಹತ್ವ ಗಣೇಶನ ಮೂರ್ತಿಗಳ (Ganesh Idol) ವಿಸರ್ಜನೆಗೆ (Visarjane) ಇರುತ್ತದೆ. ಒಂದು ದಿನ, ಮೂರು ದಿನ, ಐದು, ಏಳು, ಒಂಬತ್ತು, ಹತ್ತು ದಿನ ಹೀಗೆ ಗಣೇಶನನ್ನು ಹಲವು ದಿನಗಳ ಕಾಲ ಇಟ್ಟು ಪೂಜಿಸಲಾಗುತ್ತದೆ. ಅಂತಿಮವಾಗಿ ಗಣೇಶನನ್ನು ನೀರಲ್ಲಿ (Water) ವಿಸರ್ಜಿಸಲಾಗುತ್ತದೆ. ಹಾಗಿದ್ರೆ ಗಣೇಶನ ಮೂರ್ತಿ ವಿಸರ್ಜನೆ (dissolution) ಮಹತ್ವವೇನು? ಅದನ್ನು ನೀರಲ್ಲೇ ಯಾಕೆ ಮುಳುಗಿಸಲಾಗುತ್ತದೆ? ಇದರ ವಿಧಿವಿಧಾನಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ…

ಗಣೇಶ ವಿಸರ್ಜನೆಗೂ ಇದೆ ಮಹತ್ವ

ಈಶ್ವರ ಮತ್ತು ಪಾರ್ವತಿಯರ ಪುತ್ರ ಗಣೇಶನನ್ನು ಭೂಮಿಗೆ ಸ್ವಾಗತಿಸುವ ಸಲುವಾಗಿ ಗಣೇಶನನ್ನು ಕೂರಿಸಲಾಗುತ್ತದೆ. ಅದೇ ರೀತಿ ಆತನ್ನು ಪೂಜಿಸಿ, ಪುನಃ ಕೈಲಾಸಕ್ಕೆ ಗಣೇಶನನ್ನು ಕಳುಹಿಸುವ ಪ್ರಯುಕ್ತ ಮನೆಯಲ್ಲಿಟ್ಟು ಪೂಜಿಸಿದ ಗಣೇಶನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಗಣೇಶನನ್ನು ಕೂರಿಸುವಾಗ ಹೇಗೆ ಪ್ರತಿಷ್ಠಾಪನಾ ವಿಧಿ - ವಿಧಾನಗಳನ್ನು ಅನುಸರಿಸಲಾಗುತ್ತದೆಯೋ ಹಾಗೇ ಗಣೇಶನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವಾಗಲೂ ಕೆಲವೊಂದು ವಿಸರ್ಜನಾ ವಿಧಿ - ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.

ಗಣೇಶನ ಮೂರ್ತಿ ನೀರಲ್ಲಿ ಮುಳುಗಿಸುವುದು ಸೂಕ್ತ

ಹಿಂದೂ ಪುರಾಣಗಳ ಪ್ರಕಾರ ದೇವಸ್ಥಾನದಲ್ಲಲ್ಲದೆ ಬೇರೆಲ್ಲೇ ಆದರೂ ಪೂಜೆ ಮುಗಿದ ತಕ್ಷಣ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವ ಪರಿಪಾಠವಿದೆ. ದೇವಾಲಯದಲ್ಲಿ ವಿಗ್ರಹವನ್ನಿಟ್ಟು ಪ್ರತಿದಿನವೂ ಅದಕ್ಕೆ ಪೂಜೆ ನಡೆಯುತ್ತಿದ್ದರೆ ಸರಿ, ಇಲ್ಲವೆಂದರೆ ಪೂಜೆ ನಡೆಯದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವುದು ಸೂಕ್ತ ಅಂತ ಶಾಸ್ತ್ರಗಳು ಹೇಳುತ್ತವೆ.

ಇದನ್ನೂ ಓದಿ: Ganesh Chaturthi 2022: ಗಣೇಶ ಬಂದ, ಕಾಯಿ-ಕಡುಬು ತಿಂದ! ರಾಜ್ಯಾದ್ಯಂತ ಗಣಪತಿ ಹಬ್ಬದ ಸಂಭ್ರಮ

ಮುಳುಗಿಸದೇ ಹಾಗೇ ಇಟ್ಟುಕೊಂಡರೆ ಏನಾಗುತ್ತದೆ?

ಒಂದು ವೇಳೆ ಗಣೇಶನ ಮೂರ್ತಿಯನ್ನು ಮುಳುಗಿಸಲು ಇಷ್ಟವಿಲ್ಲದಿದ್ದರೆ, ಅದನ್ನು ಮನೆಯಲ್ಲೇ ಇಟ್ಟುಕೊಂಡು ಪ್ರತಿದಿನ ಪೂಜೆ, ಮಂತ್ರಾದಿಗಳು ನಡೆಯಬೇಕು. ಪೂಜೆಯಿಲ್ಲದೆ ಹಾಗೆಯೇ ಮೂರ್ತಿಯನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರವಲ್ಲ. ಆದ್ದರಿಂದಲೇ ನಿರ್ದಿಷ್ಟ ದಿನಗಳ ಕಾಲ ಮೂರ್ತಿಯನ್ನು ಪೂಜಿಸಿ ನಂತರ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಅದನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ.

ಗಣೇಶ ಮೂರ್ತಿ ವಿಸರ್ಜನೆ ವಿಧಾನಗಳು

ಶಾಸ್ತ್ರಗಳ ಪ್ರಕಾರ, ವಿಸರ್ಜನೆ ದಿನದಂದು ವಿಧಿವಿಧಾನಗಳ ಪ್ರಕಾರ ಗಣೇಶನನ್ನು ಪೂಜಿಸಬೇಕು. ಹೂವುಗಳು, ಮಾಲೆಗಳು, ದೂರ್ವೆ, ತೆಂಗಿನಕಾಯಿ, ಅಕ್ಷತೆ, ಅರಿಶಿನ, ಕುಂಕುಮ ಇತ್ಯಾದಿಗಳನ್ನು ಅರ್ಪಿಸಬೇಕು. ಲವಂಗ, ವೀಳ್ಯದೆಲೆ ಇತ್ಯಾದಿಗಳನ್ನು ಅರ್ಪಿಸುವುದರ ಜೊತೆಗೆ, ಮೋದಕ, ಲಡ್ಡು, ಚಕ್ಕುಲಿ ಇತ್ಯಾದಿ ತಿಂಡಿಗಳಿಂದ ನೈವೇದ್ಯ ಮಾಡುವುದು ಸೂಕ್ಚ. ಈ ವೇಳೆ ಓಂ ಗಣಪತಯೇ ನಮಃ ಅಥವಾ ಬೇರೆ ಯಾವುದಾದರೂ ಗಣೇಶ ಮಂತ್ರ, ಸ್ಮರಣೆ, ಭಕ್ತಿಗೀತೆ ಇತ್ಯಾದಿಗಳನ್ನು ಜಪಿಸುತ್ತಾ ದೀಪ ಧೂಪಾರತಿ ಮಾಡಿಬೇಕು. ನಂತರ, ಸ್ವಚ್ಛ ಮಣೆಯನ್ನು ತೆಗೆದುಕೊಳ್ಳಿ.. ಇದನ್ನು ಗಂಗಾಜಲದಿಂದ ಶುದ್ಧೀಕರಿಸಿ. ಇದರ ನಂತರ, ಅದರಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಅದರಲ್ಲಿ ಸ್ವಲ್ಪ ಅಕ್ಷತೆ ಹಾಕಿ. ಬಳಿಕ ಅದರ ಮೇಲೆ ಕೆಂಪು ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಹರಡಬೇಕು.

ಭಕ್ತಿಯಿಂದ ಹಾಡಿ ಗಣೇಶನನ್ನು ಕಳಿಸಿಕೊಡಿ

ಬಟ್ಟೆಯ ಮೇಲೆ ವೀಳ್ಯದೆಲೆ ಇಡಿ. ಈಗ ಗಣೇಶನ ವಿಗ್ರಹವನ್ನು ಎತ್ತಿಕೊಂಡು ಈ ನೆಲದ ಮೇಲೆ ಇರಿಸಬೇಕು. ಬಳಿಕ ಗಣೇಶನಿಗೆ ಮೋದಕ, ವೀಳ್ಯದೆಲೆ, ಲವಂಗ, ಬಟ್ಟೆ, ದಕ್ಷಿಣೆ, ಹೂವುಗಳು, ಇತ್ಯಾದಿಗಳನ್ನು ಬಟ್ಟೆಯಲ್ಲಿ ಕಟ್ಟಿ ಗಣೇಶನ ವಿಗ್ರಹಕ್ಕೆ ಬದಲಾಗಿ ಇರಿಸಿ. ನೀವು ನದಿ, ಕೊಳ ಅಥವಾ ಬಕೆಟ್‌ನಲ್ಲಿ ಗಣೇಶನನ್ನು ಮುಳುಗಿಸುವ ಮುನ್ನ ಗಣಪತಿಗೆ ಕರ್ಪೂರದಿಂದ ಆರತಿ ಮಾಡಿ. ನಂತರ, ಸಂತೋಷದಿಂದ ಗಣಪತಿ ಬಿಡಿ. ಈ ಸಂದರ್ಭದಲ್ಲಿ ಮಂತ್ರ ಅಥವಾ ಭಕ್ತಿಗೀತೆ ಹಾಡಬೇಕು.

ತಪ್ಪಿಗಾಗಿ ಕ್ಷಮೆ ಯಾಚಿಸಬೇಕು

ಗಣಪತಿಗೆ ಬೀಳ್ಕೊಡುವಾಗ ಮುಂದಿನ ವರ್ಷ ಬರಲಿ ಎಂದು ಹಾರೈಸಿ. ಅಲ್ಲದೆ, ನಿಮ್ಮಿಂದ ತಿಳಿಯದೆ ಆಗಿರಬಹುದಾದ ತಪ್ಪಿಗಾಗಿ ಆತನ ಕ್ಷಮೆ ಯಾಚಿಸಿ. ಇದರೊಂದಿಗೆ ಎಲ್ಲಾ ಬಟ್ಟೆ ಮತ್ತು ಪೂಜಾ ಸಾಮಗ್ರಿಗಳನ್ನು ಗೌರವದಿಂದ ಹಾಕಬೇಕು.

ಇದನ್ನೂ ಓದಿ: Southadka: ಘಂಟೆಗೆ ಒಲಿಯುತ್ತಾನೆ ಈ ಗಣೇಶ! ಸೌತಡ್ಕದ ಬಯಲಲ್ಲಿ ಗಣಪ ನಿಂತ ಕಥೆಯೇ ರೋಚಕ

ಮತ್ತೆ ಬಾ ಅಂತ ಪ್ರಾರ್ಥಿಸಿ ಕಳಿಸಿಕೊಡಿ

ಮನೆಯಿಂದ ಗಣೇಶನನ್ನು ಹೊರಗಡೆ ತೆಗೆದುಕೊಂಡು ಬರುವ ಮುನ್ನ ಕೊನೆಯದಾಗಿ ಗಣೇಶನಿಗೆ ಆರತಿಯನ್ನು ಮಾಡಿ. ಆದಷ್ಟು ಬೇಗ ಮತ್ತೊಮ್ಮೆ ಮನೆಗೆ ಬಾ ಎಂದು ಬೇಡಿಕೊಳ್ಳಬೇಕು. ಇನ್ನು  ಕುಟುಂಬದ ಒಬ್ಬ ಸದಸ್ಯರು ಮನೆಯಲ್ಲಿಯೇ ಇರಬೇಕು ಮತ್ತು ವಿಸರ್ಜನೆ ಮುಗಿಯುವವರೆಗೂ ಮನೆಯ ಬಾಗಿಲುಗಳನ್ನು ತೆರೆದಿಡಬೇಕು. ಗಣೇಶ ಹೊರನಡೆದಾಗ, ಕುಟುಂಬ ಸದಸ್ಯರೊಬ್ಬರು ಶುಭದ ಸೂಚಕವಾಗಿ ತೆಂಗಿನಕಾಯಿ ಒಡೆಯಬೇಕು.
Published by:Annappa Achari
First published: