• Home
  • »
  • News
  • »
  • explained
  • »
  • 108 Ambulance: ಆ್ಯಂಬುಲೆನ್ಸ್ ನಿರ್ವಹಣೆಯಲ್ಲೇ 108 ತೊಂದರೆ! 'ಇಂಜೆಕ್ಷನ್' ಕೊಡೋರ್ಯಾರು ಈ ಸಮಸ್ಯೆಗೆ?

108 Ambulance: ಆ್ಯಂಬುಲೆನ್ಸ್ ನಿರ್ವಹಣೆಯಲ್ಲೇ 108 ತೊಂದರೆ! 'ಇಂಜೆಕ್ಷನ್' ಕೊಡೋರ್ಯಾರು ಈ ಸಮಸ್ಯೆಗೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮಗೆ ಅತೀಯಾದ ಆರೋಗ್ಯ ಸಮಸ್ಯೆ ಕಾಡುತ್ತಿದೆಯಾ? ಎದ್ದು ಆಸ್ಪತ್ರೆಗೆ ಹೋಗಲಾರದಷ್ಟು ತೊಂದರೆ ಆಗ್ತಿದೆಯಾ? ಹಾಗಿದ್ರೆ 108 ಆ್ಯಂಬುಲೆನ್ಸ್ಗೆ ದಯವಿಟ್ಟು ಕಾಲ್ ಮಾಡಬೇಡಿ! ಅದರ ಬದಲು ನಿಮ್ಮ ಸ್ವಂತ ವೆಹಕಲ್, ಬಾಡಿಗೆ ವಾಹನ ಮಾಡಿಕೊಂಡು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಹೋಗಿ. ಯಾಕೆಂದ್ರೆ ನಿಮ್ಮ ಜೀವ ಉಳಿಯುವುದು ಎಲ್ಲಕ್ಕಿಂತ ಮುಖ್ಯ!

ಮುಂದೆ ಓದಿ ...
  • Share this:

ಇದು ರಾಜ್ಯದ ಜನರು ಓದಲೇ ಬೇಕಾದ ವಿಚಾರ, ತಿಳಿದು ಕೊಂಡಿರಲೇ ಬೇಕಾದ ವಿಚಾರ. ನಿಮಗೆ ಅತೀಯಾದ ಆರೋಗ್ಯ ಸಮಸ್ಯೆ (Health Problems) ಕಾಡುತ್ತಿದೆಯಾ? ಎದ್ದು ಆಸ್ಪತ್ರೆಗೆ (Hospital) ಹೋಗಲಾರದಷ್ಟು ತೊಂದರೆ ಆಗ್ತಿದೆಯಾ? ಹಾಗಿದ್ರೆ 108 ಆ್ಯಂಬುಲೆನ್ಸ್‌ಗೆ (108 Ambulance) ದಯವಿಟ್ಟು ಕಾಲ್ (Call) ಮಾಡಬೇಡಿ! ಅದರ ಬದಲು ನಿಮ್ಮ ಸ್ವಂತ ವೆಹಕಲ್ (Vehicle), ಬಾಡಿಗೆ ವಾಹನ ಮಾಡಿಕೊಂಡು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಹೋಗಿ. ಯಾಕೆಂದ್ರೆ ನಿಮ್ಮ ಜೀವ ಉಳಿಯುವುದು ಎಲ್ಲಕ್ಕಿಂತ ಮುಖ್ಯ! ಅರೇ, ಇದ್ಯಾಕಪ್ಪ ಹಿಂಗ್ ಹೇಳ್ತಿದ್ದಾರೆ ಅಂದುಕೊಂಡ್ರಾ? ಇದಕ್ಕೂ ಒಂದು ಕಾರಣ ಇದೆ. ರಾಜ್ಯದ ಜನರ ಆರೋಗ್ಯ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿ, ಜನರ ಆ್ಯಂಬುಲೆನ್ಸ್ ಅಗತ್ಯವನ್ನು ಪೂರೈಸಬೇಕು ಅಂತ ಆರೋಗ್ಯ ಇಲಾಖೆ (Health Department) 108 ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಆದ್ರೆ ಆ್ಯಂಬುಲೆನ್ಸ್ ನಿರ್ವಹಣೆಯಲ್ಲಿ 108 ಸಮಸ್ಯೆ ಇದೆ. ತಾಂತ್ರಿಕ ಸಮಸ್ಯೆಯಿಂದಾಗಿ (Technical Problem) ಕರ್ನಾಟಕದಲ್ಲಿ ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಜನರು 108 ನಂಬರ್‌ನ ಸೇವೆಗೆ ದೂರವಾಣಿ ಕರೆ ಮಾಡಿದರೆ ಕನೆಕ್ಟ್ ಆಗುತ್ತಿಲ್ಲ. ಹೀಗಾಗಿ ಸಕಾಲಕ್ಕೆ ಆ್ಯಂಬುಲೆನ್ಸ್ ಸಿಗದೇ ರೋಗಿಗಳು ಪರದಾಡುವಂತಾಗಿದೆ.


108 ತಾಂತ್ರಿಕ ಸಮಸ್ಯೆ


ನಿನ್ನೆಯಿಂದ ರಾಜ್ಯಾದ್ಯಂತ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಶನಿವಾರ ಮಧ್ಯಾಹ್ನದ ನಂತರ 108 ನಂಬರ್‌ಗೆ ಸಮರ್ಪಕವಾಗಿ ಸಂಪರ್ಕ ಸಾಧಿಸಲು ಆಗುತ್ತಿಲ್ಲ. ಇದಕ್ಕೆ 108 ನಿರ್ವಹಣಾ ಜಿವಿಕೆ ಸಂಸ್ಥೆಯು 15 ವರ್ಷಗಳಷ್ಟು ಹಳೆಯ ಸಾಫ್ಟ್ ವೇರ್ ಅನ್ನು ಬಳಸುತ್ತಿರುವುದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ. ಕೆಲವೊಂದು ಕರೆಗಳ ಸಂಪರ್ಕ ಮಾತ್ರ ಸಾಧ್ಯವಾಗುತ್ತಿದೆ. ಒಂದು ದಿನದಿಂದ ತಾಂತ್ರಿಕ ಸಮಸ್ಯೆ ಉಂಟಾಗಿರುವುದು ಬೆಳಕಿಗೆ ಬಂದಿದೆ.


10 ಬಾರಿ ಕಾಲ್ ಮಾಡಿದ್ರೂ ಕನೆಕ್ಟ್ ಆಗೋದು ಕಷ್ಟ


10 ಬಾರಿ ಕರೆ ಮಾಡಿದರೆ ಒಮ್ಮೆ ಕರೆ ಸ್ವೀಕರಿಸುತ್ತಾರೆ. ಇದರಿಂದ ತೀರ ಎಮರ್ಜೆನ್ಸಿ ಇರುವ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಸಮಸ್ಯೆಯಾಗುತ್ತಿದೆ.


ಇದನ್ನೂ ಓದಿ: Heart Attack: ನಿರ್ಲಕ್ಷ್ಯ ಮಾಡಬೇಡಿ, ಇದು ‘ಹೃದಯ’ಗಳಾ ವಿಷಯ! ನಿಮ್ಮ ಹಾರ್ಟ್ ಮೇಲೂ ಇರಲಿ ಪ್ರೀತಿ


ಪ್ರತಿ ದಿನ ಸುಮಾರು 8 ಸಾವಿರ ಕಾಲ್ಸ್‌


108 ನಂಬರ್‌ಗೆ ರಾಜ್ಯಾದ್ಯಂತ ನಿತ್ಯ ಸುಮಾರು 8,000 ಕರೆಗಳು ಹೋಗುತ್ತವೆ. ಅಷ್ಟು ಕರೆಗಳಲ್ಲಿ ಅಂದಾಜು 2,000 ಕರೆಗಳು ತುರ್ತು ಪ್ರಕರಣಗಳಿಗೆ ಸಂಬಂಧಿಸಿರುತ್ತವೆ. ಸರ್ವರ್​ನ ಮದರ್​ಬೋರ್ಡ್ ಹಾಳಾಗಿರುವ ಕಾರಣ ಜನರ ಕಾಲ್​ಗೆ ಸ್ಪಂದನೆ ಸಿಗಲು ಸರಾಸರಿ 8 ನಿಮಿಷ ಬೇಕಾಗುತ್ತಿದೆ. ಜನರು ಕಾದುಕಾದು ಬೇಸರಗೊಂಡಿದ್ದಾರೆ. ಪ್ರತಿದಿನ 7ರಿಂದ 8 ಸಾವಿರದಷ್ಟು ಕಾಲ್ ರಿಸೀವ್ ಮಾಡುತವೆ. ಆದರೆ ತಾಂತ್ರಿಕ ದೋಷದಿಂದಾಗಿ ಕೇವಲ 2 ಸಾವಿರದಿಂದ 2,500 ದಷ್ಟು ಜನರಿಗೆ ಮಾತ್ರ ಸೌಲಭ್ಯ ಒದಗಿಸಲಾಗುತ್ತಿದೆ. ಬಾಕಿ 5 ಸಾವಿರ ಕರೆಗಳನ್ನು ಸ್ವೀಕರಿಸಲು ಆಗುತ್ತಿಲ್ಲ ಎನ್ನಲಾಗಿದೆ.


ಸಮಸ್ಯೆ ಬಗೆಹರಿಯಲು ಇನ್ನೂ 2-3 ದಿನ ಬೇಕು!


108 ಆ್ಯಂಬುಲೆನ್ಸ್ ಸಮಸ್ಯೆ ಬಗೆ ಹರಿಯಲು ಇನ್ನೂ ಎರಡು ಅಥವಾ 3 ದಿನ ಬೇಕಾಗಬಹುದು ಎನ್ನಲಾಗಿದೆ. ಕಂಟ್ರೋಲ್​ ರೂಮ್​ನ ಸಾಫ್ಟ್​ವೇರ್ ಹಾಗೂ ಹಾರ್ಡ್​​ವೇರ್ ಸರಿಪಡಿಸಿದ ನಂತರ ಆಂಬುಲೆನ್ಸ್​ ಸೇವೆ ಮರುಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.


ತುರ್ತು ಪರಿಹಾರ ಕೈಗೊಳ್ಳಲು ಕ್ರಮ


108 ಆ್ಯಂಬುಲೆನ್ಸ್ ಕಸ್ಟಮರ್ ಕೇರ್‌ನ ಸಾಫ್ಟ್​ವೇರ್​ ರೂಪುಗೊಂಡಿದ್ದು 2008ರಲ್ಲಿ. ಸರ್ವೀಸಸ್​​ನಲ್ಲಿ ಬಳಸಿದ ಬೋರ್ಡ್​ ಸರಿಪಡಿಸಲು ಇನ್ನೂ ಎರಡುಮೂರು ದಿನ ಬೇಕಾಗಬಹುದು. ಅದನ್ನು ತರಿಸಲು ಕ್ರಮವಹಿಸಿದ್ದೇವೆ. ಸದ್ಯಕ್ಕೆ ಕಾಲ್​ಸೆಂಟರ್​ ಮೂಲಕ ಕರೆಗಳನ್ನು ಸ್ವೀಕರಿಸಲು ಕ್ರಮ ತೆಗೆದುಕೊಂಡಿದ್ದೇವೆ. ರೋಗಿಗಳ ಸಂಬಂಧಿಕರ ಫೋನ್​​ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಸಪೋರ್ಟ್​ಗಾಗಿ ಸದ್ಯ ಎಚ್​​ಪಿ ಕಂಪನಿಯ ಎಂಜಿನಿಯರ್​ಗಳನ್ನು ಭೇಟಿ ಮಾಡಿ, ಈ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅವರ ನೆರವು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ.


ಆ್ಯಂಬುಲೆನ್ಸ್ ಸಕಾಲಕ್ಕೆ ಬಂದಿದ್ದು ಕಡಿಮೆ


2014-15ರಿಂದ 2018-19ರ ಅವಧಿಯಲ್ಲಿ 108 ಆ್ಯಂಬುಲೆನ್ಸ್ ಸೇವೆಗಳ ಅಡಿಯಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು (ಇಎಂಎಸ್) ನಡೆಸುವಲ್ಲಿ ಸತತ ರಾಜ್ಯ ಸರ್ಕಾರಗಳ ವೈಫಲ್ಯವಾಗಿದೆ ಅಂತ ಸಿಎಜಿ ವರದಿ ಹೇಳಿದೆ. ಕೇವಲ 72 ಪ್ರತಿಶತ ಪ್ರಕರಣಗಳಲ್ಲಿ, ಆಂಬ್ಯುಲೆನ್ಸ್ ಸೇವೆಗಳು ನಿಗದಿತ 30 ನಿಮಿಷಗಳ ಅವಧಿಯಲ್ಲಿ ಜನರನ್ನು ತಲುಪಿರುವುದು ಗೊತ್ತಾಗಿದೆ.


ಇದನ್ನೂ ಓದಿ: Explained: ಏನಿದು PFI ಸಂಘಟನೆ? ಇದರ ಹಿಂದೆ ಇರೋದಾದರೂ ಯಾರು?


60 ಪ್ರಕರಣಗಳಲ್ಲಿ ವಿಳಂಬ


ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟ ಮತ್ತು ಪಾರ್ಶ್ವವಾಯು ಪ್ರಕರಣಗಳಲ್ಲಿ 108 ಸೇವೆಗಳು 10 ನಿಮಿಷಗಳನ್ನು ನಿಗದಿಪಡಿಸಿದ್ದರೂ, ಶೇಕಡಾ 60 ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಇದು ಬಹಳ ವಿಳಂಬವಾಗಿ ತಲುಪಿದೆ ಎಂದು ಅಧ್ಯಯನಗಳು ಸೂಚಿಸಿವೆ ಎಂದು ಸಿಎಜಿ ಹೇಳಿತ್ತು.

Published by:Annappa Achari
First published: