• ಹೋಂ
  • »
  • ನ್ಯೂಸ್
  • »
  • Explained
  • »
  • Milk Price: ಗಗನಮುಖಿಯಾದ ಹಾಲಿನ ದರ: ಡೈರಿ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವೇನು?

Milk Price: ಗಗನಮುಖಿಯಾದ ಹಾಲಿನ ದರ: ಡೈರಿ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವೇನು?

ಹಾಲು

ಹಾಲು

ಬೇಡಿಕೆ ಕುಸಿತದಿಂದಾಗಿ ಡೈರಿಗಳು ಏಪ್ರಿಲ್-ಜುಲೈ 2020 ರ ಅವಧಿಯಲ್ಲಿ ಒಂದು ಲೀಟರ್‌ ಹಸುವಿನ ಹಾಲಿನ (3.5% ಕೊಬ್ಬು ಮತ್ತು 8.5% SNF ಜೊತೆಗೆ) ಬೆಲೆಯನ್ನು 18 ರಿಂದ 20 ರೂ.ಗೆ ಏರಿಕೆ ಮಾಡಿತು ಮತ್ತು ಎಮ್ಮೆ ಹಾಲಿನ (6.5% ಕೊಬ್ಬು ಮತ್ತು 9% SNF) ಬೆಲೆಯನ್ನು.30-32 ರೂಗೆ ಏರಿಸಿತು

ಮುಂದೆ ಓದಿ ...
  • Share this:

ಕಳೆದ ಒಂದು ವರ್ಷದಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಲೇ ಇದೆ. ಬೇಳೆ ಕಾಳುಗಳಿಂದ ಹಿಡಿದು ಅಡುಗೆ ಎಣ್ಣೆ (Oil), ಇಂಧನ, ಗ್ಯಾಸ್‌ ಸಿಲಿಂಡರ್‌, ಹಾಲು ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ ಎನ್ನಬಹುದು. ಅದರಲ್ಲೂ ಹಾಲಿನ ಬೆಲೆಯಂತೂ ಹಸು, ಎಮ್ಮೆ ಬೆಲೆಗಿಂತ ದುಬಾರಿ ಆಗುತ್ತೇನೋ ಅನಿಸಿಬಿಟ್ಟಿದೆ. ಕಳೆದ ವರ್ಷ ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ (Milk Marketing) ಫೆಡರೇಶನ್ ದೆಹಲಿಯಲ್ಲಿ ತನ್ನ ಅಮುಲ್ ಬ್ರಾಂಡ್ (Amul Brand) ಫುಲ್-ಕ್ರೀಮ್ ಹಾಲಿನ (6% ಕೊಬ್ಬು ಮತ್ತು 9% SNF ಅಥವಾ ಘನವಸ್ತುಗಳು-ಕೊಬ್ಬಿನಲ್ಲದ) ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ರೂ. ಲೀಟರ್‌ಗೆ 58 ರಿಂದ 64 ರೂ. ಏರಿಕೆ ಮಾಡಿತು.


ರಾಷ್ಟ್ರೀಯ ಡೈರಿ ಡೆವಲಪ್‌ಮೆಂಟ್ ಬೋರ್ಡ್ (NDDB)-ಮಾಲೀಕತ್ವದ ಮದರ್ ಡೈರಿಯು ಮಾರ್ಚ್ 5 ಮತ್ತು ಡಿಸೆಂಬರ್ 27, 2022 ರ ನಡುವೆ ಪ್ರತಿ ಲೀಟರ್‌ಗೆ 57 ರಿಂದ 66 ರೂ.ಏರಿಕೆ ಮಾಡಿದೆ. ಹೀಗೆ ಹಾಲಿನ ಬೆಲೆಗಳು ಏರಿಕೆ ಆಗುತ್ತಲೇ ಇವೆ. 2013ರ ಏಪ್ರಿಲ್-ಅಂತ್ಯ ಮತ್ತು ಮೇ 2014ರ ನಡುವೆ ಕೊನೆಯ ಬಾರಿಗೆ ಹಾಲಿನ ದರ ಲೀಟರ್‌ಗೆ 8 ರೂ.ಗಳಷ್ಟು ಏರಿಕೆಯಾಗಿತ್ತು. ಮೇ 2014ರ ಹಾಲಿನ ಏರಿಕೆಯಲ್ಲಿ ಅಂತಹ ಗಮನಾರ್ಹವಾದ ವ್ಯತ್ಯಾಸಗಳು ಕಂಡು ಬಂದಿಲ್ಲ.


ಆದರೆ ಫೆಬ್ರವರಿ 2022 ರಿಂದ ಈ ಬೆಲೆಗಳು ಗಗಗನಮುಖಿಯಾದವು. ಅಂದಿನಿಂದ, ಬೆಲೆಗಳು ರಾಕೆಟ್‌ನಂತೆ ಜಿಗಿಯುತ್ತಲೇ ಇದೆ. ಮದರ್ ಡೈರಿಯಿಂದ ಟೋನ್ಡ್ ಮಿಲ್ಕ್‌ನಲ್ಲಿ (3% ಕೊಬ್ಬು ಮತ್ತು 8.5% SNF) MRP ಪರಿಷ್ಕರಣೆಯು ಪ್ರತಿ ಲೀಟರ್‌ಗೆ ಕೇವಲ 6 ರೂ. (ರೂ. 47 ರಿಂದ 53 ರವರೆಗೆ) ಏರಿಕೆಯಾದರೆ ಪೂರ್ಣ ಕೆನೆ ಹಾಲಿಗೆ 9 ರೂ. ಏರಿಕೆ ಆಗಿತ್ತು.


ಇದನ್ನೂ ಓದಿ: Explained: ಭಾರತಕ್ಕೆ ಚಿಂತೆ ತಂದೊಡ್ಡಿದೆ ಹದಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ!


ಹಾಲಿನ ಬೆಲೆ ಏರಿಕೆಗೆ ಕಾರಣಗಳೇನು?


ಹೀಗೆ ಹಾಲಿನ ಬೆಲೆ ಏರಿಕೆ ಕಾರಣವೇನು ಅಂತ ಪಟ್ಟಿ ಮಾಡುತ್ತಾ ಹೋದರೆ ಕೋವಿಡ್‌ ಈಚೆಗೆ ಸಾಕಷ್ಟು ಅಂಶಗಳು ಕಾಣಸಿಗುತ್ತವೆ. ಅವುಗಳಲ್ಲಿ ಮುಖ್ಯವಾಗಿ ಕೋವಿಡ್‌ ಸಮಯದಲ್ಲಿ ಕುಸಿದ ಬೇಡಿಕೆ, ಜಾನುವಾರುಗಳಿಗೆ ಮೇವಿನ ಕೊರತೆ, ಮೇವಿನ ದರ ಹೆಚ್ಚಳ, ಇನ್ನು ಅನೇಕ ಕಡೆಗಳಲ್ಲಿ ಹಸುವಿಗೆ ಚರ್ಮ ಗಂಟುರೋಗ ಬಂದಿದ್ದು.


ಈ ಎಲ್ಲಾ ಕಾರಣಗಳು ಹಾಲು ಉತ್ಪಾದಕರಿಗೆ ನಷ್ಟ ಉಂಟು ಮಾಡಿತು. ಅದಲ್ಲದೆ ಸಾಗಾಣಿಕೆ ವೆಚ್ಚ, ವಿದ್ಯುತ್, ಪ್ಯಾಕಿಂಗ್, ಸಲಕರಣೆ ವೆಚ್ಚ, ಹೀಗೆ ಅನೇಕ ಉತ್ಪಾದನಾ ವೆಚ್ಚಗಳು ಶೇಕಡ 25 ರಿಂದ 35 ರಷ್ಟು ಹೆಚ್ಚಿದೆ. ಹೀಗಾಗಿ ಅನಿವಾರ್ಯವಾಗಿ ಹಾಲಿನ ಬೆಲೆ ಏರಿಕೆ ಆಗಿದೆ ಎನ್ನಲಾಗುತ್ತಿದೆ. ಹಾಗಾದರೆ ಈ ಮೇಲಿನ ಕಾರಣಗಳನ್ನು ಸಂಕ್ಷಿಪ್ತವಾಗಿ ನೋಡುವುದಾದರೆ, ಅದರ ಕುರಿತ ಮಾಹಿತಿ ಹೀಗಿದೆ.


ಲಾಕ್‌ಡೌನ್‌ನಲ್ಲಿ ಕುಸಿದ ಬೇಡಿಕೆ, ಪೂರೈಕೆ


ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಮದುವೆಗಳು ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಹಾಗೆಯೇ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕ್ಯಾಂಟೀನ್‌ಗಳು ಮತ್ತು ಸ್ವೀಟ್‌ಶಾಪ್‌ಗಳನ್ನು ಮುಚ್ಚುಲಾಗಿತ್ತು. ಈ ಸಂದರ್ಭದಲ್ಲಿ ಬೇಡಿಕೆ ನೆಲಕಚ್ಚಿತ್ತು. ಈ ಸಂದರ್ಭದಲ್ಲಿ ಕೆಲವು ವಸ್ತುಗಳ ಬೆಲೆ ಏರಿಕೆ ಜೊತೆಗೆ ಹಾಲಿನ ಬೆಲೆಯಲ್ಲೂ ಗಣನೀಯ ಏರಿಕೆ ಆರಂಭವಾಯಿತು.
ಬೇಡಿಕೆ ಕುಸಿತದಿಂದಾಗಿ ಡೈರಿಗಳು ಏಪ್ರಿಲ್-ಜುಲೈ 2020 ರ ಅವಧಿಯಲ್ಲಿ ಒಂದು ಲೀಟರ್‌ ಹಸುವಿನ ಹಾಲಿನ (3.5% ಕೊಬ್ಬು ಮತ್ತು 8.5% SNF ಜೊತೆಗೆ) ಬೆಲೆಯನ್ನು 18 ರಿಂದ 20 ರೂ.ಗೆ ಏರಿಕೆ ಮಾಡಿತು ಮತ್ತು ಎಮ್ಮೆ ಹಾಲಿನ (6.5% ಕೊಬ್ಬು ಮತ್ತು 9% SNF) ಬೆಲೆಯನ್ನು.30-32 ರೂಗೆ ಏರಿಸಿತು. ಇದರೊಂದಿಗೆ ಕೆನೆರಹಿತ ಹಾಲಿನ ಪುಡಿ ಮತ್ತು ಹಸುವಿನ ಬೆಣ್ಣೆ, ತುಪ್ಪದಲ್ಲೂ ವ್ಯತ್ಯಾಸಗಳು ಕಂಡು ಬಂದವು.


ಜಾನುವಾರಗಳಿಗೆ ಮೇವಿನ ಕೊರತೆ ಮತ್ತು ಮೇವಿನ ದರ ಹೆಚ್ಚಳ


ಹಾಲಿನ ಬೆಲೆ ಕಡಿಮೆಯಿದ್ದಲ್ಲಿ ಇದು ನಮಗೆ ನಮ್ಮ ಜಾನುವಾರುಗಳಿಗೆ ಅವುಗಳಿಗೆ ಬೇಕಾದ ಹುಲ್ಲು, ಹಿಂಡಿಯನ್ನು ಸಹ ನೀಡಲು ಕೂಡ ಸಾಧ್ಯವಾಗುವುದಿಲ್ಲ. ಎಮ್ಮೆ, ಹಸುಗಳಿಗೆ ಆಹಾರ ಚೆನ್ನಾಗಿ ನೀಡದೇ ಇದ್ದರೆ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ. ಲಾಕ್‌ಡೌನ್ ಸಮಯದಲ್ಲಿ ಕಡಿಮೆ ಆಹಾರ ಲಭ್ಯವಾದ ಕಾರಣ ಆ ಸಂದರ್ಭದಲ್ಲಿ ಹಾಲಿನ ಉತ್ಪನ್ನ ಕೂಡ ಇಳಿಮುಖವಾಗಿತ್ತು.


ಹತ್ತಿ-ಬೀಜ, ರೇಪ್‌ಸೀಡ್ ಮತ್ತು ಕಡಲೆಕಾಯಿ ದುಬಾರಿಯಾಗಿದ್ದವು. 2020-21 ರಲ್ಲಿ ದನದ ಮೇವಿನ ಸರಾಸರಿ ವೆಚ್ಚವು ಕೆಜಿಗೆ ರೂ 2016-17 ರಿಂದ 2022 ರ ಮಧ್ಯದ ವೇಳೆಗೆ ರೂ 22-23 ಕ್ಕೆ ಏರಿಕೆ ಕಂಡಿತ್ತು. ಒಣಹುಲ್ಲಿನ ಅಲಭ್ಯತೆ ಕೂಡ ಈ ಸಂದರ್ಭದಲ್ಲಿ ಉಂಟಾಗಿತ್ತು.


ಜಾನುವಾರುಗಳಲ್ಲಿ ರೋಗ


ಕೆಲವು ಪ್ರಮುಖ ಹಾಲು-ಉತ್ಪಾದಿಸುವ ರಾಜ್ಯಗಳ ಜಾನುವಾರುಗಳಲ್ಲಿ ರೋಗದ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದವು. ಗುಜರಾತ್, ಪಂಜಾಬ್ ಮತ್ತು ಹರಿಯಾಣದಲ್ಲಿ ಹಾಲಿನ ಉತ್ಪಾದನೆಯಲ್ಲಿ ಇಳಿಕೆಗೆ ಕಾರಣವಾಗುವ ಲಂಪಿ ಸ್ಕಿನ್ ಡಿಸೀಸ್ ವರದಿಯಾಗಿತ್ತು. ಇದು ಕೂಡ ಹಾಲಿನ ಉತ್ಪಾದನೆಯ ಮೇಲೆ ಮತ್ತಷ್ಟು ಪ್ರಭಾವ ಬೀರಿತು.


ಇಳಿಮುಖವಾದ ಹಾಲಿನ ಸಂಗ್ರಹ


ಕರ್ನಾಟಕ ಮತ್ತು ತಮಿಳುನಾಡಿನ ಸಹಕಾರಿ ಒಕ್ಕೂಟಗಳು ವರ್ಷದಿಂದ ವರ್ಷಕ್ಕೆ 15-20% ವರೆಗೆ ಕಡಿಮೆ ಹಾಲು ಸಂಗ್ರಹಣೆಯನ್ನು ವರದಿ ಮಾಡುವುದರೊಂದಿಗೆ ಭಾರತದಾದ್ಯಂತ ಡೈರಿಗಳು ಈ ವೇಳೆಯಲ್ಲಿ ಕಡಿಮೆ ಹಾಲು ಸಂಗ್ರಹಣೆಯನ್ನು ವರದಿ ಮಾಡಿದ್ದವು. 2020-21ರಲ್ಲಿ ರೈತರಿಂದ ಹಾಲು ಖರೀದಿಸಲು ನಿರಾಕರಿಸಿದ ಕೆಲವು ಡೈರಿಗಳು ಪ್ರಸ್ತುತ ಹಸುವಿನ ಹಾಲಿಗೆ ರೂ 37-38/ಲೀಟರ್ ಮತ್ತು ಎಮ್ಮೆಯ ಹಾಲಿಗೆ ರೂ 54-56/ಲೀಟರ್ ಪಾವತಿಸುತ್ತಿವೆ.


ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಮತ್ತು 2021 ರ ಅಂತ್ಯದಿಂದ ಆರ್ಥಿಕ ಚಟುವಟಿಕೆಯ ಪುನರುಜ್ಜೀವನಗೊಂಡವು. ಭಾರತವು 2021-22ರಲ್ಲಿ ರೂ.1,281.15 ಕೋಟಿ ಮೌಲ್ಯದ ಸುಮಾರು 33,017 ಟನ್‌ಗಳಷ್ಟು ಹಾಲಿನ ಕೊಬ್ಬನ್ನು ರಫ್ತು ಮಾಡಿತು.


ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಕೋನ ಏನು?


2020 ರ ಕನಿಷ್ಠಕ್ಕೆ ವ್ಯತಿರಿಕ್ತವಾಗಿ, ಈಗ ಹಸುವಿನ SMP ಗೆ ರೂ 305-315, ಎಮ್ಮೆ SMP ಗೆ ರೂ 340ಕ್ಕೂ ಹೆಚ್ಚು, ಹಸುವಿನ ಬೆಣ್ಣೆಗೆ ರೂ 425-430 ಮತ್ತು ತುಪ್ಪಕ್ಕೆ ರೂ 520-525 ಏರಿಕೆ ಆಗಿದೆ.


“ಹಾಲಿನ ಕೊರತೆ ಮುಖ್ಯವಾಗಿ ದಕ್ಷಿಣದಲ್ಲಿದೆ ಕಂಡು ಬರುತ್ತಿದೆ, ಮಹಾರಾಷ್ಟ್ರದಲ್ಲಿ ಉತ್ಪಾದನೆ ಉತ್ತಮವಾಗಿದೆ. ಉತ್ತರ ಭಾಗದ ಬೆಲ್ಟ್‌ನಲ್ಲಿಯೂ ನಿರೀಕ್ಷೆಯ ಪೂರೈಕೆ ಇಲ್ಲ” ಎಂದು ಚೆನ್ನೈ ಮೂಲದ ಪ್ರಮುಖ ಡೈರಿ ಸರಕುಗಳ ವ್ಯಾಪಾರಿ ಗಣೇಶನ್ ಪಳನಿಯಪ್ಪನ್ ಹೇಳಿದರು.


ಬೇಸಿಗೆಯಲ್ಲಿ ಹಾಲಿನ ಪೂರೈಕೆ ಇಳಿಮುಖ


ಜಾನುವಾರಗಳು ಕರು ಹಾಕಿದ ನಂತರ ಸಾಮಾನ್ಯವಾಗಿ ಸೆಪ್ಟೆಂಬರ್‌ನಿಂದ ಹಾಲು ಉತ್ಪಾದನೆ ಮತ್ತು ಸಂಗ್ರಹ ಉತ್ತಮವಾಗಿರುತ್ತದೆ. ಆಗ ತಾನೇ ಹಸಿರು ಹುಲ್ಲು ಕೂಡ ಹೆಚ್ಚಾಗಿ ಲಭಿಸುವುದರಿಂದ ಮೇವು ಉತ್ತಮವಾಗಿ ಲಭ್ಯವಾಗುತ್ತದೆ.


ಹೀಗಾಗಿ ಈ ಋತುವಿನಲ್ಲಿ ಹಸು, ಎಮ್ಮೆಯ ಹಾಲಿನ ಪ್ರಮಾಣ ಹೆಚ್ಚಾಗಿರುತ್ತದೆ. ಆದರೆ ಈ ಋತುವಿನಲ್ಲಿ ಹಾಲು, ಮಜ್ಜಿಗೆಯಂತಹ ಡೈರಿ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ. ಅದೇ ಬೇಸಿಗೆಯಲ್ಲಿ ಇವುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ.


ಮೊಸರು, ಲಸ್ಸಿ ಮತ್ತು ಐಸ್‌ಕ್ರೀಮ್‌ಗೆ ಬೇಡಿಕೆ ಹೆಚ್ಚಾಗಿರುತ್ತದೆ. ಬೇಸಿಗೆಯಲ್ಲಿ ಬೇಡಿಕೆ ಇದ್ದರೂ ಸಹ ಪೂರೈಕೆ ಕಡಿಮೆ ಇರುತ್ತದೆ. ಕಾರಣ ಇಷ್ಟೇ ಬೇಸಿಗೆಯಲ್ಲಿ ಹಸಿ ಹುಲ್ಲಿನ ಲಭ್ಯತೆ ಕಡಿಮೆ ಮತ್ತು ಮೇವು ಕೂಡ ಕಡಿಮೆ ಸಿಗುತ್ತದೆ. ತಾಪಮಾನ ಹೆಚ್ಚಾಗಿರುತ್ತದೆ. ಹೀಗೆ ಈ ಕಾರಣಗಳೂ ಕೂಡ ಹಾಲಿನ ಬೆಲೆ ಏರಿಕೆಗೆ ಕಾರಣವಾಗಿವೆ.


ಸರ್ಕಾರ ಏನು ಮಾಡಬಹುದು?


ಬೇಸಿಗೆಯಲ್ಲಿ ಹೆಚ್ಚಾಗಿ ಹಾಲಿನ ಕೊರತೆ, ಡೈರಿ ಉತ್ಪನ್ನಗಳಿಗೆ ಬೇಡಿಕೆ ಬರಬಹುದು, ಅದೇ ಸಮಯದಲ್ಲಿ ಹಾಲಿನ ಅಲಭ್ಯತೆಯಿಂದಾಗಿ ಪೂರೈಕೆ ಕುಂಠಿತವಾಗಬಹುದು. ಇದರಿಂದಾಗಿ ಮೊದಲೇ ಕೆಲ ದಾಸ್ತಾನುಗಳನ್ನು ಮಾಡುವುದು ಸರ್ಕಾರಕ್ಕಿರುವ ಮಾರ್ಗವಾಗಿದೆ.


ಹಾಗೆಯೇ ಬೆಣ್ಣೆ, ಎಣ್ಣೆ ಮತ್ತು SMP ಯ ಸುಂಕ-ಮುಕ್ತ ಆಮದುಗಳನ್ನು ಅನುಮತಿಸುವ ಮೂಲಕ ಸಮಸ್ಯೆಯನ್ನು ಕಡಿಮೆ ಮಾಡಲು ಬೆಣ್ಣೆ ಕೊಬ್ಬಿನ ಆಮದುಗಳು ಪ್ರಸ್ತುತ 40% ಸುಂಕವನ್ನು ವಿಧಿಸುತ್ತವೆ.


SMP ಆಮದುಗಳಿಗೆ, ಇದು ವರ್ಷಕ್ಕೆ 10,000 ಟನ್‌ಗಳವರೆಗೆ 15% ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣಗಳಿಗೆ ತಲುಪಬಹುದು. ಬೇಸಿಗೆಯಲ್ಲಿ ಹಾಲು ಸರಬರಾಜುಗಳು ಸಾಮಾನ್ಯ ಕ್ರಮದಲ್ಲಿ ಬತ್ತಿ ಹೋದಾಗ ಅಗತ್ಯವಾದ ಬಫರ್ ಸ್ಟಾಕ್ ಅನ್ನು ನಿರ್ಮಿಸಲು ಶೂನ್ಯ ಸುಂಕದಲ್ಲಿ ಕೊಬ್ಬು ಮತ್ತು SMP ಯನ್ನು ಆಮದು ಮಾಡಿಕೊಳ್ಳಲು ಸರ್ಕಾರವು NDDB ಗೆ ಅನುಮತಿ ನೀಡಬಹುದು.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು