Shivamogga Clash: ಮಲೆನಾಡಿನ ಕೋಮು ಸಂಘರ್ಷಕ್ಕೆ ಕಾರಣವೇನು? ನೆಪಮಾತ್ರವಾಯ್ತಾ ಸಾವರ್ಕರ್, ಟಿಪ್ಪು ಫ್ಲೆಕ್ಸ್?

ಶ್ರಾವಣದ ಮಳೆಯಲ್ಲಿ ತಣ್ಣಗೆ ನೆನೆಯುತ್ತಿದ್ದ ಮಲೆನಾಡು, ಭಯದಿಂದ ಬೆಚ್ಚಿಬಿದ್ದಿದೆ. ಕಡುಬು, ಮೀನು ಸಾರು ತಿಂದು ಬೆಚ್ಚಗೆ ಮಲಗಿದ್ದ ಮಲೆನಾಡ ಮಂದಿ ಸಣ್ಣಗೆ ಬೆವರತೊಡಗಿದ್ದಾರೆ. ಕಾರಣ ಸಾವರ್ಕರ್ ಹಾಗೂ ಟಿಪ್ಪು ಫ್ಲೆಕ್ಸ್ ವಿಚಾರಕ್ಕೆ ಉಂಟಾದ ಗಲಾಟೆ! ಹಾಗಾದ್ರೆ ಶಿವಮೊಗ್ಗ, ಭದ್ರಾವತಿ ಗಲಾಟೆಗೆ ಕಾರಣ ಏನು? ಬರೀ ಫ್ಲೆಕ್ಸ್ ವಿಚಾರಕ್ಕೆ ಶುರುವಾಯ್ತಾ ಸಂಘರ್ಷ? ಇಲ್ಲಿದೆ ಈ ಬಗ್ಗೆ ಮಾಹಿತಿ…

ಟಿಪ್ಪು ಫ್ಲೆಕ್ಸ್ v/s ಸಾವರ್ಕರ್ ಫ್ಲೆಕ್ಸ್

ಟಿಪ್ಪು ಫ್ಲೆಕ್ಸ್ v/s ಸಾವರ್ಕರ್ ಫ್ಲೆಕ್ಸ್

  • Share this:
ಶಿವಮೊಗ್ಗ: ಮಲೆನಾಡು (Malendau) ಶಿವಮೊಗ್ಗ (Shivamogga) ಮತ್ತೆ ಬೆಚ್ಚಿಬಿದ್ದಿದೆ. ತಣ್ಣಗಿದ್ದ ಜಿಲ್ಲೆಯಲ್ಲಿ ಕೋಮು ಸಂಘರ್ಷದ (communal conflict) ಕಿಡಿ ಹೊತ್ತಿಕೊಂಡಿದೆ. ಬಜರಂಗದಳ ಕಾರ್ಯಕರ್ತ (Bajrangadal Worker) ಹರ್ಷ ಕೊಲೆಯಿಂದಾಗಿ (Harsha Murder) ಶಿವಮೊಗ್ಗ ಜಿಲ್ಲೆ ಉದ್ವಿಗ್ನ ಸ್ಥಿತಿ ತಲುಪಿತ್ತು. ಆ ಘಟನೆ ನೆನಪು ಮಾಸುವ ಮುನ್ನವೇ ಮತ್ತೆ ಕೋಮು ಸಂಘರ್ಷ ಜೋರಾಗಿದೆ. ಇಡೀ ದೇಶ 75ನೇ ಸ್ವಾತಂತ್ರ್ಯೋತ್ಸವದ (75th Independence Day) ಅಮೃತ ಮಹೋತ್ಸವ (Amrit Mahotsav) ಆಚರಿಸುತ್ತಿದ್ದರೆ, ಶಿವಮೊಗ್ಗದಲ್ಲಿ ಮಾತ್ರ ಯಾರ ಫ್ಲೆಕ್ಸ್ (Flex) ಇಡಬೇಕು, ಯಾರ ಫ್ಲೆಕ್ಸ್ ಇಡಬಾರದು ಎಂಬ ವಿಚಾರಕ್ಕೆ ಗಲಾಟೆ ನಡೆದಿದೆ. ಕೊನೆಗೆ ಅದು ಹಿಂದೂ (Hindu), ಮುಸ್ಲಿಂ (Muslim) ಗಲಾಟೆ ಸ್ವರೂಪ ಪಡೆದು ಶಿವಮೊಗ್ಗದಲ್ಲಿ ಓರ್ವನ ಹೊಟ್ಟೆಗೆ ಚಾಕು ಚುಚ್ಚಿದ್ದರೆ, ಭದ್ರಾವತಿಯಲ್ಲಿ (Bhadravati) ಮತ್ತೋರ್ವನ ಮೇಲೆ ದಾಳಿ ನಡೆದಿದೆ. ಹಾಗಾದ್ರೆ ಶಿವಮೊಗ್ಗ, ಭದ್ರಾವತಿ ಗಲಾಟೆಗೆ ಕಾರಣ ಏನು? ಬರೀ ವಿನಾಯಕ ದಾಮೋದರ ಸಾವರ್ಕರ್ (Vianayak Damodar Savarkar) ಹಾಗೂ ಟಿಪ್ಪು ಸುಲ್ತಾನ್ (Tipu Sultan) ಫ್ಲೆಕ್ಸ್ ವಿಚಾರಕ್ಕೆ ಶುರುವಾಯ್ತಾ ಸಂಘರ್ಷ? ಇಲ್ಲಿದೆ ಈ ಬಗ್ಗೆ ಮಾಹಿತಿ…

ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಶುರುವಾದ ಗಲಾಟೆ

ಶಿವಮೊಗ್ಗದ ಸಿಟಿ ಸೆಂಟರ್ ಮಾಲ್​ನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸಾಲಿನಲ್ಲಿ ವೀರ್​ ಸಾವರ್ಕರ್​ ಫೋಟೋ ಹಾಕಿದ್ದಕ್ಕೆ ಮೊದಲಿಗೆ ವಿರೋಧ ವ್ಯಕ್ತವಾಗಿತ್ತು. ರಾಜಕೀಯ ಪಕ್ಷವೊಂದರ ಜೊತೆ ಗುರುತಿಸಿ ಕೊಂಡಿದ್ದಾರೆ ಎನ್ನಲಾದ ಎಂ.ಡಿ. ಷರೀಫ್ ಅಲಿಯಾಸ್ ಆಸೀಫ್ ಎಂಬಾತ ಇದಕ್ಕೆ ತೀರ ಆಕ್ಷೇಪ ವ್ಯಕ್ತಪಡಿಸಿದ್ದಾನೆ.

ಸಾವರ್ಕರ್ ವಿರುದ್ಧ ಆಕ್ಷೇಪಾರ್ಯ ಹೇಳಿಕೆ

ಸಾವರ್ಕರ್ ಫೋಟೋ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಸೀಫ್, ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದಾರೆ. ಬ್ರಿಟಿಷರ ಬೂಟ್ ನೆಕ್ಕಿದ್ದಾರೆ ಅಂತ ಆಕ್ಷೇಪಾರ್ಯ ಹೇಳಿಕೆ ನೀಡಿದ್ದಾರೆ. ಕೊನೆಗೆ ಅಲ್ಲಿಂದ ಸಾವರ್ಕರ್ ಫ್ಲೆಕ್ಸ್ ತೆಗೆಸಿದ್ದಾರೆ.

ಇದನ್ನೂ ಓದಿ: Praveen Nettar Murder: ಹಂತಕರಿಗೆ ಟಾರ್ಗೆಟ್ ಆಗಿದ್ದೇಕೆ ಪ್ರವೀಣ್ ನೆಟ್ಟಾರ್? ಬಿಜೆಪಿ ಕಾರ್ಯಕರ್ತನ ಹತ್ಯೆ ಹೇಗಾಯ್ತು?

ಸ್ವಾತಂತ್ರ್ಯೋತ್ಸವದಂದೇ ಕರಾಳ ಘಟನೆ

ಆಗಷ್ಟ್ 15ರಂದು 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಶಿವಮೊಗ್ಗ ನಗರದಲ್ಲಿ ಜನತೆ ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದರು. ಬೆಳಿಗ್ಗೆಯಿಂದ ನಗರದೆಲ್ಲೆಡೆ ಜನರು ಕಾರು ಬೈಕ್ ಗಳಲ್ಲಿ ಜಾಥಾ ನಡೆಸಿ ದೇಶಭಕ್ತಿಯ ಜೈಕಾರ ಹಾಕುತ್ತಿದ್ದರು. ಆದರೆ ಅಮೀರ್ ಅಹಮ್ಮದ್ ವೃತ್ತದಲ್ಲಿ ನಡೆದ ಘಟನೆ ನಗರದಲ್ಲಿ ಸೂಚಕದ ಛಾಯೆ ಆವರಿಸುವಂತೆ ಮಾಡಿತು.

ಟಿಪ್ಪು, ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಗಲಾಟೆ

ಶಿವಮೊಗ್ಗದ ಅಮೀರ್ ಅಹಮ್ಮದ್ ವೃತ್ತದಲ್ಲಿ ದರ್ಗಾ ಬಳಿ ಹಾಕಲಾಗಿದ್ದ ವೇದಿಕೆಯಲ್ಲಿ ಮುಸ್ಲಿಂ ಯುವಕರು ಟಿಪ್ಪು ಸುಲ್ತಾನ್ ಭಾವಚಿತ್ರವನ್ನು ಇಟ್ಟು ಸಂಭ್ರಮಿಸುತ್ತಿದ್ದರು. ಅಷ್ಚೊತ್ತಿಗೆ ಸಾವರ್ಕರ್ ಇರುವ ಇನ್ನೊಂದು ಫ್ಲೆಕ್ಸ್ ಬೋರ್ಡ್ ಅಮೀರ್ ಅಹಮ್ಮದ್ ವೃತ್ತದಲ್ಲಿ ನಿಲ್ಲಿಸಿದ್ರು. ಇದಕ್ಕೆ ಮುಸ್ಲಿಂ ಯುವಕರ ಗುಂಪು ವಿರೋಧ ವ್ಯಕ್ತಪಡಿಸಿದೆ. ಆ ವೃತ್ತದಲ್ಲಿ ಸಾವರ್ಕರ್ ಕಟೌಟ್ ಇಡೋದಾದ್ರೆ…ನಾವು ಟಿಪ್ಪು ಸುಲ್ತಾನ್ ಕಟೌಟ್ ಇಡುತ್ತೇವೆ..ಇಲ್ಲ ಅಂದ್ರೆ ಸಾವರ್ಕರ್ ಕಟೌಟ್ ತೆರವುಗೊಳಿಸಿ ಎಂದು ಆಗ್ರಹಿಸಿದ್ದಾರೆ.

ಪೊಲೀಸರಿಂದ ಲಾಠಿ ಚಾರ್ಜ್

ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರೊಬ್ಬರು ಮತ್ತೆ ಕಟೌಟ್ ಕಟ್ಟೋದಕ್ಕೆ ಮುಂದಾಗುತ್ತಾರೆ. ಆಗ ಎಂಟತ್ತು ಮುಸ್ಲಿಂ ಯುವಕರ ತಂಡ ಸಾವರ್ಕರ್​ ಕಟೌಟ್ ನ್ನು ಅಲ್ಲಿಂದ ತೆರವುಗೊಳಿಸಲು ಮುಂದಾಗಿದ್ದಾರೆ. ಈ ವೇಳೇ ಪೊಲೀಸರು ಅವರನ್ನು ತಡೆದು ಲಾಟಿ ಬೀಸಿ, ಅಲ್ಲಿದ್ದವರನ್ನು ವಶಕ್ಕೆ ಪಡೆಯುತ್ತಾರೆ. ಆಗ ಸಂಘರ್ಷದ ವಾತಾವರಣ ಸೃಷ್ಟಿಯಾಗುತ್ತದೆ.

ಮನೆ ಮುಂದೆ ನಿಂತಿದ್ದ ಯುವಕನಿಗೆ ಚಾಕು ಇರಿತ

ಅಮೀರ್ ಅಹಮ್ಮದ್ ವೃತ್ತದಲ್ಲಿ ಪೊಲೀಸ್ ಸರ್ಪಗಾವಲು ಇದ್ದ ಕಾರಣಕ್ಕೆ ನಡೆಯಬಹುದಾಗಿದ್ದ ದೊಡ್ಡ ಗಲಾಟೆಯೊಂದು ತಪ್ಪಿತು. ಆದರೆ ಅಮೀರ್ ಅಹಮ್ಮದ್ ವೃತ್ತದಲ್ಲಿ ನಡೆದ ಗಲಾಟೆ ಬೆನ್ನಲ್ಲೇ ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್(21) ಎಂಬ ಯುವಕ ಮನೆ ಮುಂದೆ ನಿಂತಿದ್ದ ಎನ್ನಲಾಗಿದೆ. ಆಗ ಆತನ ಮೇಲೆ ಅಟ್ಯಾಕ್ ಮಾಡಿದ ಕಿಡಿಗೇಡಿಗಳು, ಆತನ ಹೊಟ್ಟೆಗೆ ಚಾಕು ಇರಿದಿದ್ದಾರೆ. ಚಾಕು ಇರಿತಕ್ಕೆ ಗಾಯಾಳುವಿನ ಕರುಳು ಹೊರಬಂದಿದೆ. ತಕ್ಷಣ ಪ್ರೇಮ್ ಕುಮಾರ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇತ್ತ ಭದ್ರಾವತಿಯಲ್ಲೂ ಚಾಕು ಇರಿತ ಯತ್ನ

ನಿಷೇಧಾಜ್ಞೆಯ ನಡುವೆಯೂ ಭದ್ರಾವತಿಯ ನೆಹರೂ ಬಡಾವಣೆಯಲ್ಲಿ ನಿನ್ನೆ ಗಲಾಟೆ ನಡೆದಿತ್ತು. ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದ್ದು, ಚಾಕುವಿನಿಂದ ಇರಿಯಲು ಯತ್ನಿಸಲಾಗಿತ್ತು. ಬಜರಂಗದಳ ಕಾರ್ಯಕರ್ತ ಸುನಿಲ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಾಯಾಳುವನ್ನು ಭದ್ರಾವತಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಕ್ಕೆ ಡಿಚ್ಚಿ ಆಲಿಯಾಸ್​ ಮುಬಾರಕ್​ ಸೇರಿದಂತೆ ಮೂವರ ಮೇಲೆ ಆರೋಪ ಕೇಳಿಬಂದಿದೆ.

ಗುರುವಾರದವರೆಗೆ ನಿಷೇಧಾಜ್ಞೆ

ಸಾವರ್ಕರ್​ ಫ್ಲೆಕ್ಸ್ ತೆಗೆದ ವಿಚಾರ ಸಂಬಂಧ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಗುರುವಾರದ ತನಕ ಮುಂದುವರೆಸಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಅಮೀರ್ ಅಹಮದ್ ವೃತ್ತದಲ್ಲಿ ನಡೆದ ಬಿಗುವಿನ ವಾತಾವರಣದಿಂದ ಸೋಮವಾರ ಮಧ್ಯಾಹ್ನವೇ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ಶಿವಮೊಗ್ಗದ ಹೆಸರಿಗೆ ಕಳಂಕ

ಶಿವಮೊಗ್ಗ, ತುಂಗಾ ನದಿಯ ದಡದಲ್ಲಿ, ಮಧ್ಯ ಕರ್ನಾಟಕದ ವಾಣಿಜ್ಯ ಕೇಂದ್ರವಾಗಿದೆ ಮತ್ತು ಇದು ಭಾರತದ ಅತಿದೊಡ್ಡ ವೀಳ್ಯದೆಲೆ ಬೆಳೆಯುವ ಮತ್ತು ವ್ಯಾಪಾರ ಮಾಡುವ ಜಿಲ್ಲೆಯಾಗಿದೆ. ಇದು ಆಳವಾದ ಕಾಡುಗಳು ಮತ್ತು ಪರ್ವತಗಳಿಗೆ ಹೆಸರುವಾಸಿಯಾಗಿದೆ. ಇದು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ಹೆಸರುವಾಸಿಯಾಗಿದೆ. ಜಿಲ್ಲೆ ಒಂದು ಕಾಲದಲ್ಲಿ ಸಮಾಜವಾದಿ ಮತ್ತು ರೈತ ಚಳವಳಿಗಳ ಕೇಂದ್ರವಾಗಿತ್ತು. ಆದರೀಗ ಕೋಮು ಸಂಘರ್ಷದ ಕಳಂಕ ಮೆತ್ತಿಕೊಂಡಿದೆ.

ಇದನ್ನೂ ಓದಿ: Explained: ಕೇವಲ 10 ದಿನಗಳಲ್ಲಿ 3 ಹತ್ಯೆ, ಬಡ ಕುಟುಂಬಗಳ ಕಣ್ಣೀರು ಒರೆಸುವವರು ಯಾರು?

40 ವರ್ಷಗಳಲ್ಲಿ 30ಕ್ಕೂ ಹೆಚ್ಚು ಮಂದಿ ಸಾವು!

ಶಿವಮೊಗ್ಗವು ಕೋಮು ಧ್ರುವೀಕರಣದ ಇತಿಹಾಸವನ್ನು ಹೊಂದಿದೆ. ಕಳೆದ 40 ವರ್ಷಗಳಲ್ಲಿ 30 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಕನಿಷ್ಠ ಎರಡು ಡಜನ್ ಪ್ರಮುಖ ಕೋಮು ಘಟನೆಗಳೊಂದಿಗೆ. ನಗರವು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಎರಡರ ಭದ್ರಕೋಟೆಯಾಗಿದೆ.
Published by:Annappa Achari
First published: