ಕರ್ನಾಟಕದ ನೂತನ ಮುಖ್ಯಮಂತ್ರಿ (new Chief Minister of Karnataka) ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. 5 ಗ್ಯಾರಂಟಿಗಳೊಂದಿಗೆ (5 guarantees) ವಿಧಾನಸಭಾ ಚುನಾವಣೆಯಲ್ಲಿ (assembly election) ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ (Congress), ಈ ಬಾರಿ ಅಧಿಕಾರ ನಡೆಸಲಿದೆ. ಬಿಜೆಪಿ ನಾಯಕ (BJP Leader) ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಸ್ಥಾನಕ್ಕೆ (CM Post) ರಾಜೀನಾಮೆ ನೀಡಿದ್ದು, ಹೊಸ ಸಿಎಂ ಅಧಿಕಾರ ಸ್ವೀಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹೊತ್ತಲ್ಲಿ ಸಿಎಂ ಸ್ಥಾನಕ್ಕೆ ಬೇಕಾದ ಅರ್ಹತೆಗಳೇನು? ಮುಖ್ಯಮಂತ್ರಿಗಳ ಸಂಬಳ ಎಷ್ಟು? ಅವರಿಗೆ ಯಾವೆಲ್ಲ ಸೌಲಭ್ಯಗಳು ಸಿಗುತ್ತವೆ? ಎಂಬ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…
ಮುಖ್ಯಮಂತ್ರಿ ಯಾರು?
ಮುಖ್ಯಮಂತ್ರಿ ಹುದ್ದೆಯ ರಾಜ್ಯದಲ್ಲಿ ಪ್ರಮುಖ ಹುದ್ದೆಯಾಗಿದೆ. ಅವರು ರಾಜ್ಯ ಸರ್ಕಾರದ ಚುನಾಯಿತ ಮುಖ್ಯಸ್ಥರಾಗಿರುತ್ತಾರೆ. ಇವರು ರಾಜ್ಯಪಾಲರು ಮತ್ತು ಮಂತ್ರಿಗಳ ಮಂಡಳಿಯ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಾರೆ. ಸಂವಿಧಾನದ 163-164 ನೇ ವಿಧಿಯು ಮುಖ್ಯಮಂತ್ರಿಯ ಬಗ್ಗೆ ಉಲ್ಲೇಖಿಸುತ್ತದೆ. 163 ನೇ ವಿಧಿಯು ರಾಜ್ಯಪಾಲರಿಗೆ ಸಹಾಯ ಮಾಡಲು ಮತ್ತು ಸಲಹೆ ನೀಡಲು ಮುಖ್ಯಮಂತ್ರಿಯ ನೇತೃತ್ವದ ಮಂತ್ರಿಮಂಡಲವನ್ನು ಹೊಂದಿರಬೇಕು ಎಂದು ಹೇಳುತ್ತದೆ.
ಸಂವಿಧಾನದ 164 ನೇ ವಿಧಿಯು ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಿಸಬೇಕು ಎಂದು ಹೇಳುತ್ತದೆ. ಇತರ ಮಂತ್ರಿಗಳನ್ನು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ನೇಮಿಸಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಒಟ್ಟು ಮಂತ್ರಿಗಳ ಸಂಖ್ಯೆಯು ರಾಜ್ಯ ವಿಧಾನಸಭೆಯ ಒಟ್ಟು ಬಲದ 15% ಅನ್ನು ಮೀರಬಾರದು.
ಇದನ್ನೂ ಓದಿ: BJP Defeat: ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು? ಅತಿ ವಿಶ್ವಾಸವೋ, 40 ಪರ್ಸೆಂಟ್ ಆರೋಪವೋ?
ಮುಖ್ಯಮಂತ್ರಿ ಹುದ್ದೆಗೆ ಅರ್ಹತೆ:
ಮುಖ್ಯಮಂತ್ರಿ ಸ್ಥಾನವನ್ನು ಪುರುಷ ಅಥವಾ ಸ್ತ್ರೀ ಯಾರಾದರೂ ಪಡೆದುಕೊಳ್ಳಬಹುದು. ಆ ವ್ಯಕ್ತಿ ಭಾರತದ ಪ್ರಜೆಯಾಗಿರಬೇಕು. 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು. ರಾಜ್ಯ ವಿಧಾನಮಂಡಲದ ಎರಡೂ ಸದನಗಳ ಪೈಕಿ ಒಂದರ ಸದಸ್ಯರಾಗಿರಬೇಕು. ಒಂದು ವೇಳೆ ಎಂಎಲ್‌ಎ ಅಥವಾ ಎಂಎಲ್‌ಸಿ ಆಗದಿದ್ದರೆ, ಮುಖ್ಯಮಂತ್ರಿಯಾಗಿ ಆಯ್ಕೆಯಾಗಬಹುದು. ಆದರೆ ಅವರು ನೇಮಕಗೊಂಡ ದಿನಾಂಕದಿಂದ ಆರು ತಿಂಗಳೊಳಗೆ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್ ಆಗಬೇಕು.
ರಾಜ್ಯದ ಮುಖ್ಯಮಂತ್ರಿಗಳು ಇತರ ಸಚಿವರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸಲಹೆ ನೀಡುತ್ತಾರೆ ಮತ್ತು ಅವರಿಗೆ ಖಾತೆಗಳನ್ನು ನಿರ್ಧರಿಸುತ್ತಾರೆ. ಸಂಪುಟ ಸಭೆಗಳ ಅಧ್ಯಕ್ಷತೆ ವಹಿಸುತ್ತಾರೆ. ಸರ್ಕಾರವು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳನ್ನು ರಾಜ್ಯಪಾಲರೊಂದಿಗೆ ಹಂಚಿಕೊಳ್ಳಲಾಗುತ್ತದೆ. ರಾಜ್ಯಪಾಲರು ಕೇಳಿದಾಗ ಮತ್ತು ಇತರ ಮಂತ್ರಿಗಳ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕು. ಶಾಸಕಾಂಗ ಸಭೆಯನ್ನು ವಿಸರ್ಜಿಸಲು ರಾಜ್ಯಪಾಲರಿಗೆ ಸಲಹೆ ನೀಡುತ್ತಾರೆ. ಅವರು ಸಲಹೆಯನ್ನು ಸ್ವೀಕರಿಸಬಹುದು ಅಥವಾ ಸ್ವೀಕರಿಸದಿರಬಹುದು. ಮಂತ್ರಿಗಳ ಮಂಡಳಿಯು ರಾಜ್ಯ ವಿಧಾನಸಭೆಗೆ ಸಾಮೂಹಿಕವಾಗಿ ಜವಾಬ್ದಾರವಾಗಿದೆ. ರಾಜ್ಯದಲ್ಲಿ ನಿಜವಾದ ಕಾರ್ಯಕಾರಿ ಅಧಿಕಾರವನ್ನು ಮುಖ್ಯಮಂತ್ರಿ ಹೊಂದಿದ್ದಾರೆ. ಬಹುಮತದ ವಿಶ್ವಾಸವನ್ನು ಉಳಿಸಿಕೊಳ್ಳುವವರೆಗೆ ಮುಖ್ಯಮಂತ್ರಿ ಮತ್ತು ಮಂತ್ರಿ ಮಂಡಳವು ಈ ಅಧಿಕಾರವನ್ನು ಅನುಭವಿಸುತ್ತದೆ.
ಮುಖ್ಯಮಂತ್ರಿಗಳ ಸಂಬಳ
ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳ ಸಂಭಾವನೆಯನ್ನು ಆಯಾ ರಾಜ್ಯಗಳ ಶಾಸಕಾಂಗಗಳು ಭಾರತೀಯ ಸಂವಿಧಾನದ 164 ನೇ ವಿಧಿಯ ಅಡಿಯಲ್ಲಿ ನಿರ್ಧರಿಸುತ್ತವೆ. ರಾಜ್ಯ ಶಾಸಕರು ವೇತನವನ್ನು ನಿರ್ಧರಿಸುವವರೆಗೆ, ಅದು ಎರಡನೇ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದಂತೆಯೇ ಇರುತ್ತದೆ.
ಕರ್ನಾಟಕ ಸಿಎಂ ಸಂಬಳವೆಷ್ಟು?
ಕರ್ನಾಟಕದ ಮುಖ್ಯಮಂತ್ರಿಗೆ ಮೊದಲು 50 ಸಾವಿರ ರೂಪಾಯಿ ಮಾಸಿಕ ಸಂಬಳವಿತ್ತು. ಇದೀಗ ಅದನ್ನು 75 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿದೆ. ಅದರ ಜೊತೆಗೆ ಇತರೇ ಭತ್ಯೆಗಳು ಸೇರಿ 3 ಲಕ್ಷದಿಂದ 4 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
ವಿವಿಧ ರಾಜ್ಯಗಳ ಸಿಎಂ ಸಂಬಳ
ಕರ್ನಾಟಕ ಸಿಎಂ ಭತ್ಯೆಯಲ್ಲಿ ಏರಿಕೆ
ಇನ್ನು 2022 ರಲ್ಲಿ, ಪ್ರಸ್ತಾವನೆಯಲ್ಲಿ, ಸಚಿವರು ಮತ್ತು ಮುಖ್ಯಮಂತ್ರಿಗಳ ಮನೆ ಬಾಡಿಗೆ ಭತ್ಯೆಯನ್ನು ತಿಂಗಳಿಗೆ 80,000 ರೂ.ನಿಂದ 1.20 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಅಂದರೆ, ಈಗ ಮನೆ ಬಾಡಿಗೆ ಭತ್ಯೆ 1.20 ಲಕ್ಷ ರೂ. ಮನೆ, ಬಡಾವಣೆ, ಉದ್ಯಾನಗಳ ನಿರ್ವಹಣೆಗೆ ನೀಡುತ್ತಿದ್ದ ಭತ್ಯೆಯನ್ನು ಮಾಸಿಕ 20 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ