• Home
 • »
 • News
 • »
 • explained
 • »
 • Savarkar: ಸಾವರ್ಕರ್‌ ಮೇಲೆ ಕಾಂಗ್ರೆಸ್ ಆರೋಪವೇನು? ಒಮ್ಮೆ ಹೊಗಳಿಕೆ, ಮತ್ತೊಮ್ಮೆ ತೆಗಳಿಕೆ ಏಕೆ?

Savarkar: ಸಾವರ್ಕರ್‌ ಮೇಲೆ ಕಾಂಗ್ರೆಸ್ ಆರೋಪವೇನು? ಒಮ್ಮೆ ಹೊಗಳಿಕೆ, ಮತ್ತೊಮ್ಮೆ ತೆಗಳಿಕೆ ಏಕೆ?

ವಿಡಿ ಸಾವರ್ಕರ್

ವಿಡಿ ಸಾವರ್ಕರ್

ಸಾವರ್ಕರ್ ಬ್ರಿಟಿಷರಿಗೆ ಸಲ್ಲಿಸಿದ್ದ ಮನವಿಗಳ ಕುರಿತು ಕಾಂಗ್ರೆಸ್ ಪಕ್ಷ ವ್ಯಂಗ್ಯದ ಹೇಳಿಕೆಗಳನ್ನು ನೀಡಲಾರಂಭಿಸಿತ್ತು. ಸಾವರ್ಕರ್ ಹಾಗೂ ಅವರ ಸಹೋದರ 1911 ಮತ್ತು 1920 ರ ನಡುವೆ ಜೈಲಿನಲ್ಲಿದ್ದ ಸಮಯದಲ್ಲಿ ಬ್ರಿಟಿಷರಿಗೆ ಏಳು ಬಾರಿ ಪತ್ರ ಬರೆದಿದ್ದಾರೆ ಎಂದು ಉಲ್ಲೇಖಿಸಿದೆ.

 • Share this:

  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಹಿಂದುತ್ವ ಸಿದ್ಧಾಂತವಾದಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ (Vinayak Damodar Savarkar) ಕುರಿತು ವಾಗ್ದಾಳಿ ನಡೆಸಿದ್ದಾರೆ. “ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು” ಎಂದು ಆರೋಪಿಸಿದ್ದಾರೆ. ವಿ.ಡಿ. ಸಾವರ್ಕರ್ ಬ್ರಿಟಿಷರಿಗೆ (British) ಹೆದರಿ ಕ್ಷಮಾದಾನ ಅರ್ಜಿಯನ್ನು ಬರೆದಿದ್ದರು” ಎಂದು ಸಾವರ್ಕರ್ ಅವರನ್ನು ದೂಷಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್, “ಸರಕಾರಿ ದಾಖಲೆಗಳಿಂದ 1920 ರ ಹಿಂದಿನ ದಾಖಲೆಗಳನ್ನು ಮಾಧ್ಯಮಗಳಿಗೆ ಪ್ರದರ್ಶಿಸಿದ್ರು. ಅದರಲ್ಲಿ ಸಾವರ್ಕರ್ ಬ್ರಿಟಿಷರಿಗೆ ಬರೆದ ಪತ್ರ ಕೂಡ ಇದೆ” ಎಂದು ತಿಳಿಸಿದ್ದಾರೆ. ಈ ಪತ್ರದಲ್ಲಿ ಸಾವರ್ಕರ್ “ತಮ್ಮ ಆಜ್ಞಾಧಾರಕ ಸೇವಕನಾಗಿ ಉಳಿಯಲು ಬೇಡಿಕೊಳ್ಳುತ್ತೇನೆ” ಎಂದು ಉಲ್ಲೇಖಿಸಿರುವ ಕೊನೆಯ ಸಾಲನ್ನು ರಾಹುಲ್ ಸುದ್ದಿಗೋಷ್ಟಿಯಲ್ಲಿ ಓದಿ ಹೇಳಿದ್ದು, ಸಾವರ್ಕರ್ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.


  ಸಾವರ್ಕರ್ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ


  ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. ಸಾವರ್ಕರ್ ಭಯದಿಂದ ಪತ್ರಕ್ಕೆ ಸಹಿ ಹಾಕಿದ್ದು, ಹಾಗೆ ಮಾಡುವ ಮೂಲಕ ಅವರು ಮಹಾತ್ಮಾ ಗಾಂಧಿ, ಸರ್ದಾರ್ ಪಟೇಲ್, ಜವಹರಲಾಲ್ ನೆಹರು ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಇತರ ಹೋರಾಟಗಾರರಿಗೂ ದ್ರೋಹ ಬಗೆದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.


  “ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಹ್ನೆ”


  ಯಾತ್ರೆಯ ಭಾಗವಾಗಿ ವಾಶಿಮ್ ಜಿಲ್ಲೆಯಲ್ಲಿನ ರ‍್ಯಾಲಿಯನ್ನುದ್ದೇಶಿಸಿ ರಾಹುಲ್ ಮಾತನಾಡಿದ್ದು ಸಾವರ್ಕರ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಹ್ನೆ ಎಂದು ಕರೆದಿದ್ದಾರೆ. ಎರಡು ಮೂರು ವರ್ಷಗಳ ಅಂಡಮಾನ್ ಜೈಲಿನಲ್ಲಿದ್ದ ಸಮಯದಲ್ಲಿಯೇ ಅವರು ಕ್ಷಮಾದಾನ ಅರ್ಜಿಗಳನ್ನು ಬರೆಯಲು ಆರಂಭಿಸಿದರು ಎಂದು ರಾಹುಲ್ ತಿಳಿಸಿದ್ದಾರೆ.


  ಸಾವರ್ಕರ್ ಕುರಿತಾದ ಅಂಚೆಚೀಟಿ


  ಸಾವರ್ಕರ್ ಅವರನ್ನು ವ್ಯಂಗ್ಯವಾಗಿ ಇರಿದ ಕಾಂಗ್ರೆಸ್ ಹೇಳಿಕೆ


  ಸಾವರ್ಕರ್ ಬ್ರಿಟಿಷರಿಗೆ ಸಲ್ಲಿಸಿದ್ದ ಮನವಿಗಳ ಕುರಿತು ಕಾಂಗ್ರೆಸ್ ಪಕ್ಷ ವ್ಯಂಗ್ಯದ ಹೇಳಿಕೆಗಳನ್ನು ನೀಡಲಾರಂಭಿಸಿತ್ತು. ಸಾವರ್ಕರ್ ಹಾಗೂ ಅವರ ಸಹೋದರ 1911 ಮತ್ತು 1920 ರ ನಡುವೆ ಜೈಲಿನಲ್ಲಿದ್ದ ಸಮಯದಲ್ಲಿ ಬ್ರಿಟಿಷರಿಗೆ ಏಳು ಬಾರಿ ಪತ್ರ ಬರೆದಿದ್ದಾರೆ ಎಂದು ಉಲ್ಲೇಖಿಸಿದೆ.


  ಇದನ್ನೂ ಓದಿ: Mangaluru Auto Blast: ಮಂಗಳೂರಿನಲ್ಲಿ ಆಟೋ ಸ್ಫೋಟಿಸಿದ್ದು ಉಗ್ರರಾ? ನಿಜಕ್ಕೂ ಅವರ ಟಾರ್ಗೆಟ್ ಯಾರಾಗಿದ್ದರು?


  “ನಾನು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ!”


  ಡಿಸೆಂಬರ್ 2019 ರಲ್ಲಿ ರೇಪ್ ಇನ್ ಇಂಡಿಯಾ ಹೇಳಿಕೆಗಳೊಂದಿಗೆ ಬಿರುಗಾಳಿ ಎಬ್ಬಿಸಿದ್ದ ರಾಹುಲ್, ಇದೀಗ ಸಾವರ್ಕರ್ ಸುದ್ದಿಯೊಂದಿಗೆ ಪುನಃ ಅಖಾಡಾಕ್ಕೆ ಇಳಿದಿದ್ದಾರೆ. ಮಹಿಳೆಯ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ನರೇಂದ್ರ ಮೋದಿ ವಿರುದ್ಧ ಕಟು ವಾಗ್ದಾಳಿ ನಡೆಸಿದ ರಾಹುಲ್, ಪ್ರಧಾನಿಯವರು ಮೇಕ್ ಇನ್ ಇಂಡಿಯಾ ಆರಂಭಿಸಿದ್ದಾರೆ. ಆದರೆ ಅದರ ಹೆಸರು ರೇಪ್ ಇನ್ ಇಂಡಿಯಾ ಎಂಬುದಾಗಿ ಆಗಬೇಕಿತ್ತು ಎಂದು ವಾಗ್ದಾಳಿ ನಡೆಸಿದ್ದರು. ರಾಹುಲ್ ಸಾವರ್ಕರ್ ವಿರುದ್ಧ ನೀಡಿರುವ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಬಿಜೆಪಿ ಹೇಳಿದಾಗ ನನ್ನ ಹೆಸರು ರಾಹುಲ್ ಗಾಂಧಿ, ರಾಹುಲ್ ಸಾವರ್ಕರ್ ಅಲ್ಲ ಎಂದು ಟೀಕಿಸಿದ್ದಾರೆ.


  2019 ರಲ್ಲಿ ಕಾಂಗ್ರೆಸ್‌ನಲ್ಲಿ ಏರ್ಪಟ್ಟಿತ್ತು ಗೊಂದಲ


  2019 ರಲ್ಲಿ, ಬಿಜೆಪಿ ಮಹಾರಾಷ್ಟ್ರ ಘಟಕವು ಮರು ಆಯ್ಕೆಯಾದರೆ ಸಾವರ್ಕರ್‌ಗೆ ಭಾರತ ರತ್ನ ನೀಡುವಂತೆ ಕೇಂದ್ರದಲ್ಲಿ ಪಕ್ಷದ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಕೇಳಲು ಪ್ರತಿಜ್ಞೆ ಮಾಡಿದಾಗ ಕಾಂಗ್ರೆಸ್ ಸ್ವತಃ ಸಂಘರ್ಷಕ್ಕೆ ಒಳಗಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ, ಸಾವರ್ಕರ್ ಅವರನ್ನು ಗೋಡ್ಸೆಗೆ ಹೋಲಿಸಿದ್ದು, ಬಿಜೆಪಿ ನೇತೃತ್ವದ ಸರಕಾರವು ಮಹಾತ್ಮ ಗಾಂಧಿಯವರ ಜನ್ಮದಿನದ 150 ನೇ ವರ್ಷದಲ್ಲಿ ಈ ವಿಷಯದ ಬಗ್ಗೆ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಗಂಭೀರವಾಗಿ ಯೋಚಿಸಬೇಕು ಎಂದು ತಿಳಿಸಿದ್ದಾರೆ.


  ಸಾವರ್ಕರ್ ಹೊಗಳಿದ್ದ ಸಿಂಘ್ವಿ


  ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ಅವರು ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರವಹಿಸಿದ "ಸಾಧಕ" ಎಂದು ಹೊಗಳಿದ್ದಾರೆ. ಅದಾಗ್ಯೂ ಸಾವರ್ಕರ್ ಸಿದ್ಧಾಂತಗಳಿಗೆ ತಾನು ಬದ್ಧನಾಗಿಲ್ಲ ಎಂದು ತಿಳಿಸಿದ್ದಾರೆ. ವೈಯಕ್ತಿಕವಾಗಿ ಸಾವರ್ಕರ್ ವಿಚಾರಧಾರೆಗೆ ಒಪ್ಪುವುದಿಲ್ಲವಾದರೂ ಸಾಧಕರಾಗಿದ್ದರು ಎಂಬ ಅಂಶವನ್ನು ಯಾರೂ ಮರೆಯಬಾರದು ಎಂದು ತಿಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು, ದಲಿತ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದಾರೆ ಹಾಗೂ ದೇಶಕ್ಕಾಗಿ ಸೆರೆಮನೆಗೆ ಹೋದರು ಎಂದು ರಾಜ್ಯಸಭಾ ಎಮ್‌ಪಿ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.


  ಸಾವರ್ಕರ್ ಅಂಚೆ ಚೀಟಿ ಬಿಡುಗಡೆ


  ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಸಾವರ್ಕರ್ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದನ್ನು ಮಾಜಿ ಪ್ರಧಾನಿ ಮನಮೋಹನ್ ನೆನಪಿಸಿಕೊಂಡಿದ್ದಾರೆ. ಇಂದಿರಾ ಗಾಂಧಿಯವರು 1966 ರಲ್ಲಿ ಸಾವರ್ಕರ್ ಅವರ ಮರಣದ ನಂತರ ಅವರ ಗೌರವಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು ಎಂಬುದಾಗಿ ಸುದ್ದಿಮಾಧ್ಯಮ ವರದಿ ಮಾಡಿದೆ.


  ಸಾವರ್ಕರ್ ಪದೇ ಪದೇ ದೂಷಿಸುವ ಮಣಿಶಂಕರ್ ಅಯ್ಯರ್


  ಭಾರತದಲ್ಲಿನ ಪರಿಸ್ಥಿತಿ ಅಸಹ್ಯಕರವಾಗಿದೆ. 1923 ರಲ್ಲಿ, ವಿಡಿ ಸಾವರ್ಕರ್ ಎಂಬ ವ್ಯಕ್ತಿ ಯಾವುದೇ ಧಾರ್ಮಿಕ ಪಠ್ಯದಲ್ಲಿ ಇಲ್ಲದ 'ಹಿಂದುತ್ವ' ಎಂಬ ಪದವನ್ನು ತನ್ನ ಪುಸ್ತಕದಲ್ಲಿ ಕಂಡುಹಿಡಿದನು. ಆದ್ದರಿಂದ, ಎರಡು ರಾಷ್ಟ್ರಗಳ ಸಿದ್ಧಾಂತದ ಮೊದಲ ಪ್ರತಿಪಾದಕರು ಪ್ರಸ್ತುತ ಭಾರತದಲ್ಲಿ ಅಧಿಕಾರದಲ್ಲಿರುವವರ ಸಿದ್ಧಾಂತಗಳ ಗುರು, ಎಂದು ಅಯ್ಯರ್ ಲಾಹೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ. 2013 ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮುನ್ನ ಅಯ್ಯರ್ ಅವರು, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಾವರ್ಕರ್ ಅವರ ಭಾವಚಿತ್ರವನ್ನು ಸ್ಥಾಪಿಸುವುದನ್ನು ಕಾಂಗ್ರೆಸ್ ವಿರೋಧಿಸಿದರೂ, 2008 ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದೆ ಎಂದು ತಿಳಿಸಿದ್ದರು.


  ಸಾವರ್ಕರ್ ಸಮಸ್ಯೆಯಲ್ಲ


  ಆ ಸಮಯದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಪಕ್ಷವು ಅಯ್ಯರ್ ಅವರ ಹೇಳಿಕೆಗಳನ್ನು ಅವರ ಸ್ವಂತ ಅಭಿಪ್ರಾಯ ಎಂದು ಬಿತ್ತರಿಸಲು ಪ್ರಯತ್ನಿಸಿತು, ಆಗಿನ ಸಂಸದೀಯ ವ್ಯವಹಾರಗಳ ಸಚಿವ ಗುಲಾಂ ನಬಿ ಆಜಾದ್, "ಇದು ಅವರ (ಅಯ್ಯರ್) ವೈಯಕ್ತಿಕ ಅಭಿಪ್ರಾಯ, ವೀರ್ ಸಾವರ್ಕರ್ ಬಗ್ಗೆ ಅವರು ಹೇಳಿದ್ದನ್ನು ನಾವು ಒಪ್ಪುವುದಿಲ್ಲ" ಎಂದು ತಿಳಿಸಿದ್ದರು. ಅಯ್ಯರ್ 2004 ರಲ್ಲಿ ಸಾವರ್ಕರ್ ಅವರನ್ನು ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾಗೆ ಹೋಲಿಸಿದ್ದಾರೆ ಎಂದು ಸುದ್ದಿಮಾಧ್ಯಮ ವರದಿ ಮಾಡಿತ್ತು. ಯುಪಿಎ ಆಡಳಿತದಲ್ಲಿ ಪೆಟ್ರೋಲಿಯಂ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಅಯ್ಯರ್, ಸಾವರ್ಕರ್ ಬಗೆಗೆ ತರೇಹವಾರಿ ಹೇಳಿಕೆಗಳನ್ನು ನೀಡುವುದರೊಂದಿಗೆ ಪೋರ್ಟ್ ಬ್ಲೇರ್‌ನಲ್ಲಿರುವ ಸ್ಮಾರಕದಿಂದ ಸಾವರ್ಕರರ್ ಅವರ ಹೆಸರನ್ನು ಮತ್ತು ಉಲ್ಲೇಖವನ್ನು ತೆಗೆದುಹಾಕುವ ಅವರ ಕ್ರಮದಿಂದ ಗದ್ದಲವನ್ನೇ ಉಂಟುಮಾಡಿದ್ದರು.


  ಸಾವರ್ಕರ್ ಕುರಿತು ನಾನು ಮಾಡಿರುವ ಹೇಳಿಕೆಗಳಿಗೆ ನಾನು ಬದ್ಧನಾಗಿರುವೆ ಎಂದು ತಿಳಿಸಿದ್ದ ಅಯ್ಯರ್, ನಾನು ಅವರ ಕುರಿತಾಗಿ ಮಾಡಿರುವ ಹೇಳಿಕೆಗಳಿಗೆ ದಾಖಲೆಗಳಿವೆ ಹಾಗೂ ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅವರ ಭಾಷಣಗಳನ್ನು ಆಧರಿಸಿದೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.


  ತಮ್ಮ ಬಳಿ ಹಲವಾರು ಅಧಿಕೃತ ದಾಖಲೆಗಳಿವೆ ಎಂದು ವಾದಿಸಿರುವ ಅಯ್ಯರ್ ಸಾವರ್ಕರ್ ಅವರು ಕ್ವಿಟ್ ಇಂಡಿಯಾ ಚಳುವಳಿಯನ್ನು ವಿಭಜಿತ ಭಾರತ ಚಳುವಳಿ ಎಂದು ವಿವರಿಸಿದ್ದಾರೆ ಎಂಬ ಅಂಶವನ್ನು ಸ್ಪಷ್ಟವಾಗಿ ಸ್ಥಾಪಿಸಿರುವ ದಾಖಲೆ ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ನಾನು ಅವರಿಗೆ ಯಾವತ್ತೂ ಅಗೌರವ ತೋರಿಲ್ಲ ಬದಲಿಗೆ ಕೇವಲ ಸತ್ಯಗಳನ್ನು ಉಲ್ಲೇಖಿಸಿದ್ದೇನೆ, ಎಂದು ಅಯ್ಯರ್ ತಿಳಿಸಿದ್ದಾರೆ.


  2016 ರಲ್ಲಿ ಸಾವರ್ಕರ್‌ರನ್ನು ನಿಂದಿಸಿ ಮಾನನಷ್ಟ ನೋಟಿಸ್ ಪಡೆದ ಕಾಂಗ್ರೆಸ್


  ಕಾಂಗ್ರೆಸ್ 2016 ರಲ್ಲಿ ಮಾಡಿದ ಟ್ವೀಟ್‌ನಲ್ಲಿ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಜರೆದಿತ್ತು. ಮಾರ್ಚ್ 23 ರಂದು ಭಗತ್ ಸಿಂಗ್ ಅವರ ಪುಣ್ಯತಿಥಿಯಂದು ಹಾಕಲಾದ ಟ್ವೀಟ್‌ನಲ್ಲಿ ಕಾಂಗ್ರೆಸ್ ಭಗತ್ ಸಿಂಗ್ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಟ ನಡೆಸಿದರು ಹಾಗೂ ಸಾವರ್ಕರ್ ಬ್ರಿಟಿಷರ ಗುಲಾಮರಾಗಲು ಅವರ ಕರುಣೆ ಗಳಿಸಲು ಬೇಡಿಕೊಂಡರು ಎಂದು ಟ್ವೀಟ್ ಮಾಡಿತ್ತು.


  ಇದನ್ನೂ ಓದಿ: Explained: ಜಿ20 ಶೃಂಗಸಭೆ ಆರಂಭ: ಈ ವಾರದ ನಿರ್ಣಾಯಕ ಸಮಿಟ್​ ಕುರಿತಾದ ಮಹತ್ವದ ವಿಚಾರಗಳು


  ಇದರ ಪರಿಣಾಮವಾಗಿ ಸಾವರ್ಕರ್ ಅವರ ಮೊಮ್ಮಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸೋನಿಯಾ ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ನೋಟೀಸ್ ಕಳುಹಿಸಿದ್ದರು ಹಾಗೂ ಕಾಂಗ್ರೆಸ್ ಮಾಡಿರುವ ಟ್ವೀಟ್‌ಗಳು ಆರ್‌ಎಸ್‌ಎಸ್ ಸಿದ್ಧಾಂತಕ್ಕೆ ಅಪಖ್ಯಾತಿಕರ ಎಂದು ತಿಳಿಸಿದ್ದರು.


  ಸಾವರ್ಕರ್ ಅವರ ಮೊಮ್ಮಗ ರಂಜಿತ್ ಅದೇ ಟ್ವೀಟ್‌ಗೆ 48 ಗಂಟೆಗಳ ಒಳಗೆ ಕಾಂಗ್ರೆಸ್ ಕ್ಷಮೆಯಾಚಿಸುವಂತೆ ಮಾಡಿದ್ದರು.


  ದೊಡ್ಡ ದುರಂತ


  2003ರಲ್ಲಿ ಸೋನಿಯಾ ಗಾಂಧಿ ಅವರು ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಪತ್ರ ಬರೆದು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಸಾವರ್ಕರ್ ಭಾವಚಿತ್ರವನ್ನು ಅನಾವರಣಗೊಳಿಸದಂತೆ ಒತ್ತಾಯಿಸಿದ್ದರು. ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ ಭಾವಚಿತ್ರವನ್ನು ಸ್ಥಾಪಿಸಲು ಸಂಸತ್ತಿನ ಸೆಂಟ್ರಲ್ ಹಾಲ್ ಅನ್ನು ಬಳಸಿದರೆ ಅದು ದೊಡ್ಡ ದುರಂತವಾಗುತ್ತದೆ ಮಾತ್ರವಲ್ಲದೆ ಅವರು ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವನ್ನು ಬೆಂಬಲಿಸಿದ್ದಾರೆ ಎಂದು ತಮ್ಮ ಪತ್ರದಲ್ಲಿ ಬರೆದಿದ್ದಾರೆ.

  Published by:Annappa Achari
  First published: